ಚೆನ್ನೈ: ಕಳ್ಳ ಬಟ್ಟಿ ಪ್ಯಾಕೆಟ್ ಸಾರಾಯಿ ಸೇವಿಸಿ 13 ಮಂದಿ ಸಾವನ್ನಪ್ಪಿ, 30ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ತಮಿಳುನಾಡಿನ (Tamil Nadu) ಕಲ್ಲಕುರಿಚಿಯಲ್ಲಿ (Kallakurichi) ನಡೆದಿದೆ.
ದುರಂತ (Hooch Tragedy) ವರದಿಯಾದ ನಂತರ ಸಿಎಂ ಎಂಕೆ ಸ್ಟಾಲಿನ್ (CM MK Stalin) ಈ ಪ್ರಕರಣದ ಬಗ್ಗೆ ಸಿಐಡಿ (CID ತನಿಖೆಗೆ ಆದೇಶಿಸಿದ್ದಾರೆ.
ಕ್ಷಿಪ್ರ ಕ್ರಮ ಕೈಗೊಂಡಿರುವ ತಮಿಳುನಾಡು ಸರ್ಕಾರ ಜಿಲ್ಲಾಧಿಕಾರಿ ಶ್ರವಣಕುಮಾರ್ ಜಾತಾವತ್ ಅವರನ್ನು ವರ್ಗಾವಣೆ ಮಾಡಿದೆ. ಕಲ್ಕುರಿಚಿ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಎಂ.ಎಸ್.ಪ್ರಶಾಂತ್ ನೇಮಕಗೊಂಡಿದ್ದಾರೆ.
ಕಲ್ಲಕುರಿಚಿ ಎಸ್‌ಪಿ ಸಮಯಸಿಂಗ್ ಮೀನಾ ಅವರನ್ನು ಅಮಾನತುಗೊಳಿಸಲಾಗಿದೆ. ಅವರ ಜಾಗಕ್ಕೆ ಸರ್ಕಾರ ರಜತ್ ಚತುರ್ವೇದಿ ಅವರನ್ನು ನೂತನ ಎಸ್ಪಿಯನ್ನಾಗಿ ನೇಮಿಸಿದೆ. ಅಷ್ಟೇ ಅಲ್ಲದೇ 9 ಮಂದಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಪೊಲೀಸರು ಕಳ್ಳ ಬಟ್ಟಿದಂಧೆಕೋರನನ್ನು ಬಂಧಿಸಿದ್ದಾರೆ. ಮೆಥೆನಾಲ್ ಮಿಶ್ರಣ ಹೊಂದಿದ್ದ 200 ಲೀಟರ್ ಕಳ್ಳಬಟ್ಟಿಯನ್ನು ವಶಕ್ಕೆ ಪಡೆಯಲಾಗಿದೆ.
ಪಾಟ್ನಾ: ಕೆಲ ದಿನಗಳ ಹಿಂದೆ ಬಿಹಾರದಲ್ಲಿ (Bihar) ಕಳ್ಳಭಟ್ಟಿ (Spurious Liquor) ಸೇವಿಸಿ 70ಕ್ಕೂ ಅಧಿಕ ಜನರು ಸಾವನ್ನಪ್ಪಿ ದೊಡ್ಡ ದುರಂತವೇ ಎನಿಸಿಕೊಂಡಿತ್ತು. ಇದೀಗ ಮತ್ತೆ ಕಳ್ಳಭಟ್ಟಿ ಸೇವಿಸಿ ಮೂವರು ಸಾವನ್ನಪ್ಪಿರುವ ಘಟನೆ ಬಿಹಾರದ ಸಿವಾನ್ (Siwan) ಜಿಲ್ಲೆಯಲ್ಲಿ ವರದಿಯಾಗಿದೆ.
ಸಿವಾನ್ ಜಿಲ್ಲೆಯ ಬಾಲಾ ಗ್ರಾಮದಲ್ಲಿ ಭಾನುವಾರ ಕಳ್ಳಭಟ್ಟಿ ಸೇವಿಸಿ 3 ಜನರು ಸಾವನ್ನಪ್ಪಿದ್ದರೆ, 6 ಜನರು ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಕುಮಾರ್ ಪಾಂಡೆ ಮಧ್ಯರಾತ್ರಿ ಸದರ್ ಆಸ್ಪತ್ರೆಗೆ ತೆರಳಿ ವಿಷಯದ ಬಗ್ಗೆ ವಿಚಾರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 3 ಜನರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ 6 ಜನರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಮೇಲ್ನೋಟಕ್ಕೆ ಕಳ್ಳಭಟ್ಟಿ ಸೇವಿಸಿ ಜನರು ಸಾವಿಗೀಡಾಗಿದ್ದಾರೆ. ಅಸ್ವಸ್ಥರು ಸಿವಾನ್‌ನ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ಲೀಸ್ ಮುಕ್ತಿ ಕೊಡಿಸಿ ಸರ್- ಎಮ್ಮೆಗಳ ವಿರುದ್ಧ ಅರವಿಂದ ಲಿಂಬಾವಳಿಗೆ ಟೆಕ್ಕಿಗಳಿಂದ ದೂರು!
2022ರ ಡಿಸೆಂಬರ್‌ನಲ್ಲಿ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸೇವಿಸಿ 70 ಜನರು ಸಾವನ್ನಪ್ಪಿದ್ದರು. ಛಾಪ್ರಾದಲ್ಲಿ ನಡೆದ ಕಳ್ಳಭಟ್ಟಿ ದುರಂತ (Bihar Hooch Tragedy) ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಮದ್ಯ ಕಳ್ಳಸಾಗಣೆ ಮಾಡುತ್ತಿದ್ದವನನ್ನು ಬಂಧಿಸಿ 2.17 ಲಕ್ಷ ರೂ.ಯನ್ನು ವಶಪಡಿಸಿಕೊಂಡಿದ್ದರು.