ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್ ರಾಜಣ್ಣ (KN Rajanna) ಅವರು ದೂರು ಕೊಟ್ಟರೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಣ್ಣ ದೂರು ಕೊಡೋದಾಗಿ ಹೇಳಿದ್ದಾರೆ, ಇನ್ನೂ ಕೊಟ್ಟಿಲ್ಲ. ಅವರು ದೂರು ಕೊಟ್ಟರೆ ತನಿಖೆಗೆ ವಹಿಸ್ತೇವೆ. ನಾನು ಸಿಎಂ ಜೊತೆ ಉನ್ನತ ಮಟ್ಟದ ತನಿಖೆ ಬಗ್ಗೆ ಚರ್ಚೆ ಮಾಡ್ತೇನೆ. ಯಾವ ತನಿಖೆಗೆ ಕೊಡಬೇಕು ಅಂತ ಸಿಎಂ ಜೊತೆಗೆ ಚರ್ಚೆ ಮಾಡ್ತೇನೆ. ಈಗಾಗಲೇ ಯಾವ ತನಿಖೆಗೆ ಕೊಡಬೇಕು ಅಂತ ಪ್ರಾಥಮಿಕವಾಗಿ ಅಂದುಕೊಂಡಿದ್ದೇವೆ, ಸಿಎಂ ಜೊತೆಗೆ ಚರ್ಚೆ ಮಾಡಿದ ಬಳಿಕ ಪ್ರಕಟಿಸುತ್ತೇವೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮರಗಳ ಮಾರಣ ಹೋಮ – 100 ವರ್ಷಗಳ ಹಳೆಯ ಮರಗಳಿಗೆ ಕೊಡಲಿ ಏಟು!
ಹನಿ ಟ್ರ್ಯಾಪ್ ಪ್ರಕರಣವನ್ನ (Honey Trap Case) ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಇಷ್ಟು ದೊಡ್ಡ ಆರೋಪ ಬಂದಿದೆ, ಗಂಭೀರವಾಗಿ ತಗೊಳ್ಳಲೇಬೇಕಲ್ಲ. ರಾಜಣ್ಣ ಅವರು ಇಷ್ಟೊತ್ತಿಗೆ ದೂರು ಕೊಟ್ಟಿದ್ದರೆ ಯಾವ ಸ್ವರೂಪದ ತನಿಖೆ ಅಂತ ಘೋಷಣೆ ಮಾಡ್ತಿದ್ದೆವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Photo Gallery | IPL ಉದ್ಘಾಟನಾ ವೇದಿಕೆಯಲ್ಲಿ ಬೆಡಗು ಬಿನ್ನಾಣ; ಬಳ್ಳಿಯಂತೆ ಬಳುಕಿದ ದಿಶಾ!
ಇನ್ನೂ ಸಿಬಿಐ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ ಎಂಬ ಬಿಜೆಪಿ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ನಾವು ನಮ್ಮದೇ ರೀತಿಯಲ್ಲಿ ಪರಿಶೀಲಿಸಿ ನಿರ್ಧಾರ ಮಾಡ್ತೇವೆ. ಇಷ್ಟು ದೊಡ್ಡ ಘಟನೆ ನಡೆದಿದೆ, ವಿಧಾನಸೌಧದಲ್ಲಿ ಚರ್ಚೆ ಆಗಿದೆ. ನಡೆಯದಿರೋದೆಲ್ಲ ನಡೆದಿದೆ, ಅಂಥದ್ರಲ್ಲಿ ಗಂಭೀರವಾಗಿ ತಗೊಳ್ಳಲಿಲ್ಲ ಅಂದ್ರೆ ಆಗಲ್ಲ ಎಂದಿದ್ದಾರೆ.
