Tag: Honourkilling

  • ಮಗಳನ್ನೇ ಸಾಯಿಸಲು 20 ಲಕ್ಷ ರೂ. ಸುಪಾರಿ – ಬಿಹಾರದ ಮಾಜಿ ಶಾಸಕ ಅರೆಸ್ಟ್

    ಮಗಳನ್ನೇ ಸಾಯಿಸಲು 20 ಲಕ್ಷ ರೂ. ಸುಪಾರಿ – ಬಿಹಾರದ ಮಾಜಿ ಶಾಸಕ ಅರೆಸ್ಟ್

    ಪಾಟ್ನಾ: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಮಗಳನ್ನು ಕೊಲ್ಲಲು ದುಷ್ಕರ್ಮಿಗಳಿಗೆ ಸುಪಾರಿ ನೀಡಿದ್ದ ಬಿಹಾರದ ಮಾಜಿ ಶಾಸಕನೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಮರ್ಯಾದಾ ಹತ್ಯೆ ನಡೆಸಲು ಮಾಜಿ ಶಾಸಕ ಸುರೇಂದ್ರ ಶರ್ಮಾ ಅವರು 20 ಲಕ್ಷ ರೂ. ನೀಡಿರುವುದಾಗಿ ಸುಪಾರಿ ಕಿಲ್ಲರ್ಸ್ ಸತ್ಯ ಬಾಯ್ಬಿಟ್ಟ ಹಿನ್ನೆಲೆ ಇದೀಗ ಸುರೇಂದ್ರ ಶರ್ಮಾರನ್ನು ಬಂಧಿಸಿರುವುದಾಗಿ ಪಾಟ್ನಾದ ಹಿರಿಯ ಪೊಲೀಸ್ ಅಧಿಕಾರಿ ಪ್ರಮೋದ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಬೊಗಳಿದ್ದಕ್ಕೆ ನಾಯಿಗೆ ಕಬ್ಬಿಣದ ರಾಡ್‍ನಿಂದ ಹೊಡೆದ – ಬಿಡಿಸಿಕೊಳ್ಳೋಕೆ ಬಂದವರ ಮೇಲೂ ಹಲ್ಲೆ

    ಶ್ರೀ ಕೃಷ್ಣ ಪುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸುರೇಂದ್ರ ಶರ್ಮಾ ಮಗಳನ್ನು ಜುಲೈ 1 ಮತ್ತು 2ನೇ ತಾರೀಖು ಮಧ್ಯರಾತ್ರಿ ಕೊಲೆ ಮಾಡಲು ಸುಪಾರಿ ಕಿಲ್ಲರ್ಸ್ ಯತ್ನಿಸಿದ್ದರು. ಆದರೆ ಈ ವೇಳೆ ಗುರಿ ತಪ್ಪಿ ಅಪರಿಚಿತ ವ್ಯಕ್ತಿ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದರು. ನಂತರ ಈ ವಿಚಾರವಾಗಿ ಸುರೇಂದ್ರ ಶರ್ಮಾ ಅವರ ಮಗಳು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಈ ಬಗ್ಗೆ ಶೋಧ ಕಾರ್ಯ ಆರಂಭಿಸಿದ ಪೊಲೀಸರು, ಶನಿವಾರದಂದು ಗ್ಯಾಂಗ್‍ನ ಮುಖ್ಯಸ್ಥ ಅಭಿಷೇಕ್ ಅಲಿಯಾಸ್ ಛೋಟೆ ಸರ್ಕಾರ್ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಇದನ್ನೂ ಓದಿ:  ಮಹಾ ಹೈಡ್ರಾಮಾ ಅಂತ್ಯ – ವಿಶ್ವಾಸ ಪರೀಕ್ಷೆ ಗೆದ್ದ ಏಕನಾಥ್‌ ಶಿಂಧೆ

