ಬೆಂಗಳೂರು: ಕಳೆದ ವಿಧಾನಸಭಾ ಅಧಿವೇಷನದ ವೇಳೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಸಚಿವ ಕೆ.ಎನ್.ರಾಜಣ್ಣ (K.N.Rajanna) ಹನಿಟ್ರ್ಯಾಪ್ ಯತ್ನ ಪ್ರಕರಣದಲ್ಲಿ ಯಾವುದೇ ಸಾಕ್ಷಿಗಳು ಇಲ್ಲ, ಕೇಸಲ್ಲಿ ಹುರುಳಿಲ್ಲ ಎಂದು ಸಿಐಡಿ ಷರಾ ಬರೆದಿದೆ.
ಸಾಕ್ಷ್ಯಾಧಾರಗಳ ಕೊರತೆಯಿಂದ ಕೇಸಲ್ಲಿ ಹುರುಳಿಲ್ಲ ಅಂತಾ ಡಿಜಿ & ಐಜಿಪಿಗೆ ರಿಪೋರ್ಟ್ ನೀಡಲಾಗಿದೆ. ಕಳೆದ ವಿಧಾನಸಭಾ ಅಧಿವೇಶನದಲ್ಲಿ ಹನಿಟ್ರ್ಯಾಪ್ ಯತ್ನವಾಗಿತ್ತು ಎಂದು ಸಚಿವ ರಾಜಣ್ಣ ಸದನದಲ್ಲೇ ಹೇಳಿದ್ದರು. ಸೂಕ್ತ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ರಾಜಣ್ಣ ದೂರು ನೀಡಿದ್ದರು. ಗೃಹ ಸಚಿವರಿಗೆ ನೀಡಿದ ದೂರನ್ನ ಆಧರಿಸಿ ಸಿಐಡಿಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಸಚಿವ ರಾಜಣ್ಣ ಹೇಳಿಕೆ ದಾಖಲಿಸಿ ಸಿಐಡಿ ಸ್ಥಳ ಮಹಜರು ನಡೆಸಿತ್ತು. ಇದನ್ನೂ ಓದಿ: ಹನಿಟ್ರ್ಯಾಪ್ ಮಾಡಲು ಬಂದವರಿಗೆ ಕಪಾಳಕ್ಕೆ ಹೊಡೆದಿದ್ದು ನಿಜ – ವಿಷ ಕನ್ಯೆಯರ ರಹಸ್ಯ ಹೇಳಿದ ರಾಜಣ್ಣ
ತನಿಖೆಯಲ್ಲಿ ಹನಿಟ್ರ್ಯಾಪ್‌ಗೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ ಎಂದು ರಿಪೋರ್ಟ್ ಸಲ್ಲಿಕೆ ಮಾಡಿದೆ. ಹನಿಟ್ರ್ಯಾಪ್ ಬಗ್ಗೆ ತನಿಖೆ ನಡೆಸಿದ್ದ ಡಿವೈಎಸ್‌ಪಿ ಕೇಶವ ಮೂರ್ತಿ ಮತ್ತು ತಂಡ ವರದಿ ನೀಡಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಸೂರತ್‌ನಲ್ಲಿ ಓರ್ವ ಬಿಲ್ಡರ್‌ನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು, ಬಳಿಕ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದಳು. ಅದಾದ ನಂತರ ಕೋಟ್ಯಂತರ ರೂ.ಗೆ ಬೇಡಿಕೆ ಇಟ್ಟಿದ್ದಳು. ಈ ಕುರಿತು ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಿ ಕೀರ್ತಿ ತಲೆಮರೆಸಿಕೊಂಡಿದ್ದಳು. ಎಫ್‌ಐಆರ್‌ನಲ್ಲಿ ಎ1 ಆರೋಪಿಯ ಹೊರತಾಗಿ ಇನ್ನೂ ನಾಲ್ವರ ಹೆಸರನ್ನು ಉಲ್ಲೇಖಿಸಲಾಗಿತ್ತು. ಆ ನಾಲ್ವರನ್ನು ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಬಂಧಿಸಲಾಗಿತ್ತು. ಇದಲ್ಲದೇ ಸುಲಿಗೆ ಹಾಗೂ ಭೂಕಬಳಿಕೆ ಆರೋಪಗಳು ಆಕೆಯ ಮೇಲಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಈ ಕುರಿತು ಉಪಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಮಾತನಾಡಿ, ಪ್ರಕರಣ ದಾಖಲಾದ ಸ್ವಲ್ಪ ಸಮಯದ ನಂತರ ಸೂರತ್ ನ್ಯಾಯಾಲಯ ಆರೋಪಿಯ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ತಲೆಮರೆಸಿಕೊಂಡಿದ್ದ ಆರೋಪಿ ಕೀರ್ತಿ ಪಟೇಲ್‌ನ್ನು ಪತ್ತೆಹಚ್ಚಲು ಕಳೆದ 10 ತಿಂಗಳಿನಿಂದ ಪ್ರಯತ್ನಿಸುತ್ತಿದ್ದೆವು. ಆರೋಪಿ ಪೊಲೀಸರಿಗೆ ದಾರಿ ತಪ್ಪಿಸುವ ಉದ್ದೇಶದೊಂದಿಗೆ ದಿನೇ ದಿನೇ ಊರು ಬದಲಾಯಿಸುವುದು, ಸಿಮ್ ಕಾರ್ಡ್ ಬದಲಾಯಿಸುವುದನ್ನು ಮಾಡುತ್ತಿದ್ದಳು. ನಮ್ಮ ತಾಂತ್ರಿಕ ತಂಡ, ಸೈಬರ್ ತಜ್ಞರು ಹಾಗೂ ಬೇರೆ ಬೇರೆ ಪೊಲೀಸ್ ಠಾಣೆಯೊಂದಿಗೆ ಸಂಪರ್ಕದಲ್ಲಿದ್ದ ನಾವು ಕೊನೆಗೆ ಇನ್‌ಸ್ಟಾಗ್ರಾಂ ಸಹಾಯದಿಂದ ಆರೋಪಿಯನ್ನು ಅಹಮದಾಬಾದ್‌ನ ಸರ್ಖೇಜ್ ಪ್ರದೇಶದಲ್ಲಿ ಪತ್ತೆಹಚ್ಚಿದ್ದೇವೆ ಎಂದು ತಿಳಿಸಿದ್ದಾರೆ.
