Tag: honeytrap

  • ಹನಿಟ್ರ್ಯಾಪ್‌ ಮಾಡಲು ಬಂದವರಿಗೆ ಕಪಾಳಕ್ಕೆ ಹೊಡೆದಿದ್ದು ನಿಜ – ವಿಷ ಕನ್ಯೆಯರ ರಹಸ್ಯ ಹೇಳಿದ ರಾಜಣ್ಣ

    ಹನಿಟ್ರ್ಯಾಪ್‌ ಮಾಡಲು ಬಂದವರಿಗೆ ಕಪಾಳಕ್ಕೆ ಹೊಡೆದಿದ್ದು ನಿಜ – ವಿಷ ಕನ್ಯೆಯರ ರಹಸ್ಯ ಹೇಳಿದ ರಾಜಣ್ಣ

    – ಪ್ರಜ್ವಲ್‌, ರಮೇಶ್‌ ಜಾರಕಿಹೊಳಿ ರೀತಿ ನನ್ನನ್ನ ಟಾರ್ಗೆಟ್‌ ಮಾಡಿದ್ದಾರೆ ಎಂದ ಸಚಿವ

    ತುಮಕೂರು: ಹನಿ ಟ್ರಾಪ್ ವಿಚಾರದಲ್ಲಿ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಹನಿ ಟ್ರ್ಯಾಪ್‌ ಮಾಡಲು ಬಂದವರಿಗೆ ಕಪಾಳಕ್ಕೆ ಹೊಡೆದ್ದು ನಿಜ ಅಂತ ಸಚಿವ ಕೆ.ಎನ್‌ ರಾಜಣ್ಣ ಹೇಳಿದರು.

    ತುಮಕೂರಿನಲ್ಲಿ ಮಾತನಾಡಿದ ಸಚಿವ ರಾಜಣ್ಣ, ಅಧಿವೇಶನ ಮುಕ್ತಾಯ ಆದ ರೀತಿ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆಯಾಗಿದೆ. ಸ್ಪೀಕರ್ ಪೋಡಿಯಂನ ಮೆಟ್ಟಿಲು ಯಾರೂ ಹತ್ತಲ್ಲ. ಅಂಥದ್ದರಲ್ಲಿ ಏರಿ ಅವರಿಗೆ ಧಮ್ಕಿ ಹಾಕಿರೋದು ಶೋಭೆಯಲ್ಲ. ಸಿದ್ಧರಾಮಯ್ಯರಿಗೆ, ಸ್ಪೀಕರ್‌ಗೆ ಅಗೌರವ ತರೋದು ಸರಿಯಲ್ಲ. ಬಿಜೆಪಿಗರೂ ಗೂಂಡಾ ವರ್ತನೆ ಮಾಡಿದ್ದಾರೆ. ಅವರ ಹೈ ಕಮಾಂಡ್ ಬುದ್ದಿ ಹೇಳಬೇಕು ಎಂದು ಕಿಡಿ ಕಾರಿದರು.

    ಹನಿ ಟ್ರಾಪ್ ವಿಚಾರದಲ್ಲಿ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಇವತ್ತು ಸಿಎಂ ಭೇಟಿ ಮಾಡೋದಿಲ್ಲ. ನಾಲ್ಕೈದು ದಿನದ ನಂತರ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನ ಭೇಟಿ ಮಾಡುತ್ತೇನೆ. ಗೃಹ ಸಚಿವರಿಗೆ ದೂರು ಕೊಡುತ್ತೇನೆ. ದೇವರು ನಿನಗೆ ಹೇಗೆ ಬುದ್ದಿ ಕೊಡುತ್ತೆ ಹಾಗೋ ಮಾಡು ಎಂದು ಸಿಎಂ ಹೇಳಿದ್ದಾರೆ. ಹನಿ ಟ್ರಾಪ್ ಮಾಡಲು ಬಂದವರಿಗೆ ಕಪಾಳಕ್ಕೆ ಹೊಡೆದ್ದು ನಿಜ. ಯಾರು ಯಾಕೆ ನನ್ನ ಟಾರ್ಗೆಟ್ ಮಾಡಿದ್ರು ಅಂತಾ ಗೊತ್ತಿಲ್ಲ. ರಮೇಶ್ ಜಾರಕಿಹೊಳಿ, ಪ್ರಜ್ಬಲ್ ಹೇಗೆ ಟಾರ್ಗೆಟ್ ಮಾಡಿದ್ದಾರೋ ಹಾಗೆ ನನ್ನನ್ನ ಟಾರ್ಗೆಟ್‌ ಮಾಡಿದ್ದಾರೆ. ಇದರ ಹಿಂದೆ ಯಾರಿದ್ದಾರೋ ಗೊತ್ತಿಲ್ಲ ಎಂದರಲ್ಲದೇ ನಾನು ಯಾರಿಗೂ ಕೆಟ್ಟದ್ದು ಬಯಸಿಲ್ಲ, ಹಾಗಾಗಿ ನನಗೆ ಕೆಟ್ಟದಾಗಲ್ಲ. ಹಾಗಂತ ಸಾರ್ವಜನಿಕ ಜೀವನದಲ್ಲಿ ತೇಜೋವಾಧೆ ಮಾಡೋದು ಸರಿಯಲ್ಲ ಎಂದು ಹೇಳಿದರು.

    ಹನಿಟ್ರ್ಯಾಪ್‌ ಯತ್ನ ಒಂದೂವರೆ ತಿಂಗಳಿಂದ ನಡೆದಿದೆ. ವಿಷ ಕನ್ಯೆಯರ ರೀತಿ ಇಲ್ಲೂ ಇದ್ದಾರೆ. ಆದ್ದರಿಂದ ಈ ವಿಚಾರ ಹೈಕಮಾಂಡ್ ಗಮನಕ್ಕೆ ತರುವ ಬಗ್ಗೆ ಚಿಂತನೆ ಇದೆ. ಸಚಿವ ಸತೀಶ್ ಜಾರಕಿಹೊಳಿ ಇದನ್ನು ಗಂಭೀರವಾಗಿ ಪರಿಗಣಿಸೋಣ ಅಂದಿದ್ದಾರೆ. ಅವರು ಏನೋ ಹೇಳುತ್ತಾರೆ ನೋಡುನಾ..? ಎಂದು ಹೇಳಿದರು.

