Tag: Honour killing

  • ಪ್ರಣಯ್ ಕೊಲೆ: ಆರೋಪಿಗಳ ಜಾಮೀನು ತಿರಸ್ಕಾರ

    ಪ್ರಣಯ್ ಕೊಲೆ: ಆರೋಪಿಗಳ ಜಾಮೀನು ತಿರಸ್ಕಾರ

    -ಕೋರ್ಟ್ ನಲ್ಲಿ ಅಮೃತಾ ಹೇಳಿದ್ದೇನು?

    ಹೈದರಾಬಾದ್: ಇಡೀ ದೇಶದಲ್ಲಿ ಸಂಚಲನ ಹುಟ್ಟು ಹಾಕಿದ್ದ ಪ್ರಣಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ತಿರಸ್ಕರಿಸಿ ನ್ಯಾಯಾಂಗ ಬಂಧನವನ್ನು ಮುಂದುವರೆಸುವಂತೆ ಆದೇಶಿಸಿದೆ.

    ಆರೋಪಿಗಳಾದ ಪ್ರಣಯ್ ಮಾವ ಮಾರುತಿ ರಾವ್, ಅಸ್ಗರ್ ಅಲಿ, ಮೊಹಮ್ಮದ್ ಅಬುಲ್ ಬರಿ, ಟಿ.ಶರವಣ ಮತ್ತು ಎಸ್.ಶಿವ ಆರೋಪಿಗಳು ತೆಲಂಗಾಣದ ನಾಲ್ಗೊಂಡ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಾದ-ವಿವಾದ ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

    ಅಮೃತಾ ಹೇಳಿದ್ದೇನು?
    ಗರ್ಭಿಣಿ ಅಮೃತಾ, ಪ್ರಣಯ್ ತಂದೆ ಬಾಲಸ್ವಾಮಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದ ಮೊದಲ ಆರೋಪಿಯಾಗಿರುವ ನಮ್ಮ ತಂದೆ ಮಾರುತಿ ರಾವ್ ಗೆ ಜಾಮೀನು ನೀಡಬಾರದು. ಆತ ಪ್ರಭಾವಿ ವ್ಯಕ್ತಿಯಾಗಿದ್ದರಿಂದ ಹಣ ಬಲ ಬಳಸಿ ನನಗೂ ಮತ್ತು ನನ್ನ ಮಗುವಿಗೆಸ ತೊಂದರೆ ಮಾಡುವ ಸಾಧ್ಯತೆಗಳಿವೆ. ತಂದೆ ಕೋಪಿಷ್ಟನಾಗಿದ್ದು ತಾಳ್ಮೆ ಕಳೆದುಕೊಳ್ಳುತ್ತಿರುತ್ತಾನೆ. ಬಂಧನಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡುತ್ತಿರುವಾಗ ಎಷ್ಟು ಕೋಪಿಷ್ಠ ಎಂಬುವುದು ಸಾಬೀತಾಗಿದೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳು ನಿಮ್ಮ ಮುಂದಿವೆ ಅಂತಾ ಅಮೃತ ನ್ಯಾಯಾಲಯದ ಮುಂದೆ ಹೇಳಿದ್ದರು.

    ಸರ್ಕಾರ ಪರ ವಕೀಲರು ಸಹ ಆರೋಪಿಗಳಿಗೆ ಜಾಮೀನು ನೀಡಬಾರದು. ಸಾಕ್ಷ್ಯಗಳನ್ನು ನಾಶಗೊಳಿಸುವ ಸಾಧ್ಯತೆಗಳಿವೆ ಎಂಬ ವಾದ ಮಂಡಿಸಿದ್ದರು. ಪ್ರಣಯ್ ಮತ್ತು ಅಮೃತಾ ಇಬ್ಬರು ಪ್ರೀತಿಸಿ ಜನೆವರಿಯಲ್ಲಿ ಮದುವೆ ಆಗಿದ್ದರು. ಪ್ರಣಯ್ ಓರ್ವ ದಲಿತ ಯುವಕ ಎಂದು ಅಮೃತಾ ತಂದೆ 1 ಕೋಟಿ ರೂ.ಗೆ ಸುಪಾರಿ ನೀಡಿ ಕೊಲ್ಲಿಸಿದ್ದನು. ಹಂತಕ ಪ್ರಣಯ್ ನನ್ನು ಕೊಲ್ಲುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹಂತಕ ಬಿಹಾರ ಮೂಲದ ಸುಭಾಶ್ ಶರ್ಮಾ ಆಗಿದ್ದು, ಆತ ಈಗ ರಾಜಮಂಡ್ರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

    ಮಾರುತಿ ರಾವ್ ಅಳಿಯನನ್ನು ಕೊಲ್ಲಲು ಅಸ್ಗರ್ ಅಲಿ ಮತ್ತು ಮೊಹಮ್ಮದ್ ಅಬುಲ್ ಬರಿ ಇಬ್ಬರನ್ನು ಸಂಪರ್ಕಿಸಿದ್ದನು. ಇಬ್ಬರು ಪ್ರಣಯ್ ಕೊಲ್ಲಲು ಮೊದಲಿಗೆ 2 ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಮೂವರ ಮಧ್ಯೆ 1 ಕೋಟಿ ರೂ.ಗೆ ಒಪ್ಪಂದವಾಗಿತ್ತು. ಕೊಲೆಗೂ ಮುನ್ನ ಮಾರುತಿ ರಾವ್ ಹಂತಕರಿಗೆ 15 ಲಕ್ಷ ರೂ. ನೀಡಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನಗೆ ಹಣ, ಆಸ್ತಿ ಬೇಡ- ತಂದೆಯನ್ನ ಗಲ್ಲಿಗೇರಿಸಿ: ಅಮೃತಾ ಆಕ್ರೋಶದ ಮಾತು

    ನನಗೆ ಹಣ, ಆಸ್ತಿ ಬೇಡ- ತಂದೆಯನ್ನ ಗಲ್ಲಿಗೇರಿಸಿ: ಅಮೃತಾ ಆಕ್ರೋಶದ ಮಾತು

    ಹೈದರಾಬಾದ್: ದೇಶಾದ್ಯಂತ ಸಂಚಲನ ಹುಟ್ಟಿಸಿದ್ದ ಪ್ರಣಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಅಮೃತ ಪೊಲೀಸರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ನನಗೆ ಡಬಲ್ ಬೆಡ್ ರೂಮ್, ಕೃಷಿ ಜಮೀನು, ಹಣ ಯಾವುದೂ ಬೇಡ. ಪ್ರಣಯ್ ನನ್ನು ಕೊಂದ ನನ್ನ ತಂದೆ ಸೇರಿದಂತೆ ಇತರೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಿ. ಅಷ್ಟೇ ಸಾಕು ನನಗೆ ಎಂದು ಅಮೃತಾ ಹೇಳಿದ್ದಾರೆ.

