Tag: Honey

  • ಬಾಯಿ ದುರ್ವಾಸನೆ ಬರುತ್ತಿದ್ಯಾ? ಹಾಗಿದ್ರೆ ಈ ಮನೆ ಮದ್ದು ಬಳಕೆ ಮಾಡಿ

    ಬಾಯಿ ದುರ್ವಾಸನೆ ಬರುತ್ತಿದ್ಯಾ? ಹಾಗಿದ್ರೆ ಈ ಮನೆ ಮದ್ದು ಬಳಕೆ ಮಾಡಿ

    ಹೆಚ್ಚಿನವರಿಗೆ ಬಾಯಿ ದುರ್ವಾಸನೆ ಸಮಸ್ಯೆ ಕಾಡುತ್ತದೆ. ಬಾಯಿ ದುರ್ನಾತದಿಂದ ಜನರೊಂದಿಗೆ ಬೆರೆಯಲು ನಮಗೆ ಮುಜುಗರವಾಗುತ್ತದೆ. ಇಂತಹ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತದೆ. ನಿಮ್ಮ ಮನೆಯಲ್ಲಿಯೇ ದೊರೆಯುವ ಅನೇಕ ಪದಾರ್ಥಗಳಿಂದ ನಿಮ್ಮ ಬಾಯಿಯ ದುರ್ವಾಸನೆಯನ್ನು ನೈಸರ್ಗಿಕವಾಗಿ ತೊಲಗಿಸಬಹುದು.

    * ಲವಂಗ ಬಾಯಿಯ ದುರ್ವಾಸನೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಆಗಾಗ್ಗೆ 3 ರಿಂದ 4 ಲವಂಗವನ್ನು ನಿಧಾನವಾಗಿ ಜಗಿಯಿರಿ.ನಿಮ್ಮ ಬಾಯಿಯ ದುರ್ವಾಸನೆ, ಹಲ್ಲು ನೋವು ಹಾಗೂ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

    * ಊಟದ ಬಳಿಕ ಒಂದು ಚಮಚ ಜೀರಿಗೆ ಸೇವನೆ ಮಾಡಿದರೆ ಅದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ. ಇದನ್ನೂ ಓದಿ: 

    * ನೀವು ಹೆಚ್ಚಾಗಿ ನೀರು ಸೇವನೆ ಮಾಡಬೇಕು. ಬ್ಯಾಕ್ಟೀರಿಯಾವನ್ನು ಹೊರಹಾಕಿ ನಿಮ್ಮ ದೇಹವನ್ನು ರಿಫ್ರೆಶ್ ಮಾಡುತ್ತದೆ. ಒಂದು ಗ್ಲಾಸ್ ನೀರಿನಲ್ಲಿ ನಿಂಬೆ ಹಣ್ಣಿನ ರಸ, ಸಕ್ಕರೆ, ಉಪ್ಪನ್ನು ಮಿಶ್ರಣ ಮಾಡಿ ಸೇವನೆ ಮಾಡಿ.  ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    * ಜೇನುತುಪ್ಪ ಮತ್ತು ದಾಲ್ಚಿನ್ನಿಯ ಮಿಶ್ರಣವು ನಿಮ್ಮ ಬಾಯಿಯ ದುರ್ವಾಸನೆಯನ್ನು ಸಂಪೂರ್ಣವಾಗಿ ಹೋಗಲಾಡಿಸುತ್ತದೆ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    * ನೀರಿಗೆ ಒಂದು ಚಮಚ ಮೆಂತೆ ಕಾಳುಗಳನ್ನು ಹಾಕಿ. ಇದನ್ನು ಸೋಸಿಕೊಂಡ ಬಳಿಕ ನೀರನ್ನು ದಿನದಲ್ಲಿ ಒಂದು ಸಲ ಕುಡಿಯಿರಿ. ಇದನ್ನೂ ಓದಿ: ಮಜ್ಜಿಗೆಯಲ್ಲಿದೆ ಮದ್ದಿನ ಗುಣ- ಪ್ರತಿನಿತ್ಯ ಒಂದು ಲೋಟ ಮಜ್ಜಿಗೆ ಕುಡಿದು ನೋಡಿ

