Tag: Home Isolation

  • ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್

    ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ರಾಜ್ಯ ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಅವರಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ.

    ಕೊರೊನಾ ರಾಜಕಾರಣಿಗಳನ್ನು ಬೆನ್ನುಬಿಡದೆ ಕಾಡುತ್ತಿದೆ. ಇಂದು ಬೆಳಗ್ಗೆ ತಾನೇ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಮತ್ತು ಹಾಸನ ಉಸ್ತುವಾರಿ ಸಚಿವರಾದ ಗೋಪಾಲಯ್ಯ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈಗ ನನಗೂ ಕೊರೊನಾ ಪಾಸಿಟಿವ್ ಬಂದಿದೆ ಎಂದು ಸತಃ ಬೊಮ್ಮಾಯಿಯವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಸವರಾಜ ಬೊಮ್ಮಾಯಿ, ನಮ್ಮ ಮನೆಯಲ್ಲಿ ಕಾರ್ಯನಿರ್ವಹಿಸುವ ಕೆಲಸದ ಹುಡುಗನಿಗೆ ನಿನ್ನೆ ಕೋವಿಡ್-19 ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ನಾನು ಸಹ ಪರೀಕ್ಷೆಗೆ ಒಳಪಟ್ಟಿದ್ದು, ನನಗೂ ಸಹ ಸೋಂಕು ಪಾಸಿಟಿವ್ ಬಂದಿದೆ. ನನಗೆ ಯಾವುದೇ ರೀತಿಯ ರೋಗದ ಲಕ್ಷಣಗಳು ಇರುವುದಿಲ್ಲ ಹಾಗೂ ಆರೋಗ್ಯವಾಗಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಅವರು, ಇತ್ತೀಚೆಗೆ ನನ್ನ ನೇರ ಸಂಪರ್ಕಕ್ಕೆ ಬಂದಿರುವವರು ಕೂಡಲೇ ಪರೀಕ್ಷೆಗೆ ಒಳಪಡುವಂತೆ ಹಾಗೂ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರುತ್ತೇನೆ ಎಂದಿದ್ದಾರೆ. ಬಸವರಾಜ್ ಬೊಮ್ಮಾಯಿಯವರು ನಾಳೆ ಸಿಎಂ ಯಡಿಯೂರಪ್ಪ ಅವರ ಜೊತೆ ದೆಹಲಿಗೆ ತೆರಳಬೇಕಿತ್ತು. ಆದರೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.

  • ಸಿಲಿಕಾನ್ ಸಿಟಿಯಲ್ಲಿ ಹೋಮ್ ಐಸೋಲೇಷನ್‍ಗೆ ಹೊಸ ರೂಲ್ಸ್

    ಸಿಲಿಕಾನ್ ಸಿಟಿಯಲ್ಲಿ ಹೋಮ್ ಐಸೋಲೇಷನ್‍ಗೆ ಹೊಸ ರೂಲ್ಸ್

    ಬೆಂಗಳೂರು: ಸಿಲಿಕಾನ್ ಸಿಟಿ ಅರ್ಧ ಲಕ್ಷ ಕೊರೊನಾ ಪ್ರಕರಣಗಳ ಮೈಲಿಗಲ್ಲಿಗೆ ಸನಿಹದಲ್ಲಿದ್ದು, ನಗರದಲ್ಲಿ ಕಂಟೈನ್ಮೆಂಟ್ ಝೋನ್‍ಗಳ ಸಂಖ್ಯೆ ಇದೀಗ 15 ಸಾವಿರ ದಾಟಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಕೊರೊನಾ ಹತ್ತಿಕ್ಕಲು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.

    ನಿಯಂತ್ರಣಕ್ಕೆ ಸಿಗದೆ ಗಲ್ಲಿಗಲ್ಲಿಯಲ್ಲಿ ಆರ್ಭಟಿಸುತ್ತಿರುವ ಕೊರೊನಾ ಹತ್ತಿಕ್ಕುವ ನೆಪದಲ್ಲಿ ಸರ್ಕಾರ ದಿನಕ್ಕೊಂದು ನಿಯಮ ಜಾರಿಗೆ ತರುತ್ತಿದ್ದು, ಇಂದು ಸಹ ಹಲವು ರೂಲ್ಸ್ ಜಾರಿ ಮಾಡಲಾಗಿದೆ. ಹೋಮ್ ಐಸೋಲೇಷನ್ ಕುರಿತು ನಿಯಮ ರೂಪಿಸಿದ್ದು, ಈ ನಿಯಮಗಳು ಯಾವ ರೀತಿ ಕಾರ್ಯನಿರ್ವಹಿಸಲಿವೆ ಕಾದು ನೋಡಬೇಕಿದೆ.

    ಹೋಮ್ ಐಸೋಲೇಷನ್ ಆಗುವುದು ಇನ್ನು ಸೋಂಕಿತರ ನಿರ್ಧಾರ ಅಲ್ಲ. ಬದಲಿಗೆ ಸೋಂಕಿತರ ಹೋಮ್ ಐಸೋಲೇಷನ್ ಬಗ್ಗೆ ಪಾಲಿಕೆ ನಿರ್ಧಾರ ಮಾಡಲಿದೆಯಂತೆ. ಅಲ್ಲದೆ ಸೋಂಕಿತರ ಮೇಲೆ ನಿಗಾ ಇಡಲು ವಾರ್ಡ್‍ಗಳಲ್ಲಿ ಪ್ರತ್ಯೇಕ ತಂಡ ರಚಿಸಲು ಮುಂದಾಗಿದ್ದು, ಸೋಂಕಿತರ ಮನೆಗೆ ತೆರಳಿ ವೈದ್ಯಕೀಯ ತಂಡದಿಂದ ಆರೋಗ್ಯ ತಪಾಸಣೆ ಮಾಡಲು ನಿರ್ಧರಿಸಲಾಗಿದೆ.

    ಅಲ್ಲದೆ ಚಿಕ್ಕಪೇಟೆಯಲ್ಲಿ ವಾಣಿಜ್ಯ ವ್ಯವಹಾರಕ್ಕೆ ಹೊಸ ಐಡಿಯಾ ರೂಪಿಸಿದ್ದು, ದಿನ ಬಿಟ್ಟು ದಿನ ಅಂಗಡಿ ತೆರೆಯಲು ಚಿಂತಿಸಲಾಗಿದೆಯಂತೆ. ಒಂದು ಅಂಗಡಿ ತೆರೆದರೆ, ಅದರ ಅಕ್ಕಪಕ್ಕದ ಅಂಗಡಿ ಬಂದ್ ಮಾಡಬೇಕಂತೆ. ಅಲ್ಲದೆ ಶೇ.50ರಷ್ಟು ಸಿಬ್ಬಂದಿಯನ್ನು ಮಾತ್ರ ಇಟ್ಟುಕೊಂಡು ಕೆಲಸ ಮಾಡಬೇಕು, ಕೆ.ಆರ್.ಮಾರ್ಕೆಟ್, ಕಲಾಸಿಪಾಳ್ಯ ಮಾರುಕಟ್ಟೆಗಳು ಬಂದ್ ಆಗಿರಲಿವೆ. ಚಿಕ್ಕಪೇಟೆ, ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯಳದಲ್ಲಿ ಧಾರ್ಮಿಕ ಸ್ಥಳಗಳನ್ನು ಬಂದ್ ಮಾಡುವ ಕುರಿತು ನಿರ್ಧರಿಸಲಾಗಿದೆ.

    ಚಿಕ್ಕಪೇಟೆ, ಕೆ.ಆರ್.ಮಾರ್ಕೆಟ್, ಕಲಾಸಿಪಾಳ್ಯಗಳಲ್ಲಿ ಮದ್ಯದಂಗಡಿ, ಹೂವು, ಹಣ್ಣು, ತರಕಾರಿ ವ್ಯಾಪಾರ ಸಂಪೂರ್ಣ ಬಂದ್ ಆಗಿರಲಿದೆ. ಮುಂದಿನ ಆದೇಶದವರೆಗೂ ಮಿನಿ ಲಾಕ್ ಜಾರಿಯಲ್ಲಿ ಇರಲಿದೆ ಎಂದು ಬಿಬಿಎಂಪಿ ತಿಳಿಸಿದೆ.

  • ಅಲ್ಪ ಪ್ರಮಾಣದ ಲಕ್ಷಣ ಇದ್ದರೆ ಮನೆಯಲ್ಲೇ ಐಸೋಲೇಷನ್ ಮಾಡ್ಕೊಳ್ಳಿ- ಬಿಬಿಎಂಪಿ ಆಯುಕ್ತ ಮನವಿ

    ಅಲ್ಪ ಪ್ರಮಾಣದ ಲಕ್ಷಣ ಇದ್ದರೆ ಮನೆಯಲ್ಲೇ ಐಸೋಲೇಷನ್ ಮಾಡ್ಕೊಳ್ಳಿ- ಬಿಬಿಎಂಪಿ ಆಯುಕ್ತ ಮನವಿ

    ಬೆಂಗಳೂರು: ಕೊರೊನಾ ವೈರಸ್‍ನ ಅಲ್ಪ ಪ್ರಮಾಣದ ಲಕ್ಷಣ ಇದ್ದರೆ ದಯವಿಟ್ಟು ಮನೆಯಲ್ಲೇ ಐಸೋಲೇಷನ್ ಮಡಿಕೊಳ್ಳಿ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅಯುಕ್ತರು, ಸಿಲಿಕಾನ್ ಸಿಟಿಯಲ್ಲಿ ಕೋವಿಡ್ -19 ನಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಸೋಂಕಿತರು ಪರದಾಡುತ್ತಿದ್ದು, ಸಂಕಷ್ಟ ತಪ್ಪಿಸಲು ಹರಸಾಹಸ ಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ತೀರಾ ಸಮಸ್ಯೆ ಇರುವವರಿಗೆ ಮಾತ್ರ ಬೆಡ್ ಸಿಗುತ್ತದೆ. ರೋಗ ಲಕ್ಷಗಳು, ಮೈಲ್ಡ್ ಸಿಂಪ್ಟಮ್ಸ್ ಇರುವವರು ಮನೆಯಲ್ಲೆ ಐಸೋಲೇಷನ್ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

    ಬಿಬಿಎಂಪಿ ಕೊರೊನಾ ಜಾಗೃತಿ ಅಭಿಯಾನದ ರಾಯಭಾರಿ ನಟ ರಮೇಶ್ ಅರವಿಂದ್ ಈ ಸಂಬಂಧ ವಿಡಿಯೋ ಮಾಡಿದ್ದು, ವಿಡಿಯೋದಲ್ಲಿ ಸಣ್ಣ, ಜ್ವರ, ಕಫ ಇರುವವರು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಬೆಡ್ ನಲ್ಲಿ ಮಲಕ್ಕೊಂಡು ಬಿಡುತ್ತೀರಾ. ಇದು ಅಗತ್ಯವಿಲ್ಲ. ಯಾಕಂದ್ರೆ ಆ ಬೆಡ್‍ಗೆ ತುಂಬಾ ಜನ ಕಾಯುತ್ತಿದ್ದಾರೆ. ಬಹಳ ಅಗತ್ಯವಾಗಿ ಆ ಬೆಡ್ ಬೇಕೆ ಬೇಕು ಅನ್ನೋ ರೋಗಿಗಳು ಸಾಕಷ್ಟು ಮಂದಿ ಇದ್ದಾರೆ. ಹೀಗಾಗಿ ಅಲ್ಪ ಪ್ರಮಾದ ಲಕ್ಷಣ ಇರುವವರು ಆಸ್ಪತ್ರೆಗಳಿಗೆ ಬಂದು ಇಕ್ಕಟ್ಟಿಗೆ ಸಿಲುಕಿಸಬೇಡಿ. ಯಾರಿಗೆ ಅಗತ್ಯವಿದೆಯೋ ಅವರಿಗೆ ಆ ಬೆಡ್ ಸಲ್ಲಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಹೋಂ ಐಸೋಲೇಷನ್:
    * ಹೊಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯೋರಿಗೆ ಶುಗರ್, ಬಿಪಿ, ಹೃದಯ, ಕಿಡ್ನಿ ಸಮಸ್ಯೆ ಇರಬಾರದು.
    * 50ವರ್ಷದೊಳಗಿನ ವಯಸ್ಸಿನವರು ಮಾತ್ರ ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯಬಹುದು.
    * ಸೋಂಕಿತ ವ್ಯಕ್ತಿಗೆ ಮನೆಯಲ್ಲಿ ಪ್ರತ್ಯೇಕವಾದ ಕೊಠಡಿ ವ್ಯವಸ್ಥೆ ಮಾಡಬೇಕು.
    * ಸೋಂಕಿತ ವ್ಯಕ್ತಿ ಬಳಸುವ ಶೌಚಾಲಯವನ್ನ ಇತರೆ ಕುಟುಂಬಸ್ಥರು ಬಳಸಬಾರದು.
    * ಸೋಕಿಂತ ವ್ಯಕ್ತಿಯ ಕೊಠಡಿಗೆ ಭೇಟಿ ಕೊಡುವವರಿಗೆ ಮಾಸ್ಕ್, ಗ್ಲೌಸ್ ಕಡ್ಡಾಯ.
    * ಸೋಂಕಿತ ವ್ಯಕ್ತಿಯ ಕೊಠಡಿಯಲ್ಲಿ ಕೇರ್ ಟೇಕರ್ ಹೆಚ್ಚು ಸಮಯ ಇರುವಂತಿಲ್ಲ.
    * ಕೊರೋನಾ ಪಾಸಿಟಿವ್ ವ್ಯಕ್ತಿ ಕಡ್ಡಾಯವಾಗಿ ಆರೋಗ್ಯ ಸೇತು ಆ?ಯಪ್ ಬಳಸಬೇಕು..
    * ಸೋಕಿಂತನ ದೇಹದ ಉಷ್ಣತೆ ಮತ್ತು ಉಸಿರಾಟ ಬಗ್ಗೆ ಮಾನಿಟರ್ ಮಾಡಿ ದಾಖಲಿಸಬೇಕು.
    * ಉಸಿರಾಟದ ಸಮಸ್ಯೆ ಅಥವಾ ದೇಹದ ಉಷ್ಣತೆ ಹೆಚ್ಚಾದಾಗ ಕೂಡಲೇ ಡಾಕ್ಟರ್ ಸಲಹೆ ಪಡೆಯಬೇಕು.

  • 60 ವರ್ಷ ಮೇಲ್ಪಟ್ಟವರಿಗೆ ಹೋಂ ಐಸೋಲೇಷನ್ ಕಡ್ಡಾಯ

    60 ವರ್ಷ ಮೇಲ್ಪಟ್ಟವರಿಗೆ ಹೋಂ ಐಸೋಲೇಷನ್ ಕಡ್ಡಾಯ

    ಬೆಂಗಳೂರು: ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟು ಬೇರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕಡ್ಡಾಯವಾಗಿ ಹೋಂ ಐಸೋಲೆಷನ್ ಮಾಡಲಾಗುವುದು. ಈ ಸಂಬಂಧ ಕಾನೂನು ಜಾರಿಗೆ ಚಿಂತನೆ ನಡೆದಿದೆ ಅಂತ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.

    60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರ ಬರಬಾರದು. ವಾಕಿಂಗ್‍ಗೂ ಬರುವಂತಿಲ್ಲ. ಅವರನ್ನ ಮನೆ ಒಳಗೆ ಇರಿಸುವುದಕ್ಕೆ ಶೀಘ್ರವಾಗಿ ಕಾನೂನು ರೂಪಿಸ್ತೇವೆ. ಜೊತೆಗೆ ಟೆಸ್ಟಿಂಗ್ ಹೆಚ್ಚಿಸ್ತೇವೆ. ಕೋವಿಡ್ ಟೆಸ್ಟ್ ಮಾಡಿಸಿದ 24 ಗಂಟೆಯೊಳಗೆ ರಿಪೋರ್ಟ್ ನೀಡಬೇಕು ಅಂತ ಲ್ಯಾಬ್‍ಗಳಿಗೆ ಸೂಚಿಸಿದ್ದೇವೆ. ಶೇ.5 ರಷ್ಟು ವೈದ್ಯರು ಕೆಲವರು ನೆಪ ಹೇಳಿ ರಜೆ ಹಾಕುತ್ತಿದ್ದಾರೆ. ಅಂತವರಿಗೆ ಮುಲಾಜಿಲ್ಲದೆ ಲೈಸೆನ್ಸ್ ಕ್ಯಾನ್ಸಲ್ ಮಾಡುತ್ತೇವೆ ಎಂದು ಸಚಿವರು ಎಚ್ಚರಿಸಿದ್ದಾರೆ.

    ಇದೇ ವೇಳೆ ಬೆಂಗಳೂರಿನಲ್ಲಿ ಸಾಕಷ್ಟು ಅಸ್ತವ್ಯಸ್ತ ಆಗಿರೋದು ನಿಜ. ನಾಳೆಯಿಂದ ಪ್ರತಿ ವಾರ್ಡ್ ನಲ್ಲಿ 2 ಆಂಬ್ಯುಲೆನ್ಸ್ ನಿಯೋಜಿಸ್ತೇವೆ. 1912 ಕಾಲ್ ಸೆಂಟರ್ ನಂಬರ್ ಗೆ ಕರೆ ಮಾಡಿ ಖಾಸಗಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಎಲ್ಲೆ ಯಾರಿಗೆ ತೊಂದರೆ ಆದರು ಈ ನಂಬರ್ ಗೆ ಕರೆ ಮಾಡಿ ದೂರು ನೀಡಬಹುದು, ತಕ್ಷಣ ಸ್ಪಂದಿಸುತ್ತೇವೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

  • ರೋಗ ಲಕ್ಷಣ ಇಲ್ಲದವರಿಗೆ ಹೋಮ್ ಐಸೋಲೇಷನ್-ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

    ರೋಗ ಲಕ್ಷಣ ಇಲ್ಲದವರಿಗೆ ಹೋಮ್ ಐಸೋಲೇಷನ್-ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

    ಬೆಂಗಳೂರು: ಕೊರೊನಾ ರೋಗ ಲಕ್ಷಣ ಇಲ್ಲದವವರಿಗೆ ಹೋಮ್ ಐಸೋಲೇಷನ್ ಮಾಡಲು ಸರ್ಕಾರ ನಿರ್ಧರಿಸಿದ್ದು, ಇಂದು ಅಧಿಕೃತ ಆದೇಶವನ್ನು ಹೊರಡಿಸಿದೆ.

    ಮೊದಲು ಕೋವಿಡ್ ಟೆಸ್ಟ್ ಮಾಡಿಸಿ ರೋಗಿ ಹೋಮ್ ಐಸೋಲೇಷನ್ ಗೆ ಅರ್ಹನಾ ಎಂಬುದನ್ನು ಆರೋಗ್ಯ ಇಲಾಖೆ ತಂಡ ಮತ್ತು ವೈದ್ಯಾಧಿಕಾರಿಗಳು ನಿರ್ಧರಿಸುತ್ತಾರೆ. ಹೋಮ್ ಐಸೋಲೇಷನ್ ಗೆ ಅರ್ಹರಲ್ಲದ ರೋಗಿಗಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಮನೆಯಲ್ಲಿ ಪ್ರತ್ಯೇಕ ಕೊಠಡಿ, ಶೌಚಾಲಯಗಳು ಇದ್ದರೆ ಹೋಮ್ ಐಸೋಲೇಶನ್ ಗೆ ಹಸಿರು ನಿಶಾನೆ ಸಿಗಲಿದೆ. ರೋಗಿಯ ಮನೆಯಲ್ಲಿ ಅಗತ್ಯ ಸೌಲಭ್ಯ ಇಲ್ಲದಿದ್ದರೆ ಕೋವಿಡ್ ಕೇರ್ ಸೆಂಟರ್ ಗೆ ಶಿಫ್ಟ್ ಮಾಡುತ್ತಾರೆ.

    ಹೋಮ್ ಐಸೋಲೇಷನ್‍ಗೆ ಒಳಪಡುವ ರೋಗಿ ಕಡ್ಡಾಯವಾಗಿ ಪ್ರೋಟೋಕಾಲ್ ಕಡ್ಡಾಯವಾಗಿ ಪಾಲನೆ ಮಾಡಬೇಕು. ಇನ್ನು ಸೋಂಕಿತನ ಮನೆಯಲ್ಲಿ ಅಗತ್ಯ ಸೌಲಭ್ಯಗಳಿವೆಯಾ ಎಂಬುದನ್ನು ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಒಪ್ಪಿಗೆ ನೀಡಿದ ಬಳಿಕವೇ ಹೋಮ್ ಐಸೋಲೇಷನ್ ಗೆ ಅನುಮತಿ ಸಿಗಲಿದೆ. ಹೋಮ್ ಐಸೋಲೇಷನ್ ಗೆ ಒಳಗಾದವರು ಪ್ರತಿದಿನ ಸಂಬಂಧಪಟ್ಟ ವೈದ್ಯರಿಗೆ ವರದಿ ನೀಡಬೇಕು. ಈ ಬಗ್ಗೆ ಕುಟುಂಬದವರಿಗೆ, ಅಕ್ಕಪಕ್ಕದ ಮನೆಯವರಿಗೆ, ಸಂಬಂಧಿಕರಿಗೆ ಮಾಹಿತಿ ನೀಡಬೇಕು.

    ಹೋಮ್ ಐಸೋಲೇಷನ್ ಗೆ ಒಳಗಾದವರು ಗ್ಲೌಸ್, ಸ್ಯಾನಿಟೈಸರ್, ಅಕ್ಸಿ ಮೀಟರ್, ಥರ್ಮಲ್ ಮೀಟರ್ ಬಳಸಬೇಕು. ಪ್ರೋಟೋಕಾಲ್ ಅನ್ವಯ ಚಿಕಿತ್ಸಾ ಅವಧಿ ಮುಗಿದ ಬಳಿಕ ಬಿಡುಗಡೆ ಮಾಡಲಾಗುತ್ತದೆ.

  • ಸರ್ಕಾರದಿಂದ ಹೋಂ ಐಸೋಲೇಷನ್‍ನ ಮಾರ್ಗಸೂಚಿ ಪ್ರಕಟ

    ಸರ್ಕಾರದಿಂದ ಹೋಂ ಐಸೋಲೇಷನ್‍ನ ಮಾರ್ಗಸೂಚಿ ಪ್ರಕಟ

    ಬೆಂಗಳೂರು: ಸರ್ಕಾರ ಹೋಂ ಐಸೋಲೇಷನ್ ಮಾರ್ಗಸೂಚಿಯನ್ನ ಪ್ರಕಟಿಸಿದೆ. ಸೋಂಕು ಗುಣಲಕ್ಷಣ ಇಲ್ಲದವರು, ಕಡಿಮೆ ಗುಣಲಕ್ಷಣ ಇದ್ದವರಿಗೆ ಹೋಂ ಐಸೊಲೇಷನ್‍ಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

    50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಾಗೂ ಯಾವುದೇ ಮಾರಕ ರೋಗ ಇಲ್ಲದವರಿಗೆ ಹೋಂ ಐಸೊಲೇಷನ್ ಮಾಡಲಾಗುತ್ತದೆ. ಹೋಂ ಐಸೊಲೇಷನ್‍ಗೆ ಮನೆ ಯೋಗ್ಯವೇ ಎಂಬುದನ್ನು ಆರೋಗ್ಯ ಇಲಾಖೆ ನಿರ್ಧರಿಸುತ್ತದೆ. ಪ್ರತ್ಯೇಕ ಕೊಠಡಿ, ಶುದ್ಧ ಗಾಳಿ, ಪ್ರತ್ಯೇಕ ಶೌಚಾಲಯ ಹೊಂದಿದ್ದ ಮನೆಯಲ್ಲಿ ಮಾತ್ರ ಐಸೊಲೇಷನ್ ಮಾಡಲಾಗುತ್ತದೆ.

    ಸೋಂಕಿತರು 17 ದಿನ ಹೋಂ ಐಸೊಲೇಷನ್ ಆಗಬೇಕು. ಕೈಗೆ ಸೀಲ್, ಎಡಗೈಗೆ ಇ-ಟ್ಯಾಗ್ ಹಾಕಲಾಗುತ್ತೆ. ಹೋಂ ಐಸೊಲೇಷನ್‍ನಲ್ಲಿ ಇರುವಾಗ ಟೆಲಿ ಮೆಡಿಸಿನ್ ಸೌಲಭ್ಯ ಸಿಗಲಿದೆ. ಅಗತ್ಯ ಇದ್ದರೆ ಸ್ಥಳಕ್ಕೆ ವೈದ್ಯರು ಬರಲಿದ್ದಾರೆ. ಇನ್ನೂ ಹೋಂ ಐಸೊಲೇಷನ್‍ನದ್ದವರು ಪ್ರತಿ ದಿನ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಪಲ್ಸ್ ಆಕ್ಸಿಮೀಟರ್, ಥರ್ಮೋ ಮೀಟರ್, ಪಿಪಿಇ ಕಿಟ್ ಹೊಂದಿರಬೇಕು. ಹೋಂ ಐಸೊಲೇಷನ್ ಆಗಿರುವುದು ಅಕ್ಕಪಕ್ಕದ ಮನೆಯವರಿಗೆ ತಿಳಿದಿರಬೇಕು. ಮನೆ ಮುಂದೆ ಹೋಂ ಐಸೊಲೇಷನ್ ನೋಟಿಸ್ ಅಂಟಿಸಲಾಗುತ್ತದೆ.