    ವಿಷಕನ್ಯೆಯರ ಕಥೆ ಗೊತ್ತಾ ನಿಮಗೆ? ವಿಷ ಕನ್ಯೆಯರು ಎಲ್ಲಿಂದ ಹುಟ್ಟಿದ್ರು? ಮಾನವ ಹುಟ್ಟಿದಾಗಿನಿಂದ ಅವರನ್ನ ಬಳಸಿಕೊಳ್ಳುತ್ತಾ ಬಂದರು. ಏಕೆ ಬಳಿಸಿದ್ರು, ಯಾವ ಕಾಲದಲ್ಲಿ ಏನಕ್ಕೆ ಬಳಸಿದ್ರು. ಅಧಿಕಾರದ ಆಸೆಗೆ ಇನ್ನೊಬ್ಬನ್ನ ಮುಗಿಸಲು ಇರೋದು. ಇದೆಲ್ಲಾ ಇತಿಹಾಸಲ್ಲಿ ಬಂದಿದೆ. ಇದೆಲ್ಲಾ ಹೊಸದಾಗಿ ಬಂದಿಲ್ಲ. ಎಲ್ಲಾ ವಿಷ ಕನ್ಯೆಯರು ಇರ್ತಿದ್ರು. ಈಗ್ಲೂ ಅದೇ ರೀತಿ ನಡೆಸುತ್ತಿದ್ದಾರೆ ಎಂದು ನುಡಿದರು.

  • ಇದು ಮಾನಮರ್ಯಾದೆ ಇಲ್ಲದ ಅಶ್ಲೀಲ ಸರ್ಕಾರ – ಆರ್‌. ಅಶೋಕ್‌ ಸಿಡಿಮಿಡಿ

    ಇದು ಮಾನಮರ್ಯಾದೆ ಇಲ್ಲದ ಅಶ್ಲೀಲ ಸರ್ಕಾರ – ಆರ್‌. ಅಶೋಕ್‌ ಸಿಡಿಮಿಡಿ

    – 224 ಶಾಸಕರ ಮೇಲೆ ಕಳಂಕ ಬಂದಿದೆ ಎಂದ ವಿಜಯೇಂದ್ರ

    ಬೆಂಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮಾನ ಮರ್ಯಾದೆ ಇಲ್ಲದ ಅಶ್ಲೀಲ ಸರ್ಕಾರ ಅಂತ ವಿಪಕ್ಷ ನಾಯಕ ಆರ್.‌ ಅಶೋಕ್‌ ಸಿಡಿಮಿಡಿಗೊಂಡರು.

    ವಿಪಕ್ಷಗಳ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್‌ ರೂಲಿಂಗ್‌ ಹೊರಡಿಸಿದ್ದನ್ನು ಖಂಡಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಯಕ್ಕಾಗಿ ಹೋರಾಟ ಮಾಡಿದ್ದು, ನಮ್ಮ ಮೇಲೆ ಗದಪ್ರಹಾರ ಮಾಡಿದ್ದೀರಿ. ಒಬ್ಬ ಮಂತ್ರಿ ಬಂದ ಹನಿಟ್ರ್ಯಾಪ್‌ ಆಗಿದೆ ಅಂತ ಅಂಗಲಾಚುತ್ತಿದ್ದಾರೆ. ಆದ್ರೆ ಇದು ಕಾಂಗ್ರೆಸ್‌ನ ಸಿಎಂಗೆ, ಸಚಿವರಿಗೆ ಅಶ್ಲೀಲ ಅಂತ ಅನ್ನಿಸಲೇ ಇಲ್ಲ. ಹನಿ ತಿಂದವರು ಕಾಂಗ್ರೆಸ್‌ನವರು, ಅವರನ್ನ ಅಮಾನತು ಮಾಡಬೇಕಿತ್ತು. ಈ ರೀತಿ ಸದನವನ್ನ ನಾವು ಒಪ್ಪಲ್ಲ ಎಂದು ಆಕ್ರೋಶ ಹೊರಹಾಕಿದರು.

    ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆಯುತ್ತಿದ್ದೀರಿ, ಇದು ಅಶ್ಲೀಲ ಸರ್ಕಾರ, ಮಾನಮರ್ಯಾದೆ ಇಲ್ಲದ ಸರ್ಕಾರ ವಿಧಾನಸಭೆಯಲ್ಲಿ ಅಶೋಕ್ ಕಿಡಿ ಕಾರಿದರು. ಇದನ್ನೂ ಓದಿ: ದೆಹಲಿ ಹೈಕೋರ್ಟ್ ಜಡ್ಜ್‌ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ – ವರ್ಗಾವಣೆ ಕ್ರಮದ ಭಾಗವಲ್ಲ ಎಂದ ಸುಪ್ರೀಂ

    ನಮ್ಮ ಶಾಸಕರು ಈ ಹಿಂದೆ ವಿಡಿಯೋ ನೋಡುತ್ತಿದ್ದರು ಅಂತ ಕಾಂಗ್ರೆಸ್‌ನವರು ಕುಣಿದಿದ್ದೇ ಕುಣಿದಿದ್ದು, ಈಗ ಸ್ವತಃ ಸಚಿವರೇ ಹನಿಟ್ರ್ಯಾಪ್‌ ಆಗಿದೆ ಅಂದಾಗ ಅದು ಅಶ್ಲೀಲ ಅನ್ನಿಸಲೇ ಇಲ್ಲ. ಸದನದ ಗೌರವ ಕಾಪಾಡಬೇಕು ಅಂತ ನಾವು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಕೇಳಿದ್ದೀವಿ. ಆದ್ರೆ ಸಿಎಂ ಸಚಿವರ ಪರವಾಗಿದ್ದೀನಿ ನ್ಯಾಯ ಕೊಡಿಸ್ತಿನಿ ಅಂತಾರೆ. ನ್ಯಾಯ ಕೇಳಿದವರ ಮೇಲೆ ಗದಾಪ್ರಹಾರ ಆಗಿದೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: 1 ತಿಂಗಳು ನಂದಿ ಬೆಟ್ಟದ ರಸ್ತೆ ಬಂದ್‌ – ಪ್ರವಾಸಿಗರೇ ಈ ಸುದ್ದಿ ನೋಡಿ…

    224 ಶಾಸಕರ ಮೇಲೆ ಕಳಂಕ ಬಂದಿದೆ
    ಇನ್ನೂ ವಿಧಾನಸೌಧದಲ್ಲಿ ಶಾಸಕ ವಿಜಯೇಂದ್ರ ಮಾತನಾಡಿ, 18 ಶಾಸಕರನ್ನು ಅಮಾನತು ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಸಚಿವ ರಾಜಣ್ಣ ಅವರು ಸದನದಲ್ಲಿ ಅಂಗಲಾಚಿದ್ದಾರೆ. 48ಕ್ಕೂ ಹೆಚ್ಚು ಮುಖಂಡರು ಹನಿಟ್ರ್ಯಾಪ್‌ಗೆ ಒಳಗಾಗಿದ್ದಾರೆ ಅಂತಾರೆ. ಅವರಿಗೆ ರಕ್ಷಣೆ ಕೊಡಬೇಕಾದ ಕರ್ತವ್ಯ ಸಿಎಂ ಅವರದಿತ್ತು. 224 ಶಾಸಕರ ಮೇಲೆ ಕಳಂಕ ಬಂದಿದೆ, 224 ಶಾಸಕರ ಸುರಕ್ಷತೆ ನೋಡಿಕೊಳ್ಳಬೇಕಾದ ಹೊಣೆ ಸಿಎಂ ಅವರದ್ದು ಅಂತ ವಿಜಯೇಂದ್ರ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಕುಡಿದ ಮತ್ತಲ್ಲಿ ಹುಚ್ಚಾಟ – ತಮಾಷೆಗೆ 40 ಕಿಮೀ ದೂರದಿಂದ ಅಂಬುಲೆನ್ಸ್‌ ಕರೆಸಿದ ಕುಡುಕ!

