Tag: honeybee

  • ಹೆಜ್ಜೇನು ದಾಳಿ- 20ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

    ಹೆಜ್ಜೇನು ದಾಳಿ- 20ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

    ಹಾವೇರಿ: ಶಾಲಾ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ಹಾವೇರಿ ತಾಲೂಕಿನ ದೇವಿಹೊಸೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಹೆಜ್ಜೇನು ದಾಳಿ ನಡೆಸಿ, 20ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹೆಜ್ಜೇನು ಕಚ್ಚಿವೆ. ಹೆಜ್ಜೇನು ದಾಳಿಯಿಂದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿ ಬೆಳಗ್ಗೆ ಇಂತಹ ಘಟನೆಯಾದರೆ, ಸಂಜೆ ನೇಣಿಗೆ ಹಾಕ್ತಾರೆ: ಬಸವರಾಜ್ ಹೊರಟ್ಟಿ

    ಘಟನೆ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಜ್ಜೇನು ದಾಳಿಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಕಂಗಾಲಾಗಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಹಿಂದೂಗಳ ನರಮೇಧಕ್ಕೆ ಕಾರಣವೇ ಸಿದ್ದರಾಮಯ್ಯ – ಬಿಜೆಪಿ ಕಾರ್ಯಕರ್ತ ಚಂದ್ರಹಾಸ್

    Live Tv
    [brid partner=56869869 player=32851 video=960834 autoplay=true]

  • ಹೆಜ್ಜೇನು ದಾಳಿಗೆ ಮೃತದೇಹವನ್ನು ಸ್ಮಶಾನದಲ್ಲಿ ಬಿಟ್ಟು ದಿಕ್ಕಾಪಾಲಾಗಿ ಓಡಿದ ಜನ

    ಹೆಜ್ಜೇನು ದಾಳಿಗೆ ಮೃತದೇಹವನ್ನು ಸ್ಮಶಾನದಲ್ಲಿ ಬಿಟ್ಟು ದಿಕ್ಕಾಪಾಲಾಗಿ ಓಡಿದ ಜನ

    ಚಿಕ್ಕಬಳ್ಳಾಪುರ: ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡುವ ವೇಳೆ ಹೆಜ್ಜೇನು ದಾಳಿ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.

    ಮೃತದೇಹವನ್ನ ಕುಟುಂಬಸ್ಥರು ಮೆರವಣಿಗೆ ಮೂಲಕ ಸ್ಮಶಾನದಲ್ಲಿ ತೆಗೆದುಕೊಂಡು ಹೋಗಿ ಶವ ಸಂಸ್ಕಾರದ ಸಿದ್ಧತೆಯನ್ನ ಮಾಡಿಕೊಳ್ತಿದ್ರು. ಈ ವೇಳೆ ಸ್ಮಶಾನದ ಮರದಲ್ಲಿದ್ದ ಹೆಜ್ಜೆನು ದಿಢೀರ್ ದಾಳಿ ನಡೆಸಿದೆ. ಪರಿಣಾಮ ಮೃತದೇಹವನ್ನ ಸ್ಮಶಾನದಲ್ಲೇ ಬಿಟ್ಟು ದಿಕ್ಕಾಪಾಲಾಗಿ ಜನ ಓಡಿ ಹೋಗಿದ್ದಾರೆ. ಜೇನು ನೋಣಗಳಿಂದ ಕಚ್ಚಿಸಿಕೊಂಡಿದ್ದ ಸುಮಾರು 15 ಜನ ತಕ್ಷಣ ವಿಜಯಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನ ಪಡೆದಿದ್ದಾರೆ.

    ಇದೇ ವೇಳೆ ಸ್ಮಶಾನದಲ್ಲಿರುವ ಮರಗಳಲ್ಲಿ ಹೆಜ್ಜೆನುಗಳನ್ನ ತೆರವು ಮಾಡಿಲ್ಲ ಅಂತಾ ಪುರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧಿಕಾರಿಗಳು ಸ್ಮಶಾನದಲ್ಲಿರುವ ಹೆಜ್ಜೇನು ತೆರವು ಮಾಡಲು ಮುಂದಾಗಿದ್ದು, ಮೃತನ ಸಂಬಂಧಿಕರು ಅಂತ್ಯ ಸಂಸ್ಕಾರ ಮಾಡಲು ಬಿಟ್ಟು ಹೋಗಿದ್ದ ಮೃತದೇಹವನ್ನ ನಾಲ್ಕು ಜನ ಆಗಮಿಸಿ ಕೊನೆಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.