Tag: home ministry

  • 67 ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಪಟ್ಟಿ ನವೀಕರಿಸಿದ ಗೃಹ ಸಚಿವಾಲಯ

    67 ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಪಟ್ಟಿ ನವೀಕರಿಸಿದ ಗೃಹ ಸಚಿವಾಲಯ

    ನವದೆಹಲಿ: ಭಾರತದ ವಿರುದ್ಧದ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳು ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ ನಿಷೇಧವನ್ನು ಎದುರಿಸುತ್ತಿರುವ 67 ಭಯೋತ್ಪಾದಕ ಸಂಘಟನೆಗಳು ಮತ್ತು ಕಾನೂನುಬಾಹಿರ ಸಂಸ್ಥೆಗಳ ಹೆಸರುಗಳಿರುವ ನವೀಕರಿಸಲಾದ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ(Home Ministry)  ಬಿಡುಗಡೆ ಮಾಡಿದೆ.

    ಗೃಹ ಸಚಿವಾಲಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಯುಎಪಿಎ(UAPA) ಸೆಕ್ಷನ್ 35ರ ಅಡಿಯಲ್ಲಿ ಅಧಿಕೃತವಾಗಿ ಭಯೋತ್ಪಾದಕ ಸಂಘಟನೆಗಳೆಂದು ವರ್ಗೀಕರಿಸಲ್ಪಟ್ಟ 45 ಸಂಘಟನೆಗಳನ್ನು ಹೆಸರಿಸಲಾಗಿದೆ. ಉಳಿದ 22 ಗುಂಪುಗಳನ್ನು ಯುಎಪಿಎ ಸೆಕ್ಷನ್ 3(1)ರ ಅಡಿಯಲ್ಲಿ ಕಾನೂನುಬಾಹಿರ ಸಂಘಗಳೆಂದು ವರ್ಗೀಕರಿಸಲಾಗಿದೆ. ಇದನ್ನೂ ಓದಿ: ಒಳ್ಳೆತನದಲ್ಲಿ ಅಪ್ಪು ಸರ್ ಯಾವಾಗಲೂ ಜೀವಂತವಾಗಿರುತ್ತಾರೆ: ಅನುಶ್ರೀ

    ಈ ಸಂಘಟನೆಗಳಲ್ಲಿ ಹಲವು ಭಾರತದಾದ್ಯಂತ ಉಗ್ರಗಾಮಿತ್ವ, ಪ್ರತ್ಯೇಕತಾವಾದ ಮತ್ತು ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿವೆ. ಈ ನಿಷೇಧಿತ ಸಂಘಟನೆಗಳ ಘೋಷಣೆಯು ಭಾರತದ ಗಡಿಯೊಳಗೆ ಭಯೋತ್ಪಾದನೆ ಮತ್ತು ಉಗ್ರಗಾಮಿ ಚಟುವಟಿಕೆಗಳನ್ನು ನಿಗ್ರಹಿಸಲು ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿದೆ. ಯುಎಪಿಎ ಅಡಿಯಲ್ಲಿ ಪಟ್ಟಿ ಮಾಡಲಾದ ಸಂಘಟನೆಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ಅದರ ಸದಸ್ಯರ ಬಂಧನ ಸೇರಿದಂತೆ ಕಠಿಣ ಕಾನೂನು ಕ್ರಮಗಳನ್ನು ಎದುರಿಸುತ್ತಿವೆ. ಇದನ್ನೂ ಓದಿ: ಜಿಯೋ ಗ್ರಾಹಕರಿಗೆ ಮಾತ್ರ ಐಪಿಎಲ್‌ ವೀಕ್ಷಣೆ ಉಚಿತ! – ಎಷ್ಟು ರಿಚಾರ್ಜ್‌ ಮಾಡಿದ್ರೆ ಫ್ರೀ?

    ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್, ಖಾಲಿಸ್ತಾನ್ ಕಮಾಂಡೋ ಫೋರ್ಸ್, ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್, ಅಂತರರಾಷ್ಟ್ರೀಯ ಸಿಖ್ ಯುವ ಒಕ್ಕೂಟ, ಲಷ್ಕರ್-ಎ-ತೈಬಾ ಅಥವಾ ಪಾಸ್ಬನ್-ಎ-ಅಹ್ಲೆ ಹದೀಸ್ ಅಥವಾ ದಿ ರೆಸಿಸ್ಟೆನ್ಸ್ ಫ್ರಂಟ್, ಜೈಶ್-ಎ-ಮೊಹಮ್ಮದ್ ಅಥವಾ ತಹ್ರೀಕ್-ಎ-ಫುರ್ಕಾನ್ ಅಥವಾ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್-ಫ್ರಂಟ್(ಪಿಎಎಫ್‌ಎಫ್) ಮತ್ತು ಅದರ ಎಲ್ಲಾ ಸಂಘಟನೆಗಳು. ಇದನ್ನೂ ಓದಿ: ‘ಡೆವಿಲ್’ ಸಿನಿಮಾದಲ್ಲಿನ ಪಾತ್ರದ ಬಗ್ಗೆ ಅಪ್‌ಡೇಟ್ ಕೊಟ್ಟ ಶರ್ಮಿಳಾ ಮಾಂಡ್ರೆ

    ಹರ್ಕತ್-ಉಲ್-ಮುಜಾಹಿದ್ದೀನ್ ಅಥವಾ ಹರ್ಕತ್-ಉಲ್-ಅನ್ಸಾರ್ ಅಥವಾ ಹರ್ಕತ್-ಉಲ್-ಜೆಹಾದ್-ಇ-ಇಸ್ಲಾಮಿ ಅಥವಾ ಅನ್ಸರ್-ಉಲ್-ಉಮ್ಮಾ, ಹಿಜ್ಬುಲ್-ಮುಜಾಹಿದ್ದೀನ್ ಅಥವಾ ಹಿಜ್ಬುಲ್-ಮುಜಾಹಿದ್ದೀನ್ ಪಿರ್ ಪಂಜಾಲ್ ರೆಜಿಮೆಂಟ್, ಅಲ್-ಉಮರ್-ಮುಜಾಹಿದ್ದೀನ್, ಜಮ್ಮು ಮತ್ತು ಕಾಶ್ಮೀರ ಇಸ್ಲಾಮಿಕ್ ಫ್ರಂಟ್, ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಯುಎಲ್‌ಎಫ್‌ಎ), ಅಸ್ಸಾಂನ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್‌ಡಿಎಫ್‌ಬಿ), ಪೀಪಲ್ಸ್ ರೆವಲ್ಯೂಷನರಿ ಫ್ರಂಟ್ ಆಫ್ ಕಾಂಗ್ಲೀಪಾಕ್ (ಪಿಆರ್‌ಎಫ್‌ಕೆ). ಇದನ್ನೂ ಓದಿ: ಕೋಲಾರ | ಕ್ರಶರ್‌ನಲ್ಲಿ ಸ್ಫೋಟ – ಕಲ್ಲು ಸಿಡಿದು ಕಾರ್ಮಿಕ ಸಾವು, ಇಬ್ಬರಿಗೆ ಗಾಯ

    ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಾರ್ಟಿ(ಕೆಸಿಪಿ), ಕಾಂಗ್ಲೀ ಯೋಲ್ ಕನ್ಬಾ ಲುಪ್ (ಕೆವೈಕೆಎಲ್), ಮಣಿಪುರ ಪೀಪಲ್ಸ್ ಲಿಬರೇಶನ್ ಫ್ರಂಟ್ (ಎಂಪಿಎಲ್‌ಎಫ್), ಆಲ್ ತ್ರಿಪುರ ಟೈಗರ್ ಫೋರ್ಸ್ (ಎಟಿಟಿಎಫ್), ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರ (ಎನ್‌ಎಲ್‌ಎಫ್‌ಟಿ), ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್‌ಟಿಟಿಇ), ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ), ದೀಂದರ್ ಅಂಜುಮನ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್)-ಪೀಪಲ್ಸ್ ವಾರ್, ಅಲ್ ಬದ್ರ್, ಜಮಿಯತ್-ಉಲ್-ಮುಜಾಹಿದ್ದೀನ್, ಭಾರತೀಯ ಉಪಖಂಡದಲ್ಲಿ ಅಲ್-ಖೈದಾವನ್ನು ಭಯೋತ್ಪಾದಕ ಸಂಘಟನೆಗಳು ಎಂದು ಗುರುತಿಸಲಾಗಿದೆ.

    ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳು ಅಥವಾ ರಿಹ್ಯಾಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ಕೇರಳದ ರಿಹ್ಯಾಬ್ ಫೌಂಡೇಶನ್ ಅನ್ನು ಸಹ ಕಾನೂನುಬಾಹಿರ ಸಂಘಗಳ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ದಾಖಲೆಯ ಬಿಸಿಲು – ಮಣ್ಣಿನ ಮಡಿಕೆಗೆ ಹೆಚ್ಚಾದ ಡಿಮ್ಯಾಂಡ್

    ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ(ಯುಎಪಿಎ) 1967, ಭಾರತದ ಪ್ರಾಥಮಿಕ ಭಯೋತ್ಪಾದನಾ ವಿರೋಧಿ ಕಾನೂನಾಗಿದ್ದು, ಸರ್ಕಾರವು ಸಂಘಟನೆಗಳನ್ನು ಭಯೋತ್ಪಾದಕ ಗುಂಪುಗಳು ಅಥವಾ ಕಾನೂನುಬಾಹಿರ ಸಂಘಗಳೆಂದು ಘೋಷಿಸಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಅಧಿಕಾರಿಗಳು ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ವಿಶೇಷವಾಗಿ 2008ರ ಮುಂಬೈ ದಾಳಿಯ ನಂತರ, ಅದರ ನಿಬಂಧನೆಗಳನ್ನು ಬಲಪಡಿಸಲು ಕಾಯ್ದೆಯನ್ನು ಹಲವು ಬಾರಿ ತಿದ್ದುಪಡಿ ಮಾಡಲಾಗಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಖೋಟಾ ನೋಟು ಜಾಲ ಪತ್ತೆ – ಎಎಸ್‌ಐ ಸೇರಿ ನಾಲ್ವರು ಅರೆಸ್ಟ್‌

    ಒಂದು ಸಂಘಟನೆಯನ್ನು ಭಯೋತ್ಪಾದಕ ಗುಂಪು ಎಂದು ಹೆಸರಿಸುವುದರಿಂದ ಭಾರತದಲ್ಲಿ ಅದರ ಕಾರ್ಯಾಚರಣೆಗಳನ್ನು ನಿಷೇಧಿಸುವುದು. ಅದರ ಹಣಕಾಸು ಸ್ವತ್ತುಗಳನ್ನು ಸ್ಥಗಿತಗೊಳಿಸುವುದು. ಅದರ ಸದಸ್ಯರು ನಿಧಿ ಸಂಗ್ರಹಿಸುವುದನ್ನು ಅಥವಾ ನೇಮಕಾತಿ ಮಾಡುವುದನ್ನು ತಡೆಯುವುದು. ಅಲ್ಲದೇ ಗುಂಪಿನೊಂದಿಗೆ ಸಂಬಂಧ ಹೊಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಭಾರತದ ಒಳಗೆ ಮತ್ತು ಹೊರಗೆ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ, ದಂಗೆಕೋರ ಮತ್ತು ಉಗ್ರಗಾಮಿ ಗುಂಪುಗಳಿಂದ ಬೆಳೆಯುತ್ತಿರುವ ಬೆದರಿಕೆಗಳನ್ನು ಎದುರಿಸಲು ಭಾರತ ಸರ್ಕಾರವು ನಿಯಮಿತವಾಗಿ ಈ ಪಟ್ಟಿಯನ್ನು ನವೀಕರಿಸುತ್ತದೆ.

  • ಗೃಹ ಸಚಿವಾಲಯದ ಕಚೇರಿಗೆ ಬಾಂಬ್ ಬೆದರಿಕೆ

    ಗೃಹ ಸಚಿವಾಲಯದ ಕಚೇರಿಗೆ ಬಾಂಬ್ ಬೆದರಿಕೆ

    ನವದೆಹಲಿ: ದೆಹಲಿಯಲ್ಲಿರುವ ಗೃಹ ಸಚಿವಾಲಯದ ಕಚೇರಿಗೆ (Home Ministry Office) ಬಾಂಬ್ ಬೆದರಿಕೆ ಮೇಲ್ ಬಂದಿದೆ.

    ನವದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ಪೊಲೀಸ್ ಕಂಟ್ರೋಲ್ ರೂಮ್‌ಗೆ ಬಾಂಬ್‌ ಬೆದರಿಕೆ (Bomb Threat) ಮೇಲ್‌ ಬಂದಿತ್ತು. ಕೂಡಲೇ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಗಿದೆ.