ಸದ್ಯ ಆರೋಪಿಯ ಹೇಳಿಕೆಗಳನ್ನು ದಾಖಲಿಸಿ, ತನಿಖೆ ಮುಂದುವರಿಸಿದ್ದೇವೆ. ಜೊತೆಗೆ ಸಾರ್ವಜನಿಕರು ಸುಲಿಗೆಯಂತಹ ಯಾವುದೇ ತೊಂದರೆಯಲ್ಲಿ ಸಿಲುಕಿಕೊಂಡಿದ್ದರೂ ಪೊಲೀಸ್ ಠಾಣೆಗೆ ಹಾಗೂ ಎಸಿಪಿ, ಡಿಸಿಪಿ ಕಚೇರಿಗೆ ದೂರು ಸಲ್ಲಿಸಿ ಎಂದು ಹೇಳಿದ್ದಾರೆ.ಇದನ್ನೂ ಓದಿ: Israel-Iran Conflict – ಇರಾನ್‍ನಿಂದ ದೆಹಲಿ ತಲುಪಿದ 110 ಭಾರತೀಯರು
ಹೈಕಮಾಂಡ್ ಭೇಟಿ ವೇಳೆ ರಾಜಣ್ಣ ಹನಿಟ್ರ್ಯಾಪ್ ರಾಜಕೀಯ ಬೆಳವಣಿಗೆಗಳ ಬಗ್ಗೆ ವರದಿ ನೀಡಲಿದ್ದು, ಹೈಕಮಾಂಡ್ ಅನುಮತಿ ಕೊಟ್ಟರಷ್ಟೇ ಉನ್ನತ ಮಟ್ಟದ ತನಿಖೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯಷ್ಟೇ ನಡೆಸಿ ಪ್ರಕರಣ ಕೈಬಿಡುವ ತಂತ್ರ ಇದ್ದು, ಹೈಕಮಾಂಡ್ ಸೂಚನೆಯಂತೆ ಮುಂದುವರಿಯಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ, ತೆರವಾಗಿರುವ ನಾಲ್ಕು ಪರಿಷತ್ ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಕುರಿತು ಚರ್ಚೆ ನಡೆಸಲಿದ್ದು, ಪಕ್ಷ ನಿಷ್ಠರು, ಸಮುದಾಯವಾರು ಆಯ್ಕೆ ವಿಚಾರದಲ್ಲಿ ಆಪ್ತರ ಪರ ಸಿದ್ಧರಾಮಯ್ಯ ಬ್ಯಾಟಿಂಗ್ ನಡೆಸುವ ಸಾಧ್ಯತೆ ಇದೆ. ಅಲ್ಲದೇ, ಸಂಪುಟ ಪುನಾರಚನೆ ಕುರಿತು ಹೈಕಮಾಂಡ್‌ಗೆ ಸಿಎಂ ಸ್ಪಷ್ಟನೆ ನೀಡುವ ಸಾಧ್ಯತೆ ಇದ್ದು, 30 ತಿಂಗಳವರೆಗೆ ಯಾವುದೇ ಕಾರಣಕ್ಕೂ ಸಂಪುಟ ಪುನಾರಚನೆ ಬೇಡ ಅಂತಿರುವ ಸಿಎಂ ಹೈಕಮಾಂಡ್‌ಗೂ ಮನವರಿಕೆ ಮಾಡಬಹುದು ಎನ್ನಲಾಗಿದೆ. ಇದನ್ನೂ ಓದಿ: ಹನಿಟ್ರ್ಯಾಪ್ ಕುರಿತು ಸಿಬಿಐ ಅಥವಾ ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಲಿ: ಎನ್.ರವಿಕುಮಾರ್
ಬೆಂಗಳೂರು: ಸಚಿವರ ಹನಿಟ್ರ‍್ಯಾಪ್ ಕೇಸ್‌ನ ಟೀಸರ್‌ನಲ್ಲಿ ಒಂದು ತೋರಿಸಿ, ಸಿನಿಮಾವನ್ನು ಬೇರೆಯದ್ದೇ ರೀತಿಯಲ್ಲಿ ತೋರಿಸುವ ಕೆಲಸ ಆಗುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆರೋಪ ಮಾಡಿದ್ದಾರೆ.
