ಕನ್ನಡದ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ (Vijay Prakash) ಗೌರವ ಡಾಕ್ಟರೇಟ್ (Honorary Doctorate)ಗೆ ಪಾತ್ರರಾಗಿದ್ದಾರೆ. ಅವರ ಸಂಗೀತ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಕೆನಡಾದ ಗ್ಯಾಬ್ರಿಯಲ್ ವಿಶ್ವ ವಿದ್ಯಾಲಯವು ವಿಜಯ್ ಪ್ರಕಾಶ್ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಿದೆ.
ಮೂಲತಃ ಮೈಸೂರಿನವರಾದ ವಿಜಯ್ ಪ್ರಕಾಶ್, ಮುಂಬೈನಲ್ಲಿ ನೆಲೆಸಿ, ಎ.ಆರ್ ರೆಹಮಾನ್ ಕಂಪೋಸ್ ಮಾಡಿದ್ದ ಜೈ ಹೋ ಹಾಡಿನ ಮೂಲಕ ಮನೆಮಾತದವರು. ಆನಂತರ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಹಾಡಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಹಾಡುಗಳನ್ನು ಹಾಡಿದ ಹೆಗ್ಗಳಿಕೆ ಅವರದ್ದು.
ನಾನಾ ಭಾಷೆಗಳ ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ, ಗಾಯಕರಾಗಿ, ಸಂಗೀತ ಸಂಯೋಜಕರಾಗಿ ವಿಜಯ್ ಪ್ರಕಾಶ್ ಕೆಲಸ ಮಾಡಿದ್ದಾರೆ.
ತೆಲುಗಿನ ಖ್ಯಾತ ನಟ ರಾಮ್ ಚರಣ್ ಅವರಿಗೆ ಚೆನ್ನೈನ (Chennai) ವೇಲ್ಸ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ (Honorary Doctorate) ಘೋಷಣೆ ಮಾಡಿದೆ. ಸಿನಿಮಾ ರಂಗದಲ್ಲಿ ಸಲ್ಲಿಸಿದ ಸೇವೆಗಾಗಿ ಈ ಗೌರವನ್ನು ವಿಶ್ವವಿದ್ಯಾಲಯ ನೀಡುತ್ತಿದೆ. ಸಹಜವಾಗಿಯೇ ರಾಮ್ ಚರಣ್ ಅಭಿಮಾನಿಗಳಿಗೆ ಸಂಭ್ರಮವಾಗಿದೆ.
ಸದ್ಯ ಅವರು ಹೊಸ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ RC 16 ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದ ನಾಯಕಿ ಜಾನ್ವಿ ಕಪೂರ್ (Janhvi Kapoor) ಜೊತೆಗಿನ ಚಿತ್ರೀಕರಣದ ಫೋಟೋಗಳನ್ನು ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು.
ರಾಮ್ ಚರಣ್- ಜಾನ್ವಿ ಕಪೂರ್ (Janhvi Kapoor) ನಟನೆಯ ಹೊಸ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ನೆರವೇರಿತ್ತು. ಈ ಇವೆಂಟ್‌ಗೆ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ಬೋನಿ ಕಪೂರ್, ಸುಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿ ಚಿತ್ರತಂಡಕ್ಕೆ ಶುಭಕೋರಿದ್ದರು
ರಾಮ್ ಚರಣ್ (Ram Charan) ನಟನೆಯ ಹೊಸ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರೀಕರಣದಲ್ಲಿ ಮೆಗಾಸ್ಟಾರ್ ಪುತ್ರನ ಜೊತೆ ಜಾನ್ವಿ ಮಾತನಾಡುತ್ತಿರುವ ಫೋಟೋಗಳು ಸದ್ದು ಮಾಡುತ್ತಿದೆ. ಇಬ್ಬರು ಜೊತೆಯಿರುವ ಫೋಟೋ ನೋಡಿ ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ಈ ವೇಳೆ, ಜಾನ್ವಿ ತಂದೆ ಬೋನಿ ಕಪೂರ್ ಕೂಡ ಶೂಟಿಂಗ್ ಸೆಟ್‌ಗೆ ಹಾಜರಿ ಹಾಕಿದ್ದಾರೆ.