    ತನಿಖೆಗೆ ಇಳಿದ ಪೊಲೀಸರಿಗೆ ಇದು ನಕಲಿ ಬೆದರಿಕೆ ಎನ್ನುವುದು ಗೊತ್ತಾಗಿದೆ. ಐಪಿ ವಿಳಾಸವನ್ನು ಆಧಾರಿಸಿ ಪೊಲೀಸರು ಪೊಲೀಸರು ಇಮೇಲ್‌ ಕಳುಹಿಸಿದ ವ್ಯಕ್ತಿಯ ಪತ್ತೆ ಕಾರ್ಯ ಆರಂಭಿಸಿದ್ದಾರೆ. ಸ್ನಿಫರ್ ಡಾಗ್ಸ್ ಮತ್ತು ಬಾಂಬ್ ಸ್ಕ್ವಾಡ್ ಮತ್ತು ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ನಾರ್ತ್ ಬ್ಲಾಕ್‌ನಲ್ಲಿ ಹೆಚ್ಚಿನ ಶೋಧ ನಡೆಸುತ್ತಿದ್ದಾರೆ.

    ಶಾಲೆಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣಗಳು ಮತ್ತು ಸರ್ಕಾರಿ ಕಟ್ಟಡಗಳು ಸೇರಿದಂತೆ ಹಲವು ಸಂಸ್ಥೆಗಳು ಕಳೆದ ತಿಂಗಳಿನಿಂದ ಬೆದರಿಕೆ ಕರೆ, ಮೇಲ್‌ ಬರುತ್ತಲೇ ಇದೆ.

  • ಲೋಕಸಭಾ ಚುನಾವಣೆಗೂ ಮುನ್ನ ಸಿಎಎ ಅಧಿಕೃತ ಜಾರಿ – ಇಂದು ರಾತ್ರಿಯೇ ಅಧಿಸೂಚನೆ ಸಾಧ್ಯತೆ

    ಲೋಕಸಭಾ ಚುನಾವಣೆಗೂ ಮುನ್ನ ಸಿಎಎ ಅಧಿಕೃತ ಜಾರಿ – ಇಂದು ರಾತ್ರಿಯೇ ಅಧಿಸೂಚನೆ ಸಾಧ್ಯತೆ

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು (CAA) ಕೇಂದ್ರ ಸರ್ಕಾರ ಅಧಿಕೃತವಾಗಿ ಜಾರಿಗೊಳಿಸಲು ಮುಂದಾಗಿದೆ. ಇಂದು ರಾತ್ರಿಯೇ ಕೇಂದ್ರ ಗೃಹ ಸಚಿವಾಲಯ ಸಿಎಎ ಜಾರಿ ಸಂಬಂಧ ನಿಯಮಗಳನ್ನು ಪ್ರಕಟಿಸಿ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ.

    ಈ ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಸಿಎಎ ಜಾರಿಗೊಳಿಸುತ್ತೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ರಾಷ್ಟ್ರ ಪತಿಗಳು ಕಾಯ್ದೆಗೆ ಸಹಿ ಹಾಕಿದ್ದರೂ ಇಲ್ಲಿಯವರೆಗೆ ಜಾರಿ ಆಗಿರಲಿಲ್ಲ. ಈಗ ಲೋಕಸಭಾ ಚುನಾವಣೆಗೂ ಮುನ್ನ ಸಿಎಎ ಜಾರಿಗೊಳಿಸುವ ಮೂಲಕ ತನ್ನಲ್ಲಿದ್ದ ದೊಡ್ಡ ಅಸ್ತ್ರವನ್ನು ಬಿಜೆಪಿ ಪ್ರಯೋಗಿಸಿದೆ. ಇದನ್ನೂ ಓದಿ: ಬಸ್ ಮೇಲೆ ಬಿದ್ದ 11,000 ವೋಲ್ಟ್ ಕರೆಂಟ್ ವೈರ್ – 10ಕ್ಕೂ ಹೆಚ್ಚು ಮಂದಿ ಸಜೀವ ದಹನ

    ಈ ಹಿಂದೆ ಖಾಸಗಿ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗೃಹ ಸಚಿವ ಅಮಿತ್‌ ಶಾ (Amit Shah) ಲೋಕಸಭಾ ಚುನಾವಣೆಗೆ (Lok Sabha Election) ಮುನ್ನ ಜಾರಿಗೆ ತರುವುದಾಗಿ ಹೇಳಿದ್ದರು.

    ಸಿಎಎ ದೇಶದ ಕಾಯ್ದೆಯಾಗಿದೆ. ಅದನ್ನು ಖಂಡಿತವಾಗಿಯೂ ಲೋಕಸಭಾ ಚುನಾವಣೆಗೆ ಮುನ್ನವೇ ನೋಟಿಫೈ ಮಾಡಲಾಗುವುದು ಅದರಲ್ಲಿ ಯಾವುದೇ ಗೊಂದಲ ಇಲ್ಲ. ಸಿಎಎ ಕಾಂಗ್ರೆಸ್ ಸರ್ಕಾರದ (Congress Government) ಭರವಸೆಯಾಗಿತ್ತು. ದೇಶ ವಿಭಜನೆಯಾದಾಗ ಮತ್ತು ಆ ದೇಶದಲ್ಲಿದ್ದ ಅಲ್ಪಸಂಖ್ಯಾತರು ಕಿರುಕುಳಕ್ಕೊಳಗಾದಾಗ, ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ ನೀಡಿ ಭಾರತೀಯ ಪೌರತ್ವವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಈಗ ಕಾಂಗ್ರೆಸ್‌ ಆ ಭರವಸೆಯಿಂದ ಹಿಂದಕ್ಕೆ ಸರಿಯುತ್ತಿದೆ ಎಂದು ಶಾ ದೂರಿದ್ದರು. ಇದನ್ನೂ ಓದಿ: ಡಿಕೆಸು Vs ಡಾ.ಮಂಜುನಾಥ್‌ ಸ್ಪರ್ಧೆ ಫಿಕ್ಸ್‌, ಅಧಿಕೃತ ಘೋಷಣೆ ಮಾತ್ರ ಬಾಕಿ – ಜೆಡಿಎಸ್‌ ಸಭೆಯಲ್ಲಿ ಏನು ಚರ್ಚೆ ನಡೆದಿದೆ?

     

    ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ನಮ್ಮ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. ಕಾಯ್ದೆಯಲ್ಲಿ ಯಾವುದೇ ನಿಬಂಧನೆ ಇಲ್ಲದ ಕಾರಣ ಸಿಎಎ ಯಾರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯ್ದೆಯಾಗಿದೆ ಎಂದು ವಿವರಿಸಿದ್ದರು.

