Tag: honeytrap

  • 75 ವರ್ಷದ ಮಾಜಿ ಸೈನಿಕನಿಗೆ ಹನಿಟ್ರ್ಯಾಪ್ ಮಾಡಿ 25 ಲಕ್ಷ ರೂ.ಗೆ ಬೇಡಿಕೆ ಇಟ್ಟ ನಟಿ

    75 ವರ್ಷದ ಮಾಜಿ ಸೈನಿಕನಿಗೆ ಹನಿಟ್ರ್ಯಾಪ್ ಮಾಡಿ 25 ಲಕ್ಷ ರೂ.ಗೆ ಬೇಡಿಕೆ ಇಟ್ಟ ನಟಿ

    ತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ ಮಾತ್ರವಲ್ಲ, ಸಿನಿಮಾ ರಂಗದಲ್ಲೂ ಹನಿಟ್ರ್ಯಾಪ್ (Honeytrap) ವಿಚಾರ ಭಾರೀ ಸದ್ದು ಮಾಡುತ್ತಿದ್ದೆ. 75 ವರ್ಷದ ಮಾಜಿ ಸೈನಿಕರೊಬ್ಬರಿಗೆ ಕಿರುತೆರೆಯ ನಟಿ ಹನಿಟ್ಯಾಪ್ ಮಾಡಿ ಬರೋಬ್ಬರಿ 25 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಆ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಕೇರಳದ (Kerala) ಕಿರುತೆರೆ ನಟಿ ನಿತ್ಯಾ ಶಶಿ  (Nityashashi) ಅನ್ನುವವರು ನಿವೃತ್ತಿ ಸೈನಿಕನಿಗೆ ಕಾಮದಾಸೆ ತೋರಿಸಿ ಬಲೆ ಬೀಸಿದ್ದಾರೆ. ಈಕೆ ಹೆಣೆದ ಬಲೆಗೆ ನಿವೃತ್ತಿ ಸೈನಿಕ (Ex-Serviceman) ಸಿಲುಕಿಕೊಂಡು ವಿಲವಿಲ ಒದ್ದಾಡಿದ್ದಾರೆ. ಜೊತೆಗೆ 11 ಲಕ್ಷ ರೂಪಾಯಿಯನ್ನೂ ಕಳೆದುಕೊಂಡಿದ್ದಾನೆ. ಮತ್ತೆ ಹಣದ ಬೇಡಿಕೆ ಇಟ್ಟಾಗ ಅನಿವಾರ್ಯವಾಗಿ ಪೊಲೀಸರ ಸಹಾಯ ಕೇಳಿದ್ದಾನೆ. ಕೊನೆಗೂ ಪೊಲೀಸರು ನಟಿ ನಿತ್ಯಾ ಹಾಗೂ ಆಕೆಯ ಸ್ನೇಹಿತ ಬಿನು ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ:ದುಲ್ಕರ್ ಸಲ್ಮಾನ್ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’ ಟೈಟಲ್ ಫಿಕ್ಸ್

    ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಮನೆ ನೋಡುವ ನೆಪದಲ್ಲಿ ನಿತ್ಯಾ (Actress) ಮತ್ತು ಆತನ ಸ್ನೇಹಿತ ಇಬ್ಬರೂ ನಿವೃತ್ತ ಸೈನಿಕನ ಮನೆಗೆ ಬಂದಿದ್ದಾರೆ. ವೃದ್ಧನನ್ನು ಬೆದರಿಸಿ ಬೆತ್ತಲೇ ಮಾಡಿ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲಿಂದ ಮಾಜಿ ಸೈನಿಕನನ್ನು ಬೆದರಿಸಲು ಶುರು ಮಾಡಿದ್ದಾರಂತೆ.

     

    ಕೇರಳದ ತಿರುವನಂತಪುರದ ಪಟ್ಟಂನಲ್ಲಿ ಈ ಘಟನೆ ನಡೆದಿದ್ದು, ಮಾಜಿ ಸೈನಿಕ ಕೇರಳ ವಿಶ್ವವಿದ್ಯಾಲಯದ ಮಾಜಿ ಉದ್ಯೋಗಿ ಕೂಡ ಆಗಿದ್ದಾರೆ. ನಿತ್ಯಾ ಕಿರುತೆರೆಯ ನಟಿಯಾಗಿ ಮತ್ತು ವಕೀಲೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೃದ್ಧನನ್ನು ಮೋಹದ ಬಲೆಗೆ ಬೀಳಿಸಿ 23 ಲಕ್ಷ ಪಂಗನಾಮ – ಕಿಲಾಡಿ ಆಂಟಿ ಅರೆಸ್ಟ್

    ವೃದ್ಧನನ್ನು ಮೋಹದ ಬಲೆಗೆ ಬೀಳಿಸಿ 23 ಲಕ್ಷ ಪಂಗನಾಮ – ಕಿಲಾಡಿ ಆಂಟಿ ಅರೆಸ್ಟ್

    ತಿರುವನಂತಪುರಂ: 68 ವರ್ಷದ ವೃದ್ಧನನ್ನು ತನ್ನ ಮೋಹದ ಬಲೆಗೆ ಬೀಳಿಸಿ, 23 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಕೇರಳದ (Kerala) ಕಲ್ಪಕಂಚೇರಿಯಲ್ಲಿ ನಡೆದಿದೆ.

    ಘಟನೆಗೆ ಸಂಬಂಧಿಸಿದಂತೆ ಹನಿಟ್ರ್ಯಾಪ್‌ (HoneyTrap) ಪ್ರಕರಣದ ಅಡಿಯಲ್ಲಿ ವ್ಲಾಗರ್ ರಶೀದಾ (28) ಮತ್ತು ಆಕೆಯ ಪತಿ ನಿಶಾದ್ ಇಬ್ಬರನ್ನೂ ಪೊಲೀಸರು (Police) ಬಂಧಿಸಿದ್ದಾರೆ. ಇಬ್ಬರೂ ಕೂಡ ತ್ರಿಸ್ಸೂರ್‌ನ ಕುನ್ನಮ್‌ಕುಲಮ್ ಮೂಲದವರು. ಇದನ್ನೂ ಓದಿ: ಅಶ್ಲೀಲ ವಿಡಿಯೋ ಹಂಚಿಕೆ: ಬಾಲಿವುಡ್ ನಟಿಯರ ವಿರುದ್ಧ ದೋಷಾರೋಪ ಪಟ್ಟಿ

    ಕಣ್ಣುಕುಕ್ಕುವಂತ ಬಟ್ಟೆ ತೊಟ್ಟು, ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೀಡಿಯೋ ಹರಿಯಬಿಡುತ್ತಿದ್ದ ರಶೀದಾ, ಹನಿಟ್ರ್ಯಾಪ್‌ (HoneyTrap) ಮಾಡಿ 68ರ ವೃದ್ಧನನ್ನು ತನ್ನ ಮೋಹದ ಬಲೆಗೆ ಬೀಳಿಸಿಕೊಂಡಿದ್ದಾಳೆ. ಬಳಿಕ ಆತನಿಂದ 23 ಲಕ್ಷ ಹಣ ಒಡೆದು ವಂಚಿಸಿದ್ದಾರೆ ಎಂದು ಕೇಸ್ ದಾಖಲಾಗಿರುವುದಾಗಿ ಪೊಲೀಸರು (Police) ತಿಳಿಸಿದ್ದಾರೆ. ಇದನ್ನೂ ಓದಿ: ವಿಚ್ಛೇದಿತ ಉದ್ಯಮಿಗಿಂತ ಮುಂಚೆ ಮಾನುಷಿ ಚಿಲ್ಲರ್ ಮತ್ತೊಬ್ಬ ಹುಡುಗನ ಜೊತೆ ಡೇಟಿಂಗ್