ಅಂದಹಾಗೆ, ರಾಮ್‌ಚರಣ್ ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಬುಚ್ಚಿಬಾಬು ನಿರ್ದೇಶನದ ಇನ್ನು ಹೆಸರಿಡದ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಎ. ಆರ್ ರೆಹಮಾನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಆರ್.ರತ್ನವೇಲು ಛಾಯಾಗ್ರಹಣ, ಆಂಟೋನಿ ರುಬಿನ್ ಸಂಕಲನ ಚಿತ್ರಕ್ಕಿದೆ. ಚಂದ್ರಬೋಸ್, ಆನಂತ ಶ್ರೀರಾಮ್, ಬಾಲಾಜಿ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.
ಮೈಸೂರು: ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ(SM Krishna) ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ (Mysore University) ತನ್ನ 104ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದೆ.
ಸುದರ್ಶನ ನರಸಿಂಹ ಕ್ಷೇತ್ರದ ಪೀಠಾಧಿಪತಿ ಭಾಷ್ಯಂ ಸ್ವಾಮೀಜಿ ಹಾಗೂ ಬೆಂಗಳೂರಿನ ಗೋಕುಲ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಎಂ.ಆರ್.ಸೀತಾರಾಮ್ ಅವರಿಗೆ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ – ಪ್ರತೀ ಕ್ಷೇತ್ರಕ್ಕೆ ತಲಾ 10 ಕೋಟಿ ಬಿಡುಗಡೆ: ಡಿಕೆಶಿ
ಘಟಿಕೋತ್ಸವದಲ್ಲಿ 436 ಪದಕಗಳು, 266 ಬಹುಮಾನಗಳನ್ನು 252 ಮಂದಿ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುವುದು. ಇದರ ಜೊತೆಗೆ 6,144 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುವುದು ಹಾಗೂ 26,009 ಮಂದಿ ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾಹಿತಿ ನೀಡಿದ್ದರು.
ಬೆಂಗಳೂರು: ಈ ಬಾರಿಯ ಬೆಂಗಳೂರು ವಿಶ್ವವಿದ್ಯಾಲಯ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿಗೆ (Honorary Doctorate) ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD DeveGowda) ಭಾಜನರಾಗಿದ್ದಾರೆ.
ಜೆಡಿಎಸ್‌ನ ಕಟ್ಟಾಳು ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಇಳಿ ವಯಸ್ಸಿನಲ್ಲೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಇಂದಿಗೂ ಕನ್ನಡಿಗರ ಪರ ಸಂಸತ್ತಿನಲ್ಲಿ ಧ್ವನಿ ಎತ್ತುತ್ತಿದ್ದಾರೆ. ಇನ್ನು ಕರ್ನಾಟಕ ಕಂಡ ಏಕೈಕ ಪ್ರಧಾನಿ ಎಂಬ ಹೆಗ್ಗಳಿಕೆಯೂ ಇವರಿಗಿದೆ. ಇದನ್ನೂ ಓದಿ: ಯಡಿಯೂರಪ್ಪರಂತೆ ಅವರ ಪುತ್ರ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಬೇಕು: ರೇಣುಕಾಚಾರ್ಯ
ಕರ್ನಾಟಕ ಕುಳ್ಳ ಖ್ಯಾತಿಯ ನಟ ದ್ವಾರಕೀಶ್ ಅವರಿಗೆ ಬೆಂಗಳೂರು ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇಂದು ನಡೆದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. 57ನೇ ಘಟಿಕೋತ್ಸವ ಅದ್ದೂರಿಯಾಗಿ ನಡೆದಿದ್ದು, ಜ್ಞಾನಜ್ಯೋತಿ ಆಡಿಟೋರಿಯಂ ನಲ್ಲಿ ನಡೆದ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಘಟಿಕೋತ್ಸವಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾಲಯದ ಅನುದಾನ ಆಯೋಗದ ಅಧ್ಯಕ್ಷ ಪ್ರೊ.ಎಂ.ಜಗದೀಶ್, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಭಾಗವಹಿಸಿದ್ರು.