ಹನಿಟ್ರ‍್ಯಾಪ್ ಕೇಸ್ (HoneyTrap Case) ಸಂಬಂಧ ಜೆಡಿಎಸ್ (JDS) ಕಚೇರಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಸಚಿವರೇ ಸದನದ ಒಳಗೆ ಹನಿಟ್ರ‍್ಯಾಪ್ ಬಗ್ಗೆ ಆರೋಪ ಮಾಡಿದ್ದರು. ಈಗ ಅವರ ಮಗ ಕೊಲೆ ಕೇಸ್ ಬಗ್ಗೆ ಆರೋಪ ಮಾಡಿದ್ದಾರೆ. ಇದೆಲ್ಲವನ್ನೂ ರಾಜ್ಯದ ಜನರಿಗೆ ಬಿಡುತ್ತೇನೆ. ಮೊದಲು ಸಿನಿಮಾ ಟೀಸರ್ ತೋರಿಸಿದರು. ಆದರೆ ಒಳಗೆ ಸಿನಿಮಾ ಬೇರೆಯೇ ಆಗಿದೆ. ಅದೇನು ಅಂತ ಅವರಿಗೆ ಬಿಡುತ್ತೇನೆ. ಹನಿಟ್ರ‍್ಯಾಪ್ ಪ್ರಜಾಪ್ರಭುತ್ವಕ್ಕೆ ಮಾರಕ. ವಿಧಾನಸೌಧದಲ್ಲಿ ಹನಿಟ್ರ‍್ಯಾಪ್ ಬಗ್ಗೆ ಪ್ರಸ್ತಾಪ ಆಗುವುದು ಅತ್ಯಂತ ಮಾರಕವಾದ ವಿಚಾರ. ಯಾವುದೋ ಸ್ಥಾನದ ಮೇಲೆ ಅಪೇಕ್ಷೆ ಇಟ್ಟವರು ಹೀಗೆ ಅಡ್ಡದಾರಿ ಹಿಡಿದಿದ್ದಾರೆ. ವಾಮಮಾರ್ಗದಲ್ಲಿ ತೇಜೋವಧೆ ಮಾಡೋದು ಸರಿಯಲ್ಲ. ಇದು ಸಮಾಜಕ್ಕೆ ಮಾರಕ ಎಂದು ತಿಳಿಸಿದರು.ಇದನ್ನೂ ಓದಿ:ಸಿದ್ದರಾಮಯ್ಯಗೂ ಔರಂಗಜೇಬ್‌ಗೂ ಯಾವುದೇ ವ್ಯತ್ಯಾಸ ಇಲ್ಲ: ಹರೀಶ್ ಪೂಂಜಾ
ಹನಿಟ್ರ‍್ಯಾಪ್ ಯಾರು ಮಾಡಿದ್ದಾರೆ ಎಂದು ಸರ್ಕಾರ ನಡೆಸುತ್ತಿರುವವರು ಹೇಳಬೇಕು. ಪಾರದರ್ಶಕವಾಗಿ ತನಿಖೆ ಮಾಡಿ ಸರ್ಕಾರ ಹನಿಟ್ರ‍್ಯಾಪ್ ಬಗ್ಗೆ ಜನರ ಮುಂದೆ ಇಡಲಿ. ಪ್ರಭಾವಿ ಸಚಿವರಿಗೆ ಹನಿಟ್ರ‍್ಯಾಪ್ ಆಗಿದೆ. ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಅವರೇ ಸರ್ಕಾರ ನಡೆಸುತ್ತಿದ್ದಾರೆ. ಅವರೇ ತನಿಖೆ ಮಾಡಿ ಸತ್ಯಾಸತ್ಯಾತೆ ಹೊರಗೆ ಇಡಲಿ ಎಂದು ಆಗ್ರಹಿಸಿದರು.
ಹನಿಟ್ರ‍್ಯಾಪ್ ಕೇಸ್‌ನ ತನಿಖೆ ನಿಧಾನವಾಗುತ್ತಿದೆ. ಸರ್ಕಾರ 2 ವರ್ಷಗಳಲ್ಲಿ ವಿರೋಧ ಪಕ್ಷದವರನ್ನ ಮುಗಿಸಲು ಯಾವ ಮಟ್ಟಕ್ಕೆ ಬೇಕಾದರೂ ಇಳಿದು ಕೆಲಸ ಮಾಡಿದೆ. ಆದರೆ ಹನಿಟ್ರ‍್ಯಾಪ್ ಕೇಸ್‌ನಲ್ಲಿ ಯಾಕೆ ತನಿಖೆ ನಿಧಾನವಾಗುತ್ತಿದೆ. ಸಿಟಿ ರವಿ (CT Ravi) ಕೇಸ್‌ನಲ್ಲಿ ಅಷ್ಟೊಂದು ಆಸಕ್ತಿವಹಿಸಿ ಏನೇನೋ ಮಾಡಿದರು. ಅವರೇನು ಭಯೋತ್ಪಾದಕರಾ? ಅಷ್ಟೊಂದು ಹೈಡ್ರಾಮಾ ಮಾಡೋಕೆ? ಆದರೆ ಹಾಗೆ ಎಂಎಲ್‌ಸಿ (MLC) ಒಬ್ಬರನ್ನ ನಡೆಸಿಕೊಂಡಿದ್ದು ಸರಿಯಲ್ಲ. ವಿಪಕ್ಷಗಳನ್ನು ಹಾಗೇ ನಡೆಸಿಕೊಳ್ಳುವವರು, ಸಚಿವರ ಮೇಲೆ ಆರೋಪ ಮಾಡಿದರೆ ಯಾಕೆ ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ:1 ಮುತ್ತಿಗೆ 50 ಸಾವಿರ, ಫುಲ್ ಕೋ ಆಪರೇಷನ್‌ಗೆ 15 ಲಕ್ಷ – ಟೀಚರಮ್ಮನ 1 ಮುತ್ತಿನ ಕಥೆ ಓದಿ
ತುಮಕೂರು: ಎಂಎಲ್‌ಸಿ ರಾಜೇಂದ್ರ (MLC Rajendra) ಹತ್ಯೆಗೆ ಸುಪಾರಿ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಅಲ್ಲದೇ, ಈ ಪ್ರಕರಣ ಕ್ಷಣಕ್ಕೊಂದು ಟ್ವಿಸ್ಟ್ ಕೂಡ ಪಡೆಯುತ್ತಿದೆ. 17 ನಿಮಿಷದ ಆಡಿಯೋದಲ್ಲಿ ಸುಪಾರಿ ಬಗ್ಗೆ ಮಾತನಾಡಿರುವ ಆರೋಪಿ ಸೋಮನ ಆಪ್ತೆ ಪುಷ್ಪಾ ಯಾರು? ಹಿನ್ನೆಲೆ ಏನು ಎಂಬುದರ ಚರ್ಚೆ ಕೂಡ ಆಗುತ್ತಿದೆ.
