ದಾವಣಗೆರೆ: ಹೊನ್ನಾಳಿಯಲ್ಲಿ (Honnalli) ರಾತ್ರಿ ಭಾರೀ ಮಳೆಯಾಗಿದ್ದು (Rain) ಪಟ್ಟಣದಲ್ಲಿರುವ ತಾಲೂಕು ಆಸ್ಪತ್ರೆಗೆ (Taluk Hospital) ನೀರು ನುಗ್ಗಿದೆ. ಆಸ್ಪತ್ರೆಯ ಒಳಗೆ ಮಳೆ ನೀರು ನುಗ್ಗಿದ್ದರಿಂದ ರೋಗಿಗಳು ಪರದಾಡಿದ್ದಾರೆ.
ಜನರಲ್ ವಾರ್ಡ್, ಐಸಿಯು ವಾರ್ಡ್‌ಗಳಿಗೂ ನೀರು ನುಗ್ಗಿದ್ದು ಇಡೀ ಆಸ್ಪತ್ರೆ ಸಂಪೂರ್ಣ ಜಲಾವೃತವಾಗಿದೆ. ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿ, ಔಷಧ ವಿತರಣಾ ಕೊಠಡಿ, ಹೆರಿಗೆ ವಾರ್ಡ್‌ಗೆ ನೀರು ನುಗ್ಗಿದ್ದು ವಾರ್ಡ್‌ನಲ್ಲಿದ್ದ ಬಾಣಂತಿಯರು ಹಾಗೂ ಐಸಿಯು ಘಟಕದಲ್ಲಿನ ರೋಗಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ.
ಹೊನ್ನಾಳಿ ಪಟ್ಟಣದ ಹಲವು ರಸ್ತೆಗಳು ಜಲಾವೃತಗೊಂಡು ಬಡಾವಣೆಯ ಬೀದಿಗಳಲ್ಲೂ ಮೊಣಕಾಲುದ್ದ ನೀರು ನಿಂತಿದೆ . ಖಾಸಗಿ ಬಸ್ ನಿಲ್ದಾಣದಲ್ಲೂ ಎರಡು ಅಡಿ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ನಿಂತ ನೀರಿನಲ್ಲೇ ಬೈಕ್ ಸವಾರರು ಹಾಗೂ ಪ್ರಯಾಣಿಕರು ಸಂಚಾರ ಮಾಡಿದ್ದಾರೆ.
ಕಳೆದ ನವೆಂಬರ್ ತಿಂಗಳಲ್ಲಿ ರೇಣುಕಾಚಾರ್ಯರ ಸಹೋದರನ ಮಗ ಚಂದ್ರು ಅಲಿಯಾಸ್ ಚಂದ್ರಶೇಖರ್ (Chandrashekhar) ನಾಪತ್ತೆಯಾದ್ದರು. ಅದಾದ ಕೆಲ ದಿನಗಳಲ್ಲೇ ಚಂದ್ರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿತು. ಆಗ ರೇಣುಕಾಚಾರ್ಯ ಇದೊಂದು ಕೊಲೆ, ಉದ್ದೇಶ ಪೂರಕ ಘಟನೆಯಂತ ಹೆಚ್ಚಿನ ತನಿಖೆಗೆ ಕೇಳಿ ಪ್ರಕರಣ ಸಿಐಡಿಗೆ ನೀಡಲಾಗಿತ್ತು. ಬಳಿಕ ಸುದೀರ್ಘ ತನಿಖೆ ನಡೆಸಿದ ಸಿಐಡಿ ಪ್ರಕರಣದ ಅಂತಿಮ ಹಂತದ ವರದಿಯನ್ನು ಸಲ್ಲಿಕೆ ಮಾಡಿದೆ.
ದಾವಣಗೆರೆ/ಬೆಂಗಳೂರು: ಮಾಜಿ ಮಂತ್ರಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ(Renukacharya) ಸಹೋದರ ಎಂ.ಪಿ.ರಮೇಶ್ ಪುತ್ರ ಚಂದ್ರಶೇಖರ್(Chandrashekar) ನಾಪತ್ತೆ ಪ್ರಕರಣ ವಿಷಾದದಲ್ಲಿ ಅಂತ್ಯವಾಗಿದೆ. ಐದು ದಿನದ ಹಿಂದೆ ನಾಪತ್ತೆಯಾಗಿದ್ದ ಚಂದ್ರಶೇಖರ್ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗುರುವಾರ ಮಧ್ಯಾಹ್ನದವರೆಗೂ ಚಂದ್ರು ಅವರನ್ನು ಅಪಹರಣ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಹೊನ್ನಾಳಿ ಮತ್ತು ನ್ಯಾಮತಿ ಮಾರ್ಗಮಧ್ಯೆ ಬರುವ ಸೊರಟೂರಿನ ತುಂಗಭದ್ರಾ(Tungabhadra Canal) ನದಿಯ ಕಾಲುವೆಯಲ್ಲಿ ಕಾರೊಂದು ಇದೆ ಎಂಬ ಸುದ್ದಿ ಇಡೀ ಪ್ರಕರಣಕ್ಕೆ ಟ್ವಿಸ್ಟ್ ನೀಡಿತು.