ಘಟಿಕೋತ್ಸವದಲ್ಲಿ ಚಿತ್ರ ನಟ ದ್ವಾರಕೀಶ್, ಖ್ಯಾತ ಕಲಾವಿದ ಅಮರನಾಥ್ ಗೌಡ, ಸಮಾಜ ಸೇವಕ ಡಾ.ಟಿ. ಅನಿಲ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. 34337 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 300 ಚಿನ್ನದ ಪದಕ, 73 ನಗದು ಬಹುಮಾನ, 267 ಅಭ್ಯರ್ಥಿಗಳಿಗೆ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಇದನ್ನೂ ಓದಿ: ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಮಿಂಚಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ
ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಕೀರ್ತಿ ನೇಗಿನ್ಹಾಲ್ 7 ಚಿನ್ನದ ಪದಕ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರ. ಅರ್ಚನ 7 ಚಿನ್ನದ ಪದಕ, ರಸಾಯನಶಾಸ್ತ್ರ, ಬೆಂಗಳೂರು ವಿವಿ. ಮಯೂರ 6 ಚಿನ್ನದ ಪದಕ, ಸಂಸ್ಕೃತ ವಿಭಾಗ ಬೆಂಗಳೂರು ವಿಶ್ವವಿದ್ಯಾಲಯದಿಂದ ಅತಿ ಹೆಚ್ಚು ಚಿನ್ನದ ಪದಕ ಪಡೆದರು. ಸ್ನಾತಕ ಪದವಿ ವಿಭಾಗದಲ್ಲಿ, ರಾಮ್ ಕುಮಾರ್ ಬಿಎಸ್ಸಿ, 6 ಚಿನ್ನದ ಪದಕ, ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಸೈನ್ಸ್, ಸ್ಪೂರ್ತಿ 6 ಚಿನ್ನದ ಪದಕ, ಬಿಕಾಂ, ಜ್ಞಾನವಿಕಾಸ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಕಾಮರ್ಸ್, ಧನುಷ 5 ಚಿನ್ನದ ಪದಕ, ಬಿಬಿಎ, ಸುರಾನ ಕಾಲೇಜು ಅತಿ ಹೆಚ್ಚು ಪದಕ ಬೇಟೆ ಆಡಿದರು.
Live Tv
[brid partner=56869869 player=32851 video=960834 autoplay=true]
ಕನ್ನಡ ಸಿನಿಮಾ ರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಬಿಂಚಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರು ಮತ್ತು ಸಮಕುಲಾಧಿಪತಿಗಳಾದ ಡಾ.ಸಿ.ಎನ್ ಅಶ್ವತ್ಥನಾರಾಯಣ್ (Ashwath Narayan) ಅವರು ಗೌರವ ಪದವಿಯನ್ನು ಪ್ರದಾನ ಮಾಡಿದರು.