ಪುಷ್ಪಾ ಯಾರು?
ಪುಷ್ಪಾ ಟೀ ಅಂಗಡಿಯನ್ನ ನಡೆಸುತ್ತಿದ್ದು, ರಾಜಕೀಯ ವ್ಯಕ್ತಿಯ ನಗ್ನ ವಿಡಿಯೋಗಳನ್ನು ಇಟ್ಟಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಳು. ಅಲ್ಲದೇ, ಜೈಲುವಾಸ ಅನುಭವಿಸಿ ಹೊರ ಬಂದಿರುವ ಪುಷ್ಪಾ, ರೌಡಿಗಳೊಂದಿಗೆ ನಿಕಟ ಸಂಪರ್ಕದಲ್ಲಿ ಇದ್ದಾಳೆ ಎಂದು ಹೇಳಲಾಗುತ್ತಿದೆ. ಸುಪಾರಿ ಕೇಸ್‌ಗೆ ಸಂಬಂಧಿಸಿದಂತೆ ಪುಷ್ಪಾಳನ್ನು ಕ್ಯಾತಸಂದ್ರ ಪೊಲೀಸರು ವಶಕ್ಕೆ ಪಡೆದು, ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: Kolar | ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ – ಕೊಲೆಯಲ್ಲಿ ಅಂತ್ಯ
ಸಚಿವ ಕೆ.ಎನ್ ರಾಜಣ್ಣ ಪುತ್ರ ಹಾಗೂ ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಆರೋಪಿಗಳಾದ ಸೋಮ ಹಾಗೂ ಗುಂಡಾನನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆಯೇ ಸುಪಾರಿಗೆ ಸಂಚು ರೂಪಿಸಿದ್ದ ಸ್ಫೋಟಕ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಜೈಪುರದ ಸೋಮ ಎಂಬಾತನ ಆಪ್ತೆ ಪುಷ್ಪಾ, ರಾಜೇಂದ್ರ ಆಪ್ತ ರಾಕಿ ಜೊತೆ ನಡೆಸಿದ ಸಂಭಾಷಣೆ ಇದಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಯಾರೆಲ್ಲ ಹೊಸ ಪಕ್ಷ ಕಟ್ಟಿದ್ದರು? ರಚನೆ ಮಾಡಿದ್ದು ಯಾಕೆ? ಕೊನೆಗೆ ಏನಾಯ್ತು?
ಆರೋಪಿ ಸೋಮ ರಾಜೇಂದ್ರರನ್ನ ಹತ್ಯೆ ಮಾಡಲು ಸುಪಾರಿ ಪಡೆದಿರುವುದಾಗಿ ಪುಷ್ಪಾಳ ಬಳಿ ಹೇಳಿಕೊಂಡಿದ್ದಾನೆ. ಆ ಬಳಿಕವೇ ಪುಷ್ಪಾ ಸುಪಾರಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದ್ದಳು. ಸೋಮನ ಜೊತೆಗಿದ್ದುಕೊಂಡೇ ಕೊಲೆ ಸಂಚಿನ ಮಾಹಿತಿ ಕಲೆಹಾಕಿದ್ದಳು. ಬಳಿಕ ಈ ವಿಚಾರವನ್ನ ರಾಜೇಂದ್ರ ಅವರಿಗೆ ತಿಳಿಸಲು ಪುಷ್ಪಾ ಮುಂದಾಗಿದ್ದಾಳೆ. ರಾಜೇಂದ್ರ ಅವರಿಗೆ ವಿಷಯ ತಿಳಿಸಲು ರಾಕಿ ಎನ್ನುವ ಹುಡುಗನ್ನ ಬಳಸಿಕೊಂಡಿದ್ದಾಳೆ. ಕೊಲೆ ಸಂಚಿನ ಬಗ್ಗೆ ಪುಷ್ಪ ಹೇಳಿದ್ದನ್ನ ರಾಕಿ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಬಳಿಕ ರಾಜೇಂದ್ರ ಅವರಿಗೆ ಈ ಆಡಿಯೋವನ್ನ ತಲುಪಸಿಲಾಗಿತ್ತು. ಆಡಿಯೋ ಕೇಳಿದ ಎಂಎಲ್‌ಸಿ ರಾಜೇಂದ್ರ ಕೂಡಲೇ ಅಲರ್ಟ್ ಆಗಿ, ತುಮಕೂರು ಎಸ್ಪಿ ಬಳಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ UPI, ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ರೂಲ್ ಚೇಂಜ್
