Tag: homework

  • ಚಿತ್ರದುರ್ಗ| ಕಿಡ್ನ್ಯಾಪ್ ಕೇಸ್‌ಗೆ ಟ್ವಿಸ್ಟ್ – ಹೋಂವರ್ಕ್, ಟ್ಯೂಷನ್‌ನಿಂದ ತಪ್ಪಿಸಿಕೊಳ್ಳಲು ಕಥೆ ಕಟ್ಟಿದ ಬಾಲಕರು

    ಚಿತ್ರದುರ್ಗ| ಕಿಡ್ನ್ಯಾಪ್ ಕೇಸ್‌ಗೆ ಟ್ವಿಸ್ಟ್ – ಹೋಂವರ್ಕ್, ಟ್ಯೂಷನ್‌ನಿಂದ ತಪ್ಪಿಸಿಕೊಳ್ಳಲು ಕಥೆ ಕಟ್ಟಿದ ಬಾಲಕರು

    ಚಿತ್ರದುರ್ಗ: ಟ್ಯೂಷನ್‌ಗೆ (Tuition) ಹೋಗುವುದರಿಂದ ತಪ್ಪಿಸಿಕೊಳ್ಳಲು 11 ವರ್ಷದ ಬಾಲಕರು ಸಿನಿಮಾ ಶೈಲಿಯಲ್ಲಿ ಕಿಡ್ನ್ಯಾಪ್ (Kidnap) ಕಥೆ ಕಟ್ಟಿದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದಲ್ಲಿ ನಡೆದಿದೆ.

    ನಿತ್ಯ ಟ್ಯೂಷನ್‌ಗೆ ಹೋಗಿಬರುತ್ತಿದ್ದ ಇಬ್ಬರು ಮಕ್ಕಳು ಟ್ಯೂಷನ್‌ನಲ್ಲಿ ಕೊಟ್ಟಿದ್ದ ಹೋಂವರ್ಕ್ (Homework) ಮಾಡಲಾಗದೇ, ಹೊಸ ಕಥೆಯೊಂದನ್ನು ಹೆಣೆದಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಟ್ಯೂಷನ್‌ಗೆ ತೆರಳಿದ್ದ ಇಬ್ಬರು ಬಾಲಕರು, ನಮ್ಮ ಅಪಹರಣಕ್ಕೆ ಕಳ್ಳರು ಯತ್ನಿಸಿದ್ರು. ಕಳೆದ 15 ದಿನಗಳಿಂದ ಈ ಮಕ್ಕಳ ಅಪಹರಣಕ್ಕೆ ನಾಲ್ವರ ತಂಡ ಸ್ಕೆಚ್ ಹಾಕಿದ್ದು, ಬಹಿರ್ದೆಸೆಗೆ ತೆರಳಿದ್ದವರನ್ನು ರಾಸಾಯನಿಕ ಸ್ಪ್ರೇ ಸಿಂಪಡಿಸಿ ಓಮ್ನಿ ಕಾರಲ್ಲಿ ಕಿಡ್ನಾಪ್ ಮಾಡಿದ್ದು, 10 ಕಿಲೋಮೀಟರ್ ದೂರದಲ್ಲಿ ಬಿಟ್ಟು ಎಸ್ಕೇಪ್ ಆದರು ಎಂದು ಎಲ್ಲರನ್ನು ನಂಬಿಸಿದ್ದರು. ಈ ಪ್ರಕರಣದಿಂದ ಆತಂಕಗೊಂಡ ಮಕ್ಕಳ ಪೋಷಕರು ಅಬ್ಬಿನಹೊಳೆ ಠಾಣೆಗೆ ದೂರು ನೀಡಿ, ಕೂಡಲೇ ಈ ಪ್ರಕರಣ ಭೇದಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಅಪಹರಣಕಾರರನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ – ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಪತ್ರ ಬರೆದ ಸಂಸದ ಸುಧಾಕರ್‌