ಗೌರವ ಡಾಕ್ಟರೇಟ್ (Honorary Doctorate) ಪದವಿ ಪಡೆದು ಮಾತನಾಡಿದ ಅನಂತ್ ನಾಗ್ (Ananth Nag), ‘ನನಗೆ ಪ್ರಶಸ್ತಿಗಳ ಬಗ್ಗೆ ಆಸೆಯಿಲ್ಲ. ನನ್ನ ಮಗಳು ಮತ್ತು ಹೆಂಡತಿ ಒತ್ತಾಯ ಮಾಡಿದರು ಅನ್ನುವ ಕಾರಣಕ್ಕಾಗಿ ಈ ಪದವಿಯನ್ನು ಒಪ್ಪಿಕೊಂಡೆ. ಇಂಥದ್ದೊಂದು ಗೌರವ ಸಿಗುವುದಕ್ಕೆ ಕಾರಣ ಕನ್ನಡ ಸಿನಿಮಾ ರಂಗ. ಇಂತಹ ರಂಗವನ್ನು ಬೆಳೆಸಿದವರು ಡಾ.ರಾಜ್ ಕುಮಾರ್ ಅವರು’ ಎಂದು ನೆನಪಿಸಿಕೊಂಡರು.
ತಮ್ಮ ಬಾಲ್ಯ ಮತ್ತು ಶಾಲಾ ದಿನಗಳನ್ನೂ ನೆನಪಿಸಿಕೊಂಡ ಅನಂತ್ ನಾಗ್, ‘8ನೇ ತರಗತಿವರೆಗೂ ನಾನು ಕನ್ನಡ ಮಾಧ್ಯಮದಲ್ಲೇ ಓದಿದವನು. ಆನಂತರ ಮುಂಬೈಗೆ ಹೋಗಿ ಆಂಗ್ಲ ಮಾಧ್ಯಮ ಸೇರಿಕೊಂಡೆ. ಇಂಗ್ಲಿಷ್ ಮಾಧ್ಯಮದ ಕಾರಣಕ್ಕಾಗಿ ಓದಿನಲ್ಲಿ ಹಿಂದೆ ಬಿದ್ದೆ. ಹೊನ್ನಾವರದಲ್ಲಿ ಓದುವಾಗ ನನ್ನದು ಕನ್ನಡ ಮಾಧ್ಯಮವಾಗಿತ್ತು ಎಂದು ಮಾತನಾಡಿದರು. ಅಲ್ಲದೇ ಮುಂಬೈ ದಿನಗಳಲ್ಲಿ ತಾವು ಕಂಡಂತಹ ಸಿನಿಮಾ ರಂಗದ ಬಗ್ಗೆಯೂ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೆಣೈ (Sadashiva Shenai), ಭಾರತೀಯ ವಿದ್ಯಾಭವನದ ನಿರ್ದೇಶಕ ಹೆಚ್.ಎನ್. ಸುರೇಶ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ನಿರಂಜನ ವಹಿಸಿದ್ದರು.
Live Tv
[brid partner=56869869 player=32851 video=960834 autoplay=true]
ಕನ್ನಡದ ಹೆಸರಾಂತ ನಟ, ಮೊನ್ನೆಯಷ್ಟೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ರಮೇಶ್ ಅರವಿಂದ್ (Ramesh Aravind) ಸೇರಿ ಮೂವರಿಗೆ ರಾಣಿ ಚೆನ್ನಮ್ಮ (Rani Chennamma) ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ (Honorary Doctorate) ಘೋಷಿಸಲಾಗಿದೆ. ಕನ್ನಡ ಚಿತ್ರರಂಗಕ್ಕೆ (Sandalwood) ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಮೇಶ್ ಅವರನ್ನು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.
ರಮೇಶ್ ಅರವಿಂದ್ ಅವರ ಜೊತೆ ಸಮಾಜ ಸೇವೆ ಕ್ಷೇತ್ರದಲ್ಲಿ ವಿ.ರವಿಚಂದರ್, ಧಾರ್ಮಿಕ ಕ್ಷೇತ್ರದಲ್ಲಿ ಸೇವೆಗೈದ ಮಾತೆ ಅಕ್ಕ ಅನ್ನಪೂರ್ಣ ತಾಯಿಗೆ ಗೌರವ ಡಾಕ್ಟರೇಟ್ ಘೋಷಣೆಯಾಗಿದೆ. ಸೆ.14 ರಂದು ಮಧ್ಯಾಹ್ನ 12 ಕ್ಕೆ ಸುವರ್ಣಸೌಧದಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ವಿ.ವಿ ತಿಳಿಸಿದೆ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು
ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರಚಂದ ಗೆಹ್ಲೋಟ್ ವಹಿಸಲಿದ್ದು, ಆಂಧ್ರದ ಕೇಂದ್ರಿಯ ಬುಡಕಟ್ಟು ವಿವಿ ಕುಲಪತಿ ಪ್ರೊ. ಟಿ.ವಿ ಕಟ್ಟಿಮನಿ ಅವರಿಂದ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವಥ್ ನಾರಾಯಣ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊ. ರಾಮಚಂದ್ರೆಗೌಡ ಮಾಹಿತಿ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕನ್ನಡದ ಹೆಸರಾಂತ ನಟ ಅನಂತ್ ನಾಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂವರು ಸಾಧಕರಿಗೆ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಘೋಷಿಸಿದೆ. ಸಿನಿಮಾ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಅನಂತ್ ನಾಗ್, ಹೆಸರಾಂತ ಶಹನಾಯಿ ವಾದಕ, ಬಿಸ್ಮಿಲ್ಲಾ ಖಾನ್ ಶಿಷ್ಯರಾದ ಎಸ್. ಬಲ್ಲೇಶ್ ಭಜಂತ್ರಿ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿರುವ ಶರತ್ ಶರ್ಮಾ ಈ ಸಾಲಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ ಎಂದು ಕುಲಪತಿ ಪ್ರೊ. ನಿರಂಜನ ವಾನಳ್ಳಿ ತಿಳಿಸಿದ್ದಾರೆ.
ಕೋಲಾರದ ನಂದಿನಿ ಪ್ಯಾಲೇಸ್ ನಲ್ಲಿ ಈ ಗೌರವ ಪ್ರದಾನ ಸಮಾರಂಭವು ಇದೇ ಶುಕ್ರವಾರ ನಡೆಯಲಿದ್ದು, ಘಟಿಕೋತ್ಸವದ ಸಮಾರಂಭದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದವಿ ನೀಡಿ ಗೌರವಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ ನಾರಾಯಣ ಸೇರಿದಂತೆ ಹಲವರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾ ‘ಲಡಕಿ’ ನೋಡಿ ಬೆಚ್ಚಿ ಬಿದ್ದರಂತೆ ಸೆನ್ಸಾರ್ ಟೀಮ್
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಮೊದಲ ಘಟಿಕೋತ್ಸವ ನಡೆಯಲಿದ್ದು, ವಿವಿಧ ವಿಷಯಗಳಲ್ಲಿ ರಾಂಕ್ ಪಡೆದಿರುವ 41 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಕೂಡ ನಡೆಯಲಿದೆ. ಇದು ಈ ವಿವಿಯ ಮೊದಲ ಘಟಿಕೋತ್ಸವವಾಗಿದೆ.
Live Tv
[brid partner=56869869 player=32851 video=960834 autoplay=true]
ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮೈಸೂರು ವಿವಿ 102ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ರಾಜ್ಯಪಾಲರಿಂದ ಈ ಗೌರವನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಇಂದು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪುನೀತ್ ಪತ್ನಿ ಅಶ್ವಿನಿ ಭಾವುಕರಾಗಿಯೇ ಪುನೀತ್ ಪರವಾಗಿ ಗೌರವ ಡಾಕ್ಟರೇಟ್ ಸ್ವೀಕರಿಸಿದರು.