    ಕಿಲಾಡಿ ಆಂಟಿಯ ವೀಡಿಯೋ ಸೀಕ್ರೆಟ್ ಏನು?
    ಕಿಲಾಡಿ ಆಂಟಿ ರಶೀದಾ ಕಲ್ಪಕಂಚೇರಿಯಲ್ಲಿ ಪ್ರಭಾವಿಗಳನ್ನ ತನ್ನ ಮೋಹದ ಬಲೆಗೆ ಬೀಳಿಸಿಕೊಂಡಿದ್ದಳು. ಪ್ರೀತಿಯ ನೆಪ ಮಾಡಿ ಒಮ್ಮೊಮ್ಮೆ ಮನೆಗೆ ಕರೆಸಿ ಹತ್ತಿರವಾಗುತ್ತಿದ್ದಳು. ಆಕೆಯ ವಿಡಿಯೋ ನೋಡಿದವರು ಸುಲಭವಾಗಿ ಆಕೆಯ ಬಲೆಗೆ ಬೀಳುತ್ತಿದ್ದರು. ಹಾಗಾಗಿ ಹನಿಟ್ರ್ಯಾಪ್‌ ಮಾಡಲು ಆಕೆಯ ಪತಿ ನಿಶಾದ್ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಳ್ಳುತ್ತಿದ್ದ. ಈ ನಡುವೆ 68 ವರ್ಷದ ವೃದ್ಧನನ್ನು ಪರಿಚಯಿಸಿಕೊಂಡಿದ್ದ ರಶೀದಾ, ಆಗಾಗ ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದಳು. ಒಂದು ದಿನ ತನ್ನ ಪತಿಗೆ ಬಿಸಿನೆಸ್ ಮಾಡಲು ಹಣ ಬೇಕು ಎಂದು ಕೇಳಿದ್ದಳು. ರಶೀದಾ ಮಾತು ನಂಬಿ ಸಂತ್ರಸ್ತ ಆಕೆಗೆ ಹಣ ನೀಡಿದ್ದ. ಕೆಲವು ದಿನಗಳ ಬಳಿಕ ಹಣ ವಾಪಸ್ ಕೇಳಿದಾಗ ತಮ್ಮಿಬ್ಬರ ನಡುವಿನ ಸಂಬಂಧವನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿದ್ದಳು.

    ಈ ವಿಚಾರ ಸಂತ್ರಸ್ತನ ಮನೆಯವನಿಗೆ ತಿಳಿದು ತಕ್ಷಣ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ರಶೀದಾ ಮತ್ತು ಆಕೆಯ ಗಂಡನನ್ನು ಕಲ್ಪಕಂಚೇರಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 79ರ ವೃದ್ಧನನ್ನು ನಗ್ನಗೊಳಿಸಿ ಫೋಟೋ ಕ್ಲಿಕ್ಕಿಸಿಕೊಂಡ್ಲು – ಹನಿಟ್ರ್ಯಾಪ್‍ಗೆ ಯತ್ನಿಸಿದ ಖತರ್ನಾಕ್ ಆಂಟಿ ಅರೆಸ್ಟ್

    79ರ ವೃದ್ಧನನ್ನು ನಗ್ನಗೊಳಿಸಿ ಫೋಟೋ ಕ್ಲಿಕ್ಕಿಸಿಕೊಂಡ್ಲು – ಹನಿಟ್ರ್ಯಾಪ್‍ಗೆ ಯತ್ನಿಸಿದ ಖತರ್ನಾಕ್ ಆಂಟಿ ಅರೆಸ್ಟ್

    ದಾವಣಗೆರೆ: ಕಷ್ಟ ಎಂದು ಹೇಳಿಕೊಂಡು ಬಂದ ಮಹಿಳೆಯೊಬ್ಬಳಿಗೆ ಸಾಲ ನೀಡಿದ್ದ ವೃದ್ದ, ಮತ್ತೆ ಮರಳಿ ಸಾಲ ವಾಪಸ್ ಕೇಳಿದಾಗ ಆತನಿಗೆ ಮತ್ತು ಬರಿಸಿ ನಗ್ನ ಮಾಡಿ ತನ್ನ ಜೊತೆ ಮಲಗಿದ ರೀತಿ ಫೋಟೋ ತೆಗೆಸಿಕೊಂಡು ಹನಿಟ್ರ್ಯಾಪ್‍ಗೆ (Honeytrap) ಯತ್ನಿಸಿ, 15 ಲಕ್ಷಕ್ಕೆ ಬೇಡಿಕೆ ಇಟ್ಟ ಆಂಟಿಯನ್ನು ಪೊಲೀಸರ ಬಂಧಿಸಿದ್ದಾರೆ.

    ದಾವಣಗೆರೆ (Davangere) ನಗರದ ಶಿವಕುಮಾರ ಸ್ವಾಮಿ ಬಡಾವಣೆ ನಿವಾಸಿ 79 ವರ್ಷದ ಚಿದಾನಂದಪ್ಪ ಹನಿಟ್ರ್ಯಾಪ್‍ಗೆ ಒಳಗಾಗಿ ನರಳಾಡಿದ ವೃದ್ಧ ಎಂದು ತಿಳಿದು ಬಂದಿದೆ. ಶಿವಕುಮಾರ ಸ್ವಾಮೀ ಬಡಾವಣೆಗೆ ಹೊಂದಿಕೊಂಡ ಸರಸ್ವತಿ ನಗರದ ನಿವಾಸಿ 32 ವರ್ಷದ ಯಶೋಧ ಜೊತೆಗೆ ವೃದ್ಧ ಚಿದಾನಂದಪ್ಪರ ಪರಿಚಯವಾಗಿದೆ. ಹೀಗೆ ಪರಿಚಯವಾಗಿ ಇಬ್ಬರ ನಡುವೆ ಸ್ನೇಹವಾಗಿದೆ. ನಂತರ ಯಶೋಧ, ಚಿದಾನಂದಪ್ಪ ಅವರನ್ನು ಮನೆಗೆ ಆಹ್ವಾನಿಸಿ ಆಗಾಗ ಟೀ, ಕಾಫಿ ಜ್ಯೂಸ್ ಕೊಡುತ್ತಿದ್ದಳು. ಹೀಗೆ ಯಶೋಧ ಚಿದಾನಂದಪ್ಪ ಅವರ ಬಳಿ ಆಗಾಗ ನೆಪಗಳನ್ನು ಹೇಳಿ ಐದು, ಹತ್ತು ಅಂತ ಬರೋಬ್ಬರಿ 86 ಸಾವಿರ ರೂಪಾಯಿ ಸಾಲ ಪಡೆದಿದ್ದಾಳೆ. ಕೆಲಸದಿಂದ ನಿವೃತ್ತಿರಾಗಿದ್ದ ವೃದ್ಧ ನಂತರ ತಾನು ಮಹಿಳೆಗೆ ನೀಡಿದ್ದ ಹಣ ನೀಡುವಂತೆ ಮರು ಕೇಳಿದ್ದಾನೆ. ಆಗ ಈಗ ಅಂತಾ ಹೇಳಿ ಆ ಮಹಿಳೆ ಹಣ ವಾಪಸ್ ಕೊಟ್ಟಿರಲಿಲ್ಲ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಆರಾಧನೆಗೆ ಅನುಮತಿ ಕೋರಿ ಅರ್ಜಿ – ನ.14ಕ್ಕೆ ವಿಚಾರಣೆ ಮುಂದೂಡಿಕೆ