    ಕಳೆದ ಕೆಲವು ದಿನಗಳಿಂದ ಫೇಸ್‍ಬುಕ್ ಮತ್ತು ಇನ್ಸ್ ಸ್ಟಾಗ್ರಾಮ್ ಮುಖಾಂತರ ಹಲವು ಮೆಸೇಜ್‍ಗಳು ಬಂದಿದೆ. ಹಲವರು ಪ್ರಣಯ್ ಸಾವಿನ ಬಳಿಕ ಸರ್ಕಾರ ನೀಡುವ ಆಸ್ತಿಯನ್ನು ಪಡೆದುಕೊಳ್ಳುವುದರ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಸರ್ಕಾರ ನೀಡುವ ಸೌಲಭ್ಯ ನಿಮ್ಮ ಭವಿಷ್ಯಕ್ಕೆ ಸಹಕಾರಿ ಆಗಲಿದ್ದು, ಸ್ವೀಕರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬ ಮೆಸೇಜ್ ಗಳು ಬರುತ್ತಿವೆ ಅಂತ ತಿಳಿಸಿದರು. ಇದನ್ನೂ ಓದಿ:  ಮರ್ಯಾದಾ ಹತ್ಯೆಗೆ ಬಲಿಯಾದ ಪ್ರಣಯ್ ಬದುಕಿರುವುದು ಈ ವಿಡಿಯೋದಲ್ಲಿ ಮಾತ್ರ

    ನನಗೆ ಸರ್ಕಾರ ನೀಡುತ್ತಿರುವ ಪರಿಹಾರ ಬೇಕಾಗಿಲ್ಲ. ನಾವು ಆರ್ಥಿಕವಾಗಿಯೂ ಸಬಲರಾಗಿ ಇದ್ದೇವೆ. ಮನೆ, ಕೃಷಿ ಭೂಮಿ, ಉದ್ಯೋಗ ಮತ್ತು ಹಣ ನೀಡಿ ಎಂದು ಯಾರ ಬಳಿಯೂ ನಾನಾಗಲಿ ಅಥವಾ ಕುಟುಂಬಸ್ಥರು ಕೇಳಿಕೊಂಡಿಲ್ಲ. ಪ್ರಣಯ್ ಕೊಂದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ನನ್ನ ಮನವಿ ಆಗಿದೆ ಎಂದು ಅಮೃತ ಸ್ಪಷ್ಟಪಡಿಸಿದ್ದಾರೆ.

    ಸರ್ಕಾರದಿಂದ ಉದ್ಯೋಗ:
    ತೆಲಂಗಾಣ ಪರಿಶಿಷ್ಟ ಜಾತಿ ಅಭಿವೃದ್ಧಿ ಸಚಿವ ಜಿ. ಜಗದೀಶ್ ರೆಡ್ಡಿ ಅವರು ನಲ್ಗೊಂಡ ಜಿಲ್ಲೆಯ ಮಿರಿಯಾಲಗುಡದಲ್ಲಿ ಮೃತ ಪ್ರಣಯ್ ಕುಟುಂಬದವರನ್ನು ಭೇಟಿ ಮಾಡಿ ಸಂತಾಪ ವ್ಯಕ್ತಪಡಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಇಂತಹ ಘಟನೆಗಳು ಪ್ರಸ್ತುತ ದಿನಗಳಲ್ಲಿ ಇನ್ನೂ ನಡೆಯುತ್ತಿವೆ ಎಂದು ನಾಚಿಕೆ ಆಗುತ್ತದೆ. ಈ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಮರ್ಯಾದಾ ಹತ್ಯೆ: 13 ವರ್ಷದ ಹಿಂದೆ ಮದ್ವೆಯಾದ ದಂಪತಿಯನ್ನು ಕೊಂದೇ ಬಿಟ್ಟ!

    ಮೃತ ಪ್ರಣಯ್ ಪತ್ನಿ ಅಮೃತವರ್ಶಿನಿ ಅವರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಜೊತೆಗೆ ಕೃಷಿ ಭೂಮಿ ಮತ್ತು ಡಬಲ್ ಬೆಡ್ ರೂಮ್ ಮನೆಯನ್ನು ನೀಡುತ್ತೇವೆ. ಈಗಾಗಲೇ ಪ್ರಣಯ್ ಕುಟುಂಬದವರಿಗೆ ತಕ್ಷಣದ ವೆಚ್ಚಕ್ಕಾಗಿ ಸರ್ಕಾರ 8.25 ಲಕ್ಷ ರೂ. ಅನುಮೋದಿಸಿದೆ. ಇದರ ಜೊತೆ ನಾನು ವೈಯಕ್ತಿಕವಾಗಿ ಅಮೃತಾಗೆ 4.12 ಲಕ್ಷ ರೂ. ಚೆಕ್ ನೀಡಿದ್ದೇನೆ ಎಂದು ತಿಳಿಸಿದ್ದರು. ಸರ್ಕಾರದ ಸೌಲಭ್ಯಗಳನ್ನು ಅಮೃತ ಪಡೆದಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

    ಏನಿದು ಪ್ರಕರಣ..?
    ಪ್ರಣಯ್ ಮತ್ತು ಅಮೃತ ಇಬ್ಬರು ಪ್ರೀತಿಸಿದ್ದು, ಎರಡೂ ಕುಟುಂಬಗಳ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದವು. ಇಬ್ಬರ ಜಾತಿ ಬೇರೆಯಾಗಿದ್ದರಿಂದ ಅಮೃತಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ ಯುವ ಜೋಡಿ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಆದರೆ ಸೆಪ್ಟೆಂಬರ್ 15 ಶನಿವಾರ ಪ್ರಣಯ್ ಮತ್ತು ಅಮೃತಾ ಆಸ್ಪತ್ರೆ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು. ಆದರೆ ಪ್ರಣಯ್ ಕೊಲೆಗೆ ಆತನ ಮಾವ ಮಾರುತಿ ರಾವ್ ಬರೋಬ್ಬರಿ ಒಂದು ಕೋಟಿ ರೂ. ಹಣವನ್ನು ಹಂತಕರಿಗೆ ನೀಡಿದ್ದನು ಎಂದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಪ್ರೇಮಿ ಜೊತೆಗಿದ್ದಾಗ ಸಿಕ್ಕಿಬಿದ್ದ ಮಗಳು- ವಿಕೃತಿ ಮೆರೆದ ತಂದೆ!

    ಪ್ರೇಮಿ ಜೊತೆಗಿದ್ದಾಗ ಸಿಕ್ಕಿಬಿದ್ದ ಮಗಳು- ವಿಕೃತಿ ಮೆರೆದ ತಂದೆ!