    ಇನ್ನು ಈ ವಿಚಾರ ಕೇಳಿ ಬೆಚ್ಚಿಬಿದ್ದ ಹಿರಿಯೂರು ಡಿವೈಎಸ್ಪಿ ಶಿವಕುಮಾರ್ ಮತ್ತು ತಂಡ ಪ್ರಕರಣದ ಬೆನ್ನತ್ತಿದೆ. ಬಾಲಕರು ಓದುತಿದ್ದ ಶಾಲೆ ಹಾಗೂ ಟ್ಯೂಷನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಧರ್ಮಪುರದಲ್ಲಿನ ಸಿಸಿಟಿವಿಗಳಲ್ಲಿ ತಲಾಶ್ ನಡೆಸಿದ್ದಾರೆ. ಆದರೆ ಬಾಲಕರು ಹೇಳಿದಂತೆ ಓಮ್ನಿ ಓಡಾಡಿರುವ ಕುರುಹು ಎಲ್ಲೂ ಪತ್ತೆಯಾಗಲಿಲ್ಲ. ಆಗ ಅಲರ್ಟ್ ಆದ ಪೊಲೀಸರು, ಈ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಿ, ಬುದ್ದಿವಂತಿಕೆಯಿಂದ ಮಕ್ಕಳ ವಿಚಾರಣೆ ನಡೆಸಿದಾಗ ಕಿಡ್ನ್ಯಾಪ್ ಕಹಾನಿಯ ಅಸಲಿ ಸತ್ಯವನ್ನು ಬಾಲಕರು ಬಾಯಿ ಬಿಟ್ಟಿದ್ದಾರೆ ಎಂದು ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಬಜೆಟ್; ಆರ್ಥಿಕ ಸುಧಾರಣೆಗೆ ಐದು ವಲಯಗಳಲ್ಲಿ ಬದಲಾವಣೆ ನಿರೀಕ್ಷೆ

  • ಹೋಂ ವರ್ಕ್ ಮಾಡ್ಲಿಲ್ಲ ಅಂತ ಮಕ್ಕಳಿಗೆ ಕ್ರೂರವಾಗಿ ಥಳಿಸಿದ ಟ್ಯೂಷನ್ ಟೀಚರ್

    ಹೋಂ ವರ್ಕ್ ಮಾಡ್ಲಿಲ್ಲ ಅಂತ ಮಕ್ಕಳಿಗೆ ಕ್ರೂರವಾಗಿ ಥಳಿಸಿದ ಟ್ಯೂಷನ್ ಟೀಚರ್

    ನವದೆಹಲಿ: ಹೋಂ ವರ್ಕ್ ಮಾಡದೇ ಇರುವ ಕಾರಣ ಇಬ್ಬರು ಬಾಲಕಿಯರಿಗೆ ಟ್ಯೂಷನ್ ಟೀಚರ್ ಕ್ರೂರವಾಗಿ ಥಳಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

    ನಗರದ ವಾಯುವ್ಯ ಭಾಗದಲ್ಲಿರುವ ಭಲ್ಸ್ವಾ ಡೈರಿಯಲ್ಲಿ ಈ ಘಟನೆ ನಡೆದಿದ್ದು, ಇದೀಗ ಬಾಲಕಿಯರ ತಂದೆ ನೀಡಿರುವ ದೂರಿನ ಆಧಾರದ ಮೇಲೆ ಟ್ಯೂಷನ್ ಟೀಚರ್ ಅನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಮುರುಘಾ ಮಠದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರು ಬೇರೆಡೆಗೆ ಶಿಫ್ಟ್‌ – ಮಕ್ಕಳ ಆಯೋಗದಿಂದ ಮಾಹಿತಿ

    KILLING CRIME

    ಆರು ಮತ್ತು ಎಂಟು ವರ್ಷದ ಇಬ್ಬರು ಬಾಲಕಿಯರು ಸಹೋದರಿಯರಾಗಿದ್ದು, ಅಳುತ್ತ ಮನೆಗೆ ಹಿಂದಿರುಗಿದಾಗ ಅವರ ದೇಹದ ಮೇಲೆ ಏಟಿನ ಗುರುತುಗಳಿತ್ತು. ಅಲ್ಲದೇ ಓರ್ವ ಮಗಳು ಪ್ರಜ್ಞೆ ತಪ್ಪಿದಳು. ಇಬ್ಬರನ್ನೂ ರೂಮ್‍ನಲ್ಲಿ ಕೂಡಿ ಹಾಕಿಕೊಂಡು ಟ್ಯೂಷನ್ ಟೀಚರ್ ಪ್ಲಾಸ್ಟಿಕ್ ಪೈಪ್‍ನಿಂದ ಥಳಿಸಿದ್ದಾಳೆ ಎಂದು ಅವರ ತಂದೆ ಆರೋಪಿಸಿದ್ದಾರೆ. ಇದನ್ನೂ ಓದಿ: ಸಾಯಿಬಾಬಾನ 3ನೇ ಅವತಾರ ಅಂತ ಜನರಿಗೆ ವಂಚನೆ – ನಕಲಿ ಬಾಬಾ ವಿರುದ್ಧ FIR

    ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡ ದೆಹಲಿ ಮಹಿಳಾ ಆಯೋಗವು ಮೊದಲು ಪೊಲೀಸರಿಗೆ ನೋಟಿಸ್ ನೀಡಿತ್ತು ಮತ್ತು ಈ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಇದೊಂದು ಭಯಾನಕ ಘಟನೆಯಾಗಿದ್ದು, ಬಾಲಕಿಯರಿಗೆ ಗಾಯಗಳಾಗಿರುವುದು ತುಂಬಾ ನೋವು ತರಿಸಿದೆ. ಒಬ್ಬ ಶಿಕ್ಷಕ ಈ ಪುಟ್ಟ ಹುಡುಗಿಯರನ್ನು ಹೇಗೆ ನಿರ್ದಯವಾಗಿ ಹೊಡೆಯುತ್ತಾನೆ? ಈ ಬಗ್ಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಸಮಿತಿಯು ಆರೋಪಿಗಳ ಬಂಧಿಸುವಂತೆ ಆಗ್ರಹಿಸಿದ್ದು, ಜೊತೆಗೆ ಎಫ್‍ಐಆರ್ ಪ್ರತಿಯನ್ನು ಸಹ ಕೇಳಿದೆ. ಸೆಪ್ಟೆಂಬರ್ 6ರೊಳಗೆ ಈ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ಮನವಿ ಮಾಡಿದೆ ಎಂದು ತಿಳಿಸಿದ್ದಾರೆ.

  • ಹೋಂ ವರ್ಕ್ ಮಾಡದ ಮಗನ ಕೈ,ಕಾಲು ಕಟ್ಟಿ ಫ್ಯಾನಿಗೆ ನೇತು ಹಾಕಿದ ತಂದೆ

    ಹೋಂ ವರ್ಕ್ ಮಾಡದ ಮಗನ ಕೈ,ಕಾಲು ಕಟ್ಟಿ ಫ್ಯಾನಿಗೆ ನೇತು ಹಾಕಿದ ತಂದೆ

    ಜೈಪುರ್: ಹೋಂ ವರ್ಕ್ ಮಾಡದ ಮಗನನ್ನು ತಂದೆ ಕೈ, ಕಾಲು ಕಟ್ಟಿ ಫ್ಯಾನಿಗೆ ತಲೆಕೆಳಗಾಗಿ ನೇತು ಹಾಕಿರುವ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.

    8 ವರ್ಷದ ಬಾಲಕ ಶಾಲೆಯಿಂದ ಮನೆಗೆ ಬಂದು ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಆತನನ್ನು ತಂದೆ ತಲೆಕೆಳಗಾಗಿ ನೇತು ಹಾಕಿದ್ದಾನೆ. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉದಯ್‍ಪುರದ ಬುಂದಿ ಜಿಲ್ಲೆಯ ದಾಬಿಯಲ್ಲಿ ಈ ಘಟನೆ ನಡೆದಿದೆ.

    ಮಗ ಹೋಂ ವರ್ಕ್ ಮಾಡಿರಲಿಲ್ಲ. ಈ ವಿಚಾರವಾಗಿ ಕೋಪಗೊಂಡ ತಂದೆ ಮಗನನ್ನು ಕಟ್ಟಿ, ತಲೆಕೆಳಗಾಗಿ ನೇತು ಹಾಕಿದಲ್ಲದೆ ಆತನಿಗೆ ಹೊಡೆಯಲು ಹೋಗಿದ್ದ. ಈ ದೃಶ್ಯವನ್ನು ವೀಡಿಯೋ ಮಾಡಿಕೊಂಡ ಆ ಬಾಲಕನ ತಾಯಿ ಬಳಿಕ ಗಂಡನನ್ನು ತಡೆದಿದ್ದಾಳೆ. ಬೇಕಾದರೆ ನನ್ನನ್ನು ಇಲ್ಲೇ ಸಾಯಿಸಿಬಿಡಿ, ಆದರೆ ನನ್ನ ಮಗನನ್ನು ಹೀಗೆಲ್ಲ ನೇತು ಹಾಕಬೇಡ ಎಂದು ಆ ಬಾಲಕ ಅಪ್ಪನ ಬಳಿ ಜೋರಾಗಿ ಅಳುತ್ತಾ ಬೇಡಿಕೊಳ್ಳುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.

    POLICE JEEP

    ಬಾಲಕನ ತಂದೆ ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದು, ಪದೇ ಪದೆ ಮಗನನ್ನು ಹೊಡೆದು, ಹಿಂಸೆ ನೀಡುತ್ತಿದ್ದ. ಆದರೆ ಈ ಘಟನೆಯ ಬಗ್ಗೆ ಮನೆಯವರಾರೂ ಆತನ ವಿರುದ್ಧ ದೂರು ನೀಡಿಲ್ಲ. ವೀಡಿಯೋ ಆಧಾರದಲ್ಲಿ  ಪೊಲೀಸರೇ ಕೇಸ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯಾವುದೇ ಭೂಕಂಪನ ಆಗಿಲ್ಲ – ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಸ್ಪಷ್ಟನೆ

