Tag: Hombale Group

  • ಕಾಂತಾರ ಚಾಪ್ಟರ್‌-1 ಪೋಸ್ಟರ್‌ ವಿಶೇಷತೆ ಏನು? – ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಬಿಗ್‌ ಅಪ್ಡೇಟ್‌

    ಕಾಂತಾರ ಚಾಪ್ಟರ್‌-1 ಪೋಸ್ಟರ್‌ ವಿಶೇಷತೆ ಏನು? – ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಬಿಗ್‌ ಅಪ್ಡೇಟ್‌

    ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಬರ್ತ್ಡೇಗೆ ಬಿಗ್ ಸರ್ಪ್ರೈಸ್ ಸಿಕ್ಕಿದೆ. ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ʻಕಾಂತಾರ ಚಾಪ್ಟರ್ 1ʼ ಸಿನಿಮಾದಿಂದ ಬಿಗ್ ಅಪ್ಡೇಟ್ ಸಿಕ್ಕಿದೆ. 2022ರಲ್ಲಿ ತೆರೆಕಂಡು ಹೊಸ ದಾಖಲೆ ಬರೆದಿದ್ದ “ಕಾಂತಾರ” (Kantara Chapter 1) ಸಿನಿಮಾ ಇದೀಗ ಪ್ರೀಕ್ವೆಲ್ ಆಗುತ್ತಿದೆ. ಈ ಸಿನಿಮಾ ಇದೇ 2025ರ ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ರಿಷಬ್ ಶೆಟ್ಟಿ ಜನ್ಮ ದಿನದ ಪ್ರಯುಕ್ತ ಈ ವಿಚಾರವನ್ನು ಅಧಿಕೃತವಾಗಿ ಹಂಚಿಕೊಂಡಿದೆ ಹೊಂಬಾಳೆ ಫಿಲಂಸ್ (Hombale Films).

    2022ರಲ್ಲಿ ಬಿಡುಗಡೆಯಾದ “ಕಾಂತಾರ” ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು. ನಿಸರ್ಗ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಹಿನ್ನಲೆಯಲ್ಲಿ ಮೂಡಿಬಂದ ಚಿತ್ರಕ್ಕೆ ದೊಡ್ಡ ಮಟ್ಟದ ಮೆಚ್ಚುಗೆ ಸಿಕ್ಕಿತ್ತು. ಬಾಕ್ಸ್ ಆಫೀಸ್ನಲ್ಲಿಯೂ ಹವಾ ಸೃಷ್ಟಿಸಿತ್ತು. ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ತೆರೆಕಂಡಿದ್ದ ಈ ಸಿನಿಮಾ, ಪ್ಯಾನ್ ಇಂಡಿಯಾ (Pan India) ಅವತಾರತಾಳಿತ್ತು. ಇದೀಗ ಇದೇ ಕಾಂತಾರ ಸಿನಿಮಾದ ಪ್ರೀಕ್ವೆಲ್ ಆಗಮನಕ್ಕೆ ಹೆಚ್ಚು ದಿನ ಉಳಿದಿಲ್ಲ. ರಿಷಬ್ ಶೆಟ್ಟಿ ಬರ್ತ್ಡೇಗೆ ಹೊಸ ಪೋಸ್ಟರ್ ಮೂಲಕ ಸರ್ಪ್ರೈಸ್ ನೀಡಿದೆ ಹೊಂಬಾಳೆ ಸಂಸ್ಥೆ.

    ʻದಂತಕಥೆಯ ಮುನ್ನುಡಿ… ಆ ನುಡಿಗೊಂದು ಪರಿಚಯ… ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತʼ ಎಂಬ ಕ್ಯಾಪ್ಷನ್ ಮೂಲಕ “ಕಾಂತಾರ ಚಾಪ್ಟರ್ 1” ಚಿತ್ರದ ಹೊಸ ಲುಕ್ ಬಿಡುಗಡೆ ಮಾಡಿದೆ ಹೊಂಬಾಳೆ ಫಿಲಂಸ್. ಈ ಹೊಸ ಪೋಸ್ಟರ್‌ನಲ್ಲಿ ರಿಷಬ್ ಶೆಟ್ಟಿ ಹಿಂದೆಂದೂ ಕಾಣದ ಲುಕ್‌ನಲ್ಲಿ ಕಂಡಿದ್ದಾರೆ. ಸಿನಿಮಾ ಶೂಟಿಂಗ್ ಸಹ ಮುಕ್ತಾಯವಾದ ವಿಚಾರವನ್ನೂ ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ.

    ಆಧ್ಯಾತ್ಮ ಮತ್ತು ಸಾಹಸಗಾಥೆಯ ಸಮ್ಮಿಶ್ರಣ
    “ಕಾಂತಾರ: ಚಾಪ್ಟರ್ 1” ಚಿತ್ರ ಹಲವು ವಿಶೇಷತೆಗಳಿಂದ ಕೂಡಿದ ಸಿನಿಮಾ. ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾಕ್ಕೆ ಹೋಲಿಕೆ ಮಾಡಿದರೆ, ಹಲವು ಹೊಸತನಗಳಿರುವ ಸಿನಿಮಾ. ಆಧ್ಯಾತ್ಮ ಮತ್ತು ಸಾಹಸಗಾಥೆಯ ಸಮ್ಮಿಶ್ರಣವೂ ಈ ಸಿನಿಮಾದಲ್ಲಾಗಿದೆ. ಈ ಹಿಂದಿನ ಟೀಸರ್‌ನಲ್ಲಿಯೇ ಕುತೂಹಲಕ್ಕೆ ಒಗ್ಗರಣೆ ಹಾಕಿತ್ತು “ಕಾಂತಾರ ಚಾಪ್ಟರ್ 1”. ಇದೀಗ ಇದೇ ಭವ್ಯಕಥೆ ತೆರೆಮೇಲೆ ಬರಲು ಸಿದ್ಧವಾಗಿದೆ.

    ಭವ್ಯ ಸೆಟ್, 3ಸಾವಿರಕ್ಕೂ ಅಧಿಕ ಕಲಾವಿದರು..
    ಬರೋಬ್ಬರಿ 25 ಎಕ್ರೆ ಪ್ರದೇಶದಲ್ಲಿ ಬೃಹತ್ ಸೆಟ್ ಹಾಕಿ. ಕಾಲ್ಪನಿಕ ಊರಿನಲ್ಲಿ “ಕಾಂತಾರ ಚಾಪ್ಟರ್ 1” ಸಿನಿಮಾವನ್ನು ಶೂಟಿಂಗ್ ಮಾಡಲಾಗಿದೆ. ಭಾರತೀಯ ಹಾಗೂ ಅಂತಾರಾಷ್ಟ್ರೀಯ ತಂತ್ರಜ್ಞರೂ ಈ ಸಿನಿಮಾಕ್ಕೆ ಕೈ ಜೋಡಿಸಿದ್ದಾರೆ. 45 ರಿಂದ 50 ದಿನಗಳ ಕಾಲ ಸುಮಾರು 500 ತರಬೇತಿದಾರರು, 3000ಕ್ಕೂ ಹೆಚ್ಚು ಜೂನಿಯರ್ ಕಲಾವಿದರು ಈ ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ.

    “ಕಾಂತಾರ: ಚಾಪ್ಟರ್ 1” ಜೊತೆಗೆ ಹೊಂಬಾಳೆ ಫಿಲಂಸ್ ಬತ್ತಳಿಕೆಯಲ್ಲಿ ಹಲವು ಪ್ರಾಜೆಕ್ಟ್‌ಗಳಿವೆ. “ಸಲಾರ್: ಪಾರ್ಟ್ 2 – ಶೌರ್ಯಾಂಗ ಪರ್ವಂ” ಸೇರಿದಂತೆ ಹಲವು ಸಿನಿಮಾಗಳು ಲೈನಪ್‌ನಲ್ಲಿವೆ. ಈಗ “ಕಾಂತಾರ: ಚಾಪ್ಟರ್ 1” ಚಿತ್ರಕ್ಕೆ ಕ್ಷಣಗಣನೆ ಶುರುವಾಗಿದೆ.