    ಇಸ್ಲಾಮಾಬಾದ್: ಇತ್ತೀಚೆಗೆ ಹೈದರಾಬಾದ್ ನಲ್ಲಿ ಮರ್ಯಾದಾ ಹತ್ಯೆ ನಡೆದಿದ್ದು, ಈಗ ತಂದೆಯೇ ತನ್ನ ಮಗಳು ಮತ್ತು ಆಕೆಯ ಪ್ರೇಮಿಯ ತಲೆಯನ್ನು ಶಿರಚ್ಛೇದನ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ಪಾಕಿಸ್ತಾನದ ಅಟ್ಟೋಕ್ ಜಿಲ್ಲೆಯ ಚಿಕ್ಕ ಗ್ರಾಮವೊಂದರಲ್ಲಿ ನಡೆದಿದ್ದು, 18 ವರ್ಷ ವಯಸ್ಸಿನ ಹುಡುಗಿ ಮತ್ತು ಆಕೆಯ 21 ವರ್ಷದ ಪ್ರೇಮಿಯನ್ನು, ಕುಟುಂಬದ ಗೌರವ ಕಾಪಾಡುವ ಸಲುವಾಗಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

    ಪ್ರೇಮಿ ತನ್ನ ಹುಡುಗಿಯನ್ನು ಆಕೆಯ ಮನೆಯಲ್ಲಿಯೇ ಭೇಟಿಯಾಗಿ ಮಾತನಾಡುತ್ತಿದ್ದನು. ಈ ವೇಳೆ ಹುಡುಗಿಯ ತಂದೆ ಇದನ್ನು ನೋಡಿ ಕೋಪಗೊಂಡಿದ್ದು, ಮಗಳನ್ನು ಮತ್ತು ಪ್ರೇಮಿಯನ್ನು ಹಿಡಿದಿದ್ದಾನೆ. ಬಳಿಕ ಹುಡುಗಿಯ ಚಿಕ್ಕಪ್ಪ ಇಬ್ಬರನ್ನು ಹಗ್ಗದಿಂದ ಕಟ್ಟಿ ತಕ್ಷಣವೇ ಕ್ರೂರವಾಗಿ ಇಬ್ಬರ ಶಿರಚ್ಛೇದನ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಗೆ ಸಂಬಂಧಿದಂತೆ ಇಬ್ಬರು ಸಂಶಯಾಸ್ಪದರನ್ನು ಬಂಧಿಸಲಾಗಿದ್ದು, ಕೊಲೆ ಮಾಡಲು ಬಳಸಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸದ್ದಾರ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಸಿಫ್ ಖಾನ್ ತಿಳಿಸಿದ್ದಾರೆ.

    ಪಾಕಿಸ್ತಾನದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಕುಟುಂಬದ ಪ್ರತಿಷ್ಠೆ, ಗೌರವಕ್ಕೆ ಬೆದರಿ ಮರ್ಯಾದಾ ಹತ್ಯೆ ಪ್ರಕರಣ ಹೆಚ್ಚಾಗುತ್ತಿದೆ. 2016 ಅಕ್ಟೋಬರ್ ನಿಂದ 2017 ಜೂನ್ ವೇಳೆಗೆ 280 ಮರ್ಯಾದಾ ಪ್ರಕರಣವನ್ನು ಮಾನವ ಹಕ್ಕುಗಳ ರಕ್ಷಣಾ ಆಯೋಗ ದಾಖಲಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೈದರಾಬಾದ್‍ನಲ್ಲಿ ಮತ್ತೊಂದು ಮರ್ಯಾದಾ ಹತ್ಯೆಗೆ ಯತ್ನ- ಪ್ರೀತ್ಸಿ ಮದ್ವೆಯಾದ ಒಂದೇ ವಾರಕ್ಕೆ ಜೋಡಿ ಮೇಲೆ ಹಲ್ಲೆ

    ಹೈದರಾಬಾದ್‍ನಲ್ಲಿ ಮತ್ತೊಂದು ಮರ್ಯಾದಾ ಹತ್ಯೆಗೆ ಯತ್ನ- ಪ್ರೀತ್ಸಿ ಮದ್ವೆಯಾದ ಒಂದೇ ವಾರಕ್ಕೆ ಜೋಡಿ ಮೇಲೆ ಹಲ್ಲೆ

    ಹೈದರಾಬಾದ್: ತೆಲಂಗಾಣದಲ್ಲಿ ನಡೆದ ಮರ್ಯಾದಾ ಹತ್ಯೆಯ ಘಟನೆ ಮಾಸುವ ಮುನ್ನವೇ ಇದೀಗ ಹೈದರಾಬಾದ್‍ನಲ್ಲಿ ಮತ್ತೊಂದು ಮರ್ಯಾದಾ ಹತ್ಯೆಗೆ ಯತ್ನ ನಡೆದಿದೆ. ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆ ಆಗಿದ್ದ ನವವಿವಾಹಿತರ ಮೇಲೆ ಯುವತಿಯ ತಂದೆ ಮಚ್ಚು ಬೀಸಿದ ಘಟನೆ ಹೈದರಾಬಾದ್ ನ ಎಸ್‍ಆರ್ ನಗರದಲ್ಲಿ ನಡೆದಿದೆ.

    ಮಾಧವಿ ಹಾಗೂ ಸಂದೀಪ್ ಪ್ರೀತಿಸಿ ಒಂದು ವಾರದ ಹಿಂದೆಯಷ್ಟೇ ಮದುವೆಯಾಗಿದ್ದರು. ಬಳಿಕ ರಾಜಿ ಸಂಧಾನ ಎಂದು ಯುವತಿಯ ತಂದೆ ಮನೋಹರಚಾರಿ ಕರೆಸಿದ್ದನು. ಹೀಗಾಗಿ ಸಂದೀಪ್ ಹಾಗೂ ಮಾಧವಿ ಇಬ್ಬರು ಮನೋಹರಚಾರಿಯನ್ನು ಭೇಟಿಯಾಗಲು ಹೋದರು. ಈ ವೇಳೆ ಮನೋಹರಚಾರಿ ಅವರಿಬ್ಬರನ್ನು ನೋಡುತ್ತಿದ್ದಂತೆಯೇ ತನ್ನ ವಾಹನವನ್ನು ಪಾರ್ಕ್ ಮಾಡಿ, ಹೆಲ್ಮೆಟ್ ತೆಗೆದು ಒಂದು ನಿಮಿಷ ತಡ ಮಾಡದೇ ಸಂದೀಪ್ ಮೇಲೆ ಮಚ್ಚು ಬೀಸಿದ್ದಾನೆ. ಇದನ್ನೂ ಓದಿ: ಮರ್ಯಾದಾ ಹತ್ಯೆ: ಗರ್ಭಿಣಿ ಪತ್ನಿಯ ಎದುರೇ ಪತಿಯ ತಲೆಗೆ ಮಚ್ಚಿನಿಂದ ಏಟು

    ಮನೋಹರಚಾರಿ ಮೊದಲು ಸಂದೀಪ್ ಮೇಲೆ ಹಲ್ಲೆ ನಡೆಸಿ, ನಂತರ ತನ್ನ ಮಗಳು ಮಾಧವಿ ಮೇಲೆ ಹಲ್ಲೆ ನಡೆಸಿದ್ದಾನೆ. ಮನೋಹರಚಾರಿ ಇಬ್ಬರ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಅಲ್ಲಿದ್ದ ಜನರು ಅವರನ್ನು ತಡೆಯಲು ಹೋದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇಬ್ಬರ ಮೇಲೂ ಹಲ್ಲೆ ನಡೆಸಿದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಮನೋಹರಚಾರಿ ಹಲ್ಲೆ ನಡೆಸುತ್ತಿರುವ ವಿಡಿಯೋ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮರ್ಯದಾ ಹತ್ಯೆ: ಪ್ರಣಯ್ ಕೊಲ್ಲಲು 1 ಕೋಟಿಗೆ ಸುಪಾರಿ ನೀಡಿದ್ದ ಮಾವ

    ಹಲ್ಲೆಯಿಂದಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಸಂದೀಪ್‍ಗೆ ಗಂಭೀರ ಗಾಯಗಳಾಗಿವೆ. ಮಾಧವಿಗೂ ಕತ್ತು ಹಾಗೂ ಕೈ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ತ್ರಾವ ಆಗಿದೆ. ಹಲ್ಲೆಗೊಳಗಾದ ಮಾಧವಿ ದೈಹಿಕ ಹಾಗೂ ಮಾನಸಿಕವಾಗಿ ಶಾಕ್‍ಗೆ ಒಳಗಾಗಿದ್ದಾರೆ. ಅಲ್ಲದೇ ತೀವ್ರ ರಸ್ತಸ್ತ್ರಾವ ಆಗಿದ್ದರಿಂದ ಆಕೆಗೆ ಇನ್ಫೆಕ್ಷನ್ ಆಗುವ ಸಾಧ್ಯತೆಗಳಿವೆ. ಹಾಗಾಗಿ 24 ಗಂಟೆಗಳಿಂದ ಆಕೆಯನ್ನು ನೋಡಿಕೊಳ್ಳಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಪ್ರೀತಿ ಶುರುವಾಗಿದ್ದು ಹೇಗೆ?
    ಮಾಧವಿ ಹಾಗೂ ಸಂದೀಪ್ ಒಬ್ಬರನ್ನೊಬ್ಬರು 5 ವರ್ಷದಿಂದ ಪ್ರೀತಿಸುತ್ತಿದ್ದರು. ಹೈದರಾಬಾದ್‍ನ ಬೇರೆ ಬೇರೆ ಕಾಲೇಜಿನಲ್ಲಿ ಓದ್ದುತ್ತಿದ್ದ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಮಾಧವಿ ಕುಟುಂಬ ಮೇಲ್ಜಾತಿ ಆದ ಕಾರಣ ಅವರು ಈ ಮದುವೆಯನ್ನು ವಿರೋಧಿಸಿದ್ದರು. ಹಾಗಾಗಿ ಸಂದೀಪ್ ಹಾಗೂ ಮಾಧವಿ ಕಳೆದ ಬುಧವಾರ ಸ್ನೇಹಿತರ ಸಮ್ಮುಖದಲ್ಲಿ ಆರ್ಯ ಸಮಾಜದಲ್ಲಿ ಮದುವೆಯಾಗಿದ್ದರು.

    ಸಂದೀಪ್ ಹಾಗೂ ಮಾಧವಿ ಮದುವೆಯಾದ ಬಳಿಕ ಎಸ್‍ಆರ್ ಪೊಲೀಸ್ ಠಾಣೆಗೆ ಬಂದಿದ್ದರು. ಆಗ ಇಬ್ಬರ ಕುಟುಂಬದವರನ್ನು ಕರೆಸಿ ರಾಜಿ ಸಂಧಾನ ಮಾಡಿಸಲಾಗಿತ್ತು. ಸದ್ಯ ಈಗ ನಾವು ಆರೋಪಿ ಮನೋಹರಚಾರಿಯನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮರ್ಯದಾ ಹತ್ಯೆ: ಪ್ರಣಯ್ ಕೊಲ್ಲಲು 1 ಕೋಟಿಗೆ ಸುಪಾರಿ ನೀಡಿದ್ದ ಮಾವ

    ಮರ್ಯದಾ ಹತ್ಯೆ: ಪ್ರಣಯ್ ಕೊಲ್ಲಲು 1 ಕೋಟಿಗೆ ಸುಪಾರಿ ನೀಡಿದ್ದ ಮಾವ

    ಹೈದರಾಬಾದ್: ಶನಿವಾರ ನಡೆದಿದ್ದ 23 ವರ್ಷದ ಪ್ರಣಯ್ ಕೊಲೆಗೆ ಆತನ ಮಾವ ಮಾರುತಿ ರಾವ್ ಹಂತಕರಿಗೆ 1 ಕೋಟಿ ರೂ.ಗೆ ಸುಪಾರಿ ನೀಡಿದ್ದನು ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಪ್ರಣಯ್ ಕೊಲೆಯ ಬಳಿಕ ಹಂತಕ ಸ್ಥಳದಿಂದ ನಾಪತ್ತೆಯಾಗಿದ್ದನು. ಇಂದು ಬಿಹಾರ ಪೊಲೀಸರು ಪ್ರಣಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಿದ್ದಾರೆ. ಪ್ರಣಯ್ ಕೊಲ್ಲಲು 1 ಕೋಟಿ ರೂ.ಗೆ ಸುಪಾರಿ ನೀಡಿದ್ದರು. ಮುಂಗಡ 18 ಲಕ್ಷ ನೀಡಲಾಗಿತ್ತು ಎಂದು ಆರೋಪಿಗಳು ಬಾಯಿಬಿಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

    ಶನಿವಾರ ಪ್ರಣಯ್‍ನನ್ನು ಆತನ ಗರ್ಭಿಣಿ ಪತ್ನಿ ಅಮೃತಾ ಎದುರೇ ಕೊಲೆ ಮಾಡಲಾಗಿತ್ತು. ಪ್ರಣಯ್ ಕುಮಾರ್ 8 ತಿಂಗಳ ಹಿಂದೆ ಪ್ರೀತಿಸಿದ್ದ 21 ವರ್ಷದ ಅಮೃತ ಜೊತೆ ಮದುವೆ ಮಾಡಿಕೊಂಡಿದ್ದರು. ಇಬ್ಬರ ಜಾತಿ ಬೇರೆಯಾಗಿದ್ದರಿಂದ ಅಮೃತಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ ಯುವ ಜೋಡಿ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಆದ್ರೆ ಶನಿವಾರ ಪ್ರಣಯ್ ಮತ್ತು ಅಮೃತಾ ಆಸ್ಪತ್ರೆ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು.

    ಪತಿಯ ಕೊಲೆ ನೋಡಿದ ಅಮೃತ ಜ್ಞಾನ ತಪ್ಪಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಜ್ಞೆ ಬಂದ ಬಳಿಕ ಪೊಲೀಸರಿಗೆ ಹೇಳಿಕೆ ನೀಡಿರುವ ಅಮೃತ, ನಮ್ಮ ಮನೆಯಲ್ಲಿ ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತವಾಗಿತ್ತು. ನಮ್ಮಿಬ್ಬರ ಮದುವೆಯಿಂದ ಕೋಪಗೊಂಡ ನನ್ನ ತಂದೆ ಹಾಗು ಚಿಕ್ಕಪ್ಪ ಈ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದರು.

