Tag: Hombal Films

  • ʻಹೊಂಬಾಳೆ ಫಿಲ್ಮ್ಸ್‌ʼ ಹೊಸ ಸಿನಿಮಾ ಅನೌನ್ಸ್: ಭರ್ಜರಿ ಅವಕಾಶ ಗಿಟ್ಟಿಸಿಕೊಂಡ `ಸೂರರೈ ಪೋಟ್ರು’ ನಿರ್ದೇಶಕಿ

    ʻಹೊಂಬಾಳೆ ಫಿಲ್ಮ್ಸ್‌ʼ ಹೊಸ ಸಿನಿಮಾ ಅನೌನ್ಸ್: ಭರ್ಜರಿ ಅವಕಾಶ ಗಿಟ್ಟಿಸಿಕೊಂಡ `ಸೂರರೈ ಪೋಟ್ರು’ ನಿರ್ದೇಶಕಿ

    ದೇಶಾದ್ಯಂತ ಸಂಚಲನ ಮೂಡಿಸುತ್ತಿರುವ `ಹೊಂಬಾಳೆ ಫಿಲ್ಮ್ಸ್‌ʼ ಸಂಸ್ಥೆ `ಕೆಜಿಎಫ್ ಚಾಪ್ಟರ್ 2′ ಯಶಸ್ಸಿನಿಂದ ಸದ್ಯ ಭಾರೀ ಸುದ್ದಿ ಮಾಡ್ತಿದೆ. ಹೀಗೆ ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡ್ತಿರೋ ಹೊಂಬಾಳೆ ಬ್ಯಾನರ್‌ನಿಂದ ನಿರ್ದೇಶಕಿ ಸುಧಾ ಕೊಂಗರ ಅವರಿಗೆ ಚಿತ್ರ ಮಾಡುವ ಅವಕಾಶ ಸಿಕ್ಕಿದೆ. ಈ ಬಗ್ಗೆ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.

    ಸಿನಿಮಾರಂಗದಲ್ಲಿ ಮೈಲಿಗಲ್ಲು ನಿರ್ಮಾಣ ಮಾಡಿರುವ ಸಂಸ್ಥೆಯಿಂದ ಅನೇಕ ಚಿತ್ರಗಳು ನಿರ್ಮಾಣವಾಗುತ್ತಿದೆ. ಈಗ ಚಿತ್ರ ಕೂಡ ಅನೌನ್ಸ್ ಮಾಡಲಾಗಿದೆ. ಮತ್ತೊಂದು ವಿಶೇಷ ಅಂದ್ರೆ, ಈ ಬಾರಿ ʻಹೊಂಬಾಳೆ ಫಿಲ್ಮ್ಸ್‌ʼ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ದೇಶನ ಮಾಡುವ ಅವಕಾಶವನ್ನು ಕಾಲಿವುಡ್ ಲೇಡಿ ನಿರ್ದೇಶಕಿ ಸುಧಾ ಕೊಂಗರ ಗಿಟ್ಟಿಸಿಕೊಂಡಿದ್ದಾರೆ.

    ನಿರ್ದೇಶಕಿ ಸುಧಾ ಕೊಂಗರ ಅವರು ಮೂಲತಃ ಆಂಧ್ರ ಪ್ರದೇಶದವರಾಗಿದ್ದು, ಅವರು ತಮಿಳು ಸಿನಿಮಾರಂಗದಲ್ಲಿ ಸಾಧನೆ ಮಾಡಿದ್ದಾರೆ. ಡಿಫರೆಂಟ್ ಸಬ್‌ಜೆಕ್ಟ್ಗಳನ್ನ ತೆರೆಯ ಮೇಲೆ ತೋರಿಸುವಲ್ಲಿ ಸೈ ಎನಿಸಿಕೊಂಡಿದ್ದಾರೆ. ಈ ಹಿಂದೆ ಸೂರ್ಯ ನಟನೆಯ `ಸೂರರೈ ಪೋಟ್ರು’ ನಿರ್ದೇಶನ ಮಾಡಿ ಗಮನ ಸೆಳೆದಿದ್ದರು. ಇದನ್ನೂ ಓದಿ:ನನ್ನಿಂದ ತಪ್ಪಾಯ್ತು – ತಂಬಾಕು ಬ್ರ್ಯಾಂಡ್ ಅಂಬಾಸಿಡರ್ ಪಟ್ಟ ತ್ಯಜಿಸಿದ ಅಕ್ಷಯ್

    ಕಾಲಿವುಡ್ ಪ್ರತಿಭಾವಂತ ನಿರ್ದೇಶಕಿ ಸುಧಾ ಕೊಂಗರ ಅವರ ಕೆಲಸ ಗುರುತಿಸಿ ಇದೀಗ ಹೊಂಬಾಳೆ ಸಂಸ್ಥೆಯಡಿ ನಿರ್ದೇಶನ ಮಾಡುವ ಅವಕಾಶವನ್ನು ಕೊಟ್ಟಿದ್ದಾರೆ. ಹಾಗಂತ ಅಧಿಕೃತವಾಗಿ `ಹೊಂಬಾಳೆ ಫಿಲ್ಮ್ಸ್‌ʼ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಸುಧಾ ಕೊಂಗರ ಅವರಿಗೆ `ಹೊಂಬಾಳೆ ಫಿಲ್ಮ್ಸ್‌’ ಮೂಲಕ ವಿಜಯ್ ಕಿರಗಂದೂರು ಸಾಥ್‌ ನೀಡಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

