Tag: Honour killing

  • ಕಲಬುರಗಿಯಲ್ಲಿ ಮರ್ಯಾದಾ ಹತ್ಯೆ | ಅನ್ಯಜಾತಿ ಯುವಕನೊಂದಿಗೆ ಲವ್‌ – ಮಗಳನ್ನು ಕೊಂದು ಸುಟ್ಟುಹಾಕಿದ ತಂದೆ

    ಕಲಬುರಗಿಯಲ್ಲಿ ಮರ್ಯಾದಾ ಹತ್ಯೆ | ಅನ್ಯಜಾತಿ ಯುವಕನೊಂದಿಗೆ ಲವ್‌ – ಮಗಳನ್ನು ಕೊಂದು ಸುಟ್ಟುಹಾಕಿದ ತಂದೆ

    ಕಲಬುರಗಿ: ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ (Love) ಮಗಳನ್ನು ತಂದೆ ಹಾಗೂ ಕುಟುಂಬಸ್ಥರು ಸೇರಿ ಹತ್ಯೆ ಮಾಡಿ, ಸುಟ್ಟು ಹಾಕಿರುವ (Honour Killing) ಘಟನೆ ಕಲಬುರಗಿಯ (Kalaburagi) ಮೇಳಕುಂದಾ (ಬಿ) ಗ್ರಾಮದಲ್ಲಿ ನಡೆದಿದೆ.

    ಕೊಲೆಯಾದ ಯುವತಿಯನ್ನು ಕವಿತಾ ಕೊಳ್ಳೂರ  (18) ಎಂದು ಗುರುತಿಸಲಾಗಿದೆ. ಆಕೆಯ ತಂದೆ ಶಂಕರ ಕೊಳ್ಳೂರ ಹಾಗೂ ಸಂಬಂಧಿಗಳಾದ ಶರಣು, ದತ್ತು ಚೋಳಾಭರ್ಧಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಈ ಸಂಬಂಧ ಫರಹತಾಬಾದ್ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ವ್ಯಕ್ತಿಯೊಬ್ಬನ ಜೊತೆ ತಂಗಿಗೆ ಸಂಬಂಧ – ಬ್ಲ್ಯಾಕ್‌ಮೇಲ್‌ ಮಾಡಿ ಅಣ್ಣನಿಂದಲೇ ಅತ್ಯಾಚಾರ

    ಪ್ರಾಥಮಿಕ ಮಾಹಿತಿಯಂತೆ ಕವಿತಾ, ಅದೇ ಗ್ರಾಮದ ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಪಿಯುಸಿ ಓದಲು ಕಲಬುರಗಿಗೆ ಬಂದಿದ್ದ ವೇಳೆ ಇವರಿಬ್ಬರ ನಡುವೆ ಪರಿಚಯವಾಗಿತ್ತು. ಪ್ರೀತಿ ವಿಚಾರ ಮನೆಯವರಿಗೆ ತಿಳಿದಾಗ, ಕಾಲೇಜು ಬಿಡಿಸಿ ಮನೆಗೆ ಕರೆಸಿದ್ದರು. ಆದರೆ ಕವಿತಾ ಮದುವೆ ಮಾಡಲು ಪಟ್ಟು ಹಿಡಿದಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.

    ಇದರಿಂದ ಮಧ್ಯರಾತ್ರಿ ಮನೆಯವರು ಸೇರಿ ಕವಿತಾಳ ಕತ್ತು ಹಿಸುಕಿ ಕೊಲೆ ಮಾಡಿದ್ದರು. ನಂತರ ಕೀಟನಾಶಕ ಸುರಿದು ಆತ್ಮಹತ್ಯೆ ರೀತಿ ಬಿಂಬಿಸಲು ಯತ್ನಿಸಿದ್ದರು. ಬೆಳಗ್ಗೆ ಗ್ರಾಮದ ಹೊರವಲಯದ ಜಮೀನಿಗೆ ದೇಹವನ್ನು ಕೊಂಡೊಯ್ದು ಸುಟ್ಟಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ. ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೂಳೆ ಅವಶೇಷಗಳನ್ನು ಸಂಗ್ರಹಿಸಿ ಕಳುಹಿಸಿದ್ದಾರೆ.

    ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಆಸಿಡ್ ಕುಡಿಸಿ ಸೊಸೆಯನ್ನು ಕೊಂದ ಅತ್ತೆ!

  • ಪ್ರೇಮಿಗಳನ್ನ ಹತ್ಯೆ ಮಾಡಿ ಮೊಸಳೆ ಬಾಯಿಗೆ ಎಸೆದ ಯುವತಿ ಪೋಷಕರು

    ಪ್ರೇಮಿಗಳನ್ನ ಹತ್ಯೆ ಮಾಡಿ ಮೊಸಳೆ ಬಾಯಿಗೆ ಎಸೆದ ಯುವತಿ ಪೋಷಕರು

    ಭೋಪಾಲ್: ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಆಕೆಯ ಪೋಷಕರೇ ಹತ್ಯೆ ಮಾಡಿ ಮೊಸಳೆಗಳಿಗೆ (Crocodile) ಎಸೆದ ಘಟನೆ ಮಧ್ಯಪ್ರದೇಶದ (Madhya Pradesh) ಮೊರೆನಾದಲ್ಲಿ ನಡೆದಿದೆ.

