Tag: holy water

  • ಅಯ್ಯಪ್ಪ ಸ್ವಾಮಿ ತೀರ್ಥದಲ್ಲಿ ಕೈ ತೊಳೆದ ಕೇರಳದ ದೇವಸ್ವಂ ಸಚಿವ

    ಅಯ್ಯಪ್ಪ ಸ್ವಾಮಿ ತೀರ್ಥದಲ್ಲಿ ಕೈ ತೊಳೆದ ಕೇರಳದ ದೇವಸ್ವಂ ಸಚಿವ

    ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೆರಳಿದ್ದ ವೇಳೆ, ಕೇರಳದ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ಅವರು ದೇವರಿಗೆ ಮತ್ತು ಹಿಂದೂ ಸಂಪ್ರದಾಯಗಳಿಗೆ ಅವಮಾನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

    ವಾರ್ಷಿಕ ಯಾತ್ರೆಗೆ ಶಬರಿಮಲೆ ದೇಗುಲದ ಭಾಗಿಲ ತೆರೆದ ದಿನ ಸಚಿವ ರಾಧಾಕೃಷ್ಣನ್ ಅಯ್ಯಪ್ಪ ದೇಗುಲಕ್ಕೆ ತೆರಳಿದ್ದರು. ಈ ವೇಳೆ ಅವರು ಪೂಜೆ ವೇಳೆ ದೇವರಿಗೆ ಕೈಮುಗಿದಿರಲಿಲ್ಲ. ಜೊತೆಗೆ ಬಳಿಕ ಅರ್ಚಕರು ತೀರ್ಥ ನೀಡಿದಾಗ ಅದನ್ನು ಸೇವಿಸುವ ಬದಲು ಕೈಗೆ ಒರೆಸಿಕೊಂಡು ಸುಮ್ಮನಾಗಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಸಚಿವರ ವರ್ತನೆ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಅತ್ಯಾಚಾರಿಗಳ ಲೈಂಗಿಕ ಶಕ್ತಿಗೆ ಕತ್ತರಿ ಶಿಕ್ಷೆ

    ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, ನಾನು ದಿನವೂ ನನ್ನ ತಾಯಿಗೆ ಕೈ ಮುಗಿಯುವುದಿಲ್ಲ ಎಂದ ಮಾತ್ರಕ್ಕೆ ನನಗೆ ನನ್ನ ತಾಯಿಯ ಮೇಲೆ ಗೌರವವಿಲ್ಲ ಎಂದರ್ಥವಲ್ಲ. ನಾನು ಕೆಲವೊಂದು ಪದಾರ್ಥಗಳನ್ನು ಸೇವಿಸುವುದಿಲ್ಲ. ಭಕ್ತಿಯ ಹೆಸರಿನಲ್ಲಿ ಯಾರೇ ಒತ್ತಾಯಿಸಿದರೂ ನಾನು ಅದನ್ನು (ತೀರ್ಥ) ಸೇವಿಸುವುದಿಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಸೋನಿಯಾ ಮಗಳು, ಉಪೇಂದ್ರ ಪತ್ನಿ ಹೆಸರು ಪ್ರಿಯಾಂಕಾ ಆದ್ರೆ ಖರ್ಗೆ ಪುತ್ರ ಯಾವ ಪ್ರಿಯಾಂಕ: ಪ್ರತಾಪಸಿಂಹ ಪ್ರಶ್ನೆ

  • ರಾಮಮಂದಿರಕ್ಕಾಗಿ 151 ನದಿಗಳ ನೀರು ಸಂಗ್ರಹಿಸಿದ ಸೋದರರು

    ರಾಮಮಂದಿರಕ್ಕಾಗಿ 151 ನದಿಗಳ ನೀರು ಸಂಗ್ರಹಿಸಿದ ಸೋದರರು

    ನವದೆಹಲಿ: ಸೋದರರಿಬ್ಬರು ರಾಮಮಂದಿರ ನಿರ್ಮಾಣಕ್ಕಾಗಿ 151 ನದಿಗಳ ಸಂಗ್ರಹಿಸಿದ್ದಾರೆ.