    2019ರಲ್ಲಿ ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು ಸಹಿ ಹಾಕಿದ ನಂತರ ದೇಶದಲ್ಲಿ ಭಾರೀ ಪ್ರತಿಭಟನೆ ನಡೆದ ಕಾರಣ ಇನ್ನೂ ಸಿಎಎ ಜಾರಿಯಾಗಿಲ್ಲ. ಈ ಕಾಯ್ದೆಯ ಪ್ರಕಾರ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿಂದ ಬರುವ ಹಿಂದೂ, ಸಿಖ್, ಜೈನ್, ಕ್ರೈಸ್ತ ಮತ್ತು ಬೌದ್ಧ ಸಮುದಾಯದವರಿಗೆ ಭಾರತದ ಪೌರತ್ವ ನೀಡಲಾಗುತ್ತದೆ.

  • ನಿಷೇಧಿತ ಪಿಎಫ್‍ಐನ ಇಬ್ಬರು ಮುಖಂಡರ ಬಂಧನ

    ನಿಷೇಧಿತ ಪಿಎಫ್‍ಐನ ಇಬ್ಬರು ಮುಖಂಡರ ಬಂಧನ

    ದಿಸ್ಪುರ್: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ( PFI) ಅಸ್ಸಾಂ (Assam) ಘಟಕದ ಇಬ್ಬರು ಉನ್ನತ ನಾಯಕರನ್ನು ಬಾರ್ಪೇಟಾದಲ್ಲಿ (Barpeta) ಬಂಧಿಸಲಾಗಿದೆ. ಪಿಎಫ್‍ಐನ ರಾಜ್ಯ ಅಧ್ಯಕ್ಷ ಅಬು ಸಮಾ ಅಹ್ಮದ್ ಹಾಗೂ ರಾಜ್ಯ ಕಾರ್ಯದರ್ಶಿ ಜಾಕಿರ್ ಹುಸೇನ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

    ಮತ್ತೊಂದು ನಿಷೇಧಿತ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ಸಂಘಟನೆಯ ನಾಯಕ ಸಾಹಿದುಲ್ ಇಸ್ಲಾಂನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1.5 ಲಕ್ಷ ರೂ. ನಾಲ್ಕು ಮೊಬೈಲ್ ಫೋನ್‍ಗಳು ಮತ್ತು ಕೆಲವು ಕರಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಹುಚ್ಚಾಟ – ತುರ್ತು ನಿರ್ಗಮನ ದ್ವಾರ ತೆಗೆಯಲು ವ್ಯಕ್ತಿ ಪ್ರಯತ್ನ

    ಕೇಂದ್ರ ಸರ್ಕಾರ ಕಳೆದ 2022ರ ಸೆಪ್ಟೆಂಬರ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಪಿಎಫ್‍ಐನ್ನು ನಿಷೇಧಿಸಿತ್ತು. ಮತ್ತು ಅದರ ಅಂಗಸಂಸ್ಥೆಗಳು ದೇಶದ ಸಮಗ್ರತೆ, ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತರುವಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಭಂಗ ತರುವ ಕೆಲಸಗಳಲ್ಲಿ ತೊಡಗಿವೆ ಎಂದು ಗೃಹ ಸಚಿವಾಲಯ (Home Ministry) ಹೇಳಿತ್ತು.

    ಅಲ್ಲದೇ ಜನರಲ್ಲಿ ಭಯ ಹುಟ್ಟಿಸಲು ಪಿಎಫ್‍ಐ ಸದಸ್ಯರು ಈ ಹಿಂದೆ ಹಲವಾರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದರು. ಅದರ ಕಾರ್ಯಕರ್ತರು ಹಲವಾರು ಕ್ರೂರ ಕೊಲೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಸಚಿವಾಲಯ ಹೇಳಿಕೊಂಡಿತ್ತು. ಇದನ್ನೂ ಓದಿ: ಎಂಗೇಜ್ಮೆಂಟ್ ಆಗಿದ್ದವಳಿಂದಲೇ ಹತ್ಯೆಗೆ ಯತ್ನ- ಪ್ರಾಣಾಪಾಯದಿಂದ ಯುವಕ ಪಾರು

  • ಕೆಳಹಂತದ ಪೊಲೀಸರ ಸ್ವಾತಂತ್ರ್ಯ ಕಸಿಯಲು ಮುಂದಾದ ಸರ್ಕಾರ

    ಕೆಳಹಂತದ ಪೊಲೀಸರ ಸ್ವಾತಂತ್ರ್ಯ ಕಸಿಯಲು ಮುಂದಾದ ಸರ್ಕಾರ

    ಬೆಂಗಳೂರು: ಕೆಳಹಂತದ ಪೊಲೀಸರ ಸ್ವಾತಂತ್ರ್ಯ ಕಸಿಯಲು ಸರ್ಕಾರ ಮುಂದಾಗಿದೆ. ಕರ್ನಾಟಕ ರಾಜ್ಯ ಪೊಲೀಸ್‌ (Police Department) ಶಿಸ್ತು ನಡವಳಿಕೆ ನಿಯಮಗಳಿಗೆ ತಿದ್ದುಪಡಿ ತರಲು ನಿರ್ಧರಿಸಿದೆ.

    ಕೆಳಹಂತದ ಪೊಲೀಸರು ಇನ್ನು ಮುಂದೆ ಶಿಸ್ತು ಪ್ರಾಧಿಕಾರಕ್ಕೆ‌ ಮೇಲ್ಮನವಿ ಸಲ್ಲಿಸುವ ಹಾಗೆ ಇಲ್ಲ. IPS ಅಧಿಕಾರಿಗಳ ನಿರ್ಧಾರವೇ ಇನ್ಮುಂದೆ ಗೃಹ ಇಲಾಖೆಯಲ್ಲಿ ಅಂತಿಮವಾಗಲಿದೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸುಧಾಕರ್

    ಈ ಸಂಬಂಧ ಈಗಾಗಲೇ ಗೃಹ ಇಲಾಖೆ ಕರಡು ಪ್ರಕಟಿಸಿದೆ. ಆ ಮೂಲಕ IPS ಅಧಿಕಾರಿಗಳ ತೀರ್ಮಾನದ ವಿರುದ್ದ ಕೆಳಹಂತದ ಅಧಿಕಾರಿಗಳು ಮೇಲ್ಮನವಿ ಸಲ್ಲಿಸುವ ಅವಕಾಶಕ್ಕೆ ಕೊಕ್ಕೆ ಹಾಕಲು ಸರ್ಕಾರ ಮುಂದಾಗಿದೆ. ಕರಡಿಗೆ ಆಕ್ಷೇಪಣೆ ಸಲ್ಲಿಸಲು ನಾಳೆ ಕೊನೆ ದಿನವಾಗಿದೆ.

