Tag: Honawad

  • ವಕ್ಫ್‌ ಆಸ್ತಿ ವಿವಾದ | 1964-1974ರ ದಾಖಲೆ ಪರಿಶೀಲಿಸಿ ಕ್ರಮವಹಿಸಲು ಟಾಸ್ಕ್ ಫೋರ್ಸ್ ರಚನೆ

    ವಕ್ಫ್‌ ಆಸ್ತಿ ವಿವಾದ | 1964-1974ರ ದಾಖಲೆ ಪರಿಶೀಲಿಸಿ ಕ್ರಮವಹಿಸಲು ಟಾಸ್ಕ್ ಫೋರ್ಸ್ ರಚನೆ

    – ವಿಜಯಪುರದಲ್ಲಿ ರೈತರ ಒಂದಿಷ್ಟೂ ಜಮೀನು ವಕ್ಫ್‌ಗೆ ಸೇರಿಸಿಲ್ಲ; ಎಂ.ಬಿ ಪಾಟೀಲ್‌ ಸ್ಪಷ್ಟನೆ

    ವಿಜಯಪುರ: ಜಿಲ್ಲೆಯ ವಕ್ಫ್ ಆಸ್ತಿಗೆ (Waqf Property) ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್‌ ಸಮಿತಿಯೊಂದನ್ನು ರಚಿಸಿ, 1964 ರಿಂದ 1974ರ ವರೆಗಿನ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸುವಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್‌ (MB Patil) ಸೂಚಿಸಿದರು.

    ನಗರದ ಸೋಲಾಪುರ ರಸ್ತೆಯಲ್ಲಿರುವ ಸಚಿವರ ಗೃಹ ಕಚೇರಿಯಲ್ಲಿ ಜಿಲ್ಲೆಯ ವಿವಿಧ ತಹಶೀಲ್ದಾರರು, ವಕ್ಫ್ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿದರು. ಬಳಿಕ ಮಾತನಾಡಿದ ಎಂ.ಬಿ ಪಾಟೀಲ್‌, ವಿಜಯಪುರ (Vijayapura) ಜಿಲ್ಲೆಯಾದ್ಯಂತ ರೈತರು (Farmers) ಸೇರಿದಂತೆ ಖಾಸಗಿ ಜಮೀನುಗಳ ಪೈಕಿ ಒಂದು ಎಕರೆಯೂ ಸಹ ವಕ್ಫ್‌ಗೆ ಸೇರಿಸಿಲ್ಲ. 1974ರ ಗೆಜೆಟ್ ನೋಟಿಫಿಕೇಶನ್ ಪ್ರಕಾರ ವಕ್ಫ್ ಆಸ್ತಿ ಮಾತ್ರ ಇಂದೀಕರಣ ಮಾಡಲಾಗುತ್ತಿದ್ದು, ಈ ಕುರಿತು ಅನವಶ್ಯಕವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ. ಎಲ್ಲ ಗೊಂದಲಕ್ಕೆ ಅಂತ್ಯ ಹಾಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಸಮಿತಿ ರಚಿಸಿಕೊಂಡು 1964 ರಿಂದ 1974ರ ವರೆಗಿನ ದಾಖಲೆ ಪರಿಶೀಲಿಸಿ ಅಗತ್ಯ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    1974ರಲ್ಲಿ ಹೊರಡಿಸಲಾದ ಗೆಜೆಟ್ ನೋಟಿಫಿಕೇಶನ್‍ನಲ್ಲಿ ನಗರದಲ್ಲಿರುವ ಖಾಜಾ ಅಮೀನ ದರ್ಗಾ ಸರ್ವೇ ನಂಬರ್ ಹೊನವಾಡ ಗ್ರಾಮದ ಆಸ್ತಿ ಎಂದು ನಮೂದಾಗಿರುವುದರಿಂದ ವಕ್ಫ್ ಮಂಡಳಿಯಿಂದ ಮತ್ತೇ 1977ರಲ್ಲಿ ಮತ್ತೆ ಬದಲಾವಣೆ ಮಾಡಿ ಸರಿಪಡಿಸಲಾಗಿದೆ. ಹೊನವಾಡ ಗ್ರಾಮದ ಯಾರಿಗೂ ನೋಟಿಸ್ ಈವರೆಗೆ ಜಾರಿ ಮಾಡಿರುವುದಿಲ್ಲ, ಸಂಬಂಧಿಸಿದ ರೈತರ-ಮಾಲೀಕರ ಹೆಸರಿನಲ್ಲಿಯೇ ಜಮೀನುಗಳು ಇವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ವೇಳೆ ಗೆಜೆಟ್ ನೋಟಿಫಿಕೇಶನ್‍ಗಿಂತ ಮುಂಚಿತವಾಗಿ 1964 ರಿಂದ 1974ರ ವರೆಗಿನ ದಾಖಲೆಗಳನ್ನು ಪರಿಶೀಲಿಸಿ ಸರಿಪಡಿಸಿ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

    ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಈವರೆಗೆ ಮಾತ್ರ 124 ನೋಟಿಸ್ ನೀಡಲಾಗಿದೆ. ಇಂಡಿ ತಾಲೂಕಿಗೆ ಸಂಬಂಧಿಸಿದಂತೆ ತಹಶೀಲ್ದಾರರು ನೋಟಿಸ್ ನೀಡದೆಯೇ 41 ಆಸ್ತಿಗಳ ಇಂದೀಕರಣ ಕುರಿತು ಉಪವಿಭಾಗಾಧಿಕಾರಿಗಳು ಸ್ವಯಂಪ್ರೇರಿತ ಪ್ರಕರಣವೆಂದು ಪರಿಗಣಿಸಿ ಅಗತ್ಯ ಕ್ರಮ ವಹಿಸಬೇಕು. ಸಿಂದಗಿಯ ವಿರಕ್ತಮಠದ ಆಸ್ತಿ ಸರ್ವೇ ನಂ.1029 ಬದಲಿಗೆ 1020 ಆಗಿದ್ದು, ಈ ಕುರಿತು ಅಗತ್ಯ ಕ್ರಮ ವಹಿಸಿ ಸರಿಪಡಿಸುವಂತೆ ಅವರು ಸೂಚನೆ ನೀಡಿದರು.

    ಯಾರೂ ತಮ್ಮ ಆಸ್ತಿ- ಜಮೀನುಗಳ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ವಕ್ಫ್ ಇಲಾಖೆಯ ಆಸ್ತಿಗಳ ಇಂದೀಕರಣ ಮಾತ್ರ ಮಾಡಲಾಗುತ್ತಿರುವ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಕ್ಫ್ ಇಲಾಖೆ ಅಧಿಕಾರಿ ಶ್ರೀಮತಿ ತಬಸ್ಸುಮ್ ಎಂ. ಮೊಹಸೀನ್ ಜಮಖಂಡಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

  • ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ಬರೆದಿದ್ದರಿಂದ ಗೊಂದಲ ಸೃಷ್ಟಿಯಾಗಿದೆ – ಎಂ.ಬಿ ಪಾಟೀಲ್ ಸ್ಪಷ್ಟನೆ

    ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ಬರೆದಿದ್ದರಿಂದ ಗೊಂದಲ ಸೃಷ್ಟಿಯಾಗಿದೆ – ಎಂ.ಬಿ ಪಾಟೀಲ್ ಸ್ಪಷ್ಟನೆ

    ವಿಜಯಪುರ: ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ಬರೆದಿದ್ದರಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ (MB Patil) ಸ್ಪಷ್ಟನೆ ನೀಡಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ರೈತರ ಅಸ್ತಿಯಲ್ಲಿ ವಕ್ಫ್ ಬೋರ್ಡ್ ಸೇರ್ಪಡೆ ವಿಚಾರವಾಗಿ ಯಾರು ಭಯಪಡುವ ವಿಚಾರ ಇಲ್ಲ. ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ಬರೆದಿದ್ದರಿಂದ ಗೊಂದಲ ಸೃಷ್ಟಿಯಾಗಿದೆ. ಹೊನವಾಡ ಗ್ರಾಮದಲ್ಲಿ ಕೇವಲ 10 ಎಕರೆ ಮಾತ್ರ ವಕ್ಫ್ ಆಸ್ತಿ ಇದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಮತ್ತೆ ಮಾತನಾಡುತ್ತೇನೆ ಎಂದು ತಿಳಿಸಿದರು.ಇದನ್ನೂ ಓದಿ: ಸ್ವೀಟಿ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್- 2 ಸಿನಿಮಾಗಳ ಶೂಟಿಂಗ್ ಮುಗಿಸಿದ ನಟಿ

    ವಕ್ಫ್ ಆಸ್ತಿಗಳ ಬಗ್ಗೆ ಜಿಲ್ಲೆಯಲ್ಲಿ ಬಹಳಷ್ಟು ಗೊಂದಲ ಸೃಷ್ಟಿ ಮಾಡಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದೆ. ಹೊನವಾಡ ಗ್ರಾಮದಲ್ಲಿ 1200 ಎಕರೆ ರೈತರ ಭೂಮಿ ವಕ್ಫ ಆಗಿದೆ ಎಂದು ಸುದ್ದಿ ಹಬ್ಬಿಸಲಾಗಿದೆ. ಹೊನವಾಡದಲ್ಲಿ ಯಾವುದೇ ರೈತನಿಗೆ ನೋಟಿಸ್ ನೀಡಿಲ್ಲ. ಗೆಜೆಟ್‌ನಲ್ಲಿ ಗೊಂದಲ ಉಂಟಾಗಿ ಈ ರೀತಿಯಾಗಿದೆ. 10 ಎಕರೆ ಮಾತ್ರ ವಕ್ಫ್ ಆಸ್ತಿ ಹೊನವಾಡದಲ್ಲಿದೆ. 124 ನೋಟಿಸ್ ಜಿಲ್ಲೆಯಲ್ಲಿ ನೀಡಲಾಗಿದೆ. 433 ರೈತರಿಗೆ ನೋಟಿಸ್ ನೀಡಲಾಗಿದೆ. ಚಡಚಣ, ಇಂಡಿ ತಹಶೀಲ್ದಾರರ್ ನೋಟಿಸ್ ನೀಡದೇ ಸರ್ವೇ ನಂಬರ್ ಹಾಕಿದ್ದಾರೆ. ಎಸಿ ಅವರು ಈ ಬಗ್ಗೆ ತನಿಖೆ ಮಾಡುತ್ತಾರೆ ಎಂದರು.

    ವಿಜಯಪುರದಲ್ಲಿ ಒಟ್ಟು 14,201 ಎಕರೆ ಆಸ್ತಿಯಿದೆ. 12,083 ಎಕರೆಯಲ್ಲಿ 70% ಮುಸ್ಲಿಂರ ಆಸ್ತಿಯಿದೆ. ಹಿಂದೂಗಳಿಗೆ 30% ಜಾಗ ಮಾರಾಟ ಮಾಡಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಯರಗಲ್ ಗ್ರಾಮದಲ್ಲಿ ಸರ್ವೇನಂಬರ್ 138ನಲ್ಲಿ 13 ಎಕರೆ 1974ರಲ್ಲಿ ಗೆಜೆಟ್ ನೋಟಿಪಿಕೇಷನ್ ಮಾಡಲಾಗಿದೆ. ಇದನ್ನ ವಕ್ಫ್ ಮಂಡಳಿಯವರು ಸರಿ ಪಡಿಸುತ್ತಿದ್ದಾರೆ. 1 ಎಕರೆ 36 ಗುಂಟೆಯಿರುವ ಗುರುಲಿಂಗ ವಿರಕ್ತಮಠ ಆಸ್ತಿ ಬಗ್ಗೆ ಮಾಹಿತಿ ತಪ್ಪಾಗಿದೆ. 1029 ಬದಲಾಗಿ 1020 ಆಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಮಾಡಲಾಗಿದೆ. 1974ರ ಮೊದಲು ಏನಾದರೂ ಬದಲಾಗಿದೆ ಎಂದು ಚೆಕ್ ಮಾಡುತ್ತಾರೆ ಎಂದು ತಿಳಿಸಿದರು.ಇದನ್ನೂ ಓದಿ: ಬೇಲೆಕೇರಿ ಅದಿರು ಲೂಟಿಯಾಗಿದ್ದು ಬಿಜೆಪಿ ಟೈಂನಲ್ಲಿ: ಹೊಸ ಬಾಂಬ್‌ ಸಿಡಿಸಿದ ಹೆಚ್‌.ಕೆ.ಪಾಟೀಲ್‌