Tag: Honor

  • ದಸರಾ ವಜ್ರಮುಷ್ಠಿ ಕಾಳಗದ ವಿಜೇತ ಚನ್ನಪಟ್ಟಣದ ಪ್ರವೀಣ್ ಜೆಟ್ಟಿಗೆ ಸನ್ಮಾನ

    ದಸರಾ ವಜ್ರಮುಷ್ಠಿ ಕಾಳಗದ ವಿಜೇತ ಚನ್ನಪಟ್ಟಣದ ಪ್ರವೀಣ್ ಜೆಟ್ಟಿಗೆ ಸನ್ಮಾನ

    ರಾಮನಗರ: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಉತ್ಸವದ ವಜ್ರಮುಷ್ಠಿ (Vajramushti) ಕಾಳಗದಲ್ಲಿ ವಿಜೇತರಾದ ಚನ್ನಪಟ್ಟಣದ (Channapatna) ಪ್ರವೀಣ್ ಜೆಟ್ಟಿ (Praveen Jetti) ಅವರನ್ನು ನಗರದ ರೈಲ್ವೆ ನಿಲ್ದಾಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಅಭಿನಂದಿಸಲಾಯಿತು.

    ನಮ್ಮ ರಾಜ್ಯದ ಸಾಂಸ್ಕೃತಿಕ ಪರಂಪರೆಯ ಆಸ್ತಿಯಾಗಿರುವ ಜೆಟ್ಟಿ ಜನಾಂಗಕ್ಕೆ ಸರ್ಕಾರ ಸೂಕ್ತ ಗೌರವ ಹಾಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಾಡಿನ ಸಾಂಸ್ಕೃತಿಕ ಪರಂಪರೆಗೆ ಬೊಂಬೆನಾಡಿನ ಜೆಟ್ಟಿಗಳ ಕೊಡುಗೆ ಅಪಾರ. ಈ ಬಾರಿಯ ದಸರಾದಲ್ಲಿ ಜಯಗಳಿಸಿರುವ ಪ್ರವೀಣ್ ಜೆಟ್ಟಿ ಅವರ ಸಾಧನೆ ಶ್ಲಾಘನೀಯವಾಗಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಳೆದ ಹತ್ತು ವರ್ಷಗಳಲ್ಲಿ 2,500 ಶಾಸಕರನ್ನು ಖರೀದಿ ಮಾಡಿದೆ: ಸಂತೋಷ್ ಲಾಡ್

    ಪ್ರವೀಣ್ ಜೆಟ್ಟಿ ಅವರು ಚನ್ನಪಟ್ಟಣ ತಾಲೂಕಿನ ಸಾಂಸ್ಕೃತಿಕ ಪರಂಪರೆಯ ಆಸ್ತಿಯಾಗಿದ್ದಾರೆ. ವಜ್ರಮುಷ್ಠಿ ಕಾಳಗದಲ್ಲಿ ಚನ್ನಪಟ್ಟಣದ ಜೆಟ್ಟಿಗಳು ಜಯಗಳಿಸುತ್ತಾ ಬಂದಿದ್ದಾರೆ. ಈ ವರ್ಷ ಪ್ರವೀಣ್ ಜೆಟ್ಟಿ ಅವರು ದಸರಾದಲ್ಲಿ ಭಾಗವಹಿಸಿ ಜಯಗಳಿಸುವ ಮೂಲಕ ಬೊಂಬೆನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರು ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು. ಇದನ್ನೂ ಓದಿ: ಹರೀಶ್ ಪೂಂಜಾ ರಾಜಕೀಯದಲ್ಲಿ ಇನ್ನೂ ಬಚ್ಚಾ: ಸಿದ್ದರಾಮಯ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಮ್ಮ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ: ತಂದೆಯ ಪುಣ್ಯತಿಥಿಗೆ ರಾಹುಲ್ ನಮನ

    ನಿಮ್ಮ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ: ತಂದೆಯ ಪುಣ್ಯತಿಥಿಗೆ ರಾಹುಲ್ ನಮನ

    ನವದೆಹಲಿ: ನಿಮ್ಮ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಪ್ಪ ರಾಜೀವ್ ಗಾಂಧಿಯವರ ಪುಣ್ಯತಿಥಿಗೆ ನಮನ ಸಲ್ಲಿಸಿದ್ದಾರೆ.