    * ಒಂದು ಲೋಟ ನೀರಿಗೆ ಸ್ವಲ್ಪ ಅರಿಶಿನ ಹಾಕಿ ಕುಡಿದರೆ ಬಾಯಿ ದುರ್ವಾಸನೆ ಬೀರುವುದಿಲ್ಲ. ಇದನ್ನೂ ಓದಿ: ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಮನೆಮದ್ದು

    * ಆಗಾಗ್ಗೆ ದಾಲ್ಚಿನ್ನಿ ಸಣ್ಣ ತುಂಡನ್ನು ಬಾಯಿಯಲ್ಲಿ ಜಗಿಯುತ್ತಾ ಇರಿ ಇದನ್ನೂ ಓದಿ:  ಒಡೆದ ಹಿಮ್ಮಡಿಯ ಆರೈಕೆಗೆ ಏನು ಮಾಡಬೇಕು ಗೊತ್ತಾ?

    * ಬೆಚ್ಚಗಿನ ನೀರಿನಲ್ಲಿ ಉಪ್ಪು ಬೆರಸಿ ಬಾಯಿ ಮುಕ್ಕಳಿಸಿ. ಇದು ಕೆಟ್ಟ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ

  • ರಸ್ತೆಯಲ್ಲಿ ಹೋಗುತ್ತಿದ್ದಾಗ ಹೆಜ್ಜೇನು ಹಿಂಡು ದಾಳಿ- ಓರ್ವ ಸಾವು, ಹಲವರಿಗೆ ಗಾಯ

    ರಸ್ತೆಯಲ್ಲಿ ಹೋಗುತ್ತಿದ್ದಾಗ ಹೆಜ್ಜೇನು ಹಿಂಡು ದಾಳಿ- ಓರ್ವ ಸಾವು, ಹಲವರಿಗೆ ಗಾಯ

    ಮಡಿಕೇರಿ: ರಸ್ತೆಯಲ್ಲಿ ಸಾಗುತ್ತಿದ್ದ ಜನರ ಮೇಲೆ ಹೆಜ್ಜೇನುಗಳು ದಾಳಿ ಮಾಡಿದ್ದು, ಓರ್ವ ಮೃತಪಟ್ಟದ್ದಾನೆ.

    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಪಟ್ಟಣದಲ್ಲಿ ಘಟನೆ ನಡೆದಿದೆ. ನಾಪೋಕ್ಲುವಿನ ಕೊಡವ ಸಮಾಜ ರಸ್ತೆಯಲ್ಲಿ ಇಂದು ಸಂಜೆ ರಸ್ತೆಯಲ್ಲಿ ಸಾಗುತ್ತಿದ್ದವರ ಮೇಲೆ ಹೆಜ್ಜೇನುಗಳು ದಾಳಿ ನಡೆಸಿದ್ದು, ಕೂಲಿ ಕಾರ್ಮಿಕ ನಾಪೋಕ್ಲು ಸಮೀಪದ ಅಜ್ಜಿಮುಟ್ಟ ನಿವಾಸಿ ವೇಲಾಯುದನ್ ಸಾವನ್ನಪ್ಪಿದ್ದಾರೆ.

    ಜೇನು ಹುಳುಗಳು ಕಚ್ಚಿದ್ದರಿಂದ ಅನೇಕರಿಗೆ ಗಾಯಗಳಾಗಿವೆ. ವೇಲಾಯುದನ್ ಮೇಲೆ ತೀವ್ರವಾಗಿ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಡವ ಸಮಾಜದ ಬಳಿ ಹೆಜ್ಜೇನು ದಂಡು ಎಲ್ಲಿಂದ ಬಂದವು ಎಂಬ ಬಗ್ಗೆ ನಾಗರಿಕರಲ್ಲಿ ಕುತೂಹಲ ಮೂಡಿದೆ. ಈ ರೀತಿ ಏಕಾಏಕಿ ಹೆಜ್ಜೇನು ಹಿಂಡು ದಾಳಿ ನಡೆಸಿ ಒಬ್ಬರ ಸಾವಿಗೆ ಕಾರಣವಾಗಿರುವುದು ನಾಪೋಕ್ಲು ಪೇಟೆಯಲ್ಲಿನ ಜನರ ಆತಂಕಕ್ಕೂ ಕಾರಣವಾಗಿದೆ. ಹೆಜ್ಜೇನು ದಾಳಿಗೆ ಒಳಗಾದವರಿಗೆ ನಾಪೋಕ್ಲು ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ಕೃಷಿ ಆಧಾರಿತ ಕಸುಬನ್ನು ಪರಿಚಯಿಸಲು ಜೇನು ಮೇಳ ಆಯೋಜನೆ

