Tag: Honnavara

  • ಹೊನ್ನಾವರ | ಮನೆಕೆಲಸದಾಕೆ ಮುಂದೆ ಬೆತ್ತಲಾಗಿ ಓಡಾಟ, ಸೆಕ್ಸ್‌ಗೆ ಒತ್ತಾಯ – ಮಾಲೀಕನ ವಿರುದ್ಧ ಎಫ್‌ಐಆರ್‌

    ಹೊನ್ನಾವರ | ಮನೆಕೆಲಸದಾಕೆ ಮುಂದೆ ಬೆತ್ತಲಾಗಿ ಓಡಾಟ, ಸೆಕ್ಸ್‌ಗೆ ಒತ್ತಾಯ – ಮಾಲೀಕನ ವಿರುದ್ಧ ಎಫ್‌ಐಆರ್‌

    ಕಾರವಾರ: ಮನೆಯ ಮಾಲೀಕನೊಬ್ಬ ಕೆಲಸದಾಕೆ ಮುಂದೆ ಬೆತ್ತಲಾಗಿ ಓಡಾಡಿ, ಸೆಕ್ಸ್‌ಗೆ ಒತ್ತಾಯಿಸಿದ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪ್ರಭಾತ್ ನಗರದಲ್ಲಿ ನಡೆದಿದೆ.

    ಮಹಿಳೆ ಸೆಕ್ಸ್‌ಗೆ ಒಪ್ಪದಿದ್ದಾಗ ಆಕೆಯ ಮೇಲೆ ಕಳ್ಳತನ ಆರೋಪ ಹೊರಿಸಿದ್ದ. ಇದರಿಂದ ನೊಂದ ಮಹಿಳೆ ಮಾಲೀಕನ ಕೃತ್ಯದ ವೀಡಿಯೋ ಸಮೇತ ಪೊಲೀಸರಿಗೆ ದೂರು ನೀಡಿದ್ದಾಳೆ. ಮನೆ ಮಾಲೀಕ ಪ್ರದೀಪ್ ನಾಯ್ಕ್‌ ವಿರುದ್ಧ ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: ಸರ್ಕಾರಿ ಕೆಲಸ ಉಳಿಸಿಕೊಳ್ಳಲು ಹಸುಗೂಸನ್ನು ಕಾಡಿಗೆ ಎಸೆದ ದಂಪತಿ

    ಪ್ರದೀಪ್‌ ಹೊನ್ನಾವರದಲ್ಲಿ ಏಜನ್ಸಿ ನಡೆಸುತ್ತಿದ್ದಾನೆ. ಈತನ ಪತ್ನಿ ಸಹ ಏಜೆನ್ಸಿ ನೋಡಿಕೊಳ್ಳುತ್ತಿರುವ ಕಾರಣ ಖಾಸಗಿ ಏಜನ್ಸಿಯೊಂದರ ಮೂಲಕ ಆಗಸ್ಟ್ 13 ರಂದು ಸ್ಥಳೀಯ ಮಹಿಳೆಯೊಬ್ಬಳನ್ನ ಅಡುಗೆ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದ. ಆಗಸ್ಟ್ 22 ರಂದು ಈತ ಮೊದಲ ಬಾರಿಗೆ ಕೆಲಸದಾಕೆ ಜೊತೆ ಕೆಟ್ಟದಾಗಿ ವರ್ತಿಸಿದ್ದಾನೆ. ನಂತರ ಈತ ಆಕೆಯ ಮುಂದೆ ಬೆತ್ತಲಾಗಿ ಓಡಾಡುವುದನ್ನು ಮಾಡಿದ್ದು, ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ. ಈ ವೇಳೆ ಒಪ್ಪದೇ ಆತನ ಪತ್ನಿಗೆ ಮಾಹಿತಿ ನೀಡಿದ್ದಳು.

    ಇದರಿಂದ ಪ್ರದೀಪ್‌ ನಾಯ್ಕ್ ಅಡುಗೆ ಕೆಲಸದವಳ ಮೇಲೆ ಕಳ್ಳತನದ ಆರೋಪ ಹೊರಿಸಿದ್ದ. ಹೀಗಾಗಿ ಈತನ ಪತ್ನಿಯೂ ಸುಮ್ಮನಾಗಿದ್ದಳು.‌ ಮತ್ತೆ ಆತ ಹಳೆ ಚಾಳಿಯನ್ನು ಮುಂದುವರಿಸಿದ್ದು, ನೊಂದ ಮಹಿಳೆ ವೀಡಿಯೋ ಸಮೇತ ಪೊಲೀಸರಿಗೆ ದೂರು ನೀಡಿದ್ದಾಳೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಅವಹೇಳನ – ಬೆಂಗಳೂರಿನಲ್ಲಿ ಮುನಾವರ್ ಫಾರೂಕಿ ಹತ್ಯೆಗೆ ಯತ್ನಿಸಿದ್ದ ಹಂತಕರು