  • ಹಿಟ್ ಆಂಡ್ ರನ್ ಪ್ರಶ್ನೆಯೇ ಇಲ್ಲ, ಹನಿಟ್ರ್ಯಾಪ್‌ ಹಿಂದಿರುವವರ ಹೆಸರು ಬರಬೇಕು: ಸತೀಶ್‌ ಜಾರಕಿಹೊಳಿ

    ಹಿಟ್ ಆಂಡ್ ರನ್ ಪ್ರಶ್ನೆಯೇ ಇಲ್ಲ, ಹನಿಟ್ರ್ಯಾಪ್‌ ಹಿಂದಿರುವವರ ಹೆಸರು ಬರಬೇಕು: ಸತೀಶ್‌ ಜಾರಕಿಹೊಳಿ

    ಬೆಳಗಾವಿ: ರಾಜಣ್ಣ (KN Rajanna) ಈಗಾಗಲೇ ಹೇಳಿದ್ದಾರೆ. ಈ ಪ್ರಕರಣದಲ್ಲಿ ಹಿಟ್‌ ಆಂಡ್‌ ರನ್‌ (Hit and Run) ಪ್ರಶ್ನೆಯೇ ಇಲ್ಲ. ಹನಿಟ್ರ್ಯಾಪ್‌ (Honeytrap) ಹಿಂದೆ ಯಾರಿದ್ದಾರೆ ಅವರ ಹೆಸರು ಹೊರಗಡೆ ಬರಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

    ರಾಜಣ್ಣ ಹನಿಟ್ರಾಪ್ ವಿಚಾರದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಆಗಾಗ ಸಿಡಿ ಸದ್ದು ಆಗುತ್ತಿರುತ್ತದೆ ಸರಿಯಾದ ದಾರಿಯಲ್ಲಿ ತನಿಖೆ ಆಗಬೇಕು ಎಂದರು.

    ಸಹೋದರ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಹೀಗೆ ಆಯ್ತು. ಚರ್ಚೆಯಾಯಿತು, ತನಿಖೆಯಾಯಿತು. ಆದರೆ ಮಾಡಿದವರು ಯಾರು ಅಂತ ಬರಲಿಲ್ಲ. ಕೇವಲ ಇಬ್ಬರು ಮೂವರನ್ನು ಬಂಧಿಸಿದರು‌, ಆ ಪ್ರಕರಣದ ಹಿಂದೆ ಯಾರಿದ್ದರು ಎಂಬುದರ ಕುರಿತು ತಾರ್ಕಿಕ ಅಂತ್ಯ ಆಗಲಿಲ್ಲ‌ ಎಂದು ತಿಳಿಸಿದರು.

    ಗಂಭೀರ ಸಮಸ್ಯೆ ಕುರಿತು ಕಾಂಗ್ರೆಸ್‌ ಹೈಕಮಾಂಡ್‌ ಸೀರಿಯಸ್‌ ಆಗಿ ಅವರಾಗಿಯೇ ವರದಿ ತರಿಸಿಕೊಳ್ಳಬೇಕು. ರಾಜಣ್ಣ ಹನಿಟ್ರ್ಯಾಪ್‌ ಗಾಳಿಯಲ್ಲಿ ಹೇಳುವ ಮಾತಿಲ್ಲ, ತನಿಖೆಯಾಗಲಿ, ಸ್ಚಪಕ್ಷೀಯರು ಇರಬಹುದು ಬೇರೆ ಪಕ್ಷದವರು ಇರಬಹುದು. ಇವರೇ, ಅವರೇ ಎಂದು ಹೇಳಲು ಆಗುವುದಲ್ಲ ಎಂದರು.

     

    ದೂರು ನೀಡಿದರೆ ಗ್ರಹ ಮಂತ್ರಿಗಳು ತನಿಖೆ ಮಾಡುವುದಾಗಿ ಹೇಳಿದ್ದಾರೆ. ರಾಜಕಾರಣಿಗಳ ಹೆಸರಿನಲ್ಲಿ ಕರ್ನಾಟಕದ ಹೆಸರನ್ನು ಹಾಳು ಮಾಡುವುದು ಬೇಡ. ಹೋರಾಟ ಮಾಡುವುದಾರೆ ಮಾಡಿ ಆದರೆ ಇಂಥ ಹೀನ ಕೃತ್ಯಮಾಡಿಸಿ ಬಲಿಪಶು ಮಾಡಬೇಡಿ ಎಂದು ಹೇಳಿದರು.

  • ಹನಿಟ್ರ್ಯಾಪ್ ಪ್ರಕರಣ ಜಡ್ಜ್‌ ಅಥವಾ ಸಿಬಿಐ ತನಿಖೆಗೆ ಕೊಡಬೇಕು: ವಿಜಯೇಂದ್ರ ಆಗ್ರಹ

    ಹನಿಟ್ರ್ಯಾಪ್ ಪ್ರಕರಣ ಜಡ್ಜ್‌ ಅಥವಾ ಸಿಬಿಐ ತನಿಖೆಗೆ ಕೊಡಬೇಕು: ವಿಜಯೇಂದ್ರ ಆಗ್ರಹ

    – ಮುಸ್ಲಿಮರಿಗೆ ಮೀಸಲಾತಿ ವಿರುದ್ಧ ಬಿಜೆಪಿ- ಜೆಡಿಎಸ್ ಜನಾಂದೋಲನ

    ಬೆಂಗಳೂರು: ಹನಿಟ್ರ್ಯಾಪ್(Honeytrap) ಕುರಿತಂತೆ ಹೈಕೋರ್ಟಿನ ಈಗಿನ ನ್ಯಾಯಮೂರ್ತಿಗಳು ಅಥವಾ ಸಿಬಿಐ (CBI) ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಅವರು ಆಗ್ರಹಿಸಿದ್ದಾರೆ.

    ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಸಚಿವರಾದ ರಾಜಣ್ಣ (Rajanna) ಅವರು ರಾಜ್ಯ ಹಾಗೂ ದೇಶದ 48ಕ್ಕೂ ಹೆಚ್ಚು ಪ್ರಮುಖರು ಹನಿಟ್ರ್ಯಾಪ್‍ಗೆ ಒಳಗಾದ ಕುರಿತು ತಿಳಿಸಿ ತನಿಖೆ ಆಗಬೇಕೆಂದು ಹೇಳಿಕೆ ಕೊಟ್ಟಿದ್ದಾರೆ. ಇದು ಬಹಳ ಗಂಭೀರ ವಿಚಾರ ಎಂದು ತಿಳಿಸಿದ ಗೃಹ ಸಚಿವರು, ಇದರ ಬಗ್ಗೆ ತನಿಖೆ ಮಾಡಿಸುವುದಾಗಿ ಹೇಳಿದ್ದರು. ಸದನ ಮುಗಿದ ಬಳಿಕ ಹೊರಕ್ಕೆ ಬಂದ ಗೃಹ ಸಚಿವರು, ತಮಗೆ ಅಧಿಕೃತವಾಗಿ ಯಾವುದೇ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂದಿದ್ದಾರೆ ಎಂದು ವಿವರಿಸಿದರು.

     

    ಅಧಿಕಾರಿಗಳು ಮಾಹಿತಿ ಕೊಟ್ಟ ಮೇಲೆ ಅದರ ಕುರಿತು ಆಲೋಚಿಸುವುದಾಗಿ ತಿಳಿಸಿ ದ್ವಂದ್ವ ನೀತಿ ಪ್ರದರ್ಶನ ಮಾಡಿದ್ದಾರೆ. ನಾವು ಸದನದಲ್ಲಿ ಮುಖ್ಯಮಂತ್ರಿಗಳಿಂದ ಉತ್ತರ ಪಡೆಯುವ ಪ್ರಯತ್ನ ಮಾಡಿದ್ದೇವೆ. ಅವರು ಯಾವುದೇ ರೀತಿ ಸರಿಯಾದ ಉತ್ತರ ಕೊಟ್ಟಿಲ್ಲ ಎಂದು ಟೀಕಿಸಿದರು. ಇದೊಂದು ಗಂಭೀರ ಪ್ರಕರಣ. ಇದು ಸದನದ 224 ಶಾಸಕರ, ರಾಜ್ಯದ ಗೌರವದ ಪ್ರಶ್ನೆ. ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಪ್ರತಿಭಟಿಸುವುದಾಗಿ ತಿಳಿಸಿದರು.  ಇದನ್ನೂಓದಿ: ಹನಿಟ್ರ್ಯಾಪ್‌ ಆಗಿದ್ರೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಿ: ಡಿಕೆಶಿ

    ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಸರಕಾರಿ ಕಾಮಗಾರಿಗಳಲ್ಲಿ 4% ಮೀಸಲಾತಿ ನೀಡಿದ ಬಗ್ಗೆ ಮುಖ್ಯಮಂತ್ರಿಗಳು ಹೇಳಿಕೆ ಕೊಟ್ಟಿದ್ದಾರೆ. ಇದರ ವಿರುದ್ಧ ನಾವು ರಾಜ್ಯಾದ್ಯಂತ ಜನಾಂದೋಲನಕ್ಕೆ ಕರೆ ಕೊಡಲಿದ್ದೇವೆ ಎಂದು ಪ್ರಕಟಿಸಿದರು.

     
    ಬಿಜೆಪಿ- ಜೆಡಿಎಸ್ ಪಕ್ಷಗಳು ಮುಸಲ್ಮಾನರ ವಿರೋಧಿ ಅಲ್ಲ. ಆದರೆ ಹಿಂದೂಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಹಣಕಾಸಿನ ಸಚಿವರಾದ ಮುಖ್ಯಮಂತ್ರಿಗಳು ನಡೆದುಕೊಳ್ಳುತ್ತಿದ್ದಾರೆ. ಇದನ್ನು ನಾವು ಧಿಕ್ಕರಿಸುತ್ತಿದ್ದೇವೆ ಎಂದು ತಿಳಿಸಿದರು.

    ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ಮುಸಲ್ಮಾನರಿಗೆ ಕೊಡುವ ಮೊತ್ತವನ್ನು 20 ಲಕ್ಷದಿಂದ 30 ಲಕ್ಷ ರೂ.ಗೆ ಏರಿಸಿದ್ದಾರೆ. ಹಿಂದೂಗಳಲ್ಲಿ ಬಡವರಿಲ್ಲವೇ? ಅವರು ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋದರೆ ಅವರಿಗೆ ಹಣಕಾಸಿನ ಅವಶ್ಯಕತೆ ಇಲ್ಲವೇ? ಎಂದು ಕೇಳಿದರು. ಮುಸಲ್ಮಾನ ಹೆಣ್ಮಕ್ಕಳ ಆತ್ಮರಕ್ಷಣೆಗಾಗಿ ಬಜೆಟ್‍ನಲ್ಲಿ ಹಣ ಇಟ್ಟಿದ್ದಾರೆ. ರಾಜ್ಯದಲ್ಲಿ ಲವ್ ಜಿಹಾದ್‍ಗೆ ಬಲಿ ಆಗುತ್ತಿರುವುದು ಹಿಂದೂ ಹೆಣ್ಮಕ್ಕಳೇ ಹೊರತು ಮುಸ್ಲಿಂ ಹೆಣ್ಮಕ್ಕಳಲ್ಲ ಎಂದು ಗಮನ ಸೆಳೆದರು.

    ಮುಸಲ್ಮಾನರ ಓಲೈಕೆ ಮೂಲಕ ಧರ್ಮಗಳ ನಡುವೆ ಬೆಂಕಿ ಹಚ್ಚಲು ಮುಖ್ಯಮಂತ್ರಿಗಳು ಹೊರಟಿದ್ದು, ಇದನ್ನು ನಾವು ವಿರೋಧಿಸುತ್ತೇವೆ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟು ಬಿಜೆಪಿ- ಜೆಡಿಎಸ್ ರಾಜ್ಯವ್ಯಾಪಿ ಹೋರಾಟ ಮಾಡಲಿದೆ. ಓಲೈಕೆ ರಾಜಕಾರಣಕ್ಕೆ ಇತಿಶ್ರೀ ಹಾಕಬೇಕು ಎಂದು ಒತ್ತಾಯಿಸಿದರು.