ಕಾಲುವೆ ಮೇಲ್ಭಾಗದಲ್ಲಿ ಕಾರೊಂದರ ಬಿಡಿಭಾಗಳು ಪತ್ತೆ ಆಗಿದ್ದವು. ನುರಿತ ಈಜುಪಟುಗಳು ಮತ್ತು ಅಗ್ನಿಶಾಮಕ ಪಡೆ ಸಿಬ್ಬಂದಿ ಕಾರ್ಯಾರಚಣೆ ನಡೆಸಿ, ಕಾರನ್ನು ಮೇಲಕ್ಕೆ ಎತ್ತಿದರು. ಕಾರಿನಲ್ಲಿ ಚಂದ್ರಶೇಖರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಶವ ಅಂತ ಹೇಳ್ಬೇಡಿ ಚಂದ್ರು ಅಂತ ಕರೆಯಿರಿ- ಗೋಳಾಡಿದ ರೇಣುಕಾಚಾರ್ಯ
ಶಾಸಕ ರೇಣುಕಾಚಾರ್ಯ ಸೇರಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಚಂದ್ರು ನಿನ್ನ ಸಾವಿಗೆ ನಾನೇ ಕಾರಣ. ಚಂದ್ರು ನನ್ನನ್ನು ಕರ್ಕೋಳೋ ಎಂದು ರೇಣುಕಾಚಾರ್ಯ ಗೋಳಾಡಿದ್ದಾರೆ.
ಇದು ಕೊಲೆಯೋ? ಆತ್ಮಹತ್ಯೆಯೋ? ಅಪಘಾತದಿಂದ ಉಂಟಾದ ಸಾವೋ? ಎಂಬುದು ಖಚಿತವಾಗಿಲ್ಲ. ಚಂದ್ರು ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದು ನಿಂತಿದೆ. ಇದೀಗ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಚಂದ್ರಶೇಖರ್ ಸಾವಿನ ನೈಜ ಕಾರಣ ತಿಳಿದುಬರಲಿದೆ.
ಮತ್ತೊಂದು ಕಡೆ ಪೊಲೀಸರ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿದ್ದಾರೆ. ಇದು ಸಹಜ ಸಾವಲ್ಲ. ಕೊಲೆ ನಡೆದಿದೆ ಈ ಬಗ್ಗೆ ತನಿಖೆ ಆಗಬೇಕು ಎಂದು ಶಾಸಕ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ. ರೇಣುಕಾಚಾರ್ಯ ಜೊತೆ ಚರ್ಚಿಸಿ ತನಿಖೆ ನಿರ್ಧಾರ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ. ಶುಕ್ರವಾರ ಚಂದ್ರಶೇಖರ್ ಅಂತ್ಯಕ್ರಿಯೆ ಹೊನ್ನಾಳಿಯಲ್ಲಿ ನಡೆಯಲಿದೆ.
ಚಂದ್ರು ಸಾವಿನ ಸುತ್ತ ಅನುಮಾನದ ಹುತ್ತ ಅನುಮಾನ 1 – ಡ್ರೈವರ್ ಸೀಟ್ ಬೆಲ್ಟ್ ಲಾಕ್ ಆಗಿದ್ರೂ ಹಿಂಬದಿ ಸೀಟ್‍ನಲ್ಲಿ ಮೃತದೇಹ ಸಿಕ್ಕಿದೆ. ಅನುಮಾನ 2 – ಕ್ರೇಟಾ ಕಾರಿನ ಮುಂಭಾಗದ ಗಾಜು ದೊಡ್ಡದಾಗಿ ಒಡೆದಿರುವುದು. ಯಾರೋ ಕಲ್ಲು ಎತ್ತಿ ಹಾಕಿ ಒಡೆದಂತೆ ಕಾಣುತ್ತಿದೆ. ಅನುಮಾನ 3 – ಕಾರು ಹಿಂಬದಿ ನಜ್ಜು ಗುಜ್ಜಾಗಿರುವುದು. ಅನುಮಾನ 4 – ನಾಲೆಯ ತಡೆಗೋಡೆಗೆ ಹೆಚ್ಚು ಹಾನಿ ಆಗದಿರುವುದು. ಅನುಮಾನ 5 – ಮೃತ ಚಂದ್ರು ಮೊಬೈಲ್ ಟವರ್ ಲೊಕೇಶನ್ ಬೇರೆ ಕಡೆ ಕೊನೆಯಾಗಿರುವುದು.