    ಆರೋಪಿಗಳು ಹೇಳಿದ ಚಂಬಲ್ ನದಿಯ (Chambal River) ಪ್ರದೇಶದಲ್ಲಿ ಹುಡುಕಾಟ ನಡೆಯುತ್ತಿದ್ದು ಇಲ್ಲಿಯವರೆಗೂ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಘಟನೆ ಎರಡು ವಾರಗಳ ಹಿಂದೆ ನಡೆದಿದ್ದು, ಕೆಲವು ಸಂಬಂಧಿಕರ ಜೊತೆ ಸೇರಿ ಆರೋಪಿಗಳು ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಗುಂಡು ಹಾರಿಸಿ ಕೊಂದಿದ್ದಾರೆ. ಬಳಿಕ ನದಿಯಲ್ಲಿ ಮುಳುಗಿಸಿದ್ದಾರೆ. ಪ್ರಕರಣದಲ್ಲಿ ಮರ್ಯಾದ ಹತ್ಯೆಯ (Honour Killing) ಶಂಕೆ ವ್ಯಕ್ತವಾಗಿದೆ ಎಂದು ಮೊರೆನಾ ಎಸ್‍ಪಿ ಶೈಲೇಂದ್ರ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಇದನ್ನೂ ಓದಿ: ಪಾನಮತ್ತ ಯುವತಿಯನ್ನ ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರ – ಭಾರತ ಮೂಲದ ವಿದ್ಯಾರ್ಥಿಗೆ ಬ್ರಿಟನ್‌ನಲ್ಲಿ 6 ವರ್ಷ ಜೈಲು

    ರತನ್‍ಬಸಾಯಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಶಿವಾನಿ (18) ಪಕ್ಕದ ಗ್ರಾಮದ ಬಲುಪುರ ನಿವಾಸಿ ರಾಧೇಶ್ಯಾಮ್ ತೋಮರ್ (21) ಎಂಬಾತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಜಾತಿ ಸಮಸ್ಯೆಗಳಿಂದ ಯುವತಿ ಕುಟುಂಬದ ವಿರೋಧವಿತ್ತು ಎನ್ನಲಾಗಿದೆ.

    ಜೂನ್ 3 ರಿಂದ ಹುಡುಗ ಮತ್ತು ಹುಡುಗಿ ಇಬ್ಬರೂ ನಾಪತ್ತೆಯಾಗಿದ್ದರು. ರಾಧೇಶ್ಯಾಮ್ ತೋಮರ್ ಅವರ ಕುಟುಂಬವು, ಯುವತಿಯ ಕುಟುಂಬದವರು ಅವರನ್ನು ಕೊಲೆ ಮಾಡಿದ್ದಾರೆ ಎಂದು ಈ ವೇಳೆ ಆರೋಪಿಸಿತ್ತು. ಯುವಕನ ಕುಟುಂಬ ಪೊಲೀಸರಿಗೆ ಕೊಲೆ ಬಗ್ಗೆ ಆರೋಪಿಸಿ ತನಿಖೆ ಮಾಡುವಂತೆ ಮನವಿ ಮಾಡಿದ್ದರೂ, ಆರಂಭದಲ್ಲಿ ಇಬ್ಬರೂ ಬೇರೆಲ್ಲೋ ಹೋಗಿರಬಹುದು ಎಂದು ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ. ಬಳಿಕ ಪದೇ ಪದೇ ಇದೇ ಆರೋಪವನ್ನು ಮಾಡಿದ ಮೇಲೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಬಳಿಕ ಪೊಲೀಸರು ಯುವತಿಯ ಕುಟುಂಬದವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಶವಗಳನ್ನು ನದಿಯಲ್ಲಿ ಎಸೆದು ಈಗಾಗಲೇ 15 ದಿನಗಳು ಕಳೆದಿವೆ. ಮೀನು ಮತ್ತು ಮೊಸಳೆಗಳಂತಹ ಜಲಚರಗಳು ಮೃತದೇಹಗಳನ್ನು ತಿಂದಿರುವ ಸಾಧ್ಯತೆ ಇದೆ. ಇದರಿಂದಾಗಿ ಮೃತದೇಹಗಳನ್ನು ಪತ್ತೆ ಮಾಡುವುದು ಕಷ್ಟದ ಕೆಲಸವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪ್ರಕರಣದಲ್ಲಿ 15 ಜನ ಭಾಗಿಯಾಗಿದ್ದಾರೆ. ಆದರೆ ಈವರೆಗೂ ಸೈಬರ್ ಪೊಲೀಸರಿಗಾಗಲಿ, ಗುಂಡು ಹಾರಿಸಿ ಕೊಲೆಗೈದಿರುವುದಕ್ಕೆ ಬಂದೂಕಿನ ಸಾಕ್ಷಿಯಾಗಲಿ ಪತ್ತೆಯಾಗಿಲ್ಲ. ಆದರೆ ಯುವತಿಯ ಪೋಷಕರು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮರಕ್ಕೆ ಕಟ್ಟಿ ಹಾಕಿ ಮುಸ್ಲಿಂ ವ್ಯಕ್ತಿಗೆ ಥಳಿತ

  • ನನಗೋಸ್ಕರ ಮುಸ್ಲಿಮ್ ಧರ್ಮಕ್ಕೆ ಮತಾಂತರವಾಗಲು ಸಿದ್ಧರಿದ್ದರು: ನಾಗರಾಜು ಪತ್ನಿ ಅಶ್ರಿನ್

    ನನಗೋಸ್ಕರ ಮುಸ್ಲಿಮ್ ಧರ್ಮಕ್ಕೆ ಮತಾಂತರವಾಗಲು ಸಿದ್ಧರಿದ್ದರು: ನಾಗರಾಜು ಪತ್ನಿ ಅಶ್ರಿನ್

    ಹೈದರಾಬಾದ್: ನನ್ನ ಪತಿ ತನ್ನೊಂದಿಗೆ ಬದುಕುತ್ತೇನೆ ಮತ್ತು ಸಾಯುತ್ತೇನೆ ಎಂದಿದ್ದರು. ಅಷ್ಟೇ ಅಲ್ಲದೇ ನನಗೋಸ್ಕರ ಮುಸ್ಲಿಮ್ ಧರ್ಮಕ್ಕೆ ಮತಾಂತರ ಆಗುತ್ತೇನೆ ಎಂದು ಹೇಳಿದ್ದರು ಎಂದು ಹತ್ಯೆಯಾದ ನಾಗರಾಜು ಅವರ ಪತ್ನಿ ಸೈಯದ್ ಅಶ್ರಿನ್ ಸುಲ್ತಾನಾ ಹೇಳಿದ್ದರು.

