Tag: home office

  • ಪ್ರತಿಭಟನೆ ನಡೆಸುತ್ತಿರೋ ಬಿಜೆಪಿಗೆ ಸಿಎಂ ಸವಾಲು

    ಪ್ರತಿಭಟನೆ ನಡೆಸುತ್ತಿರೋ ಬಿಜೆಪಿಗೆ ಸಿಎಂ ಸವಾಲು

    ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೈಗೊಂಡಿರುವ ಅಹೋರಾತ್ರಿ ಧರಣಿ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಇಂದು ಸಿಎಂ ಗೃಹ ಕಚೇರಿ ಕೃಷ್ಣಾ ಮೇಲೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಪ್ರತಿಭಟನೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

    ಸಿಎಂ ಟ್ವೀಟ್ ಮಾಡುವ ಮೂಲಕ ಪ್ರತಿಭಟನೆಗೆ ಉತ್ತರಿಸಿದ್ದಾರೆ. “ಬಿಜೆಪಿ ನಾಯಕರ ‘ಅಹೋರಾತ್ರಿ’ ಪ್ರತಿಭಟನೆಯನ್ನು ಗಮನಿಸಿದ್ದೇನೆ. ಸಿಎಂ ಕಚೇರಿಗೆ ಮುತ್ತಿಗೆಯ ಅವಶ್ಯಕತೆಯಿಲ್ಲ. ಜಿಂದಾಲ್, ಬರ, ರೈತರ ಸಾಲಮನ್ನಾ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ. ಪ್ರಧಾನಿ ಸೇರಿದಂತೆ ಕೇಂದ್ರದ ಸಚಿವರೊಂದಿಗೆ ಹಲವು ಸಮಸ್ಯೆ ಕುರಿತು ಚರ್ಚಿಸಿದ್ದೇನೆ. ನಿಮ್ಮ ಸಮಯ ತಿಳಿಸಿ ಚರ್ಚೆಗೆ ನಾನು ಸಿದ್ಧ” ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.

    ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೈಗೊಂಡಿರುವ ಅಹೋರಾತ್ರಿ ಧರಣಿ ಇವತ್ತು ಮೂರನೇ ದಿನಕ್ಕೆ ಕಾಲಿಟ್ಟಿದೆ. ಅಹೋರಾತ್ರಿ ಧರಣಿಯ ಕೊನೆಯ ದಿನವಾದ ಇಂದು ಬಿಜೆಪಿ ನಾಯಕರು ಸಿಎಂ ಗೃಹ ಕಚೇರಿ ಕೃಷ್ಣಾ ಮೇಲೆ ಮುತ್ತಿಗೆ ಹಾಕುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ. ಜಿಂದಾಲ್ ಸಂಸ್ಥೆಗೆ ಭಾರೀ ಪ್ರಮಾಣದಲ್ಲಿ ಜಮೀನು ಹಸ್ತಾಂತರಿಸುವ ನಿರ್ಧಾರ ವಾಪಸ್ ಪಡೆಯದ ಕಾರಣ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.

    ಬೆಳಗ್ಗೆ 11 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೃಷ್ಣಾ ಮುತ್ತಿಗೆ ಕಾರ್ಯಕ್ರಮ ನಡೆಯಲಿದೆ. ಕೃಷ್ಣಾ ಮುತ್ತಿಗೆ ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಸಂಸದರು, ಶಾಸಕರು, ಪಕ್ಷದ ಪದಾಧಿಕಾರಿಗಳು, ಭಾಗವಹಿಸಲಿದ್ದಾರೆ. ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದಾರೆ.

  • ಜಿಲ್ಲಾಧಿಕಾರಿಗಳ ಗೃಹ ಕಚೇರಿಯ ಕಂಪ್ಯೂಟರ್ ನಾಪತ್ತೆ!

    ಜಿಲ್ಲಾಧಿಕಾರಿಗಳ ಗೃಹ ಕಚೇರಿಯ ಕಂಪ್ಯೂಟರ್ ನಾಪತ್ತೆ!