    ಮನೆಯ ವಿರೋಧದ ನಡುವೆ ನಾವು ಮದುವೆಯಾಗಿ ಚೆನ್ನಾಗಿ ಜೀವನ ನಡೆಸುತ್ತಿದ್ದೇವು. ನಾನು ಐದು ತಿಂಗಳ ಗರ್ಭಿಣಿ ಎಂದು ತಿಳಿದು ಪೋಷಕರು ಪತಿಯನ್ನು ಕೊಲೆ ಮಾಡಿಸಿ ಗರ್ಭಪಾತ ಮಾಡಿಸುವ ಪ್ಲಾನ್ ಮಾಡಿಕೊಂಡಿದ್ದರು. ನನ್ನ ತಂದೆ ಓರ್ವ ಉದ್ಯಮಿಯಾಗಿದ್ದು, ಹಲವು ಪ್ರಭಾವಿ ರಾಜಕಾರಣಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ತಮ್ಮ ಪ್ರಭಾವ ಬೆಳೆಸಿ ಪ್ರಣಯನನ್ನು ಬಿಟ್ಟು ಬೆದರಿಕೆ ಹಾಕುತ್ತಿದ್ದರು. ಪ್ರಣಯ್ ಕೊಲೆಯ ಮುನ್ನ ಸಹ ನನಗೆ ಗರ್ಭಪಾತ ಮಾಡಿಸಿಕೊ ಎಂದು ಜೀವ ಬೆದರಿಕೆ ಹಾಕಿದ್ದರು ಎಂದು ಅಮೃತ ಪೊಲೀಸರಿಗೆ ತಿಳಿಸಿದ್ದಾರೆ.

    ಅಮೃತಾ ಹೇಳಿಕೆಯನ್ನಾಧರಿಸಿ ಪೊಲೀಸರು ತಂದೆ ಮಾರುತಿ ರಾವ್, ಚಿಕ್ಕಪ್ಪ ಶರವಣ ರಾವ್ ಇಬ್ಬರನ್ನು ಬಂಧಿಸಿದ್ದರು. ಪ್ರಣಯ್ ಮತ್ತು ಅಮೃತ ಹೈಸ್ಕೂಲ್ ನಲ್ಲಿಯೇ ಪ್ರೇಮಪಾಶಕ್ಕೆ ಸಿಲುಕಿದ್ದರು. ಮುಂದೆ ಕಾಲೇಜಿನಲ್ಲಿಯೂ ಇಬ್ಬರ ಪ್ರೇಮ ಮುಂದುವರಿದಿತ್ತು. ಆದ್ರೆ ಎರಡೂ ಕುಟುಂಬಗಳ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದವು. ಮದುವೆ ಬಳಿಕ ಪ್ರಣಯ್ ಮತ್ತು ಅಮೃತ ಎರಡೂ ಕುಟುಂಬಗಳಿಂದ ದೂರ ಬಂದು ಬೇರೆ ನೆಲೆಕಂಡುಕೊಂಡಿದ್ದರು. ಅಮೃತ ಪೋಷಕರು ಮಾತ್ರ ಮದುವೆ ನಂತರವೂ ದ್ವೇಷ ಸಾಧಿಸುತ್ತಿದ್ದರು.

    ಪ್ರಣಯ್ ಕೊಲೆ ಬಳಿಕ ಮರ್ಯದಾ ಹತ್ಯೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಫೇಸ್ ಬುಕ್‍ನಲ್ಲಿ Justice For Pranay ಎಂಬ ಪೇಜ್ ಕ್ರಿಯೇಟ್ ಮಾಡಲಾಗಿದ್ದು, ಅಪರಾಧಿಗಲಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಪ್ರಣಯ್ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗವಹಿಸಿ ‘ಅಮರ್ ರಹೇ ಪ್ರಣಯ್’ ಎಂದು ಘೋಷಣೆ ಕೂಗಿದ್ದರು.

    ಇತ್ತ ಪ್ರಣಯ್ ಪೋಷಕರು ತಾವು ಸೊಸೆಯನ್ನು ಎಲ್ಲಿಯೂ ಕಳುಹಿಸುವುದಿಲ್ಲ. ಆಕೆ ಮುಂದಿನ ದಿನಗಳಲ್ಲಿ ನಮ್ಮೊಂದಿಗೆಯೇ ಇರುತ್ತಾಳೆ ಎಂದು ತಿಳಿಸಿದ್ದಾರೆ. ಪ್ರಣಯ್ ನನ್ನ ಜೀವ ಆಗಿದ್ದನು. ಇಂದು ಆತನ ಮಗು ನನ್ನ ಹೊಟ್ಟೆಯಲ್ಲಿದ್ದು, ಕಂದನಿಗಾಗಿ ನಾನು ಬದುಕುತ್ತೇನೆ ಎಂದು ದುಃಖಭರಿತವಾಗಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮರ್ಯಾದಾ ಹತ್ಯೆ: ಗರ್ಭಿಣಿ ಪತ್ನಿಯ ಎದುರೇ ಪತಿಯ ತಲೆಗೆ ಮಚ್ಚಿನಿಂದ ಏಟು

    ಮರ್ಯಾದಾ ಹತ್ಯೆ: ಗರ್ಭಿಣಿ ಪತ್ನಿಯ ಎದುರೇ ಪತಿಯ ತಲೆಗೆ ಮಚ್ಚಿನಿಂದ ಏಟು

    ಹೈದರಾಬಾದ್: ಗರ್ಭಿಣಿ ಪತ್ನಿ ಎದುರೇ ಪತಿಯನ್ನು ಕೊಲೆಗೈದಿರುವ ಘಟನೆ ತೆಲಂಗಾಣ ರಾಜ್ಯದ ನಾಲಗೊಂಡ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

    23 ವರ್ಷದ ಪ್ರಣಯ್ ಕುಮಾರ್ ಕೊಲೆಯಾದ ವ್ಯಕ್ತಿ. ಪ್ರಣಯ್ ಕುಮಾರ್ 8 ತಿಂಗಳ ಹಿಂದೆ ಪ್ರೀತಿಸಿದ್ದ 21 ವರ್ಷದ ಅಮೃತ ಜೊತೆ ಮದುವೆ ಮಾಡಿಕೊಂಡಿದ್ದರು. ಇಬ್ಬರ ಜಾತಿ ಬೇರೆಯಾಗಿದ್ದರಿಂದ ಅಮೃತಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದ್ರೂ ಯುವ ಜೋಡಿ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಆದ್ರೆ ಶನಿವಾರ ಪ್ರಣಯ್ ಮತ್ತು ಅಮೃತಾ ಆಸ್ಪತ್ರೆ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಈ ಎಲ್ಲ ದೃಶ್ಯಾವಳಿಗಳು ಆಸ್ಪತ್ರೆ ಆವರಣದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಪತಿಯ ಕೊಲೆ ನೋಡಿದ ಅಮೃತ ಜ್ಞಾನ ತಪ್ಪಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಜ್ಞೆ ಬಂದ ಬಳಿಕ ಪೊಲೀಸರಿಗೆ ಹೇಳಿಕೆ ನೀಡಿರುವ ಅಮೃತ, ನಮ್ಮ ಮನೆಯಲ್ಲಿ ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತವಾಗಿತ್ತು. ನಮ್ಮಿಬ್ಬರ ಮದುವೆಯಿಂದ ಕೋಪಗೊಂಡ ನನ್ನ ತಂದೆ ಹಾಗು ಚಿಕ್ಕಪ್ಪ ಈ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಮನೆಯ ವಿರೋಧದ ನಡುವೆ ನಾವು ಮದುವೆಯಾಗಿ ಚೆನ್ನಾಗಿ ಜೀವನ ನಡೆಸುತ್ತಿದ್ದೇವು. ನಾನು ಐದು ತಿಂಗಳ ಗರ್ಭಿಣಿ ಎಂದು ತಿಳಿದು ಪೋಷಕರು ಪತಿಯನ್ನು ಕೊಲೆ ಮಾಡಿಸಿ ಗರ್ಭಪಾತ ಮಾಡಿಸುವ ಪ್ಲಾನ್ ಮಾಡಿಕೊಂಡಿದ್ದರು ಎಂದು ಅಮೃತ ಪೊಲೀಸರಿಗೆ ತಿಳಿಸಿದ್ದಾರೆ.

