Tag: honey bee

  • SSLC ಪರೀಕ್ಷೆ ವೇಳೆ ಜೇನುನೊಣಗಳ ದಾಳಿ – ಐವರಿಗೆ ಗಾಂಭೀರ ಗಾಯ

    SSLC ಪರೀಕ್ಷೆ ವೇಳೆ ಜೇನುನೊಣಗಳ ದಾಳಿ – ಐವರಿಗೆ ಗಾಂಭೀರ ಗಾಯ

    ಹುಬ್ಬಳ್ಳಿ: ಕೇಶ್ವಾಪುರದ ಸೆಂಟ್ ಮೈಕಲ್ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ, ಶಿಕ್ಷಕರು ಮತ್ತು ಪೊಲೀಸರು ಸೇರಿ ಐವರ ಮೇಲೆ ಜೇನುಹುಳಗಳ ದಾಳಿಯಾಗಿದೆ.

    ಕೆಲ ಕಿಡಿಗೆಡಿಗಳು ಮಾಡಿದ ಕೃತ್ಯದಿಂದ ಗಣಿತ ವಿಷಯ ಪರೀಕ್ಷೆ ಬರೆಯಲು ಬಂದಿದ್ದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಈಗ ಆಸ್ಪತ್ರೆ ಸೇರಿದ್ದಾರೆ. ಪರೀಕ್ಷೆ ಆರಂಭಕ್ಕೆ ಇನ್ನೂ ಕೆಲವೇ ಕ್ಷಣ ಬಾಕಿಯಿತ್ತು. ಈ ವೇಳೆ ಶಾಲಾ ಕಾಂಪೌಂಡ್ ಹೊರಗಡೆ ಮರದಲ್ಲಿ ಜೇನುನೊಣಗಳು ಗೂಡುಕಟ್ಟಿದ್ದವು. ಆದರೆ ಕಿಡಿಗೇಡಿಗಳು ಬಿಸಿದ ಕಲ್ಲಿನಿಂದ ಗೂಡು ಬಿಟ್ಟು ಶಾಲಾ ಆವರಣಕ್ಕೆ ನುಗ್ಗಿ ಏಕಾಏಕಿ ದಾಳಿ ಮಾಡಿವೆ.  ಇದನ್ನೂ ಓದಿ: ಮಸೀದಿ, ದೇವಸ್ಥಾನ, ಚರ್ಚ್‍ಗಳಲ್ಲಿ ಜೋರಾಗಿ ಮೈಕ್ ಹಾಕಿದ್ರೆ ಧರ್ಮಗಳ ನಡುವೆ ಸಂಘರ್ಷ ಆಗುತ್ತೆ: ಈಶ್ವರಪ್ಪ

    ಜೇನುದಾಳಿಯಿಂದ ವಿದ್ಯಾರ್ಥಿಗಳು, ಶಾಲೆಯ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕ, ಪಾಲಕರು ಮತ್ತು ಪೊಲೀಸರಿಗೂ ಸಹ ಗಂಭೀರ ಗಾಯಗಳಾಗಿವೆ. ಎಲ್ಲರಿಗೂ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

  • ಹೆಜ್ಜೇನು ದಾಳಿ- ಹತ್ತಕ್ಕೂ ಹೆಚ್ಚು ಜನ ಅಸ್ವಸ್ಥ

    ಹೆಜ್ಜೇನು ದಾಳಿ- ಹತ್ತಕ್ಕೂ ಹೆಚ್ಚು ಜನ ಅಸ್ವಸ್ಥ

    ಕಾರವಾರ: ಹೆಜ್ಜೇನು ದಾಳಿ ಮಾಡಿದ ಪರಿಣಾಮ ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.

    ತಾಲೂಕಿನ ಹಿಂಡಬೈಲ್ ಗ್ರಾಮದಲ್ಲಿ ಅವಘಡ ಸಂಭವಿಸಿದ್ದು, ಗಾಯಗೊಂಡವರನ್ನ ಸಂತೆಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಜನರ ಮೇಲೆ ಕಳೆದೆರಡು ದಿನಗಳಿಂದ ಹೆಜ್ಜೇನುಗಳು ದಾಳಿ ನಡೆಸಿದ್ದು, ಇದು ಗ್ರಾಮಸ್ಥರನ್ನ ಭಯಭೀತಗೊಳಿಸಿದೆ.

    ಹಿಂಡಬೈಲ್, ಬಡಾಳ್ ಮಾರ್ಗದ ರಸ್ತೆಯ ಪಕ್ಕದಲ್ಲಿ ಜೇನುಗಳು ಗೂಡು ಕಟ್ಟಿಕೊಂಡಿದ್ದು, ರಸ್ತೆಯಲ್ಲಿ ಓಡಾಡುವವರ ಮೇಲೆ ದಾಳಿ ಮಾಡುತ್ತಿವೆ. ಇದರಿಂದಾಗಿ ಯುವಕರು, ಯುವತಿಯರು ಸೇರಿದಂತೆ ಗ್ರಾಮದ ಹಲವರು ಜೇನು ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದು, ಜೇನು ಹುಳುಗಳ ಹಠಾತ್ ದಾಳಿಗೆ ಆತಂಕಗೊಂಡಿರುವ ಗ್ರಾಮಸ್ಥರು ದಾಳಿ ನಡೆದ ರಸ್ತೆಯಲ್ಲಿ ಓಡಾಡುವುದಕ್ಕೆ ಭಯಪಡುವಂತಾಗಿದೆ.

