Tag: home rent

  • ಬೆಂಗ್ಳೂರಲ್ಲಿ ಮನೆ ಮಾಲೀಕರೇ ಹುಷಾರ್- ಬಾಡಿಗೆ ಕೇಳೋ ನೆಪದಲ್ಲಿ ಮಾಡ್ತಾರೆ ಅಟ್ಯಾಕ್

    ಬೆಂಗ್ಳೂರಲ್ಲಿ ಮನೆ ಮಾಲೀಕರೇ ಹುಷಾರ್- ಬಾಡಿಗೆ ಕೇಳೋ ನೆಪದಲ್ಲಿ ಮಾಡ್ತಾರೆ ಅಟ್ಯಾಕ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಿಮ್ಮದು ಸ್ವಂತ ಮನೆಯಿದ್ದು ಒಂದಷ್ಟು ಬಾಡಿಗೆ ಮನೆ (rented House) ಗಳನ್ನು ನೀಡಿದ್ರೆ ಈ ಸ್ಟೋರಿ ನೋಡ್ಬೇಕು.

    ಲಗ್ಗೆರೆಯ ಪಾರ್ವತಿ ನಗರದಲ್ಲಿ ಶಾಂತಮ್ಮ ಒಂಟಿಯಾಗಿ ವಾಸವಿದ್ದಾರೆ. ಕೊರೊನಾ ಬಂದು ಪತಿ ತೀರಿಕೊಂಡಿದ್ರಿಂದ ಒಬ್ಬರೇ ಇದ್ದರು. ಇವರದ್ದೊಂದು ಬಾಡಿಗೆ ಮನೆ ಖಾಲಿ ಇತ್ತು. ಯಾರಾದ್ರೂ ಮನೆ ನೋಡೋಕೆ ಬಂದ್ರೆ ತಾನೆ ಮುಂದೆ ನಿಂತು, ಮನೆ ತೋರಿಸ್ತಿದ್ರು. ಅಂತೆಯೇ ಇಂದು (ಶುಕ್ರವಾರ) ಕೂಡ ಬೆಳಗ್ಗೆ 10 ಗಂಟೆ ಸುಮಾರಿಗೆ ಶಾಂತಮ್ಮ ಮನೆ ಬಳಿ ಬಂದ ಅಪರಿಚಿತ ಮಹಿಳೆಯೊಬ್ಬರು, ಮನೆ ಬಾಡಿಗೆ ಬೇಕಿತ್ತು, ಮನೆ ನೋಡಬದಹುದಾ ಅಂತಾ ಕೇಳಿದ್ರು. ಅಷ್ಟೇ ತಾನೇ ಬನ್ನಿ ತೋರಿಸ್ತಿನಿ ಅಂತಾ ಮನೆ ಬಾಗಿ ಓಪನ್ ಮಾಡಿ ಒಳಗೆ ಕರೆದಿದ್ರು.

    ಮನೆ ಒಳಗೆ ಹೋಗ್ತಿದ್ದಂತೆ ಬಾಗಿಲು ಲಾಕ್ ಮಾಡಿದ ಅಪರಿಚಿತ ಮಹಿಳೆ ಶಾಂತಮ್ಮ ಕತ್ತಿನಲ್ಲಿದ್ದ ಚಿನ್ನದ ಸರ ಬಿಚ್ಚುವಂತೆ ಸೂಚಿಸಿದಳು. ಅಷ್ಟರಲ್ಲಿ ಶಾಂತಮ್ಮ ಜೋರಾಗಿ ಕೂಗಿಕೊಳ್ಳೋಕೆ ಶುರು ಮಾಡಿದರು. ಇದರಿಂದ ಗಾಬರಿಯಾದ ಅಪರಿಚಿತ ಮಹಿಳೆ, ಅಲ್ಲೇ ಇದ್ದ ಕಬ್ಬಿಣ ವಸ್ತುವೊಂದರಿಂದ ಶಾಂತಮ್ಮ ತಲೆಗೆ ಬಲವಾಗಿ ಹಲ್ಲೆ ಮಾಡಿ, ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಎಸ್ಕೇಪ್ ಆಗಿದ್ದಾಳೆ. ಇದನ್ನೂ ಓದಿ: 72 ವರ್ಷದ ವೃದ್ಧನನ್ನು ಕೊಂದು ತಿಂದ 40 ಮೊಸಳೆಗಳು!