  • ಗೋಹತ್ಯೆ ಮಾಡಿ ಹೊಟ್ಟೆಯಲ್ಲಿದ್ದ ಕರುವಿನ ಮಾಂಸ ಕೊಂಡೊಯ್ದಿದ್ದ ಪಾಪಿ ಅರೆಸ್ಟ್

    ಗೋಹತ್ಯೆ ಮಾಡಿ ಹೊಟ್ಟೆಯಲ್ಲಿದ್ದ ಕರುವಿನ ಮಾಂಸ ಕೊಂಡೊಯ್ದಿದ್ದ ಪಾಪಿ ಅರೆಸ್ಟ್

    ಕಾರವಾರ: ಗರ್ಭಧರಿಸಿದ್ದ ಗೋವನ್ನು ಹತ್ಯೆ ಮಾಡಿ ಮಾಂಸ ಕದ್ದೊಯ್ದಿದ್ದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಹೊನ್ನಾವರ (Honnavara) ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಹೊನ್ನಾವರ ತಾಲೂಕಿನ ವಲ್ಕಿಯ ತೌಫಿಕ್ ಅಹ್ಮದ್ ಜಿದ್ದಾ ಎಂದು ಗುರುತಿಸಲಾಗಿದೆ. ಆರೋಪಿ ಜ.19 ರಂದು ಗರ್ಭಧರಿಸಿದ್ದ ಗೋವಿನ ವಧೆ ಮಾಡಿ, ರುಂಡ, ಕಾಲುಗಳನ್ನು ಬಿಟ್ಟು ಗೋಮಾಂಸ ಹಾಗೂ ಹೊಟ್ಟೆಯಲ್ಲಿದ್ದ ಕರುವಿನ ಮಾಂಸ ಹೊತ್ತೊಯ್ದಿದ್ದ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದ ಅರಣ್ಯದಲ್ಲಿ ಗೋವನ್ನು ಹತ್ಯೆ ನಡೆದಿತ್ತು. ಬಂಧಿತ ಆರೋಪಿ, ಗೋವಿನ ವಧೆಗೆ ಸಹಕರಿಸಿ, ಬೈಕ್ ಮೂಲಕ ಮಾಂಸವನ್ನು ಕೊಂಡೊಯ್ದಿದ್ದ. ಕೃತ್ಯದಲ್ಲಿ ಭಾಗಿಯಾದ ಮೂರು ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

    ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್‍ಪಿ ಎಂ.ನಾರಾಯಣ್ ಅವರು ಆರು ವಿಶೇಷ ತಂಡ ರಚಿಸಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

  • ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ – ಇಬ್ಬರ ದುರ್ಮರಣ

    ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ – ಇಬ್ಬರ ದುರ್ಮರಣ

    ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು (Lorry) ಪಲ್ಟಿಯಾದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ (Honnavara) ತಾಲೂಕಿನ ಗೇರುಸೊಪ್ಪ ಸಾಗರ ರಸ್ತೆಯ ಸುಳಿಮುರ್ಖಿ ತಿರುವು ಬಳಿ ನಡೆದಿದೆ.

    ಸೋಮವಾರ ಮುಂಜಾನೆ ಘಟನೆ ನಡೆದಿದೆ. ಲಾರಿ ಕಬ್ಬಿಣದ ಆಟದ ಸಾಮಾನುಗಳನ್ನು ತುಂಬಿಕೊಂಡು ಸಾಗರ ಭಾಗದಿಂದ ಹೊನ್ನಾವರ ಕಡೆ ಬರುತಿತ್ತು. ಅತಿ ವೇಗದ ಚಾಲನೆಯೇ ಲಾರಿ ಪಲ್ಟಿಯಾಗಲು ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಇದನ್ನೂ ಓದಿ: ಇಬ್ಬರು ಮಕ್ಕಳನ್ನು ಹತ್ಯೆಗೈದು ಬೆಂಗಳೂರಿನ ಟೆಕ್ಕಿ, ಪತ್ನಿ ಆತ್ಮಹತ್ಯೆ

    ಮೃತರು ಮತ್ತು ಗಾಯಳುಗಳು ಮೂಲತಃ ಬಿಹಾರದವರು ಎಂದು ತಿಳಿದುಬಂದಿದೆ. ಗಾಯಾಳುಗಳಿಗೆ ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಆನೇಕಲ್‌ನಲ್ಲಿ ಸಿಲಿಂಡರ್ ಸ್ಫೋಟ – ತೀವ್ರತೆಗೆ ಕಟ್ಟಡದ ಒಂದು ಮಹಡಿ ಸಂಪೂರ್ಣ ಛಿದ್ರ

  • ಹೊನ್ನಾವರದ ಭಾಸ್ಕೇರಿ ಬಳಿ ಗುಡ್ಡ ಕುಸಿತ – ರಾಷ್ಟ್ರೀಯ ಹೆದ್ದಾರಿ ಬಂದ್

    ಹೊನ್ನಾವರದ ಭಾಸ್ಕೇರಿ ಬಳಿ ಗುಡ್ಡ ಕುಸಿತ – ರಾಷ್ಟ್ರೀಯ ಹೆದ್ದಾರಿ ಬಂದ್

    ಕಾರವಾರ: ಉತ್ತರ ಕನ್ನಡ (Utttara Kannada)  ಜಿಲ್ಲೆಯಾದ್ಯಂತ ಭಾರೀ ಮಳೆ (Rain) ಸುರಿಯುತ್ತಿದ್ದು ಹೊನ್ನಾವರದ (Honnavara) ಭಾಸ್ಕೇರಿ ಬಳಿ ಗುಡ್ಡ ಕುಸಿದಿದೆ. ದೊಡ್ಡ ಕಲ್ಲುಬಂಡೆ ಹೆದ್ದಾರಿಗೆ ಉರುಳಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 206 (National Highway 206) ಸಂಚಾರ ಬಂದ್‌ ಆಗಿದೆ.