  • ಹನಿಟ್ರ್ಯಾಪ್‌ ಆಗಿದ್ರೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಿ: ಡಿಕೆಶಿ

    ಹನಿಟ್ರ್ಯಾಪ್‌ ಆಗಿದ್ರೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಿ: ಡಿಕೆಶಿ

    ಮಡಿಕೇರಿ: ಹನಿಟ್ರ್ಯಾಪ್‌ (Honeytrap) ಆಗಿದ್ದರೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

    ಕೊಡಗಿನ ಭಾಗಮಂಡಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹನಿ ಟ್ರ‍್ಯಾಪ್ ಮಾಡುವುದು ಅಲ್ಲ. ಹನಿಟ್ರ‍್ಯಾಪ್ ಆಗುವುದು. ಮಾಡಿದ್ದುಣ್ಣೋ ಮಹರಾಯ, ಅವರು ಮಾಡಿದ್ದು ಅವರಿಗೆ . ಹಾಗೇನಾದರೂ ಆಗಿದ್ದರೆ ದೂರು ನೀಡಲಿ ಕೊಡಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

    ಮುನಿರತ್ನ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿವೇಶನದಲ್ಲಿ ಅವರು ಏನು ಮಾಡಿದ್ದಾರೆ ಎನ್ನುವುದು ದೂರಿನಲ್ಲಿ ಇದೆ. ಬಿಜೆಪಿಯವರೇ ಹೇಳ್ತಿದ್ದಾರೆ ಅಲ್ವಾ ಅಶೋಕ್‌ಗೆ ಏನೋ ಮಾಡಿದ್ದಾರೆ ಅಂತ, ಸುಮ್ಮ ಸುಮ್ಮನೆ ಯಾರಾದರೂ ನಿಮ್ಮ ಹತ್ತಿರಕ್ಕೆ ಬರುತ್ತಾರಾ? ನೀವು ಹಾಯ್ ಎಂದ್ರೆ ಅವರು ಹಾಯ್ ಅಂತಾರೆ ಎಂದು ತಿರುಗೇಟು ನೀಡಿದರು.

    ಬೆಂಗಳೂರಿನ ಸ್ಯಾಂಕಿಕೆರೆಯಲ್ಲಿ ಕಾವೇರಿ ಆರತಿ ಹಿನ್ನೆಲೆಯಲ್ಲಿ ಕಾವೇರಿಗೆ ಪೂಜೆ ಸಲ್ಲಿಸಲು ಭಾಗಮಂಡಲಕ್ಕೆ ಹೆಲಿಕಾಪ್ಟರ್‌ನಲ್ಲಿ ಡಿಕೆಶಿ ಬಂದಿದ್ದಾರೆ. ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಾವೇರಿ ತೀರ್ಥವನ್ನು ಸಂಗ್ರಹ ಮಾಡಿದ್ದಾರೆ. ಕಾವೇರಿ ತೀರ್ಥವನ್ನು ನೇರವಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಸ್ಯಾಂಕಿ ಕೆರೆಯ ಪೂಜೆಯಲ್ಲಿ ಇಂದು ಸಂಜೆ ಡಿಕೆಶಿ ಭಾಗಿಯಾಗಲಿದ್ದಾರೆ.

  • ಮನಿ ಕ್ರೈಸಿಸ್ ಇತ್ತು ಈಗ ಹನಿ ಕ್ರೈಸಿಸ್ ಶುರುವಾಗಿದೆ: ಬೊಮ್ಮಾಯಿ

    ಮನಿ ಕ್ರೈಸಿಸ್ ಇತ್ತು ಈಗ ಹನಿ ಕ್ರೈಸಿಸ್ ಶುರುವಾಗಿದೆ: ಬೊಮ್ಮಾಯಿ

    -`ಕೈ’ ಹಾಕಿದ ಕಡೆಯಲ್ಲ ಹಗರಣ, 2 ವರ್ಷಗಳಲ್ಲಿ 10 ಹಗರಣ ಆಚೆ ಬಂದಿದೆ

    ನವದೆಹಲಿ: ಕಾಂಗ್ರೆಸ್ (Congress) ಸಸರ್ಕಾರ ಹಾಕಿದ ಕಡೆಯಲ್ಲ ಹಗರಣ, 2 ವರ್ಷಗಳಲ್ಲಿ 10 ಹಗರಣ ಆಚೆ ಬಂದಿದೆ ಎಂದು ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ (Basavaraj Bommai) ಹೇಳಿದರು.

    ನವದೆಹಲಿಯಲ್ಲಿ (New Delhi) ಮಾಧ್ಯಮದವರೊಂದಿಗೆ ಜನಪ್ರತಿನಿಧಿಗಳ ಮೇಲೆ ಹನಿಟ್ರ‍್ಯಾಪ್ ವಿಚಾರವಾಗಿ ಮಾತನಾಡಿದ ಅವರು, ಹನಿಟ್ರ‍್ಯಾಪ್ ಕುಖ್ಯಾತಿ ಕರ್ನಾಟಕದ ಗೌರವವನ್ನು ಕಡಿಮೆ ಮಾಡಿದೆ. ಇದನ್ನು ಬಹಳ ಸೂಕ್ಷ್ಮವಾಗಿ ಹೇಳುತ್ತಿದ್ದೇನೆ. ಕಾಂಗ್ರೆಸ್‌ನ ಅಧಿಕಾರದ ಲಾಲಸ್ಯ ನೈತಿಕತೆಯನ್ನು ಅಧೋಗತಿಗೆ ತೆಗೆದುಕೊಂಡಿದೆ. ಒಂದು ಹಗರಣದಿಂದ ಮತ್ತೊಂದು ಹಗರಣ ಆಗುತ್ತಿದೆ. ಎರಡು ವರ್ಷದಲ್ಲಿ ಹತ್ತು ಹಗರಣ ಆಚೆ ಬಂದಿದೆ. ಕೈ ಹಾಕಿದ ಕಡೆಯಲ್ಲ ಹಗರಣ ಬರುತ್ತಿದೆ ಎಂದರು.ಇದನ್ನೂ ಓದಿ:ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕ ಸಾವು

    ವಿಧಾನಸಭೆಯಲ್ಲಿ ನೈತಿಕ ಅಧಪತನ ನೋಡಿದ್ದೇವೆ. ಮನಿ ಕ್ರೈಸಿಸ್ ಇತ್ತು ಈಗ ಹನಿ ಕ್ರೈಸಿಸ್ ಶುರುವಾಗಿದೆ. ಸರ್ಕಾರ ಆರ್ಥಿಕವಾಗಿ, ನೈತಿಕವಾಗಿ ದಿವಾಳಿಯಾಗಿದೆ. ಕ್ಯಾಬಿನೆಟ್ ಸಚಿವರು ಹಬಿಟ್ರ‍್ಯಾಪ್ ಆಗುತ್ತಿದೆ ಎಂದು ಹೇಳುವ ಪರಿಸ್ಥಿತಿ ಬಂದಿದೆ. ಹದಿನೈದು ದಿನದಿಂದ ವಿಧಾನಸೌಧದ ಮೊಗಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಇಂತಹ ಕ್ಯಾಬಿನೆಟ್‌ಗೆ ಏನು ಹೇಳಬೇಕು. ಇದು ನೈತಿಕತೆ ಕಳೆದುಕೊಂಡ ಕ್ರಿಮಿನಲ್ ಕ್ಯಾಬಿನೆಟ್. ಸಿಎಂ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು ಎಂದು ಕಿಡಿಕಾರಿದರು.