    ಇಂದು ಭಾರತದ 6ನೇ ಪ್ರಧಾನ ಮಂತ್ರಿಯಾಗಿ ಸೇವೆಸಲ್ಲಿಸಿದ್ದ ರಾಜೀವ್ ಗಾಂಧಿಯವರ 29ನೇ ಪುಣ್ಯತಿಥಿ, ಈ ಸಮಯದಲ್ಲಿ ಅಪ್ಪನನ್ನು ನೆನಪಿಸಿಕೊಂಡು ಟ್ವೀಟ್ ಮಾಡಿರುವ ರಾಹುಲ್, ನಿಜವಾದ ದೇಶಭಕ್ತ, ಉದಾರವಾದಿ ಮತ್ತು ಲೋಕೋಪಕಾರಿ ತಂದೆಯ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ನಿಜವಾದ ದೇಶಭಕ್ತ, ಉದಾರವಾದಿ ಮತ್ತು ಲೋಕೋಪಕಾರಿ ತಂದೆಯ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಪ್ರಧಾನ ಮಂತ್ರಿಯಾಗಿ ರಾಜೀವ್ ಜಿ ದೇಶವನ್ನು ಪ್ರಗತಿಯ ಹಾದಿಯಲ್ಲಿ ಸಾಗಿಸಿದ್ದಾರೆ. ದೇಶವನ್ನು ಮುಂದೆ ತೆಗದುಕೊಂಡು ಹೋಗುವ ದೃಷ್ಟಿಯಿಂದ ಮತ್ತು ರಾಷ್ಟ್ರವನ್ನು ಸಬಲೀಕರಣಗೊಳಿಸಲು ಅವರು ಅನೇಕ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಇಂದು ಅವರ ಪುಣ್ಯ ತಿಥಿಯಂದು ನಾನು ಅವರಿಗೆ ಪ್ರೀತಿಯಿಂದ ಮತ್ತು ಕೃತಜ್ಞತೆಯಿಂದ ವಂದಿಸುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಈ ವಿಚಾರವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ, ಪುಣ್ಯತಿಥಿಯಂದು ನಾನು ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ದೇಶಕ್ಕಾಗಿ ಪ್ರಾಣಬಿಟ್ಟ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರಿಗೆ ತುಂಬು ಹೃದಯದ ನಮನ ಎಂದು ಬರೆದುಕೊಂಡಿದ್ದಾರೆ.

    ಚುನಾವಣಾ ಪ್ರಚಾರಕ್ಕಾಗಿ ತಮಿಳುನಾಡಿನ ಶ್ರೀಪೆರಂಬುದೂರ್ ಗೆ ಬಂದಿದ್ದ ರಾಜೀವ್ ಗಾಂಧಿಯವರನ್ನು 1991 ಮೇ 21ರಂದು ಹತ್ಯೆ ಮಾಡಲಾಗಿತ್ತು. ಭಾಷಣ ಮಾಡಲು ಸ್ಟೇಜ್ ಕಡೆ ಹೋಗುತ್ತಿದ್ದಾಗ ರಾಹುಲ್ ಗಾಂಧಿ ಬಳಿ ಬಂದ ಮಹಿಳಾ ಸೂಸೈಡ್ ಬಾಂಬರ್ ತೆನ್ಮೋಜಿ ರಾಜರತ್ಮಂ ಆರ್.ಡಿ.ಎಕ್ಸ್ ಬಾಂಬ್ ಬ್ಲಾಸ್ಟ್ ಮಾಡಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ್ದಳು. ಈ ವೇಳೆ ರಾಜೀವ್ ಗಾಂಧಿ ಜೊತೆ ಇನ್ನೂ 14 ಮಂದಿ ಸಾವನ್ನಪ್ಪಿದ್ದರು.

  • ಕಾರ್ಗಿಲ್ ವಿಜಯೋತ್ಸವ – ದೇಶದೆಲ್ಲೆಡೆ ಮುಗಿಲು ಮುಟ್ಟಲಿದೆ ಸಂಭ್ರಮ

    ಕಾರ್ಗಿಲ್ ವಿಜಯೋತ್ಸವ – ದೇಶದೆಲ್ಲೆಡೆ ಮುಗಿಲು ಮುಟ್ಟಲಿದೆ ಸಂಭ್ರಮ

    ನವದೆಹಲಿ: ದೇಶಾದ್ಯಂತ ಇಂದು 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ. ವೀರ ಸೈನಿಕರ ತ್ಯಾಗ ಮತ್ತು ಬಲಿದಾನ ನೆನಪಿಸುವುದರ ಜೊತೆಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ 2 ದಿನ ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ.

    ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೈನಿಕರು ವಿಜಯಪತಾಕೆಯನ್ನು ಹಾರಿಸಿದ ದಿನವಾಗಿದೆ. ಪಾಕ್ ಮೇಲೆ ಭಾರತೀಯ ಯೋಧರು ವಿಜಯ ಸಾಧಿಸಿದ ಸ್ಮರಣಾರ್ಥ ಇಂದು ದೇಶದೆಲ್ಲೆಡೆ `ಕಾರ್ಗಿಲ್ ವಿಜಯ್ ದಿವಸ್’ ಆಚರಣೆ ಮಾಡಲಾಗುತ್ತಿದೆ. ಭಾರತೀಯ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು ಕಾರ್ಗಿಲ್ ಯುದ್ಧ, ಹೀಗಾಗಿ ಪ್ರತಿ ವರ್ಷ ಜುಲೈ 26ರಂದು ಸಂಭ್ರಮದಿಂದ ಭಾರತೀಯರು ಆಚರಿಸುತ್ತಾರೆ.

    ಜುಲೈ 14ರಂದು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು `ವಿಕ್ಟರ್ ಫ್ಲೇಮ್’ ಅನ್ನು ಬೆಳಗಿಸಿದ್ದರು. ಈ ಜ್ಯೋತಿ ದೇಶದ ಪ್ರಮುಖ ನಗರಗಳಲ್ಲಿ ಸಂಚರಿಸಿದೆ. ಸುಮಾರು 25 ದಿನಗಳ ಕಾಲ ನಡೆದಿದ್ದ ಯುದ್ಧದಲ್ಲಿ ಪಾಕ್ ಸೇನಾಪಡೆ ಹಾಗೂ ಉಗ್ರವಾದಿಗಳನ್ನು ನಮ್ಮ ಸಿಪಾಯಿಗಳು ಹಿಮ್ಮೆಟ್ಟಿಸಿದ್ದರು. ಇದಕ್ಕೆ ಆಪರೇಷನ್ ವಿಜಯ್ ಅಂತ ಹೆಸರಿಡಲಾಗಿತ್ತು.

    ಉರಿ ರಿಲೀಸ್:
    ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ ‘ಉರಿ ದಿ ಸರ್ಜಿಕಲ್ ಸ್ಟೈಕ್’ ಚಿತ್ರ ಮರು ಬಿಡುಗಡೆಯಾಗುತ್ತಿದೆ. ಜನವರಿ 11ರಂದು ಬಿಡುಗಡೆಯಾಗಿದ್ದ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ 200 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಈಗ ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ ಈ ಚಿತ್ರ ಮತ್ತೆ ಬಿಡುಗಡೆಗೆ ಸಿದ್ಧವಾಗಿದೆ. 2019ರ ಹೊಸ ವರ್ಷವನ್ನು ಬಾಲಿವುಡ್ ‘ಉರಿ ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದ ಮೂಲಕ ಬರಮಾಡಿಕೊಂಡಿತ್ತು.

    ಯುದ್ಧ ನಡೆದಿದ್ದು ಯಾವಾಗ..?
    1999ರ ಮೇ ಮತ್ತು ಜುಲೈ ಈ 2 ತಿಂಗಳ ನಡುವೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧವೇ ಕಾರ್ಗಿಲ್ ಯುದ್ಧ. ಈ ಯುದ್ಧದಲ್ಲಿ ಪಾಕಿಸ್ತಾನದ ಸೈನಿಕರು ಅಕ್ರಮವಾಗಿ ಕಾಶ್ಮೀರದ ಕಾರ್ಗಿಲ್ ಸೇರಿದಂತೆ ಬಹುತೇಕ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಭಾಗಗಳನ್ನು ಆಕ್ರಮಿಸಿಕೊಂಡಿದ್ದರು. ಪಾಕ್ ಸೈನಿಕರು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಕಾರ್ಗಿಲ್ ವಿಭಾಗವನ್ನು ಪುನಃ ಕೈವಶ ಮಾಡಿಕೊಳ್ಳಲು ಭಾರತ `ಆಪರೇಷನ್ ವಿಜಯ’ ಎಂಬ ಕಾರ್ಯಾಚರಣೆಯನ್ನು ನಡೆಸಿ ಜುಲೈನ 26ರಂದು ಯಶಸ್ವಿಯಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.

    ಕಾರ್ಗಿಲ್ ಯುದ್ಧದಲ್ಲಿ ಭಾರತದ 600ಕ್ಕೂ ಅಧಿಕ ವೀರ ಸೈನಿಕರು ಹುತಾತ್ಮರಾಗಿ, 1200ಕ್ಕೂ ಹೆಚ್ಚು ಮಂದಿ ಅಂಗವಿಕಲರಾಗಿದ್ದರು. ಈ ಹಿನ್ನೆಲೆಯಲ್ಲಿ ಅಂದಿನಿಂದ ಜುಲೈ 26ರಂದು ಕಾರ್ಗಿಲ್ ಹೋರಾಟದಲ್ಲಿ ವೀರಮರಣನ್ನಪ್ಪಿದ ಯೋಧರಿಗೆ ಗೌರವ ಸಲ್ಲಿಸಲು ಈ ವಿಜಯ್ ದಿವಸ್ ಅನ್ನು ಆಚರಣೆ ಮಾಡಿಕೊಳ್ಳುತ್ತಾ ಸೇನೆ ಬರುತ್ತಿದೆ.