    ಹೊಸ ನಿಯಮದ ಪ್ರಕಾರ PSI, SI, ASI, ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಟೇಬಲ್ ವರ್ಗದ ಮೇಲೆ ಭ್ರಷ್ಟಾಚಾರ, ಅಶಿಸ್ತು ಇನ್ನಿತರ ಆರೋಪ ಕೇಳಿ ಬಂದಾಗ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸುತ್ತಾರೆ. ಹಿರಿಯ ಅಧಿಕಾರಿಗಳು ದಂಡ, ಮುಂಬಡ್ತಿ ತಡೆ ಹಿಡಿಯುವ ಶಿಕ್ಷೆ ನೀಡುತ್ತಾರೆ. ಹಿರಿಯ ಅಧಿಕಾರಿಗಳ ಈ ತೀರ್ಪಿನ ವಿರುದ್ಧ ಇಷ್ಟು ದಿನ ಮೇಲ್ಮನವಿ ಹೋಗಲು ಅವಕಾಶ ಇತ್ತು. ಈ ಅವಕಾಶವನ್ನ ಕೈಬಿಟ್ಟು, ಹಿರಿಯ ಅಧಿಕಾರಿಗಳ ತೀರ್ಪಿನ ವಿರುದ್ದ ಮೇಲ್ಮನವಿ ಹೋಗಲು ಅವಕಾಶ ರದ್ದು ಮಾಡುವ ನಿಯಮ ಜಾರಿಗೆ ಸರ್ಕಾರ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ದೂರು ನೀಡಲು ಹೋದವರ ಮೇಲೆಯೇ ಪೊಲೀಸರ ದೌರ್ಜನ್ಯ?

    ಸರ್ಕಾರದ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಗಲ್ಲು ಶಿಕ್ಷೆ ಆದವರಿಗೂ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಪೊಲೀಸರಿಗೆ ಚಿಕ್ಕ ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲವಾ? ಅಪರಾಧಿಗಿಂತ ಪೊಲೀಸ್ ಇಲಾಖೆ ಕೆಳಹಂತದ ಅಧಿಕಾರಿಗಳು ಸರ್ಕಾರದ ಮಟ್ಟಿಗೆ ಕೀಳಾದ್ರಾ? IPS ಅಧಿಕಾರಿಗಳೇ ಇಲಾಖೆ ನಡೆಸುತ್ತಿದ್ದಾರಾ ಎಂಬ ಆಕ್ರೋಶ ವ್ಯಕ್ತವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಹಾರಾಷ್ಟ್ರ ಸಿಎಂ ಶಿಂದೆ ಸಂಪುಟದಲ್ಲಿ ದೇವೇಂದ್ರ ಫಡ್ನವಿಸ್‌ಗೆ ಗೃಹ, ಹಣಕಾಸು ಖಾತೆ

    ಮಹಾರಾಷ್ಟ್ರ ಸಿಎಂ ಶಿಂದೆ ಸಂಪುಟದಲ್ಲಿ ದೇವೇಂದ್ರ ಫಡ್ನವಿಸ್‌ಗೆ ಗೃಹ, ಹಣಕಾಸು ಖಾತೆ

    ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂದೆ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರಿಗೆ ಗೃಹ ಹಾಗೂ ಹಣಕಾಸು ಖಾತೆಗಳನ್ನು ನೀಡಲಾಗಿದೆ.

    ಬಿಜೆಪಿ ಹಾಗೂ ಶಿವಸೇನಾದ ಶಿಂದೆ ಬಣ ಮೈತ್ರಿ ಸರ್ಕಾರದ ರಚನೆಯಾಗಿದ್ದು, ಮಂಗಳವಾರ 18 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ಶಿಂಧೆ ಅವರು ನಗರಾಭಿವೃದ್ಧಿ ಖಾತೆಯನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಇನ್ಮುಂದೆ ಒಬ್ಬ ಶಾಸಕನಿಗೆ ಒಂದೇ ಬಾರಿ ಪಿಂಚಣಿ – 100 ಕೋಟಿ ಉಳಿತಾಯಕ್ಕೆ ಸಿಎಂ ಪ್ಲ್ಯಾನ್‌

    ಫಡ್ನವಿಸ್ ಅವರು ಯೋಜನಾ ಖಾತೆಯನ್ನೂ ನಿಭಾಯಿಸಲಿದ್ದಾರೆ. ಬಿಜೆಪಿ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರು ನೂತನ ಕಂದಾಯ ಸಚಿವರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಬಿಜೆಪಿ ಸಚಿವ ಸುಧೀರ್ ಮುಂಗಂತಿವಾರ್ ಅವರು ಅರಣ್ಯ ಸಚಿವರಾಗಿದ್ದಾರೆ.

    ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಉನ್ನತ ಮತ್ತು ತಾಂತ್ರಿಕ ಶಿಕ್ಷಣದ ನೂತನ ಸಚಿವರಾಗಿದ್ದು, ಸಂಸದೀಯ ವ್ಯವಹಾರಗಳನ್ನೂ ಅವರು ನಿಭಾಯಿಸಲಿದ್ದಾರೆ. ಇದನ್ನೂ ಓದಿ: ಕೇವಲ ತ್ರಿವರ್ಣ ಧ್ವಜ ಹಾರಿಸುವುದರಿಂದ ನಾವು ದೇಶಭಕ್ತರಾಗುವುದಿಲ್ಲ: ಉದ್ಧವ್ ಠಾಕ್ರೆ ಟಾಂಗ್

    ಏಕನಾಥ್ ಶಿಂಧೆ ಬಣದ ದೀಪಕ್ ಕೇಸರ್ಕರ್ ಅವರು ಶಿಕ್ಷಣ ಸಚಿವರಾಗಿದ್ದರೆ, ಅಬ್ದುಲ್ ಸತ್ತಾರ್ ಅವರಿಗೆ ಕೃಷಿ ಖಾತೆ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಹಸಿದ ಮಹಿಳೆಯ ಸಹಾಯಕ್ಕೆ ಬಂದ ಕೆಪಿಸಿಸಿ ಕಾರ್ಯದರ್ಶಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಹಸಿದ ಮಹಿಳೆಯ ಸಹಾಯಕ್ಕೆ ಬಂದ ಕೆಪಿಸಿಸಿ ಕಾರ್ಯದರ್ಶಿ