    ಅಮೃತ ತಂದೆ ಮಾರುತಿ ರಾವ್ ನಗರದ ಒರ್ವ ಪ್ರಭಾವಿ ಉದ್ಯಮಿಯಾಗಿದ್ದು ಕೊಲೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾರುತಿ ರಾವ್ ಮತ್ತು ಚಿಕ್ಕಪ್ಪ ಶರವಣ ಎಂಬಾತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪ್ರಣಯ್ ಮತ್ತು ಅಮೃತ ಹೈಸ್ಕೂಲ್ ನಲ್ಲಿಯೇ ಪ್ರೇಮಪಾಶಕ್ಕೆ ಸಿಲುಕಿದ್ದರು. ಮುಂದೆ ಕಾಲೇಜಿನಲ್ಲಿಯೂ ಇಬ್ಬರ ಪ್ರೇಮ ಮುಂದುವರಿದಿತ್ತು. ಆದ್ರೆ ಎರಡೂ ಕುಟುಂಬಗಳ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದವು. ಮದುವೆ ಬಳಿಕ ಪ್ರಣಯ್ ಮತ್ತು ಅಮೃತ ಎರಡೂ ಕುಟುಂಬಗಳಿಂದ ದೂರ ಬಂದು ಬೇರೆ ನೆಲೆಕಂಡುಕೊಂಡಿದ್ದರು. ಅಮೃತ ಪೋಷಕರು ಮಾತ್ರ ಮದುವೆ ನಂತರವೂ ದ್ವೇಷ ಸಾಧಿಸುತ್ತಿದ್ದರು ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ಯುವತಿಯ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್!

    ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ಯುವತಿಯ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್!

    ಮೈಸೂರು: ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಗೊಲ್ಲನಬೀಡಿನಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದ ಹಲವು ಮಜಲುಗಳು ಈಗ ಬೆಳಕಿಗೆ ಬರುತ್ತಿವೆ.

    ಈ ನಡುವೆ ಹತ್ಯೆಯಾದ ಸುಷ್ಮಾಳ ಪ್ರಿಯಕರ ಉಮೇಶ್ ಪ್ರಾಣಭಯದಿಂದ ಊರು ಬಿಟ್ಟಿದ್ದಾನೆ. ಹೆಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮದ ನಿವಾಸಿ ಉಮೇಶ್, ವರ್ಷದ ಹಿಂದೆ ತನ್ನ ಪ್ರೇಮ ಪ್ರಕರಣ ಬೆಳಕಿಗೆ ಬಂದಾಗ ಹೆಚ್.ಡಿ.ಕೋಟೆ ಠಾಣೆಗೆ ಹೋಗಿ ನಂತರ ಊರು ಬಿಟ್ಟಿದ್ದಾನೆ.

    ಸುಷ್ಮಾ ಪೋಷಕರಿಂದ ಕೊಲೆ ಬೆದರಿಕೆಗೆ ಹೆದರಿ ಉಮೇಶ್ ಊರು ಬಿಟ್ಟಿದ್ದಾನೆ ಎಂದು ಉಮೇಶ್ ತಂದೆ ದಾಸಯ್ಯ, ತಾಯಿ ನಂಜಮ್ಮಣ್ಣಿ ಆರೋಪಿಸುತ್ತಿದ್ದಾರೆ. ಈ ನಡುವೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮರ್ಯಾದಾ ಹತ್ಯೆ ನಡೆದಿದ್ದು ಪ್ರೀತಿಸಿದ್ದಕ್ಕಲ್ಲ ಬದಲಿಗೆ ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಎಂಬುದು ಬೆಳಕಿಗೆ ಬಂದಿದೆ.

    ಗೊಲ್ಲನಬೀಡಿನ ಸುಷ್ಮಾ ಹಾಗೂ ಉಮೇಶ್ ಒಂದು ವರ್ಷದ ಹಿಂದೆ ಮನೆಯಿಂದ ದೂರ ಹೋಗಿ ಮದುವೆಯಾಗಿದ್ದರು. ಮದುವೆಯಾದ ಈ ಜೋಡಿಯನ್ನು ಹುಡುಕಿ ಕರೆಸಿದ್ದ ಸುಷ್ಮಾ ಕುಟುಂಬಸ್ಥರು ನಂತರ ರಾಜಿ ಪಂಚಾಯ್ತಿ ನಡೆಸಿ ಜೋಡಿಯನ್ನು ಬೇರೆ ಮಾಡಿ ಸುಷ್ಮಾಳನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದರು ಎಂದು ಉಮೇಶ್ ತಂದೆ- ತಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಮಗಳನ್ನು ಕೊಂದ್ರಾ ಪೋಷಕರು?

    ಏನಿದು ಪ್ರಕರಣ?: ಜಿಲ್ಲೆಯ ಎಚ್.ಡಿ ಕೋಟೆಯ ಗೊಲ್ಲನ ಬೀಡು ಗ್ರಾಮದ ನಿವಾಸಿ ಕುಮಾರ್ ಎಂಬವರ ಮಗಳಾಗಿದ್ದ ಸುಷ್ಮಾ(20) ತಂದೆಯಿಂದಲೇ ಕೊಲೆಯಾಗಿದ್ದು, ತಾನೇ ಹತ್ಯೆ ಮಾಡಿರುವುದಾಗಿ ತಂದೆ ಗುರುವಾರ ಪೊಲೀಸರ ಮುಂದೆ ಒಪ್ಪಿಕೊಂಡಿದ್ದ. ಫೆಬ್ರವರಿ 21ರಂದು ಜಮೀನಿನಲ್ಲಿ ಸುಷ್ಮಾಗೆ ವಿಷ ಕುಡಿಸಿ ಹತ್ಯೆ ಮಾಡಿ ಸುಟ್ಟು ಹಾಕಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅನಾಮಧೇಯ ಪತ್ರವೊಂದು ಬಂದಿತ್ತು. ಈ ಪತ್ರದ ಆಧಾರದ ಮೇಲೆ ಪೊಲೀಸರು ಸುಷ್ಮಾ ತಂದೆ ಕುಮಾರ್‍ನನ್ನು ಕರೆಸಿ ವಿಚಾರಣೆ ನಡೆಸಿದಾಗ ಮಗಳನ್ನು ಕೊಲೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದ.