    honour killing

    ಅಲ್ಲದೇ ತನ್ನ ಸಹೋದರ ಕೋಪಿಷ್ಟ ಮತ್ತು ಮದುವೆಯಾದರೆ ಜೀವ ಬೆದರಿಕೆಯೊಡ್ಡಬಹುದು ಅಂತ ಎಚ್ಚರಿಕೆ ನೀಡಿದಾಗಲೂ ನಾನು ನಿನಗೋಸ್ಕರ ಸಾಯಲು ಕೂಡ ಸಿದ್ಧ ಎಂದಿದ್ದರು ಎಂದು ಹೈದರಾಬಾದ್‍ನಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಹತ್ಯೆಗೀಡಾದ ನಾಗರಾಜು(25) ಅವರ ಪತ್ನಿ ಸೈಯದ್ ಅಶ್ರಿನ್ ಸುಲ್ತಾನಾ (ಪಲ್ಲವಿ) ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ

    ನನ್ನಿಂದ ನಾಗರಾಜು ಅವರ ಜೀವಕ್ಕೆ ಯಾವುದೇ ಅಪಾಯವಾಗಬಾರದು ಎಂದು ನಮ್ಮ ಮದುವೆಗೆ ಒಂದು ತಿಂಗಳು ಮುನ್ನವೇ ಅವರಿಗೆ ಬೇರೆ ಹುಡುಗಿಯನ್ನು ಮದುವೆಯಾಗುವಂತೆ ಮನವೊಲಿಸಲು ಯತ್ನಿಸಿದ್ದೆ. ಆದರೆ ನಮ್ಮಿಬ್ಬರ ಪ್ರೀತಿಯ ವಿಚಾರ ತಿಳಿದು ಮನೆಯವರು ನಾಗರಾಜು ಅವರು ಕೆಲಸದಲ್ಲಿದ್ದಾಗ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದರು. ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ?

    ಘಟನೆ ವೇಳೆ ನನ್ನ ಗಂಡ ಸಹಾಯಕ್ಕಾಗಿ ಬೇಡಿಕೊಂಡರೂ ಯಾರೂ ಕೂಡ ಸಹಾಯ ಮಾಡಲು ಬರಲಿಲ್ಲ. ನೋಡುಗರು ಸಹಾಯ ಮಾಡಿದ್ದರೆ ಇಂದು ನನ್ನ ಪತಿ ಬದುಕಿರುತ್ತಿದ್ದರು.ನಮಗಷ್ಟೇ ಅಲ್ಲ, ಜಗತ್ತಿನಲ್ಲಿ ಎಲ್ಲಿಯಾದರೂ ಇಂತಹ ಘಟನೆ ನಡೆದಾಗ ಜನರು ಸಹಾಯಕ್ಕೆ ಬರಬೇಕು. ಆದರೆ 15-20 ನಿಮಿಷಗಳ ಕಾಲ ಹಲ್ಲೆ ನಡೆಸುತ್ತಿದ್ದರೂ, ಯಾರು ಕೂಡ ಸಹಾಯ ಮಾಡಲಿಲ್ಲ ಎಂದು ಕಣ್ಣೀರಿಟ್ಟಿದ್ದರು.

    ನಾಗರಾಜು ಮತ್ತು ಅವರ ಪತ್ನಿ ಸೈಯದ್ ಅಶ್ರಿನ್ ಸುಲ್ತಾನಾ (ಪಲ್ಲವಿ) ಬೇರೆ, ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದು, ಎರಡು ತಿಂಗಳ ಹಿಂದೆ ಅವರ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದರು. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಹೈದರಾಬಾದ್‍ನ ಸರೂರ್‍ನಗರ ತಹಶೀಲ್ದಾರ್ ಕಚೇರಿ ಬಳಿ ನಾಗರಾಜು ಅವರನ್ನು ಹತ್ಯೆಗೈದಿದ್ದ. ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆಯನ್ನು ಅನೇಕ ದಾರಿಹೋಕರು ತಮ್ಮ ಫೋನ್‍ಗಳಲ್ಲಿ ಸೆರೆಹಿಡಿದಿದ್ದಾರೆ.

  • ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ

    ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ

    ಹೈದರಾಬಾದ್: ಮರ್ಯಾದಾ ಹತ್ಯೆ ಘಟನೆಯೊಂದು ಹೈದರಾಬಾದ್‍ನ ಸರೂರ್‌ನಗರ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ. ಬೈಕ್‍ನಲ್ಲಿ ಬಂದ ದುಷ್ಕರ್ಮಿಯೋರ್ವ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.

    ಮೃತದುರ್ದೈವಿಯನ್ನು ನಾಗರಾಜ್(25) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಸರೂರನಗರ ತಹಸೀಲ್ದಾರ್ ಕಚೇರಿಗೆ ಬೈಕ್‍ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ನಾಗರಾಜ್‍ನನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆಯ ದೃಶ್ಯವನ್ನು ಅನೇಕ ದಾರಿಹೋಕರು ತಮ್ಮ ಫೋನ್‍ಗಳಲ್ಲಿ ಸೆರೆಹಿಡಿದಿದ್ದಾರೆ. ಇದೀಗ ಕುಟುಂಬಸ್ಥರು ನಾಗರಾಜ್ ಕೊಲೆಯ ಹಿಂದೆ ಪತ್ನಿಯ ಮನೆಯವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ?