    ಶಿವಮೊಗ್ಗ: ಮನೆಯೇ ಮಂತ್ರಾಲಯ ಕಾರ್ಯಕ್ರಮದಲ್ಲಿ ಸಮಸ್ಯೆ ಹೇಳಿಕೊಂಡಿದ್ದ ಶಿವಮೊಗ್ಗದ ಹೊಸಮನೆ ಬಡಾವಣೆ ನಿವಾಸಿ ರೂಪ ಎಂಬುವರಿಗೆ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ ಸ್ಪಂದಿಸಿ ತಾವೇ ಸ್ವತಃ ಮಹಿಳೆ ಮನೆಗೆ ತೆರಳಿ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಶಿವಮೊಗ್ಗದ ಹೊಸಮನೆ ಬಡಾವಣೆ ನಿವಾಸಿ ರೂಪ ಎಂಬ ಮಹಿಳೆ ಲಾಕ್‍ಡೌನ್ ನಿಂದಾಗಿ ಕೆಲಸವಿಲ್ಲದ ಕಾರಣ ಊಟಕ್ಕೂ ಸಮಸ್ಯೆ ಆಗಿದೆ ಎಂದು ಕಾರ್ಯಕ್ರಮದ ಮೂಲಕ ಮನವಿ ಮಾಡಿಕೊಂಡಿದ್ದರು.

    ತಮ್ಮೂರಿನ ಮಹಿಳೆಯೊಬ್ಬರು ಊಟದ ಸಮಸ್ಯೆ ಎಂದು ಪಬ್ಲಿಕ್ ಟಿವಿಯಲ್ಲಿ ಮನವಿ ಮಾಡಿಕೊಂಡಿದ್ದನ್ನು ಗಮನಿಸಿದ ದೇವೇಂದ್ರಪ್ಪ ಅವರು ಮಹಿಳೆಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಕಿಟ್ ನೀಡಿ ಸಹಾಯ ಹಸ್ತ ಚಾಚಿದ್ದಾರೆ.

  • ಯಾವ ಜಿಲ್ಲೆಯಲ್ಲಿ ಎಷ್ಟು ಜನ ಸೋಂಕಿತರು? ಇಲ್ಲಿದೆ ಮಾಹಿತಿ

    ಯಾವ ಜಿಲ್ಲೆಯಲ್ಲಿ ಎಷ್ಟು ಜನ ಸೋಂಕಿತರು? ಇಲ್ಲಿದೆ ಮಾಹಿತಿ

    ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ ಕೊರೊನಾ ಸೋಂಕಿತ 6 ಜನ ರೋಗಿಗಳು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕ್ಕೆ ಇಂದು ಕರಾಳ ದಿನವಾಗಿ ಪರಿಣಮಿಸಿದೆ. ಏಕೆಂದರೆ ಬುಧವಾರ ಒಂದೇ ದಿನದಲ್ಲಿ ಇಬ್ಬರು ಕೊರೊನಾದಿಂದ ಮೃತಪಟ್ಟಿದ್ದು ದೃಢಪಟ್ಟಿದೆ. ಜೊತೆಗೆ 19 ಜನರಿಗೆ ಸೋಂಕು ತಗುಲಿದೆ.

    ಹೆಮ್ಮಾರಿ ಕೊರೊನಾ ವೈರಸ್ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದುಕೊಂಡಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ ಕಂಡಿದೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 80 ವರ್ಷದ ವೃದ್ಧೆ ಹಾಗೂ ಚಿಕ್ಕಬಳ್ಳಾಪುರ ನಿವಾಸಿ 65 ವರ್ಷದ ರೋಗಿ-250 ಏಪ್ರಿಲ್ 13ರಂದು ಬೆಂಗಳೂರಿನಲ್ಲಿ ಮೃತಪಟ್ಟಿದ್ದರು. ಅವರು ಕೊರೊನಾ ವೈರಸ್‍ನಿಂದಲೇ ಮೃತಪಟ್ಟಿದ್ದಾರೆ ಎನ್ನುವುದು ಇಂದು ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

    ಹಾಟ್‍ಸ್ಪಾಟ್ ಜಿಲ್ಲೆಗಳ ಪಟ್ಟಿ:
    * ಬೆಂಗಳೂರು ನಗರ – 71 ಜನರಿಗೆ ಸೋಂಕು (ಗುಣಮುಖ- 35, ಸಕ್ರಿಯ- 34, ಸಾವು- 02)
    * ಮೈಸೂರು – 58 ಜನರಿಗೆ ಸೋಂಕು (ಗುಣಮುಖ- 12, ಸಕ್ರಿಯ- 46)
    * ಬೆಳಗಾವಿ – 19 ಜನರಿಗೆ ಸೋಂಕು (ಸಕ್ರಿಯ- 18, ಸಾವು- 01)

    ಹಾಟ್‍ಸ್ಪಾಟ್ ಜಿಲ್ಲೆ ವಿತ್ ಕ್ಲಸ್ಟರ್:
    * ದಕ್ಷಿಣ ಕನ್ನಡ – 11 ಮಂದಿಗೆ ಕೊರೊನಾ (ಗುಣಮುಖ- 08, ಸಕ್ರಿಯ- 03)
    * ಬೀದರ್ – 13 ಮಂದಿಗೆ ಕೊರೊನಾ (ಸಕ್ರಿಯ- 13)
    * ಕಲಬುರಗಿ – 17 ಮಂದಿಗೆ ಕೊರೊನಾ (ಗುಣಮುಖ- 02, ಸಕ್ರಿಯ- 12 ಸಾವು- 03)
    * ಬಾಗಲಕೋಟೆ – 14 ಮಂದಿಗೆ ಕೊರೊನಾ (ಸಕ್ರಿಯ- 13, ಸಾವು- 01)
    * ಧಾರವಾಡ – 6 ಮಂದಿಗೆ ಕೊರೊನಾ (ಗುಣಮುಖ-01, ಸಕ್ರಿಯ- 05)

    ನಾನ್ ಹಾಟ್‍ಸ್ಪಾಟ್‍ಗಳು:
    * ಬಳ್ಳಾರಿ – 6 ಜನರಿಗೆ ಸೋಂಕು (ಸಕ್ರಿಯ- 06)
    * ಮಂಡ್ಯ – 8 ಜನರಿಗೆ ಸೋಂಕು (ಸಕ್ರಿಯ- 08)
    * ಬೆಂಗಳೂರು ಗ್ರಾಮಾಂತರ – 12 ಜನರಿಗೆ ಸೋಂಕು (ಸಕ್ರಿಯ- 12)
    * ದಾವಣಗೆರೆ- 2 ಜನರಿಗೆ ಸೋಂಕು (ಗುಣಮುಖ- 02)
    * ಉಡುಪಿ- 3 ಜನರಿಗೆ ಸೋಂಕು (ಗುಣಮುಖ- 02, ಸಕ್ರಿಯ- 01)
    * ಗದಗ- 01 ಜನರಿಗೆ ಸೋಂಕು (ಸಾವು- 01)