    ಆರೋಪಿಯ ಹಿಂಸಾತ್ಮಕ ಸ್ವಭಾವದಿಂದಾಗಿ ಕುಟುಂಬದವರು ದೂರು ದಾಖಲಿಸಲು ಹೆದರುತ್ತಿದ್ದಾರೆ ಎನ್ನಲಾಗಿದೆ. ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಪ್ರಕರಣವನ್ನು ಗಮನಕ್ಕೆ ತಂದಿದ್ದು, ಕ್ರಮ ಕೈಗೊಂಡು 3 ದಿನಗಳಲ್ಲಿ ವರದಿ ಸಲ್ಲಿಸುವಂತೆ ಬಂಡಿ ಎಸ್‍ಪಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ಧೋನಿ CSK ಪರ ಆಡುವುದು ಕನ್ಫರ್ಮ್ – ರೈನಾ ಡೌಟ್?

  • ಸಿನಿಮಾ ಬಿಟ್ಟು ಮನೆಕೆಲಸದಲ್ಲಿ ಬ್ಯುಸಿಯಾದ್ರು ರಾಜಮೌಳಿ

    ಸಿನಿಮಾ ಬಿಟ್ಟು ಮನೆಕೆಲಸದಲ್ಲಿ ಬ್ಯುಸಿಯಾದ್ರು ರಾಜಮೌಳಿ

    ಹೈದರಾಬಾದ್: ಸದ್ಯ ಲಾಕ್‍ಡೌನ್‍ನಿಂದ ಸಿನಿಮಾಗಳಿಗೆ ಬ್ರೇಕ್ ಕೊಟ್ಟಿರುವ ಬಾಹುಬಲಿ ನಿರ್ದೇಶಕ ಎಸ್. ಎಸ್ ರಾಜಮೌಳಿ ಅವರು ಮನೆಯಲ್ಲಿ ಏನು ಮಾಡುತ್ತಿದ್ದಾರೆ ಎನ್ನುವ ಸ್ಪೆಷಲ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ‘ಬಾಹುಬಲಿ’ಯಂತಹ ಸರಣಿ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ರಾಜಮೌಳಿ ಸದ್ಯ ಮನೆಯಲ್ಲಿ ಕೆಲಸ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಮನೆಯಲ್ಲಿ ಕಸ ಗುಡಿಸುತ್ತಾ, ಕಿಟಕಿ ಕ್ಲೀನ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟರ್ ನಲ್ಲಿ ರಾಜಮೌಳಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಸಿನಿಮಾ ಮಾತ್ರವಲ್ಲ ಮನೆ ಕೆಲಸವನ್ನೂ ಚೆನ್ನಾಗೆ ಮಾಡ್ತೀರಾ ಸಾರ್ ಎಂದು ನೆಟ್ಟಿಗರು ರಾಜಮೌಳಿ ಟ್ವೀಟ್‍ಗೆ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ.

    ನಿರ್ದೇಶಕ ಹಾಗೂ ನಿರ್ಮಾಪಕ ಸಂದೀಪ್ ವಂಗಾ ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲಿ ಕೆಲಸ ಮಾಡುವ ವಿಡಿಯೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಕೇಲವ ವಿಡಿಯೋ ಪೊಲೀಸ್ ಮಾಡೋದಲ್ಲದೇ #BetheREALMAN ಅಂತ ಸೆಲೆಬ್ರಿಟಿಗಳಿಗೆ ಚಾಲೆಂಜ್ ಕೂಡ ಮಾಡಿದ್ದಾರೆ. ಮನೆ ಕೆಲಸದವರು ಇಲ್ಲದಿದ್ದಾಗ ಮಹಿಳೆಯರಿಗೆ ಮನೆ ಕೆಲಸದಲ್ಲಿ ಸಹಾಯ ಮಾಡಿ ರಿಯಲ್ ಮ್ಯಾನ್ ಆಗಿ ಎಂದು ಸಂದೀಪ್ ರಾಜಮೌಳಿ ಅವರನ್ನು ಟ್ಯಾಗ್ ಮಾಡಿ, ಚಾಲೆಂಜ್ ಹಾಕಿದ್ದರು.

    ಈ ಸವಾಲನ್ನು ಸ್ವೀಕರಿಸಿದ ರಾಜಮೌಳಿ ತಮ್ಮ ಮನೆ ಕೆಲಸ ಮಾಡಿ ರಿಯಲ್ ಮ್ಯಾನ್ ಆಗಿದ್ದಾರೆ. ಅಷ್ಟೇ ಅಲ್ಲದೇ ಮನೆ ಕೆಲಸ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿ, ಜೂನಿಯರ್ ಎನ್‍ಟಿಆರ್, ರಾಮ್ ಚರಣ್ ಹಾಗೂ ಎಂಎಂ ಕೀರವಾಣಿ ಅವರಿಗೂ ಚಾಲೆಂಜ್ ಪಾಸ್ ಮಾಡಿದ್ದಾರೆ.