    ಹಾಡಹಗಲೇ ಇಂತಹ ಘಟನೆ ನಡೆದಿರೋದು ನೋಡಿದ ಅಕ್ಕಪಕ್ಕದ ಜನರು, ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ ಸಿಸಿಟಿವಿ ಹಾಕಿದ್ದಾರೆ. ಆದರೆ ಅದು ಯಾವಾಗಲೂ ರಿಪೇರಿ. ಇದು ವರ್ಕ್ ಆಗಲ್ಲ. ಯಾರು ಏನೇ ಮಾಡಿ ಹೋದ್ರು ಕೇಳೋರಿಲ್ಲ ಅಂತಿದ್ದಾರೆ. ಸದ್ಯ ಶಾಂತಮ್ಮ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆರೋಪಿ ಮಹಿಳೆಗಾಗಿ ಹುಡುಕಾಟ ನಡೆಸಿದ್ದಾರೆ.

  • ಮನೆ ಬಾಡಿಗೆ ವೇಳೆ `ಸೆಕ್ಸ್ ಒಪ್ಪಂದ’ಕ್ಕೆ ಸಹಿ ಹಾಕಿದ ಮಹಿಳೆ- ಮುಂದೇನಾಯ್ತು..?

    ಮನೆ ಬಾಡಿಗೆ ವೇಳೆ `ಸೆಕ್ಸ್ ಒಪ್ಪಂದ’ಕ್ಕೆ ಸಹಿ ಹಾಕಿದ ಮಹಿಳೆ- ಮುಂದೇನಾಯ್ತು..?

    ವಾಷಿಂಗ್ಟನ್: ಸಾಮಾನ್ಯವಾಗಿ ಮನೆ ಬಾಡಿಗೆ ಪಡೀಬೇಕಾದ್ರೆ ಬಾಡಿಗೆದಾರರು ಕೆಲವು ಒಪ್ಪಂದಗಳಿಗೆ ಸಹಿ ಮಾಡಿಸಿಕೊಳ್ತಾರೆ. `ಕೆಲವರು ನೋ ಪಾರ್ಟಿ, ನೋ ಸ್ಮೋಕಿಂಗ್, ನೋ ಶೌಟಿಂಗ್’ ಹೀಗೆ ಏನೇನೋ ಕಾರಣಗಳನ್ನ ನೀಡಿ, ತಮಗೂ ತೊಂದರೆಯಾದಂತೆ ನೋಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಾಲೀಕ ಮನೆ ಬಾಡಿಗೆ ನೀಡಬೇಕಾದ್ರೆ `ಲೈಂಗಿಕ ಸಂಭೋಗ- ಸೆಕ್ಸ್’ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

    ಅಮೆರಿಕದ ನೆವಾಡಾದ ಲಾಸ್ ವೇಗಸ್‌ನಲ್ಲಿರುವ ವ್ಯಕ್ತಿಯೊಬ್ಬ ಸ್ಥಳೀಯ ಮಹಿಳೆಗೆ ಬಾಡಿಗೆ ನೀಡಲು ಮಾಲೀಕ `ಸೆಕ್ಸ್ ಒಪ್ಪಂದಕ್ಕೆ’ ದಾಖಲೆಗಳ ಮೇಲೆ ಸಹಿ ಮಾಡಿಸಿಕೊಂಡಿದ್ದಾನೆ. ಕೆಲ ದಿನಗಳ ನಂತರ ಮನೆಯ ಮಾಲೀಕನ ವಿರುದ್ಧ ಸ್ಥಳೀಯ ಫೆಡರಲ್ ನ್ಯಾಯಾಲಯಲ್ಲಿ ವಿಚಾರಣೆ ಬಂದಾಗ ದಾಖಲೆಗಳನ್ನು ನೀಡಿದ್ದು, ವಿಚಾರ ಬಹಿರಂಗಗೊಂಡಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ನಿಲ್ಲದ ವೀಲ್ಹಿಂಗ್ ಪುಂಡರ ಹಾವಳಿ – ಪೊಲೀಸರಿಗೂ ಡೋಂಟ್‌ ಕೇರ್‌