ಕಳೆದ ನವೆಂಬರ್‌ನಲ್ಲಿ ರಾಜೇಂದ್ರ ಅವರ ಮಗಳ ಬರ್ತ್ಡೇ ಡೆಕೋರೇಷನ್‌ಗೆ ಜೈಪುರದ ಇಬ್ಬರು ಹುಡುಗರು ಬಂದಿದ್ದರು. ಆ ಇಬ್ಬರನ್ನೂ ಸೋಮ ಕಳುಹಿಸಿದ್ದ. ಆಗಲೇ ಹತ್ಯೆಗೆ ಯತ್ನ ನಡೆದಿತ್ತು ಎಂದು ಆಡಿಯೋದಲ್ಲಿ ಪುಷ್ಪಾ ಮಾಹಿತಿ ನೀಡಿದ್ದಾಳೆ. ಅಲ್ಲದೇ ಸೋಮನಿಗೆ 5 ಲಕ್ಷ ಹಣ ಬಂದಿರೋದು ಸತ್ಯ ಸತ್ಯ ಸತ್ಯ. ಪೊಲೀಸರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದರೆ ಎಲ್ಲಾ ಗೊತ್ತಾಗುತ್ತೆ. ರಾಜೇಂದ್ರ ಅವರ ಮುಂದೆ ನಾನೇ ಹೇಳ್ತೀನಿ, ನನ್ನ ಕರೆದುಕೊಂಡು ಹೋಗು ಅಂತ ರಾಕಿ ಎನ್ನುವವನೊಂದಿಗೆ ಪುಷ್ಪಾ ಹೇಳಿಕೊಂಡಿದ್ದಾಳೆ. ಜೊತೆಗೆ ಜೈಪುರದ ಮತ್ತೋರ್ವ ರೌಡಿಶೀಟರ್‌ನನ್ನು ಮರ್ಡರ್ ಮಾಡೋದಾಗಿ ಸೋಮ ಹೇಳಿದ್ದಾನೆ. ಅದಕ್ಕಾಗಿ ಬೆಂಗಳೂರಿನ ಕಲಾಸಿಪಾಳ್ಯದಿಂದ ಇಬ್ಬರು, ತಮಿಳು ಹುಡುಗರನ್ನ ಸೋಮ ಕರೆಸಿಕೊಳ್ತಿದ್ದಾನೆ. ಈ ಬಗ್ಗೆಯೂ ಆಡಿಯೋದಲ್ಲಿ ಪುಷ್ಪಾ ಮಾಹಿತಿ ನೀಡಿದ್ದಾಳೆ. ಇದನ್ನೂ ಓದಿ: ಹೊಸ ಹಿಂದೂ ಪಕ್ಷ ಸ್ಥಾಪನೆಯಾಗುತ್ತಾ? ಏನಿದು ಯತ್ನಾಳ್ ಲೆಕ್ಕಾಚಾರ?
ಬೆಂಗಳೂರು: ಎರಡೂವರೆ ತಿಂಗಳ ಬಳಿಕ ಸಿಎಂ ಸಿದ್ದರಾಮಯ್ಯ (CM Siddaramaiah) ದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್ (High Command) ಭೇಟಿಯಾಗಿ ಹನಿಟ್ರ‍್ಯಾಪ್ (Honey Trap) ಬಗ್ಗೆ ಮಾಹಿತಿ ಕೊಡ್ತಾರಾ ಎನ್ನುವ ಕೂತುಹಲ ಸೃಷ್ಟಿಯಾಗಿದೆ.
ಹನಿಟ್ರ‍್ಯಾಪ್ ರಾಜಕೀಯ ಬಿಸಿಯ ನಡುವೆಯೇ ಸಿಎಂ ಡೆಲ್ಲಿ (Delhi) ಭೇಟಿ ಕುತೂಹಲ ಮೂಡಿಸಿದ್ದು, ಏ.2ರಂದು ಡೆಲ್ಲಿಗೆ ತೆರಳಲಿದ್ದಾರೆ. ಈ ವೇಳೆ ಹೈಕಮಾಂಡ್ ನಾಯಕರನ್ನು ಭೇಟಿ ಆಗಲಿದ್ದಾರೆ. ಮೂರು ಪ್ರಮುಖ ವಿಚಾರಗಳ ಬಗ್ಗೆ ಸಿಎಂ ಮಾತುಕತೆ ನಡೆಸುವ ಸಾಧ್ಯತೆಯಿದ್ದು, ಹನಿಟ್ರ‍್ಯಾಪ್ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಧಾರವಾಡ | ಮಳೆ, ಗಾಳಿಗೆ ಗೋಡೆ ಕುಸಿದು ಇಬ್ಬರು ಕೂಲಿ ಕಾರ್ಮಿಕರು ದುರ್ಮರಣ – ಓರ್ವ ಗಂಭೀರ
ಇನ್ನೂ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಸಚಿವರ ಸ್ನೇಹ ಆರೋಪದ ಬಗ್ಗೆಯೂ ಮಾಹಿತಿ ಕೊಡುವ ಸಾಧ್ಯತೆಯಿದೆ. ಇನ್ನೂ ಇದೇ ಮೇನಲ್ಲಿ ಸರ್ಕಾರಕ್ಕೆ ಎರಡು ವರ್ಷ ತುಂಬಲಿದ್ದು, ಸರ್ಕಾರ ಮತ್ತು ಪಕ್ಷದಿಂದ ಸಾಧನಾ ಸಮಾವೇಶ ನಡೆಸಲು ಅನುಮತಿ ಕೇಳಲಿದ್ದಾರೆ.