    1968 ರಿಂದ ಶ್ರೀಲಂಕಾದ 16 ಸ್ಥಳಗಳಿಂದ 151 ನದಿಗಳ ನೀರು ಸಂಗ್ರಹಿಸಿದ್ದೇವೆ. ಇವುಗಳಲ್ಲಿ 8 ದೊಡ್ಡ ನದಿಗಳು, 3 ಸಮುದ್ರ ಮತ್ತು ಮಣ್ಣನ್ನು ಸಂಗ್ರಹಿಸಿದ್ದೇವೆ ಎಂದು ರಾಧೆ ಶ್ಯಾಮ್ ಪಾಂಡೆ ಹೇಳುತ್ತಾರೆ.

    ರಾಮ ಮಂದಿರದ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದ್ದು, ಕೋಟ್ಯಾಂತರ ಭಕ್ತರು ಕಾಯುತ್ತಿದ್ದಾರೆ. ರಾಮ ಮಂದಿರ ಭೂಮಿ ಪೂಜೆಗಾಗಿ ದೇಶದ ವಿವಿಧ ಪುಣ್ಯ ಕ್ಷೇತ್ರಗಳಿಂದ ಪವಿತ್ರ ಜಲ ಮತ್ತು ಮಣ್ಣು ಸಂಗ್ರಹಿಸಿ ಅಯೋಧ್ಯೆಗೆ ತಲುಪಿಸಲಾಗುತ್ತಿದೆ. ಕೊರೊನಾ ಆತಂಕದಿಂದ ಬಹುತೇಕರು ತಾವಿದ್ದ ಸ್ಥಳದಿಂದಲೇ ಮಂತ್ರ ಪಠಣೆಗೆ ಮುಂದಾಗ್ತಿದ್ದಾರೆ.

    ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಛತ್ತೀಸ್‍ಗಢದ ಮುಸ್ಲಿಂದ ವ್ಯಕ್ತಿ ಫಯಾಜ್ ಖಾನ್ ಕಾಲ್ನಡಿಗೆಯಲ್ಲಿ ಪ್ರಯಾಣ ಆರಂಭಿಸಿದ್ದಾರೆ.  ಗಮನಾರ್ಹ ವಿಷಯವೆಂದರೆ ಭಗವಾನ್ ರಾಮನ ತಾಯಿ ಕೌಸಲ್ಯೆ ಹುಟ್ಟಿದ್ದು ಛತ್ತೀಸ್‍ಗಢದ ಚಂದ್ಖುರಿಯಲ್ಲಿ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಇದೇ ಗ್ರಾಮದ ನಿವಾಸಿ ಮೊಹಮ್ಮದ್ ಫಯಾಝ್ ಖಾನ್ ಅವರು ಶ್ರೀರಾಮನ ಪರಮ ಭಕ್ತನಾಗಿದ್ದಾರೆ.

    ನನ್ನ ಹೆಸರು ಹಾಗೂ ಧರ್ಮದಲ್ಲಿ ನಾನೊಬ್ಬ ಮುಸ್ಲಿಂ. ಆದರೆ ನನ್ನ ದೇವರು ರಾಮ. ನಾನು ರಾಮನ ಪರಮಭಕ್ತನಾಗಿದ್ದೇನೆ. ನಮ್ಮ ಪೂರ್ವಜರ ಬಗ್ಗೆ ತಿಳಿದುಕೊಂಡರೆ ಅವರು ಹಿಂದೂಗಳಾಗಿರಬಹುದು. ಅಲ್ಲದೆ ಅವರ ಹೆಸರು ರಾಮ್‍ಲಾಲ್ ಅಥವಾ ಶ್ಯಾಮ್‍ಲಾಲ್ ಆಗಿರಬಹುದು. ನಾವು ಚರ್ಚ್ ಅಥವಾ ಮಸೀದಿಗೇ ಹೋಗಲಿ ಆದರೆ ನಾವೆಲ್ಲರೂ ಹಿಂದೂ ಮೂಲವನ್ನು ಹೊಂದಿದ್ದೇವೆ ಎಂದು ಫಯಾಜ್ ಖಾನ್ ಹೇಳುತ್ತಾರೆ.