    ಸಂತ್ರಸ್ತ ಮಹಿಳೆಗೆ ಮನೆ ಬಾಡಿಗೆ ಪಡೆಯುವ ಸಂದರ್ಭದಲ್ಲಿ ತನ್ನ ಮಕ್ಕಳಿಗಾಗಿ ಮನೆ ಅವಶ್ಯವಿತ್ತು. ಇದೇ ಕಾರಣದಿಂದಾಗಿ ಮನೋ ವಿಕೃತಿ ಮೆರೆದಿರುವ ಮಾಲೀಕ ಅಲನ್ ರೋಥ್‌ಸ್ಟೈನ್ ಮನೆಯ ಬಾಡಿಗೆ ಪಡೆಯುವ ಸಲುವಾಗಿ ಲೈಂಗಿಕ ಬೇಡಿಕೆಗಳಿಗೆ ಸಹಿ ಮಾಡಿಸಿರುತ್ತಾನೆ. ನಂಬಲು ಅಸಾಧ್ಯವಾದರೂ ಒಪ್ಪಂದಕ್ಕೆ ಒಳಪಟ್ಟಿರುವುದು ದಾಖಲೆಗಳಲ್ಲಿ ಸಾಬೀತಾಗಿದೆ. ಇದು ವಂಚನೆ ಹಾಗೂ ಕಿರುಕುಳಕ್ಕೆ ಸಮನಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಯುವತಿ ಮೇಲೆ ಗೆಳತಿಯ ಸಹೋದರನಿಂದ್ಲೆ ಅತ್ಯಾಚಾರ- ಮದ್ವೆ ಕ್ಯಾನ್ಸಲ್ ಭಯದಿಂದ ಆತ್ಮಹತ್ಯೆಗೆ ಯತ್ನ

    ನ್ಯಾಯಾಲಯದ ದಾಖಲೆಗಳ ಪ್ರಕಾರ, ನವೆಂಬರ್ 2018 ರಲ್ಲಿ ಲಾಸ್ ವೇಗಸ್ ಬೌಲೆವಾರ್ಡ್ ಮತ್ತು ಸೇಂಟ್ ರೋಸ್ ಪಾರ್ಕ್ವೇಗೆ ಸಮೀಪವಿರುವ ವೆಡ್ಜ್‌ಬ್ರೂಕ್ ಸ್ಟ್ರೀಟ್‌ನಲ್ಲಿ 4 ಬೆಡ್‌ರೂಮ್ ಮನೆಯನ್ನು ಬಾಡಿಗೆಗೆ ಪಡೆಯುವ ಸಲುವಾಗಿ ಆತ ವಿಕೃತಿ ಮೆರಿದ್ದಾನೆ. ಸಂಭಾವ್ಯ ಬಾಡಿಗೆದಾರರಿಂದ ಸಹಿ ಮಾಡಿಸಿ ಬಲಿಪಶುಗಳನ್ನಾಗಿ ಮಾಡಿದ್ದಾನೆ ಎಂದು ಹೇಳಲಾಗಿದೆ.

    ಸದ್ಯ ವಿಚಾರಣೆ ನಂತರ ಬಾಡಿಗೆ ಪರವಾನಗಿಗಳನ್ನು ನಿಷೇಧಿಸಲಾಗಿದ್ದು, ಈ ಹಿಂದಿನ ಹಿಡುವಳಿದಾರನಿಂದ ಮೊಕದ್ದಮೆ ಹೂಡಲ್ಪಟ್ಟಿದೆ. ಒಂದು ವೇಳೆ ನ್ಯಾಯಾಧೀಶರು ಫೇರ್ ಹೌಸಿಂಗ್ ಆಕ್ಟ್ ಅನ್ನು ಉಲ್ಲಂಘಿಸಿದ್ದಾರೆಂದು ಪರಿಗಣಿಸಿದರೆ ಕಾನೂನು ಕ್ರಮವಾಗುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಲ್ಲಿ ಜೀವನ ಮತ್ತಷ್ಟು ಕಷ್ಟ- ನಗರದಲ್ಲಿ ಮನೆ ಬಾಡಿಗೆ ಏರಿಕೆ..!

    ಬೆಂಗಳೂರಲ್ಲಿ ಜೀವನ ಮತ್ತಷ್ಟು ಕಷ್ಟ- ನಗರದಲ್ಲಿ ಮನೆ ಬಾಡಿಗೆ ಏರಿಕೆ..!

