Tag: home theatre

  • ವರನ ಕೊಲೆಗೆ ಸ್ಕೆಚ್‌ ಹಾಕಿ ಸ್ಫೋಟಕ ತುಂಬಿ ಗಿಫ್ಟ್‌ ಕೊಟ್ಟ ವಧುವಿನ ಮಾಜಿ ಲವ್ವರ್!

    ವರನ ಕೊಲೆಗೆ ಸ್ಕೆಚ್‌ ಹಾಕಿ ಸ್ಫೋಟಕ ತುಂಬಿ ಗಿಫ್ಟ್‌ ಕೊಟ್ಟ ವಧುವಿನ ಮಾಜಿ ಲವ್ವರ್!

    ರಾಯ್ಪುರ: ಮದುವೆಗೆ ಗಿಫ್ಟ್ (Marriage Gift) ಕೊಟ್ಟ ಹೋಮ್ ಥಿಯೇಟರ್ (Home Theatre) ಬ್ಲಾಸ್ಟ್ ಆಗಿ ನವವಿವಾಹಿತ ಹಾಗೂ ಆತನ ಸಹೋದರ ಸೇರಿ ಇಬ್ಬರು ಸಾವನ್ನಪ್ಪಿರುವ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.

    ಹೌದು. ಪ್ರಕರಣ ಸಂಬಂಧ ಪೊಲೀಸರು ಗಿಫ್ಟ್ ಕೊಟ್ಟವನನ್ನು ಬಂಧಿಸಿದ್ದು, ತನಿಖೆ ನಡೆಸಿದಾಗ ಅಚ್ಚರಿಯ ವಿಚಾರವೊಂದು ಬೆಳಕಿಗೆ ಬಂದಿದೆ. ಬಂಧಿತನನ್ನು ಸರ್ಜು ಎಂದು ಗುರುತಿಸಲಾಗಿದ್ದು, ಈ ಘಟನೆ ಛತ್ತೀಸ್‌ಗಢದ (Chhattisgarh) ಕಬೀರ್ಧಾಮ್ ಜಿಲ್ಲೆಯಲ್ಲಿ ನಡೆದಿದೆ.

    ಟ್ವಿಸ್ಟ್ ಏನು..?: ಸ್ಫೋಟಗೊಂಡ ಹೋಮ್ ಥಿಯೇಟರ್ ಅನ್ನು ವಧುವಿನ ಮಾಜಿ ಪ್ರಿಯತಮ ಉಡುಗೊರೆಯಾಗಿ ನೀಡಿರುವುದಾಗಿ ತನಿಖೆಯ ವೇಳೆ ಬಯಲಾಗಿದೆ. ವರನ ಕೊಲೆ ಮಾಡುವ ಉದ್ದೇಶದಿಂದ ಗಿಫ್ಟ್‌ ಆಗಿ ಕೊಟ್ಟಿರುವುದಾಗಿ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ವಧು ತನ್ನನ್ನು ಬಿಟ್ಟು ಬೇರೆ ಮದುವೆಯಾಗಿರುವುದರ ಮೇಲಿನ ಸಿಟ್ಟಿನಿಂದ ಈ ಐಡಿಯಾ ಮಾಡಿರುವುದಾಗಿ ಹೇಳಿದ್ದಾನೆ. ಹೋಮ್ ಥಿಯೇಟರ್ ಒಳಗಡೆ ಸ್ಫೋಟಕಗಳನ್ನು ಇಟ್ಟು ಯಾವುದೇ ಅನುಮಾನ ಬರದಂತೆ ಪ್ಯಾಕ್ ಮಾಡಿ ಅದನ್ನು ವಧುವಿಗೆ ಉಡುಗೊರೆಯಾಗಿ ನೀಡಿರುವುದಾಗಿ ಪೊಲೀಸರ ಮುಂದೆ ಆರೋಪಿ ಬಾಯ್ಬಿಟ್ಟಿದ್ದಾನೆ.

    ನಡೆದಿದ್ದೇನು..?: ವರ ಹೇಮೇಂದ್ರ ಮೇರಾವಿ (22) ಏಪ್ರಿಲ್ 1 ರಂದು ವಿವಾಹವಾಗಿದ್ದರು. ಸೋಮವಾರ ಹೇಮೇಂದ್ರ ಹಾಗೂ ಕುಟುಂಬದ ಇತರ ಸದಸ್ಯರು ತಮ್ಮ ಮನೆ ಕೋಣೆಯೊಳಗೆ ಮದುವೆಗೆ ಬಂದಿದ್ದ ಉಡುಗೊರೆಗಳನ್ನು ಬಿಚ್ಚುತ್ತಿದ್ದರು. ಉಡುಗೊರೆಗಳ ಪೈಕಿ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ (Music System) ಕೂಡಾ ಒಂದಾಗಿತ್ತು. ಅದರ ತಂತಿಯನ್ನು ಎಲೆಕ್ಟ್ರಿಕ್ ಬೋರ್ಡ್‍ಗೆ ಜೋಡಿಸಿ ಬಳಿಕ ಅದನ್ನು ಆನ್ ಮಾಡಿದಾಗ ಭಾರೀ ಸ್ಫೋಟ ಉಂಟಾಗಿದೆ. ಘಟನೆಯಲ್ಲಿ ಮೇರಾವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮದುವೆಗೆ ಗಿಫ್ಟ್ ಬಂದಿದ್ದ ಮ್ಯೂಸಿಕ್ ಸಿಸ್ಟಮ್ ಬ್ಲಾಸ್ಟ್ – ನವವಿವಾಹಿತ ಸೇರಿ ಇಬ್ಬರು ಸಾವು

