Tag: Home remedy

  • ಕೂದಲು ಉದುರುತ್ತಿದೆಯೇ?  ಹಾಗಿದ್ದರೆ ಈ ಮನೆ ಮದ್ದುಗಳನ್ನು ಒಮ್ಮೆ ಟ್ರೈ ಮಾಡಿ

    ಕೂದಲು ಉದುರುತ್ತಿದೆಯೇ? ಹಾಗಿದ್ದರೆ ಈ ಮನೆ ಮದ್ದುಗಳನ್ನು ಒಮ್ಮೆ ಟ್ರೈ ಮಾಡಿ

    ತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಿನವರಿಗಿದೆ. ಜೀವನಶೈಲಿ, ಪೋಷಕಾಂಶಗಳ ಕೊರತೆ, ಅಲರ್ಜಿ, ಹಾರ್ಮೋನ್ ಅಸಮತೋಲನ ಮತ್ತು ಅನುವಂಶೀಯವಾಗಿಯೂ ಬರಬಹುದು. ಇದಕ್ಕೆ ಕೆಲವು ಮನೆ ಮದ್ದುಗಳನ್ನು ಬಳಸಬಹುದಾಗಿದೆ.

    ಕೂದಲು ಉದುರುವ ಸಮಸ್ಯೆಗೆ ಕಾರಣ:
    * ಅತ್ಯಧಿಕ ಖಾರ, ಉಪ್ಪು, ಉಳಿ ಆಹಾರ ಸೇವನೆ
    * ಕಾಫಿ ಕುಡಿಯುವ ಚಟ
    * ಮದ್ಯಪಾನ
    * ಅತೀಹೆಚ್ಚು ಆಹಾರ ಸೇವನೆ
    * ಧೂಮಪಾನ
    * ಎಣ್ಣೆಯಲ್ಲಿ ಕರಿದ ಪದಾರ್ಥಗಳು
    * ಅಸಿಡಿಟಿ ಆಹಾರಗಳು ಇವುಗಳು ಪಿತ್ತವನ್ನು ಹೆಚ್ಚುಮಾಡುತ್ತದೆ ಇದರಿಂದಾಗಿ ಕೂದಲು ಉದುರುವುದು ಹೆಚ್ಚಾಗುತ್ತದೆ.

    ಮನೆಮದ್ದುಗಳಾವವು:
    * ನಿಂಬೆ ರಸ, ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ನೆತ್ತಿಗೆ ಚೆನ್ನಾಗಿ ಮಸಾಜ್ ಮಾಡಿ. ಒಂದು ಗಂಟೆಯ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಇದರಿಂದ ತುರಿಕೆ, ತಲೆಹೊಟ್ಟು ಸಮಸ್ಯೆಗಳನ್ನು ನಿವಾರಿಸಬಹುದು.

    * ತೆಂಗಿನೆಣ್ಣೆಯನ್ನು ಬಿಸಿ ಮಾಡಿ, ಉಗುರು ಬೆಚ್ಚಗೆ ಇರುವಾಗ ಮೆಲ್ಲನೆ ಕೈಯಲ್ಲಿ ತೆಗೆದುಕೊಂಡು ತಲೆಕೂದಲಿನ ಬುಡಕ್ಕೆ ಹಚ್ಚಿ ಮೆಲ್ಲನೆ ಮಸಾಜ್ ಮಾಡಿ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ

    * ಆಕರ್ಷಕ ಕೂದಲು ಬೇಕೆಂದರೆ ನಿಮ್ಮ ಊಟದಲ್ಲಿ  ಹಸಿರು ಸೋಪ್ಪು, ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡಿ.  ಇದನ್ನೂ ಓದಿ: ನಾಲಿಗೆಗೆ ಕಹಿ ನೀಡುವ ಬೇವು ಆರೋಗ್ಯಕ್ಕೆ ಒಳ್ಳೆಯದು