    ಬೆಂಗಳೂರು: ಜನಸಾಮಾನ್ಯನಿಗೆ ಪದಾರ್ಥಗಳ ಬೆಲೆ ಏರಿಕೆ ಜೊತೆ ಜಿಎಸ್‍ಟಿ ಏಟು ಬಿತ್ತು ಅನ್ನೋವಾಗಲೇ ಇದೀಗ ಮತ್ತೊಂದು ಬರೆ ಬಿದ್ದಿದೆ. ಕೋವಿಡ್ ಬಳಿಕ ಜನರ ಜೀವನ ಮೂರಾಬಟ್ಟೆಯಾಗಿದೆ. ಪ್ರತಿನಿತ್ಯ ಒಂದಲ್ಲ ಒಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನ ಸಾಮಾನ್ಯನಿಗೆ ಬೆಂಗಳೂರಿನ ಜೀವನ ಮತ್ತಷ್ಟು ಕಾಸ್ಟ್ಲಿ ಅನಿಸಲಿದೆ.

    ಹೌದು. ಕೋವಿಡ್‍ನಿಂದ ಬಳಲಿದ ಜನಸಾಮಾನ್ಯರಿಗೆ ಈಗ ಮನೆ ಬಾಡಿಗೆ ಏರಿಕೆ ಮತ್ತೊಂದು ಶಾಕ್ ನೀಡಿದೆ. ಕಳೆದ ಎರಡು ವರ್ಷಗಳಿಂದ ಮನೆ ಬಾಡಿಗೆಯೇ ಅಜಗಜಾಂತರವಾಗಿದೆ. 1 ಬಿಹೆಚ್‍ಕೆ, 2 ಬಿಹೆಚ್‍ಕೆ ಬಾಡಿಗೆ ಮನೆ ಸೇರಿದಂತೆ ಲೀಸ್ ಅಮೌಂಟ್‍ನಲ್ಲೂ ಭರ್ಜರಿ ಏರಿಕೆಯಾಗಿದೆ. ವರ್ಷಕ್ಕೆ 500 ರೂಪಾಯಿ ಏರಿಕೆ ಮಾಡುತ್ತಿದ್ದ ಮನೆ ಮಾಲೀಕರು, ಇದೀಗ ಬರೋಬ್ಬರಿ ಶೇಕಡಾ 80 ರಷ್ಟು ಬಾಡಿಗೆ ಏರಿಕೆ ಮಾಡಿದ್ದಾರೆ.

    ಮನೆ ನಿರ್ಮಾಣ, ಹಸ್ತಾಂತರ ವಿಳಂಬ, ಕೂಲಿಗಾರರು ಬರದೇ ಇರುವುದು ಬಾಡಿಗೆ ಹೆಚ್ಚಳಕ್ಕೆ ಕಾರಣವಂತೆ. ಜೊತೆಗೆ ಈಗಾಗಲೇ ಅನೇಕ ಆಗತ್ಯ ವಸ್ತುಗಳ ಸಂಖ್ಯೆ ಸೇರಿದಂತೆ ಕೋವಿಡ್ ದಿನಗಳಲ್ಲಿ ಆದ ಹೊಡೆತದಿಂದ ಸುಧಾರಣೆ ಕಾಣಬೇಕಾದರೆ ಇದು ಅಗತ್ಯ ಅನ್ನೋದು ಮಾಲೀಕರ ವಾದ. ಇದನ್ನೂ ಓದಿ: ಇನ್ಮುಂದೆ ಶಾಲೆಗಳ ಮುಂದೆ ಮಾರುವಂತಿಲ್ಲ ಐಸ್‌ಕ್ರೀಮ್, ಚಾಟ್ ಫುಡ್ – ಇಲ್ಲಿದೆ ವಿವರ

    ಒಟ್ಟಾರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟ ಮಧ್ಯಮ ವರ್ಗದ ಜನಕ್ಕೆ ಮತ್ತೊಂದು ಏರಿಕೆ ಬಿಸಿ ತುಪ್ಪವಾಗಿ ಪರಿಣಮಿಸಿರುವುದಂತು ಸುಳ್ಳಲ್ಲ. ಇದರ ಜೊತೆಗೆ ದಿನಸಿ ಪದಾರ್ಥಗಳ ಮೇಲೆ ಜಿಎಸ್‍ಟಿ ಕಟ್ಟೋದಾ..? ಅಥವಾ ಮನೆ ಬಾಡಿಗೆ ಕಟ್ಟೋದಾ ಅನ್ನೋದು ಬಾಡಿಗೆದಾರರ ಪ್ರಶ್ನೆಯಾಗಿದೆ.

    Live Tv
    [brid partner=56869869 player=32851 video=960834 autoplay=true]