    ಮೇರಾವಿ ಸಹೋದರ ರಾಜ್‍ಕುಮಾರ್ (30) ಮತ್ತು ಒಂದೂವರೆ ವರ್ಷದ ಬಾಲಕ ಸೇರಿದಂತೆ ಇತರ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಕೌರಾದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಮೇರಾವಿ ಅವರ ಸಹೋದರ ಸಾವನ್ನಪ್ಪಿದ್ದಾರೆ. ಪ್ರಸ್ತುತ ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟದ ಪರಿಣಾಮ ಹೋಮ್ ಥಿಯೇಟರ್ ಸಿಸ್ಟಮ್ ಅನ್ನು ಇರಿಸಲಾಗಿದ್ದ ಕೋಣೆಯ ಮೇಲ್ಛಾವಣಿ ಹಾಗೂ ಗೋಡೆಗಳೇ ಕುಸಿದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • AEE ಮನೆ ಮೇಲೆ ದಾಳಿ – ಐಶಾರಾಮಿ ಹೋಂ ಥಿಯೇಟರ್ ಕಂಡು ಎಸಿಬಿ ಶಾಕ್

    AEE ಮನೆ ಮೇಲೆ ದಾಳಿ – ಐಶಾರಾಮಿ ಹೋಂ ಥಿಯೇಟರ್ ಕಂಡು ಎಸಿಬಿ ಶಾಕ್

    ಚಿಕ್ಕಮಗಳೂರು: ತಾಲೂಕಿನ ಲೋಕೋಪಯೋಗಿ ಇಲಾಖೆ ಅಸ್ಟಿಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ (AEE) ಗವಿರಂಗಪ್ಪ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಅಪಾರ ಅಕ್ರಮ ಆಸ್ತಿಯನ್ನು ಸೀಜ್ ಮಾಡಿದ್ದಾರೆ.

    ನಗರದ ಗಾಂಧಿ ಬಡವಾಣೆಯ ದೋಣಿಕಣದಲ್ಲಿರುವ ಅವರ ನಿವಾಸನಗರದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬೆಳ್ಳಂಬೆಳಗ್ಗೆಯಿಂದ ತನಿಖೆ ನಡೆಸಿದ್ದಾರೆ. ಅಕ್ರಮ ಸಂಪತ್ತು ಗಳಿಕೆ ಆರೋಪದ ಮೇಲೆ ಎಇಇ ಗವಿರಂಗಪ್ಪ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು-ಉಡುಪಿ ಎಸಿಬಿ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ. ಈ ವೇಳೆ, ಮನೆಯಲ್ಲಿ ಐಶಾರಾಮಿ ಹೋಂ ಥಿಯೇಟರ್ ಸೇರಿದಂತೆ ವಿವಿಧ ಬೆಲೆ ಬಾಳುವ ವಸ್ತುಗಳು ಕೂಡ ಮನೆಯಲ್ಲಿ ಪತ್ತೆಯಾಗಿದೆ. 750 ಗ್ರಾಂ ಚಿನ್ನದ ಬಿಸ್ಕೇಟ್, 900 ಗ್ರಾಂ ಬೆಳ್ಳಿ, 2 ಲಕ್ಷದ 74 ಸಾವಿರ ನಗದು ಸೇರಿದಂತೆ ವಿವಿಧ ದಾಖಲೆಗಳು ಪತ್ತೆಯಾಗಿವೆ. ಇದನ್ನೂ ಓದಿ: ಎಸಿಬಿಯವರನ್ನು ಬೀಗರೆಂದು ಭಾವಿಸಿದ ಕೆಲಸದಾಕೆ – ಡಸ್ಟ್‌ಬಿನ್, ಸಿಂಟೆಕ್ಸ್‌ನಲ್ಲೂ ಕಾಂಚಾಣ

    ಜೊತೆಗೆ ಬೇರೆ-ಬೇರೆ ಕಡೆಗಳಲ್ಲಿ ಹಣ ಹೂಡಿಕೆ ಮಾಡಿರುವ ಬಗ್ಗೆಯೂ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜೊತೆಗೆ, ಗವಿರಂಗಪ್ಪನವರ ಸ್ವಂತ ಊರಾದ ಜಿಲ್ಲೆಯ ಕಡೂರು ತಾಲೂಕಿನ ಬಾಣೂರು ಗ್ರಾಮದಲ್ಲೂ ಸಾಕಷ್ಟು ಆಸ್ತಿ ಮಾಡಿ, ಫಾರ್ಮ್ ಹೌಸ್ ನಿರ್ಮಿಸಿಕೊಂಡಿದ್ದಾರೆ. ತಮ್ಮ ಸಂಬಂಧಿಕರ ಹೆಸರಲ್ಲಿ ಆಸ್ತಿ ಮಾಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅಧಿಕಾರಿಗಳು ಇಂದು ದಿನ ಪೂರ್ತಿ ತನಿಖೆ ನಡೆಸಿದ್ದು, ನಾಳೆಯೂ ಕೂಡ ದಾಳಿ ಮುಂದುವರಿಯುವ ಸಾಧ್ಯತೆ ಇದೆ. ಇದನ್ನೂ ಓದಿ: ಜಪಾನ್‌ನಲ್ಲಿ 7.3 ತೀವ್ರತೆಯ ಭಾರೀ ಭೂಕಂಪ – ಸುನಾಮಿ ಎಚ್ಚರಿಕೆ