ಸದನದಲ್ಲಿ ಏಕಾಏಕಿ ರಾಜಣ್ಣ ಮಾತಾಡಿದ್ದಕ್ಕೆ ಹೈಕಮಾಂಡ್ ಬೇಸರವಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಇದು ಗೊತ್ತಿಲ್ಲ, ಇದರ ಬಗ್ಗೆ ಅಧ್ಯಕ್ಷರು ನೋಡ್ಕೋತಾರೆ ಎಂದು ಹೇಳಿದ್ದಾರೆ. ಅಲ್ಲದೇ ರಾಜಣ್ಣ ಅವರ ಮೇಲೆ ದೂರು ಕೊಡದಂತೆ ಒತ್ತಡ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದರ ಬಗ್ಗೆ ನನ್ನ ಜೊತೆ ಯಾರೂ ಮಾತಾಡಿಲ್ಲ, ಹೈಕಮಾಂಡ್‌ನವರೂ ಮಾತಾಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ವಾಸ್ತವ್ಯ – ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಪ್ಲ್ಯಾನ್
ಬೆಂಗಳೂರು: ಉದ್ಯಮಿಯೊಬ್ಬನನ್ನು ಹನಿಟ್ರ್ಯಾಪ್‌ಗೆ (Honey Trap) ಬೀಳಿಸಿ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗಂಡ-ಹೆಂಡತಿ ಮತ್ತು ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.
ಖಲೀಮ್ ಮತ್ತು ಸಭಾ ದಂಪತಿ ಸೇರಿಕೊಂಡು ಉದ್ಯಮಿಗೆ ಗಾಳ ಹಾಕಿ ಹನಿಟ್ರ‍್ಯಾಪ್ ಮಾಡಿದ್ದರು. ಎರಡು ತಿಂಗಳ ಹಿಂದೆ ಅತಾವುಲ್ಲಾ ಎಂಬವರನ್ನು ಖಲೀಮ್ ಪರಿಚಯ ಮಾಡಿಕೊಂಡಿದ್ದ. ಈ ವೇಳೆ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಕೆಲ ದಿನಗಳ ಬಳಿಕ ಅತಾವುಲ್ಲಾಗೆ ಕರೆ ಮಾಡಿ ಸಭಾಳನ್ನ ಪರಿಚಯಿಸಿದ್ದ. ಇದನ್ನೂ ಓದಿ: ನಾಳೆ ಯತೀಂದ್ರಗೆ ಟಿಪ್ಪು ಹೆಸರು ಇಟ್ಟರೂ ಅಚ್ಚರಿ ಇಲ್ಲ – ಸಿಎಂಗೆ ಬಿಜೆಪಿ ಟಾಂಗ್
ಈಕೆ ವಿಧವೆ ಜೊತೆಯಲ್ಲಿರು ಅಂತಾ ಪರಿಚಯಿಸಿದ್ದ. ಈ ವೇಳೆ ಅತಾವುಲ್ಲಾನನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ಕಳೆದ ನವೆಂಬರ್ 14 ರಂದು ಅತಾವುಲ್ಲಾಗೆ ಫೋನ್ ಮಾಡಿದ್ದ ಸಭಾ, ‘ಆರ್.ಆರ್. ನಗರದ ಬಳಿ ಬಾ.. ಬರುವಾಗ ರೂಂ ಬುಕ್ ಮಾಡಲು ಆಧಾರ್ ತರುವಂತೆ’ ಹೇಳಿದ್ದಳು. ಪ್ಲ್ಯಾನ್‌ನಂತೆ ಇತ್ತ ಸಭಾ ಹಾಗು ಅತಾವುಲ್ಲಾ ಜೊತೆಯಲ್ಲಿದ್ದಾಗ ಗಂಡನ ಹನಿಟ್ರ‍್ಯಾಪ್ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು.