    * ತುಮಕೂರು- 2 ಜನರಿಗೆ ಸೋಂಕು (ಸಾವು- 01, ಸಕ್ರಿಯ- 01)
    * ವಿಜಯಪುರ – 10 ಜನರಿಗೆ ಸೋಂಕು (ಸಕ್ರಿಯ- 09, ಸಾವು- 01)
    * ಕೊಡಗು- 01 ಜನರಿಗೆ ಸೋಂಕು (ಗುಣಮುಖ, ಮತ್ತೆ ದಾಖಲು)
    * ಚಿಕ್ಕಬಳ್ಳಾಪುರ – 13 ಜನರಿಗೆ ಸೋಂಕು (ಗುಣಮುಖ- 8, ಸಕ್ರಿಯ- 03, ಸಾವು- 02)
    * ಉತ್ತರ ಕನ್ನಡ – 11 ಜನರಿಗೆ ಸೋಂಕು (ಗುಣಮುಖ- 08, ಸಕ್ರಿಯ- 03)

    ಸೋಂಕು ಇಲ್ಲದ ಹಸಿರು ವಲಯದ ಜಿಲ್ಲೆಗಳ ವ್ಯಾಪ್ತಿಗೆ ಶಿವಮೊಗ್ಗ, ಯಾದಗಿರಿ, ರಾಮನಗರ, ಕೋಲಾರ, ಚಿತ್ರದುರ್ಗ, ಕೊಪ್ಪಳ, ಹಾವೇರಿ, ಹಾಸನ, ರಾಯಚೂರು, ಚಾಮರಾಜನಗರ, ಚಿಕ್ಕಮಗಳೂರು ಬರುತ್ತವೆ.

  • ಕರ್ನಾಟಕದ ಕೊರೊನಾ ಹಾಟ್‍ಸ್ಪಾಟ್‍ಗಳ ಪಟ್ಟಿ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ

    ಕರ್ನಾಟಕದ ಕೊರೊನಾ ಹಾಟ್‍ಸ್ಪಾಟ್‍ಗಳ ಪಟ್ಟಿ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ

    – ಡೇಂಜರ್ ಜೋನ್‍ನಲ್ಲಿ ಬೆಂಗ್ಳೂರು ಸೇರಿದಂತೆ 8 ಜಿಲ್ಲೆಗಳು
    – ಹಸಿರು ವಲಯದಲ್ಲಿ ರಾಜ್ಯದ 11 ಜಿಲ್ಲೆಗಳು

    ನವದೆಹಲಿ: ಕೇಂದ್ರ ಸರ್ಕಾರವು ಜಿಲ್ಲೆಗಳಲ್ಲಿರುವ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಆಧಾರದ ಮೇಲೆ ವಲಯವಾರು ವಿಂಗಡೆ ಮಾಡಿದೆ. ರಾಜ್ಯದ 8 ಜಿಲ್ಲೆಗಳನ್ನು ರೆಡ್ ಜೋನ್‍ನಲ್ಲಿದ್ದರೆ, 11 ಜಿಲ್ಲೆಗಳು ಗ್ರೀನ್ ಜೋನ್‍ನಲ್ಲಿವೆ.

    ಹಾಟ್‍ಸ್ಪಾಟ್: ಈ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ 3 ಜಿಲ್ಲೆಗಳಿವೆ. ಬಿಡುಗಡೆಯಲ್ಲಿ ಬೆಂಗಳೂರು ನಗರ, ಮೈಸೂರು, ಬೆಳಗಾವಿ ಇದ್ದು, ಈ ಮೂರು ಜಿಲ್ಲೆಗಳಲ್ಲಿ ಕೊರೊನಾ ಭಾರೀ ಪ್ರಮಾಣದಲ್ಲಿದೆ. ಈ ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರ ಬರುವಂತಿಲ್ಲ.

    ಹಾಟ್‍ಸ್ಪಾಟ್ ವಿಥ್ ಕ್ಲಸ್ಟರ್ (ವಲಯ ಡೆಂಜರ್‌ ಸ್ಪಾಟ್‌): ಈ ಪಟ್ಟಿಯಲ್ಲಿ ಐದು ಜಿಲ್ಲೆಗಳಿವೆ. ಅವುಗಳೆಂದರೆ ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಬಾಗಲಕೋಟೆ, ಧಾರವಾಡ. ಈಗಾಗಲೇ ಈ ಭಾಗಗಳಲ್ಲಿ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, ಯಾವುದೇ ಕ್ಷಣದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

    ಆರೆಂಜ್ ಜೂನ್ (ನಾನ್ ಹಾಟ್‍ಸ್ಪಾಟ್): ಈ ಪಟ್ಟಿಯಲ್ಲಿ ರಾಜ್ಯದ 11 ಜಿಲ್ಲೆಗಳಿವೆ. ಅವುಗಳೆಂದರೆ ಬಳ್ಳಾರಿ, ಮಂಡ್ಯ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಉಡುಪಿ, ಗದಗ, ತುಮಕೂರು, ಕೊಡಗು, ವಿಜಯಪುರ, ಚಿಕ್ಕಬಳ್ಳಾಪುರ, ಉತ್ತರಕನ್ನಡ ಆಗಿವೆ.