ಏನಿದು ಪ್ರಕರಣ?
ಅ.30ರ ಭಾನುವಾರ ಸಂಜೆ ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು ರಾತ್ರಿ ಊರಿಗೆ ಮರಳಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ದೆಹಲಿಯ ಸ್ನೇಹಿತರ ಜೊತೆ ಕೊನೆಯದಾಗಿ ಮಾತಾಡಿದ್ದಾನೆ. ರಾತ್ರಿ 11:30 ಕ್ಕೆ ಹೊನ್ನಾಳಿ ಪಟ್ಟಣದಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಲ್ಲಿಂದ ಸಿಗ್ನಲ್ ಪತ್ತೆಯಾಗಿಲ್ಲ. ಶಿವಮೊಗ್ಗದಿಂದ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಗೆ ಬಂದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಲಭ್ಯವಾಗಿದೆ.
Live Tv
[brid partner=56869869 player=32851 video=960834 autoplay=true]
ದಾವಣಗೆರೆ: ಹೊನ್ನಾಳಿ(Honnalli) ಶಾಸಕ ಎಂಪಿ ರೇಣುಕಾಚಾರ್ಯ(MP Renukacharya) ಸಹೋದರನ ಪುತ್ರನ ಕಾರು ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ(Tungabhadra Canal) 5 ದಿನಗಳ ಬಳಿಕ ಪತ್ತೆಯಾಗಿದೆ.
ಚಂದ್ರಶೇಖರ್ ಅವರ ಕ್ರೇಟಾ ಕಾರು ಸೊರಟೂರು ಬಳಿ ಇರುವ ತುಂಗಾಭದ್ರ ಕಾಲುವೆಯಲ್ಲಿ ಸಿಕ್ಕಿದೆ. ಹೊನ್ನಾಳಿ ಹಾಗೂ ನ್ಯಾಮತಿ ಮಾರ್ಗ ಮಧ್ಯೆ ಇರುವ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ಮೇಲಕ್ಕೆ ಎತ್ತಲಾಗಿದೆ. ಕಾರಿನಲ್ಲೇ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾರು ಪತ್ತೆಯಾದ ವಿಚಾರ ತಿಳಿದು ರೇಣುಕಾಚಾರ್ಯ ಹಾಗೂ ಕುಟುಂಬಸ್ಥರು ಸ್ಥಳಕ್ಕೆ ಬಂದಿದ್ದಾರೆ. ಇದನ್ನೂ ಓದಿ: ಕೆಂಪುಕೋಟೆಯ ಮೇಲೆ ದಾಳಿ – ಲಷ್ಕರ್ ಉಗ್ರ ಅಶ್ಫಾಕ್ ಆರಿಫ್ ಗಲ್ಲು ಖಾಯಂ
ಸ್ಥಳೀಯ ನಿವಾಸಿಗಳು ಕಾಲುವೆಯಲ್ಲಿ ಕಾರು ಬಿದ್ದಿದೆ ಎಂಬ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧಾರದ ಮೇಲೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕ್ರೇನ್ ಮೂಲಕ ಕಾರನ್ನು ಮೇಲಕ್ಕೆ ಎತ್ತಿದ್ದಾರೆ.
ಕಾರಿನ ಏರ್ ಬ್ಯಾಗ್ ತೆರೆದಿದ್ದು, ಹಿಂಭಾಗದಲ್ಲಿ ಶವ ಪತ್ತೆಯಾಗಿದೆ. ಮುಂಭಾಗದ ಗಾಜು ಒಡೆದಿದ್ದರೆ ಹಿಂಭಾಗದಲ್ಲಿ ಕಾರು ನಜ್ಜುಗುಜ್ಜಾಗಿದೆ. ಹೀಗಾಗಿ ಇದು ಅಪಘಾತವೇ ಅಥವಾ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಬಿದ್ದಿದ್ಯಾ ಈ ನಿಟ್ಟಿನಲ್ಲಿ ತನಿಖೆ ನಡೆಯಬೇಕಿದೆ. ಇದನ್ನೂ ಓದಿ: ನನ್ನ ಮಗನನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುತ್ತೇವೆ: ರೇಣುಕಾಚಾರ್ಯ
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೇಣುಕಾಚಾರ್ಯ, ಕೆಲ ದಿನಗಳಿಂದ ನನ್ನ ತಮ್ಮನ ಮಗ ಚಂದ್ರಶೇಖರ್‌ನನ್ನು ಹಿಂಬಾಲಿಸುತ್ತಿದ್ದರು. ಅವರೇ ಕಿಡ್ನ್ಯಾಪ್ ಮಾಡಿದ್ದಾರೆ. ಆದರೆ ಯಾವ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಅವರು ಉದ್ದೇಶ ಪೂರ್ವಕವಾಗಿಯೇ ಈ ರೀತಿ ಕೆಲಸ ಮಾಡಿದ್ದಾರೆ ಎಂದು ಸ್ಫೋಟಕ ಮಾಹಿತಿ ನೀಡಿದ್ದರು.