ಒಬೇದ್ ಖಾನ್ ಎಂಬಾತ ಇಬ್ಬರನ್ನ ತಡೆದು ಸೀನ್ ಕ್ರಿಯೇಟ್ ಮಾಡಿದ್ದಾನೆ. ಖಲೀಮ್, ರಕೀಬ್, ಅತೀಕ್‌ನನ್ನ ಸ್ಥಳಕ್ಕೆ ಕರೆಸಿ ಧಮ್ಕಿ ಹಾಕಿದ್ದ. ನಿಮ್ಮ ವಿಚಾರ ಮನೆಯವರಿಗೆ ತಿಳಿಸುವುದಾಗಿ ಹೆದರಿಸಿ ಜೇಬಲ್ಲಿದ್ದ 4,000 ರೂ. ಹಣವನ್ನು ಗ್ಯಾಂಗ್ ಕಸಿದಿತ್ತು. ಅಲ್ಲದೆ 6 ಲಕ್ಷ ರೂ. ಹಣ ತರುವಂತೆ ಧಮ್ಕಿ ಹಾಕಿತ್ತು. ಇದನ್ನೂ ಓದಿ: ಜಾರ್ಜ್ ವಿರುದ್ಧ ಪೋಸ್ಟ್ – ತೆಲಂಗಾಣ ಮಾಜಿ ಪಾಲಿಕೆ ಸದಸ್ಯನ ಪುತ್ರ ಅರೆಸ್ಟ್
ಹೈಡ್ರಾಮಾ ನಡೆಯುವಾಗಲೇ ಸಿಸಿಬಿ ಮಧ್ಯ ಪ್ರವೇಶಿಸಿದೆ. ಸಭಾ ಹಾಗೂ ಖಲೀಮ್ ದಂಪತಿಯ ಹನಿಟ್ರ‍್ಯಾಪ್ ಪ್ಲ್ಯಾನ್ ಬಯಲಿಗೆಳೆದಿದೆ. ಸದ್ಯ ಪ್ರಕರಣ ಸಂಬಂಧ ಆರ್.ಆರ್. ನಗರ ಪೊಲೀಸರು, ದಂಪತಿ ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ.
ಮಂಗಳೂರು: ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಯುವತಿಯರ ಸಹಿತ 8 ಮಂದಿ ಅಪರಾಧಿಗಳಿಗೆ ಮಂಗಳೂರಿನ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅಪರಾಧಿಗಳು ಮಂಗಳೂರು ನಗರದ ಬಳ್ಳಾಲ್‍ಬಾಗ್‍ನ ಫ್ಲ್ಯಾಟ್‍ವೊಂದರಲ್ಲಿ 4 ವರ್ಷಗಳ ಹಿಂದೆ ಹನಿಟ್ರ್ಯಾಪ್ ಮೂಲಕ ಬ್ಯಾಂಕ್ ಮ್ಯಾನೇಜರ್ ಒಬ್ಬರಿಂದ ಹಣ ಲಪಟಾಯಿಸಲು ಯತ್ನಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಪ್ರಕರಣದ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಅಪರಾಧಿಗಳಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ 6,000 ರೂ. ದಂಡ ವಿಧಿಸಿದೆ. ನ್ಯಾಯಾಧೀಶ ರಾಮಲಿಂಗೇ ಗೌಡ 19 ಸಾಕ್ಷಿಗಳ ಪೈಕಿ 10 ಮಂದಿ ಸಾಕ್ಷಿಗಳ ವಿಚಾರಣೆಯನ್ನು ನಡೆಸಿ ಆರೋಪ ಸಾಬೀತಾಗಿದೆ ಎಂದು ತಿಳಿಸಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಶ್ಚಂದ್ರ ಉದ್ಯಾವರ್ ವಾದ ಮಂಡಿಸಿದ್ದರು.
ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆಯುತ್ತಿದ್ದು, ಸಿಸಿಬಿ ಪೊಲೀಸರಿಗೆ ಮತ್ತೊಂದು ಮಜಲಿನ ಸ್ಫೋಟಕ ಮಾಹಿತಿ ಸಿಕ್ಕಿದೆ. ಆರೋಪಿ ರಾಘವೇಂದ್ರ ಅಕ್ರಮ ದಂಧೆಯಲ್ಲಿ ಅವರ ತಾಯಿ ಪಾತ್ರ ಇರುವ ಬಗ್ಗೆ ಸಿಸಿಬಿಗೆ ಬಲವಾದ ಸಾಕ್ಷ್ಯಗಳು ಲಭ್ಯವಾಗಿದೆ ಎನ್ನಲಾಗಿದೆ.
ಸಿಸಿಬಿ ಪೊಲೀಸರು ರಾಘವೇಂದ್ರ ತಾಯಿ ಜ್ಯೋತಿ ಮೇಲೆ ಕೂಡ ಒಂದು ಕಣ್ಣಿರಿಸಿದ್ದಾರೆ. ಪಬ್ಲಿಕ್ ಟಿವಿ ಕ್ಯಾಮೆರಾದ ಮುಂದೆ ನಾನು ಮತ್ತು ನನ್ನ ಮಗ ರಾಘವೇಂದ್ರ ಅಮಾಯಕರು. ವಿನಾಕಾರಣ ನಮ್ಮನ್ನ ಬೆದರಿಸುತ್ತಿದ್ದಾರೆಂದು ಹನಿಟ್ರ್ಯಾಪ್ ಕಿಂಗ್‍ಪಿನ್ ರಾಘವೇಂದ್ರನ ತಾಯಿ ಜ್ಯೋತಿ ಕಣ್ಣಿರಿಟ್ಟಿದ್ದರು. ಆದರೆ ಇದೀಗ ಸಿಸಿಬಿ ಪೊಲೀಸರಿಗೆ ಸಿಕ್ಕ ಮಹಿತಿ ಆಕೆಯ ಅಸಲಿಯತ್ತಿನ ಬಗ್ಗೆ ಸಂಶಯ ಮೂಡಿಸಿದೆ. ರಾಘವೇಂದ್ರನ ಅಕ್ರಮ ದಂಧೆಯ ವಿಡಿಯೋ ಸೇರಿದಂತೆ ಹಲವು ದಾಖಲೆಗಳನ್ನ ಲಾಕರ್ ನಲ್ಲಿ ಇಟ್ಟಿದ್ದ ಬಗ್ಗೆ ಮಾಹಿತಿ ಸಿಕ್ಕಿವೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಎದೆ ಮೇಲೆ ಹಚ್ಚೆ, ಶಾಸಕನನ್ನ ಯಾಮಾರಿಸಿದ್ಳು ಚಿಟ್ಟೆ- ಬಗೆದಷ್ಟು ಬಯಲಾಗ್ತಿದೆ ‘ಹನಿ’ಕಹಾನಿ
ಈ ರಾಘವೇಂದ್ರ ಮತ್ತು ಟೀಂ ಸಾಮಾನ್ಯದವರಲ್ಲ. ಬ್ಲಾಕ್ ಮೇಲ್ ಮಾಡಿ ಹಣ ಪಿಕೋದ್ರಲ್ಲಿ ನಿಸ್ಸೀಮರು. ಅರೆಬರೆ ವಿಡಿಯೋ ತೋರಿಸಿ ಇಬ್ಬರು ಶಾಸಕರ ಬಳಿ ಹಣ ಪಿಕುತ್ತಿದ್ದರು. ಆ ಇಬ್ಬರು ಶಾಸಕರ ಹನಿಟ್ರ್ಯಾಪ್ ವಿಡಿಯೋ ಕ್ಲಿಯಾರಿಟಿ ಇಲ್ಲದೇ ಇದ್ದರೂ ಬ್ಲಾಕ್‍ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬಗೆದಷ್ಟು ಈ ಹನಿ ಕಹಾನಿ ತೆರೆದುಕೊಳ್ಳುತ್ತಿದೆ. ಇನ್ನೂ ಯಾರೆಲ್ಲಾ ಈ ಕೇಸ್‍ನಲ್ಲಿದ್ದಾರೋ? ಯಾರ‍್ಯಾರ ಬಂಡವಾಳ ಬಯಲಾಗುತ್ತೋ ಕಾದು ನೋಡಬೇಕು. ಇದನ್ನೂ ಓದಿ: ಹನಿಟ್ರ್ಯಾಪ್ ಪ್ರಕರಣ- ಹಾಲಿ ಶಾಸಕರಿಂದ ಪೀಕಿದ್ರು ಬರೋಬ್ಬರಿ 1 ಕೋಟಿ
ರಾಘವೇಂದ್ರ ತಾಯಿ ಜ್ಯೋತಿ ಹೇಳಿದ್ದೇನು?
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ರಾಘವೇಂದ್ರ ತಾಯಿ, ನನ್ನ ಮಗ ಅಂಥವನಲ್ಲ. ಮೊದಲಿಗೆ ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಅಲ್ಲಿ ಕೆಲಸದಿಂದ ಹೊರಬಂದು ಬೇರೆ ಕಡೆ ಉದ್ಯೋಗ ಹುಡುಕುತ್ತಿದ್ದಾನೆ. ರಾತ್ರಿ ಮನೆಗೆ ಬಂದ ಪೊಲೀಸರು, ಮನೆ ಪರಿಶೀಲನೆ ನಡೆಸಿದರು. ರಾತ್ರಿಯೆಲ್ಲ ಮನೆಯಲ್ಲಿಯೇ ಕುಳಿತಿದ್ದರೂ, ನಮಗೆ ಏನೂ ಹೇಳಲಿಲ್ಲ. ಮೊಬೈಲ್ ಕಿತ್ತುಕೊಂಡು ಮಗನಿಗೆ ಬರುವಂತೆ ಹೇಳುವಂತೆ ಹೇಳಿದ್ದರು.
ಮತ್ತೆ ಬಂದು ಮನೆಯಲ್ಲಿದ್ದ ಮೆಮೊರಿ ಕಾರ್ಡ್, ಪೆನ್‍ಡ್ರೈವ್ ರೀತಿಯಲ್ಲಿರುವ ಒಂದು ವಸ್ತು, ಚಿಕಿತ್ಸೆಗಾಗಿ ತೆಗೆದಿಟ್ಟಿದ್ದ 50 ಸಾವಿರ ರೂ. ಮತ್ತು ದೇವರ ಮನೆಯಲ್ಲಿಟ್ಟಿದ್ದ ಕಿವಿಯೋಲೆಯನ್ನು ಮಹಿಳಾ ಪೇದೆ ತೆಗೆದುಕೊಂಡು ಹೋಗಿದ್ದಾರೆ. ಪಬ್ಲಿಕ್ ಟಿವಿ ಮೂಲಕ ಮಗನ ಬಂಧನದ ಸುದ್ದಿ ತಿಳಿಯಿತು. ಮನೆಯಲ್ಲಿ ವಯಸ್ಸಾದ ತಾಯಿಯೊಂದಿಗೆ ಇದ್ದೇನೆ. ನಾವಿಬ್ಬರೂ ಹೆಣ್ಣು ಮಕ್ಕಳೇ ಮನೆಯಲ್ಲಿದ್ದೇವೆ. ನಾವು ಅಮಾಯಕ. ಬೇರೆಯವರ ಸಂಚಿಗೆ ಮಗ ಬಲಿಯಾಗಿರಬೇಕು ಎಂದು ರಾಘವೇಂದ್ರ ತಾಯಿ ಅನುಮಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಹನಿ ಮನಿ ಕಾಮಿನಿ ಸುಳಿಯಲ್ಲಿ ಶಾಸಕರು – ಹಾರ್ಡ್ ಡಿಸ್ಕ್ ನಲ್ಲಿತ್ತು 10 ಜನರ ವಿಡಿಯೋ
ಆತ ಯಾರೊಂದಿಗೆ ಹೆಚ್ಚು ಸೇರಲ್ಲ. ನಮಗೆ ಇಲ್ಲಿ ಯಾರೂ ಸಂಬಂಧಿಕರಿಲ್ಲ. ಎಲ್ಲಿ ಹೋಗಬೇಕು ಮತ್ತು ಯಾರನ್ನ ಸಂಪರ್ಕಿಸಬೇಕು ಎಂಬುವುದು ನಮಗೆ ಗೊತ್ತಿಲ್ಲ. ಇರೋ ಒಬ್ಬ ಮಗ ಯಾರ ತಂಟೆಗೂ ಹೋಗದವನು. ಆತ ತಪ್ಪು ಮಾಡಿಲ್ಲ ಎಂಬುವುದು ನನ್ನ ನಂಬಿಕೆ. ಒಂದು ವೇಳೆ ಪೊಲೀಸ್ ತನಿಖೆ ವೇಳೆ ತಪ್ಪಿತಸ್ಥ ಎಂದು ಸಾಬೀತಾದ್ರೆ ಮಗನೊಂದಿಗಿನ ಸಂಬಂಧವನ್ನು ಕಳೆದುಕೊಂಡು, ಅನಾಥಳಂತೆ ಮುಂದಿನ ಜೀವನ ನಡೆಸುತ್ತೇನೆ ಎಂದಿದ್ದರು.