    ಹೊನ್ನಾವರ -ಸಾಗರ-ಬೆಂಗಳೂರು ಮಾರ್ಗ ಬಂದ್ ಆಗಿದ್ದು ಬಸ್ ಹಾಗೂ ಭಾರೀ ಗಾತ್ರದ ವಾಹನ ಸಂಚಾರಕ್ಕೆ ತಡೆಯುಂಟಾಗಿದೆ. ರಸ್ತೆಯ ಒಂದು ಭಾಗದಲ್ಲಿ ದ್ವಿಚಕ್ರ ವಾಹನ ತೆರಳಲು ಮಾತ್ರ ಅವಕಾಶವಿದ್ದು ಈಗ ಬೆಂಗಳೂರು (Bengaluru) ಕಡೆ ತೆರಳುವ ಪ್ರಯಾಣಿಕರಿಗೆ  ಸಮಸ್ಯೆಯಾಗಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ – ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ

     

    ಸದ್ಯ ಹೆದ್ದಾರಿಗೆ ಬಿದ್ದ ಕಲ್ಲುಬಂಡೆಯನ್ನು ತೆರವುಗೊಳಿಸಲು ತಡವಾಗುತ್ತಿದ್ದು ಕಾರ್ಯಾಚರಣೆ ಇನ್ನೂ ಪ್ರಾರಂಭವಾಗಬೇಕಿದೆ. ಮತ್ತಷ್ಟು ಗುಡ್ಡ ಕುಸಿಯುವ ಸಾಧ್ಯತೆ ಇದ್ದು ಕಾರ್ಯಾಚರಣೆ ಅಡ್ಡಿಯಾಗುವ ಸಾಧ್ಯತೆಯಿದೆ.

  • ಹೊನ್ನಾವರದಲ್ಲಿ 144 ಸೆಕ್ಷನ್‌ ಜಾರಿ – ಪೊಲೀಸ್ ಬಿಗಿ ಬಂದೋಬಸ್ತ್

    ಹೊನ್ನಾವರದಲ್ಲಿ 144 ಸೆಕ್ಷನ್‌ ಜಾರಿ – ಪೊಲೀಸ್ ಬಿಗಿ ಬಂದೋಬಸ್ತ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ (Honnavara) ಕಾಸರಕೋಡ ಟೊಂಕಾ ಬಂದರು (Tonka Port) ಪ್ರದೇಶದಲ್ಲಿ144 ಸೆಕ್ಷನ್ ಜಾರಿ ಮಾಡಿ ಜಿಲ್ಲಾ ದಂಡಾಧಿಕಾರಿ ಗಂಗೂಬಾಯಿ ಮಾನಕರ್ ಆದೇಶ ಪ್ರಕಟಿಸಿದ್ದಾರೆ.

    ಖಾಸಗಿ ಬಂದರು ಕಾಮಗಾರಿಗೆ ಸ್ಥಳೀಯ ಮೀನುಗಾರರು (Local Fishermen) ತಡೆಯೊಡ್ಡಿದ ಹಿನ್ನಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇದನ್ನೂ ಓದಿ: ಮುಲಾಯಂ ಸರ್ಕಾರದಿಂದ ರಕ್ಷಣೆ – ಅನ್ಸಾರಿಯನ್ನು ಬಂಧಿಸಿದ್ದಕ್ಕೆ ಡಿಎಸ್‌ಪಿಗೆ ರಾಜೀನಾಮೆ ಶಿಕ್ಷೆ!

     

    ಬಂದರು ಕಾಮಗಾರಿಗೆ ಬಂದ ಕಾರ್ಮಿಕರ ಮೇಲೆ ಕಲ್ಲು ತೂರಾಟ ಮಾಡಿ ಕೆಲಸಗಾರರಿಗೆ ಅಡ್ಡಿ ಪಡಿಸಿ ಜೀವ ಬೆದರಿಕೆ ಹಾಕಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಆದೇಶ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಕಳೆದ ಮೂರು ವರ್ಷದಿಂದ ಖಾಸಗಿ ಬಂದರು ಕಾಮಗಾರಿ ನಡೆಸದಂತೆ ಪ್ರತಿಭಟನೆ (Protest) ನಡೆಸುತ್ತಿರುವ ಸ್ಥಳೀಯ ಮೀನುಗಾರರು ಪೊಲೀಸರಿಂದ ಏಟು ತಿಂದು ಜೈಲುವಾಸ ಸಹ ಅನುಭವಿಸಿದ್ದರು.  ಇದನ್ನೂ ಓದಿ: ವಿಘ್ನೇಶ್‌, ಸುಮೀತ್‌ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್‌ – ರಾಮೇಶ್ವರಂ ಕೆಫೆ ಆರೋಪಿಗಳ ಮಾಹಿತಿ ನೀಡಿದ್ರೆ 10 ಲಕ್ಷ ಬಹುಮಾನ