    48 ಜನರ ಸಿಡಿ ಎಂದು ರಾಜಣ್ಣ ಹೇಳಿದ್ದಾರೆ, ಅವರಿಗೆ ಮಾಹಿತಿ ಇದ್ದರೆ ಅವರು ಎಲ್ಲ ಮಾಹಿತಿಯನ್ನು ಕೊಡಬೇಕು. ಪೂರ್ಣ ಪ್ರಮಾಣದ ತನಿಖೆಯಾಗಬೇಕು. ಇದನ್ನು ಯಾರೇ ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು. ಈಗ ಎಸ್‌ಐಟಿಗಳಿಗೆ ಮಹತ್ವವಿಲ್ಲ. ಹೀಗಾಗಿ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ತಿಳಿಸಿದರು.ಇದನ್ನೂ ಓದಿ:ಸಿಎಂ ಕುರ್ಚಿಗಾಗಿ ಹನಿಟ್ರ‍್ಯಾಪ್ – ಸರ್ಕಾರದಲ್ಲಿ ದಲಿತ ಮಂತ್ರಿಗೆ ರಕ್ಷಣೆ ಇಲ್ಲ: ಅಶೋಕ್‌

  • ಸಿಎಂ ಕುರ್ಚಿಗಾಗಿ ಹನಿಟ್ರ‍್ಯಾಪ್ – ಸರ್ಕಾರದಲ್ಲಿ ದಲಿತ ಮಂತ್ರಿಗೆ ರಕ್ಷಣೆ ಇಲ್ಲ: ಅಶೋಕ್‌

    ಸಿಎಂ ಕುರ್ಚಿಗಾಗಿ ಹನಿಟ್ರ‍್ಯಾಪ್ – ಸರ್ಕಾರದಲ್ಲಿ ದಲಿತ ಮಂತ್ರಿಗೆ ರಕ್ಷಣೆ ಇಲ್ಲ: ಅಶೋಕ್‌

    ಬೆಂಗಳೂರು: ಸಿಎಂ ಕುರ್ಚಿಗಾಗಿ ಹನಿಟ್ರ‍್ಯಾಪ್ (Honeytrap) ಯತ್ನ ನಡೆದಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ (R Ashok) ಗಂಭೀರ ಆರೋಪ ಮಾಡಿದ್ದಾರೆ.

    ವಿಧಾನಸಭಾ ಕಲಾಪ ಮುಂದೂಡಿದ ಬಳಿಕ ಹೊರಗಡೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಣ್ಣ (Rajanna) ಸಾಮಾನ್ಯ ವ್ಯಕ್ತಿಯಲ್ಲ. ಅವರು ಸರ್ಕಾರದ ಮಂತ್ರಿಯಾಗಿದ್ದಾರೆ. ಅವರೇ ಸದನದಲ್ಲಿ ಆರೋಪ ಮಾಡಿದ್ದಾರೆ. ಈ ಸರ್ಕಾರದಲ್ಲಿ ದಲಿತ ಮಂತ್ರಿಗಳಿಗೆ ರಕ್ಷಣೆ ಇಲ್ಲ ಎಂದು ಕಿಡಿಕಾರಿದರು.

     

    ರಾಜಣ್ಣ ಅವರೇ ಸದನದಲ್ಲಿ 48 ಜನರ ಮೇಲೆ ಹನಿಟ್ರ‍್ಯಾಪ್ ಆಗಿದೆ ಅಂದಿದ್ದಾರೆ. ಈ ಆರೋಪಕ್ಕೆ ಸಿಎಂ ಸರಿಯಾಗಿ ಉತ್ತರ ನೀಡಿಲ್ಲ. ಇದು ಗಂಭೀರ ಪ್ರಕರಣ, ಎಲ್ಲ ಶಾಸಕರ, ಸದನದ, ರಾಜ್ಯದ ಗೌರವದ ಪ್ರಶ್ನೆ. ಸಿಬಿಐ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

    ಹನಿಟ್ರ‍್ಯಾಪ್ ವಿಚಾರ ಸದನದಲ್ಲಿ ಪ್ರಸ್ತಾಪ ಆಗಿದ್ದು ಒಂದು ಗ್ಯಾಂಗ್‌ ಮಾಡಿದೆ ಎಂದು ಹೇಳಿದ್ದಾರೆ. ಏನಿದು ಕಳ್ಳಾಟ ನಡೆಯುತ್ತಿದ್ಯಾ? ರಾಜಣ್ಣ ಹೇಳಿಕೆ ಸದನದ ಆಸ್ತಿ ಎಂದರು.

  • ಇದೂ ಒಂದು ಬದುಕೆ? – ಡಿಕೆಶಿ ವಿರುದ್ಧ ಹೆಚ್‌ಡಿಕೆ ಕಿಡಿ

    ಇದೂ ಒಂದು ಬದುಕೆ? – ಡಿಕೆಶಿ ವಿರುದ್ಧ ಹೆಚ್‌ಡಿಕೆ ಕಿಡಿ

    ಬೆಂಗಳೂರು: ಅಹೋರಾತ್ರಿಯೂ ದ್ರೋಹ ಚಿಂತನೆ, ವಿಶ್ವಾಸದ್ರೋಹ, ಉಂಡ ಮನೆಗೆ ಕನ್ನ, ಸ್ವಪಕ್ಷೀಯರಿಗೇ ಗುನ್ನ, ಇದೂ ಒಂದು ಬದುಕೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.

    ಹನಿಟ್ರ‍್ಯಾಪ್ ವಿಷಯವಾಗಿ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ ಅವರು, ಪರೋಕ್ಷವಾಗಿ ಡಿಕೆಶಿ (DK Shivakumar) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ಮತ್ತೆ ಸರಣಿ ವಾಯುದಾಳಿ – ಗಾಜಾದಲ್ಲಿ ಕನಿಷ್ಠ 70 ಮಂದಿ ಪ್ಯಾಲೆಸ್ತೀನಿಯರು ಸಾವು!