ಮೈಸೂರು: ಬಿಜೆಪಿಯಲ್ಲೇ ಹನಿಟ್ರ‍್ಯಾಪ್ ಗಳು ನಡೆದಿವೆ. ಬಿಜೆಪಿಯವರ (BJP) ವಿಡಿಯೋವನ್ನ ಬಿಜೆಪಿಯವರೇ ಮಾಡಿಕೊಂಡು ಇಟ್ಟಿದ್ದಾರೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲೇ ಹನಿಟ್ರ‍್ಯಾಪ್ ಗಳು (Honeytrap) ನಡೆದಿವೆ. ಹೀಗಾಗಿಯೇ ಬಿಜೆಪಿ ಶಾಸಕರು, ಮಾಜಿ ಸಿಎಂ ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಹೀಗಿರುವಾಗ ಬಿಜೆಪಿಯವರಿಗೆ ನಮ್ಮ ನಾಯಕರ ಬಗ್ಗೆ ಮಾತನಾಡಲು ಏನು ಹಕ್ಕಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಸಿಲಿಂಡರ್ ಬ್ಲಾಸ್ಟ್ – ಮೂವರು ಗಂಭೀರ
ಸಚಿವರ ಮನೆಗೆ ಸಿಸಿಟಿವಿ (CCTV) ಹಾಕದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಲವರು ಹನಿಟ್ರ‍್ಯಾಪ್ ಮಾಡಲೆಂದೇ ಸಚಿವರ ಮನೆಗೆ ಬರುತ್ತಾರೆ. ಈಗಾಗಿ ಸಿಸಿಟಿವಿ ಹಾಕಿಸಬೇಕು. ಸಚಿವರ ಮನೆಗಳಿಗೆ ಸಿಸಿಟಿವಿ ಇಲ್ಲದ ವಿಚಾರ ನನಗೆ ಗೊತ್ತಿಲ್ಲ. ಆದ್ರೆ ಸಿಎಂ ಮನೆಗೆ ಸಿಸಿಟಿವಿ ಇದೆ. ನಾನು ಅಲ್ಲೇ ಇರುವುದರಿಂದ ಸಿಸಿಟಿವಿ ಇರುವ ಬಗ್ಗೆ ನನಗೆ ಗೊತ್ತಿದೆ, ಬೇರೆಯವರ ಮನೆಯ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಡಲಾಚೆಯ ಗಣಿಗಾರಿಕೆ ಯೋಜನೆಗೆ ಕೇರಳದ ವಿರೋಧವೇಕೆ? – ಯೋಜನೆಯ ಮಹತ್ವವೇನು?
ಸಿಎಂ ಮನೆಗೆ ಪೊಲೀಸ್ ಬಂದೂಬಸ್ತ್ ಸಹ ಇದೆ, ಯಾರೇ ಬಂದರೂ ರೆಕಾರ್ಡ್ ಆಗುತ್ತೆ. ಸಚಿವರ ಮನೆಗೆ ಖಂಡಿತವಾಗಿ ಸಿಸಿಟಿವಿ ಹಾಕಬೇಕು. ಸಿಸಿಟಿವಿ ಇದ್ದರೇ ಹನಿ ಟ್ರ‍್ಯಾಪ್ ಮಾಡುವವರ ಮೇಲೆ ಕಣ್ಣಿಡಬಹುದು ಎಂದಿದ್ದಾರೆ. ಇನ್ನೂ ಸದನದಲ್ಲಿ ಕಾಂಗ್ರೆಸ್ ನಾಯಕರು ಯತ್ನಾಳಗೆ ಚೀಟಿ ಕೊಟ್ಟ ವಿಚಾರ ಕುರಿತು ಮಾತನಾಡಿ, ಚೀಟಿ ಕೊಟ್ಟಿದ್ದು ಯಾರು ಎಂಬುದು ಗೊತ್ತಿಲ್ಲ. ನಮ್ಮ ನಾಯಕರು ಸದನದಲ್ಲಿ ಮಾತನಾಡಿರೋದು ಮಾತ್ರ ಗೊತ್ತಿದೆ. ಅದರ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಟ್ಟಿಂಗ್ ಆಪ್ ಕೇಸ್ | `ಕೈʼ ನಾಯಕ ಭೂಪೇಶ್ ಬಘೇಲ್ ಮನೆ ಮೇಲೆ ಸಿಬಿಐ ದಾಳಿ
ಸಂವಿಧಾನ ಬದಲಾವಣೆ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯತೀಂದ್ರ ಅವರು, ಬಿಜೆಪಿಯವರಿಗೆ ಏನು ವಿಷಯ ಇಲ್ಲ. ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಇಂಗ್ಲಿಷ್ ಅವರ ಮಾತೃ ಭಾಷೆ ಅಲ್ಲ. ಆದ್ದರಿಂದ ಅವರು ಹೇಳಬೇಕಾದ ವಿಚಾರ ಸರಿಯಾಗಿ ಹೇಳಲು ಆಗಿಲ್ಲ ಅಷ್ಟೆ. ಸಂವಿಧಾನ ರಕ್ಷಣೆ ಮಾಡಲು ಕಾಂಗ್ರೆಸ್ ಹೋರಾಟ ಮಾಡಿಕೊಂಡು ಬಂದಿದೆ. ನಾವು ಸಂವಿಧಾನ ಬದಲಾಯಿಸುವ ಪ್ರಯತ್ನ ಮಾಡಲ್ಲ. ಸಂವಿಧಾನ ಬದಲಾವಣೆ ವಿಚಾರವಾಗಿ ಬಿಜೆಪಿ ಅವರು ಹೇಳಿಕೆ ಕೊಟ್ಟ ಮೇಲೆ ಸ್ಪಷ್ಟನೆ ಕೊಟ್ಟಿಲ್ಲ. ಅನಂತ್ ಕುಮಾರ್ ಹೆಗಡೆ ಹೇಳಿಕೆ ಕೊಟ್ಟ ನಂತರ ಸ್ಪಷ್ಟನೆ ಕೊಡುವ ಕೆಲಸ ಮಾಡಿಲ್ಲ. ಆದರೆ ಡಿಕೆಶಿ ಸ್ಪಷ್ಟನೆಕೊಟ್ಟಿದ್ದಾರೆ. ಆದ್ರೆ ಬಿಜೆಪಿಯವರಿಗೆ ಕೆಲಸ ಇಲ್ಲದೆ ಈ ರೀತಿ ಮಾಡುತ್ತಿದ್ದಾರೆ ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಹನಿಟ್ರ್ಯಾಪ್ ಜಟಾಪಟಿ ಜೋರಾಗಿರುವ ಹೊತ್ತಿನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿಯಾಗಿದ್ದಾರೆ.
