Tag: Honnavar Village

  • ಗ್ರಾ.ಪಂ. ನಿರ್ಲಕ್ಷ್ಯ – ಪಕ್ಕದ ಗ್ರಾಮದಿಂದ ನೀರು ತರುತ್ತಿದ್ದಾರೆ ಮಂಡ್ಯ ಗ್ರಾಮಸ್ಥರು

    ಗ್ರಾ.ಪಂ. ನಿರ್ಲಕ್ಷ್ಯ – ಪಕ್ಕದ ಗ್ರಾಮದಿಂದ ನೀರು ತರುತ್ತಿದ್ದಾರೆ ಮಂಡ್ಯ ಗ್ರಾಮಸ್ಥರು

    ಮಂಡ್ಯ: ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಣವಾಗುತ್ತಿದ್ದು, ಕುಡಿಯುವ ನೀರಿಗೆ ಹಾಹಾಕಾರ ಪಡುವಂತಹ ಸ್ಥಿತಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹೊನ್ನಾವರ ಗ್ರಾಮದಲ್ಲಿ ನಿರ್ಮಾಣವಾಗಿದೆ.

    ಹೊನ್ನಾವರ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ನೀರಿನ ಜೊತೆ ಚರಂಡಿ ನೀರು ಮಿಶ್ರಣವಾಗುತ್ತಾ ಬರುತ್ತಿದೆ. ನಲ್ಲಿಯನ್ನು ಆನ್ ಮಾಡಿದ್ರೆ ಸಾಕು ಗಬ್ಬುನಾರುವ ವಾಸನೆ ಬರುತ್ತಿದೆ. ಇದರಿಂದ ಜನರು ಹೈರಾಣಾಗಿದ್ದಾರೆ. ಇದನ್ನೂ ಓದಿ: ಅನ್ಯಧರ್ಮದ ಯುವಕನ ಜೊತೆ ಕಾಣಿಸಿಕೊಂಡಿದ್ದಕ್ಕೆ ಯುವತಿಗೆ ಥಳಿತ

    ಈ ಬಗ್ಗೆ ಗ್ರಾಮ ಪಂಚಾಯತಿಯ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಎಷ್ಟು ಹೇಳಿದರೂ ಸಹ ಅವರು ತಲೆಯನ್ನು ಕೆಡಿಸಿಕೊಂಡಿಲ್ಲ. ಸದ್ಯ ಕುಡಿಯಲು ನೀರಿಲ್ಲದ ಕಾರಣ ಈ ಊರಿನ ಜನ ಪಕ್ಕದ ಊರಿಗೆ ಹೋಗಿ ಕುಡಿಯುವ ನೀರು ತರುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನವರಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.