    POLICE JEEP

    ಹೀಗೆ ಒಂದು ದಿನ ವಾಕಿಂಗ್ ಮುಗಿಸಿ ಹೋಗುತ್ತಿದ್ದಾಗ ಯಶೋಧ ಚಿದಾನಂದಪ್ಪನನ್ನು ಅಕ್ಕರೆಯಿಂದ ಕರೆದಿದ್ದಾಳೆ. ಜ್ಯೂಸ್ ಕೊಟ್ಟಿದ್ದಾಳೆ. ಕುಡಿದ ಕೆಲ ಹೊತ್ತಿನಲ್ಲಿಯೇ ವೃದ್ಧ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ. ಎಚ್ಚರವಾದ ಬಳಿಕ ಚಿದಾನಂದಪ್ಪ ಮೈ ಮೇಲೆ ಬಟ್ಟೆ ಇರಲಿಲ್ಲ. ಭಯಗೊಂಡ ಚಿದಾನಂದಪ್ಪ ಬಟ್ಟೆ ಹಾಕಿಕೊಂಡು ಮನೆಗೆ ಬಂದಿದ್ದಾರೆ. ಈ ಘಟನೆ ನಡೆದು ಎರಡು ದಿನಕ್ಕೆ ಹಣಕ್ಕಾಗಿ ಮತ್ತೆ ಚಿದಾನಂದಪ್ಪ ಫೋನ್ ಮಾಡಿದ್ದಾರೆ. ಆಗ ನೀ ನನ್ನ ಜೊತೆ ಮಲಗಿರುವೆ. ನನ್ನ ಬಳಿ ವೀಡಿಯೋ ಇದೆ. 15 ಲಕ್ಷ ಕೊಡು. ಇಲ್ಲ ನಿನ್ನ ಹೆಂಡತಿ ಮಕ್ಕಳಿಗೆ ತೋರಿಸುವೆ ಎಂದಿದ್ದಾಳೆ. ಹೆದರಿ ಈ ವಿಚಾರ ಪರಿಚಯದವರ ಬಳಿ ಚಿದಾನಂದಪ್ಪ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹಿಂದೂಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ದೊಡ್ಡವನಾಗಲ್ಲ: ಜಾರಕಿಹೊಳಿ ಕಿವಿ ಹಿಂಡಿದ ಯಡಿಯೂರಪ್ಪ

    ಚಿದಾನಂದಪ್ಪ 7 ರಿಂದ 8 ಲಕ್ಷಕ್ಕೆ ಮಾತನಾಡಿ ಡೀಲ್ ಮುಗಿಸಲು ಮುಂದಾಗಿದ್ದಾರೆ. ಆದರೆ ಯಶೋಧ ಮಾತ್ರ 15 ಲಕ್ಷ ಬೇಕೆ, ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇದೇ ವೇಳೆ ಚಿದಾನಂದಪ್ಪರ ವಾಟ್ಸಪ್‍ಗೆ ಒಂದು ನಗ್ನವಾದ ಫೋಟೋ ಅವಳ ಮುಖ ಕಾಣದ ಹಾಗೆ ಮಾಡಿ ಕಳುಹಿಸಿದ್ದಾಳೆ. ಪರಿಸ್ಥಿತಿ ಕೈ ಬಿಡುವ ಲಕ್ಷಣವಿತ್ತು. ಈ ವಿಚಾರ ಚಿದಾನಂದಪ್ಪ ತನ್ನ ಪುತ್ರನಿಗೆ ಹೇಳಿದ್ದಾರೆ. ಆಗ ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಕೆಟಿಜೆನಗರ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ಯಶೋಧಳನ್ನ ಬಂಧಿಸಿದ್ದಾರೆ. ಅಜ್ಜನಿಗೆ ಹನಿಟ್ರ್ಯಾಪ್ ಮಾಡಿ 15 ಲಕ್ಷ ವಸೂಲಿಗೆ ಮುಂದಾದ ಯಶೋಧ ಈಗ ಪೊಲೀಸರ ಅತಿಥಿಯಾಗಿದ್ದಾಳೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ಮತ್ತೊಂದು ಹನಿಟ್ರ್ಯಾಪ್ ಕೇಸ್ – ಪ್ರೀತ್ಸೋ ನೆಪದಲ್ಲಿ ಮಾಯಾಂಗನೆ ಹನಿಟ್ರ್ಯಾಪ್ ಖೆಡ್ಡಕ್ಕೆ ಬಿದ್ದ ಯುವಕ

    ಬೆಂಗಳೂರಿನಲ್ಲಿ ಮತ್ತೊಂದು ಹನಿಟ್ರ್ಯಾಪ್ ಕೇಸ್ – ಪ್ರೀತ್ಸೋ ನೆಪದಲ್ಲಿ ಮಾಯಾಂಗನೆ ಹನಿಟ್ರ್ಯಾಪ್ ಖೆಡ್ಡಕ್ಕೆ ಬಿದ್ದ ಯುವಕ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರೀತಿಸುವ ನೆಪದಲ್ಲಿ ಯುವತಿ ಹೆಣೆದಿದ್ದ ಹನಿಟ್ರ್ಯಾಪ್ (HoneyTrap) ಖೆಡ್ಡಕ್ಕೆ ಯುವಕನೊಬ್ಬ ಬಿದ್ದು, ಸಾವಿರಾರು ರೂಪಾಯಿ ಹಣ ಕಳೆದುಕೊಂಡಿದ್ದಾನೆ.

    Love

    ಹೌದು, ಬೆಂಗಳೂರಿನ ಸುದ್ದಗುಂಟೆಪಾಳ್ಯ (Suddagunte Palya) ನಿವಾಸಿಯಾಗಿರುವ ದಿಲೀಪ್ ಕುಮಾರ್ ಎಂಬ ವ್ಯಕ್ತಿ ಮೊಬೈಲ್‍ಗೆ ಒಂದು ದಿನ ಹಾಯ್ ಎಂಬ ಮೆಸೇಜ್ ಬಂದಿತ್ತು. ಆ ಮೆಸೇಜ್ ನೋಡಿದ ದಿಲೀಪ್ ಕುಮಾರ್, ಡಿಪಿ ನೋಡಿ ಫುಲ್ ಖುಷ್ ಆಗಿದ್ದನು. ಯಾಕೆಂದರೆ ಅಲ್ಲಿ ಸುಂದರವಾದ ಯುವತಿಯ ಡಿಪಿ ಕಾಣಿಸಿತ್ತು. ಆ ಮಸೇಜ್‍ಗಳು ಮುಂದುವರೆದು, ಎಲೆಕ್ಟ್ರಾನಿಕ್ ಸಿಟಿ ಬಳಿಯ ಖಾಸಗಿ ಹೋಟೆಲ್‍ವೊಂದರಲ್ಲಿ ಮೀಟ್ ಮಾಡಲು ಇಬ್ಬರು ನಿರ್ಧರಿಸಿದರು. ಫಸ್ಟ್ ಟೈಂ ಹುಡುಗಿಯನ್ನು ಮೀಟ್ ಮಾಡುವ ಖುಷಿಯಲ್ಲಿ ಯುವಕ ಕೂಡ, ಸ್ನೇಹಿತನ ಕಾರು ತೆಗೆದುಕೊಂಡು ಟಿಪ್ ಟಾಪ್ ಆಗಿ ರೆಡಿಯಾಗಿ ಹೋಟೆಲ್‍ಗೆ ಹೋಗಿದ್ದನು. ರೂಮ್ ಒಳಗೆ ಹೋದ ಯುವಕ ಹುಡುಗಿಯ ಜೊತೆಗೆ ಕೂತು, ಮಾತು ಶುರುಮಾಡಿದನು. ಆದರೆ ಅಷ್ಟರಲ್ಲಿ ಮೂವರು ಯುವಕರ ತಂಡ ಏಕಾಏಕಿ ರೂಮ್ ಒಳಗೆ ನುಗ್ಗಿದ್ದಾರೆ. ಇದನ್ನೂ ಓದಿ: ಟಗರು ಗುದ್ದಿ ಕೊಟ್ಟಿಗೆಯಲ್ಲಿ ಲಾಕ್ ಆದ ಚಿರತೆ – ಕೆಆರ್‌ಎಸ್‌ನ ಬೃಂದಾವನದಲ್ಲಿ ಅಂತ್ಯವಾಗದ ಆತಂಕ