    ರಾಯಚೂರು: ಜಿಲ್ಲಾಧಿಕಾರಿ ಬಿ.ಶರತ್ ಅವರ ಗೃಹ ಕಚೇರಿಯಲ್ಲಿದ್ದ ಕಂಪ್ಯೂಟರ್ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಹೌದು, ಈ ಹಿಂದಿನ ಜಿಲ್ಲಾಧಿಕಾರಿ ಬಗಾದಿ ಗೌತಮ್ ಬಳಸುತ್ತಿದ್ದ ಕಂಪ್ಯೂಟರ್ ನಾಪತ್ತೆಯಾಗಿದೆ. ಹಲವಾರು ಮಹತ್ವದ ದಾಖಲೆಗಳು ಇರಬಹುದಾದ ಜಿಲ್ಲಾಧಿಕಾರಿಗಳ ಗೃಹ ಕಚೇರಿ ಕಂಪ್ಯೂಟರ್ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಇತ್ತೀಚೆಗೆ ವರ್ಗಾವಣೆಯಾಗಿ ಬಂದಿದ್ದ ನೂತನ ಜಿಲ್ಲಾಧಿಕಾರಿ ಶರತ್ ಕಂಪ್ಯೂಟರ್ ಬಗ್ಗೆ ಸಿಬ್ಬಂದಿಗಳ ಹತ್ತಿರ ವಿಚಾರಿಸಿದಾಗ ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಅಲ್ಲದೇ ಗೃಹ ಕಚೇರಿಗೆ ಬಣ್ಣ ಬಳಿದಿರುವುದರಿಂದ, ಕಂಪ್ಯೂಟರ್ ಅನ್ನು ಎಲ್ಲಾದರೂ ತೆಗೆದಿಟ್ಟಿರಬಹುದು ಎಂದು ಬಿ.ಶರತ್ ಹೇಳಿದ್ದರು. ಆದರೆ ನವೆಂಬರ್ 5 ರಿಂದಲೂ ಕಂಪ್ಯೂಟರ್ ನಾಪತ್ತೆಯಾಗಿದ್ದು, ಪತ್ತೆಯಾಗಿಲ್ಲ. ಹೀಗಾಗಿ ಸರ್ಕಾರದ ಆಸ್ತಿ ಕಳ್ಳತನವಾದ ಹಿನ್ನೆಲೆಯಲ್ಲಿ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಡಿಸಿ ಆಪ್ತಸಹಾಯಕ ದೂರು ದಾಖಲಿಸಿದ್ದಾರೆ.

    ಪ್ರತಿ ಜಿಲ್ಲಾಧಿಕಾರಿ ವರ್ಗಾವಣೆಯಾಗಿ, ಹೊಸ ಅಧಿಕಾರಿ ಬರುವ ವೇಳೆಯೊಳಗೆ ಬಂಗಲೆಯಲ್ಲಿನ ವಸ್ತುಗಳು ನಾಪತ್ತೆಯಾಗುತ್ತಲೇ ಇರುತ್ತವೆ ಎಂಬ ಮಾತುಗಳು ಸಹ ಕೇಳಿಬಂದಿದೆ. ಕಂಪ್ಯೂಟರ್ ನಾಪತ್ತೆ ಪ್ರಕರಣದಲ್ಲಿ ಡಿಸಿ ಬಂಗಲೆ ಕೆಲಸಗಾರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬರೋಬ್ಬರಿ 20 ಲಕ್ಷ ರೂ. ವೆಚ್ಚದಲ್ಲಿ ಮಾಜಿ ಸಿಎಂಗೆ ಸಿದ್ಧವಾಯ್ತು ಐಶಾರಾಮಿ ಗೃಹಕಚೇರಿ!

    ಬರೋಬ್ಬರಿ 20 ಲಕ್ಷ ರೂ. ವೆಚ್ಚದಲ್ಲಿ ಮಾಜಿ ಸಿಎಂಗೆ ಸಿದ್ಧವಾಯ್ತು ಐಶಾರಾಮಿ ಗೃಹಕಚೇರಿ!

    ಬಾಗಲಕೋಟೆ: ಇಂದಿನಿಂದ ಎರಡು ದಿನಗಳ ಕಾಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಯುರೋಪ್ ಪ್ರವಾಸದ ನಂತರ ಮತ್ತೆ ಬಾದಾಮಿ ಕ್ಷೇತ್ರದ ಕಡೆ ಮುಖ ಮಾಡಿದ್ದು, ಅವರಿಗಾಗಿ 20 ಲಕ್ಷ ರೂ. ಖರ್ಚು ಮಾಡಿ ಗೃಹ ಕಚೇರಿಯನ್ನು ಸಿದ್ಧ ಪಡಿಸಲಾಗಿದೆ.

    ಬಾದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಮನೆ ಸಿಗಲಿಲ್ಲ. ಹೀಗಾಗಿ ಲೋಕೋಪಯೋಗಿ ಸಹಾಯಕ ಎಂಜಿನಿಯರ್ ಮನೆಯನ್ನೇ ತಮ್ಮ ಗೃಹಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಮನೆಗೆ ಈಗ ನವೀಕರಣ ಭಾಗ್ಯ ಸಿಕ್ಕಿದ್ದು, ಕಚೇರಿ ಸಿದ್ದರಾಮಯ್ಯ ಗೃಹ ಕಚೇರಿಯಾಗಿ ಲಕಲಕ ಹೊಳೆಯುತ್ತಿದೆ.