  • ಅಧಿಕಾರಿಗಳ ನಿರ್ಲಕ್ಷ್ಯ- ಚೆನ್ನಮ್ಮನ ಪುತ್ಥಳಿಗೆ ಮುತ್ತಿಕೊಂಡ ಜೇನು ಹುಳುಗಳು

    ಅಧಿಕಾರಿಗಳ ನಿರ್ಲಕ್ಷ್ಯ- ಚೆನ್ನಮ್ಮನ ಪುತ್ಥಳಿಗೆ ಮುತ್ತಿಕೊಂಡ ಜೇನು ಹುಳುಗಳು

    – ಚನ್ನಮ್ಮನ ಮುಖ ಕಾಣದ ರೀತಿ ದಟ್ಟವಾಗಿ ಆವರಿಸಿದ ಹುಳುಗಳು

    ಹುಬ್ಬಳ್ಳಿ: ಸೂಕ್ತ ನಿರ್ವಹಣೆ ಹಾಗೂ ಸ್ವಚ್ಛತೆ ಕಾಪಾಡದ ಹಿನ್ನೆಲೆ ಹುಬ್ಬಳಿಯ ಐಕಾನ್, ಸುಪ್ರಸಿದ್ಧ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಪುತ್ಥಳಿಗೆ ಜೇನು ಹುಳುಗಳು ಮುತ್ತಿಕೊಂಡಿವೆ. ಚೆನ್ನಮ್ಮನ ಮುಖ ಕಾಣದಂತೆ ದಟ್ಟವಾಗಿ ಹುಳುಗಳು ಮುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಗರ ವಾಸಿಗಳು ಕಿಡಿಕಾರಿದ್ದಾರೆ.

    ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಹುಬ್ಬಳ್ಳಿಯ ಜನನಿಬೀಡ ಪ್ರದೇಶವಾಗಿದ್ದು, ಎಲ್ಲರಿಗೂ ತಿಳಿದ ವಿಚಾರ. ಹುಬ್ಬಳ್ಳಿಯನ್ನು ಇದೇ ವೃತ್ತದಿಂದಲೂ ಹಲವರು ಗುರುತಿಸುತ್ತಾರೆ. ಹುಬ್ಬಳ್ಳಿಯ ಐಕಾನ್ ಎಂದೇ ಈ ವೃತ್ತವನ್ನು ಕರೆಯಲಾಗುತ್ತದೆ. ಇಂತಹ ಸುಪ್ರಸಿದ್ಧ ಹಾಗೂ ಜನನಿಬಿಡ ಪ್ರದೇಶದಲ್ಲಿನ ರಾಣಿ ಚೆನ್ನಮ್ಮ ಪುತ್ಥಳಿಯನ್ನು ನಿರ್ವಹಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ವಿಪರೀತ ಧೂಳು ಆವರಿಸಿದೆ. ಇದೀಗ ಜೇನು ಹುಳುಗಳು ಮುತ್ತಿವೆ.

    ಕಿತ್ತೂರು ಚೆನ್ನಮ್ಮನ ಮೂರ್ತಿಯ ಮುಖಕ್ಕೆ ಜೇನು ಹುಳುಗಳು ಮುತ್ತಿಕ್ಕಿಕೊಂಡ ಪರಿಣಾಮ ಚೆನ್ನಮ್ಮನ ಮುಖ ದರ್ಶನವೇ ಕಾಣುತ್ತಿರಲಿಲ್ಲ. ಹಲವರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಹಲವರು ಆಶ್ಚರ್ಯವೆಂಬಂತೆ ನೋಡುತ್ತಿದ್ದರು. ಪಾಲಿಕೆ ಅಧಿಕಾರಿಗಳು ಜೇನು ಹುಳುಗಳನ್ನು ತೆರವುಗೊಳಿಸಿ, ಪುತ್ಥಳಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಇನ್ನಾದರೂ ಸುಪ್ರಸಿದ್ಧ ಪುತ್ಥಳಿಯನ್ನು ಸರಿಯಾಗಿ ನಿರ್ವಹಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಎನ್‍ಸಿಸಿ ಪರೇಡ್ ವೇಳೆ ಹೆಜ್ಜೇನು ದಾಳಿ – 20ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

    ಎನ್‍ಸಿಸಿ ಪರೇಡ್ ವೇಳೆ ಹೆಜ್ಜೇನು ದಾಳಿ – 20ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

    ಹಾವೇರಿ: ಎನ್‍ಸಿಸಿ ಪರೇಡ್ ಮಾಡುವಾಗ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಇಪ್ಪತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಹಾವೇರಿ ನಗರದ ಜಿ.ಎಚ್.ಕಾಲೇಜಿನಲ್ಲಿ ನಡೆದಿದೆ.