Live Tv
[brid partner=56869869 player=32851 video=960834 autoplay=true]
ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಪ್ರಜ್ವಲ್ ಅವರನ್ನು ದಾಖಲಿಸಿದ್ದು, ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿ ರೇಣುಕಾಚಾರ್ಯ ಆಪ್ತ ಸಹಾಯಕನ ಆರೋಗ್ಯವನ್ನು ವಿಚಾರಿಸಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
Live Tv
[brid partner=56869869 player=32851 video=960834 autoplay=true]
ದಾವಣಗೆರೆ: ಕಾನೂನು ಸುವ್ಯವಸ್ಥೆ ಸರಿಪಡಿಸಲು ಮುಂದಾಗಿರುವ ನೂತನ ಎಸ್‍ಪಿ ರಿಷ್ಯಂತ್‍ಗೆ ಪ್ರಚಾರ ಪ್ರಿಯ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವಾಜ್ ಹಾಕಿದ್ದಾರೆ.
ಹೊನ್ನಾಳಿಯ ಅಕ್ರಮ ಮರಳು ಅಡ್ಡೆಗಳ ಮೇಲೆ ನಿನ್ನೆ ನಡೆದ ಪೊಲೀಸ್ ರೇಡ್‍ಗೆ ಸಿಟ್ಟಾಗಿರುವ ರೇಣುಕಾಚಾರ್ಯ, ಸಿಪಿಐ ದೇವರಾಜ್‍ಗೆ ಕರೆ ಮಾಡಿ ಎಸ್‍ಪಿ ರಿಷ್ಯಂತ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಎಸ್‍ಪಿ ದೊಡ್ಡ ಹೀರೋನೇನ್ರೀ.. ಬಂದ ತಕ್ಷಣ ರೇಡ್ ಮಾಡಿಸಿದ್ದಾರೆ.. ಇಲ್ಲಿ ಸ್ಟಂಟ್ ಮಾಡೋಕೆ ಬಂದ್ರೆ ನಡೆಯಲ್ಲ.. ಮರಳುಗಾರಿಕೆ ಮಾಡೋರೇನು ರೇಪ್ ಮಾಡಿದ್ದಾರಾ? ಕೊಲೆ ಮಾಡಿದ್ದಾರಾ..? ಅವ್ರ ತಂಟೆಗೆ ಹೋದ್ರೆ ನಾನು ಸುಮ್ನೆ ಇರಲ್ಲ. ತಾಕತ್ ಇದ್ರೆ ಸೀಜ್ ಮಾಡಿರೋ ಮರಳನ್ನು ತುಂಬಿ ನೋಡೋಣ ಎಂದೆಲ್ಲಾ ನಾಲಗೆ ಹರಿಬಿಟ್ಟಿದ್ದಾರೆ.
ಎಸ್‍ಪಿ ರಿಷ್ಯಂತ್ ಸೂಚನೆ ಮೇರೆಗೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹರಳಹಳ್ಳಿ, ಹಿರೇಮಳಲಿಯ ಅಕ್ರಮ ಮರಳು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ದಾಳಿಯ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಶಾಸಕ ರೇಣುಕಾಚಾರ್ಯ, ಸಿಪಿಐ ದೇವರಾಜ್ ಗೆ ಕರೆ ಮಾಡಿ ಎಸ್‍ಪಿಗೆ ಅವಾಜ್ ಹಾಕಿದ್ದಾರೆ. ಇನ್ನು ಈ ವೀಡಿಯೋವನ್ನು ರೇಣುಕಾಚಾರ್ಯ ಅವರೇ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿಕೊಂಡಿದ್ದಾರೆ.
ಉಡುಪಿ: ಶ್ರೀಕೃಷ್ಣ ಮಠದ ಆನೆ ಸುಭದ್ರೆಯನ್ನು ಹೊನ್ನಾಳಿ ಮಠಕ್ಕೆ ಶಿಫ್ಟ್ ಮಾಡಲಾಗಿದೆ. ಕಳೆದ ಎರಡು ದಶಕಗಳಿಂದ ಉಡುಪಿ ಕೃಷ್ಣ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದ ಆನೆ ಸುಭದ್ರೆಯನ್ನು ಇದೀಗ ಸ್ಥಳಾಂತರ ಮಾಡಲಾಗಿದೆ.
ಹೊನ್ನಾಳಿಯ ಮಠವೊಂದಕ್ಕೆ ಸೋಮವಾರ ಮುಂಜಾನೆ 4 ಗಂಟೆಯ ವೇಳೆಗೆ ಕೊಂಡೊಯ್ಯಲಾಗಿದೆ. ಮಠದ ಹೊರವಲಯದಲ್ಲಿರುವ ಕನಕ ಶಾಪಿಂಗ್ ಮಾಲ್ ನ ನಿರ್ಮಾಣ ಹಂತದ ಕಟ್ಟಡದ ಮೂಲಕ ಆನೆಯನ್ನು ಲಾರಿಗೆ ಹತ್ತಿಸುವ ಪ್ರಯತ್ನ ನಡೆಯಿತು. ನಾಲ್ವರು ಮಾವುತರ ಪ್ರಯತ್ನದ ಹೊರತಾಗಿಯೂ ಆನೆ ಲಾರಿ ಹತ್ತಲು ಒಪ್ಪಲೇ ಇಲ್ಲ. ಲಾರಿಯ ಚಕ್ರಗಳು ಹೂತುಹೋಗಿ ಸಮಸ್ಯೆ ಉಂಟಾಯ್ತು. ಕೊನೆಗೂ ಹರಸಾಹಸಪಟ್ಟು, ಬೇರೆ ಲಾರಿಗೆ ಕಟ್ಟಿ ಎಳೆಯಲಾಯ್ತು. ಬೆಳಗಿನ ಜಾವ ನಾಲ್ಕು ಗಂಟೆಗೆ ಲಾರಿ ಹತ್ತಿಸಿ ಆನೆಯನ್ನು ರವಾನಿಸಲಾಗಿದ್ದು, ಆನೆ ಸಾಗಾಟದ ವೇಳೆ ಸೂಕ್ತ ವೈದ್ಯರಾಗಲೀ, ಅರಣ್ಯ ಇಲಾಖೆಯವರಾಗಲೀ ಸ್ಥಳದಲ್ಲಿ ಇರಲಿಲ್ಲ.
ಆನೆಯನ್ನು ಮಠಕ್ಕೆ ದಾನ ನೀಡಿದ ಮುಂಬೈನ ಉದ್ಯಮಿ ಕುಟುಂಬಕ್ಕೆ ಈ ಆನೆಯನ್ನು ಮಠದಿಂದ ಸಾಗಿಸುವುದಕ್ಕೆ ಮನಸ್ಸಿಲ್ಲ. ರಾತೋರಾತ್ರಿ ಗೌಪ್ಯವಾಗಿ ಆನೆಯನ್ನು ಹೊನ್ನಾಳಿಗೆ ಸಾಗಿಸಿರುವುದು ಅನುಮಾನಕ್ಕೆ ಎಡೆಮಾಡುತ್ತಿದೆ. ಆನೆಯ ಅನಾರೋಗ್ಯದ ಕಾರಣಕ್ಕೆ ಸ್ಥಳಾಂತರ ಮಾಡುವುದು ಅನಿವಾರ್ಯ. ಹೊನ್ನಾಳಿ ಮಠದಲ್ಲಿರುವ ಗಂಡಾನೆಯ ಮೂಲಕ ಸುಭದ್ರೆಯ ಸಂತಾನೋತ್ಪತ್ತಿಗೆ ಅವಕಾಶ ಮಾಡಲಾಗುತ್ತಿದೆ ಎಂದು ಮಠ ಮಾಹಿತಿ ನೀಡಿದೆ.
ಮಾವುತ ಮಹಮ್ಮದ್ ನ ಪ್ರಕಾರ ಆನೆ ಆರೋಗ್ಯವಾಗಿದೆ ಮತ್ತು ಬೆದೆಯ ಕಾಲ ಇದಲ್ಲ. ಮದ ಬಂದ ಗಂಡಾನೆಯ ಮದ ಇಳಿಸುವ ಸಂದರ್ಭ ಕ್ರಾಸಿಂಗ್ ಮಾಡಿಸಬೇಕು ಎಂದು ಹೇಳಿದ್ದಾರೆ. ಆನೆಯನ್ನು ಪರ್ಮನೆಂಟಾಗಿ ಹೊನ್ನಾಳಿಯಲ್ಲೇ ಇರಿಸಿಕೊಳ್ಳಲಾಗುತ್ತದೆ ಎಂಬ ಮಾಹಿತಿಯಿದೆ. ಅನಾರೋಗ್ಯದಿಂದ ಇರುವ ಆನೆಯನ್ನು ಮಠದಲ್ಲಿ ಉಳಿಸಿಕೊಂಡರೆ ಕಾನೂನು ಸಂಕಟ ಎದುರಿಸಬೇಕಾಗಿದಿತು ಎಂದು ಕೃಷ್ಣಮಠ ಹೊನ್ನಾಳಿಗೆ ದಾಟಿಸಿದೆ ಎಂದೂ ಹೇಳಲಾಗಿದೆ. ಉಡುಪಿ ಕೃಷ್ಣಮಠದ ಪರ್ಯಾಯ ಪಲಿಮಾರು ಮಠ ಇದಕ್ಕೆ ಸ್ಪಷ್ಟನೆ ಕೊಡಬೇಕಿದೆ.
ದಾವಣಗೆರೆ: ಮನೆ ಬಾಗಿಲಿಗೆ ಮದ್ಯ ವಿತರಣೆ ಮಾಡುವುದಾಗಿ ಹೇಳಿಕೆ ನೀಡಿದ್ದ ಅಬಕಾರಿ ಸಚಿವ ಎಚ್.ನಾಗೇಶ್ ವಿರುದ್ಧ ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ನ್ಯಾಮತಿಯ ದೊಡ್ಡಯತ್ತಿನಹಳ್ಳಿಯಲ್ಲಿ ಕೆರೆಗೆ ಭಾಗಿನ ಅರ್ಪಿಸಿ ಮಾತನಾಡಿದ ಶಾಸಕ ರೇಣುಕಾಚಾರ್ಯ, ಅಬಕಾರಿ ಸಚಿವ ನಾಗೇಶ್ ಹೇಳಿಕೆಯಿಂದ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಮನೆ ಮನೆಗೆ ಮದ್ಯ ಹಾಗೂ ಮೊಬೈಲ್ ಬಾರ್ ಗಳ ಬಗ್ಗೆ ಮಾತನಾಡಬಾರದಿತ್ತು. ನಿಮ್ಮ ಈ ರೀತಿಯ ಹೇಳಿಕೆಯಿಂದ ಸಿಎಂ ಬಿಎಸ್‍ವೈ ಅವರ ಸರ್ಕಾರ ಹಾಗೂ ಬಿಜೆಪಿ ಮೇಲೆ ಜನರು ಇಟ್ಟಿರುವ ವಿಶ್ವಾಸ, ನಂಬಿಕೆ ಕಡಿಮೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಚಿವರಾಗಿ ಸರ್ಕಾರದ ಅದಾಯವನ್ನು ಹೆಚ್ಚಿಸಬೇಕು ಎಂದರೆ ಮೊದಲು ಅಕ್ರಮ ಮದ್ಯ ಹಾಗೂ ಕಳ್ಳಭಟ್ಟಿಯನ್ನು ನಿಲ್ಲಿಸಿ. ಆಗ ಸರ್ಕಾರಕ್ಕೆ ತಾನಾಗಿಯೇ ಆದಾಯ ಬರುತ್ತದೆ. ಅದನ್ನು ಬಿಟ್ಟು ಈ ರೀತಿಯ ಹೇಳಿಕೆ ನೀಡಬಾರದು. ನಾನು ಅಬಕಾರಿ ಸಚಿವನಾಗಿದ್ದ ವೇಳೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಅಕ್ರಮ ಮದ್ಯದ ತಯಾರಿಕೆಯನ್ನು ತಡೆದು ಕಳ್ಳಭಟ್ಟಿ ಮುಕ್ತ ರಾಜ್ಯವನ್ನಾಗಿ ಮಾಡಲು ಶ್ರಮವಹಿಸಿದ್ದೆ. ನೀವು ಹೇಳಿರುವಂತೆ ಕಳ್ಳಭಟ್ಟಿ ತಯಾರಿಕೆ ತಡೆಯುವ ಬಗ್ಗೆ ಗಮನಹರಿಸಿ. ಈ ಬಗ್ಗೆ ನಿಮ್ಮನ್ನು ಸಂಪರ್ಕ ಮಾಡಿ ಮಾತನಾಡಲು ಪ್ರಯತ್ನಿಸಿದ್ದೆ. ಆದರೆ ಸಂಪರ್ಕ ಮಾಡಲು ಆಗಲಿಲ್ಲ. ಆದ್ದರಿಂದ ಇಂತಹ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.
ಬಿಎಸ್ ಯಡಿಯೂರಪ್ಪ ಸರ್ಕಾರದ ಮೇಲೆ ಭಾರೀ ನಿರೀಕ್ಷೆ ಇದ್ದು, ಜನರ ಅಭಿವೃದ್ಧಿಗೆ ಬೇಕಾದ ಒಳ್ಳೆಯ ಕಾರ್ಯಕ್ರಮ ಬಗ್ಗೆ ಗಮನ ನೀಡೋಣ. ರೈತರ ಅಭಿವೃದ್ಧಿಗಾಗಿ ಕೆರೆಗಳನ್ನು ತುಂಬಿಸುವ ಯೋಜನೆ ಹಾಗೂ ನೀರಿನ ಸಮಸ್ಯೆಗಳನ್ನು ಬಗೆಹರಿಸುವತ್ತ ಕಾರ್ಯ ನಿರ್ವಹಿಸೋಣ. ನಿಮ್ಮ ಬಗ್ಗೆ ಗೌರವವಿದ್ದು, ಯಾವುದೇ ಅವಿಶ್ವಾಸ ಇಲ್ಲ. ಸರ್ಕಾರಕ್ಕೆ ಒಳ್ಳೆ ಹೆಸರು ತರುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ದಾವಣಗೆರೆ: ತುಂಗಭದ್ರಾ ನದಿಯಲ್ಲಿ ನೀರು ಹೆಚ್ಚಾದ ಕಾರಣ ಹೊನ್ನಾಳಿಯಲ್ಲಿಯೂ ಸಹ ಪ್ರವಾಹ ಭೀತಿ ಉಂಟಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಜನರನ್ನು ಕಾಪಾಡಲು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರೇ ಅಖಾಡಕ್ಕಿಳಿದ್ದಿದ್ದು, ಸಂತ್ರಸ್ತರ ಮೆನೆಗೆ ತೆರಳಿ ಜನರನ್ನು ಹೊರಗೆ ಕರೆ ತರುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಶಾಸಕ ರೇಣುಕಾಚಾರ್ಯ ಅವರೇ ಸ್ವತಃ ನೀರಿಗೆ ಇಳಿದು ಜನರನ್ನು ಸ್ಥಳಾಂತರ ಮಾಡಿಸುತ್ತಿದ್ದಾರೆ. ತುಂಗಾಭದರ್ರಾ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗುತ್ತಿದ್ದು, ಮನೆಗಳಿಗೆ ನೀರು ನುಗ್ಗುತ್ತಿದೆ. ಹೊನ್ನಾಳಿಯ ಬಾಲ್ ರಾಜ್ ಘಾಟ್, ಬಂಬುಬಜಾರ್ ನಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಪ್ರವಾಹ ಇನ್ನು ಹೆಚ್ಚಾಗುವ ಹಿನ್ನಲೆ ಅಧಿಕಾರಿಗಳು ಮನೆಗಳನ್ನು ಖಾಲಿ ಮಾಡಿಸುತ್ತಿದ್ದಾರೆ.
ಅಧಿಕಾರಿಗಳ ಜೊತೆ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹ ಕಾರ್ಯಕರ್ತರೊಂದಿಗೆ ನೀರಿಗೆ ಇಳಿದು ಜನರನ್ನು ಮನೆಯಿಂದ ಹೊರಗೆ ಕರೆ ತರುತ್ತಿದ್ದಾರೆ. ತಕ್ಷಣ ಮನೆ ಖಾಲಿ ಮಾಡಿ ಎಂದು ಸೂಚನೆ ನೀಡುತ್ತಿದ್ದಾರೆ. ರೇಣುಕಾಚಾರ್ಯ ಜೊತೆ ಕಾರ್ಯಕರ್ತರು ಸಹ ಸಾಥ್ ನೀಡಿದ್ದಾರೆ. ಶಿಂಗಟಾಲೂರು ಏತ ನೀರಾವರಿ ಬ್ಯಾರೇಜ್‍ನಿಂದ 1.80 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಟ್ಟಿದ್ದರಿಂದ ತುಂಗಭದ್ರಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ.