    CRIME 2

    ಎರಡು ತಿಂಗಳ ಹಿಂದೆ ಜನವರಿ 31 ರಂದು ನಾಗರಾಜ್ 23 ವರ್ಷದ ಸೈಯದ್ ಅಶ್ರಿನ್ ಸುಲ್ತಾನಾ(ಪಲ್ಲವಿ) ಅವರನ್ನು ವಿವಾಹವಾಗಿದ್ದರು. ಕಾಲೇಜು ದಿನಗಳಿಂದಲೂ ನಾಗರಾಜ್ ಹಾಗೂ ಪಲ್ಲವಿ ಇಬ್ಬರೂ ಪ್ರೀತಿಸುತ್ತಿದ್ದರು. ಹೀಗಾಗಿ ಎರಡು ತಿಂಗಳ ಹಿಂದೆ ಹಳೆನಗರದ ಆರ್ಯ ಸಮಾಜ ಮಂದಿರದಲ್ಲಿ ಮದುವೆಯಾಗಿದ್ದರು. ಇಬ್ಬರು ಬೇರೆ, ಬೇರೆ ಧರ್ಮದವರಾಗಿದ್ದರಿಂದ ಪಲ್ಲವಿ ಮನೆಯವರು ನಾಗರಾಜ್‍ನನ್ನು ಕೊಂದಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

    POLICE JEEP

    ಬಿಲ್ಲಾಪುರಂ ನಾಗರಾಜು ಸಿಕಂದರಾಬಾದ್‍ನ ಮರ್ರೆಡ್‍ಪಲ್ಲಿ ನಿವಾಸಿಯಾಗಿದ್ದು, ಓಲ್ಡ್ ಸಿಟಿಯ ಮಲಕ್‍ಪೇಟ್‍ನಲ್ಲಿರುವ ಜನಪ್ರಿಯ ಕಾರ್ ಶೋ ರೂಂನಲ್ಲಿ ಸೇಲ್ಸ್‍ಮ್ಯಾನ್ ಕಾರ್ಯನಿರ್ವಹಿಸುತ್ತಿದ್ದರು. ಈ ಘಟನೆಯ ಬಳಿಕ ಮೃತನ ಕುಟುಂಬಸ್ಥರಿಗೆ ನ್ಯಾಯ ಒದಗಿಸಿಕೊಡುವಂತೆ ಮತ್ತು ಆರೋಪಿಗಳನ್ನು ಬಂಧಿಸುವಂತೆ ಬಿಜೆಪಿ ಪ್ರತಿಭಟನೆ ನಡೆಸುವ ಮೂಲಕ ಒತ್ತಾಯಿಸುತ್ತಿದೆ. ಇದನ್ನೂ ಓದಿ: ಈ ಬಾರಿಯಾದ್ರೂ ಸಿಐಡಿ ವಿಚಾರಣೆಗೆ ಹಾಜರಾಗ್ತಾರಾ ಪ್ರಿಯಾಂಕ್ ಖರ್ಗೆ?

    ಇದೀಗ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ ಇವರಿಬ್ಬರ ಪ್ರೇಮ ವಿವಾಹವೇ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿರುವುದಾಗಿ ಸಹಾಯಕ ಪೊಲೀಸ್ ಆಯುಕ್ತ ಶ್ರೀಧರ್ ರೆಡ್ಡಿ ತಿಳಿಸಿದ್ದಾರೆ.

  • ತಂದೆಯಿಂದ ಪತಿಯನ್ನು ಕಳೆದುಕೊಂಡಿದ್ದ ಅಮೃತಾಗೆ ಗಂಡು ಮಗು ಜನನ

    ತಂದೆಯಿಂದ ಪತಿಯನ್ನು ಕಳೆದುಕೊಂಡಿದ್ದ ಅಮೃತಾಗೆ ಗಂಡು ಮಗು ಜನನ

    ಹೈದರಾಬಾದ್: ತೆಲಂಗಾಣದಲ್ಲಿ ಮರ್ಯಾದಾ ಹತ್ಯೆಗೆ ಬಲಿಯಾಗಿದ್ದ ಪ್ರಣಯ್ ಪತ್ನಿ ಅಮೃತಾ ಅವರು ಗಂಡು ಮಗುವಿಗೆ ಗುರುವಾರ ಜನ್ಮ ನೀಡಿದ್ದಾರೆ.

    ಅಮೃತಾ ಅವರನ್ನು ಅತ್ತೆ ಆಸ್ಪತ್ರೆಗೆ ದಾಖಲಿಸಿ, ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನು ಓದಿ:  ಪ್ರಣಯ್ ಕೊಲೆ: ಆರೋಪಿಗಳ ಜಾಮೀನು ತಿರಸ್ಕಾರ 

    ಪ್ರಣಯ್ ಮತ್ತು ಅಮೃತಾ ಇಬ್ಬರು ಪ್ರೀತಿಸಿದ್ದು, ಇವರಿಬ್ಬರ ಜಾತಿ ಬೇರೆಯಾಗಿದ್ದರಿಂದ ಅಮೃತಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರು ಯುವ ಜೋಡಿ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಆದರೆ 2018 ಸೆಪ್ಟಂಬರ್ 14ರಂದು ಪ್ರಣಯ್ ಮತ್ತು ಅಮೃತಾ ಆಸ್ಪತ್ರೆ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು. ಆದರೆ ಪ್ರಣಯ್ ಕೊಲೆಗೆ ಆತನ ಮಾವ ಮಾರುತಿ ರಾವ್ ಬರೋಬ್ಬರಿ ಒಂದು ಕೋಟಿ ಹಣವನ್ನು ಹಂತಕರಿಗೆ ನೀಡಿದ್ದ ವಿಚಾರ ಎಂದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.