    ಟ್ವೀಟ್‌ನಲ್ಲಿ ಏನಿದೆ?
    ಮರ್ಯಾದೆಗೇಡಿ, ಕಿಡಿಗೇಡಿ ನನ್ನ ಮೇಲೆ ಮತ್ತೆ ವಿಷ ಕಕ್ಕಿರುವುದು ಹತಾಶೆ ಅಷ್ಟೇ. ಆಕಾಶಕ್ಕೆ ಉಗಿದರೆ ಮುಖದ ಮೇಲೆಯೇ ಬೀಳುತ್ತದೆ ಮಂಕೆ. ಇಷ್ಟೂ ಸಾಮಾನ್ಯಜ್ಞಾನವೂ ಇಲ್ಲವೇ? ಕುಂಬಳಕಾಯಿ ಕಳ್ಳನಿಗೆ ಕೋಪ ಬಂದಿದೆ. ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿರುವ ವಿಷಸರ್ಪ ನನ್ನಡೆಗೆ ನಾಲಿಗೆ ಚಾಚಿದೆ. ಇಂಥ ಕ್ರಿಮಿನಲ್ ಒಬ್ಬ ಕೆಟ್ಟ ಅಲೋಚನೆಗಳಲ್ಲಿ ದಿನಪೂರ್ತಿ ಮುಳುಗಿರುವುದು ಸಹಜ. ಕ್ರಿಮಿನಲ್‌ನ ಚಾಳಿಯೇ ಧಮ್ಕಿ ಹಾಕುವುದು. ವಿಷಕ್ರಿಮಿಯ ಕೆಲಸ ಎಲ್ಲರನ್ನೂ ಕಚ್ಚುವುದು. ಇದರಲ್ಲಿ ನನಗೇನೂ ಅಚ್ಚರಿ ಇಲ್ಲ. ಇದನ್ನೂ ಓದಿ: ಏಪ್ರಿಲ್ 2ರಿಂದಲೇ ಭಾರತದ ಮೇಲಿನ ಉತ್ಪನ್ನಗಳಿಗೆ ಸುಂಕ: ಟ್ರಂಪ್

    ನಾನು ಭೂ ಒತ್ತುವರಿ ಮಾಡಿದ್ದೇನೋ ಇಲ್ಲವೋ ಕಾನೂನು ವ್ಯಾಪ್ತಿಯಲ್ಲಿ ತೀರ್ಮಾನವಾಗುತ್ತದೆ. ಈಗ ನನ್ನ ಮರ್ಯಾದೆ ವಿಷಯ ಇರಲಿ, ಇವತ್ತು ಸ್ವಪಕ್ಷೀಯರೇ ಈ ಮರ್ಯಾದೆಗೇಡಿಯ ಮಾನವನ್ನು ವಿಧಾನಸೌಧದಲ್ಲಿಯೇ ಹರಾಜು ಹಾಕಿದ್ದಾರೆ. ಅದಕ್ಕೆ ಉತ್ತರವೇನು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಾನೇನು ಶ್ರೀರಾಮಚಂದ್ರ ಅಲ್ಲ – ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಕೆ.ಎನ್‌ ರಾಜಣ್ಣ ಆಗ್ರಹ

  • ನಾನೇನು ಶ್ರೀರಾಮಚಂದ್ರ ಅಲ್ಲ – ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಕೆ.ಎನ್‌ ರಾಜಣ್ಣ ಆಗ್ರಹ

    ನಾನೇನು ಶ್ರೀರಾಮಚಂದ್ರ ಅಲ್ಲ – ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಕೆ.ಎನ್‌ ರಾಜಣ್ಣ ಆಗ್ರಹ

    – ಪ್ರಜ್ವಲ್‌, ರೇವಣ್ಣ ಸೇರಿ 48 ಮುಖಂಡರ ಪೆನ್‌ಡ್ರೈವ್‌ ಮಾಡಿದ್ದಾರೆ ಎಂದ ಸಚಿವ

    ಬೆಂಗಳೂರು: ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi), ಪ್ರಜ್ವಲ್‌ ರೇವಣ್ಣ ಸೇರಿ 48 ಮುಖಂಡರ ವಿರುದ್ಧ ಪೆನ್‌ಡ್ರೈವ್‌ ತಯಾರು ಮಾಡಲಾಗಿದೆ. ಇದರಲ್ಲಿ ಬೇರೆ ರಾಜ್ಯದ ಸಚಿವರು, ಜಡ್ಜ್‌ಗಳು ಇದ್ದಾರೆ. ಇಂತಹ ಬ್ಲ್ಯಾಕ್‌ಮೇಲ್‌ ಸಂಪೂರ್ಣ ಅಂತ್ಯವಾಗಬೇಕು. ಅದಕ್ಕಾಗಿ ಈ ಪ್ರಕರಣ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಸಚಿವ ಕೆ.ಎನ್‌ ರಾಜಣ್ಣ (KN Rajanna) ಆಗ್ರಹಿಸಿದರು.

    ವಿಧಾನಸೌಧದಲ್ಲಿ (Vidhana Soudha) ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಯತ್ನಾಳ್ ಅವರು ನನ್ನ ಹೆಸರು ನಿರ್ಧಿಷ್ಟವಾಗಿ ತೆಗೆದುಕೊಂಡರು, ಅದಕ್ಕೆ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಹಾಸನದ ರೇವಣ್ಣ ಇರಬಹುದು, ಪ್ರಜ್ವಲ್ ರೇವಣ್ಣ ಇರಬಹುದು. ಹಾಗೇ ಮಾಜಿ ಶಾಸಕರ ಪೆನ್ ಡ್ರೈವ್ ಸೇರಿದಂತೆ ಅಶ್ಲೀಲ ಪೆನ್‌ಡ್ರೈವ್‌ಗಳನ್ನ ತಯಾರು ಮಾಡಿದ್ದಾರೆ. ಈ ಬ್ಲಾಕ್ ಮೇಲ್‌ ಸಂಪೂರ್ಣವಾಗಿ ಅಂತ್ಯವಾಗಬೇಕು. ಹಾಗಾಗಿ ತನಿಖೆ ಸ್ವರೂಪದ ಬಗ್ಗೆ ಗೃಹ ಸಚಿವರ ಜೊತೆಗೆ ಮಾತಾಡುತ್ತೇನೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಇದು ಆಗಬೇಕು ಎಂದು ಒತ್ತಾಯಿಸಿದರು.