    ಕೃಷಿ ಆಧಾರಿತ ಕಸುಬನ್ನು ಪರಿಚಯಿಸಲು ಜೇನು ಮೇಳ ಆಯೋಜನೆ

    ಕೊಪ್ಪಳ: ಕೃಷಿ ಆಧಾರಿತ ಕಸುಬನ್ನು ಪರಿಚಯಿಸಲು ಕೊಪ್ಪಳದ ತೋಟಗಾರಿಕಾ ಇಲಾಖೆ ತನ್ನ ಆವರಣದಲ್ಲಿ ಮಧು ಮೇಳವನ್ನು ಆಯೋಜಿಸಿದೆ.

    ಜೇನು ಸಾಕಣೆ ರೈತರಿಗೆ ಉತ್ತಮ ಆದಾಯ ತರುವ ಜೊತೆಗೆ ಬೆಳೆದ ಬೆಳೆ ಹೆಚ್ಚು ಇಳುವರಿ ಬರುವುದಕ್ಕೂ ಸಾಧ್ಯವಾಗುತ್ತೆ. ಇಂಥ ಕೃಷಿ ಆಧಾರಿತ ಕಸುಬನ್ನು ರೈತರಿಗೆ ಪರಿಚಯಿಸಲು ಮೇಳ ಆಯೋಜಿಸಲಾಗಿದ್ದು, ಈ ಮೇಳದಲ್ಲಿ ರೈತರು ತಾವೂ ಹೇಗೆ ಈ ಜೇನು ಕೃಷಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದಿದ್ದಾರೆ.

    ತೋಟಗಾರಿಕಾ ಇಲಾಖೆ ಆವರಣದಲ್ಲಿ ಮಧು ಮೇಳವನ್ನು ಆಯೋಜಿಸಲಾಗಿದೆ. ಇಲ್ಲಿ ಮೂರು ದಿನಗಳ ಕಾಲ ಜೇನು ಪ್ರದರ್ಶನ, ಮಾರಾಟ ಮೇಳ ಹಾಗೂ ಜೇನು ಕೃಷಿ ತಾಂತ್ರಿಕ ಕಾರ್ಯಗಾರ ನಡೆಯುತ್ತಿದ್ದು, ಜೇನು ತುಪ್ಪ, ಜ್ಯಾಮ್, ರಾಯಲ್ ಜೆಲ್ಲಿ, ಮೇಣಬತ್ತಿ, ಕ್ಯಾಂಡಿ ಸೇರಿ ಇತ್ಯಾದಿ ವಸ್ತುಗಳು ಮಾರಾಟ ನಡೆಯುತ್ತಿದೆ.

    ಕೃಷಿಯಲ್ಲಿ ಇಳುವರಿ ಹೆಚ್ಚಿಸಲು, ಆರೋಗ್ಯ ಪಾಲನೆ ಹಾಗೂ ಜೀವರಾಶಿಗಳ ಉಳಿಯುವಿಕೆಗಾಗಿ ಜೇನು ಸಾಕಾಣಿಕೆ ಕೃಷಿಕರ ಉಪ ಕಸುಬಾಗಬೇಕು ಎಂಬ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು. ಜೇನು ಹುಳುಗಳ ಪರಾಗಸ್ಪರ್ಶ ಕ್ರಿಯೆಯಿಂದ ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿದೆ. ಅಷ್ಟೇ ಅಲ್ಲದೇ ಇದನ್ನು ಉಪ ಕಸುಬಾಗಿಸಿಕೊಳ್ಳುವುದರಿಂದ ಆದಾಯವೂ ಹೆಚ್ಚುತ್ತದೆ ಎಂಬ ಮಾಹಿತಿ ನೀಡಲಾಯಿತು.

    ಸದ್ಯ ಜೇನು ಆರೋಗ್ಯಕ್ಕೆ ಒಳ್ಳೆಯ ಪದಾರ್ಥವಾಗಿರುವುದರಿಂದ ಮಧು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews