Tag: home minister parameshwar

  • ಪರಮೇಶ್ವರ್‌ಗೆ ಮುಜುಗರ: ವಿಧಾನಸೌಧದಲ್ಲಿ ಮಾಧ್ಯಮಗಳ ಮೇಲೆ ಗರಂ

    ಪರಮೇಶ್ವರ್‌ಗೆ ಮುಜುಗರ: ವಿಧಾನಸೌಧದಲ್ಲಿ ಮಾಧ್ಯಮಗಳ ಮೇಲೆ ಗರಂ

    ಬೆಂಗಳೂರು: ದರ್ಶನ್ ವಿಚಾರದಲ್ಲಿ ಗೃಹ ಇಲಾಖೆಗೆ ಮತ್ತೆ ಮತ್ತೆ ಮುಖಭಂಗ ಆಗುತ್ತಿರುವ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್ (Home Minister Parameshwar) ಮುಜುಗರಕ್ಕೆ ಒಳಗಾಗಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ದರ್ಶನ್ (Actor Darshan) ಐಷಾರಾಮಿ ರಾಜಾತಿಥ್ಯ ಪ್ರಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂ (CM) ಸೂಚನೆ ನೀಡಿರುವ ವಿಚಾರವಾಗಿ ಪ್ರಶ್ನೆ ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು. ಈ ರೀತಿ ಬಂದು ಪ್ರಶ್ನೆ ಕೇಳಿದರೆ ನಾನು ಮಾತಾಡಲ್ಲ ಎಂದು ಗರಂ ಆಗಿ ಉತ್ತರಿಸಿದ್ದಾರೆ.ಇದನ್ನೂ ಓದಿ: ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್‌ಗೆ ರಾಜಾತಿಥ್ಯ ನೀಡಿದ ಪ್ರಕರಣದಲ್ಲಿ ಲೋಪ ಆಗಿರೋದು ಸತ್ಯ: ರಾಮಲಿಂಗಾರೆಡ್ಡಿ

    ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ (ADGP Alok Mohan), ಗೃಹ ಇಲಾಖೆ ಕಾರ್ಯದರ್ಶಿ ಉಮಾಶಂಕರ್ ಜೊತೆಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಸಭೆ ನಡೆಸಿದ್ದಾರೆ. ಜೈಲಿನಲ್ಲಿರುವ ಲೋಪದೋಷಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಚರ್ಚೆ ನಡೆಸಿದ್ದಾರೆ.

    ಚುಟುಕು ಸಭೆ ನಡೆಸಿದ ಬಳಿಕ ವಿಧಾನಸೌಧದಿಂದ ಹೊರಟ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ನೇರವಾಗಿ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದರು.ಇದನ್ನೂ ಓದಿ: ಉಪ್ಪು ತಿಂದವರು ನೀರು ಕುಡಿಯಲೇಬೇಕು : ದರ್ಶನ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ

  • ಮಂಡ್ಯ ಎಸ್‍ಪಿಗೆ ಸಿಎಂ ಜೋರು ಮಾಡಿದ್ದು ಸರಿ: ಪರಮೇಶ್ವರ್ ಸಮರ್ಥನೆ

    ಮಂಡ್ಯ ಎಸ್‍ಪಿಗೆ ಸಿಎಂ ಜೋರು ಮಾಡಿದ್ದು ಸರಿ: ಪರಮೇಶ್ವರ್ ಸಮರ್ಥನೆ

    ಚಿಕ್ಕಮಗಳೂರು: ಮಂಡ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿದ ಹಿನ್ನೆಲೆಯಲ್ಲಿ ಸಿಎಂ ಎಸ್‍ಪಿ ಸುಧೀರ್‍ಕುಮಾರ್ ರೆಡ್ಡಿ ಅವರಿಗೆ ಜೋರು ಮಾಡಿದ್ದು ಸರಿ ಇದೆ ಅಂತಾ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಕಪ್ಪು ಬಾವುಟ ತೋರಿಸುವ ಬದಲು ಕಲ್ಲು ಎಸೆದಿದ್ದರೆ ಏನಾಗ್ತಿತ್ತು? ಹೀಗಾಗಿ ಸಿಎಂ ಎಸ್‍ಪಿಗೆ ಜೋರು ಮಾಡಿದ್ದು ಸರಿ. ಈ ವಿಚಾರದ ಬಗ್ಗೆ ಈಗಾಗಲೇ ಮಂಡ್ಯ ಎಸ್‍ಪಿ ಬಳಿ ಮಾತನಾಡಿದ್ದೇನೆ. ಅಲ್ಲದೇ ಘಟನೆ ನಡೆದ ಸಂದರ್ಭ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಂತಾ ಹೇಳಿದ್ರು.

    ಇದನ್ನೂ ಓದಿ: ನಿನಗ್ಯಾರು ಐಪಿಎಸ್ ಕೊಟ್ಟಿದ್ದು?- ಮಂಡ್ಯ ಎಸ್‍ಪಿಗೆ ಸಿಎಂ ಸಾರ್ವಜನಿಕ ಬೈಗುಳ

    ಶೆಟ್ಟರ್ ಹೇಳಿಕೆಗೆ ತಿರುಗೇಟು: ಉಪಚುನಾವಣೆಯಲ್ಲಿ ಗೆದ್ದು ಐಸಿಯುನಲ್ಲಿದ್ದ ಕಾಂಗ್ರೆಸ್ ಸರ್ಕಾರ ಚೇತರಿಸಿಕೊಂಡಿದೆ ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ ಪರಂ, ಜಗದೀಶ್ ಶೆಟ್ಟರ್ ಬಾಯಿಗೆ ಬಂದಂತೆ ಮಾತನಾಡಬಾರದು. 2013ರಲ್ಲಿ ಬಿಜೆಪಿ ಸರ್ಕಾರ ಅಡಳಿತದಲ್ಲಿತ್ತು. 20 ಉಪಚುನಾವಣೆಗಳು ನಡೆದವು. ಅವರು ಸಹ ಹಣ ಹಾಗೂ ಹೆಂಡದ ಹೊಳೆ ಹರಿಸಿದ್ದಾರೆ ಅಂತ ನಾವು ಹೇಳಬೇಕಾಗುತ್ತದೆ. ಇದು ಮತದಾರರು ನೀಡಿರುವ ತೀರ್ಪು. ಸರ್ಕಾರ ಹಾಗೂ ಸಿಎಂ ಅಭಿವೃದ್ಧಿ ಕಾರ್ಯಗಳೇ ನಮ್ಮ ಗೆಲುವಿಗೆ ಕಾರಣ ಅಂದ್ರು.

    ಉಪಚುನಾವಣೆ ಫಲಿತಾಂಶ 2018ರ ಸೆಮಿಫೈನಲ್ ಎಂದು ಯಡಿಯೂರಪ್ಪ ಹೇಳಿದ್ರು. ಆದರೇ ಅವರು ಸೆಮಿಫೈನಲ್‍ನಲ್ಲಿ ಸೋತಿದಾರೆ. ಸೆಮಿಫೈನಲ್‍ನಲ್ಲಿ ಸೋತವರು ಎಲ್ಲಿಗೆ ಹೋಗುತ್ತಾರೆ? ಆದರೂ 150 ಸೀಟ್ ಗೆಲ್ಲುತ್ತಾರೆ ಅಂತ ಹೇಳ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಅಂತಾ ಪರಂ ವಿಶ್ವಾಸ ವ್ಯಕ್ತಪಡಿಸಿದ್ರು.

    https://www.youtube.com/watch?v=EPh2F90UOc8