    ವಿಚಾರಣೆ ವೇಳೆ ಅಭಿಷೇಕ್ ಸುರೇಂದ್ರ ಶರ್ಮಾ ಅವರ ಹೆಸರನ್ನು ಬಹಿರಂಗ ಪಡಿಸಿದ್ದಾನೆ. ಇದೀಗ ಪೊಲೀಸರು ಆರೋಪಿಗಳಿಂದ ದೇಶ ನಿರ್ಮಿತ ಪಿಸ್ತೂಲ್‍ಗಳು, ಹಲವಾರು ಸುತ್ತಿನ ಮದ್ದುಗುಂಡುಗಳು ಮತ್ತು ನಂಬರ್ ಪ್ಲೇಟ್ ಇಲ್ಲದ ಮೋಟಾರ್‌ಸೈಕಲ್ ವಶಪಡಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮರ್ಯಾದಾ ಹತ್ಯೆ: ಪ್ರೀತಿಯಲ್ಲಿ ಬಿದ್ದ ಮಗಳು ತಾಯಿಯಿಂದ ಕೊಲೆಯಾದ್ಳು!

    ಮರ್ಯಾದಾ ಹತ್ಯೆ: ಪ್ರೀತಿಯಲ್ಲಿ ಬಿದ್ದ ಮಗಳು ತಾಯಿಯಿಂದ ಕೊಲೆಯಾದ್ಳು!

    ಕೋಲಾರ: ಪ್ರೇಮ ವಿಚಾರ ತಿಳಿದು ತಾಯಿಯೇ ತಾನು ಬೆಳಸಿದ್ದ ಮಗಳನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೋಲಾರ ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

    18 ವರ್ಷದ ರಾಜೇಶ್ವರಿ ಕೊಲೆಯಾದ ಯುವತಿ. ತಂದೆಯಿಲ್ಲದ ರಾಜೇಶ್ವರಿಯನ್ನು ತಾಯಿ ವೆಂಕಟಮ್ಮ ಕೂಲಿ ನಾಲಿ ಮಾಡಿ ಸಾಕಿದ್ದರು. ಮಗಳು ಚೆನ್ನಾಗಿರಲಿ ಎಂದು ಪಿಯುಸಿ ಓದಿಸುತ್ತಿದ್ದರು. ಆದರೆ ರಾಜೇಶ್ವರಿ ಅದೇ ಗ್ರಾಮದ ಯುವಕನ ಪ್ರೇಮಪಾಶದಲ್ಲಿ ಸಿಲುಕಿದ್ದಳು.

    ರಾಜೇಶ್ವರಿಯ ಪ್ರೇಮ ವಿಚಾರವನ್ನು ತಿಳಿದ ಗ್ರಾಮಸ್ಥರು ಆಕೆಯ ತಾಯಿಯನ್ನು ನಿಂದಿಸಿದ್ರು. ಇದರಿಂದ ನೊಂದ ತಾಯಿ ಸಾಕಷ್ಟು ಬಾರಿ ಮಗಳಿಗೆ ಬುದ್ದಿ ಮಾತು ಹೇಳಿದ್ರು ಕೇಳಲಿಲ್ಲ. ಸೋಮವಾರ ರಾತ್ರಿ ಮರ್ಯಾದೆಗೆ ಅಂಜಿದ ತಾಯಿ ಮಗಳನ್ನ ಥಳಿಸಿದ್ದಾಳೆ. ಈ ವೇಳೆ ಕಪಾಳಕ್ಕೆ ಜೋರಾಗಿ ಪೆಟ್ಟುಬಿದ್ದ ಪರಿಣಾಮ ರಾಜೇಶ್ವರಿ ಮೃತಪಟ್ಟಿದ್ದಾಳೆ.

    ಇನ್ನೂ ಬೆಳಗ್ಗೆ ಗುಟ್ಟಾಗಿ ಮಗಳ ಅಂತ್ಯಸಂಸ್ಕಾರಕ್ಕೆ ವೆಂಕಟಮ್ಮ ಮುಂದಾಗಿದ್ರು. ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆಯಲ್ಲಿ ವೆಂಕಟಮ್ಮ ಮಗಳ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.