ಮೈಸೂರು ವಿವಿಯ ಕ್ರಾಫಾರ್ಡ್ ಹಾಲ್ ನಲ್ಲಿ ನಡೆಯುತ್ತಿರುವ ಗೌರವ ಡಾಕ್ಟರೇಟ್ ಪ್ರಧಾನ ಕಾರ್ಯಕ್ರಮದಲ್ಲಿ ಡಾ. ರಾಜ್ ಕುಟುಂಬ ವರ್ಗದವರು ಹಾಜರಿದ್ದರು. ನಟ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪತ್ನಿ, ನಟ ವಿನಯ್ ರಾಜ್ ಕುಮಾರ್, ರಾಜ್ ಕುಮಾರ್ ಮಗಳು ಲಕ್ಷ್ಮಿ ಗೋವಿಂದು ಹಾಗೂ ಮೊಮ್ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ
1976 ರಲ್ಲಿ ಡಾ. ರಾಜಕುಮಾರ್ ಗೆ ಮೈಸೂರು ವಿವಿಯಿಂದ ಡಾಕ್ಟರೇಟ್ ಗೌರವ ನೀಡಲಾಗಿತ್ತು. 2022 ರಲ್ಲಿ ಪುನೀತ್ ರಾಜಕುಮಾರ್ ಗೆ ಮರಣೋತ್ತರ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ಪುನೀತ್ ಅವರ ಸಮಾಜಮುಖಿ ಕೆಲಸಗಳು ಮತ್ತು ಸಿನಿಮಾ ರಂಗಕ್ಕೆ ನೀಡಿರುವ ಕೊಡುಗೆಯನ್ನು ಆಧರಿಸಿ, ಮೈಸೂರು ವಿವಿ ಈ ಗೌರವನ್ನು ನೀಡಿದೆ.
ನೆಲಮಂಗಲ: ಸಾಮಾಜಿಕ ಕೆಲಸಗಳಲ್ಲಿ ಸದಾ ಮುಂದಿರುವ ನೆಲಮಂಗಲ ತಾಲೂಕು ಪಂಚಾಯತಿಯ ಸ್ಥಾಯಿ ಸಮಿತಿಯ ಅಧ್ಯಕ್ಷ ಬಿ.ರಂಗನಾಥ್ ಅವರಿಗೆ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಗ್ಲೋಬಲ್ ಕೌನ್ಸಿಲ್ ಫಾರ್ ಪ್ರೋಫೆಶನಲ್ ಎಜುಕೇಶನ್ ಮಿಷನ್ ವತಿಯಿಂದ ರಂಗನಾಥ್ ಅವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಈ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಲಾಗಿದೆ. ಬಿ.ರಂಗನಾಥ್ ಅವರು ಹಲವು ವರ್ಷಗಳಿಂದ ಸಾಮಾಜಿಕ ಸೇವೆಗಳಾದ ದೀನದಲಿತರ ಉದ್ದಾರ, ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಈ ವೇಳೆ ಪಬ್ಲಿಕ್ ಡಿಜಿಟಲ್ ವಾಹಿನಿಯೊಂದಿಗೆ ಮಾತನಾಡಿದ ಅವರು, ಗೌರವ ಡಾಕ್ಟರೇಟ್ ಬಂದಿರುವುದು ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಕಾರ್ಯಗಳಲ್ಲಿ ನೆರವಾಗುವ ಉದ್ದೇಶವನ್ನು ಹೊಂದಿದ್ದೇವೆ. ಈ ಪ್ರಶಸ್ತಿ ಲಭಿಸಿರುವುದು ನನ್ನ ಸಾಧನೆಗಿಂತ, ಸಾಮಾಜಿಕ ಜೀವನದಲ್ಲಿ ಅಳಿಲು ಸೇವೆ ಗುರುತಿಸಿರುವುದು ಬಹಳ ಸಂತೋಷವಾಗಿದೆ. ತಾಲೂಕು ಪಂಚಾಯಿತಿಯಲ್ಲಿ ಹಲವಾರು ಕಾರ್ಯ ಮಾಡಿದ್ದೇನೆ. ಈಗ ಪ್ರಶಸ್ತಿ ಬಂದ ಇನ್ನಷ್ಟೂ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ರಂಗನಾಥ್ ಹೇಳಿದ್ದಾರೆ.