  • ಬಿಡುಗಡೆಯಾಯ್ತು ಹಾನರ್ 8ಸಿ ನೂತನ ಸ್ಮಾರ್ಟ್ ಫೋನ್: ಗುಣವೈಶಿಷ್ಟ್ಯವೇನು? ಬೆಲೆ ಎಷ್ಟು?

    ಬಿಡುಗಡೆಯಾಯ್ತು ಹಾನರ್ 8ಸಿ ನೂತನ ಸ್ಮಾರ್ಟ್ ಫೋನ್: ಗುಣವೈಶಿಷ್ಟ್ಯವೇನು? ಬೆಲೆ ಎಷ್ಟು?

    ನವದೆಹಲಿ: ಆಂಡ್ರಾಯ್ಡ್ ಆವೃತ್ತಿಯಲ್ಲಿ ಹೆಸರು ಮಾಡುತ್ತಿರುವ ಹಾನರ್ ತನ್ನ ನೂತನ ಆವೃತ್ತಿಯಾದ ಹಾನರ್ 8ಸಿ ಸ್ಮಾರ್ಟ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ನೂತನ ಹಾನರ್ 8ಸಿ ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿಗಾಗಿ 8 ಎಂಪಿ ಎಚ್‍ಡಿ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 13+2ಎಂಪಿ ಡ್ಯುಯಲ್ ಕ್ಯಾಮೆರಾವಿದೆ. ಮಿಡ್ ನೈಟ್ ಬ್ಲಾಕ್, ಅರೋರ ಬ್ಲ್ಯೂ ಹಾಗೂ ಪ್ಲಾಟಿನಂ ಗೋಲ್ಡ್ ಬಣ್ಣಗಳಲ್ಲಿ ನೂತನ ಫೋನ್ ಲಭ್ಯವಿದೆ. ಡಿಸೆಂಬರ್ 10 ರಿಂದ ಆನ್‍ಲೈನ್ ಜಾಲತಾಣಗಳಲ್ಲಿ ಲಭ್ಯವಿರಲಿದೆ.

    ಬೆಲೆ ಎಷ್ಟು?
    4ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 11,999 ರೂ. 4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 12,999 ರೂಪಾಯಿಯನ್ನು ನಿಗದಿಪಡಿಸಿದೆ.

    ಹಾನರ್ 8ಸಿ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ:
    157.2 X 76 X 7.98 ಮಿ.ಮೀ., 167 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸ್ಲಾಟ್ ಸೌಲಭ್ಯ, 6.26 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720 X 1520 ಪಿಕ್ಸೆಲ್, 19:9 ಅನುಪಾತ 269ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನಾಪ್‍ಡ್ರಾಗನ್ 632, ಆಕ್ಟಾ ಕೋರ್ ಪ್ರೊಸೆಸರ್ 1.8 ಗೀಗಾಹರ್ಟ್ಸ್, ಅಡ್ರಿನೋ 506 ಗ್ರಾಪಿಕ್ ಪ್ರೊಸೆಸರ್, 3ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ, 4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.

    ಕ್ಯಾಮೆರಾ ಹಾಗೂ ಇತರೆ ಫೀಚರ್:
    ಮುಂಭಾಗ 8 ಎಂಪಿ ಎಚ್‍ಡಿ ಕ್ಯಾಮೆರಾ, ಹಿಂಭಾಗ 13+2 ಎಂಪಿ ಡ್ಯುಯಲ್ ಕ್ಯಾಮೆರಾ, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸಾರ್, ಫೋಟೋ ಲಾಕಿಂಗ್, 4,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದೀಪಾವಳಿ ಸಮಯದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಹಾನರ್‌ನಿಂದ ವಿಶೇಷ ಸಾಧನೆ!

    ದೀಪಾವಳಿ ಸಮಯದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಹಾನರ್‌ನಿಂದ ವಿಶೇಷ ಸಾಧನೆ!

    ನವದೆಹಲಿ: ಹುವಾವೇ ಹಾನರ್ ಕಂಪನಿ ಇದೇ ಮೊದಲ ಬಾರಿಗೆ ದೀಪಾವಳಿ ಸಮಯದಲ್ಲಿ ಒಟ್ಟು 10 ಲಕ್ಷಕ್ಕೂ ಅಧಿಕ ಫೋನ್ ಗಳನ್ನು ಮಾರಾಟ ಮಾಡಿದೆ.