    ವಿಚಾರಣೆ ವೇಳೆ, “ನಾನೇ ಮಗಳಿಗೆ ವಿಷ ಕುಡಿಸಿ ನಂತರ ನೇಣು ಹಾಕಿ ಬಳಿಕ ಬೆಂಕಿ ಹಚ್ಚಿ ಕೊಂದಿದ್ದೇನೆ. ದಲಿತ ಯುವಕನನ್ನು ಪ್ರೀತಿ ಮಾಡೋದು ನನಗೆ ಇಷ್ಟ ಇರಲಿಲ್ಲ. ಆದ್ದರಿಂದ ಎಂಟು ದಿನಗಳ ಹಿಂದೆ ಮಗಳನ್ನು ಕೊಂದಿದ್ದೇನೆ” ಎಂದು ಸುಷ್ಮಾ ತಂದೆ ಕುಮಾರ್ ಪೊಲೀಸರ ಮುಂದೆ ಹೇಳಿದ್ದ. ಇದನ್ನೂ ಓದಿ: ನಾನೇ ಮಗಳಿಗೆ ವಿಷ ಕುಡಿಸಿ, ನಂತ್ರ ನೇಣು ಹಾಕಿ ಬಳಿಕ ಬೆಂಕಿ ಹಚ್ಚಿ ಕೊಂದೆ!

  • ನಾನೇ ಮಗಳಿಗೆ ವಿಷ ಕುಡಿಸಿ, ನಂತ್ರ ನೇಣು ಹಾಕಿ ಬಳಿಕ ಬೆಂಕಿ ಹಚ್ಚಿ ಕೊಂದೆ!

    ನಾನೇ ಮಗಳಿಗೆ ವಿಷ ಕುಡಿಸಿ, ನಂತ್ರ ನೇಣು ಹಾಕಿ ಬಳಿಕ ಬೆಂಕಿ ಹಚ್ಚಿ ಕೊಂದೆ!

    ಮೈಸೂರು: ನಗರದಲ್ಲಿ ನಡೆದಿದ್ದ ಮರ್ಯಾದಾ ಹತ್ಯೆ ಕೇಸ್‍ನ್ನು ಪೊಲೀಸರು ಬೇಧಿಸಿದ್ದು, ತಂದೆಯೇ ತಾನೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಸುಷ್ಮಾ(20) ತಂದೆಯಿಂದಲೇ ಕೊಲೆಯಾದ ದುರ್ದೈವಿ ಮಗಳು. ಜಿಲ್ಲೆಯ ಎಚ್.ಡಿ ಕೋಟೆಯ ಗೊಲ್ಲನ ಬೀಡು ಗ್ರಾಮದ ನಿವಾಸಿ ಕುಮಾರ್ ಎಂಬವರ ಮಗಳಾಗಿದ್ದು, ಎಚ್.ಡಿ.ಕೋಟೆ ಆಲನಹಳ್ಳಿ ಗ್ರಾಮದ ಯುವಕನನ್ನು ಒಂದು ವರ್ಷದಿಂದ ಪ್ರೀತಿಸಿದ್ದಳು. ಇವರ ಪ್ರೀತಿಗೆ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ಪೋಷಕರು ಸುಷ್ಮಾಳನ್ನು ಕಾಲೇಜಿನಿಂದ ಬಿಡಿಸಿದ್ದರು.

    ಕಾಲೇಜಿನಿಂದ ಬಿಡಿಸಿದ್ದರೂ ಕೂಡ ಸುಷ್ಮಾ ಯುವಕನೊಂದಿಗೆ ಪ್ರೀತಿಯನ್ನು ಮುಂದುವರೆಸಿದ್ದಳು. ಈ ಹಿನ್ನೆಲೆಯಲ್ಲಿ ಫೆಬ್ರವರಿ 21ರಂದು ತಮ್ಮ ಜಮೀನಿನಲ್ಲಿ ಸುಷ್ಮಾಗೆ ವಿಷ ಕುಡಿಸಿ ಹತ್ಯೆ ಮಾಡಿ ಸುಟ್ಟು ಹಾಕಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅನಾಮಧೇಯ ಪತ್ರವೊಂದು ಬಂದಿತ್ತು. ಈ ಪತ್ರದ ಆಧಾರದ ಮೇಲೆ ಪೊಲೀಸರು ಸುಷ್ಮಾ ತಂದೆ ಕುಮಾರ್  ನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.

    ವಿಚಾರಣೆ ವೇಳೆ “ನಾನೇ ಮಗಳಿಗೆ ವಿಷ ಕುಡಿಸಿ ನಂತರ ನೇಣು ಹಾಕಿ ಬಳಿಕ ಬೆಂಕಿ ಹಚ್ಚಿ ಕೊಂದಿದ್ದೇನೆ. ದಲಿತ ಯುವಕನನ್ನು ಪ್ರೀತಿ ಮಾಡೋದು ನನಗೆ ಇಷ್ಟ ಇರಲಿಲ್ಲ. ಆದ್ದರಿಂದ ಎಂಟು ದಿನಗಳ ಹಿಂದೆ ಮಗಳನ್ನು ಕೊಂದಿದ್ದೇನೆ” ಎಂದು ಸುಷ್ಮಾ ತಂದೆ ಕುಮಾರ್ ಪೊಲೀಸರ ಮುಂದೆ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಇದನ್ನು ಓದಿ: ದಲಿತ ಯುವಕನನ್ನು ಪ್ರೀತಿಸಿದ ತಪ್ಪಿಗೆ ಮಗಳನ್ನು ಕೊಂದ್ರಾ ಪೋಷಕರು?

  • ಮರ್ಯಾದಾ ಹತ್ಯೆ: ನವದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ವಧುವಿನ ಚಿಕ್ಕಪ್ಪಂದಿರು

    ಮರ್ಯಾದಾ ಹತ್ಯೆ: ನವದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ವಧುವಿನ ಚಿಕ್ಕಪ್ಪಂದಿರು

    ಹೈದರಾಬಾದ್: ನವದಂಪತಿಯನ್ನು ವಧುವಿನ ಚಿಕ್ಕಪ್ಪಂದಿರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ತೆಲಂಗಾಣ ರಾಜ್ಯದ ವೇಮುಲವಾಡ ಜಿಲ್ಲೆಯ ಬಲ್‍ರಾಜ್‍ಪಲ್ಲಿ ಗ್ರಾಮದಲ್ಲಿ ನಡೆದಿದೆ. ನವದಂಪತಿ ನಾಲ್ಕು ತಿಂಗಳು ಹಿಂದೆ ಒಬ್ಬರನೊಬ್ಬರನ್ನು ಪ್ರೀತಿಸಿ ಮದುವೆ ಆಗಿದ್ದರು. ಶುಕ್ರವಾರ ವಧುವಿನ ಚಿಕ್ಕಪ್ಪಂದಿರು ಚಾಕು ಮತ್ತು ಡ್ರ್ಯಾಗರ್ ನಿಂದ ಇಬ್ಬರನ್ನೂ ಕೊಚ್ಚಿ ಕೊಲೆ ಮಾಡಿದ್ದಾರೆ.