     

    ಡೊಂಕಾದಲ್ಲಿ ಅವೈಜ್ಞಾನಿಕ ಖಾಸಗಿ ಬಂದರು ಕಾಮಗಾರಿ ನಡೆಸಬಾರದು ಎಂದು ಸ್ಥಳೀಯ ಮೀನುಗಾರರು ಹೋರಾಟ ನಿರಂತರ ನಡೆಯುತ್ತಲೇ ಇದೆ. ಈ ಭಾಗದಲ್ಲಿ ಆಮೆಗಳು ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಆಮೆಗಳ ಮೊಟ್ಟೆ ಇಡುವ ಸ್ಥಳವಾಗಿದೆ. ಇದಲ್ಲದೇ ಸಂಪ್ರದಾಯಿಕ ಮೀನುಗಾರರು ಇಲ್ಲಿ ಜೀವನ ಕಂಡುಕೊಂಡಿದ್ದು ಒಕ್ಕಲೆಬ್ಬಿಸಿ ಖಾಸಗಿಯವರಿಗೆ ನೀಡಿರುವುದು ಸರಿಯಲ್ಲ ಎಂದು ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ.

    ಹಲವು ಸುತ್ತಿನ ಸಂಧಾನ ಮಾತುಕತೆ ನಂತರ ಇದೀಗ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದ್ದು ಇದರ ಮುಂದುವರೆದ ಭಾಗವಾಗಿ ಮಾರ್ಚ್‌ 29 ರಿಂದ ಎಪ್ರಿಲ್ 5ರ ವರೆಗೆ 144 ಸೆಕ್ಷನ್‌ ಜಾರಿ ಮಾಡಲಾಗಿದೆ.

  • ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ – 14 ಮೀನುಗಾರರ ರಕ್ಷಣೆ

    ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ – 14 ಮೀನುಗಾರರ ರಕ್ಷಣೆ

    ಕಾರವಾರ: ಮೀನುಗಾರಿಕೆಗೆ (Fishing) ತೆರಳಿದ್ದ ಬೋಟ್ (Boat) ಮುಳುಗಡೆಯಾಗಿ (Drown) 14 ಜನ ಮೀನುಗಾರರ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ (Honnavara) ಭಾಗದ ಆಳ ಸಮುದ್ರದಲ್ಲಿ ನಡೆದಿದೆ.

    ಎರಡು ದಿನದ ಹಿಂದೆ ಹೊನ್ನಾವರದ ಕಾಸರಕೋಡಿನಿಂದ (Kasarkod) ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಹೆಚ್.ಎಮ್ ಅಂಗಳೂರು ಎಂಬ ಹೆಸರಿನ ಮೀನುಗಾರಿಕಾ ಬೋಟ್ ತಳಭಾಗದಲ್ಲಿ ಒಡೆದುಹೋಗಿ ಬೋಟ್‌ಗೆ ನೀರು ತುಂಬಿತ್ತು. ಇದನ್ನೂ ಓದಿ: ಚಿನ್ನದ ಗಣಿಯಲ್ಲಿ ಬೆಂಕಿ ದುರಂತ – 27 ಕಾರ್ಮಿಕರು ಸಾವು

    ಈ ವೇಳೆ ಅಲ್ಲಿಯೇ ಮೀನುಗಾರಿಕೆ ಮಾಡುತ್ತಿದ್ದ ಅನಸೂಯ ಎಂಬ ಹೆಸರಿನ ಬೋಟ್ ಮೂಲಕ 14 ಜನ ಮೀನುಗಾರರ ರಕ್ಷಣೆ ಮಾಡಿ ಹೊನ್ನಾವರದ ಕಾಸರಕೋಡ ಬಂದರಿಗೆ ಸುರಕ್ಷಿತವಾಗಿ ಕರೆತರಲಾಗಿದೆ. ಇದನ್ನೂ ಓದಿ: ಪ್ರವಾಸಿ ದೋಣಿ ಮುಳುಗಡೆ – ಮಕ್ಕಳು ಸೇರಿದಂತೆ 22 ಮಂದಿ ನೀರುಪಾಲು

  • ನಿಯಂತ್ರಣ ತಪ್ಪಿ ಕಾರು ಪಲ್ಟಿ – ಚಾಲಕನಿಗೆ ಗಾಯ

    ನಿಯಂತ್ರಣ ತಪ್ಪಿ ಕಾರು ಪಲ್ಟಿ – ಚಾಲಕನಿಗೆ ಗಾಯ

    ಕಾರವಾರ: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ (Car Overturns) ಘಟನೆ ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ (Honnavara) ತಾಲೂಕಿನಲ್ಲಿ ಈ ಘಟನೆ ನಡೆದಿದ್ದು ಕಾರು ಪಲ್ಟಿಯಾಗಿ ಚಾಲಕ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದನ್ನೂ ಓದಿ: ಡೋಲು ಬಡಿಯುತ್ತ ಪಬ್ ಮೇಲೆ ದಾಳಿ- ಸಂಘಟನೆ ಕಾರ್ಯಕರ್ತರು ವಶಕ್ಕೆ

    ಧಾರೇಶ್ವರದಿಂದ ಚಂದಾವರ ಮಾರ್ಗವಾಗಿ ಸಾಗರಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು ಅಪಾಯಕಾರಿ ತಿರುವಿನಲ್ಲಿ ವೇಗವಾಗಿ ಆಗಮಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಇದನ್ನೂ ಓದಿ: ಕರಾವಳಿ ಗರಿಷ್ಠ ತಾಪಮಾನ ಇಳಿಕೆ ಸಾಧ್ಯತೆ – ಹೀಟ್ ವೇವ್ ಅಲರ್ಟ್ ವಾಪಸ್

  • ಕರಾವಳಿ ಸಮುದ್ರದಲ್ಲಿ ಅಪರೂಪದ ಬಾಲವಿಲ್ಲದ ಸನ್ ಫಿಶ್‌ ಪತ್ತೆ

    ಕರಾವಳಿ ಸಮುದ್ರದಲ್ಲಿ ಅಪರೂಪದ ಬಾಲವಿಲ್ಲದ ಸನ್ ಫಿಶ್‌ ಪತ್ತೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೊಡ(kasarkod) ಟೊಂಕಾದಲ್ಲಿ ಲಲಿತಾ ಕಂಪನಿಯ ಜಗದೀಶ್ ತಾಂಡೇಲರ ‘ಪ್ರೀಶಾ’ ಬೋಟಿಗೆ 15 ಕೆಜಿ ತೂಕದ ವಿರಳವಾಗಿ ಸಿಗುವ ಸನ್ ಫಿಶ್‌(Sunfish) ಬಲೆಗೆ ಬಿದ್ದಿದೆ.

    ಕರ್ನಾಟಕ ಕರಾವಳಿ ಭಾಗದಲ್ಲಿ ಈ ಮೀನು ಅಪರೂಪಕ್ಕೆ ಮೀನುಗಾರರ ಬಲೆಗೆ ಬೀಳುತ್ತವೆ. ಇಷ್ಟು ವರ್ಷದಲ್ಲಿ ಒಂದೆರೆಡು ಬಾರಿ ಮಾತ್ರ ಮೀನುಗಾರರ ಬಲೆಗೆ ಬಿದ್ದಿರುವ ಕುರಿತು ಕಡಲ ವಿಜ್ಞಾನಿಗಳು ದಾಖಲಿಸಿದ್ದಾಗಿ ಕಾರವಾರದ ಕಡಲ ಜೀವಶಾಸ್ತ್ರ ವಿಭಾಗದ ತಜ್ಞ ಶಿವಕುಮಾರ್ ಹರಗಿಯವರು ಮಾಹಿತಿ ನೀಡಿದ್ದಾರೆ.

    ಇದರ ವೈಜ್ಞಾನಿಕ ಹೆಸರು Mola mola ಎಂದಾಗಿದ್ದು ಸನ್ ಫಿಶ್‌ ಎಂದು ಸ್ಥಳೀಯವಾಗಿ ಕರೆಯಲಾಗುತ್ತದೆ. ವಿಶ್ವದಲ್ಲೇ ಅತೀ ಹೆಚ್ಚು ಮೂಳೆಗಳನ್ನು ಹೊಂದಿರುವ ಮೀನು ಇದಾಗಿದ್ದು ಸಾಮಾನ್ಯ ಮೀನಿನಂತೆ ಬಾಲ ಇರುವುದಿಲ್ಲ. ಬಹುತೇಕ ದೇಹವು ಮೂಳೆಯಿಂದ ಕೂಡಿರುತ್ತದೆ. ಮೂಳೆಗಳು ಹೆಚ್ಚಿರುವುದರಿಂದ ಇವು ಆಳ ಸಮುದ್ರದಿಂದ ಮೇಲ್ಭಾಗದಲ್ಲಿ ತೇಲುತ್ತಾ ಸೂರ್ಯನ ಕಿರಣಗಳನ್ನು ಹೀರುತ್ತವೆ. ಜಲ್ಲಿ ಫಿಷ್‌, ಚಿಕ್ಕ ಮೀನುಗಳು ಇವುಗಳ ಆಹಾರವಾಗಿದೆ. ಇದನ್ನೂ ಓದಿ: ಟೆಕೆಟ್ ದರ ಇಳಿಕೆ – `ಗಂಧದಗುಡಿ’ ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಬಂಪರ್ ಆಫರ್

    ಹೆಚ್ಚಾಗಿ ಉಷ್ಣವಲಯ, ಸಮಶೀತೋಷ್ಣ ವಲಯದಲ್ಲಿ ವಾಸಿಸುತ್ತವೆ. ಜಪಾನ್, ಕೋರಿಯಾ, ತೈವಾನ್ ನಲ್ಲಿ ಅತೀ ಹೆಚ್ಚು ಕಂಡುಬರುತ್ತವೆ. ಔಷಧೀಯ ಗುಣ ಸಹ ಇದರ ಮಾಂಸಕ್ಕೆ ಇದ್ದು ಹೊರ ದೇಶದಲ್ಲಿ ಇವುಗಳ ಭಕ್ಷಣೆ ಮಾಡುತ್ತಾರೆ. ಅತೀ ಹೆಚ್ಚು ಮೂಳೆಗಳು ಇರುವುದರಿಂದ ಇದರ ತೂಕವೂ ಟನ್‌ಗಟ್ಟಲೇ ಇರುತ್ತದೆ.

    ಅದೃಷ್ಟದ ಸಂಕೇತ
    ಕರಾವಳಿ ಭಾಗದಲ್ಲಿ ಈ ಮೀನು ಅದೃಷ್ಟದ ಸಂಕೇತ ಎಂದು ನಂಬಲಾಗಿದೆ. ಈ ಮೀನು ಯಾರಿಗೆ ಸಿಗುತ್ತದೆಯೋ ಆ ಮೀನುಗಾರ ಶ್ರೀಮಂತನಾಗುತ್ತಾನೆ, ಹೆಚ್ಚು ಮೀನುಗಳು ಆತನಿಗೆ ದೊರಕುತ್ತವೆ ಎಂಬ ನಂಬಿಕೆ ಮೀನುಗಾರರಲ್ಲಿದೆ.

    Live Tv
    [brid partner=56869869 player=32851 video=960834 autoplay=true]

  • ಸಾವನ್ನಪ್ಪುವ ಮೊದಲು ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ತೆರಳಿದ್ದ ಮೇಸ್ತಾ – ಸಿಬಿಐ ವರದಿಯಲ್ಲಿ ಬಯಲು

    ಸಾವನ್ನಪ್ಪುವ ಮೊದಲು ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ತೆರಳಿದ್ದ ಮೇಸ್ತಾ – ಸಿಬಿಐ ವರದಿಯಲ್ಲಿ ಬಯಲು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತಾ(Paresh Mesta) ಸಾವನ್ನಪ್ಪುವ ಮೊದಲು ಕುಮಟಾದಲ್ಲಿ ನಡೆದ ಆಗಿನ ಸಿಎಂ ಸಿದ್ದರಾಮಯ್ಯ(Siddaramaiah) ಅವರ ಕಾರ್ಯಕ್ರಮಕ್ಕೂ ಹೋಗಿ ಬಂದಿದ್ದ ವಿಚಾರ ಸಿಬಿಐ(CBI) ತನಿಖೆಯಿಂದ ದೃಢಪಟ್ಟಿದೆ.

    ಕುಮಟಾದಲ್ಲಿ ಡಿಸೆಂಬರ್‌ 6 ರಂದು ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಮೇಸ್ತಾ ಹೋಗಿದ್ದ. ಸುಮಾರು 25 ಕಿ.ಮೀ. ಪ್ರಯಾಣಿಸಿ ಸ್ನೇಹಿತರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಜೆ ಪರೇಶ್‌ ಮೇಸ್ತಾ ಮನೆಗೆ ಬಂದಿದ್ದ. ನಂತರ ಮನೆಯಿಂದ ಸ್ನೇಹಿತರನ್ನು ಭೇಟಿ ಮಾಡಲು ಹೋಗಿದ್ದ ಎಂಬ ವಿಚಾರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

     

    ಹೊನ್ನಾವರ ನ್ಯಾಯಾಲಯಕ್ಕೆ(Honnavara Court) ಸಲ್ಲಿಸಿರುವ ವರದಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮೇಸ್ತಾ ಒಡನಾಡಿಗಳು, ಆತನ ಸ್ನೇಹಿತರು, ಘಟನೆ ನಡೆದ ಸಿಸಿಟಿವಿ ದೃಶ್ಯ, ಮೊಬೈಲ್‌ ಲೋಕೇಶನ್‌ ಸೇರಿ ಸಾಕಷ್ಟು ಸಾಕ್ಷ್ಯಗಳನ್ನು ಕೋರ್ಟ್‌ಗೆ ಸಲ್ಲಿಸಿದೆ.

    ಪರೇಶ್‌ ಮೇಸ್ತಾ ಯಾವ ಹುಡುಗಿಯನ್ನೂ ಪ್ರೀತಿಸುತ್ತಿರಲಿಲ್ಲ. ಶಬರಿಮಲೆಗೆ ಹೋಗಲು ತಂದೆಯ ಒಪ್ಪಿಗೆ ಪಡೆದುಕೊಂಡಿದ್ದ ವಿಚಾರವು ವರದಿಯಲ್ಲಿದೆ.

    ಸಿಬಿಐ ಪರೇಶ್‌ ಮೇಸ್ತಾ ಅವರ ಆಪ್ತ ಸ್ನೇಹಿತರ ಹೇಳಿಕೆಯನ್ನು ದಾಖಲಿಸಿದೆ. ಪರೇಶ್‌ ಮೇಸ್ತ ಕೆಲವೊಮ್ಮೆ ಮದ್ಯ ಸೇವಿಸಿಯೂ ಮನೆಗೆ ಬರುತ್ತಿದ್ದ. ಆಗಾಗ ಸ್ನೇಹಿತನ ಮನೆಯಲ್ಲಿಯೇ ಇರುತ್ತಿದ್ದ. ಸ್ನೇಹಿತರ ಜತೆ ಸೇರಿಸಿಕೊಂಡು ಮೀನು ವ್ಯಾಪಾರ ಮಾಡುತ್ತಿದ್ದ ಎನ್ನುವುದು ಸೇರಿದಂತೆ ಅನೇಕ ಮಹತ್ವದ ವಿಷಯಗಳನ್ನು ಸಿಬಿಐ ತನಿಖೆ ತೆರೆದಿಟ್ಟಿದೆ.
    ಇದನ್ನೂ ಓದಿ: ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ – ರಿಷಬ್ ಸಮರ್ಥನೆ ತಳ್ಳಿಹಾಕಿದ ನಟ ಚೇತನ್