    ದೀಪಾವಳಿ ಹಿನ್ನೆಲೆಯಲ್ಲಿ ಆನ್‍ಲೈನ್ ಶಾಪಿಂಗ್ ತಾಣಗಳಾದ ಫ್ಲಿಪ್ ಕಾರ್ಟ್, ಅಮೆಜಾನ್ ಮತ್ತು ಹಾನರ್ ಸ್ಟೋರ್ ಮೂಲಕ ಈ ವಿಶೇಷ ಸಾಧನೆ ನಿರ್ಮಾಣವಾಗಿದೆ ಎಂದು ಹಾನರ್ ಹೇಳಿಕೊಂಡಿದೆ.

    2017ರ ದೀಪಾವಳಿಗೆ ಹೋಲಿಸಿದರೆ ಈ ಬಾರಿಯ ವ್ಯವಹಾರ ಶೇ.300 ರಷ್ಟು ಏರಿಕೆಯಾಗಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ ಮತ್ತು ಕೋಲ್ಕತ್ತಾದಲ್ಲಿ ಹೆಚ್ಚಿನ ಫೋನ್ ಗಳು ಮಾರಾಟವಾಗಿದೆ ಎಂದು ತಿಳಿಸಿದೆ.

    ಮಧ್ಯಮ ಬೆಲೆಯ ಫೋನ್ ಗಳಾದ ಹಾನರ್ 9ಎನ್, 8 ಎಕ್ಸ್ ಫೋನ್ ಗಳು ಫ್ಲಿಪ್‍ಕಾರ್ಟ್ ಬಿಗ್ ಬಿಲಿಯನ್ ಡೇ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ಹೆಚ್ಚು ಮಾರಾಟವಾಗುವ ಮೂಲಕ ಈ ವಿಶೇಷ ಸಾಧನೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

    ಹಬ್ಬದ ಸಮಯದಲ್ಲಿ ಹಾನರ್ ನ 9ಎನ್, 9ಲೈಟ್, 7ಎಸ್, 9ಐ, 7ಎ, 10 ಫೋನ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ.

    https://twitter.com/HiHonorIndia/status/1060487702557147136

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/

  • ವಿಮಾನ ನಿಲ್ದಾಣದಲ್ಲೇ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದ ಜಿ. ಪರಮೇಶ್ವರ್

    ವಿಮಾನ ನಿಲ್ದಾಣದಲ್ಲೇ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದ ಜಿ. ಪರಮೇಶ್ವರ್

    ಬೆಳಗಾವಿ: ಸಿಆರ್​ಪಿಎಫ್ ಯೋಧ ಉಮೇಶ್ ಅವರ ಪಾರ್ಥಿವ ಶರೀರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಹುತಾತ್ಮ ಯೋಧನಿಗೆ ವಿಮಾನ ನಿಲ್ದಾಣದಲ್ಲೇ ಗೌರವ ಸಲ್ಲಿಸಿ ಜಮಖಂಡಿಯತ್ತ ಪ್ರಯಾಣ ಬೆಳೆಸಿದರು.

    ಗೋಕಾಕ್ ಸಿಆರ್​ಪಿಎಫ್ ಯೋಧ ಮಣಿಪುರದಲ್ಲಿ ಹುತಾತ್ಮರಾದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮಾತನಾಡಿ, ವಿಮಾನ ನಿಲ್ದಾಣದಲ್ಲಿ ಯೋಧನಿಗೆ ಗೌರವ ಸಲ್ಲಿಸಿದ್ದೇವೆ. ಹುತಾತ್ಮ ಯೋಧ ಉಮೇಶ್ 20 ಜನ ಯೋಧರ ಪ್ರಾಣ ಉಳಿಸಿದ್ದಾರೆ. ಯೋಧನ ಧೈರ್ಯ ಹಾಗೂ ಸಾಹಸಕ್ಕೆ ನಾನು ನನ್ನ ನಮನವನ್ನು ಸಲ್ಲಿಸುತ್ತೇನೆ. ಸರ್ಕಾರ ಯೋಧನ ಕುಟುಂಬಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಲು ಸಿಎಂ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದರು.