     

    ಹೀಗೆ ರೂಮ್ ಒಳಗೆ ಬಂದ ಮೂವರು, ಇಬ್ಬರನ್ನು ಒಟ್ಟಿಗೆ ಕೂರಿಸಿ, ಒಂದಷ್ಟು ವೀಡಿಯೋಗಳನ್ನು ಮಾಡಿಕೊಂಡರು. ನಂತರ ಪ್ರದೀಪ್ ಕುಮಾರ್ ಮೇಲೆ ಹಲ್ಲೆ ಮಾಡಿ, ಜೇಬಿನಲ್ಲಿದ್ದ 20 ಸಾವಿರ ಹಣ, ಐಫೋನ್, ಕಾರಿನ ಕೀ ಕಿತ್ತುಕೊಂಡು, ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಭಯದಲ್ಲಿದ್ದ ಪ್ರದೀಪ್ ಕುಮಾರ್, ಸ್ನೇಹಿತನಿಂದ ಮತ್ತೆ 25 ಸಾವಿರ ಹಣ ಗೂಗಲ್ ಪೇ ಮಾಡಿಸಿಕೊಂಡು ಆರೋಪಿಗಳ ಕೈಗೆ ಕೊಟ್ಟು ಸೈಲೆಂಟ್ ಆಗಿ ಮನೆ ಸೇರಿಕೊಂಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಆರೋಪಿಗಳು, ಮತ್ತಷ್ಟು ಹಣ ನೀಡದೇ ಇದ್ದರೆ ಅಶ್ಲೀಲ ವೀಡಿಯೋಗಳನ್ನು ಹರಿಬಿಡುವುದಾಗಿ ಬೆದರಿಸುವುದಕ್ಕೆ ಶುರುಮಾಡಿದ್ದಾರೆ. ಬೇರೆ ವಿಧಿ ಇಲ್ಲದೇ, ಹಲ್ಲೆಗೊಳಗಾದ ಪ್ರದೀಪ್ ಸುದ್ದಗುಂಟೆಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇದೀಗ ಪ್ರೀತಿಯ ನಾಟಕವಾಡಿದ್ದ ಯುವತಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

    ನಮ್ಮ ಹುಡುಗಿಯದ್ದೇನು ತಪ್ಪಿಲ್ಲ ಎಂದು ಹೇಳುತ್ತಿದ್ದ ಲವರ್ ಬಾಯ್, ಪ್ರದೀಪ್‍ಗೆ ಇದೀಗ ಯುವತಿಯೇ ತನಗೆ ಖೆಡ್ಡ ತೋಡಿದ್ದು ಅಂತಾ ತಿಳಿದು ಶಾಕ್ ಆಗಿದ್ದಾನೆ. ಅತ್ತ ಕಡೆ ಹನಿಟ್ರ್ಯಾಪ್ ಗ್ಯಾಂಗ್‌ನ ಬಂಧಿಸಿರುವ ಪೊಲೀಸರಿಗೆ ಮತ್ತಷ್ಟು ಹನಿಟ್ರ್ಯಾಪ್‍ಗಳು ಮಾಡಿರುವ ಬಗ್ಗೆ ಸಾಕ್ಷಿಗಳು ಸಿಕ್ಕಿದ್ದು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಚನ್ನಮ್ಮಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಪ್ರತಿಭಟನೆ ಮಾಡ್ತೀವಿ: ಪ್ರಮೋದ್ ಮುತಾಲಿಕ್

    Live Tv
    [brid partner=56869869 player=32851 video=960834 autoplay=true]

  • ಹನಿಟ್ರ‍್ಯಾಪ್‌ಗೆ ಬಲಿಯಾದ್ರಾ ಬಂಡೇ ಮಠದ ಬಸವಲಿಂಗ ಶ್ರೀ?

    ಹನಿಟ್ರ‍್ಯಾಪ್‌ಗೆ ಬಲಿಯಾದ್ರಾ ಬಂಡೇ ಮಠದ ಬಸವಲಿಂಗ ಶ್ರೀ?

    ರಾಮನಗರ: ಮಾಗಡಿ ತಾಲೂಕಿನ ಕಂಚುಗಲ್ ಮಠದ ಬಸವಲಿಂಗ ಶ್ರೀಗಳ (Basavalinga Swamiji) ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಶ್ರೀಗಳ ಮೊಬೈಲ್ ಕಾಲ್ ಹಾಗೂ ಡೆತ್‌ನೋಟ್ (Death Note) ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಉಲ್ಲೇಖ ಆಗಿರುವ ಕೆಲ ಅಂಶಗಳು ಹನಿಟ್ರ‍್ಯಾಪ್ (Honeytrap) ಸುಳಿವು ನೀಡಿದ್ದು, ಇನ್ನು 2-3 ದಿನಗಳಲ್ಲಿ ಶ್ರೀಗಳ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ.

    ರಾಜ್ಯದಲ್ಲಿ ಕೆಲ ಸ್ವಾಮೀಜಿಗಳು ಹನಿಟ್ರ‍್ಯಾಪ್ ಜಾಲಕ್ಕೆ ಒಳಗಾಗಿದ್ದು, ಮುರುಘಾ ಶ್ರೀಗಳ ಪ್ರಕರಣದ ಬಳಿಕ ಈ ಜಾಲ ಇನ್ನಷ್ಟು ವಿಸ್ತಾರಗೊಂಡಿದೆ ಎನ್ನುವುದು ಖಾತ್ರಿಯಾಗಿದೆ. 6-7 ತಿಂಗಳ ಹಿಂದೆ ಮಾಗಡಿಯ ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿ ಮೃತದೇಹ ಸಹ ಕಿಟಕಿಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಬಂಡೇ ಮಠದ ಸ್ವಾಮೀಜಿ ಸಹ ಅದೇ ಮಾದರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಂಚುಗಲ್ ಬಂಡೇ ಮಠದ ಬಸವಲಿಂಗ ಸ್ವಾಮೀಜಿಯ ಆತ್ಮಹತ್ಯೆ ಸಂಬಂಧ ಇಡೀ ಪ್ರಕರಣಕ್ಕೆ ರೋಚಕ ತಿರುವು ನೀಡಿರುವುದು ಡೇತ್‌ನೋಟ್. ಡೆತ್‌ನೋಟ್‌ನಲ್ಲಿ ಉಲ್ಲೇಖ ಆಗಿರುವ ಕೆಲ ಅಂಶಗಳು ಪ್ರಕರಣದ ದಿಕ್ಕನ್ನು ಬದಲಿಸಿವೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಡೇತ್‌ನೋಟ್ ಕೂಡಾ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ನಾನು ಮಠದ ಉತ್ತರಾಧಿಕಾರಿಯಾದ ಬಳಿಕ ಯಾವುದೇ ಹಗರಣವನ್ನು ಮಾಡಿಲ್ಲ. ಸಿದ್ದಗಂಗಾ ಮಠಕ್ಕೆ ನಂಬುಗೆಯಿಂದಲೇ ಕೆಲಸ ಮಾಡಿದ್ದೇನೆ. ಆದರೆ ಕೆಲವರು ಇತ್ತೀಚೆಗೆ ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಮಹಿಳೆಯೊಬ್ಬಳು 6-7 ತಿಂಗಳಿನಿಂದ ನನಗೆ ಕರೆ ಮಾಡಿ ಹಿಂಸೆ ನೀಡುತ್ತಿದ್ದಳು ಎಂಬ ಮಾಹಿತಿ ವೈರಲ್ ಆಗಿರುವ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ. ಆದರೆ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಡೆತ್‌ನೋಟ್ ನಿಜವಾದುದಲ್ಲ, ಕೇವಲ 1-2 ಅಂಶಗಳು ಸಾಮ್ಯತೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಕೋಮು ಘರ್ಷಣೆ, ಪೊಲೀಸರ ಮೇಲೂ ಪೆಟ್ರೋಲ್ ಬಾಂಬ್ ದಾಳಿ- 19 ಮಂದಿ ವಶ

    ಒಂದೆಡೆ ಹನಿಟ್ರ‍್ಯಾಪ್ ಶಂಕೆ ವ್ಯಕ್ತವಾಗುತ್ತಿದ್ದರೆ ಮತ್ತೊಂದೆಡೆ ಡೆತ್‌ನೋಟ್‌ನಲ್ಲಿ ಕೆಲವರ ಹೆಸರುಗಳನ್ನು ಉಲ್ಲೆಖ ಮಾಡಲಾಗಿದೆ. ಆದರೆ ಅವರು ಸಾವಿಗೆ ಕಾರಣ ಎಂದು ಬರೆದಿಲ್ಲ. ಒಬ್ಬ ಅನಾಮಧೇಯ ಹೆಸರನ್ನು ಸ್ಪಷ್ಟವಾಗಿ ಉಲ್ಲೆಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಪ್ರಕರಣ ಸಂಬಂಧ 306 ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತಿಳಿಸಿದ್ದಾರೆ.