  • ಮತ್ತೆ ಒಂದಾಗಲಿರುವ ರಾಜಕುಮಾರ ಜೋಡಿ – ಸೆಟ್ಟೇರಲಿದೆ ಪುನೀತ್, ಸಂತೋಷ್ ಕಾಂಬಿನೇಷನ್‍ನ ಹೊಸ ಸಿನಿಮಾ

    ಮತ್ತೆ ಒಂದಾಗಲಿರುವ ರಾಜಕುಮಾರ ಜೋಡಿ – ಸೆಟ್ಟೇರಲಿದೆ ಪುನೀತ್, ಸಂತೋಷ್ ಕಾಂಬಿನೇಷನ್‍ನ ಹೊಸ ಸಿನಿಮಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆ ಮತ್ತೊಂದು ಹೊಸ ಸಿನಿಮಾಕ್ಕಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೈ ಜೋಡಿಸಲಿದ್ದಾರೆ.

    2017ರಲ್ಲಿ ತೆರೆಕಂಡ ಪುನೀತ್ ಅಭಿನಯದ ರಾಜಕುಮಾರ ಸಿನಿಮಾಕ್ಕೆ ಸಂತೋಷ್ ಆನಂದ್ ರಾಮ್ ಆ್ಯಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಸ್ಯಾಂಡಲ್‍ವುಡ್ ಬಾಕ್ಸ್ ಆಫೀಸ್‍ನಲ್ಲಿ ಸಾಕಷ್ಟು ಸದ್ದು ಮಾಡುವುದರ ಜೊತೆಗೆ ಫ್ಯಾಮಿಲಿ ಪ್ರೇಕ್ಷಕರ ಮನ ಗೆದ್ದಿತ್ತು. ನಂತರ ಯುವರತ್ನ ಸಿನಿಮಾದ ಮೂಲಕ ಸಂತೋಷ್ ಆನಂದ್ ರಾಮ್ ಪುನೀತ್‍ಗೆ ಮತ್ತೊಮ್ಮೆ ಆ್ಯಕ್ಷನ್ ಕಟ್ ಹೇಳಿದ್ದರು. ವಿಶೇಷವೆಂದರೆ ಈ ಎರಡು ಸಿನಿಮಾಗಳು ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿ ನಿರ್ಮಾಣವಾಗಿತ್ತು.

    ಇದೀಗ  ಸಂತೋಷ್ ಆನಂದ್ ರಾಮ್, ಪುನೀತ್ ಮತ್ತು ಹೊಂಬಾಳೆ ಫಿಲ್ಮ್ ಕಾಂಬಿನೇಷನ್‍ನಲ್ಲಿ ಮತ್ತೊಂದು ಹೊಸ ಸಿನಿಮಾ ಸೆಟ್ಟೇರುತ್ತಿರುವ ಬಗ್ಗೆ ಮಾಹಿತಿ ನೀಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇದನ್ನೂ ಓದಿ: ನಿವೃತ್ತ ಹವಾಲ್ದಾರ್ ಪುತ್ರನ ಆತ್ಮಹತ್ಯೆ ಪ್ರಕರಣ- ಸೈಕೋ ರೀತಿ ವರ್ತಿಸುತ್ತಿದ್ದ ವಿದ್ಯಾರ್ಥಿ

    ಈ ಕುರಿತಂತೆ ಸಂತೋಷ್ ಆನಂದ್ ರಾಮ್‍ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪುನೀತ್ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಪುನೀತ್ ಹಾಗೂ ನನ್ನ ಕಾಂಬಿನೇಷನ್‍ನ ಹೊಸ ಚಿತ್ರದ ಬಗ್ಗೆ ಅಭಿಮಾನಿಗಳು ಮತ್ತು ಪ್ರೇಕ್ಷಕರು ಯಾವಾಗಲೂ ಕೇಳುತ್ತಿದ್ದರು. ಮುಂದಿನ ವರ್ಷ ನಮ್ಮ ಕಾಂಬಿನೇಷನ್‍ನಲ್ಲಿ ಹೊಸ ಸಿನಿಮಾ ಸೆಟ್ಟೇರಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಕೊನೆಯಲ್ಲಿ, ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ. ನಿಮ್ಮ ಅಭಿಮಾನ ನಮಗೆ ಶ್ರೀ ರಕ್ಷೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಒಟ್ಟಾರೆ ರಾಜಕುಮಾರ ಹಾಗೂ ಯುವರತ್ನ ಸಿನಿಮಾದ ಮೂಲಕ ಸಕ್ಸಸ್ ಕಂಡಿದ್ದ ಈ ತಂಡ ಇದೀಗ ಮತ್ತೊಮ್ಮೆ ಒಂದಾಗಿ ಪ್ರೇಕ್ಷಕರನ್ನು ಹೇಗೆ ಮೋಡಿ ಮಾಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ಯುಪಿ ಸಿಎಂ ಆಗಬೇಕಾ, ಬೇಡ್ವಾ ಅಂತ ಪ್ರಿಯಾಂಕಾ ಗಾಂಧಿ ನಿರ್ಧರಿಸ್ತಾರೆ: ಸಲ್ಮಾನ್ ಖುರ್ಷಿದ್