    ಅಲ್ಲದೇ ಉಪಚುನಾವಣೆ ಬಗ್ಗೆ ಮಾತನಾಡಿದ ಅವರು ಜಮಖಂಡಿ ಚುನಾವಣೆ ಉಸ್ತುವಾರಿ ಆಗಿ ನನ್ನನ್ನು ನೇಮಕ ಮಾಡಿದ್ದಾರೆ. 5 ಕ್ಷೇತ್ರದಲ್ಲಿ ನಮ್ಮ ಗೆಲ್ಲುವು ನಿಶ್ಚಿತವಾಗಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬಾರದು. ಮುಂದಿನ ಲೋಕಸಭಾ ಚುನಾವಣೆಗೆ ಈ ಎಲೆಕ್ಷನ್ ದಿಕ್ಸೂಚಿ ಅಲ್ಲ. ರಮೇಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ಇಬ್ಬರು ಒಳ್ಳೆಯ ಫ್ರೆಂಡ್ಸ್. ಅವರಿಬ್ಬರು ಮಾತನಾಡುವುದು ಸಹಜ. ಇವರಿಬ್ಬರಿಗೂ ಬಹಿರಂಗವಾಗಿ ಮಾತನಾಡದಿರಲು ಸೂಚಿಸುತ್ತೇವೆ. ಎಂಇಎಸ್ ಕರಾಳ ದಿನ ಆಚರಣೆ ಹೊಸದಲ್ಲ. ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಟೋ ಡ್ರೈವರ್ ಪ್ರಾಮಾಣಿಕತೆ ಮೆಚ್ಚಿ ಪ್ರಶಂಸಿದ್ರು ಡಿಸಿಪಿ ರವಿ ಚನ್ನಣ್ಣನವರ್

    ಆಟೋ ಡ್ರೈವರ್ ಪ್ರಾಮಾಣಿಕತೆ ಮೆಚ್ಚಿ ಪ್ರಶಂಸಿದ್ರು ಡಿಸಿಪಿ ರವಿ ಚನ್ನಣ್ಣನವರ್

    ಬೆಂಗಳೂರು: ಆಟೋದಲ್ಲಿ ಬಿಟ್ಟು ಹೋಗಿದ್ದ ಬ್ಯಾಗನ್ನು ವಾರಸುದಾರರಿಗೆ ಹಿಂದಿರುಗಿಸಿದ ಆಟೋರಿಕ್ಷಾ ಡ್ರೈವರ್ ಅವರ ಪ್ರಮಾಣಿಕತೆಯನ್ನು ಮೆಚ್ಚಿ ಪಶ್ಚಿಮ ವಲಯ ಡಿಸಿಪಿ ರವಿ ಡಿ ಚನ್ನಣ್ಣನವರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

    ಗಾಂಧಿನಗರದ ನಿವಾಸಿ ಶ್ರಿ.ಜುವೇರ್ ಖಾನ್ ಎಂಬವರು ಬೆಂಗಳೂರು ಉಬರ್ ಆಟೋವನ್ನು ಬುಕ್ ಮಾಡಿ ಪ್ರಯಾಣಿಸಿದ್ದಾರೆ. ಆದರೆ ಈ ವೇಳೆ ಆಟೋದಲ್ಲಿಯೇ ಲ್ಯಾಪ್‍ಟಾಪ್ ಇದ್ದ ಬ್ಯಾಗನ್ನು ಮರೆತು ಅಲ್ಲೇ ಬಿಟ್ಟು ಹೋಗಿದ್ದಾರೆ.

    ಈ ವೇಳೆ ಆಟೋರಿಕ್ಷಾ ಚಾಲಕ ಆ ಲ್ಯಾಪ್‍ಟಾಪ್ ಬ್ಯಾಗನ್ನು ಉಪ್ಪರಪೇಟೆ ಪೊಲೀಸ್ ಠಾಣೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರ ಬ್ಯಾಗಿನ ವಾರಸುದಾರರ ಮಾಹಿತಿಯನ್ನು ತಿಳಿದುಕೊಂಡು ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಆಟೋ ಚಾಲಕನ ಕೈಯಲ್ಲಿಯೇ ಬ್ಯಾಗನ್ನು ಹಿಂದಿರುಗಿಸಿದ್ದಾರೆ.

    ಆಟೋರಿಕ್ಷಾ ಚಾಲಕನ ಪ್ರಮಾಣಿಕತೆಯನ್ನು ಮೆಚ್ಚಿ ಬೆಂಗಳೂರು ಸಿಟಿ ಪೊಲೀಸ್ ಪರವಾಗಿ ಡಿಸಿಪಿ ರವಿ ಡಿ ಚನ್ನಣ್ನನವರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ. ಈ ಬಗ್ಗೆ ಡಿಸಿಪಿ ಅವರೇ ಟ್ವೀಟ್ ಮಾಡಿದ್ದಾರೆ.

    ಇತ್ತೀಷೆಗಷ್ಟೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಚಂದ್ರಕುಮಾರ್ ಅವರಿಗೆ 60 ಸಾವಿರ ರೂ. ಬೆಲೆ ಬಾಳುವ ಫೋನ್ ಸಿಕ್ಕಿದೆ. ಬಳಿಕ ಅದನ್ನು ಪೊಲೀಸರ ಸಹಾಯದ ಮೂಲಕ ಫೋನ್ ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಇದರಿಂದ ಚಂದ್ರಕುಮಾರ್ ಅವರ ಪ್ರಮಾಣಿಕತೆಯನ್ನು ಮೆಚ್ಚಿ ಅವರಿಗೂ ಕೂಡ ಡಿಸಿಪಿ ರವಿ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂಗೆ ಸನ್ಮಾನ ಕಾರ್ಯಕ್ರಮ – ಭರ್ಜರಿ ಬಾಡೂಟದಲ್ಲಿ ನೂಕುನುಗ್ಗಲು

    ಸಿಎಂಗೆ ಸನ್ಮಾನ ಕಾರ್ಯಕ್ರಮ – ಭರ್ಜರಿ ಬಾಡೂಟದಲ್ಲಿ ನೂಕುನುಗ್ಗಲು

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ, ಕುಮಾರಸ್ವಾಮಿ ಸನ್ಮಾನ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಏರ್ಪಡಿಸಲಾಗಿದ್ದು, ಕಾರ್ಯಕ್ರಮದಲ್ಲಿ ಕೆಲಕಾಲ ನೂಕುನುಗ್ಗಲು ಉಂಟಾಗಿತ್ತು.

    ಶನಿವಾರವಷ್ಟೇ ಕೇರಳದಲ್ಲಿ ಸನ್ಮಾನ ಮುಗಿಸಿಕೊಂಡು ಬಂದಿದ್ದ ಸಿಎಂ ಕುಮಾರಸ್ವಾಮಿಗೆ ಇಂದು ಟಿ.ದಾಸರಹಳ್ಳಿ ಜೆಡಿಎಸ್ ಶಾಸಕ ಮಂಜುನಾಥ್ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನೆಲಮಂಗಲ ಸಮೀಪದ ಮಾದವಾರದಲ್ಲಿನ ನೀಲಕಂಠ ಕನ್ವೆನ್ಷನ್ ಹಾಲ್ ನಲ್ಲಿ ಶಾಸಕ ಮಂಜುನಾಥ್ ಸೇರಿದಂತೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರಿಂದ ಸಿಎಂ ಕುಮಾರಸ್ವಾಮಿ ಅವರನ್ನು ಅಭಿನಂದಿಸಲಾಯಿತು.

    ಸಮಾವೇಶಕ್ಕೆ ಬಂದಿದ್ದ ಸಾವಿರಾರು ಕಾರ್ಯಕರ್ತರಿಗೆ ನಾನಾ ರೀತಿಯ ಭರ್ಜರಿ ಬಾಡೂಟ ಏರ್ಪಡಿಸಲಾಗಿತ್ತು. ಈ ವೇಳೆ ಊಟಕ್ಕಾಗಿ ನೂಕು ನುಗ್ಗಲು ಉಂಟಾಗಿ, ಕಾರ್ಯಕರ್ತರು ಪರಿದಾಡಿದ ಪ್ರಸಂಗ ಎದುರಾಗಿತ್ತು. ಇದನ್ನ ಗಮನಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಊಟದ ಹಾಲ್ ಗೆ ಬಂದು ನೂಕಾಟ ತಳ್ಳಾಟ ಮಾಡದಂತೆ ಹೇಳಿ ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಿ ಅಲ್ಲಿಂದ ತಮ್ಮ ಮುಂದಿನ ಪ್ರಯಾಣವನ್ನ ಮುಂದುವರಿಸಿದರು.

  • ವೃಕ್ಷಮಾತೆಗೆ `ಛಲವಾದಿ ರತ್ನ’ ಪ್ರಶಸ್ತಿ ಪ್ರಧಾನ

    ವೃಕ್ಷಮಾತೆಗೆ `ಛಲವಾದಿ ರತ್ನ’ ಪ್ರಶಸ್ತಿ ಪ್ರಧಾನ

    ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಬೆಳಲಗೆರೆಯಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕರಿಗೆ ಛಲವಾದಿ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.

    ಇಂದು ಬೆಳಗೆರೆಯಲ್ಲಿ ಕಟ್ಟೆಮನೆ ವಂಶಸ್ಥರು ಏಕಾದಶಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿಗಳಾದ ಜಿ. ಪರಮೇಶ್ವರ್ ರವರು ವೃಕ್ಷಮಾತೆ ಸಾಲುಮರದ ತಿಮ್ಮಕ್ಕರಿಗೆ `ಛಲವಾದಿ ರತ್ನ’ ಎಂಬ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಸಾಲುಮರದ ತಿಮ್ಮಕ್ಕರ ಸೇವೆಯನ್ನು ಹಾಡಿಹೊಗಳಿದ್ದಾರೆ.

    ಸರ್ಕಾರಿ ಶಾಲೆ ಮಕ್ಕಳಿಗೆ ಬಸ್ ಪಾಸ್ ವಿಚಾರ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್, ಮುಂದಿನ ದಿನಗಳಲ್ಲಿ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೂ ಪಾಸ್ ಕೊಡುವ ಚಿಂತನೆ ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೇ ಮೊದಲನೇ ಹಂತದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಪಾಸ್ ವಿತರಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ದೇಶದಲ್ಲಿರುವ ಜಾತಿ ವರ್ಗೀಕರಣ ನಿರ್ನಾಮ ಆಗ್ಬೇಕು: ಪರಮೇಶ್ವರ್

  • ಹಾನರ್ 9ಎನ್ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಹಾನರ್ 9ಎನ್ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಆಂಡ್ರಾಯ್ಡ್ ಆವೃತ್ತಿಯಲ್ಲಿ ಹೆಸರು ಗಳಿಸುತ್ತಿರುವ ಹಾನರ್ ತನ್ನ ನೂತನ ಆವೃತ್ತಿಯ ಹಾನರ್ 9ಎನ್ ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ನೂತನ ಹಾನರ್ 9ಎನ್ ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿಗಾಗಿ 16 ಎಂಪಿ ಎಚ್‍ಡಿ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 13+2ಎಂಪಿ ಡ್ಯುಯಲ್ ಕ್ಯಾಮೆರಾವಿದೆ. ಲ್ಯಾವೆಂಡರ್ ಪರ್ಪಲ್, ರಾಬಿನ್ ಎಗ್ ಬ್ಲೂ, ಸಪೈರ್ ಬ್ಲೂ ಹಾಗೂ ಮಿಡ್ ನೈಟ್ ಬ್ಲಾಕ್ ಬಣ್ಣಗಳಲ್ಲಿ ಫೋನ್ ಲಭ್ಯವಿರಲಿದೆ. ಜುಲೈ 31 ರ ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್ ಕಾರ್ಟ್ ಆನ್‍ಲೈನ್ ಜಾಲತಾಣಗಳಲ್ಲಿ ನೂತನ ಸ್ಮಾರ್ಟ್ ಫೋನ್ ಲಭ್ಯವಿರಲಿದೆ.

    ಬೆಲೆ ಎಷ್ಟು?
    3ಜಿಬಿ RAM/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 11,999 ರೂ. 4ಜಿಬಿ RAM/64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 13,999 ರೂ. ಹಾಗೂ 4ಜಿಬಿ RAM/128 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 17,999 ರೂ. ದರ ನಿಗದಿ ಪಡಿಸಿದೆ.

    ಹಾನರ್ 9ಎನ್ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 149.2 x 71.8 x 7.7 ಮಿ.ಮೀ., 150 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸ್ಲಾಟ್ ಸೌಲಭ್ಯ, 5.84 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(2280×1080 ಪಿಕ್ಸೆಲ್, 19:9 ಅನುಪಾತ 432ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕಿರಿನ್ 659, ಆಕ್ಟಾ ಕೋರ್ ಪ್ರೊಸೆಸರ್ 2.36 ಗೀಗಾಹಟ್ರ್ಸ್, 3ಜಿಬಿ RAM/32 ಜಿಬಿ ಆಂತರಿಕ ಮೆಮೊರಿ, 4ಜಿಬಿ RAM/64 ಜಿಬಿ ಆಂತರಿಕ ಮೆಮೊರಿ ಹಾಗೂ 4ಜಿಬಿ RAM/128 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.

    ಕ್ಯಾಮೆರಾ:
    ಮುಂಭಾಗ 16ಎಂಪಿ ಎಚ್‍ಡಿ ಕ್ಯಾಮೆರಾ, ಹಿಂಭಾಗ 13+2 ಎಂಪಿ ಡ್ಯುಯಲ್ ಕ್ಯಾಮೆರಾ, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್.

       

    ಇತರೆ ಪ್ಯೂಚರ್ ಗಳು: 2.5 ಕಾರ್ನಿಂಗ್ ಗೊರಿಲ್ಲಾ ಗ್ಲಾಸ್, 12 ಲೆಯರ್ ಸೇಫ್ಟಿ ಗ್ಲಾಸ್, ಫಿಂಗರ್ ಪ್ರಿಂಟ್ ಸೆನ್ಸಾರ್, ಫೋಟೋ ಲಾಕಿಂಗ್, 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.