    * ವಿಟಮಿನ್‍ಗಳಿರುವ ಆಹಾರವನ್ನು ಸೇವಿಸಿ. ಇದನ್ನೂ ಓದಿ: ಸರ್ವ ರೋಗಕ್ಕೂ ದಾಸವಾಳದಲ್ಲಿದೆ ಮದ್ದು

    * ಈರುಳ್ಳಿಯ ರಸ ತೆಗೆದು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತಲೆ ಹೊಟ್ಟು ನಿಧಾನವಾಗಿ ನಿವಾರಣೆಯಾಗುತ್ತದೆ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    * ಅಲೋವೆರಾ ಎಲೆಗಳಿಂದ ತಲೆ  ಚೆನ್ನಾಗಿ ಉಜ್ಜಿದ ನಂತರ 20 ನಿಮಿಷಗಳ ಕಾಲ ಬಿಡಿ. ಅದರ ನಂತರ ಸಾಮಾನ್ಯ ತಂಪಾದ ನೀರಿನಿಂದ ಕೂದಲನ್ನು ಸ್ವಚ್ಛಗೊಳಿಸಿ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ

  • ಕೂದಲು ಉದುರುವ ಸಮಸ್ಯೆಗೆ ಕರಿಬೇವಿನ ಎಲೆಗಳಲ್ಲಿದೆ ಪರಿಹಾರ

    ಕೂದಲು ಉದುರುವ ಸಮಸ್ಯೆಗೆ ಕರಿಬೇವಿನ ಎಲೆಗಳಲ್ಲಿದೆ ಪರಿಹಾರ

    ಕೂದಲು ಉದುರುವಿಕೆಗೆ ಹಲವು ಕಾರಣಗಳಿವೆ. ಆದರೆ ನಾವು ಅಂಗಡಿಯಲ್ಲಿ ಸಿಗುವ ಎಲ್ಲಾ ಶಾಂಪೂ, ಹೇರ್ ಆಯಿಲ್‍ಗಳನ್ನು ಬಳಸಿರುತ್ತೇವೆ. ಆದರೆ ಕೆಲವು ಬಾರಿ ನಾವು ನಮ್ಮ ಮನೆಯಲ್ಲಿ ಇರುವ ಮನೆ ಮದ್ದುಗಳನ್ನು ಬಳಸುವುದರಿಂದ ಈ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಕೂದಲು ಉದುರುವ ಸಮಸ್ಯೆಗೆ ಪರಿಹಾರ ನಿಮ್ಮ ಮನೆಯ ಹಿತ್ತಲಿನಲ್ಲೇ ಇದೆ.

    ಕೂದಲು ಉದುರುವಿಕೆ ತಡೆಯಲು ಹಲವಾರು ಶಾಂಪೂ ಹಾಗೂ ಇತರ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಪ್ರಭಾವ ಮಾತ್ರ ತಾತ್ಕಾಲಿಕ. ಇದನ್ನು ನಾವು ದೀರ್ಘಕಾಲದ ತನಕ ಬಳಸಿದರೆ ಅದರಿಂದ ಬೇರೆ ರೀತಿಯ ಅಡ್ಡಪರಿಣಾಮಗಳು ಬರಬಹುದು. ಹೀಗಾಗಿ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ತುಂಬಾ ಒಳ್ಳೆಯದು.

    * ಒಂದು ಕಪ್ ತೆಂಗಿನ ಎಣ್ಣೆಯಲ್ಲಿ ಒಂದು ಹಿಡಿ ಕರಿಬೇವಿನ ಎಲೆಗಳನ್ನು ಕುದಿಸಿ. ನಂತರ ಇದನ್ನು ಫಿಲ್ಟರ್ ಮಾಡಿ, ಕೂದಲಿನ ಬೇರುಗಳಿಗೆ ವಾರಕ್ಕೆ ಎರಡು ಬಾರಿ ಮಸಾಜ್ ಮಾಡಿ. ನಂತರ ನಿಮ್ಮ ತಲೆಯನ್ನು ಶಾಂಪೂ ಬಳಸಿ ತೊಳೆಯಿರಿ. ವಾರಕ್ಕೆ ಎರಡು ಬಾರಿ ಇದನ್ನು ಮಾಡಿ.

    * ಕರಿಬೇವಿನ ಎಲೆಗಳು, ನೆಲ್ಲಿಕಾಯಿ ಮಿಕ್ಸಿಯಲ್ಲಿ ಪುಡಿ ಮಾಡಿ ನಿಮ್ಮ ಕೂದಲಿಗೆ ಹಚ್ಚಿ. ನಂತರ 1 ಗಂಟೆಯ ನಂತರ ತಲೆ ತೊಳೆಯಿರಿ.