ಸಿಎಂ ಅವರ ಅಧಿಕೃತ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ಸುಮಾರು 1 ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕೂಡ ಇದ್ದರು.
ಕುತೂಹಲ ಹೆಚ್ಚಿಸಿದ ಭೇಟಿ:
ಇತ್ತೀಚೆಗೆ ಮುಕ್ತಾಯಗೊಂಡ ಬಜೆಟ್ ಅಧಿವೇಶನದ ಕೊನೆಯ ದಿನ ಸಚಿವ ಕೆ.ಎನ್ ರಾಜಣ್ಣ ಅವರು, ತಮ್ಮ ವಿರುದ್ಧ ಹನಿಟ್ರ್ಯಾಪ್ (Honey Trap) ಯತ್ನ ನಡೆದಿರುವುದಾಗಿ ಹೇಳಿಕೆ ನೀಡಿದ್ದರು. ರಾಜಣ್ಣ ಅವರ ಈ ಹೇಳಿಕೆ ಬಳಿಕ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಜಟಾಪಟಿ ಜೋರಾಗಿದೆ. ಈ ನಡುವೆ ಸಿಎಂ ಅವರನ್ನು ಖರ್ಗೆ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.
ಖರ್ಗೆ ಅವರು ಭೇಟಿ ಮಾಡಿದ ಸಂರ್ಭದಲ್ಲೇ ಮುಖ್ಯಮಂತ್ರಿಗಳು ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಚರ್ಚಿಸಿದ್ದಾರೆ. ಘಟನೆಯ ಎಲ್ಲಾ ವಿವರನ್ನು ಸಿಎಂ, ಎಐಸಿಸಿ ಅಧ್ಯಕ್ಷರಿಗೆ ನೀಡಿದ್ದಾರೆ. ಜೊತೆಗೆ ರಾಜಣ್ಣ ಅವರು ತಮ್ಮ ಬಳಿ ಹಂಚಿಕೊಂಡ ಮಾಹಿತಿಯನ್ನು ಖರ್ಗೆ ಅವರಿಗೆ ತಿಳಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಗುರುವಾರ ವಿಧಾನಸಭೆಯಲ್ಲಿ ಮಾತನಾಡಿದ ರಾಜಣ್ಣ, ಕರ್ನಾಟಕ ಸಿ.ಡಿ, ಪೆನ್‌ಡ್ರೈವ್‌ಗೆ ಫ್ಯಾಕ್ಟರಿ ಆಗಿದೆ ಅಂತ ಬಹಳ ಜನ ಹೇಳ್ತಾರೆ. ಬಹಳ ಗುರುತರ ಆರೋಪ ಇದು. ತುಮಕೂರಿನ ಇಬ್ಬರು ಪ್ರಭಾವಿ ಸಚಿವರು ಹನಿಟ್ರ್ಯಾಪ್‌ನಲ್ಲಿ ಸಿಕ್ಕಿಕೊಂಡಿದ್ದಾರೆ ಅಂತ ಸುದ್ದಿಗಳು ಬರ್ತಿವೆ. ತುಮಕೂರಿನಲ್ಲಿ ಇರೋರು ನಾನು ಮತ್ತು ಪರಮೇಶ್ವರ್ ಮಾತ್ರ. ಸಿಡಿ, ಪೆನ್‌ಡ್ರೈವ್ 48 ಜನರ ಮೇಲೆ ಮಾಡಲಾಗಿದೆ. ಎಲ್ಲ ಪಕ್ಷದವರ ಮೇಲೂ ಸಿಡಿ, ಪೆನ್‌ಡ್ರೈವ್ ಇದೆ. ಕೆಲವರು ಈಗಾಗಲೇ ಸ್ಟೇ ತಗೊಂಡಿದ್ದಾರೆ. ಇದು ನಮ್ಮ ರಾಜ್ಯಕ್ಕೆ ಸೀಮಿತ ಆಗಿಲ್ಲ. ರಾಷ್ಟ್ರದ ಎಲ್ಲ ಪಕ್ಷಗಳ ಮುಖಂಡರ ಹನಿಟ್ರ್ಯಾಪ್ ಪೆನ್‌ಡ್ರೈವ್‌ಗಳಿವೆ. ನಾನು ಗೃಹ ಸಚಿವರಿಗೆ ಲಿಖಿತ ದೂರು ಕೊಡ್ತೇನೆ. ಈ ದೂರು ಆಧರಿಸಿ ಪರಮೇಶ್ವರ್ ತನಿಖೆ ಮಾಡಿಸಲಿ. ಇದರ ಹಿಂದೆ ಯಾರಿದ್ದಾರೆ, ಯಾರೆಲ್ಲ ಪ್ರೊಡ್ಯೂಸರ್‌ಗಳು, ಡೈರೆಕ್ಟರ್ ಗಳು ಇದ್ದಾರೆ ಅಂತ ಹೊರಗೆ ಬರಲಿ. ಜನಕ್ಕೆ ಗೊತ್ತಾಗಲಿ ಅಂತ ಒತ್ತಾಯಿಸಿದರು. ಇದನ್ನೂ ಓದಿ: Photo Gallery | IPL ಉದ್ಘಾಟನಾ ವೇದಿಕೆಯಲ್ಲಿ ಬೆಡಗು ಬಿನ್ನಾಣ; ಬಳ್ಳಿಯಂತೆ ಬಳುಕಿದ ದಿಶಾ!
