Tag: Home minister

  • ರಮಾನಾಥ ರೈಗೆ ಸಿಗಬೇಕಿದ್ದ ಗೃಹ ಇಲಾಖೆ ಕೊನೆಕ್ಷಣದಲ್ಲಿ ರಾಮಲಿಂಗಾ ರೆಡ್ಡಿಗೆ ಸಿಕ್ಕಿದ್ದು ಹೇಗೆ?

    ರಮಾನಾಥ ರೈಗೆ ಸಿಗಬೇಕಿದ್ದ ಗೃಹ ಇಲಾಖೆ ಕೊನೆಕ್ಷಣದಲ್ಲಿ ರಾಮಲಿಂಗಾ ರೆಡ್ಡಿಗೆ ಸಿಕ್ಕಿದ್ದು ಹೇಗೆ?

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಾಮನಾಥ ರೈ ಅವರಿಗೆ ಗೃಹ ಇಲಾಖೆ ಸಿಗುತ್ತಿದ್ದರೂ ಕೊನೆಯ ಕ್ಷಣದಲ್ಲಿ ರಾಮಲಿಂಗಾ ರೆಡ್ಡಿ ಅವರಿಗೆ ಸಿಎಂ ಈ ಹುದ್ದೆಯ ಜವಾಬ್ದಾರಿಯನ್ನು ನೀಡಿದ್ದಾರೆ.

    ರಮಾನಾಥ ರೈಗೆ ಗೃಹಖಾತೆ ನೀಡಿದರೆ ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ಎಚ್ಚರಿಸಿತ್ತು. ಬಿಜೆಪಿಯ ಬೆದರಿಕೆ ಬಗ್ಗಿ ಸರ್ಕಾರ ಕೊನೇ ಕ್ಷಣದಲ್ಲಿ ರಾಮಲಿಂಗಾರೆಡ್ಡಿ ಅವರಿಗೆ ಗೃಹಖಾತೆ ಜವಾಬ್ದಾರಿ ನೀಡಿದ್ಯಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಇಂದು ಏನಾಯ್ತು?
    ಸ್ವತಃ ರಮಾನಾಥ ರೈ ಗೃಹಖಾತೆ ಬೇಡ ಎಂದಿದ್ದರಂತೆ. ನಾನು ಗೃಹ ಸಚಿವನಾದರೆ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಕರಾವಳಿಯ ಅವಳಿ ಜಿಲ್ಲೆಯಲ್ಲಿ ಮತ್ತಷ್ಟು ಕೊಮು ಗಲಭೆಗೆ ಪ್ರಚೋದನೆ ನೀಡಬಹುದು. ಹೀಗಾಗಿ, ಎರಡು ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವುದೇ ಕೆಲಸವಾಗುತ್ತದೆ ಎಂದು ಸಿಎಂ ಬಳಿ ರಮಾನಾಥ್ ರೈ ಹೇಳಿಕೊಂಡಿದ್ದರಂತೆ. ಹೀಗಾಗಿ ಮಧ್ಯಾಹ್ನವೇ ರಾಮಲಿಂಗಾರೆಡ್ಡಿ ಜೊತೆ ಸಿಎಂ ಒಂದು ಸುತ್ತಿನ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ರಮಾನಾಥ ರೈಗೆ ಗೃಹ ಖಾತೆ: ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದು ಹೀಗೆ

  • ಚಿಕ್ಕಮಗಳೂರು: ಕಾಂಗ್ರೆಸ್‍ನಲ್ಲಿ ಭಿನ್ನಮತ, 6 ಪದಾಧಿಕಾರಿಗಳ ರಾಜೀನಾಮೆ

    ಚಿಕ್ಕಮಗಳೂರು: ಕಾಂಗ್ರೆಸ್‍ನಲ್ಲಿ ಭಿನ್ನಮತ, 6 ಪದಾಧಿಕಾರಿಗಳ ರಾಜೀನಾಮೆ

    ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವರ ಉಸ್ತುವಾರಿ ಜಿಲ್ಲೆಯ ಕಾಂಗ್ರೆಸ್ ನಲ್ಲಿ ಭಿನ್ನಮತ ಎದ್ದಿದ್ದು, 6 ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ.

    ಮಾಜಿ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಧೋರಣೆಯನ್ನ ವಿರೋಧಿಸಿ ಲೋಕಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಕಾರ್ತಿಕ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಕೌಶಿಕ್, ಪ್ರಧಾನ ಕಾರ್ಯದರ್ಶಿ ಸಂದೀಪ್ ಸೇರಿ ಆರು ಮಂದಿ ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

    ಗೃಹ ಸಚಿವರಿಗೆ ಗೊತ್ತಿಲ್ಲದ್ದಂತೆ ಸಿಡಿಎ ಅಧ್ಯಕ್ಷ ಸ್ಥಾನವನ್ನು ಗಾಯತ್ರಿ ಶಾಂತೇಗೌಡ ಸಿಎಂ ಬಳಿ ಮಾಡಿಸಿಕೊಂಡು ಬಂದಿದ್ದಾರೆ. ಅಲ್ಲದೆ ನಗರಸಭೆಯ ನಾಲ್ವರು ನಾಮನಿರ್ದೇಶಕ ಸ್ಥಾನಕ್ಕೂ ತಮ್ಮ ಹಿಂಬಾಲಕರನ್ನೇ ನೇಮಿಸಿದ್ದಾರೆ. ಉಸ್ತುವಾರಿ ಸಚಿವರನ್ನೂ ಮೀರಿ ತಮ್ಮಿಚ್ಚೆಯಂತೆ ಗಾಯತ್ರಿ ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿ ರಾಜೀನಾಮೆ ನೀಡಿದ್ದಾರೆ.