    * ಕರಿಬೇವಿನ ಎಲೆಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಒಂದು ಕಪ್ ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ. ನಂತರ ಒಂದು ಗಂಟೆ ನೆನೆಸಿ ಮತ್ತು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಉದುರುವುದನ್ನು ತಡೆಯುವುದಲ್ಲದೆ ತಲೆಹೊಟ್ಟು ಕೂಡ ತಡೆಯಬಹುದು.

    * ಎರಡು ಚಮಚ ಮೆಂತ್ಯೆ ಕಾಳುಗಳನ್ನು ತೆಗೆದುಕೊಂಡು ಅದನ್ನು ಹುಡಿ ಮಾಡಿಕೊಳ್ಳಿ. 10-15 ಕರಿಬೇವಿನ ಎಲೆಗಳನ್ನು ತೆಗೆದುಕೊಳ್ಳಿ. ಎರಡು ಚಮಚ ನೆಲ್ಲಿಕಾಯಿ ಹುಡಿ ಹಾಕಿ ಮಿಶ್ರಣ ಮಾಡಿ. ಈ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಇದನ್ನು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ತಲೆಬುರುಡೆ ಮತ್ತು ಕೂದಲಿಗೆ ಪೇಸ್ಟ್ ಬಳಸಿಕೊಳ್ಳಿ. 30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ಕೂದಲು ತೊಳೆಯಿರಿ.

    * ಎರಡು ಕಪ್ ನೀರು ಬಳಸಿಕೊಳ್ಳಿ ಮತ್ತು 10-15 ಕರಿಬೇವಿನ ಎಲೆಗಳನ್ನು ಹಾಕಿ ಕುದಿಸಿ. ಸ್ವಲ್ಪ ಸಮಯ ಇದನ್ನು ಸರಿಯಾಗಿ ಕುದಿಸಿ. ಶಾಂಪೂ ಹಾಕಿಕೊಂಡು ಕೂದಲು ತೊಳೆದ ಬಳಿಕ ಈ ನೀರಿನಿಂದ ಮತ್ತೆ ಕೂದಲು ತೊಳೆಯಿರಿ.

  • ಕೆಮ್ಮಿಗೆ ಇದೆ ಪವರ್‌ಫುಲ್ ಮನೆಮದ್ದು

    ಕೆಮ್ಮಿಗೆ ಇದೆ ಪವರ್‌ಫುಲ್ ಮನೆಮದ್ದು

    ಸಾಮಾನ್ಯವಾಗಿ ವಾತಾವರಣದಲ್ಲ ಆಗುವ ಏರುಪೇರಿನಿಂದಾಗಿ, ಕೆಮ್ಮು ಮತ್ತು ಶೀತ ಬರುವುದು ಸಹಜವಾಗಿದೆ. ಕೆಮ್ಮು ಎಂದು ಮಾತ್ರೆಗಳ ಮೊರೆ ಹೋಗುವ ಮೊದಲು ನೈಸರ್ಗಿಕ ಚಿಕಿತ್ಸೆಯೇ ಉತ್ತಮವಾಗಿದೆ. ಹೀಗಾಗಿ ಈ ಮನೆಮದ್ದುಗಳನ್ನು ಒಮ್ಮೆ ಉಪಯೋಗಿಸಿ.

    * ಟೀ ಸ್ಪೂನ್ ಜೇನುತುಪ್ಪ, ಟೀ ಸ್ಪೂನ್ ಆಲಿವ್ ಆಯಿಲ್ ಮತ್ತು 3 ನಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಕೆಳಗಿಳಿಸಿ. ಅದನ್ನು ತಣ್ಣಗಾಗಲು ಬಿಡಿ. ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ. ಕೆಮ್ಮು ಬಂದಾಗ ಈ ಸಿರಪ್ ಸೇವನೆ ಸಹಾಯ ಮಾಡುತ್ತದೆ. ನಿಂಬೆ ಮತ್ತು ಜೇನುತುಪ್ಪವು ಗಂಟಲಿನ ಸೋಂಕನ್ನು ಶಮನಗೊಳಿಸುತ್ತದೆ ಮತ್ತು ಜೇನುತುಪ್ಪವು ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ. ಜೇನುತುಪ್ಪದಿಂದ ಉತ್ತಮ ನಿದ್ರೆ ಸಹ ಬರುತ್ತದೆ. ಆಲಿವ್ ಎಣ್ಣೆ ಗಂಟಲಿನಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.