    ಒಟ್ಟಾರೆ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್‌ನೋಟ್‌ನ ಕೆಲ ಅಂಶಗಳನ್ನು ತನಿಖೆಯ ದಿಕ್ಕನ್ನೇ ಬದಲಿಸಿವೆ. ಒಂದೆಡೆ ಹನಿಟ್ರ‍್ಯಾಪ್ ಶಂಕೆ ವ್ಯಕ್ತವಾಗಿದ್ರೆ, ಮತ್ತೊಂದೆಡೆ ಮಠದ ಅಧಿಕಾರ ಹಿಡಿಯಲು ಕೆಲವರು ಸಂಚು ರೂಪಿಸಿದ್ದಾರೆ ಎನ್ನಲಾಗುತ್ತಿದೆ. ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬೀಳಬೇಕಿದೆ. ಇದನ್ನೂ ಓದಿ: ಇಶಾ ಫೌಂಡೇಶನ್ ನಲ್ಲಿ ಪ್ರದರ್ಶನ ಕಂಡ ಕನ್ನಡದ ಮೊದಲ ಸಿನಿಮಾ ಕಾಂತಾರ

    Live Tv
    [brid partner=56869869 player=32851 video=960834 autoplay=true]

  • ಮಂಡ್ಯ ಹನಿಟ್ರ್ಯಾಪ್ ಕೇಸ್‍ಗೆ ಟ್ವಿಸ್ಟ್ – ದೂರು ಕೊಟ್ಟಿರೋದೇ ಬೇರೆ, ರೂಮ್ ಒಳಗಡೆ ನಡೆದಿದ್ದೇ ಬೇರೆ

    ಮಂಡ್ಯ ಹನಿಟ್ರ್ಯಾಪ್ ಕೇಸ್‍ಗೆ ಟ್ವಿಸ್ಟ್ – ದೂರು ಕೊಟ್ಟಿರೋದೇ ಬೇರೆ, ರೂಮ್ ಒಳಗಡೆ ನಡೆದಿದ್ದೇ ಬೇರೆ

    ಬೆಂಗಳೂರು: ಕೆಲವು ದಿನಗಳ ಹಿಂದೆ ಹನಿಟ್ರ್ಯಾಪ್(HoneyTrap) ಸುಳಿಗೆ ಸಿಲುಕಿದ ಪ್ರತಿಷ್ಠಿತ ಚಿನ್ನದ ವ್ಯಾಪಾರಿಯೊಬ್ಬರು 50 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದರು. ಈ ಸಂಬಂಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

    ಮಂಡ್ಯದ ಚಿನ್ನದ ವ್ಯಾಪಾರಿ ಹಾಗೂ ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ(Jagananath Shetty) ಆಗಸ್ಟ್ 19ರಂದು ಮಂಡ್ಯದ ಪಶ್ಚಿಮ ಠಾಣೆಗೆ ಕಿಡ್ನಾಪ್(Kidnap) ಮತ್ತು ಹನಿಟ್ರ್ಯಾಪ್ ಕುರಿತಂತೆ ದೂರು ನೀಡಿದ್ದ. ಈ ಪ್ರಕರಣ ಸಂಬಂಧ ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ನಡೆಯುತ್ತಿರುವಾಗಲೇ ಆಡಿಯೋ ಹಾಗೂ ವೀಡಿಯೋ ದೊರೆತಿದ್ದು, ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇದನ್ನೂ ಓದಿ: ಇಸ್ಲಾಂಗೆ ಮತಾಂತರವಾಗಿ ನನ್ನನ್ನು ಮದ್ವೆಯಾಗದಿದ್ರೆ ಆ್ಯಸಿಡ್ ಹಾಕ್ತಿನಿ- ವಿದ್ಯಾರ್ಥಿನಿಗೆ ಯುವಕನಿಂದ ಬೆದರಿಕೆ

    ವಿದ್ಯಾರ್ಥಿಯೊಬ್ಬಳನ್ನು ಲಾಡ್ಜ್‌ಗೆ ಕರೆಸಿಕೊಳ್ಳಲು ತಾನು ಲೆಕ್ಚರ್ ಎಂದು ಚಿನ್ನದ ವ್ಯಾಪಾರಿ ಜಗದೀಶ್ ಶೆಟ್ಟಿ ಪುಸಲಾಯಿಸಿದ್ದನು. ಮೈಸೂರಿನ ಲಾಡ್ಜ್‌ಗೆ ವಿದ್ಯಾರ್ಥಿನಿ ಕರೆಸಿಕೊಂಡ ವೇಳೆ ಅಲ್ಲಿಗೆ ಎಂಟ್ರಿಕೊಟ್ಟ ಆರೋಪಿ ಸಲ್ಮಾಭಾನು ಆಂಡ್ ಟೀಂ ಪಂಚೆ, ಬನಿಯನ್‌ನಲ್ಲಿದ್ದ ಜಗನಾಥ್ ಶೆಟ್ಟಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಜಗದೀಶ್ ಶೆಟ್ಟಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಎಳೆದಾಡಿ ಹೆದರಿಸಿದ್ದಾರೆ. ಈ ವೇಳೆ ತನ್ನದು ತಪ್ಪಾಯ್ತು ಎಂದು ಬಿಟ್ಟುಬಿಡಿ ಎಂದು ಜಗನ್ನಾಥ್ ಶೆಟ್ಟಿ ಕಾಲಿಗೆ ಬಿದ್ದಿದ್ದಾನೆ. ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ.

    ಫೆಬ್ರವರಿ 26ರಂದು ಮೈಸೂರಿನಲ್ಲಿ ಈ ಕೃತ್ಯ ನಡೆದಿದ್ದು, ಮಂಗಳೂರಿಗೆ ತೆರಳಲು ಆ ದಿನ ರಾತ್ರಿ ಮಂಡ್ಯದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ. ಈ ವೇಳೆ ಮೈಸೂರಿಗೆ ಡ್ರಾಪ್ ಕೊಡುವುದಾಗಿ ತಿಳಿಸಿ ನಾಲ್ವರು ಕಾರಿನಲ್ಲಿ ಅವರನ್ನು ಕರೆದೊಯ್ದು ನಂತರ ಚಿನ್ನದ ಪರೀಕ್ಷೆಗೆಂದು ಅವರನ್ನು ಅಪಹರಿಸಿ ಲಾಡ್ಜ್ ರೂಮ್‍ಗೆ ಕರೆದೊಯ್ದಿದ್ದಾರೆ. ರೂಮ್‍ನಲ್ಲಿ ಯುವತಿ ಜೊತೆ ವೀಡಿಯೋ ಚಿತ್ರೀಕರಿಸಿಕೊಂಡು ಬಳಿಕ 4 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಜಗನ್ನಾಥ್ ಶೆಟ್ಟಿ ಆರೋಪಿಸಿದ್ದನು. ಇದನ್ನೂ ಓದಿ: ಹನಿಟ್ರ್ಯಾಪ್ ಸುಳಿಗೆ ಸಿಲುಕಿ 50 ಲಕ್ಷ ರೂ. ಕಳೆದುಕೊಂಡ ಚಿನ್ನದ ವ್ಯಾಪಾರಿ