ಸುಮಾರು 48 ಜನರ ವಿರುದ್ಧ ಸಿ.ಡಿ ಪೆನ್‌ಡ್ರೈವ್ ಮಾಡಲಾಗಿದೆ. ಇದೊಂದು ಪಿಡುಗು. ಸಾರ್ವಜನಿಕ ಜೀವನದಲ್ಲಿ ಇರೋರಿಗೆ ಗೌರವ ಬರಬೇಕು. ಹೀಗಾಗಿ ಲಿಖಿತ ದೂರು ಕೊಡ್ತೇನೆ. ಸೂಕ್ತ ತನಿಖೆ ಮಾಡಿಸಲಿ, ಇದರ ಹಿಂದೆ ಯಾರಿದ್ದಾರೆ ಅವರ ಹೆಸರು ಹೊರಗೆ ಬರಲಿ. ನನ್ನ ಮೇಲೂ ಹನಿಟ್ರ್ಯಾಪ್ ಪ್ರಯತ್ನ ಮಾಡಿರುವ ಬಗ್ಗೆ ಪುರಾವೆ ಇಟ್ಕೊಂಡಿದ್ದೇನೆ. ಪರಮೇಶ್ವರ್ ವಿಶೇಷ ತನಿಖೆ ಮಾಡಿ, ಇದರ ಹಿಂದೆ ಯಾರಿದ್ದಾರೆ ಅಂತ ಬಹಿರಂಗ ಮಾಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: Bengaluru | ಮದುವೆ ಸಂಭ್ರಮದಲ್ಲಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ
ಕೋಲಾರ: ಹನಿಟ್ರ‍್ಯಾಪ್ (Honeytrap) ಆರೋಪ ಮುಂದೆಯೂ ಬರಬಹುದು ಎಂದು ಹೇಳುವ ಮೂಲಕ ಕೋಲಾರದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ (KN Rajanna) ಹೊಸ ಬಾಂಬ್ ಸಿಡಿಸಿದ್ದಾರೆ.
ಹನಿಟ್ರ‍್ಯಾಪ್ ಕುರಿತು ಕೋಲಾರದಲ್ಲಿ (Kolar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ‍್ಯಾಪ್ ಕುರಿತು ವಿಧಾನಸಭೆಯಲ್ಲಿ ಹೇಳುವಷ್ಟು ಹೇಳಿದ್ದೇನೆ. ಅದನ್ನು ಹೊರತು ಪಡಿಸಿ ಹೇಳುವಷ್ಟು ಏನು ಇಲ್ಲ. ಈ ಆರೋಪ ಒಂದಲ್ಲ, ಕಡೆಯದೂ ಅಲ್ಲ, ಮುಂದೆಯೂ ಬರಬಹುದು ಎಂದು ಹೇಳಿದರು. ಇದನ್ನೂ ಓದಿ: ಆರ್‌ಸಿಬಿ Vs ಕೋಲ್ಕತ್ತಾ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ
ವಿಧಾನಸಭೆಯಲ್ಲಿ ಶಾಸಕರ ಅಮಾನತು ವಿಷಯದಲ್ಲಿ ನಾನಾಗಿದಿದ್ದರೆ ಇನ್ನೂ ಮುಂಚಿತವಾಗಿ ಈ ಕೆಲಸ ಮಾಡುತ್ತಿದ್ದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಕಪ್ಪು ಚುಕ್ಕೆ, ಜನಪರ ವಿಚಾರವನ್ನಿಟ್ಟುಕೊಂಡು ಶಾಸಕರು ಚರ್ಚೆ ಮಾಡುತ್ತಿಲ್ಲ. ಬಜೆಟ್ ಬಗ್ಗೆ 80 ಶಾಸಕರು ಪ್ರಸ್ತಾಪ ಮಾಡಿದ್ದಾರೆ, ಅದಕ್ಕೆ ಸಿಎಂ ಉತ್ತರ ಕೊಡಬೇಕಾಗಿದೆ. ಬಜೆಟ್ ಮೇಲಿನ ಸಿಎಂ ಉತ್ತರಕ್ಕೆ ಅಡಚಣೆ ಮಾಡಲು ಈ ರೀತಿ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ ಕಪ್ಪುಚುಕ್ಕೆ. ನಾನು ಸ್ಪೀಕರ್ ಆಗಿದ್ದರೆ ಮೊದಲೇ ಸಸ್ಪೆಂಡ್ ಮಾಡುತ್ತಿದೆ ಎಂದು ನುಡಿದರು. ಇದನ್ನೂ ಓದಿ: ಒಂದೇ ಒಂದು ಇಂಚು ಬೇರೆಯವರ ಜಾಗಕ್ಕೆ ನಾವು ಬೇಲಿ ಹಾಕಿಲ್ಲ: ನಿಖಿಲ್ ಕುಮಾರಸ್ವಾಮಿ
ರಾಜ್ಯದಲ್ಲಿ 5 ವರ್ಷ ಸರ್ಕಾರ ಅವಧಿ ಪೂರೈಕೆ ಮಾಡುತ್ತೆ, ಸಿಎಂ ಸಿದ್ದರಾಮಯ್ಯ 5 ವರ್ಷ ಇರುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು. ಕರ್ನಾಟಕ ಬಂದ್ ವಿಚಾರ ಸಂಬಂದ ಮಾತನಾಡಿದ ಅವರು, ಬೆಂಗಳೂರು ಬಂದ್ ಮಾಡಿದ್ರೆ ಬೆಳಗಾವಿ ಕನ್ನಡಿಗರಿಗೆ ರಕ್ಷಣೆ ಸಿಗುತ್ತಾ, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಿ ಎಂದು ಹೇಳಿದರು. ಇದನ್ನೂ ಓದಿ: ಮಕ್ಕಳಲ್ಲಿನ ಜ್ಞಾನದಾಹ ನೀಗಿಸುತ್ತಿದೆ ನಮ್ಮ ಮೈಸೂರಿನ ಕಲಿಸು ಸಂಸ್ಥೆ: ಯದುವೀರ್ ಒಡೆಯರ್