    ಐಶಾರಾಮಿ ಕಚೇರಿಗೆ ಇಂದು ಉದ್ಘಾಟನೆ ಭಾಗ್ಯ ದೊರೆತಿದ್ದು, ಎಸಿ, ಸೋಫಾ ಸೆಟ್, ವಿಶ್ರಾಂತಿ ಗೃಹ, ಟಿವಿ, ಕಬೋರ್ಡ್ ಮತ್ತು ಮೀಟಿಂಗ್ ಹಾಲ್ ಎಲ್ಲವೂ ಹೈಟೆಕ್ ಆಗಿದೆ. ಸಿದ್ದರಾಮಯ್ಯನವರು ಈ ಹಿಂದೆ ಬಾದಾಮಿಯಲ್ಲಿ ಮನೆ ಮಾಡುತ್ತೇನೆ ಅಂತ ಹೇಳಿದ್ದರು. ಆದರೆ ಬಾದಾಮಿಯಲ್ಲಿ ಒಳ್ಳೆ ಮನೆ ಸಿಗಲಿಲ್ಲ. ಸದ್ಯ ಕಚೇರಿ ಆರಂಭಿಸುತ್ತೇನೆ ಅಂತ ಎರಡು ತಿಂಗಳ ಹಿಂದೆ ಸಿದ್ದರಾಮಯ್ಯ ಜನರೆದುರು ಹೇಳಿಕೊಂಡಿದ್ದರು. ಇದೀಗ ಮನೆ ಬದಲು ಗೃಹಕಚೇರಿ ಆರಂಭವಾಗುತ್ತಿದೆ.

    ಗೃಹಕಚೇರಿ ಉದ್ಘಾಟನೆ ನಂತರ ಬಾದಾಮಿಯ ಅಕ್ಕಮಹಾದೇವಿ ಕಲ್ಯಾಣಮಂಟಪದಲ್ಲಿ ಪುರಸಭಾ ಸದಸ್ಯರ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಳಿಕ ಸಂಜೆ ಜಮಖಂಡಿ ನಗರದ ಜಮಖಂಡಿ ನಗರದ ಬಸವಭವನದಲ್ಲಿ ಕೈ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಸಭೆ ನಂತರ ರಾತ್ರಿ ಬಾದಾಮಿ ಪಟ್ಟಣದಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಮಾಡಲಿದ್ದಾರೆ.

    ಶುಕ್ರವಾರ ಸಿದ್ದರಾಮಯ್ಯ ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣಕ್ಕೆ ಭೇಟಿ ನೀಡಿ ಕೆರೂರು ಪಟ್ಟಣ ಪಂಚಾಯತ್ ಸದಸ್ಯರ ಅಭಿನಂದನಾ ಕಾರ್ಯಕ್ರಮ ನಡೆಸಲಿದ್ದಾರೆ. ಬಳಿಕ ರಾಚೋಟೇಶ್ವರ ಕಲ್ಯಾಣಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಕೆರೂರು ಭಾಗದ ಜನರಿಂದ ಅಹವಾಲು ಸ್ವೀಕರಿಸಲಿದ್ದಾರೆ. ನಂತರ ಮಧ್ಯಾಹ್ನ ಕೆರೂರು ಪಟ್ಟಣದಿಂದ ಗದಗ ಜಿಲ್ಲೆಗೆ ತೆರಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ನಿವಾಸದೊಳಗೆ ಬಿತ್ತು ಗಾಲ್ಫ್ ಚೆಂಡು: ಪೊಲೀಸ್ ವಾಹನದ ಗಾಜು ಜಖಂ

    ಸಿಎಂ ನಿವಾಸದೊಳಗೆ ಬಿತ್ತು ಗಾಲ್ಫ್ ಚೆಂಡು: ಪೊಲೀಸ್ ವಾಹನದ ಗಾಜು ಜಖಂ

    ಬೆಂಗಳೂರು: ಗಾಲ್ಫ್ ಚೆಂಡು ಗೃಹಕಚೇರಿ ಕೃಷ್ಣಾ ನಿವಾಸದ ಒಳಗೆ ಬಿದ್ದಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ವಾಹನದ ಗಾಜು ಜಖಂ ಗೊಂಡಿದೆ.

    ಕೃಷ್ಣಾ ನಿವಾಸದ ಪಕ್ಕದಲ್ಲಿಯೇ ಇರುವ ಗಾಲ್ಫ್ ಮೈದಾನದಿಂದ ಚೆಂಡು ಹಾರಿ ಬಂದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಕಾಕತಾಳೀಯ ಅಂದರೆ ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಗಾಲ್ಫ್ ಚೆಂಡುಗಳು ಕೃಷ್ಣಾ ನಿವಾಸದೊಳಗೆ ಬಂದು ಬೀಳುತ್ತಿದ್ದವು. ಹೀಗಾಗಿ ಕುಮಾರಸ್ವಾಮಿ ಮೈದಾನದ ಸುತ್ತಲೂ 100 ಅಡಿ ಎತ್ತರದ ಬಲೆ ಹಾಕಿಸಿದ್ದರು. ಆದರೆ ಈಗ ಗಾಲ್ಫ್ ಚೆಂಡು ಅಷ್ಟು ಎತ್ತರದ ಬಲೆ ದಾಟಿ ಮತ್ತೆ ಕೃಷ್ಣಾ ನಿವಾಸದ ಒಳಗೆ ಬಂದು ಬಿದ್ದಿದೆ.

    ಗಾಲ್ಫ್ ಚೆಂಡು ವಶಕ್ಕೆ ಪಡೆದಿರುವ ಪೊಲೀಸರು, ಯಾರು ಹೊಡೆದಿದ್ದು ಎಂದು ಪರಿಶೀಲನೆ ನಡೆಸುತ್ತಿದ್ದಾರೆ.