    ಲಾಕ್‍ಡೌನ್‍ಗೂ ಮುನ್ನ ಟಾಲಿವುಡ್‍ನ ಬಹುನಿರೀಕ್ಷಿತ ಸಿನಿಮಾ ‘ಆರ್‌ಆರ್‌ಆರ್’ ಚಿತ್ರೀಕರಣದಲ್ಲಿ ರಾಜಮೌಳಿ ಅವರು ಬ್ಯುಸಿಯಾಗಿದ್ದರು. ರಾಮ್ ಚರಣ್ ಹಾಗೂ ಜೂನಿಯರ್ ಎನ್‍ಟಿಆರ್ ಜೊತೆಗೆ ಬಾಲಿವುಡ್ ತಾರೆಯರು ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದು, ಲಾಕ್‍ಡೌನ್‍ನಿಂದಾಗಿ ಶೂಟಿಂಗ್ ಕೆಲಸ ಸ್ಥಗಿತಗೊಂಡಿದೆ.

  • ಮಗಳಿಗೆ ಹೋಂವರ್ಕ್ ಮಾಡಿಸುವಂತೆ ಹೇಳಿ ಹೋದ ಮಾಲೀಕ – ವಿಡಿಯೋ ವೈರಲ್

    ಮಗಳಿಗೆ ಹೋಂವರ್ಕ್ ಮಾಡಿಸುವಂತೆ ಹೇಳಿ ಹೋದ ಮಾಲೀಕ – ವಿಡಿಯೋ ವೈರಲ್

    ನವದೆಹಲಿ: ನಾಯಿ ನಿಯತ್ತಿಗೆ ಸದಾ ಹೆಸರವಾಸಿಯಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಮಾಲೀಕ ವಹಿಸಿದ್ದ ಕೆಲಸವನ್ನು ನಾಯಿಯೊಂದು ನಿಯತ್ತಿನಿಂದ ಮಾಡಿದೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಚೈನೀಸ್ ವ್ಯಕ್ತಿಯೊಬ್ಬರು ಫಾಂಟೌನ್ ಎಂಬ ಹೆಸರಿನ ನಾಯಿಯನ್ನು ಸಾಕಿದ್ದರು. ತಮ್ಮ ಮನೆಯಲ್ಲಿ ಒಬ್ಬ ಸದಸ್ಯನಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಆ ನಾಯಿಗೆ ತಾವೂ ಮನೆಯಲ್ಲಿ ಇಲ್ಲದ ವೇಳೆ ತಮ್ಮ ಮಗಳಿಗೆ ಹೋಮ್ ವರ್ಕ್ ಮಾಡಿಸುವ ಜವಬ್ದಾರಿಯನ್ನು ವಹಿಸಿದ್ದರು. ಅದರಂತೆಯೇ ನಾಯಿ ಕೂಡ ಮಾಲೀಕ ವಹಿಸಿದ್ದ ಕೆಲಸವನ್ನು ನಿಯತ್ತಿನಿಂದ ಮಾಡಿದೆ. ಬಾಲಕಿಗೆ ಮುಂದೆ ನಿಂತು ಹೋಮ್ ವರ್ಕ್ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಫಾಂಟೌನ್ ನಾಯಿ ತನ್ನೆರಡು ಕಾಲುಗಳನ್ನು ನೆಲದ ಮೇಲೆ, ಮತ್ತೆರಡು ಕಾಲುಗಳನ್ನು ಮೇಜಿನ ಮೇಲಿಟ್ಟು ಗಮನವಿಟ್ಟು ಬಾಲಕಿ ಹೋಮ್ ವರ್ಕ್ ಮಾಡುತ್ತಿರುವುದನ್ನು ಗಮನಿಸುತ್ತಿದೆ. ಕೆಲವೊಮ್ಮೆ ದೂರದಿಂದ ನೋಡುತ್ತದೆ. ಒಮ್ಮೆ ಹತ್ತಿರಕ್ಕೆ ಹೋಗಿ ನೋಡುತ್ತದೆ. ಒಟ್ಟಿನಲ್ಲಿ ನಾಯಿ ಬಾಲಕಿ ಹೋಮ್ ವರ್ಕ್ ಮುಗಿಸುವರೆಗೂ ಮೇಜು ಬಿಟ್ಟು ಬೇರೆಡೆ ಹೋಗುವುದೇ ಇಲ್ಲ. ನಂತರ ಬಾಲಕಿ ಹೋಮ್ ವರ್ಕ್ ಮುಗಿಸಿದ ಬಳಿಕ ಆಕೆಯ ಜೊತೆ ಸೇರಿಕೊಂಡು ಆಟವಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ನಾನು ಹೋಮ್ ವರ್ಕ್ ಮುಗಿಸುವರೆಗೂ ನನ್ನ ಜೊತೆಯೇ ಫಾಂಟೌನ್ ಇರುತ್ತದೆ. ಹೀಗಾಗಿ ನಾನು ಬೇರೆಡೆ ಗಮನ ಹರಿಸುವುದಿಲ್ಲ. ನಾಯಿ ನನ್ನ ಜೊತೆ ಇರುವುದರಿಂದ ನನಗೆ ಬೇಸರವೂ ಆಗುವುದಿಲ್ಲ. ಇದರಿಂದ ನನ್ನ ಜೊತೆ ಸಹಪಾಠಿಯಿದ್ದಂತೆ ಭಾಸವಾಗುತ್ತದೆ ಎಂದು ಬಾಲಕಿ ಹೇಳಿದ್ದಾಳೆ. ಇತ್ತ ತಂದೆ ಕೂಡ ತಾವೂ ಸಾಕಿದ್ದ ನಾಯಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=ZbSHRstIhag

  • ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಬಾಲಕಿಯಿಂದ ಹೋಂವರ್ಕ್: ವೈರಲ್ ವಿಡಿಯೋ

    ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಬಾಲಕಿಯಿಂದ ಹೋಂವರ್ಕ್: ವೈರಲ್ ವಿಡಿಯೋ

    ಬೀಜಿಂಗ್: ಬಾಲಕಿಯೊಬ್ಬಳು ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ತನ್ನ ಹೋಂವರ್ಕ್ ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ.

    ಬಾಲಕಿ ತಂದೆ ಕಾರನ್ನು ಚಲಾಯಿಸುತ್ತಿದ್ದರು. ಬಾಲಕಿ ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಪುಸ್ತಕವನ್ನು ಇಟ್ಟುಕೊಂಡು ತನ್ನ ಹೋಂವರ್ಕ್ ಮಾಡಿದ್ದಾಳೆ.

    ಚಲಿಸುತ್ತಿದ್ದ ಕಾರಿನ ಕಿಟಕಿಯಿಂದ ದೇಹವನ್ನು ಹೊರ ಹಾಕಿ ಕಾರಿನ ರೂಫ್ ಅನ್ನು ಡೆಸ್ಕ್ ರೀತಿ ಮಾಡಿಕೊಂಡು ಅದರ ಮೇಲೆ ತನ್ನ ಪುಸ್ತಕವನ್ನು ಇಟ್ಟುಕೊಂಡು ಬಾಲಕಿ ತನ್ನ ಹೋಂವರ್ಕ್ ಮಾಡಿದ್ದಾಳೆ. ಬಾಲಕಿ ಹೋಂವರ್ಕ್ ಮಾಡುತ್ತಿರುವುದನ್ನು ನೋಡಿದ ಜನರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

    ಬಾಲಕಿಯ ತಂದೆ ಕಾರು ಚಲಾಯಿಸುತ್ತಾ ಪಕ್ಕದ ಸೀಟಿನಲ್ಲಿ ಇದ್ದ ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿದ್ದರು. ಆಗ ಅವರು ತನ್ನ ಮಗಳು ಕಾರಿನ ಕಿಟಕಿಯ ತುದಿಯಲ್ಲಿ ಕುಳಿತಿರುವುದನ್ನು ಗಮನಿಸಿದ್ದರು. ಆಗ ತಂದೆ ತಕ್ಷಣ ತನ್ನ ಮಗಳನ್ನು ಒಳಗೆ ಎಳೆದಿದ್ದಾರೆ.

    ಆಕೆ ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಹೋಂವರ್ಕ್ ಮಾಡುತ್ತಿರುವುದ್ದನ್ನು ನಾನು ಗಮನಿಸಲಿಲ್ಲ. ಇದಾದ ಬಳಿಕ ಈ ರೀತಿ ಮತ್ತೆ ಮಾಡಬಾರದು ಎಂದು ನನ್ನ ಮಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಬಾಲಕಿಯ ತಂದೆ ಮಿ. ಚೇಂಗ್ ತಿಳಿಸಿದ್ದಾರೆ.