    ಮರ್ಯಾದಾ ಹತ್ಯೆಗೆ ಬಲಿಯಾದ ಪ್ರಣಯ್ ಕುಟುಂಬದವರಿಗೆ ರಾಜ್ಯ ಸರ್ಕಾರವೂ ಪರಿಹಾರ ಧನವನ್ನು ಫೋಷಿಸಿತ್ತು. ಕೆಲವು ದಿನಗಳ ಬಳಿಕ ಮೃತ ಪ್ರಣಯ್ ಪತ್ನಿ ಅಮೃತಾಗೆ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಕೂಡ ಭರವಸೆ ನೀಡಿತ್ತು.

    ತೆಲಂಗಾಣ ಪರಿಶಿಷ್ಟ ಜಾತಿ ಅಭಿವೃದ್ಧಿ ಸಚಿವ ಜಿ. ಜಗದೀಶ್ ರೆಡ್ಡಿ ಅವರು ನಲ್ಗೊಂಡ ಜಿಲ್ಲೆಯ ಮಿರಿಯಾಲಗುಡದಲ್ಲಿ ಮೃತ ಪ್ರಣಯ್ ಕುಟುಂಬದವರನ್ನು ಭೇಟಿ ಮಾಡಿ ಸಂತಾಪ ವ್ಯಕ್ತಪಡಿಸಿದ್ದರು. ಮೃತ ಪ್ರಣಯ್ ಪತ್ನಿ ಅಮೃತ ವರ್ಶಿನಿ ಅವರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಜೊತೆಗೆ ಕೃಷಿ ಭೂಮಿ ಮತ್ತು ಡಬಲ್ ಬೆಡ್ ರೂಮ್ ಮನೆಯನ್ನು ಅವರ ಕುಟುಂಬಕ್ಕೆ ನೀಡುತ್ತೇವೆ. ಈಗಾಗಲೇ ಪ್ರಣಯ್ ಕುಟುಂಬದವರಿಗೆ ತಕ್ಷಣದ ವೆಚ್ಚಕ್ಕಾಗಿ ಸರ್ಕಾರ 8.25 ಲಕ್ಷ ರೂ. ಅನುಮೋದಿಸಿದೆ. ಇದರ ಜೊತೆ ನಾನು ವೈಯಕ್ತಿಕವಾಗಿ ಅಮೃತಾಗೆ 4.12 ಲಕ್ಷ ರೂ. ಚೆಕ್ ನೀಡಿದ್ದೇನೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೀತ್ಸಿ ಮದ್ವೆಯಾಗಲು ಮುಂದಾಗಿದ್ದ ಯುವತಿ ಅನುಮಾನಾಸ್ಪದ ಸಾವು-ಮರ್ಯಾದಾ ಹತ್ಯೆ ಶಂಕೆ

    ಪ್ರೀತ್ಸಿ ಮದ್ವೆಯಾಗಲು ಮುಂದಾಗಿದ್ದ ಯುವತಿ ಅನುಮಾನಾಸ್ಪದ ಸಾವು-ಮರ್ಯಾದಾ ಹತ್ಯೆ ಶಂಕೆ

    ಮೈಸೂರು: ಜಿಲ್ಲೆಯ ನಂಜನಗೂಡಿನಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿರುವ ಅನುಮಾನ ಸೃಷ್ಟಿಯಾಗಿದೆ. ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ.

    ನಂಜನಗೂಡು ತಾಲೂಕಿನ ಕೂಗಲೂರು ಗ್ರಾಮದ ಯುವತಿ ಸವಿತಾ(25) ಮೃತ ಯುವತಿ. ಸವಿತಾ ಕಾಳನಾಯಕ ಮತ್ತು ನಾಗಮ್ಮ ಎಂಬವರ ಪುತ್ರಿ ಆಗಿದ್ದು, ಕೂಗಲೂರು ಮತ್ತು ಕಸುವಿನಹಳ್ಳಿ ಮುಖ್ಯರಸ್ತೆಯ ಜಮೀನಿನಲ್ಲಿ ಆಕೆಯ ಮೃತ ದೇಹ ಪತ್ತೆಯಾಗಿದೆ.

    ಬೆಂಗಳೂರಿನಲ್ಲಿ ನರ್ಸಿಂಗ್ ತರಬೇತಿ ಮುಗಿಸಿ ಒಂದು ತಿಂಗಳ ಹಿಂದೆ ಗ್ರಾಮಕ್ಕೆ ಬಂದಿದ್ದ ಸವಿತಾ, ಕೂಗಲೂರು ಗ್ರಾಮದ ಗೌರಮ್ಮ ಅವರ ಪುತ್ರ ಶಂಕರ್ ಅವರನ್ನು ಪ್ರೀತಿಸುತ್ತಿದ್ದಳು. ಅನ್ಯ ಜಾತಿಯ ಯುವಕನನ್ನು ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಯಾದ 20 ದಿನಕ್ಕೇ ಪತಿ ಮನೆಯಿಂದ ಕರ್ಕೊಂಡು ಬಂದು ಮಗಳನ್ನ ಕೊಂದ್ರು!

    ಮದ್ವೆಯಾದ 20 ದಿನಕ್ಕೇ ಪತಿ ಮನೆಯಿಂದ ಕರ್ಕೊಂಡು ಬಂದು ಮಗಳನ್ನ ಕೊಂದ್ರು!

    ಹೈದರಾಬಾದ್: ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಪೋಷಕರೇ ತಮ್ಮ 20 ವರ್ಷದ ಮಗಳನ್ನು ಮರ್ಯಾದಾ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮಂಚೇರಿಯ ಜಿಲ್ಲೆಯ ಕಲಾಮಡುಗು ಗ್ರಾಮದಲ್ಲಿ ನಡೆದಿದೆ.