    ಹೊನ್ನಾವರದಲ್ಲಿ 2017ರ ಡಿಸೆಂಬರ್ 6ರಂದು ನಡೆದ ಕೋಮುಗಲಭೆಯಲ್ಲಿ ನಾಪತ್ತೆಯಾಗಿದ್ದ ಮೇಸ್ತಾ ಎರಡು ದಿನಗಳ ಬಳಿಕ ಶೆಟ್ಟಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಬಿಜೆಪಿ ಸೇರಿ ಹಿಂದೂಪರ ಸಂಘಟನೆಗಳು ಅನ್ಯ ಕೋಮಿನವರೇ ಪರೇಶ ಮೇಸ್ತಾನನ್ನು ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿತ್ತು.

    ಬಿಜೆಪಿ ನಾಯಕರ ಆಗ್ರಹದಂತೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿದ ಸಿಬಿಐ ಕೆಲ ದಿನಗಳ ಹಿಂದೆಯಷ್ಟೇ ಕೋರ್ಟ್‌ಗೆ ಬಿ ರಿಪೋರ್ಟ್ ಸಲ್ಲಿಸಿತ್ತು. ಆದರೆ ಪರೇಶ್ ಮೇಸ್ತಾ ಅವರ ತಂದೆ ಆ ವರದಿಗೆ ಆಕ್ಷೇಪ ಎತ್ತಿದ್ದರು. ಮಗನನ್ನು ಕೊಲೆ ಮಾಡಲಾಗಿದೆ. ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಬಿಜೆಪಿ ಮುಖಂಡರು ಮರು ತನಿಖೆಗೆ ಆಗ್ರಹಿಸುವುದಾಗಿಯೂ ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ಖಾಸಗಿ ಬಂದರು ನಿರ್ಮಾಣಕ್ಕೆ ವಿರೋಧ- ಸಾಮೂಹಿಕ ಆತ್ಮಹತ್ಯೆ ಯತ್ನಕ್ಕೆ ಮುಂದಾದ ಮೀನುಗಾರರು

    ಖಾಸಗಿ ಬಂದರು ನಿರ್ಮಾಣಕ್ಕೆ ವಿರೋಧ- ಸಾಮೂಹಿಕ ಆತ್ಮಹತ್ಯೆ ಯತ್ನಕ್ಕೆ ಮುಂದಾದ ಮೀನುಗಾರರು

    ಕಾರವಾರ: ಹೊನ್ನಾವರದ ಕಾಸರಕೋಡಿನಲ್ಲಿ ಮೀನುಗಾರರು ಸಾಮೂಹಿಕ ಆತ್ಮಹತ್ಯೆಗೆ ಪ್ರಯತ್ನ ಮಾಡುವ ಮೂಲಕ ಖಾಸಗಿ ಬಂದರು ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಖಾಸಗಿ ಬಂದರು ನಿರ್ಮಾಣಕ್ಕೆ ವಿರೋಧ ಏಕೆ? ಮೀನುಗಾರರು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದೇಕೆ? ವಿವರ ಇಲ್ಲಿದೆ.

    ಇಂದು ನಡೆದಿದ್ದೇನು?
    ಇಂದು ಹೊನ್ನಾವರ ತಾಲೂಕಿನ ಕಾಸರಕೋಡು ಗ್ರಾಮಪಂಚಾಯ್ತಿ ವ್ಯಾಪ್ತಿಯ ಟೊಂಕಾ ಸಮುದ್ರ ತೀರದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜಿಸಿತು. ಕೈಯಲ್ಲಿ ಲಾಟಿ ಹಿಡಿದ 500ಕ್ಕೂ ಹೆಚ್ಚು ಪೊಲೀಸರು ಗ್ರಾಮದವರನ್ನು ಯಾವುದೇ ಮುನ್ಸೂಚನೆ ನೀಡದೇ ಸ್ಥಳದಿಂದ ಚದುರಿಸುವ ಕೆಲಸ ಮಾಡಿದರು. ಸ್ಥಳೀಯ ಆಡಳಿತದ ದೌರ್ಜನ್ಯ ಪ್ರಶ್ನಿಸಿ ಅಬ್ಬರಿಸಿ ಬರುತ್ತಿರುವ ಸಮುದ್ರದಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಪ್ರಯತ್ನಿಸಿದ ಮೀನುಗಾರರನ್ನು ಪೊಲೀಸರು ರಕ್ಷಿಸಿದರು.

    ಹಿನ್ನೆಲೆ ಏನು?
    ಹೊನ್ನಾವರ ತಾಲೂಕಿನ ಕಾಸರಕೋಡು ಗ್ರಾಮದ ಟೊಂಕದಲ್ಲಿ ಆಂದ್ರ ಮೂಲದ ಖಾಸಗಿ ಮಾಲೀಕತ್ವದ ಹೊನ್ನಾವರ ಪೋರ್ಟ ಕಂಪನಿ ಖಾಸಗಿ ಬಂದರು ನಿರ್ಮಾಣಕ್ಕಾಗಿ 600 ಕೋಟಿ ವೆಚ್ಚದಲ್ಲಿ ಬಂದರು ಕಾಮಗಾರಿಗಾಗಿ 93 ಎಕರೆ ಪ್ರದೇಶವನ್ನು 10 ವರ್ಷದ ಹಿಂದೆ ರಾಜ್ಯ ಸರ್ಕಾರದ ಬಂದರು ಇಲಾಖೆಯಿಂದ ಪಡೆದಿದೆ. ಇದರಂತೆ ಕಾಸರಕೋಡು ಮೀನುಗಾರಿಕಾ ಬಂದರು ಪ್ರೇಶದಲ್ಲಿ ಹೂಳು ತೆಗೆದು ಜಟ್ಟಿ ನಿರ್ಮಿಸಿ ಖಾಸಗಿ ಬಂದರು ಕಾಮಗಾರಿ ಪ್ರಾರಂಭ ಮಾಡಬೇಕು. ಆದರೆ ಹೀಗೆ ಮಾಡದೇ ಮೀನುಗಾರರು ವಾಸವಿರುವ ಹಾಗೂ ಅರಣ್ಯ ಭೂಮಿ ಸೇರಿ ಒಟ್ಟು 235 ಎಕರೆ ಪ್ರದೇಶವನ್ನು ರಾಜಕೀಯ ಪ್ರಭಾವದ ಮುಲಕ ಪಡೆದುಕೊಳ್ಳಲು ಹೊರಟಿದ್ದು, ಟೊಂಕಾದಲ್ಲಿ ಮೀನುಗಾರರಿಗೆ ಯಾವುದೇ ಮಾಹಿತಿ ನೀಡದೇ ತೆರವುಗೊಳಿಸಲು ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ ನಲ್ಲಿ ಮೀನುಗಾರರು ಸ್ಟೇ ಕೂಡ ತಂದಿದ್ದರು. ಇನ್ನು ಖಾಸಗಿ ಬಂದರು ನಿರ್ಮಾಣ ಆಗಬಾರದು ಎಂದು ಒಂದು ವರ್ಷದಿಂದ ಸ್ಥಳೀಯ ಮೀನುಗಾರರು ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಆದರೆ ಇಂದು ಏಕಾಏಕಿ ಗ್ರಾಮದಲ್ಲಿ ವಾಸವಿರುವ ಮೀನುಗಾರರಿಗೆ ಯಾವುದೇ ಮಾಹಿತಿ ನೀಡದೇ ತೆರವು ಕಾರ್ಯಕ್ಕೆ ಖಾಸಗಿ ಕಂಪನಿ ಜಿಲ್ಲಾಡಳಿತದ ಸಹಕಾರದಲ್ಲಿ ಮುಂದಾಗಿದೆ.

    ಖಾಸಗಿ ಬಂದರು ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ತಲೆ ತಲಾಂತರದಿಂದ 400ಕ್ಕೂ ಹೆಚ್ಚು ಮೀನುಗಾರ ಕುಟುಂಬಗಳು ವಾಸಿಸುತ್ತಿವೆ. ಇದರ ಜೊತೆಗೆ ಈ ಭಾಗದಲ್ಲಿ ದೋಣಿಗಳನ್ನು ನಿಲ್ಲಿಸುವ ಸ್ಥಳ ಕೂಡ ಆಗಿದೆ. ಇನ್ನು ಈ ಭಾಗದಲ್ಲಿ ದಾಖಲೆ ಹೊಂದಿದ ಹಾಗೂ ಒತ್ತುವರಿ ಮಾಡಿಕೊಂಡು ಬದುಕು ಕಟ್ಟಿಕೊಂಡ ಅನೇಕ ಕುಟುಂಬಗಳಿವೆ. ಹೀಗಿರುವಾಗ ಖಾಸಗಿ ಕಂಪನಿ ತನ್ನ ಲಾಭಕ್ಕೆ ಪ್ರಭಾವ ಬಳಸಿ ಸಾವಿರಾರು ಮೀನುಗಾರರನ್ನು ಬೀದಿಗೆ ನಿಲ್ಲಿಸಲು ಹೊರಟಿದೆ.

    ಒಂದು ವೇಳೆ ತೆರವು ಕಾರ್ಯಾಚರಣೆ ಮುಂದುವರಿದಲ್ಲಿ ಮೀನುಗಾರರು ವಿಧಾನಸೌಧ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ. ಸದ್ಯ ಮೀನುಗಾರರ ಪ್ರತಿಭಟನೆಗೆ ಜೆಸಿಬಿಗಳು ಸದ್ದು ನಿಲ್ಲಿಸಿದೆ. ಒಂದು ವೇಳೆ ರಾಜಕೀಯ ಮೇಲಾಟದಲ್ಲಿ ಮತ್ತೆ ಮೀನುಗಾರರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಸಾಗಿದಲ್ಲಿ ದೊಡ್ಡ ದುರಂತ ನೆಡೆದು ಹೋಗುವ ಎಚ್ಚರಿಕೆಯನ್ನು ಮೀನುಗಾರರು ನೀಡಿದ್ದಾರೆ.