    ಕೊನೆಗೆ 50 ಲಕ್ಷ ಕೊಟ್ಟು ಅಲ್ಲಿಂದ ತೆರಳಿದೆ. ಆದರೆ ಮತ್ತೆ ಹಣಕ್ಕಾಗಿ ಗ್ಯಾಂಗ್ ಬೇಡಿಕೆ ಇಟ್ಟಿದ್ದಲ್ಲದೇ, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದೆ ಎಂದು ಜಗನ್ನಾಥ್ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇರೆಗೆ ಸಮಾಜ ಸೇವೆ, ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾಬಾನು ಎಂಬಾಕೆಯನ್ನು ಪೊಲೀಸರು ಬಂಧಿಸಿ ತನಿಖೆ ಆರಂಭಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಹನಿಟ್ರ್ಯಾಪ್ ಸುಳಿಗೆ ಸಿಲುಕಿ 50 ಲಕ್ಷ ರೂ. ಕಳೆದುಕೊಂಡ ಚಿನ್ನದ ವ್ಯಾಪಾರಿ

    ಹನಿಟ್ರ್ಯಾಪ್ ಸುಳಿಗೆ ಸಿಲುಕಿ 50 ಲಕ್ಷ ರೂ. ಕಳೆದುಕೊಂಡ ಚಿನ್ನದ ವ್ಯಾಪಾರಿ

    ಮಂಡ್ಯ: ಹನಿಟ್ರ್ಯಾಪ್ ಸುಳಿಗೆ ಸಿಲುಕಿದ ಪ್ರತಿಷ್ಠಿತ ಚಿನ್ನದ ವ್ಯಾಪಾರಿಯೊಬ್ಬರು 50 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಗೆ ಚಿನ್ನದ ವ್ಯಾಪಾರಿ ಜಗನ್ನಾಥ್ ಶೆಟ್ಟಿ ದೂರು ನೀಡಿದ್ದಾರೆ.

    ಫೆಬ್ರವರಿ 26ರಂದು ಮೈಸೂರಿನಲ್ಲಿ ಈ ಕೃತ್ಯ ನಡೆದಿದ್ದು, ಮಂಗಳೂರಿಗೆ ತೆರಳಲು ಆ ದಿನ ರಾತ್ರಿ ಮಂಡ್ಯದಲ್ಲಿ ಬಸ್ಸಿಗಾಗಿ ಜಗನ್ನಾಥ್ ಶೆಟ್ಟಿ ಕಾಯುತ್ತಿದ್ದರು. ಈ ವೇಳೆ ಮೈಸೂರಿಗೆ ಡ್ರಾಪ್ ಕೊಡುವುದಾಗಿ ತಿಳಿಸಿ ನಾಲ್ವರು ಕಾರಿನಲ್ಲಿ ಅವರನ್ನು ಕರೆದೊಯ್ದಿದ್ದಾರೆ. ನಂತರ ಚಿನ್ನದ ಪರೀಕ್ಷೆಗೆಂದು ಅವರನ್ನು ಅಪಹರಿಸಿ ಲಾಡ್ಜ್ ರೂಮ್‍ಗೆ ಕರೆದೊಯ್ದಿದ್ದಾರೆ. ರೂಮ್‍ನಲ್ಲಿ ಯುವತಿ ಜೊತೆ ವೀಡಿಯೋ ಚಿತ್ರೀಕರಿಸಿಕೊಂಡು ಬಳಿಕ 4 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ – 22 ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ

    ಕೊನೆಗೆ 50 ಲಕ್ಷ ಕೊಟ್ಟು ಅಲ್ಲಿಂದ ಜಗನ್ನಾಥ್ ತೆರಳಿದ್ದರು. ಆದರೆ ಮತ್ತೆ ಹಣಕ್ಕಾಗಿ ಗ್ಯಾಂಗ್ ಬೇಡಿಕೆ ಇಟ್ಟಿದ್ದಲ್ಲದೇ, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದೆ. ಇದರಿಂದ ಬೇಸತ್ತ ಜಗನ್ನಾಥ್ ಶೆಟ್ಟಿ ಅವರು 6 ತಿಂಗಳ ಬಳಿಕ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇರೆಗೆ ಸಮಾಜ ಸೇವೆ, ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾಬಾನು ಎಂಬಾಕಯನ್ನು ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ವಾಹನದಲ್ಲೇ ಕುಳಿತು ರಾಜಾರೋಷವಾಗಿ ಕೇಕ್ ಕತ್ತರಿಸಿದ ಕೊಲೆ ಆರೋಪಿ – ವೀಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

  • ಹನಿಟ್ರ್ಯಾಪ್ ಮೂಲಕ ಉದ್ಯಮಿಗೆ ಬೆದರಿಕೆ – ಸ್ಯಾಂಡಲ್‍ವುಡ್ ಯುವ ನಟ ಅರೆಸ್ಟ್

    ಹನಿಟ್ರ್ಯಾಪ್ ಮೂಲಕ ಉದ್ಯಮಿಗೆ ಬೆದರಿಕೆ – ಸ್ಯಾಂಡಲ್‍ವುಡ್ ಯುವ ನಟ ಅರೆಸ್ಟ್

    ಬೆಂಗಳೂರು: ನಗರದ ಉದ್ಯಮಿಯೋರ್ವರನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಸ್ಯಾಂಡಲ್‍ವುಡ್‍ನ ಉದಯೋನ್ಮುಖ ನಟನೊಬ್ಬನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಎಂದು ಗುರುತಿಸಲಾಗಿದೆ. ಯುವ ಮಿಸ್ಟರ್ ಭೀಮರಾವ್ ಎಂಬ ಸಿನಿಮಾಕ್ಕೆ ನಾಯಕನಾಗಿ ನಟಿಸಿದ್ದ. ಇದೀಗ ಹನಿಟ್ರ್ಯಾಪ್ ಆರೋಪದಡಿ ಪೊಲೀಸರ ಅತಿಥಿಯಾಗಿದ್ದಾನೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ನಾಪತ್ತೆಯಾದ ಲೋಕೇಶ್

    ಏನಿದು ಘಟನೆ:
    ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಯೊಂದಿಗೆ ಯುವ ಇಬ್ಬರು ಯುವತಿಯರ ಹೆಸರು ಬಳಸಿಕೊಂಡು ಚಾಟ್ ಮಾಡಿದ್ದ. ಉದ್ಯಮಿಗೆ ಇತ್ತೀಚೆಗೆ ಇಬ್ಬರು ಯುವತಿಯರು ಪರಿಚಯವಾಗಿದ್ದರು. ಉದ್ಯಮಿ ಕೂಡ ಪರಿಚಯದ ಯುವತಿರೆಂದು ಸಲುಗೆಯಿಂದ ಚಾಟ್ ಮಾಡಿದ್ದರು. ಆ ಬಳಿಕ ಅಶ್ಲೀಲ ಚಾಟ್ ಆರೋಪದಡಿ ಯುವ ನಾವು ಕ್ರೈಮ್ ಪೊಲೀಸರೆಂದು ಭೇಟಿಯಾಗಿ ಬೆದರಿಕೆ ಹಾಕಿದ್ದಾನೆ.