ಕುರವತ್ತಿ, ಹರವಿ, ಅಲ್ಲಿಪುರ, ಮಾಗಳ, ಅಂಗೂರು, ಗ್ರಾಮದಲ್ಲಿ ಬೆಳೆ ಹಾನಿ ಸಂಭವಿಸಿದೆ. ಕುರವತ್ತಿ ಗ್ರಾಮದಲ್ಲಿ 5 ಕುಟುಂಬಗಳನ್ನು ಈಗಾಗಿಲೇ ಸ್ಥಳಾಂತರಿಸಲಾಗಿದ್ದು, ಉಳಿದ ಕುಟುಂಬಗಳನ್ನು ಸ್ಥಳಾಂತರಿಸಲಾಗುತ್ತಿದೆ. ಹಡಗಲಿ ತಾಲೂಕಿನಲ್ಲಿ ಒಟ್ಟು 127 ಮನೆಗಳು ನೆಲಸಮವಾಗಿದೆ.
ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಕವಳಿ ತಾಂಡದ ಜನರು ಬೀದಿ ನಾಯಿಗಳ ಹಾವಳಿಗೆ ಭಯಬೀತರಾಗಿದ್ದು, ಮನೆಯ ಬಾಗಿಲುಗಳನ್ನು ಹಾಕಿಕೊಂಡು ಕೂರುವಂತಾಗಿದೆ.
ಇಡೀ ಗ್ರಾಮದಲ್ಲಿ 300ಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು, ಮಕ್ಕಳು ಕೈಯಲ್ಲಿ ತಿಂಡಿ ಹಿಡಿದು ಹೊರ ಬರುವಂತೆ ಇಲ್ಲ. ತಿಂಡಿ ನೋಡಿದರೆ ಮಕ್ಕಳ ಮೇಲೆ ಅಟ್ಯಾಕ್ ಮಾಡಿ ಧರ ಧರನೇ ಎಳೆದುಕೊಂಡು ಹೋಗುತ್ತವೆ. ಅಲ್ಲದೆ ಮನೆಯ ಬಾಗಿಲುಗಳು ತೆರೆದರೆ ಸಾಕು ಸೀದಾ ಒಳಗೆ ನುಗ್ಗಿ ಅಡುಗೆ ಪಾತ್ರೆ, ಮತ್ತಿತರ ಸಾಮಗ್ರಿಗಳನ್ನು ಕಚ್ಚಿಕೊಂಡು ಓಡಿ ಹೋಗುತ್ತವೆ.
ಮಕ್ಕಳು ಶಾಲೆಗೆ ಹೋಗೊದಕ್ಕೂ ಭಯಪಡುತ್ತಿದ್ದು, ನಾಯಿಗಳ ಹಾವಳಿಗೆ ಹೆದರಿ ಮನೆಯಲ್ಲಿ ಕೂರುತ್ತಿದ್ದಾರೆ. ಶಾಲೆಗೆ ಹೋಗಬೇಕು ಎಂದರೆ ಪೋಷಕರು ಹೋಗಿ ಬಿಟ್ಟು ಬರಬೇಕಾದ ಪರಿಸ್ಥಿತಿ. ಈ ಗ್ರಾಮದಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುವ ಜನರೇ ಹೆಚ್ಚಿದ್ದು, ತಾವು ಕೆಲಸಕ್ಕೆ ಹೋದಾಗ ಬೀದಿ ನಾಯಿಗಳು ಏನಾದರು ಅನಾಹುತ ಮಾಡಿಬಿಟ್ಟರೆ ಕಷ್ಟ ಎಂದು ತಮ್ಮ ಮಕ್ಕಳನ್ನು ಕೂಲಿ ಮಾಡುವ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸವೂ ಕೂಡ ಅರ್ಧಕ್ಕೆ ನಿಲ್ಲುತ್ತಿದೆ.
ಗ್ರಾಮದ ಮನೆಯ ಮುಂಭಾಗ ಕುರಿಮರಿಗಳನ್ನು ಕಟ್ಟಿಕೊಳ್ಳುವುದೇ ಕಷ್ಟವಾಗಿದೆ. ಈಗಾಗಲೇ ರಾಕ್ಷಸ ನಾಯಿಗಳು ಹತ್ತಾರು ಕುರಿಮರಿಗಳನ್ನು ಸಾಯಿಸಿವೆ. ಈ ಸಂಬಂಧ ಗ್ರಾಮಪಂಚಾಯಿತಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ನಮ್ಮನ್ನು ಶ್ವಾನಗಳ ಹಾವಳಿಯಿಂದ ಕಾಪಾಡಿ ಎಂದು ಇಲ್ಲಿನ ಗ್ರಾಮಸ್ಥರು ಗೋಳಾಡುತ್ತಿದ್ದಾರೆ.