    ಇತ್ತೀಚೆಗೆ ಪೆನ್ ಡ್ರೈವ್, ಮನುಷ್ಯರ ತೇಜೊವಧೆ ಮಾಡೋದು ನಡೆದಿದೆ. ರಮೇಶ್ ಜಾರಕಿಹೊಳಿ, ಹೆಚ್‌.ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಗಳ ಬಗ್ಗೆ ತಡೆಯಾಜ್ಞೆ ತಂದಿದ್ದಾರೆ. ಇದೆಲ್ಲಾ ಸೆರಿದ್ರೆ 48 ಜನರ ಪೆನ್‌ಡ್ರೈವ್ ತಯಾರು ಮಾಡಿದ್ದಾರೆ. ಎಸ್‌ಐಟಿ ಎಲ್ಲಾ ಮಾಮುಲಾಗಿದೆ, ಈ ರೀತಿ ಬ್ಲ್ಯಾಕ್‌ಮೇಲ್‌ ಸಂಸ್ಕೃತಿ ಅಂತ್ಯವಾಗಬೇಕಾದ್ರೆ ಉನ್ನತಮಟ್ಟದ ತನಿಖೆಯಾಗಿ ಅಪಾದಿತರ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

    ನಾಳೆ ಸಿಎಂಗೆ ದೂರು:
    ಹನಿಟ್ರ್ಯಾಪ್‌ ಪ್ರಯತ್ನ ನಡೆದಿರೋದು ನಿಜ. ಹೇಳಿಕೊಳ್ಳೋಕೆ ನಾಚಿಕೆ ಏನಿಲ್ಲ. ನಾನೇನು ಶ್ರೀರಾಮಚಂದ್ರನೂ ಅಲ್ಲ, ಸಿಎಂ ಭೇಟಿ ಮಾಡಿ ನಾಲೆ ದೂರು ಕೊಡುತ್ತೇ ಎಂದು ಕೆ.ಎನ್ ರಾಜಣ್ಣ ತಿಳಿಸಿದರು.

  • ಸಚಿವರ ಮೇಲೆ 2 ಸಲ ಹನಿಟ್ರ್ಯಾಪ್ ಯತ್ನ – ಸತೀಶ್ ಜಾರಕಿಹೊಳಿ ಬಾಂಬ್

    ಸಚಿವರ ಮೇಲೆ 2 ಸಲ ಹನಿಟ್ರ್ಯಾಪ್ ಯತ್ನ – ಸತೀಶ್ ಜಾರಕಿಹೊಳಿ ಬಾಂಬ್

    ಬೆಂಗಳೂರು: ಪ್ರಭಾವಿ ಸಚಿವರ ಹನಿಟ್ರ್ಯಾಪ್‌ಗೆ ಯತ್ನ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಬಾಂಬ್ ಹಾಕಿದ್ದಾರೆ.

    ಹನಿಟ್ರ್ಯಾಪ್ (Honeytrap) ಪ್ರಯತ್ನದ ಬಗ್ಗೆ ಖಚಿತಪಡಿಸಿದ ಸತೀಶ್ ಜಾರಕಿಹೊಳಿ, ಸಚಿವರ ಮೇಲೆ ಎರಡು ಸಲ ಹನಿ ಟ್ರ್ಯಾಪ್ ಆಗಿದೆ. ಅದನ್ನ ಕೆಲವರು ಬಂಡವಾಳ ‌ಮಾಡಿಕೊಂಡಿದ್ದಾರೆ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪಬ್‌ಗಳಿಗೆ ಮಧ್ಯರಾತ್ರಿ 1 ಗಂಟೆವರೆಗೂ ಅವಕಾಶ? – ಡಿಕೆಶಿ ಸುಳಿವು

    ಸಂಬಂಧಪಟ್ಟ ಸಚಿವರಿಗೆ ದೂರು ಕೊಡಲು ಹೇಳಿದ್ದೀನಿ. ಇದಕ್ಕೆ ‌ಕಡಿವಾಣ ಹಾಕಬೇಕು. ಇದರಲ್ಲಿ ‌ನಮ್ಮವರು ಅಷ್ಟೇ ಅಲ್ಲ, ಬೇರೆ ಪಕ್ಷದ ನಾಯಕರು ಹನಿ ಟ್ರ್ಯಾಪ್ ನಲ್ಲಿ ಸಿಲುಕಿದ್ದಾರೆ. ಇದು ಇಲ್ಲಿಗೆ ನಿಲ್ಲಬೇಕು, ಈ ವಿಚಾರವಾಗಿ ಸಿಎಂ ಮತ್ತು ಗೃಹ ಸಚಿವರ ಜೊತೆ ಮಾತನಾಡಿದ್ದೇನೆ ಅಂತೇಳಿದ್ರು. ಇದನ್ನೂ ಓದಿ: ಮಾರ್ಚ್ 22ರ ಕರ್ನಾಟಕ ಬಂದ್‌ಗೆ ಸರ್ಕಾರದ ಬೆಂಬಲ ಇಲ್ಲ: ಡಿಕೆಶಿ

    ಸಚಿವ ರಾಜಣ್ಣ ಬಾಂಬ್‌:
    ರಾಜ್ಯದ 48 ರಾಜಕೀಯ ಮುಖಂಡರ ಸಿ.ಡಿ, ಪೆನ್‌ಡ್ರೈವ್‌ ತಯಾರಾಗಿದೆ. ನನ್ನ ಮೇಲೂ ಹನಿಟ್ರ್ಯಾಪ್‌ (Honeytrap) ಯತ್ನ ನಡೆದಿದೆ ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ (KN Rajanna) ಸ್ಫೋಟಕ ಮಾಹಿತಿ ನೀಡಿದರು. ಇದನ್ನೂ ಓದಿ: ನನ್ನ ಮೇಲೆ ಹನಿಟ್ರ್ಯಾಪ್‌ಗೆ ಯತ್ನ ಆಗಿದೆ – ಸದನದಲ್ಲೇ ಸಚಿವ ಕೆ.ಎನ್‌ ರಾಜಣ್ಣ ಬಾಂಬ್‌

    ವಿಧಾನಸಭೆಯಲ್ಲಿ (Vidhan Sabha) ಗುರುವಾರ ಮಾತನಾಡಿದ ಅವರು, ಇದರ ಬಗ್ಗೆ ದೂರು ಕೊಡುತ್ತೇನೆ. ಗೃಹ ಸಚಿವರು ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು. ಬಜೆಟ್ ಭಾಷಣದ (Budget Speech) ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಯತ್ನಾಳ್, ರಾಜ್ಯದಲ್ಲಿ ಸಹಕಾರಿ ಸಚಿವರ ಮೇಲೆ ಹನಿಟ್ರ್ಯಾಪ್ ಮಾಡುವ ಪ್ರಯತ್ನ ಮಾಡಲಾಗಿದೆ. ಇದೊಂದು ಕೆಟ್ಟ ಸಂಸ್ಕೃತಿ. ಜನ ಪ್ರತಿನಿಧಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪ್ರಸ್ತಾಪಿಸಿದರು. ಈ ಬೆನ್ನಲ್ಲೇ ಸತಿಶ್‌ ಜಾರಕಿಹೊಳಿ ಸಹ ಶಾಕಿಂಗ್‌ ಹೇಳಿಕೆ ನೀದರು.