  • ರಿಷಬ್ ಶೆಟ್ಟಿ ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಬಂಪರ್ ಗಿಫ್ಟ್‌ – ʻಕಾಂತಾರ: ಚಾಪ್ಟರ್ 1ʼ ಹೊಸ ಪೋಸ್ಟರ್‌ ರಿಲೀಸ್‌

    ರಿಷಬ್ ಶೆಟ್ಟಿ ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಬಂಪರ್ ಗಿಫ್ಟ್‌ – ʻಕಾಂತಾರ: ಚಾಪ್ಟರ್ 1ʼ ಹೊಸ ಪೋಸ್ಟರ್‌ ರಿಲೀಸ್‌

    – ರಕ್ತ ಸಿಕ್ತ ಅವತಾರದಲ್ಲಿ ಡಿವೈನ್‌ ಸ್ಟಾರ್‌ ಘರ್ಜನೆ, ನಿಗದಿತ ದಿನಾಂಕದಂದೇ ಸಿನಿಮಾ ರಿಲೀಸ್‌

    ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ ʻಕಾಂತಾರ ಚಾಪ್ಟರ್ 1ʼ (Kantara Chapter 1) ಅಕ್ಟೋಬರ್‌ 2ರಂದು ತೆರೆಗೆ ಬರಲು ಸಜ್ಜಾಗುತ್ತಿದೆ. ವಿಶ್ವದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ, ಏಕಕಾಲಕ್ಕೆ 7 ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ಹೊಂಬಾಳೆ ಫಿಲಂಸ್‌ ಮಾಹಿತಿ ಹಂಚಿಕೊಂಡಿದೆ.

     

    View this post on Instagram

     

    A post shared by Hombale Films (@hombalefilms)

    ರಿಷಬ್ ಶೆಟ್ಟಿ ಅವರಿಗೆ ಇಂದು (ಜುಲೈ 7) ಜನ್ಮದಿನ. ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಹೊತ್ತಿನಲ್ಲೇ ‘ಕಾಂತಾರ: ಚಾಪ್ಟರ್ 1ʼ ಚಿತ್ರತಂಡದಿಂದ ಬಿಗ್‌ ಅಪ್‌ಡೇಟ್‌ ಸಿಕ್ಕಿದೆ. ಸಿನಿಮಾದ ಹೊಸ ಪೋಸ್ಟರ್​ ರಿಲೀಸ್ ಮಾಡಿರೋ ತಂಡ ವಿಶೇಷ ಮಾಹಿತಿ ಒಂದನ್ನು ನೀಡಿದೆ. ಇದು ಡಿವೈನ್‌ ಸ್ಟಾರ್‌ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.

    ಈ ಬಾರಿ ಅ.2ರ ಗಾಂಧಿ ಜಯಂತಿ ಗುರುವಾರ ಬಿದ್ದಿದೆ. ಹೀಗಾಗಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸಿನಿಮಾ ಸಹಜವಾಗಿಯೇ ಒಳ್ಳೆಯ ಕಲೆಕ್ಷನ್ ಮಾಡಲಿದೆ. ಆ ಬಳಿಕ ಅಕ್ಟೋಬರ್ ಮಧ್ಯದಲ್ಲಿ ದೀಪಾವಳಿ ಬರಲಿದೆ. ಇದು ಕೂಡ ಸಿನಿಮಾಗೆ ಸಹಕಾರಿ ಆಗಲಿದೆ. ಇಂಥ ಚಾನ್ಸ್​ನ ತಂಡ ಬಿಡಲು ರೆಡಿ ಇಲ್ಲ. ಹೀಗಾಗಿ, ಅದಕ್ಕೆ ತಕ್ಕಂತೆ ಕೆಲಸ ನಡೆಯುತ್ತಿದ್ದು, ಅ.2ರಂದೇ ಸಿನಿಮಾ ರಿಲೀಸ್‌ ತೆರೆಗೆ ಬರುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

    ರಕ್ತಸಿಕ್ತ ಅವತಾರದಲ್ಲಿ ಪೋಸ್ಟರ್‌
    ಹುಟ್ಟುಹಬ್ಬದ ದಿನವೇ ರಿಷಬ್‌ಗೆ ಭರ್ಜರಿ ಗಿಫ್ಟ್‌ ಕೊಟ್ಟಿರುವ ಚಿತ್ರತಂಡ ʻದಂತಕಥೆಯ ಮುನ್ನುಡಿ… ಆ ನುಡಿಗೊಂದು ಪರಿಚಯ… ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ.ʼ ಎನ್ನುವ ಸಾಲಿನೊಂದಿಗೆ ವಿಶೇಷ ಪೋಸ್ಟರ್‌ವೊಂದನ್ನು ಹಂಚಿಕೊಂಡಿದೆ. ಈ ಅದ್ಧೂರಿ ಪೋಸ್ಟರ್‌ನಲ್ಲಿ ರಿಷಬ್ ಶೆಟ್ಟಿ ಕೈಯಲ್ಲಿ ಕೊಡಲಿ ಹಾಗೂ ಗುರಾಣಿ ಹಿಡಿದಿದ್ದಾರೆ. ಗುರಾಣಿಗೆ ಬಾಣಗಳು ಚುಚ್ಚಿವೆ. ಹಿಂಭಾಗದಲ್ಲಿ ಬೆಂಕಿ ಇದೆ. ರಿಷಬ್ ಶೆಟ್ಟಿ ಮುಖದಲ್ಲಿ ಆಕ್ರೋಶದ ಜ್ವಾಲೆ ಎದ್ದು ಕಾಣುತ್ತಿದೆ. ರಕ್ತಸಿಕ್ತ ಅವತಾರದಲ್ಲಿ ಘರ್ಜಿಸುತ್ತಿರುವ ಡಿವೈನ್‌ಸ್ಟಾರ್‌ ಅವತಾರ ಅಭಿಮಾನಿಗಳಿಗೆ ಸಖತ್‌ ಥ್ರಿಲ್‌ ಕೊಟ್ಟಿದೆ.

    ಕೆಲ ದಿನಗಳ ಹಿಂದೆಯಷ್ಟೇ ‘ಕಾಂತಾರ: ಚಾಪ್ಟರ್ 1’ ಚಿತ್ರದ ಸೆಟ್​ನಲ್ಲಿ ಸಾಕಷ್ಟ ಅವಘಡಗಳು ಸಂಭವಿಸಿದವು. ಈ ಕಾರಣದಿಂದ ಸಿನಿಮಾ ರಿಲೀಸ್ ವಿಳಂಬ ಆಗಲಿದೆ ಎಂದು ಹೇಳಲಾಗುತ್ತಿತ್ತು. ಈ ವದಂತಿಗಳನ್ನು ತಳ್ಳಿಹಾಕಿರುವ ಚಿತ್ರತಂಡ ನಿಗದಿತ ದಿನಾಂಕದಂದೇ ಸಿನಿಮಾ ರಿಲೀಸ್‌ ಮಾಡುವುದಾಗಿ ಹೇಳಿದೆ.

  • ಹೊಂಬಾಳೆ ಸಮೂಹದ ಕೊಡುಗೆ- ಆಮ್ಲಜನಕ ಘಟಕ ಲೋಕಾರ್ಪಣೆ

    ಹೊಂಬಾಳೆ ಸಮೂಹದ ಕೊಡುಗೆ- ಆಮ್ಲಜನಕ ಘಟಕ ಲೋಕಾರ್ಪಣೆ

    – ಸಿಎಸ್‍ಆರ್ ನಿಧಿಯಡಿ 2 ಕೋಟಿ ರೂ. ನೆರವು

    ಮಂಡ್ಯ: ಕಟ್ಟಡ ನಿರ್ಮಾಣ, ಚಲನಚಿತ್ರೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ರಾಜ್ಯದ ಪ್ರತಿಷ್ಠಿತ ಹೊಂಬಾಳೆ ಸಮೂಹದ ಆರ್ಥಿಕ ನೆರವಿನಿಂದ ಕೆ.ಆರ್.ಪೇಟೆ, ಪಾಂಡವಪುರ ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ.

    ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮಂಗಳವಾರ ಈ ಆಮ್ಲಜನಕ ಘಟಕಗಳನ್ನು ಲೋಕಾರ್ಪಣೆ ಮಾಡಿದರು. ಪ್ರತಿ ನಿಮಿಷಕ್ಕೆ 500 ಲೀಟರ್ ಆಮ್ಲಜನಕವನ್ನು ಉತ್ಪಾದಿಸುವ ಈ ಆಮ್ಲಜನಕ ಘಟಕಗಳು, ಜನರಿಗೆ ಬಹಳ ಉಪಯುಕ್ತವಾಗುತ್ತವೆ. ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ವ್ಯವಸ್ಥೆಯನ್ನು ಬಲಪಡಿಸಲು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹೊಂಬಾಳೆ ಸಮೂಹದ ಕೊಡುಗೆ ಶ್ಲಾಘನೀಯ ಎಂದರು. ಇದನ್ನೂ ಓದಿ: ರಾಜ್ಯದಲ್ಲಿಂದು 851 ಹೊಸ ಕೊರೊನಾ ಕೇಸ್- 790 ಡಿಸ್ಚಾರ್ಜ್, 15 ಸಾವು