    ನೆದುರೈ ಹರೀಶ್ (22) ಮತ್ತು ಎನ್.ರಚನಾ (21) ಕೊಲೆಯಾದ ನವದಂಪತಿ. ಹರೀಶ್ ಮತ್ತು ರಚನಾ ಬಲ್‍ರಾಜ್‍ಪಲ್ಲಿಯ ನಿವಾಸಿಗಳಾಗಿದ್ದು, ಎರಡು ವರ್ಷಗಳಿಂದ ಪದವಿಧರೆಯಾಗಿರುವ ರಚನಾ ಆಟೋ ಚಾಲಕನಾಗಿರುವ ಹರೀಶ್ ಎಂಬಾತನನ್ನು ಪ್ರೀತಿಸುತ್ತಿದ್ದರು. ರಚನಾ ತನ್ನ ಪೋಷಕರ ನಿಧನವಾದ ಬಳಿಕ ಚಿಕ್ಕಪ್ಪಂದಿರಾದ ಅಶೋಕ್, ಶೇಖರ್ ಮತ್ತು ನಾಗರಾಜು ಅವರೊಂದಿಗೆ ವಾಸವಾಗಿದ್ದರು. ಇಬ್ಬರ ಜಾತಿ ಬೇರೆಯಾಗಿದ್ದರಿಂದ ರಚನಾ ಮನೆಯಲ್ಲಿ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

    ಆದರೆ ರಚನಾ ಮತ್ತು ಹರೀಶ್ ನಾಲ್ಕು ತಿಂಗಳ ಹಿಂದೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಮದುವೆ ಬಳಿಕ ಮರುಪಾಕ ಎಂಬ ಗ್ರಾಮದಲ್ಲಿ ಹರೀಶ್ ಸಂಬಂಧಿಯೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದರು.

    ಮದುವೆ ನಂತರ ಹರೀಶ್ ಮತ್ತು ರಚನಾ ತಮಗೆ ಜೀವಬೆದರಿಕೆ ಇದೆ ಎಂದು ವೇಮುಲವಾಡ ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ರಚನಾರ ಚಿಕ್ಕಪ್ಪಂದಿರನ್ನು ಕರೆಸಿ ತಿಳಿಹೇಳಿ ಕಳುಹಿಸಿದ್ದರು.

    ಗುರುವಾರ ರಚನಾ ಮತ್ತು ಹರೀಶ್ ಸ್ವಂತ ಊರು ಬಲ್‍ರಾಜ್‍ಪಲ್ಲಿ ಗೆ ಬಂದಿದ್ದಾರೆ. ಈ ವಿಷಯ ತಿಳಿದ ರಚನಾ ಚಿಕ್ಕಪ್ಪಂದಿರು ಚಾಕು, ಡ್ರ್ಯಾಗರ್ ಗಳಿಂದ ಇಬ್ಬರನ್ನು ಕೊಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವ ಹಿನ್ನೆಲೆಯಲ್ಲಿ ಹರೀಶ್ ಮತ್ತು ರಚನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ರಚನಾ ಚಿಕ್ಕಪ್ಪಂದಿರು ಗ್ರಾಮದಿಂದ ಪರಾರಿಯಾಗಿದ್ದಾರೆ.

    ಘಟನಾ ಸ್ಥಳಕ್ಕೆ ವೇಮುಲವಾಡ ಗ್ರಾಮೀಣ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಮಾಧವಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಮರ್ಯಾದಾ ಹತ್ಯೆ: ಸೋದರಿಯನ್ನ ಚಾಕುವಿನಿಂದ ಚುಚ್ಚಿ..ಚುಚ್ಚಿ ಕೊಂದ ಸಹೋದರ

    ಮರ್ಯಾದಾ ಹತ್ಯೆ: ಸೋದರಿಯನ್ನ ಚಾಕುವಿನಿಂದ ಚುಚ್ಚಿ..ಚುಚ್ಚಿ ಕೊಂದ ಸಹೋದರ

    ಲಾಹೋರ್: ಮನೆಯ ಪೋಷಕರ ನಡುವೆಯೂ ಸಹೋದರಿ ಬೇರೊಬ್ಬ ಯುವಕನನ್ನು ಮದುವೆಯಾಗಿದಕ್ಕೆ ಕುಪಿತಗೊಂಡ ಸಹೋದರ ಹರಿತವಾದ ಚಾಕುವಿನಿಂದ ಆಕೆಯನ್ನು ಹಲವು ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ.

    ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್‍ನಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 25 ವರ್ಷದ ಶಾಜಿಯಾ ಸಹೋದರನಿಂದ ಕೊಲೆಯಾದ ದುರ್ದೈವಿ.

    ಕೆಲವು ದಿನಗಳ ಹಿಂದೆ ಶಾಜಿಯಾ ಶೇರಕೋಟಾ ಪ್ರಾಂತದ ಯುವಕನೊಂದಿಗೆ ಪರಾರಿಯಾಗಿದ್ದರು. ಈ ವೇಳೆ ಶಾಜಿಯಾ ಸಹೋದರ ಮೊಹಮ್ಮದ್ ಇಶಾಖ್ ನನ್ನ ಸಹೋದರಿಯನ್ನು ಯುವಕನೊಬ್ಬ ಅಪಹರಿಸಿದ್ದಾನೆ ಎಂದು ನಾಪತ್ತೆ ಮತ್ತು ಅಪಹರಣ ದೂರನ್ನು ದಾಖಲಿಸಿದ್ದನು. ದೂರು ದಾಖಲಾದ ನಂತರ ಶಾಜಿಯಾ ಯುವಕನೊಂದಿಗೆ ಮದುವೆಯಾಗಿ ಹಿಂದುರುಗಿ ಬಂದಿದ್ದರು.

    ಶಾಜಿಯಾ ಹಿಂದುರಿಗಿದ ಕಾರಣ ಎರಡು ಕುಟುಂಬಗಳು ರಾಜಿ ಮೂಲಕ ದೂರನ್ನು ಹಿಂಪಡೆದಿದ್ದವು. ಶಾಜಿಯಾ ಮನೆಯಲ್ಲಿದ್ದಾಗ ಸಹೋದರ ಇಶಾಖ್ ಬೇರೊಬ್ಬ ಯುವಕನೊಂದಿಗೆ ಮದುವೆಯಾಗಿ ಕುಟುಂಬದ ಮರ್ಯಾದೆಯನ್ನು ತೆಗೆದಿದ್ದಿ ಎಂದು ಹೇಳಿ ಹರಿತವಾದ ಚಾಕುವಿನಿಂದ ಹಲವು ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ.

    ಶಾಜಿಯಾ ಕೊಲೆಯಾಗುವ ವೇಳೆ ಮನೆಯಲ್ಲಿ ಆಕೆಯ ಪೋಷಕರಿದ್ರು, ಇಶಾಖ್ ನನ್ನನ್ನು ತಡೆಯಲು ಮುಂದಾಗಿಲ್ಲ. ಈ ಸಂಬಂಧ ಶಾಜಿಯಾ ಹಿರಿಯ ಸಹೋದರಿ ಇಶಾಖ್ ಮತ್ತು ಮನೆಯ ಸದಸ್ಯರ ವಿರುದ್ಧ ದೂರು ದಾಖಲಿಸಿದ್ದಾರೆ.