    ಹೆಜ್ಜೇನು ದಾಳಿ ಮಾಡಿದ ಕೂಡಲೇ 20 ಕ್ಕೂ ಅಧಿಕ ಗಾಯಾಳು ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ವಿದ್ಯಾರ್ಥಿಗಳ ಮೈ ಕೈ, ತುಟಿ ಹಾಗೂ ಕಾಲು ಎಲ್ಲಾ ಕಡೆ ಹೆಜ್ಜೇನು ಕಚ್ಚಿ ಗಾಯಗೊಳಿಸಿವೆ. ಹೆಚ್ಚಿನ ಬಿಸಿಲಿನ ತಾಪಕ್ಕೆ ಹೆಜ್ಜೇನು ಎದ್ದಿವೆ ಎನ್ನಲಾಗಿದೆ. ಕಾಲೇಜು ಆವರಣದ ಪಕ್ಕದಲ್ಲಿ ಎನ್‍ಸಿಸಿ ಪರೇಡ್ ಮಾಡುವಾಗ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿವೆ.

    ಕೆಲವು ವಿದ್ಯಾರ್ಥಿಗಳು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ನಂತರ ಕಾಲೇಜು ಸಿಬ್ಬಂದಿ ಹಾಗೂ ಆಡಳಿತ ವರ್ಗ ಕಟ್ಟಡದಲ್ಲಿರುವ ಹೆಜ್ಜೇನು ಅನ್ನು ತೆರವುಗೊಳಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ವಿದ್ಯಾರ್ಥಿಗಳ ಪೋಷಕರು ಆಗಮಿಸಿ ಮಕ್ಕಳ ಆರೈಕೆ ಮಾಡುತ್ತಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಶವಸಂಸ್ಕಾರಕ್ಕೆ ತೆರಳಿದ್ದ ಜನರ ಮೇಲೆ ಹೆಜ್ಜೇನು ದಾಳಿ – ಓರ್ವ ಸಾವು!

    ಶವಸಂಸ್ಕಾರಕ್ಕೆ ತೆರಳಿದ್ದ ಜನರ ಮೇಲೆ ಹೆಜ್ಜೇನು ದಾಳಿ – ಓರ್ವ ಸಾವು!

    – ಗುಂಡಿಯಲ್ಲಿಯೇ ಮೃತದೇಹ ಬಿಟ್ಟು ಪರಾರಿಯಾದ ಜನ!

    ಬೆಂಗಳೂರು: ಶವ ಸಂಸ್ಕಾರಕ್ಕೆಂದು ತೆರಳಿದ್ದವರ ಮೇಲೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕರ್ನಾಟಕ ತಮಿಳುನಾಡು ಗಡಿ ಕೆಂಪಟ್ಟಿಯಲ್ಲಿ ನಡೆದಿದೆ.

    ಕೆಂಪಟ್ಟಿ ಗ್ರಾಮದ ನಿವಾಸಿ ರಾಜಪ್ಪ (55) ಮೃತ ದುರ್ದೈವಿ. ಈ ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ಸಾಗಿಸಲಾಗಿದೆ.

    ಘಟನೆಯ ವಿವರ:
    ಕೆಂಪಟ್ಟಿ ಗ್ರಾಮದ ನಿವಾಸಿ ರಾಮಕ್ಕ (102) ಮಂಗಳವಾರ ರಾತ್ರಿ ಮೃತಪಟ್ಟಿದ್ದರು. ಹೀಗಾಗಿ ಅವರ ಅಂತ್ಯಸಂಸ್ಕಾರವನ್ನು ಇಂದು ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ ಶವ ಸಂಸ್ಕಾರಕ್ಕೆ ತೋಡಿದ್ದ ಗುಂಡಿಯ ಸಮೀಪದ ಮರದಲ್ಲಿ ಹೆಜ್ಜೇನು ಇತ್ತು. ಶವವನ್ನು ಹೊತ್ತು ಸ್ಮಶಾನಕ್ಕೆ ತರುವಾಗ ಪಟಾಕಿ ಹಾಗೂ ಹೂವಿನ ವಾಸನೆಗೆ ಜೇನು ಹುಳು ಎದ್ದ ಜನರ ಮೇಲೆ ದಾಳಿ ಮಾಡಿವೆ.

    ಜೇನು ಹುಳು ಇಪ್ಪತ್ತಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ್ದು, ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆಯಿಂದಾಗಿ ಶವವನ್ನು ಗುಂಡಿಯಲ್ಲಿಯೇ ಬಿಟ್ಟು ಜನರು ಅಲ್ಲಿಂದಲೇ ಕಾಲ್ಕಿತ್ತಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆನೇಕಲ್‍ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಮಾಹಿತಿ ಪಡೆದು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv