Tag: Home minister

  • ಎಲ್.ಕೆ ಅಡ್ವಾಣಿ ಹಿಂದಿಕ್ಕಿ ದೀರ್ಘಾವಧಿಯ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಅಮಿತ್ ಶಾ

    ಎಲ್.ಕೆ ಅಡ್ವಾಣಿ ಹಿಂದಿಕ್ಕಿ ದೀರ್ಘಾವಧಿಯ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಅಮಿತ್ ಶಾ

    -ಮೋದಿ ದಾಖಲೆ ಬಳಿಕ ಹೊಸ ದಾಖಲೆ ಬರೆದ ಚಾಣಕ್ಯ

    ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಲಾಲ್ ಕೃಷ್ಣ ಅಡ್ವಾಣಿ (LK Advani) ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

    ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಅಮಿತ್ ಶಾ ಅವರು 2019ರ ಮೇ 30ರಿಂದ 2025ರ ಆ.4ರವರೆಗೆ ಒಟ್ಟು 2,258 ದಿನಗಳನ್ನು (6 ವರ್ಷ 65 ದಿನ) ಪೂರೈಸಿದ್ದಾರೆ. ಇದಕ್ಕೂ ಮುನ್ನ ಲಾಲ್ ಕೃಷ್ಣ ಅಡ್ವಾಣಿ ಅವರು 1998ರ ಮಾ.19ರಿಂದ 2004ರ ಮೇ.22ರವರೆಗೆ ಸೇವೆ ಸಲ್ಲಿಸಿ ಒಟ್ಟು 2,256 ದಿನಗಳ (6 ವರ್ಷ 64 ದಿನ) ದಾಖಲೆ ಬರೆದಿದ್ದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸಂಸದೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಗೃಹ ಸಚಿವರೆಂದು ಅಮಿತ್ ಶಾ ಅವರನ್ನು ಪ್ರಶಂಸಿಸಿದರು.ಇದನ್ನೂ ಓದಿ: ಟ್ರಂಪ್ ಸುಂಕ ಬೆದರಿಕೆ ನಡ್ವೆ ಅಮೆರಿಕಕ್ಕೆ ತಿವಿದ ಇಂಡಿಯನ್ ಆರ್ಮಿ – ಪಾಕ್‌ಗೆ ಶಸ್ತ್ರಾಸ್ತ್ರ ಪೂರೈಕೆ ಬಗ್ಗೆ 1971ರ ಪೇಪರ್ ಕಟಿಂಗ್‌ ಪೋಸ್ಟ್

    ಅಮಿತ್ ಶಾ ಅವರು ತಮ್ಮ ಅಧಿಕಾರವಧಿಯಲ್ಲಿ ಹತ್ತಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
    ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿ ರದ್ದು: 2019ರ ಆಗಸ್ಟ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಆರ್ಟಿಕಲ್ 370 ರದ್ದತಿಯ ಮೂಲಕ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಡಿಸಲಾಯಿತು. ಈ ಕ್ರಮವು ದೇಶದ ಏಕೀಕರಣಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು ಪರಿಗಣಿಸಲಾಗಿದೆ.

    ಸಿಎಎ ಮತ್ತು ಎನ್‌ಆರ್‌ಸಿ: ನಾಗರಿಕತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸುವ ಮೂಲಕ ನೆರೆಯ ರಾಷ್ಟ್ರಗಳಿಂದ ಬಂದಿರುವ ಶರಣಾರ್ಥಿಗಳಿಗೆ ನಾಗರಿಕತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಕೂಡ ಚರ್ಚೆಯ ಕೇಂದ್ರವಾಗಿತ್ತು.

    ಕಾನೂನು ಸುಧಾರಣೆಗಳು: ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಪಿಸಿ) ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್‌ಗೆ ಬದಲಾವಣೆ ತಂದು ಹೊಸ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ರಕ್ಷಣೆ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಪರಿಚಯಿಸಲಾಯಿತು.

    ಆಂತರಿಕ ಭದ್ರತೆ: ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಮತ್ತು ಇತರ ಭದ್ರತಾ ಸಂಸ್ಥೆಗಳನ್ನು ಬಲಪಡಿಸಲಾಗಿದೆ.

    ಕೋವಿಡ್-19 ನಿರ್ವಹಣೆ: ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಆಂತರಿಕ ಭದ್ರತೆಯ ಜೊತೆಗೆ ಲಾಕ್‌ಡೌನ್‌ನಂತಹ ಕಠಿಣ ನಿರ್ಧಾರಗಳನ್ನು ಕೈಗೊಂಡು ದೇಶವನ್ನು ಸುರಕ್ಷಿತವಾಗಿಡಲು ಕೊಡುಗೆ ನೀಡಿದ್ದಾರೆ.ಇದನ್ನೂ ಓದಿ: `ಕ್ಯಾರಮ್ ಬ್ಯಾಡ್ಮಿಂಟನ್ ಆಡುವಾಗ ಸೆಕೆಂಡ್‍ನಲ್ಲಿ ಸೋಲಿಸುತ್ತಿದ್ದರು’- ಸುಮಲತಾ ನೆನಪು ಹಂಚಿಕೊಂಡಿದ್ದು ಯಾರ ಬಗ್ಗೆ?

  • SIMI ಸಂಘಟನೆ ಮೇಲಿನ ನಿಷೇಧ ಮತ್ತೆ 5 ವರ್ಷ ವಿಸ್ತರಿಸಿದ ಕೇಂದ್ರ

    SIMI ಸಂಘಟನೆ ಮೇಲಿನ ನಿಷೇಧ ಮತ್ತೆ 5 ವರ್ಷ ವಿಸ್ತರಿಸಿದ ಕೇಂದ್ರ

    ನವದೆಹಲಿ: ಭಯೋತ್ಪಾದನೆಯನ್ನು ಉತ್ತೇಜಿಸುವ ಮತ್ತು ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಭಯೋತ್ಪಾದಕ ಗುಂಪು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ಮೇಲೆ ವಿಧಿಸಲಾದ ನಿಷೇಧವನ್ನು ಕೇಂದ್ರ ಸರ್ಕಾರ (Central Govt) 5 ವರ್ಷಗಳವರೆಗೆ ವಿಸ್ತರಿಸಿದೆ.

    ಈ ಸಂಬಂಧ ಗೃಹ ಸಚಿವ ಅಮಿತ್‌ ಶಾ ತಮ್ಮ ಎಕ್ಸ್‌ನಲ್ಲಿ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿಯಲ್ಲಿ SIMIಯನ್ನು ಮತ್ತೆ ಮುಂದಿನ 5 ವರ್ಷಗಳ ಅವಧಿಗೆ ‘ಕಾನೂನುಬಾಹಿರ ಸಂಘʼ ಎಂದು ಘೋಷಿಸಲಾಗಿದೆ. ಭಾರತದ ಸಾರ್ವಭೌಮತೆ, ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆ ತರಲು ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ, ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಲ್ಲಿ ಸಿಮಿ ತೊಡಗಿಸಿಕೊಂಡಿದೆ ಎಂದು ಅಮಿತ್ ಶಾ‌ (Amitshah) ತಿಳಿಸಿದ್ದಾರೆ.

    ಗೃಹಸಚಿವಾಲಯದ ಅಧಿಸೂಚನೆಯಲ್ಲಿ ಏನಿದೆ?: SIMI ತನ್ನ ವಿಧ್ವಂಸಕ ಚಟುವಟಿಕೆಗಳನ್ನು ಮುಂದುವರಿಸಿದೆ ಮತ್ತು ಇನ್ನೂ ತಲೆಮರೆಸಿಕೊಂಡಿರುವ ತನ್ನ ಕಾರ್ಯಕರ್ತರನ್ನು ಪುನಃ ಸಂಘಟಿಸುವ ಪ್ರಯತ್ನ ಮಾಡುತ್ತಿದೆ. ಈ ಗುಂಪು ಕೋಮುವಾದ, ಸೌಹಾರ್ದತೆಯನ್ನು ಸೃಷ್ಟಿಸುವ ಮೂಲಕ ಜನರ ಮನಸ್ಸನ್ನು ಕದಡಿಸುವುದರ ಜೊತೆಗೆ ದೇಶ ವಿರೋಧಿ ಭಾವನೆಗಳನ್ನು ಹರಡುವ ಕೆಲಸ ಮಾಡುತ್ತಿದೆ. ಈ ಮೂಲಕ ಮತ್ತು ಉಗ್ರವಾದವನ್ನು ಬೆಂಬಲಿಸುವ ಮೂಲಕ ದೇಶದ ಸಮಗ್ರತೆ ಮತ್ತು ಭದ್ರತೆಗೆ ಹಾನಿಯುಂಟು ಮಾಡುವ ಚಟುವಟಿಕೆಗಳನ್ನು ಕೈಗೊಳ್ಳುತ್ತಿವೆ. ಹೀಗಾಗಿ ಸಿಮಿಯ ಮೇಲಿನ ನಿಷೇಧವನ್ನು ಮತ್ತೆ 5 ವರ್ಷ ಮುಂದುವರಿದಲಾಗುವುದು ಎಂದು ತಿಳಿಸಲಾಗಿದೆ.

    2001 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಿಮಿಯನ್ನು ಮೊದಲು ನಿಷೇಧಿಸಲಾಯಿತು. ಅಂದಿನಿಂದ ಪ್ರತಿ 5 ವರ್ಷಗಳಿಗೊಮ್ಮೆ ನಿಷೇಧವನ್ನು ವಿಸ್ತರಿಸುತ್ತಾ ಬರಲಾಗಿದೆ. 2014ರ ಫೆಬ್ರವರಿ 1ರಂದು ಸಿಮಿ ಸಂಘಟನೆಯನ್ನು ನಿಷೇಧಿಸಲಾಯಿತು. ನಂತರ ಈ ನಿಷೇಧವನ್ನು 2019ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಈ ಸಂಘಟನೆಯನ್ನು ಮತ್ತೆ ಐದು ವರ್ಷಗಳ ಕಾಲ ಯುಎಪಿಎ ಅಡಿಯಲ್ಲಿ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ.

    ಸಿಮಿಯ ಗುರಿಯೇನು..?: ಭಾರತವನ್ನು ಇಸ್ಲಾಮಿಕ್ ಭೂಮಿಯಾಗಿ ಪರಿವರ್ತಿಸುವ ಮೂಲಕ ವಿಮೋಚನೆ ನೀಡುವುದು. ದಾರ್-ಉಲ್-ಇಸ್ಲಾಂ ಅಂದರೆ ಬಲವಂತವಾಗಿ ಅಥವಾ ಹಿಂಸೆಯ ಮೂಲಕ ಇಸ್ಲಾಂಗೆ ಮತಾಂತರಿಸುವುದಾಗಿದೆ.

  • ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಹೋದರಿ ನಿಧನ

    ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಹೋದರಿ ನಿಧನ

    ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amitshah) ಅವರ ಹಿರಿಯ ಸಹೋದರಿ ರಾಜೇಶ್ವರಿಬೆನ್ ಶಾ (Rajeshwariben Shah) ಇಂದು ನಿಧನರಾಗಿದ್ದಾರೆ.

    ರಾಜೇಶ್ವರಿಬೆನ್ ಅವರಿಗೆ ಸುಮಾರು 60 ವರ್ಷ ವಯಸ್ಸಾಗಿತ್ತು. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ಸಹೋದರಿಯ ನಿಧನದ ಹಿನ್ನೆಲೆಯಲ್ಲಿ ಹೇಗ ಸಚಿವರು ಇಂದು ಗುಜರಾತ್‌ನಲ್ಲಿ (Gujrat) ನಡೆಯಬೇಕಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಕೆಲ ದಿನಗಳಿಂದ ರಾಜೇಶ್ವರಿಬೆನ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಅವರು ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮುಂಜಾನೆ ಅವರು ಕೊನೆಯುಸಿರೆಳೆದರು ಎಂದು ಬಿಜೆಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಸಹೋದರಿಯ ರಾಜೇಶ್ವರಿಬೆನ್ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ ಅಹಮದಾಬಾದ್‌ನಲ್ಲಿರುವ ಅವರ ನಿವಾಸಕ್ಕೆ ತರಲಾಗಿತ್ತು. ನಂತರ ಥಾಲ್ತೇಜ್ ಚಿತಾಗಾರದಲ್ಲಿ ಅವರ ಅಂತಿಮ ಸಂಸ್ಕಾರ ನಡೆದಿದೆ. ಇದನ್ನೂ ಓದಿ: 60 ವರ್ಷಗಳಿಂದ ಮಾಡಿದ ಅನ್ಯಾಯಕ್ಕೆ ಕಾಂಗ್ರೆಸ್ಸಿಗರು ಈಗ ನ್ಯಾಯ ಕೇಳಲು ಹೊರಟಿದ್ದಾರೆ: ಮುನಿಸ್ವಾಮಿ ವ್ಯಂಗ್ಯ

    ಅಹಮದಾಬಾದ್‌ಗೆ ಬಂದಿದ್ದರು ಗೃಹ ಸಚಿವ: ಅಮಿತ್‌ ಶಾ ಗಾಂಧಿನಗರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಬಿಜೆಪಿ ಬೆಂಬಲಿಗರೊಂದಿಗೆ ಮಕರ ಸಂಕ್ರಾಂತಿಯನ್ನು ಆಚರಿಸಲು ಅವರು ಭಾನುವಾರದಿಂದ ಅಹಮದಾಬಾದ್‌ನಲ್ಲಿದ್ದರು. ಇಂದು ಬನಸ್ಕಾಂತ ಮತ್ತು ಗಾಂಧಿನಗರ ಜಿಲ್ಲೆಗಳಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಬನಸ್ಕಾಂತದ ದೇವದರ್ ಗ್ರಾಮದ ಬನಸ್ ಡೈರಿ ಉದ್ಘಾಟನೆ ಮಾಡಬೇಕಿತ್ತು. ಬಳಿಕ ಮಧ್ಯಾಹ್ನ ಅವರು ಗಾಂಧಿನಗರದ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವವರಿದ್ದರು. ಈ ಎರಡೂ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.

    ಉತ್ತರಾಯಣ ಹಬ್ಬದ ನಿಮಿತ್ತ ಗೃಹ ಸಚಿವ ಶಾ ಭಾನುವಾರ ಭಗವಾನ್ ಜಗನ್ನಾಥ ದೇವಸ್ಥಾನಕ್ಕೆ ಆಗಮಿಸಿದ್ದರು. ಅಲ್ಲಿ ಕುಟುಂಬ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದರು. ಇದಾದ ಬಳಿಕ ವೇಜಲಪುರದಲ್ಲೂ ಗಾಳಿಪಟ ಹಾರಿಸಿದರು. ಸೋಮವಾರ ಅಹಮದಾಬಾದ್ ಮತ್ತು ಗಾಂಧಿನಗರದ ಉತ್ತರಾಯಣ ಆಚರಣೆಯಲ್ಲಿ ಭಾಗವಹಿಸುವ ಯೋಜನೆ ಇತ್ತು.

  • ಸಿಲಿಕಾನ್ ಸಿಟಿ ಪಬ್, ಹುಕ್ಕಾಬಾರ್‌ಗಳಲ್ಲಿ ಅಪ್ರಾಪ್ತರ ಮೋಜು-ಮಸ್ತಿ; ಗೃಹಸಚಿವರಿಗೆ ಖಾಸಗಿ ಶಾಲೆಗಳ ಒಕ್ಕೂಟ ಪತ್ರ

    ಸಿಲಿಕಾನ್ ಸಿಟಿ ಪಬ್, ಹುಕ್ಕಾಬಾರ್‌ಗಳಲ್ಲಿ ಅಪ್ರಾಪ್ತರ ಮೋಜು-ಮಸ್ತಿ; ಗೃಹಸಚಿವರಿಗೆ ಖಾಸಗಿ ಶಾಲೆಗಳ ಒಕ್ಕೂಟ ಪತ್ರ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ಪಬ್, ಹುಕ್ಕಾಬಾರ್‌ಗಳಲ್ಲಿ ಅಪ್ರಾಪ್ತರ ಮೋಜು-ಮಸ್ತಿ ಹೆಚ್ಚುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳ ದುಶ್ಚಟಗಳಿಗೆ ಕಡಿವಾಣ ಹಾಕಿ ಎಂದು ಖಾಸಗಿ ಶಾಲೆಗಳ ಒಕ್ಕೂಟ (Union of Private Schools) ಗೃಹಸಚಿವರಿಗೆ (Home Minister) ಪತ್ರ ಬರೆದಿದೆ.

    ನಗರದಲ್ಲಿ ವಿದ್ಯಾರ್ಥಿಗಳು (Students) ಶಾಲಾ-ಕಾಲೇಜಿಗೆ ಚಕ್ಕರ್ ಹಾಕಿ ಪಬ್ (Pub) , ಬಾರ್ ಹಾಗೂ ಹುಕ್ಕಾಬಾರ್‌ಗಳಿಗೆ ಹಾಜರಾಗುತ್ತಿರುವ ಸಂಖ್ಯೆ ಹೆಚ್ಚಳವಾಗಿದೆ. ಅಪ್ರಾಪ್ತರಿಗೆ (Minors) ಪ್ರವೇಶ ಕೊಡುವ ಪಬ್, ಹುಕ್ಕಾಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕ್ಯಾಮ್ಸ್ ಸಂಘಟನೆಯಿಂದ ಗೃಹಸಚಿವರಿಗೆ ಪತ್ರ (Letter) ಬರೆಯಲಾಗಿದೆ. ಇದನ್ನೂ ಓದಿ: ಸಂಸದ ಸ್ಥಾನದಿಂದ ಪುತ್ರ ಅನರ್ಹತೆ ಬೆನ್ನಲ್ಲೇ ಶಾಸಕ ಹೆಚ್‌.ಡಿ.ರೇವಣ್ಣಗೆ ಹೈಕೋರ್ಟ್‌ ಸಮನ್ಸ್‌

    ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಪಬ್, ರೆಸ್ಟ್ರೋ ಬಾರ್, ಹುಕ್ಕಾ ಬಾರ್‌ಗಳು ಮದ್ಯಪಾನ, ಧೂಮಪಾನ ಸೇವಿಸುವ ತಾಣಗಳಾಗಿವೆ ಎಂದು ಕೆಲ ಶಿಕ್ಷಣ ಸಂಸ್ಥೆಗಳಿಂದ ಹಾಗೂ ಪೋಷಕರಿಂದ ಕ್ಯಾಮ್ಸ್‌ಗೆ ನಿರಂತರ ದೂರು ಬರುತ್ತಿತ್ತು. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್‌ ಇನ್ನೂ ಬಚ್ಚ – ಮುತಾಲಿಕ್ ಕಿಡಿ

    ಈ ಹಿನ್ನೆಲೆ ಖಾಸಗಿ ಶಾಲೆಗಳ ಒಕ್ಕೂಟ ಗೃಹಸಚಿವರಿಗೆ ಪತ್ರ ಬರೆದಿದ್ದು, ಅಪ್ರಾಪ್ತ ವಯಸ್ಸಿನವರಿಗೆ ಮದ್ಯಪಾನ, ಧೂಮಪಾನ ಮಾರಾಟ ಮಾಡುವುದು ನಿಷೇಧ. ಹೀಗಿದ್ದರೂ ನಗರದ ಪಬ್, ಬಾರ್‌ಗಳಿಗೆ ಮಕ್ಕಳಿಗೆ ಎಂಟ್ರಿ ಸಿಗುತ್ತಿದೆ. ಈ ಹಿನ್ನೆಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ವಿರುದ್ಧ ಆಕ್ರೋಶ; ಆನ್‌ಲೈನ್ ಮೂಲಕ ದೂರು ದಾಖಲಿಸಲು ಮುಂದಾದ ಹಿಂದೂ ಸಂಘಟನೆಗಳು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಸ್ಲಿಂ ಮೀಸಲಾತಿ ರದ್ದು ಪ್ರಕರಣ – ರಾಜಕೀಯ ಹೇಳಿಕೆಗಳಿಗೆ ಸುಪ್ರೀಂ ಕಿಡಿ

    – ವಿಚಾರಣೆ ಜುಲೈ 25ಕ್ಕೆ ಮುಂದೂಡಿಕೆ

    ನವದೆಹಲಿ: ಮುಸ್ಲಿಮರಿಗೆ ನೀಡಲಾಗಿದ್ದ 4% ಒಬಿಸಿ (OBC) ಮೀಸಲಾತಿ (Reservation) ರದ್ದು ಪಡಿಸಿರುವ ಸರ್ಕಾರದ ಆದೇಶದ ಕುರಿತು ರಾಜಕೀಯ ಹೇಳಿಕೆಗಳನ್ನು ಸುಪ್ರೀಂ ಕೋರ್ಟ್ (Supreme Court) ಗಂಭೀರವಾಗಿ ಪರಿಗಣಿಸಿದೆ. ನ್ಯಾಯಾಲಯದ ವಿಚಾರಣೆಯಲ್ಲಿರುವ ಪ್ರಕರಣ ಕುರಿತು ಮಾತನಾಡುವಾಗ ಜಾಗೃತೆವಹಿಸಬೇಕು ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

    ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿದ ಕರ್ನಾಟಕ ಸರ್ಕಾರ (Karnataka Government)  ಆದೇಶವನ್ನು ನ್ಯಾ. ಕೆಎಂ ಜೋಸೆಫ್‌, ಬಿವಿ ನಾಗರತ್ನ, ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.

    ಈ ವೇಳೆ ನ್ಯಾಯಾಂಗದ ವಿಷಯಗಳ ಬಗ್ಗೆ ಸಾರ್ವಜನಿಕ ಹೇಳಿಕೆಗಳನ್ನು ನೀಡಬಾರದು. ರಾಜಕೀಯಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ಅರ್ಜಿ ವಿಚಾರಣೆಯನ್ನು ಜುಲೈ 25ಕ್ಕೆ ಮುಂದೂಡಿದೆ. ಇದನ್ನೂ ಓದಿ:  ಮುಸ್ಲಿಂ ಮೀಸಲಾತಿ ರದ್ದು ವಿಚಾರ- ಸುಪ್ರೀಂನಲ್ಲಿ ಇಂದು ವಿಚಾರಣೆ

    ಅರ್ಜಿದಾರರ ಪರ ವಕೀಲ ದುಶ್ಯಂತ್ ದವೆ,  ಪ್ರತಿ ದಿನ  ಗೃಹ ಸಚಿವ (Home Minister) ಅಮಿತ್ ಶಾ (Amit Shah) ಅವರು ಮೀಸಲಾತಿ ರದ್ದುಗೊಳಿಸಿದ್ದರ ಬಗ್ಗೆ ಹೆಮ್ಮೆಯಿಂದ  ಮಾತನಾಡುತ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

    ಈ ವೇಳೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಧರ್ಮದ ಆಧಾರದಲ್ಲಿ ನೀಡುವ ಮೀಸಲಾತಿಯನ್ನು ಯಾರು ವಿರೋಧಿಸುತ್ತಾರೋ ಅವರು ಸಮರ್ಥಿಸಿಕೊಳ್ಳುತ್ತಾರೆ ಎಂದು ವಾದಿಸಿದರು.  ಈ ವೇಳೆ ನ್ಯಾಯಮೂರ್ತಿ ಬಿವಿ ನಾಗರತ್ನ, ಪ್ರಕರಣ ನ್ಯಾಯಾಲಯದಲ್ಲಿರುವಾಗ ಸರ್ಕಾರದ ವ್ಯಕ್ತಿಗಳು ಯಾವುದೇ ಹೇಳಿಕೆ ನೀಡಬಾರದು.  ಮಾತನಾಡುವಾಗ ಜಾಗೃತೆವಹಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಪರವಾಗಿ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಅವರು ಮೀಸಲಾತಿ ರದ್ದಿಗೆ ಸಂಬಂಧಿಸಿದ ಭಾಷಣಗಳ ಸುದ್ದಿಯನ್ನು ಪ್ರಕಟಿಸದಂತೆ ಮಾಧ್ಯಮಗಳನ್ನು ನಿರ್ಬಂಧಿಸುವಂತೆ ಮನವಿ ಮಾಡಿದರು. ಆದರ ಮನವಿಯನ್ನು ಪೀಠ ಪುರಸ್ಕರಿಸಲಿಲ್ಲ.

    ಅರ್ಜಿ ವಿಚಾರಣೆಯನ್ನು ಜುಲೈ 25ಕ್ಕೆ ಮುಂದೂಡಿದ ಕೋರ್ಟ್‌  ಮುಂದಿನ ಆದೇಶದವರೆಗೂ ಹಳೆಯ ಮೀಸಲಾತಿಯನ್ನು ಮುಂದುವರಿಸುವಂತೆ ಆದೇಶಿಸಿದೆ. ಇದನ್ನೂ ಓದಿ: ಐಎಎಸ್ ಅಧಿಕಾರಿ ಕೊಲೆ ಅಪರಾಧಿ ರಿಲೀಸ್ – ಬಿಹಾರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

  • ಗೃಹ ಸಚಿವರ ಬೆಂಗಾವಲು ವಾಹನ ಡಿಕ್ಕಿಯಾಗಿಲ್ಲ: ಸ್ಪಷ್ಟನೆ

    ಗೃಹ ಸಚಿವರ ಬೆಂಗಾವಲು ವಾಹನ ಡಿಕ್ಕಿಯಾಗಿಲ್ಲ: ಸ್ಪಷ್ಟನೆ

    ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra Escort Vehicle) ಅವರ ಬೆಂಗಾವಲು ವಾಹನ ಯಾವುದೇ ಅಪಘಾತಕ್ಕೆ ಕಾರಣವಾಗಿರುವುದಿಲ್ಲ ಎಂದು ಆರಗ ಜ್ಞಾನೇಂದ್ರ ಅವರ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ.

    ಸ್ಪಷ್ಟನೆ ಏನು..?: ಗೃಹ ಸಚಿವರ ಬೆಂಗಾವಲು ವಾಹನವು ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ನಿಧನಕ್ಕೆ ಕಾರಣವಾಗಿದೆ ಎಂಬ ವರದಿಗಳು ಸತ್ಯಕ್ಕೆ ದೂರವಾಗಿದ್ದಾಗಿದೆ. ಗೃಹ ಸಚಿವರು ಪ್ರಯಾಣಿಸುತ್ತಿದ್ದ ಹಾಗೂ ಅವರ ಬೆಂಗಾವಲು ವಾಹನಗಳು ಯಾವುದೇ ಅಪಘಾತಕ್ಕೆ ಕಾರಣವಾಗಿರುವುದಿಲ್ಲ.

    ಗೃಹ ಸಚಿವರ ಪ್ರವಾಸದ ವೇಳೆಯಲ್ಲಿ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸುತ್ತಿದ್ದಾಗ ಜಿಲ್ಲಾ ಪೊಲೀಸ್ ವಾಹನವೊಂದು ಬೆಂಗಾವಲು ವಾಹನದ ಬಹಳ ಹಿಂದಕ್ಕೆ ಬರುವಾಗ ವ್ಯಕ್ತಿಗೆ ಡಿಕ್ಕಿ ಹೊಡೆದಿತ್ತು ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದ್ದಾರೆ. ಇದನ್ನೂ ಓದಿ: ಗೃಹ ಸಚಿವರ ಎಸ್ಕಾರ್ಟ್ ವಾಹನಕ್ಕೆ ಬೈಕ್ ಸವಾರ ಸಾವು- ಆರಗ ವಿರುದ್ಧ ಜನಾಕ್ರೋಶ

    ಇದೊಂದು ಸಚಿವರ ಗಮನಕ್ಕೆ ಬಾರದೆ ಹೋದ ದುರದೃಷ್ಟಕರ ಘಟನೆಯಾಗಿದೆ. ಡಿಕ್ಕಿ ಹೊಡೆದು ಅವಘಡ ನಡೆದರೂ ಸಚಿವರು ಲೆಕ್ಕಿಸದೆ ಹೋದರು ಎಂಬ ವರದಿಗಳು ಸತ್ಯಕ್ಕೆ ದೂರವಾದುದಾಗಿದೆ ಎಂದು ಆರಗ ಜ್ಞಾನೇಂದ್ರ ಅವರ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ.

  • ಗೃಹ ಸಚಿವರ ಎಸ್ಕಾರ್ಟ್ ವಾಹನಕ್ಕೆ ಬೈಕ್ ಸವಾರ ಸಾವು- ಆರಗ ವಿರುದ್ಧ ಜನಾಕ್ರೋಶ

    ಗೃಹ ಸಚಿವರ ಎಸ್ಕಾರ್ಟ್ ವಾಹನಕ್ಕೆ ಬೈಕ್ ಸವಾರ ಸಾವು- ಆರಗ ವಿರುದ್ಧ ಜನಾಕ್ರೋಶ

    ಹಾಸನ: ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರ ಎಸ್ಕಾರ್ಟ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಸವಾರನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಹಾಸನದಲ್ಲಿ ನಡೆದಿದೆ.

    ಚಿಕ್ಕಗಂಡಸಿ ಗ್ರಾಮದ ರಮೇಶ್ (45) ಮೃತ ದುರ್ದೈವಿ. ಪೆಟ್ರೋಲ್ ಬಂಕ್‍ನಿಂದ ಬರುತ್ತಿದ್ದ ಎಸ್ಕಾರ್ಟ್ ವಾಹನ (Home Ministers Escort Vehicle Accident) ಕ್ಕೆ ಬೈಕ್ ಅಡ್ಡ ಬಂದ ಪರಿಣಾಮ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಮೊಮ್ಮಗನ ಮೃತದೇಹ ಕಂಡು ತಾತ ಹೃದಯಾಘಾತದಿಂದ ಸಾವು

    ಆರಗ ಜ್ಞಾನೇಂದ್ರ ಅವರು ಮಲೆಮಹದೇಶ್ವರ ಬೆಟ್ಟದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಗೃಹ ಸಚಿವರಿಗೆ ಡಿಆರ್ ಇನ್ಸ್ ಪೆಕ್ಟರ್ ರಾಮು ಎಸ್ಕಾರ್ಟ್ ಮಾಡುತ್ತಿದ್ದರು. ಅಪಘಾತದ ವಿಷಯ ತಿಳಿದ ಗೃಹ ಸಚಿವ ಆರಗ ಜ್ಞಾನೇಂದ್ರ ವಾಹನ ನಿಲ್ಲಿಸದೆ ತೆರಳಿದ್ದು ಸ್ಥಳೀಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಆಗಮಿಸಿದ ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಮೃತದೇಹವನ್ನ ಸ್ಥಳೀಯ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

  • ಜನವರಿ 27, 28ಕ್ಕೆ ಧಾರವಾಡ, ಬೆಳಗಾವಿಗೆ ಅಮಿತ್ ಶಾ ಭೇಟಿ

    ಜನವರಿ 27, 28ಕ್ಕೆ ಧಾರವಾಡ, ಬೆಳಗಾವಿಗೆ ಅಮಿತ್ ಶಾ ಭೇಟಿ

    ಬೆಳಗಾವಿ: ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ (BJP) ಗೆ ಶಕ್ತಿ ತುಂಬಲು ಬೆಳಗಾವಿಗೆ ಚುನಾವಣಾ ಚಾಣಕ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ (AmitShah) ಆಗಮಿಸುತ್ತಿದ್ದಾರೆ. ಕಿತ್ತೂರು ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಬಂದಿದ್ದಾಯ್ತು, ಈಗ ಅಮಿತ್ ಶಾ ಸರದಿ ಬಂದಿದ್ದು ಜ.27 ಹಾಗೂ 28ರಂದು ಎರಡು ದಿನ ಅಮಿತ್ ಶಾ ಧಾರವಾಡ, ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

    ಜ.27ರಂದು ರಾತ್ರಿ ಹುಬ್ಬಳ್ಳಿಗೆ ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜ.28ರ ಬೆಳಗ್ಗೆ 10 ಗಂಟೆಗೆ ಕುಂದಗೋಳಗೆ ತೆರಳಲಿದ್ದು, ಕುಂದಗೋಳದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿಯಾಗುತ್ತಾರೆ. ಬಳಿಕ ಕೆಎಲ್‍ಇ (KLE) ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧಾರವಾಡಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನ ಕೇಂದ್ರದ ಉದ್ಘಾಟನೆ ಮಾಡ್ತಾರೆ. ನಂತರ ಮಧ್ಯಾಹ್ನ 3.45ಕ್ಕೆ ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಗೆ ಆಗಮಿಸಲಿದ್ದು ಬೆಳಗಾವಿಯಲ್ಲಿ ಸರಣಿ ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕ್ಷೇತ್ರ ಘೋಷಣೆ ಬೆನ್ನಲ್ಲೇ ಹೆಚ್ಚಿದ ಕಿರಿಕ್ – ದಲಿತರ ಬಳಿಕ ಅಲ್ಪಸಂಖ್ಯಾತರಿಂದ ವಾರ್

    ಜನವರಿ 28ರಂದು ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬೃಹತ್ ಸಮಾವೇಶ ನಡೆಸಲಿದ್ದು ಕಿತ್ತೂರು ವಿಧಾನಸಭಾ ಕ್ಷೇತ್ರದ ಎಂ.ಕೆ.ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳ ಟಾರ್ಗೆಟ್ ಮಾಡಿ ಬಿಜೆಪಿ ಶಾಸಕ ಇರುವ ಕ್ಷೇತ್ರ ಕೇಂದ್ರವಾಗಿಸಿ ಬೃಹತ್ ಸಮಾವೇಶ ಮಾಡಲಾಗುತ್ತಿದೆ. ಬೈಲಹೊಂಗಲ, ಖಾನಾಪುರ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು, ಬೆಳಗಾವಿ ಗ್ರಾಮೀಣದಲ್ಲಿ- ಲಕ್ಷ್ಮಿ ಹೆಬ್ಬಾಳ್ಕರ್, ಬೈಲಹೊಂಗಲದಲ್ಲಿ – ಮಹಾಂತೇಶ ಕೌಜಲಗಿ, ಖಾನಾಪುರದಲ್ಲಿ – ಅಂಜಲಿ ನಿಂಬಾಳ್ಕರ್ ಹಾಲಿ ಕೈ ಶಾಸಕರಿದ್ದಾರೆ. ಮೂರು ಕ್ಷೇತ್ರಗಳ ಸಮೀಪದಲ್ಲಿರುವ ಎಂ.ಕೆ ಹುಬ್ಬಳ್ಳಿಯಲ್ಲಿ ಅಮಿತ್ ಶಾ ಬೃಹತ್ ಸಮಾವೇಶ ಹಮ್ಮಿಕೊಂಡು ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಮುಂದಾಗಿದ್ದಾರೆ.

    ಜ.28 ರಂದು ಬೆಳಗಾವಿಯಲ್ಲಿ ಸರಣಿ ಸಭೆ ನಡೆಸಲಿದ್ದು, ಜ.28ರ ಸಂಜೆ 6.30ರಿಂದ ರಾತ್ರಿ 10 ಗಂಟೆಯವರೆಗೆ ಸರಣಿ ಸಭೆಗಳನ್ನು ಆಯೋಜನೆ ಮಾಡಿದ್ದಾರೆ. ಜ.28ರ ಸಂಜೆ 6.30ರಿಂದ 7.30ರವರೆಗೆ ಸಂಘ ಪರಿವಾರದ ಹಿರಿಯರ ಜೊತೆ ಸಭೆ, ಬಳಿಕ ಸಂಜೆ 7.30 ರಿಂದ 8.30ರವರೆಗೆ ಪಕ್ಷದ ಬೆಳಗಾವಿ ಮಹಾನಗರ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳ ಪದಾಧಿಕಾರಿಗಳ ಸಭೆ,ರಾತ್ರಿ 8.30ರಿಂದ 10ಗಂಟೆಯವರೆಗೆ ಬೆಳಗಾವಿ ಜಿಲ್ಲೆಯ ಹಿರಿಯ ಬಿಜೆಪಿ ನಾಯಕರ ಜೊತೆ ಸಭೆ, ಜ.28ರ ರಾತ್ರಿ 10.30ಕ್ಕೆ ಬೆಳಗಾವಿಯಿಂದ ದೆಹಲಿಗೆ ವಾಪಸ್ ಆಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜನರು ಕೋವಿಡ್ ಗಂಭೀರವಾಗಿ ತೆಗೆದುಕೊಳ್ಳದಿದ್ರೆ ಸಾವಿನ ಸಂಖ್ಯೆ ತಡೆಯೋಕಾಗಲ್ಲ – ಆರಗ ಜ್ಞಾನೇಂದ್ರ

    ಜನರು ಕೋವಿಡ್ ಗಂಭೀರವಾಗಿ ತೆಗೆದುಕೊಳ್ಳದಿದ್ರೆ ಸಾವಿನ ಸಂಖ್ಯೆ ತಡೆಯೋಕಾಗಲ್ಲ – ಆರಗ ಜ್ಞಾನೇಂದ್ರ

    ಬೆಳಗಾವಿ: ಕೋವಿಡ್-19 (Covid 19) ಬಗ್ಗೆ ಜನ ಗಂಭೀರವಾಗಿ ತೆಗೆದುಕೊಳ್ಳದೇ ಇದ್ರೆ, ಸಾವಿನ ಸಂಖ್ಯೆ ತಡೆಯೋಕಾಗಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಆತಂಕಪಟ್ಟಿದ್ದಾರೆ.

    ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆ ಬೆಳಗಾವಿಯಲ್ಲಿಂದು (Belagavi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಅನ್ನು ಜನ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೇ ಸಾವಿನ ಸಂಖ್ಯೆ ತಡೆಯಲು ಆಗಲ್ಲ. ಯಾರೂ ಆತಂಕ ಪಡಬಾರದು. ಹಾಗೆಯೇ ಉಡಾಫೆ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

    ಈ ಹಿಂದೆ ಪೊಲೀಸ್ ಇಲಾಖೆಯಲ್ಲೂ (Police Department) ಬಹಳ ಜನ ಮೃತಪಟ್ಟರು. ಈ ಬಾರಿ ಕೂಡಾ ಕೋವಿಡ್ ವಿರುದ್ಧ ಹೋರಾಟ ಮಾಡ್ತಾರೆ. ಎಲ್ಲ ರೀತಿಯಲ್ಲೂ ಸೂಚನೆ ಕೊಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಾವತ್ತೂ ದನ ಕಾಯದೇ ಇರೋರು, ಸಗಣಿ ಎತ್ತದವರು ಗೋವು ರಕ್ಷಣೆ ಅಂತಾರೆ – ಸಿದ್ದು ಲೇವಡಿ

    ಪಿಎಸ್‌ಐ (PSI) ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪಿಎಸ್‌ಐ ಪರೀಕ್ಷೆ ಬರೆದು ಪಾಸ್ ಆದ ವಿದ್ಯಾರ್ಥಿಗಳ (Students) ಮನವಿ ಸ್ವೀಕರಿಸಿದ್ದೇನೆ. ಆದರೆ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಹಂತದಲ್ಲಿ ಗೃಹ ಸಚಿವನಾಗಿ ನನಗೆ ನಿರ್ಧಾರ ಹೇಳಲು ಕಷ್ಟ ಆಗುತ್ತೆ. ಸಿಒಡಿ ತನಿಖಾ (COD Investigation) ವರದಿ ಬಂದ ಮೇಲೆ ನಮ್ಮ ನಿಲುವು ತಿಳಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಾವೇ ಚೀನಾದ ವುಹಾನ್‌ಗೆ ಹೋಗಿ ವೈರಸ್ ಬಿಟ್ಟಿದ್ವಾ – ಕಾಂಗ್ರೆಸ್‌ಗೆ ಸುಧಾಕರ್ ಪ್ರಶ್ನೆ

    ಇದೇ ವೇಳೆ ಲವ್ ಜಿಹಾದ್ (Love Jihad) ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮತಾಂತರ ನಿಷೇಧ ಕಾಯ್ದೆಯಲ್ಲೇ ಲವ್ ಜಿಹಾದ್‌ಗೆ ಸಂಬಂಧಿಸಿದ ಕಾನೂನು ಅಂಶಗಳು ಅಡಕವಾಗಿದೆ. ಆದ್ದರಿಂದ ಏಕಾಏಕಿ ಯಾರು ಯಾರನ್ನೋ ಮದುವೆಯಾಗಲು ಆಗುವುದಿಲ್ಲ. ಸದ್ಯ ರಾಜ್ಯದಲ್ಲಿ ಎರಡು ಲವ್ ಜಿಹಾದ್ ಪ್ರಕರಣಗಳು ದಾಖಲಾಗಿವೆ. ಈಗಿನ ಪರಿಸ್ಥಿತಿಯಲ್ಲಿ ಟಾಸ್ಕ್ ಫೋರ್ಸ್ ಅಗತ್ಯವಿಲ್ಲ. ಏಕೆಂದರೆ ಉತ್ತರ ಪ್ರದೇಶದ ಮಾದರಿ ಬೇರೆ, ನಮ್ಮ ರಾಜ್ಯದ ಮಾದರಿಯೇ ಬೇರೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]