Tag: homeless man

  • ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ಮರ್ಮಾಂಗಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು- ವಿಡಿಯೋ ವೈರಲ್

    ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ಮರ್ಮಾಂಗಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು- ವಿಡಿಯೋ ವೈರಲ್

    ಚೆನ್ನೈ: ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿ ಆತನ ಮರ್ಮಾಂಗಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಆಘಾತಕಾರಿ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಜೂನ್ 4ರಂದು ಕೋಡಂಬಕ್ಕಂನಲ್ಲಿ ಈ ಘಟನೆ ನಡೆದಿದೆ. 50 ವರ್ಷದ ಜಾಫರ್ ಇಲ್ಲಿನ ರಂಗರಾಜಪುರಂನಲ್ಲಿ ಇಂಡಿಯಾ ಬ್ಯಾಂಕ್ ಬಳಿ ಮಲಗಿದ್ದರು. ಮಧ್ಯರಾತ್ರಿ ಸುಮಾರು 1.30ರ ವೇಳೆಯಲ್ಲಿ ಶ್ಯಾಮ್, ಪುಗಸೇಂದಿ, ರಾಜೇಶ್ ಹಾಗೂ ಒಬ್ಬ ಅಪ್ರಾಪ್ತ ಸೇರಿ ಜಾಫರ್ ಅವರಿಗೆ ಕಿರುಕುಳ ನೀಡಿದ್ದಾರೆ. ಜಾಫರ್ ಕುಡಿದ ಅಮಲಿನಲ್ಲಿ ಮಲಗಿದ್ದ ಕಾರಣ ಕಿಡಿಗೇಡಿಗಳಲ್ಲೊಬ್ಬ ಅವರ ಮರ್ಮಾಂಗಕ್ಕೆ ಬೆಂಕಿ ಹಚ್ಚಿದ್ದಾನೆ. ಬೆಂಕಿಯನ್ನು ನೋಡಿ ಜಾಫರ್ ಎಚ್ಚರಗೊಂಡಿದ್ದು ಕುಡಿದ ಮತ್ತಿನಲ್ಲಿದ್ದ ಕಾರಣ ಮೇಲೇಳಲಾಗದೆ ಮಲಗಿದ್ದಲ್ಲೇ ಒದ್ದಾಡಿದ್ದಾರೆ.

    ಕಿಡಿಗೇಡಿಗಳು ಇಷ್ಟಕ್ಕೇ ಸುಮ್ಮನಾಗದೆ ಜಾಫರ್ ಅವರನ್ನ ಪೈಪ್‍ನಿಂದ ಹೊಡೆದಿದ್ದಾರೆ. ಸದ್ಯಕ್ಕೆ ದುಷ್ಕರ್ಮಿಗಳು ಪೊಲೀಸರ ವಶದಲ್ಲಿದ್ದು, ಜಾಫರ್ ಅವರ ಮೇಲೆ ಹಲ್ಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ನಾವು ಕುಡಿದ ಅಮಲಿನಲ್ಲಿದ್ದ ಕಾರಣ ಜಾಫರ್ ಮೇಲೆ ದಾಳಿ ಮಾಡಿದೆವು ಎಂದು ಆರೋಪಿಗಳು ಹೇಳಿದ್ದಾರೆ.

    ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಜಾಫರ್‍ಗಾಗಿ ಹುಡುಕಾಟ ನಡೆಸಿದ್ದಾರೆ.