    * ಸ್ವಲ್ಪ ಜೇನುತುಪ್ಪದೊಂದಿಗೆ ನಿಂಬೆ ರಸವನ್ನು ಮಿಶ್ರಣ ಮಾಡಿ. ಒಂದು ಚಿಟಿಕೆ ಕೇನ್ ಪೆಪ್ಪರ್ ಸೇರಿಸಿ. ಕೆಮ್ಮು ನಿವಾರಣೆಗೆ ಇದನ್ನು ನುಂಗಿ. ಜೇನುತುಪ್ಪವು ಗಂಟಲು ನೋವಿಗೆ ಚಿಕಿತ್ಸೆ ನೀಡುತ್ತದೆ . ಕೆಲವು ಸಂಶೋಧನೆಗಳ ಪ್ರಕಾರ, ಜೇನುತುಪ್ಪವು ಕೆಮ್ಮನ್ನು ನಿವಾರಿಸುತ್ತದೆ ಮತ್ತು ನಿಂಬೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

    * ನಿಮ್ಮ ಗಂಟಲು ತೆರವುಗೊಳಿಸಲು ಪ್ರತಿದಿನ ಎರಡು ಬಾರಿ ಅರ್ಧ ಟೀ ಚಮಚ ಅರಿಶಿನದೊಂದಿಗೆ ಒಂದು ಲೋಟ ಹಾಲು ಕುಡಿಯಬೇಕು ಆಗ ಕೆಮ್ಮೆ ಕಡಿಮೆಯಾಗುತ್ತದೆ.

    * ಅರ್ಧ ಗ್ಲಾಸ್ ನೀರಿಗೆ ಟೀ ಸ್ಪೂನ್ ಜೇನುತುಪ್ಪ, 1 ಟೀ ಸ್ಪೂನ್ ದಾಲ್ಚಿನ್ನಿ ಪುಡಿ ಸೇರಿಸಿ, ಚೆನ್ನಾಗಿ ಮಿಶ್ರಮಾಡಿ ಪ್ರತಿ ದಿನ ಬೆಳಿಗ್ಗೆ ಎರಡು ಬಾರಿ ಈ ಮಿಶ್ರಣವನ್ನು ಸೇವಿಸಬೇಕು.

    * ಅರ್ಧ ಟೀ ಚಮಚ ಶುಂಠಿ ಪುಡಿ. ಒಂದು ಚಿಟಕಿ ದಾಲ್ಚಿನ್ನಿ. 1-2 ಲವಂಗವನ್ನು ನೀರಿಗೆ ಹಾಕಿ ಮಸಾಲೆ ಟೀ ಮಾಡಿ ಕುಡಿಯುವುದರಿಂದ ಕಫ್ ನಿಧಾನವಾಗಿ ಕಡಿಮೆಯಾಗುತ್ತದೆ.

    * ಈರುಳ್ಳಿಯ ರಸವನ್ನು ಬಿಸಿ ಮಾಡಿಕೊಂಡು ಇದಕ್ಕೆ, ಬೆಳ್ಳುಳ್ಳಿಯ ಒ0ದೆರಡು ದಳವನ್ನು ಜಜ್ಜಿ ಸೇರಿಸಿಕೊಂಡು ಈ ಮಿಶ್ರಣವನ್ನು ಒಂದು ದೊಡ್ಡ ಗ್ಲಾಸ್‍ನಷ್ಟು ಉಗುರು ಬೆಚ್ಚಗಿನ ಬಿಸಿನೀರಿಗೆ ಸೇರಿಸಿ ಹಾಗೂ ಒಂದು ಟೇಬಲ್ ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ ಕುಡಿಯುತ್ತಾ ಬಂದರೆ ಕೆಮ್ಮಿನ ಸಮಸ್ಯೆ ಕೂಡಲೇ ಕಡಿಮೆಯಾಗುತ್ತಾ ಬರುತ್ತದೆ.