    ನಿರ್ಮಾಣ ವಲಯ ಮತ್ತು ಚಲನಚಿತ್ರೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಹೊಂಬಾಳೆ ಸಮೂಹವು ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಆರೋಗ್ಯ ಮೂಲಸೌಕರ್ಯಗಳ ವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ಸಮೂಹದ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕಿರಗಂದೂರು ಅವರು ತಮ್ಮ ತವರು ಜಿಲ್ಲೆಯ ಜನರ ಆರೋಗ್ಯ ಸೌಲಭ್ಯಕ್ಕಾಗಿ ಮುಕ್ತ ಮನಸ್ಸಿನಿಂದ ನೆರವು ನೀಡುತ್ತಿದ್ದಾರೆ. ಈಗ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮತ್ತು ಪಾಂಡವಪುರದ ಸರ್ಕಾರಿ ಆಸ್ಪತ್ರೆಗಳಿಗೆ ತಲಾ 1 ಕೋಟಿಯಂತೆ ಒಟ್ಟು 2 ಕೋಟಿ ರೂ. ವೆಚ್ಚದಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.

    ಈ ಬಗ್ಗೆ ಸಮೂಹದ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕಿರಗಂದೂರು ಮಾತನಾಡಿ, ಮಂಡ್ಯ ನನ್ನ ತವರು ಜಿಲ್ಲೆ, ಎಲ್ಲೆಡೆ ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯಗಳಿರಬೇಕು ಎಂಬುದು ನನ್ನ ಕಾಳಜಿ. ಪ್ರತಿ ಸಣ್ಣ ಸಮಸ್ಯೆಗೂ ಜನರು ಬೆಂಗಳೂರಿಗೆ ಅಥವಾ ಮೈಸೂರಿಗೆ ಓಡುವ ಪ್ರಮೇಯ ಬೇಡ. ಗ್ರಾಮೀಣ ಭಾಗದ ಜನರು ಆರೋಗ್ಯಕ್ಕಾಗಿ ದೊಡ್ಡ ನಗರಗಳನ್ನು ಅವಲಂಬಿಸುವುದನ್ನು ಕಡಿಮೆಗೊಳಿಸಬೇಕು ಎಂಬುದೇ ನನ್ನ ಆಶಯ. ಈ ಘಟಕಗಳು ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದಿಸುವ ಸಾಮಥ್ರ್ಯ ಹೊಂದಿವೆ ಎಂದು ತಿಳಿಸಿದರು.

    ಮಂಡ್ಯ ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಹೊಂಬಾಳೆ ಸಂಸ್ಥೆ ನೆರವಿನಿಂದ ಸುಮಾರು 60 ಲಕ್ಷ ರೂ.ಗಳ ವೆಚ್ಚದಲ್ಲಿ 20 ಹಾಸಿಗೆಗಳ ಅತ್ಯಾಧುನಿಕ ಐಸಿಯುವನ್ನು ಸ್ಥಾಪಿಸಲಾಗಿದ್ದು, ಸುಮಾರು 3 ತಿಂಗಳ ಹಿಂದೆ ಇದರ ಲೋಕಾರ್ಪಣೆ ಮಾಡಿದ್ದನ್ನು ಇಲ್ಲಿ ನೆನೆಯಬಹುದು.

    ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ನಾರಾಯಣಗೌಡ ಮತ್ತು ಪಾಂಡವಪುರ ಶಾಸಕ ಸಿ.ಎಸ್.ಪುಟ್ಟರಾಜು, ಹೊಂಬಾಳೆ ಸಮೂಹದ ನಿರ್ದೇಶಕ ಚೆಲುವೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮೇಶ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮುಂತಾದವರು ಹಾಜರಿದ್ದರು.