Tag: Honda City

  • 14.89 ಲಕ್ಷಕ್ಕೆ ಹೋಂಡಾ ಸಿಟಿ ಸ್ಪೋರ್ಟ್ ಎಡಿಷನ್ ಬಿಡುಗಡೆ – ಕಾರ್‌ನಲ್ಲಿ ಏನು ಬದಲಾವಣೆಯಾಗಿದೆ?

    14.89 ಲಕ್ಷಕ್ಕೆ ಹೋಂಡಾ ಸಿಟಿ ಸ್ಪೋರ್ಟ್ ಎಡಿಷನ್ ಬಿಡುಗಡೆ – ಕಾರ್‌ನಲ್ಲಿ ಏನು ಬದಲಾವಣೆಯಾಗಿದೆ?

    ಪ್ರಮುಖ ವಾಹನ ತಯಾರಿಕಾ ಕಂಪನಿ ಹೋಂಡಾ ಹೊಸ ಸಿಟಿ ಸ್ಪೋರ್ಟ್ ಎಡಿಷನ್ (Honda City Sport Edition) ಕಾರನ್ನು ಬಿಡುಗಡೆ ಮಾಡಿದೆ. ಇದರ ಪರಿಚಯಾತ್ಮಕ ಬೆಲೆ 14.89 ಲಕ್ಷ.

    ಹೊಸ ಸ್ಪೋರ್ಟ್ ರೂಪಾಂತರದ ಕಾರಿನಲ್ಲಿ ಉಳಿದ ಹೋಂಡಾ ಸಿಟಿ ಕಾರುಗಳಂತೆಯೇ 1.5L i-VTEC ಪೆಟ್ರೋಲ್ ಎಂಜಿನ್ ಇದ್ದು, ಇದು ಕೇವಲ CVT ಗೇರ್ ಬಾಕ್ಸ್ ಮಾದರಿಯಲ್ಲಿ ಮಾತ್ರ ದೊರೆಯಲಿದೆ. ಈ ಎಂಜಿನ್ 121PS ಪವರ್, 145NM ಟಾರ್ಕ್ ಉತ್ಪಾದಿಸುತ್ತದೆ. 1 ಲೀಟರ್‌ಗೆ 18.4 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಹೊಸ ಹೋಂಡಾ ಸಿಟಿ ಸ್ಪೋರ್ಟ್ ಸೀಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಿರುತ್ತವೆ.

    ಪರಿಚಯಾತ್ಮಕ ಬೆಲೆಯಲ್ಲಿ, ಸಿಟಿ ಸ್ಪೋರ್ಟ್ V CVT ರೂಪಾಂತರಕ್ಕಿಂತ 49,000 ರೂ. ಹೆಚ್ಚು ಬೆಲೆ ಹೊಂದಿದೆ. ಒಳಗೆ ಮತ್ತು ಹೊರಗೆ ಸಾಕಷ್ಟು ಕಾಸ್ಮೆಟಿಕ್ ಬದಲಾವಣೆಗಳನ್ನು ಸಿಟಿ ಸ್ಪೋರ್ಟ್ ಹೊಂದಿದೆ. ಒಳಾಂಗಣ ವಿನ್ಯಾಸ ಸ್ಪೋರ್ಟಿ ಲುಕ್ ಕೊಡುತ್ತದೆ. ಸೀಟುಗಳು, ಬಾಗಿಲುಗಳು, ರೂಫ್ ಮತ್ತು ಪಿಲ್ಲರ್‌ಗಳು ಕಪ್ಪು ಬಣ್ಣದಿಂದ ಕೂಡಿದೆ. ಸೀಟುಗಳು, ಡೋರ್ ಇನ್ಸರ್ಟ್‌ಗಳು ಮತ್ತು ಸ್ಟೀರಿಂಗ್ ವೀಲ್ ಮೇಲೆ ಕೆಂಪು ಬಣ್ಣದ ದರದ ಹೊಲಿಗೆಯಿದೆ. ಡ್ಯಾಶ್‌ಬೋರ್ಡ್‌ನಲ್ಲಿ (Dashboard) ಸಹ ಕೆಂಪು ಬಣ್ಣದ ಇನ್ಸರ್ಟ್ ನೋಡಬಹುದಾಗಿದೆ. ಇನ್ನು ಹೊರಾಂಗಣ ವಿನ್ಯಾಸ ನೋಡುವುದಾದರೆ, ಸ್ಪೋರ್ಟಿ ಬ್ಲಾಕ್ ಗ್ರಿಲ್, ಸ್ಪೋರ್ಟಿ ಬ್ಲಾಕ್ ಟ್ರಂಕ್ ಲಿಪ್ ಸ್ಪಾಯ್ಲರ್, ಬ್ಲಾಕ್ ಶಾರ್ಕ್ ಫಿನ್ ಆಂಟೆನಾ ಮತ್ತು ವಿಶೇಷ ಸ್ಪೋರ್ಟ್ ಲೋಗೋವನ್ನು ಸಿಟಿ ಸ್ಪೋರ್ಟ್‌ ಹೊಂದಿದೆ. ಇದನ್ನೂ ಓದಿ: ಭಾರತ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಮಾರುತಿ ಡಿಸೈರ್‌ಗೆ 5 ಸ್ಟಾರ್, ಬಲೆನೊಗೆ 4 ಸ್ಟಾರ್!

    ADAS ಸೂಟ್, ಫಾಗ್ ಲೈಟ್‌ಗಳು, ಆಟೋ ಹೆಡ್‌ಲೈಟ್‌ಗಳು, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್‌ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕ, ಕೀಲೆಸ್ ಎಂಟ್ರಿ & ಗೋ, ಪ್ಯಾಡಲ್ ಶಿಫ್ಟರ್‌ಗಳು, 7-ಬಣ್ಣದ ಆಂಬಿಯೆಂಟ್ ಲೈಟಿಂಗ್ ಸಿಸ್ಟಮ್, ಲೆದರೆಟ್ ಸೀಟ್ ಕವರ್, ಲೆದರೆಟ್ ಸ್ಟೀರಿಂಗ್ ಮತ್ತು ಲೆದರೆಟ್ ಗೇರ್ ನಾಬ್ ಈ ಕಾರಿನಲ್ಲಿ ದೊರೆಯುತ್ತದೆ. ಇದನ್ನೂ ಓದಿ: ಆರ್‌ಟಿಐಯಡಿ ಸಲ್ಲಿಸಿದ ಅರ್ಜಿಯನ್ನು ಉಡಾಫೆ ಮಾಡಬೇಡಿ – ಕೆ. ಬದ್ರುದ್ದೀನ್ ಎಚ್ಚರಿಕೆ

    ಸಿಟಿ ಸ್ಪೋರ್ಟ್ ಕಾರಿನಲ್ಲಿ ಸನ್‌ರೂಫ್, ಹಿಂಭಾಗದ AC ವೆಂಟ್‌ಗಳು, 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ವೈಪರ್‌ಗಳು, ಲೇನ್ ವಾಚ್ ಕ್ಯಾಮೆರಾ ಮತ್ತು ಆಟೋ-ಡಿಮ್ಮಿಂಗ್ ಹಿಂಬದಿ ಮಿರರ್‌ನಂತಹ ವೈಶಿಷ್ಟ್ಯಗಳು ಯಾವುದೂ ಇಲ್ಲ.

    ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಮೀಟಿಯೋರಾಯ್ಡ್‌ ಗ್ರೇ ಮೆಟಾಲಿಕ್ ಎಂಬ 3 ಬಣ್ಣಗಳಲ್ಲಿ ಸಿಟಿ ಸ್ಪೋರ್ಟ್‌ ಲಭ್ಯವಿದೆ.

  • ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ – ಇಬ್ಬರು ಸಾವು

    ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ – ಇಬ್ಬರು ಸಾವು

    ನವದೆಹಲಿ: ವೇಗವಾಗಿ ಬಂದ ಕಾರು ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಬಡಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಪೂರ್ವ ದೆಹಲಿಯ ವಿವೇಕ್ ವಿಹಾರದಲ್ಲಿ ನಡೆದಿದೆ.

    ಈ ಘಟನೆಯಲ್ಲಿ ಮಲ್ಕಾಗಂಜ್ ಮೂಲದ 18 ವರ್ಷದ ಪ್ರಬ್ಬೋತ್ ಸಿಂಗ್ ಮತ್ತು ಹರ್ಯಾಣ ಸಿರ್ಸಾ ಮೂಲದ 20 ವರ್ಷದ ರುಬಲ್ ಸಾವನ್ನಪ್ಪಿದ್ದು, ಕಮಲಾ ನಗರ್ ನಿವಾಸಿ ಕೇಶವ್ (21) ಮತ್ತು ಅರ್ಷ್‍ಪ್ರೀತ್‍ಗೆ ಗಂಭೀರವಾಗಿ ಗಾಯವಾಗಿದೆ.

    ತುಂಬಾ ವೇಗದಲ್ಲಿ ಬಂದ ಹೋಂಡಾ ಸಿಟಿ ಕಾರು ವಿದ್ಯುತ್ ಕಂಬಕ್ಕೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಕಾರು ಬಡಿದ ರಭಸಕ್ಕೆ ಕಂಬ ಕೂಡ ಬಾಗಿದ್ದು, ಇಬ್ಬರು ಮೃತ ಪಟ್ಟಿದ್ದಾರೆ. ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ಮೇಘನಾ ಯಾದವ್, ತೀವ್ರವಾಗಿ ಗಾಯಗೊಂಡವರನ್ನು ಹತ್ತಿರದ ಜಿಟಿಬಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತುಂಬಾ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಚಾಲಕ ತುಂಬಾ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ ಕಂಬಕ್ಕೆ ಬಡಿದಿದ್ದಾನೆ ಅದ್ದರಿಂದ ಈ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಿದ್ದಾರೆ.