    ಸದ್ಯ ಬಾಲಕಿಯ ತಂದೆಯ ಡ್ರೈವಿಂಗ್ ಲೈಸೆನ್ಸ್ ಅಮಾನತುಗಳಿಸಲಾಗಿದ್ದು, ಕಂಪನಿ ಮಿ. ಚೇಂಗ್‍ನನ್ನು ಮತ್ತೆ ಟ್ಯಾಕ್ಸಿ ಚಲಾಯಿಸಲು ಅವಕಾಶ ನೀಡುವುದಿಲ್ಲ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.  ಇದನ್ನೂ ಓದಿ: ಚಲಿಸುತ್ತಿದ ಸ್ಕೂಟಿ ಹಿಂಬದಿಯಲ್ಲಿ ಕೂತು ಹೋಂವರ್ಕ್ ಮಾಡಿದ ಬಾಲಕ- ವಿಡಿಯೋ ವೈರಲ್

  • ಚಲಿಸುತ್ತಿದ ಸ್ಕೂಟಿ ಹಿಂಬದಿಯಲ್ಲಿ ಕೂತು ಹೋಂವರ್ಕ್ ಮಾಡಿದ ಬಾಲಕ- ವಿಡಿಯೋ ವೈರಲ್

    ಚಲಿಸುತ್ತಿದ ಸ್ಕೂಟಿ ಹಿಂಬದಿಯಲ್ಲಿ ಕೂತು ಹೋಂವರ್ಕ್ ಮಾಡಿದ ಬಾಲಕ- ವಿಡಿಯೋ ವೈರಲ್

    ಬೆಂಗಳೂರು: ಚಲಿಸುತ್ತಿದ್ದ ಸ್ಕೂಟಿ ಹಿಂಬದಿ ಕೂತು ವಿದ್ಯಾರ್ಥಿಯೊಬ್ಬ ಹೋಂವರ್ಕ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿ ಬಾಲಕ ನಡುರಸ್ತೆಯಲ್ಲಿ ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಎಂದು ಯೋಚಿಸದೆ ಗಂಭೀರವಾಗಿ ತನ್ನ ಹೋಂವರ್ಕ್ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ 75 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

    ತಾಯಿ ತನ್ನ ಇಬ್ಬರು ಮಕ್ಕಳ ಜೊತೆ ಸ್ಕೂಟಿಯಲ್ಲಿ ಹೋಗುತ್ತಿದ್ದು, ಮುಂದೆ ಮಗಳನ್ನು ನಿಲ್ಲಿಸಿಕೊಂಡಿದ್ದಾರೆ. ಹಿಂಬದಿಯಲ್ಲಿ ಕುಳಿತಿದ್ದ ಬಾಲಕ ಸ್ಕೂಲ್ ಯೂನಿಫಾರ್ಮ್ ಹಾಕಿದ್ದು, ತಾಯಿ ತನ್ನ ಮಗನನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿರುವುದು ಗೊತ್ತಾಗುತ್ತದೆ.

    ಬಾಲಕ ಚಲಿಸುತ್ತಿದ್ದ ಸ್ಕೂಟಿ ಹಿಂಬದಿ ಕೂತು ಹೋಂವರ್ಕ್ ಮಾಡುತ್ತಿದ್ದಾಗ ಸ್ವಲ್ಪವೂ ತನ್ನ ಧ್ಯಾನವನ್ನು ಬೇರಡೆ ನೀಡಿಲ್ಲ. ಇನ್ನೂ ಬಾಲಕನ ತಾಯಿ ಮಗನಿಗೆ ಹೋಂವರ್ಕ್ ಮಾಡಲು ಕಷ್ಟವಾಗಬಾರದೆಂದು ಸ್ಕೂಟಿಯನ್ನು ನಿಧಾನವಾಗಿ ಚಲಾಯಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

    ಈ ವಿಡಿಯೋ ಒಟ್ಟು 75 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಕೇಂದ್ರ ಸಚಿವರಾದ ಕಿರಣ್ ರಿಜಿಜು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡು, ನಾನು ತಾಯಿ ಹಾಗೂ ವಿದ್ಯಾರ್ಥಿಗೆ ಸೆಲ್ಯೂಟ್ ಮಾಡುತ್ತೇನೆ. ಆದರೆ ನಿಮ್ಮ ಸುರಕ್ಷಿತೆಗಾಗಿ ಟ್ರಾಫಿಕ್ ನಿಯಮದ ಕಡೆ ಗಮನವಿರಲಿ ಎಂದು ಬರೆದುಕೊಂಡಿದ್ದಾರೆ.

    I salute the mother & studious son but pls be careful of traffic for safety.

    A post shared by Kiren Rijiju (@kiren.rijiju) on

  • ಹೋಂವರ್ಕ್ ಮಾಡದ್ದಕ್ಕೆ 3ನೇ ಕ್ಲಾಸ್ ವಿದ್ಯಾರ್ಥಿಗೆ ಸಹಪಾಠಿಗಳಿಂದ 40 ಬಾರಿ ಕಪಾಳಮೋಕ್ಷ

    ಹೋಂವರ್ಕ್ ಮಾಡದ್ದಕ್ಕೆ 3ನೇ ಕ್ಲಾಸ್ ವಿದ್ಯಾರ್ಥಿಗೆ ಸಹಪಾಠಿಗಳಿಂದ 40 ಬಾರಿ ಕಪಾಳಮೋಕ್ಷ

    ಲಕ್ನೋ: 3 ನೇ ತರಗತಿಯ ವಿದ್ಯಾರ್ಥಿ ಹೋಂ ವರ್ಕ್ ಮಾಡದಿದ್ದಕ್ಕೆ ಶಿಕ್ಷಕ, ಬಾಲಕನ ಸಹಪಾಠಿಗಳಿಂದಲೇ 40 ಬಾರಿ ಕಪಾಳಮೋಕ್ಷ ಮಾಡಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

    ಇಲ್ಲಿನ ಯುನೈಟೆಡ್ ಪಬ್ಲಿಕ್ ಸ್ಕೂಲ್‍ನಲ್ಲಿ ಈ ಘಟನೆ ನಡೆದಿದೆ. ಕಪಾಳಮೋಕ್ಷ ಮಾಡಿಸಿದ ನಿರ್ದಯಿ ಶಿಕ್ಷಕನನ್ನು ಅಮಾನತು ಮಾಡಲು ಆದೇಶ ಹೊರಡಿಸಲಾಗಿದೆ ಎಂದು ಶಾಲೆಯಪ್ರಾಂಶುಪಾಲರು ತಿಳಿಸಿದ್ದಾರೆ. ನನ್ನ ಮಗ ಯುವರಾಜ್ ಕಳೆದ 15 ದಿನಗಳಿಂದ ಖಿನ್ನತೆಗೊಳಗಾಗಿದ್ದ. ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದ. ನಾವು ಬಲವಂತ ಮಾಡಿ ಕೇಳಿದಾಗ ಹೋಂ ವರ್ಕ್ ಪೂರ್ಣಗೊಳಿಸದ ಕಾರಣ ಶಾಲಾ ಶಿಕ್ಷಕರೊಬ್ಬರು ಸಹಪಾಠಿಗಳಿಂದ ಕಪಾಳಮೋಕ್ಷ ಮಾಡಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ ಎಂದು ಬಾಲಕನ ಪೋಷಕರು ಹೇಳಿದ್ದಾರೆ.

    ಈ ಘಟನೆ ಸಂಬಂಧ ಬಾಲಕನ ಪೋಷಕರು ನೀಡಿರುವ ದೂರನ್ನು ಸ್ವೀಕರಿಸಿದ್ದು, ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಶಾಲಾ ಪ್ರಾಂಶುಪಾಲ ಶ್ಯಾಲಿ ಧೀರ್ ತಿಳಿಸಿದ್ದಾರೆ.

  • ಕೈಯಲ್ಲಿ ರಕ್ತ ಬರುವಂತೆ ವಿದ್ಯಾರ್ಥಿನಿಗೆ ಟೀಚರ್ ಥಳಿತ

    ಕೈಯಲ್ಲಿ ರಕ್ತ ಬರುವಂತೆ ವಿದ್ಯಾರ್ಥಿನಿಗೆ ಟೀಚರ್ ಥಳಿತ

    ಮೈಸೂರು: ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಶಾಲಾ ಶಿಕ್ಷಕಿ ವಿದ್ಯಾರ್ಥಿನಿಗೆ ತೀವ್ರವಾಗಿ ಥಳಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ಎನ್‍ಆರ್ ಮೊಹಲ್ಲದ ಸೆಂಟ್ ಆನ್ಸ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯಲ್ಲಿ 3ನೇ ತರಗತಿ ಓದುತ್ತಿರುವ ಬಾಲಕಿಗೆ ಶಿಕ್ಷಕಿ ಜವೀರಿಯಾ ಥಳಿಸಿದ್ದಾರೆ.

    ಕೈ ಯಲ್ಲಿ ರಕ್ತ ಬರುವ ರೀತಿಯಲ್ಲಿ ಶಿಕ್ಷಕಿ ಥಳಿಸಿರುವ ಕಾರಣ ಗಾಯಗೊಂಡ ವಿದ್ಯಾರ್ಥಿನಿ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಥಳಿತವನ್ನು ಪ್ರಶ್ನಿಸಿದ್ದ ಪೋಷಕರಿಗೆ ನಿಮ್ಮ ಮಗಳೆ ಬಿದ್ದಿದ್ದು ಎಂಬು ಸಬೂಬು ನೀಡಿದ್ದಾರೆ. ಹೀಗಾಗಿ ಬಾಲಕಿ ತಂದೆ ಅಸ್ಗರ್ ಎನ್ ಆರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.