    ಹಸಿರು ವಲಯ: ಈ ಪಟ್ಟಿಯಲ್ಲಿ ರಾಜ್ಯದ 11 ಜಿಲ್ಲೆಗಳಿವೆ. ಅವುಗಳೆಂದರೆ ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ಯಾದಗಿರಿ. ಈ ಭಾಗದಲ್ಲಿ ಯಾವುದೇ ಕೊರೊನಾ ಪ್ರಕರಣಗಳ ಕಂಡು ಬಂದಿಲ್ಲ. ಆದ್ರೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

    ಸದ್ಯದ ಮಾಹಿತಿಯನ್ನು ಪಡೆದು ಕೇಂದ್ರ ಸರ್ಕಾರ ವಲಯವಾರು ಪಟ್ಟಿ ಬಿಡುಗಡೆ ಮಾಡಿದೆ. ಜೊತೆಗೆ ಪ್ರತಿ ನಾಲ್ಕು ದಿನಗಳಿಗೊಮ್ಮೆ ಈ ಪಟ್ಟಿ ಪರಿಷ್ಕೃತವಾಗುತ್ತದೆ. ಏಪ್ರಿಲ್ 20ರ ಬಳಿಕ ಕೇಂದ್ರ ಸರ್ಕಾರ ಹೊಸ ಪಟ್ಟಿ ಬಿಡುಗಡೆ ಮಾಡಲಿದೆ. ಈ ನಾಲ್ಕು ದಿನಗಳಲ್ಲಿ ಒಂದು ವೇಳೆ ಕೊರೊನಾ ಸೋಂಕಿತರ ಸಂಖ್ಯೆ ಯಾವುದೇ ಜಿಲ್ಲೆ ಭಾರೀ ಏರಿಕೆ ಕಂಡ್ರೆ ಅದನ್ನು ಹಾಟ್‍ಸ್ಪಾಟ್ ಪಟ್ಟಿಗೆ ಸೇರಿಸಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.

  • ಮನಮೋಹನ್ ಸಿಂಗ್‍ಗೆ ನೀಡಿದ್ದ ಎಸ್‍ಪಿಜಿ ಭದ್ರತೆ ವಾಪಸ್

    ಮನಮೋಹನ್ ಸಿಂಗ್‍ಗೆ ನೀಡಿದ್ದ ಎಸ್‍ಪಿಜಿ ಭದ್ರತೆ ವಾಪಸ್

    ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಿದ್ದ ವಿಶೇಷ ಭದ್ರತಾ ಪಡೆ(ಎಸ್‍ಪಿಜಿ)ಯನ್ನು ಹಿಂಪಡೆಯಲಾಗಿದ್ದು, ಝಡ್ ಪ್ಲಸ್ ಭದ್ರತೆಯನ್ನು ಮುಂದುವರಿಸಲಾಗಿದೆ.

    ಎಲ್ಲ ಏಜೆನ್ಸಿಗಳ ಅಂಕಿ ಅಂಶಗಳನ್ನು ಪರಿಗಣಿಸಿ ನಂತರ ಮೌಲ್ಯಮಾಪನ ಮಾಡಿ, ಗೃಹ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದೆ. ಆಯ್ದ ಕೆಲವರಿಗೆ ಮಾತ್ರ ಒದಗಿಸಲಾಗಿರುವ ಎಸ್‍ಪಿಜಿ ಭದ್ರತೆಯ ವಾರ್ಷಿಕ ಬದಲಾವಣೆಯ ಭಾಗವಾಗಿ ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ಭದ್ರತೆ ಕುರಿತು ಮರು ಮೌಲ್ಯಮಾಪನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ದೇಶದ ಅತ್ಯಂತ ಪ್ರಮುಖ ರಾಜಕಾರಣಿಗಳು ಹಾಗೂ ಗಣ್ಯರಿಗೆ ಮಾತ್ರ ಈ ಭದ್ರತೆ ಒದಗಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಈ ನಾಲ್ವರಿಗೆ ಮಾತ್ರ ಎಸ್‍ಪಿಜಿ ಭದ್ರತೆ ಒದಗಿಸಲಾಗಿದೆ.

    ಭದ್ರತೆಯ ಬದಲಾವಣೆಯ ವಿಮರ್ಶೆಯೂ ಕಾಲಕಾಲಕ್ಕೆ ನಡೆಯುತ್ತದೆ. ಅಲ್ಲದೆ, ಭದ್ರತಾ ಏಜೆನ್ಸಿಗಳ ವೃತ್ತಿಪರ ಮೌಲ್ಯಮಾಪನವನ್ನು ಆಧರಿಸಿದೆ. ಹೀಗಾಗಿ ಯಾರಿಗೆ ಯಾವ ರೀತಿ ಭದ್ರತೆ ನೀಡಬೇಕೆಂದು ಭದ್ರತಾ ಏಜೆನ್ಸಿಗಳು ಚರ್ಚಿಸಿ ತೀರ್ಮಾನಿಸುತ್ತವೆ. ಡಾ.ಮನಮೋಹನ್ ಸಿಂಗ್ ಅವರಿಗೆ ಝಡ್ ಪ್ಲಸ್ ಭದ್ರತೆಯನ್ನು ಮುಂದುವರಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ಮನಮೋಹನ್ ಸಿಂಗ್ ಅವರು 2004 ರಿಂದ 2014ರ ವರೆಗೆ 10 ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿದ್ದರು. ವೈಯಕ್ತಿಕವಾಗಿ ನನ್ನ ಸುರಕ್ಷತೆ ಬಗ್ಗೆ ಕಾಳಜಿ ವಹಿಸುವುದಿಲ್ಲ. ಸರ್ಕಾರದ ನಿರ್ಧಾರವನ್ನು ಬೆಂಬಲಿಸುತ್ತೇನೆ ಎಂದು ತಿಳಿಸಿದ್ದಾರೆ.

    ಇದೇ ರೀತಿ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ ಮತ್ತು ವಿಪಿ ಸಿಂಗ್ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ. ಅನಾರೋಗ್ಯಕ್ಕೆ ತುತ್ತಾಗಿ ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸದಿದ್ದರೂ ಸಹ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮೃತಪಡುವರೆಗೂ ಎಸ್‍ಪಿಜಿ ಭದ್ರತೆ ನೀಡಲಾಗಿತ್ತು.

    ಎಸ್‍ಪಿಜಿಯಲ್ಲಿ 3 ಸಾವಿರಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. ಬೆದರಿಕೆ ಕರೆಗಳನ್ನು ಆಧರಿಸಿ ಪ್ರಧಾನಿ, ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬದವರಿಗೆ ಈ ಭದ್ರತೆಯನ್ನು ನೀಡಲಾಗುತ್ತದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ ನಂತರ ಎಸ್‍ಪಿಜಿಯನ್ನು 1985ರಲ್ಲಿ ಸ್ಥಾಪಿಸಲಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ನಂತರ 1991ರಲ್ಲಿ ಎಸ್‍ಪಿಜಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಮಾಜಿ ಪ್ರಧಾನಿಗಳು ಹಾಗೂ ಅವರ ಕುಟುಂಬಕ್ಕೆ 10 ವರ್ಷಗಳ ಕಾಲ ಭದ್ರತೆ ನೀಡುವಂತೆ ನಿಯಮ ರೂಪಿಸಲಾಗಿದೆ.