    ಯುವತಿಯರ ಜೊತೆಗೆ ಅಶ್ಲೀಲ ಚಾಟ್ ಬಗ್ಗೆ ನಿಮ್ಮ ಮೇಲೆ ಕೇಸ್ ದಾಖಲಾಗಿದೆ. ಈ ಕೇಸ್ ಮುಂದುವರಿಸದಿರಲು ಹಣ ಕೊಡಲೇಬೇಕೆಂದು ಕೇಳಿದ್ದಾನೆ. ಮೊದಲಿಗೆ ಐವತ್ತು ಸಾವಿರ ರೂ. ನಂತರ ಬ್ಯಾಂಕ್‍ನಿಂದ ಮೂರು ಲಕ್ಷ ರೂ. ಡ್ರಾ ಮಾಡಿಸಿಕೊಂಡಿದ್ದ. ಹಂತ ಹಂತವಾಗಿ ಒಟ್ಟು ಹದಿನಾಲ್ಕು ಲಕ್ಷಕ್ಕೂ ಹೆಚ್ಚಿನ ಹಣವನ್ನು ಯುವ ಪಡೆದಿದ್ದ ಎಂದು ಉದ್ಯಮಿ ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ : ರಾಕೇಶ್ ಬಳಸಿ ಬಿಸಾಕಿರೋ ಟಿಶ್ಯೂ ಎಂದ ಸೋನು ಶ್ರೀನಿವಾಸ್ ಗೌಡ

    ಯವ ಒಂದು ಬಾರಿ ಹಲಸೂರು ಗೇಟ್ ಬಳಿ ಬಂದು ಹಣ ಪಡೆದಿದ್ದ. ಆ ಬಳಿಕ ಉದ್ಯಮಿಗೆ ಅನುಮಾನ ಬಂದು ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ಬಳಿಕ ಕೇಸ್ ದಾಖಲಿಸಿಕೊಂಡು ದೂರಿನ ಅನ್ವಯ ಆರೋಪಿ ಯವನನ್ನು ಹಲಸೂರು ಗೇಟ್ ಪೊಲೀಸರು ಇದೀಗ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾಕ್ ಏಜೆಂಟರ ಹನಿಟ್ರ್ಯಾಪ್‍ಗೆ ಸಿಲುಕಿದ ಸೇನಾ ಸಿಬ್ಬಂದಿ – ಮಾಹಿತಿ ಸೋರಿಕೆ

    ಪಾಕ್ ಏಜೆಂಟರ ಹನಿಟ್ರ್ಯಾಪ್‍ಗೆ ಸಿಲುಕಿದ ಸೇನಾ ಸಿಬ್ಬಂದಿ – ಮಾಹಿತಿ ಸೋರಿಕೆ

    ಜೈಪುರ: ಭಾರತೀಯ ಸೇನಾ ಸಿಬ್ಬಂದಿ ಪಾಕಿಸ್ತಾನದ ಹನಿಟ್ರ್ಯಾಪ್‍ಗೆ ಸಿಲುಕಿ ಮಾಹಿತಿ ಸೋರಿಕೆ ಮಾಡಿದ್ದಾನೆ ಎಂದು ಬಂಧಿಸಲಾಗಿದೆ.

    ಪಾಕಿಸ್ತಾನಿ ಮಹಿಳಾ ಏಜೆಂಟರು ಭಾರತೀಯ ಸೇನಾ ಸಿಬ್ಬಂದಿ ಶಾಂತಿಮಯ್ ರಾಣಾ(24)ನನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ಈ ಹಿನ್ನೆಲೆ ಪಾಕಿಸ್ತಾನಕ್ಕೆ ಸೇನಾ ಮಾಹಿತಿಯನ್ನು ಸೋರಿಕೆ ಮಾಡಿದ್ದಾನೆ ಎಂಬ ಆರೋಪದ ಮೇಲೆ ರಾಣಾನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ರಾಣಾ ವಿರುದ್ಧ 1923ರ ಅಧಿಕೃತ ರಹಸ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಕಾಂಗೋದಲ್ಲಿ ಯುಎನ್ ವಿರೋಧಿ ಪ್ರತಿಭಟನೆ: ಇಬ್ಬರು ಭಾರತೀಯ ಶಾಂತಿಪಾಲನ ಸೈನಿಕರು ಹುತಾತ್ಮ 

    ರಾಣಾ ಪಶ್ಚಿಮ ಬಂಗಾಳದ ಬಾಗುಂದ ಜಿಲ್ಲೆಯ ಕಾಂಚನಪುರ ಗ್ರಾಮದ ನಿವಾಸಿ. ಅವನನ್ನು ಜೈಪುರದ ಘಟಕದಲ್ಲಿ ನಿಯೋಜಿಸಲಾಗಿತ್ತು. ರಾಜಸ್ಥಾನ ಪೊಲೀಸ್ ಗುಪ್ತಚರ ವಿಭಾಗದ ಮಹಾನಿರ್ದೇಶಕ ಉಮೇಶ್ ಮಿಶ್ರಾ ಈ ಕುರಿತು ಮಾತನಾಡಿದ್ದು, ಪಾಕಿಸ್ತಾನದ ಏಜೆಂಟ್‍ಗಳಾದ ಗುರ್ನೌರ್ ಕೌರ್ ಅಲಿಯಾಸ್ ಅಂಕಿತಾ ಮತ್ತು ನಿಶಾ ಸೋಶಿಯಲ್ ಮೀಡಿಯಾ ಮೂಲಕ ರಾಣಾನನ್ನು ಸಂಪರ್ಕಿಸಿದ್ದಾರೆ ಎಂದು ವಿವರಿಸಿದ್ದಾರೆ.

    ಇಬ್ಬರು ಮಹಿಳೆಯರು ರಾಣಾ ನಂಬರ್ ತೆಗೆದುಕೊಂಡಿದ್ದು, ವಾಟ್ಸಾಪ್‍ನಲ್ಲಿ ಮಾತನಾಡುತ್ತಿದ್ದರು. ಮಹಿಳೆಯರು ಮೊದಲು ರಾಣಾನ ವಿಶ್ವಾಸವನ್ನು ಪಡೆದುಕೊಂಡಿದ್ದಾರೆ. ನಂತರ ಇಬ್ಬರು ರಾಣಾ ಬಳಿ ಗುಪ್ತಚರ ಮಾಹಿತಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಣಾ ಖಾತೆಗೂ ಒಂದಷ್ಟು ಹಣವನ್ನು ಹಾಕುತ್ತಿದ್ದರು ಎಂದು ತಿಳಿಸಿದ್ದಾರೆ.

    ಸಂಪರ್ಕ ಮಾಡಿದ್ದು ಹೇಗೆ?
    ಮಾರ್ಚ್ 2018 ರಿಂದ ರಾಣಾ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಈ ವಿಚಾರವನ್ನು ತಿಳಿದುಕೊಂಡೆ ಪಾಕ್ ಮಹಿಳಾ ಏಜೆಂಟ್‍ರು ರಾಣಾನನ್ನು ಪರಿಚಯ ಮಾಡಿಕೊಂಡಿದ್ದಾರೆ. ನಂತರ ನಂಬರ್ ತೆಗೆದುಕೊಂಡು ವಾಟ್ಸಾಪ್ ಚಾಟ್, ವೀಡಿಯೋ ಮತ್ತು ಆಡಿಯೋ ಸಂದೇಶಗಳ ಮೂಲಕ ಮಹಿಳೆಯರು ಸಂಪರ್ಕದಲ್ಲಿದ್ದರು. ಇದನ್ನೂ ಓದಿ: ಭಯೋತ್ಪಾದಕರ ಎನ್‍ಕೌಂಟರ್ ವೇಳೆ ಸೇನಾ ಸಿಬ್ಬಂದಿಗೆ ಗಂಭೀರ ಗಾಯ

    ಒಬ್ಬಳು ತನ್ನನ್ನು ಶಹಜಹಾನ್‍ಪುರ(ಉತ್ತರ ಪ್ರದೇಶ) ನಿವಾಸಿ ಎಂದು ರಾಣಾ ಬಳಿ ಪರಿಚಯ ಮಾಡಿಕೊಂಡಿದ್ದು, ಅಲ್ಲಿ ಮಿಲಿಟರಿ ಇಂಜಿನಿಯರಿಂಗ್ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಳು. ಇನ್ನೊಬ್ಬ ಮಹಿಳೆ ತನ್ನ ಹೆಸರನ್ನು ನಿಶಾ, ತಾನು ಮಿಲಿಟರಿ ನರ್ಸಿಂಗ್‍ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಳು.

    ಈ ಪರಿಣಾಮ ರಾಣಾ ಸಹ ಇಬ್ಬರನ್ನು ನಂಬಿದ್ದು, ಅವರು ಕೇಳಿದ ಗೌಪ್ಯ ದಾಖಲೆಗಳು, ಫೋಟೋ, ವೀಡಿಯೊಗಳನ್ನು ಕಳುಹಿಸಿದ್ದಾನೆ. ಅಲ್ಲದೇ ರಾಣಾ ತನ್ನ ರೆಜಿಮೆಂಟ್‍ನ ರಹಸ್ಯ ದಾಖಲೆಗಳು ಮತ್ತು ವ್ಯಾಯಾಮದ ವೀಡಿಯೋಗಳನ್ನು ಸಹ ಕಳುಹಿಸಿದ್ದ ಎಂದು ಗುಪ್ತಚಾರ ಇಲಾಖೆ ಮಾಹಿತಿ ಕೊಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯೊಂದಿಗೆ ನಿಲ್ಲಿಸಿ ಬಲವಂತವಾಗಿ ಅಶ್ಲೀಲ ಫೋಟೋ ತೆಗೆದು ಬ್ಲಾಕ್ ಮೇಲ್ – ಮೂವರ ಬಂಧನ

    ಮಹಿಳೆಯೊಂದಿಗೆ ನಿಲ್ಲಿಸಿ ಬಲವಂತವಾಗಿ ಅಶ್ಲೀಲ ಫೋಟೋ ತೆಗೆದು ಬ್ಲಾಕ್ ಮೇಲ್ – ಮೂವರ ಬಂಧನ

    ಕಾರವಾರ: ಉದ್ಯೋಗ ಕೊಡಿಸುವುದಾಗಿ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

    ಶಿರಸಿಯ ಉಂಚಳ್ಳಿಯ ಅಜೀತ್ ಶ್ರೀಕಾಂತ್ ನಾಡಿಗ (25), ಬನವಾಸಿಯ ಗೊಲಗೇರಿ ಓಣಿಯ ಧನುಶ್ಯ ಕುಮಾರ್ ಅಲಿಯಾಸ್‌ ದಿಲೀಪ್ ಕುಮಾರ್ ಶೆಟ್ಟಿ (25) ಮತ್ತು ಶಿವಮೊಗ್ಗ ನಗರದ ರಂಗನಾಥ ಬಡಾವಣೆ ಗೋಪಾಳದ ಪದ್ಮಜಾ ಡಿ.ಎನ್ (50) ಬಂಧಿತ ಆರೋಪಿಗಳು. ಇದನ್ನೂ ಓದಿ: ಪತಿಯನ್ನು ಹರಾಜಿಗಿಟ್ಟು, ಯಾವುದೇ ಕಾರಣಕ್ಕೂ Exchange ಇಲ್ಲವೆಂದ ಪತ್ನಿ..!

    ಏನಿದು ಘಟನೆ?:
    ಶಿರಸಿ ಮೂಲದ ವ್ಯಕ್ತಿಗೆ ಉಪನ್ಯಾಸಕ ಹುದ್ದೆ ಕೊಡಿಸುವುದಾಗಿ 17 ಜನವರಿ 2022ರಂದು ಶಿವಮೊಗ್ಗಕ್ಕೆ ಕರೆಸಿಕೊಂಡು ಕೋಣೆಯಲ್ಲಿ ಕೂಡಿ ಹಾಕಿ ನಗ್ನಗೊಳಸಿ ಮಹಿಳೆಯೊಂದಿಗೆ ನಿಲ್ಲಿಸಿ ಫೋಟೋ, ವೀಡಿಯೋ ಮಾಡಿಕೊಂಡಿದ್ದಾರೆ. ಬಳಿಕ ಈ ಫೋಟೋ ಮತ್ತು ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಬೆದರಿಸಿ 15 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.

    18 ಜನವರಿ 2022 ರಂದು ಶಿರಸಿ ಮೂಲದ ವ್ಯಕ್ತಿಯ ತಂದೆಯ ಬಳಿ ಹೋಗಿ ನಿಮ್ಮ ಮಗ ಮಹಿಳೆಯ ಜೊತೆಗೆ ಇರುವ ಕೆಲವು ನಗ್ನ ಫೋಟೋಗಳು ಮತ್ತು ವೀಡಿಯೋಗಳು ಇವೆ, ಅವುಗಳನ್ನು ಡಿಲೀಟ್ ಮಾಡಲು ಮತ್ತು ನಿಮ್ಮ ಮಗ ಜೀವಂತವಾಗಿ ಬರಲು 15 ಲಕ್ಷ ರೂ. ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಲ್ಲದೇ ಬಲವಂತವಾಗಿ ಭದ್ರತೆಗಾಗಿ ನಕಲಿ ದಾಖಲೆ ಸೃಷ್ಟಿ ಮಾಡಿ ಸುಳ್ಳು ಕರಾರು ಪತ್ರ ಬರೆಸಿಕೊಂಡಿದ್ದಲ್ಲದೇ ಬ್ಲ್ಯಾಂಕ್ ಚೆಕ್ ಪಡೆದಿದ್ದರು. ಇದನ್ನೂ ಓದಿ: ಹಾಸ್ಟೆಲ್‍ಗೆ ಟ್ರಾವೆಲ್ ಬ್ಯಾಗ್‍ನಲ್ಲಿ ಯುವತಿಯನ್ನು ಕರೆತಂದ ಪ್ರಿಯಕರ – ವೀಡಿಯೋ ಮಣಿಪಾಲದ್ದಲ್ಲ

    ಒಂದು ವೇಳೆ 15 ಲಕ್ಷ ರೂ. ಹಣ ಕೊಡದೇ ಇದ್ದರೆ ಬಲತ್ಕಾರದ ದೂರು ದಾಖಲಿಸುವುದಾಗಿ ಇಲ್ಲವೇ ಕೊಲೆ ಮಾಡುವುದಾಗಿ ಹೆದರಿಸಿದ್ದರು. ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ನೊಂದ ವ್ಯಕ್ತಿ ನಿನ್ನೆ ದೂರು ದಾಖಲಿಸಿದ್ದರು. ಕೂಡಲೇ ಕಾರ್ಯಪ್ರವೃತರಾದ ಪೊಲೀಸರು ಆರೋಪಿಗಳನ್ನು ಹಿಡಿಯುವಲ್ಲಿ 1 ದಿನದಲ್ಲಿ ಯಶಸ್ವಿಯಾಗಿದ್ದಾರೆ.

    ಕಾರ್ಯಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಎಸ್. ಭದ್ರಿನಾಥ್, ಶಿರಸಿ ಡಿವೈಎಸ್‍ಪಿ ರವಿ ಡಿ.ನಾಯ್ಕ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಸಿಪಿಐ ರಾಮಚಂದ್ರ ನಾಯ್ಕ ಹಾಗೂ ಸಿಬ್ಬಂದಿ ಮಹಾಂತೇಶ್ ಬಾರಕೇರ, ಅಶೋಕ ನಾಯ್ಕ, ರಾಮಯ್ಯ ಪೂಜಾರಿ, ವಿದ್ಯಾ ಎಚ್.ವಿ, ಯಶೋದಾ ನಾಯ್ಕ, ಪಾಂಡು ನಾಗೋಜಿ ರವರು ಭಾಗವಹಿಸಿದ್ದರು.