    ಪಿ. ಅನುರಾಧಾ ಪೋಷಕರಿಂದ ಕೊಲೆಯಾದ ದುರ್ದೈವಿ. ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ಮೃತ ಅನುರಾಧಾಳ ಪತಿ ಎ.ಲಕ್ಷ್ಮಣ್ ದೂರು ನೀಡಿದ್ದರು. ಬಳಿಕ ಈ ಬಗ್ಗೆ ತನಿಖೆ ನಡೆಸಿದಾಗ ಭಾನುವಾರ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಅನುರಾಧಾಳ ತಂದೆ-ತಾಯಿ ತಮ್ಮ ಸಂಬಂಧಿಕರ ಸಹಾಯದಿಂದ ಬರ್ಬರವಾಗಿ ಮಗಳನ್ನೇ ಕೊಲೆ ಮಾಡಿ ದೇಹವನ್ನು ಸುಟ್ಟು ಬೂದಿಯನ್ನು ಒಂದು ಹಳ್ಳಕ್ಕೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ಅನುರಾಧಾ ಮತ್ತು ಲಕ್ಷ್ಮಣ್ ಇಬ್ಬರು ಕಲಾಮಡುಗು ಗ್ರಾಮದ ನಿವಾಸಿಗಳಾಗಿದ್ದು, ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ಇವರ ಪ್ರೀತಿ ಮನೆಯವರಿಗೆ ತಿಳಿದಿದೆ. ಆದರೆ ಅನುರಾಧಾ ಕುಟುಂಬವು ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ಇಬ್ಬರು ಹೈದರಾಬಾದ್‍ಗೆ ಓಡಿ ಹೋಗಿ ಡಿಸೆಂಬರ್ 3 ರಂದು ಆರ್ಯ ಸಮಾಜ ದೇವಾಲಯದಲ್ಲಿ ಮದುವೆಯಾಗಿದ್ದಾರೆ.

    ಮದುವೆಯಾದ 20 ದಿನಗಳ ನಂತರ ದಂಪತಿ ಶನಿವಾರ ತಮ್ಮ ಗ್ರಾಮಕ್ಕೆ ಬಂದಿದ್ದಾರೆ. ಈ ಬಗ್ಗೆ ತಿಳಿದು ಅನುರಾಧಾ ಪೋಷಕರು ಮತ್ತು ಇತರ ಸಂಬಂಧಿಗಳು ಹುಡುಗ ಲಕ್ಷ್ಮಣನ ಮನೆಯ ಮೇಲೆ ದಾಳಿ ನಡೆಸಿ, ಬಲವಂತವಾಗಿ ಅನುರಾಧಾಳನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಪೋಷಕರು ಅನುರಾಧಾಳನ್ನು ನಿರ್ಮಲ ಜಿಲ್ಲೆಯ ಮಲ್ಲಪುರ್ ಗ್ರಾಮದ ಬಳಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಬಳಿಕ ಸಾಕ್ಷಿ ಸಿಗಬಾರದೆಂದು ದೇಹವನ್ನು ಸುಟ್ಟು ಚಿತಾಭಸ್ಮವನ್ನು ಒಂದು ಹಳ್ಳಕ್ಕೆ ಎಸೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಇತ್ತ ಮೃತ ಅನುರಾಧಾಳ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನುರಾಧಾ ತಂದೆ ಸತ್ತೆಣ್ಣ ಮತ್ತು ತಾಯಿ ಲಕ್ಷ್ಮೀ ಅವರನ್ನು ಬಂಧಿಸಿದ್ದಾರೆ. ಕೆಳ ದರ್ಜೆಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಗೊಂಡು ಮಗಳನ್ನೆ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಪೋಷಕರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾವೇರಿ ನದಿಯಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಯುವಕ-ಯುವತಿಯ ಶವ ಪತ್ತೆ!

    ಕಾವೇರಿ ನದಿಯಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಯುವಕ-ಯುವತಿಯ ಶವ ಪತ್ತೆ!

    ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವನಸಮುದ್ರ ಬಳಿ ಕಾವೇರಿ ನದಿಯಲ್ಲಿ ಜೋಡಿ ಶವ ಸಿಕ್ಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪೋಷಕರೇ ಮರ್ಯಾದಾ ಹತ್ಯೆ ಮಾಡಿ ಶವವನ್ನು ಕಾವೇರಿ ನದಿಯ ಎಸೆದಿರುವ ಶಂಕೆ ವ್ಯಕ್ತವಾಗಿದೆ.

    ನಂದೀಶ್(25) ಮತ್ತು ಸ್ವಾತಿ(21) ಮೃತ ನವದಂಪತಿ. ನವ ದಂಪತಿ ತಮಿಳುನಾಡಿನ ಹೊಸೂರು ಜಿಲ್ಲೆಯ ಕೃಷ್ಣಗಿರಿ ತಾಲೂಕಿನವರು ಎಂಬ ಮಾಹಿತಿ ಲಭ್ಯವಾಗಿದೆ. ಈ ಜೋಡಿ ಇತ್ತೀಚೆಗೆ ಮನೆಯವರ ವಿರೋಧ ಇದ್ದುದ್ದರಿಂದ ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.

    ಏನಿದು ಪ್ರಕರಣ?
    ನವೆಂಬರ್ 14 ರಂದು ಶಿವನಸಮುದ್ರ ಬಳಿಯ ಕಾವೇರಿ ನದಿಯಲ್ಲಿ ಮೊದಲು ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಯುವಕ ನಂದೀಶ್ ಶವ ಪತ್ತೆಯಾಗಿತ್ತು. ಆದರೆ ಗುರುವಾರ ಅದೇ ಜಾಗದಲ್ಲಿ ಸ್ವಾತಿ ಶವ ಪತ್ತೆಯಾಗಿತ್ತು. ಇಬ್ಬರನ್ನೂ ಒಂದೇ ರೀತಿ ಕೊಲೆ ಮಾಡಿ ನದಿಗೆ ಎಸೆದಿದ್ದರಿಂದ ಇದು ಮರ್ಯಾದಾ ಹತ್ಯೆ ಎಂಬ ಶಂಕೆ ಮೂಡಲು ಕಾರಣವಾಗಿತ್ತು.

    ಈ ಬಗ್ಗೆ ಬೆಳಕವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಬಳಿಕ ತಮಿಳುನಾಡಿನ ಹೊಸೂರು ಠಾಣೆಯಲ್ಲಿ ಇತ್ತೀಚೆಗಷ್ಟೇ ಪ್ರೀತಿಸಿ ಮದುವೆಯಾಗಿದ್ದ ಜೋಡಿ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ. ತಕ್ಷಣ ತಮಿಳುನಾಡಿಗೆ ತೆರಳಿರುವ ಬೆಳಕವಾಡಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

    ಯುವ ಜೋಡಿ ಬೇರೆ ಬೇರೆ ಜಾತಿಯವರಾಗಿದ್ದು, ಪ್ರೀತಿಸಿ ಮದುವೆಯಾಗಿದ್ದರಿಂದ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗುತ್ತಿದೆ. ಸದ್ಯ ಬೆಳಕವಾಡಿ ಪೊಲೀಸರು ಕೊಲೆಯಾದ ಯುವ ಜೋಡಿಯ ಪೋಷಕರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಸದ್ಯಕ್ಕೆ ಹುಡುಗಿಯ ತಂದೆ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕತ್ತು ಕೊಯ್ದ ಸ್ಥಿತಿಯಲ್ಲಿ ಹೆಣವಾದ 4 ತಿಂಗ್ಳ ಗರ್ಭಿಣಿ ಪ್ರಕರಣಕ್ಕೆ ಟ್ವಿಸ್ಟ್- ಹೆತ್ತ ತಾಯಿಯಿಂದ ಕೊಲೆ

    ಕತ್ತು ಕೊಯ್ದ ಸ್ಥಿತಿಯಲ್ಲಿ ಹೆಣವಾದ 4 ತಿಂಗ್ಳ ಗರ್ಭಿಣಿ ಪ್ರಕರಣಕ್ಕೆ ಟ್ವಿಸ್ಟ್- ಹೆತ್ತ ತಾಯಿಯಿಂದ ಕೊಲೆ

    ವಿಜಯಪುರ: ಜಿಲ್ಲೆ ನಿಡಗುಂದಿ ತಾಲೂಕಿನ ಯಲಗೂರು ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಇದೀಗ ಈ ಶಂಕೆ ನಿಜಾಂಸ ಬಯಲಾಗಿದ್ದು, ಹೆತ್ತ ತಾಯಿಯೇ ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ.

    ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕ್ಯಾದಿಗೇರಾ ಗ್ರಾಮದ ರೇಣುಕಾ, ಸಿರವಾರ ಗ್ರಾಮದ ಶಂಕರನನ್ನು ಪ್ರೀತಿಸಿ ಮದುವೆ ಆಗಿ ಯಲಗೂರಿನಲ್ಲಿ ವಾಸವಾಗಿದ್ದರು. 2 ವರ್ಷ ಸಂಸಾರ ನಡೆಸಿದ್ದ ರೇಣುಕಾ ನ.6ರಂದು ಸಂಜೆ ಮನೆಯಲ್ಲೇ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.

    ಅನ್ಯಜಾತಿಯ ಯುವಕನನ್ನು ಮದುವೆಯಾಗಿ ಊರು ಬಿಟ್ಟು ಓಡಿ ಬಂದು ಮನೆತನದ ಮಾನ, ಮರ್ಯಾದೆ ಹಾಳು ಮಾಡಿದ್ದಾಳೆಂದು ಹೆತ್ತ ಮಗಳ ಕತ್ತು ಸೀಳಿ ತಾಯಿ ಶಿವಲಿಂಗಮ್ಮ ಕೊಲೆಗೈದಿದ್ದಾಳೆ. ಮಗಳನ್ನು ಕೊಲೆ ಮಾಡಲು ತನ್ನೂರಿನಿಂದ ಕೈ ಚೀಲದಲ್ಲಿ ಚಾಕು ತಂದಿದ್ದ ಶಿವಲಿಂಗಮ್ಮ ತನ್ನ ಮಗ, ಅಳಿಯನನ್ನು ಕರೆಯಿಸಿಕೊಂಡಿದ್ದಾಳೆ.

    ಕೊಲೆ ವೇಳೆ ಸಹೋದರ ಮಲ್ಲಿಕಾರ್ಜುನ ರೇಣುಕಾಳ ಕಾಲು ಹಿಡಿದಿರೆ, ತಂಗಿ ಗಂಡ ರಮೇಶ್ ಕೈಗಳನ್ನು ಹಿಡಿದಿದ್ದಾನೆ. ಬಳಿಕ ತಾನು ತಂದಿದ್ದ ಚಾಕುವಿನಿಂದ ಮಗಳ ಕತ್ತು ಸೀಳಿ ಶಿವಲಿಂಗಮ್ಮ ಮಗಳ ಹತ್ಯೆ ಮಾಡಿದ್ದಾಳೆ.

    ಪೊಲೀಸರ ತನಿಖೆ ವೇಳೆ ಎಲ್ಲ ಸಂಗತಿಗಳು ಬಯಲಾಗಿದ್ದು, ಇದೊಂದು ಮರ್ಯಾದಾ ಹತ್ಯೆ ಎಂದು ದೃಢಪಟ್ಟಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ನಿಡಗುಂದಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕತ್ತು ಕೊಯ್ದ ಸ್ಥಿತಿಯಲ್ಲಿ ಹೆಣವಾದ್ಳು 4 ತಿಂಗಳ ಗರ್ಭಿಣಿ..!

    ಕತ್ತು ಕೊಯ್ದ ಸ್ಥಿತಿಯಲ್ಲಿ ಹೆಣವಾದ್ಳು 4 ತಿಂಗಳ ಗರ್ಭಿಣಿ..!

    ವಿಜಯಪುರ: ದೀಪ ಬೆಳಗುವ ದಿನದಂದು ಮನೆಯ ದೀಪವೊಂದು ಆರಿ ಹೋಗಿದೆ. ನಾಲ್ಕು ತಿಂಗಳ ಗರ್ಭಿಣಿ ಪ್ರೀತಿಸಿ ಮದುವೆಯಾದ ಕಾರಣ ಮಂಗಳವಾರ ಮರ್ಯಾದಾ ಹತ್ಯೆಗೆ ಬಲಿಯಾದ ಹೃದಯ ವಿದ್ರಾವಕ ಘಟನೆ ವಿಜಯಪುರದಲ್ಲಿ ನಡೆದಿದೆ.

    ರೇಣುಕಾ ಬರ್ಬರವಾಗಿ ಹತ್ಯೆಯಾದ ಗರ್ಭಿಣಿ. ರೇಣುಕಾ ಮೂಲತಃ ರಾಯಚೂರಿನ ಕ್ಯಾದಿಗೇರಿ ಗ್ರಾಮದವಳು. ಎರಡು ವರ್ಷದ ಹಿಂದೆ ಕ್ಯಾದಿಗೇರಿ ಗ್ರಾಮದ ಪಕ್ಕದಲ್ಲಿರುವ ಶಿರವಾರ ಗ್ರಾಮದ ಶಂಕರ್ ಜೊತೆ ಪ್ರೀತಿಸಿ ಮನೆ ಬಿಟ್ಟು ಇಬ್ಬರು ಓಡಿ ಬಂದು ಮದುವೆ ಆಗಿ ವಿಜಯಪುರ ಜಿಲ್ಲೆಯ ನಿಡಗುಂದು ತಾಲೂಕಿನ ಯಲಗೂರು ಗ್ರಾಮದಲ್ಲಿ ವಾಸವಾಗಿದ್ದರು.

    ಇವರಿಬ್ಬರ ಪ್ರೀತಿಗೆ ಅಂತರ್ ಜಾತಿಯೇ ಮುಳುವಾದ ಕಾರಣ ಓಡಿ ಬಂದು ಇಲ್ಲಿ ವಾಸವಾಗಿದ್ದರು. ಮೊಬೈಲ್ ಅಂಗಡಿವೊಂದರಲ್ಲಿ ಕೆಲಸ ಮಾಡುತ್ತ ಇಬ್ಬರು ಎರಡು ವರ್ಷ ಅನ್ಯೋನ್ಯವಾಗಿ ಸಂಸಾರ ನಡೆಸಿದ್ದರು. ಆದರೆ ಅದ್ಯಾರ ದೃಷ್ಟಿ ತಗುಲಿತು ಗೊತ್ತಿಲ್ಲ. ಮಂಗಳವಾರ ರೇಣುಕಾ ಕತ್ತು ಕೊಯ್ದ ಸ್ಥಿತಿಯಲ್ಲಿ ಹೆಣವಾಗಿದ್ದಾಳೆ.

    ಕಳೆದ ನಾಲ್ಕು ತಿಂಗಳ ಹಿಂದೆ ತಾಯಿಯ ನೆನಪಾಗ್ತಿದೆ ಅಂತಾ ರೇಣುಕಾ ತನ್ನ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾಳೆ. ನಂತರ ಕಳೆದ ಒಂದು ವಾರದ ಹಿಂದೆ ರೇಣುಕಾ ತಾಯಿ, ಸಹೋದರ ಮತ್ತು ತಂಗಿಯ ಗಂಡ ಯಲಗೂರಿನ ಮನೆಗೆ ಬಂದು ಟಿಕಾಣಿ ಹೂಡಿದ್ದರು. ಅಲ್ಲದೆ ರೇಣುಕಾ ತಾಯಿ ಗರ್ಭಿಣಿಯಾಗಿದ್ಯಾ ಊರಿಗೆ ಬಾ, ಇಲ್ಲೇ ಹೆರಿಗೆ ಮಾಡಿಸೋಣ ಅಂತಾನೂ ಹೇಳಿದ್ದರು. ಆಗ ರೇಣುಕಾಗೆ ಶಂಕರ್ ನೋಡು ನನಗೆ ಯಾಕೋ ಸರಿ ಅನಿಸುತ್ತಿಲ್ಲ ಅಂತಾ ಎಚ್ಚರಿಸಿದ್ದನು. ಅಷ್ಟರಲ್ಲೇ ಮಂಗಳವಾರ ತಾನು ಕೆಲಸಕ್ಕೆ ಹೋದಾಗ ಈ ಘಟನೆ ನಡೆದು ಹೋಗಿದೆ ಅಂತಾ ಶಂಕರ್ ಹೆಂಡತಿಯನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾನೆ.

    ಘಟನೆಯ ನಂತರ ರೇಣುಕಾ ತಾಯಿ, ಸಹೋದರ ಮತ್ತು ತಂಗಿ ಗಂಡ ಪರಾರಿಯಾಗಿದ್ದಾರೆ ಅಂತಾ ಶಂಕರ್ ಆರೋಪಿಸುತ್ತಿದ್ದಾನೆ. ಸದ್ಯ ಸ್ಥಳಕ್ಕೆ ನಿಡಗುಂದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆಯ ನಂತರ ಸತ್ಯಾಸತ್ಯತೆ ಹೊರ ಬೀಳಲಿದೆ. ಸದ್ಯ ಮೇಲ್ನೋಟಕ್ಕೆ ಇದೊಂದು ಮರ್ಯಾದಾ ಹತ್ಯೆ ಎಂದು ಕಂಡುಬರುತ್ತಿದ್ದು, ಪೊಲೀಸರ ತನಿಖೆಯ ನಂತರ ಸತ್ಯ ಹೊರಬಿಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv