Tag: holy bath

  • ಮಹಾ ಕುಂಭ ಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಬೆಳಗಾವಿಯ 7 ಮಂದಿ ದುರ್ಮರಣ

    ಮಹಾ ಕುಂಭ ಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ – ಬೆಳಗಾವಿಯ 7 ಮಂದಿ ದುರ್ಮರಣ

    ಬೆಳಗಾವಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ (Maha Kumbh 2025) ಮುಕ್ತಾಯಗೊಳ್ಳಲು ಇನ್ನೆರಡು ದಿನಗಳಷ್ಟೇ ಬಾಕಿಯಿದೆ. ಈ ಹಿನ್ನೆಲೆ ಪುಣ್ಯಸ್ನಾನಕ್ಕೆ (Holy Bath) ತೆರಳುತ್ತಿದ್ದ ಬೆಳಗಾವಿ ಗೋಕಾಕ್‌ ನಗರದ 7 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಮಧ್ಯ ಪ್ರದೇಶದ (Madhya Pradesh) ಜಬಲಪೂರ ಪೆಹರಾ ಟೋಲ್ ನಾಕಾ ಬಳಿ ಬೆಳಗಿನ ಜಾವ ಕ್ರೂಸರ್‌ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. 7 ಮಂದಿ ಕನ್ನಡಿಗರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸುಳ್ಳಾಯ್ತು ಐಐಟಿ ಬಾಬಾ ಭವಿಷ್ಯ – ಪಾಕ್‌ ವಿರುದ್ಧ ಗೆದ್ದು ಬೀಗಿದ ಭಾರತ

    ಕಳೆದ ಎರಡು ದಿನಗಳ ಹಿಂದೆ ಗೋಕಾಕ್‌ ನಗರದಿಂದ 10 ಮಂದಿ ಕ್ರೂಸರ್‌ನಲ್ಲಿ ಮಹಾ ಕುಂಭಮೇಳಕ್ಕೆ ಹೊರಟಿದ್ದರು. ಇಂದು ಮುಂಜಾನೆ ಮಧ್ಯಪ್ರದೇಶ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ವ್ಯಕ್ತಿಯೊಬ್ಬನಿಂದ ಕಿರುಕುಳ ಆರೋಪ – ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಆತ್ಮಹತ್ಯೆ

    https://youtu.be/9aRZwimkiN0?si=1pIJY_bEtIdzMSF8

  • ಧಾರ್ಮಿಕ ವಿಚಾರದಲ್ಲೂ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ: ಪ್ರಕಾಶ್‌ ರಾಜ್‌

    ಧಾರ್ಮಿಕ ವಿಚಾರದಲ್ಲೂ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ: ಪ್ರಕಾಶ್‌ ರಾಜ್‌

    ಮಂಗಳೂರು: ಧಾರ್ಮಿಕ ವಿಚಾರದಲ್ಲಿ, ಪೂಜೆ, ಪುಣ್ಯಸ್ನಾನ ಆಚರಣೆಗಳಲ್ಲಿ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ ಎಂದು ನಟ ಪ್ರಕಾಶ್‌ ರಾಜ್‌ (Prakash Raj) ಹೇಳಿದ್ದಾರೆ.

    ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾ ಕುಂಭಮೇಳದಲ್ಲಿ (Maha Kumbha Mela) ತಮ್ಮ ಎಐ ಭಾವಚಿತ್ರ ವೈರಲ್‌ ಆದ ಬಗ್ಗೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಸ್ವಗ್ರಾಮದ ರೇಷ್ಮೆ ಬೆಳೆಗಾರರ ಸಹಕಾರ ಸಂಘ ಚುನಾವಣೆಯಲ್ಲಿ ಡಿಕೆಶಿ ಮತದಾನ

    ಮಹಾ ಕುಂಭಮೇಳಕ್ಕೆ ಹೋಗಲು ನನ್ನ ಕೆಲವು ಗೆಳೆಯರು ಪರ್ಮಿಷನ್‌ ಕೊಡಿಸಿ ಅಂತ ಕೇಳೋದಕ್ಕೆ ಕಾಲ್‌ ಮಾಡ್ತಾರೆ. ನಾನು ಧರ್ಮ ವಿರೋಧಿ ಅಲ್ಲ, ಏಕೆಂದರೆ ಅದು ಅವರವರ ನಂಬಿಕೆ. ಅದರಲ್ಲಿ ನಂಬಿಕೆ ಇಲ್ಲದಿರಬಹುದು, ಸೌಹಾರ್ದತೆಗೆ ಬೆಲೆ ಕೊಡೋನು ನಾನು. ಆದ್ರೆ ಧಾರ್ಮಿಕ ವಿಚಾರದಲ್ಲೂ, ಪೂಜೆ, ಪುಣ್ಯಸ್ನಾನ ಇಂತಹ ಆಚರಣೆಗಳಲ್ಲೂ ರಾಜಕಾರಣ ಎಳೆದುತರುವವರು ನಿಜವಾದ ಹಿಂದೂಗಳಲ್ಲ ಎಂದು ನುಡಿದರು.

    ಒಬ್ಬ ವ್ಯಕ್ತಿ ಸರ್ಕಾರವನ್ನ ಪ್ರಶ್ನಿಸಿದ್ರೆ ಅವನ ಬಗ್ಗೆ ವಾಟ್ಸಪ್‌ ಯೂನಿವರ್ಸಿಟಿಗಳಲ್ಲಿ ತಪ್ಪು ಮಾಹಿತಿ ಹರಡಲಾಗುತ್ತದೆ. ಅಂತಹದ್ದೆಲ್ಲವನ್ನ ಪ್ರಶಾಂತ್ ಸಂಬರಗಿ‌ ಅಂತವರು ಮಾಡುತ್ತಿದ್ದಾರೆ. ಅವರ ಮೇಲೆ ಈಗಾಗಲೇ ಕೇಸ್‌ ಫೈಲ್‌ ಮಾಡಿದ್ದೇವೆ. AI ನಂತಹ ಅದ್ಭುತ ತಂತ್ರಜ್ಞಾನವನ್ನ ಮಾನವ ವಿಕಾಸಕ್ಕೆ ಬಳಸಬೇಕು, ಆದ್ರೆ ಇಂತಹ ಕೆಲಸಗಳಿಗೆ ಬಳಸುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮೈಸೂರು: ನಟ ಧನಂಜಯ್‌, ಡಾಕ್ಟರ್‌ ಧನ್ಯತಾ ಜೋಡಿ ಮದುವೆ – ನೆರವೇರಿದ ವಿವಿಧ ಶಾಸ್ತ್ರಗಳು

  • ಖರ್ಗೆ ಕೂಡ ಗಂಗಾ ಸ್ನಾನ ಮಾಡಬೇಕಾಗುತ್ತೆ – ಯೋಗಿ ಆದಿತ್ಯನಾಥ್‌

    ಖರ್ಗೆ ಕೂಡ ಗಂಗಾ ಸ್ನಾನ ಮಾಡಬೇಕಾಗುತ್ತೆ – ಯೋಗಿ ಆದಿತ್ಯನಾಥ್‌

    – ರಝಾಕರು ತಮ್ಮ ಕುಟುಂಬವನ್ನು ನಡೆಸಿಕೊಂಡ ರೀತಿ ಬಹಿರಂಗಪಡಿಸಲಿ ಎಂದು ಸವಾಲ್‌

    ಲಕ್ನೋ: ಮುಂದೊಂದು ದಿನ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕೂಡ ಗಂಗಾ ಸ್ನಾನ ಮಾಡಲೇಬೇಕಾಗುತ್ತದೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಭವಿಷ್ಯ ನುಡಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ (Uttar Pradesh) ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅವರು, ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಬಡತನ ಹೋಗುವುದಿಲ್ಲ, ಹೊಟ್ಟೆ ತುಂಬಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಮುಂದೊಂದು ದಿನ ಖರ್ಗೆ ಕೂಡ ಗಂಗಾ ಸ್ನಾನ ಮಾಡಲೇಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 3ನೇ ಮದ್ವೆಗೆ ಸಜ್ಜಾದ ರಾಖಿ ಸಾವಂತ್‌..? – ಪಾಕಿಸ್ತಾನದ ಪೊಲೀಸ್ ಆಫೀಸರ್ ಜೊತೆ ವಿವಾಹ

    ಖರ್ಗೆ ಅವರು ಈಗ ಏನೇನೋ ಹೇಳ್ತಿದ್ದಾರೆ. ಆದ್ರೆ ಯಾವುದೇ ಒಬ್ಬ ವ್ಯಕ್ತಿಗೆ ವಯಸ್ಸು ಜಾಸ್ತಿ ಆಗುತ್ತಿದ್ದಂತೆ ಸತ್ಯಕ್ಕೆ ಹತ್ತಿರವಾಗುತ್ತಾನೆ. ಆದ್ರೆ ಖರ್ಗೆ ಅವರು ರಾಜಕೀಯ ಸ್ವಾರ್ಥಕ್ಕಾಗಿ ಸತ್ಯವನ್ನು ಮುಚ್ಚಿಡುತ್ತಿದ್ದಾರೆ. ಅಂತಹವರೊಂದಿಗೆ ಪ್ರಯಾಗ್‌ರಾಜ್‌ನ ಸತ್ಯಗಳನ್ನು ಚರ್ಚಿಸಿದ್ರೆ ಅದು ನಾನು ನನಗೆ ಅನ್ಯಾಯ ಮಾಡಿಕೊಂಡಂತೆ ಆಗುತ್ತದೆ ಎಂದಿದ್ದಾರೆ.

    ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ರಝಾಕರು ತಮ್ಮ ಕುಟುಂಬವನ್ನು ಹೇಗೆ ನಡೆಸಿಕೊಂಡರು ಎಂಬ ಸತ್ಯವನ್ನು ಖರ್ಗೆ ಬಹಿರಂಗಪಡಿಸಬೇಕು. ಸತ್ಯ ಒಪ್ಪಿಕೊಳ್ಳುವ ದಿನ ಹತ್ತಿರವಾಗುತ್ತಿದೆ ಎಂದು ಸಹ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಇದನ್ನೂ ಓದಿ: Maha Kumbhamela | ಜ.29 ರಂದು 10 ಕೋಟಿ ಜನರಿಂದ ಅಮೃತ ಸ್ನಾನ – ಭಕ್ತರ ಅನುಕೂಲಕ್ಕಾಗಿ 60 ವಿಶೇಷ ರೈಲುಗಳ ಓಡಾಟ

    ಈ ಹಿಂದೆಯೂ ಯೋಗಿ ಆದಿತ್ಯನಾಥ್‌, ರಝಾಕರ್‌ಗಳಿಂದಲೇ ಮಲ್ಲಿಕಾರ್ಜುನ ಖರ್ಗೆ ಕುಟುಂಬದವರ ಹತ್ಯೆ ನಡೆದಿದೆ. ಆದರೆ ಮುಸ್ಲಿಂ ವೋಟ್ ಬ್ಯಾಂಕ್‌ಗಾಗಿ ಖರ್ಗೆಯವರು ಏನೂ ಮಾತನಾಡುತ್ತಿಲ್ಲ ಎಂದು ಹೇಳಿದ್ದರು.

    ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನನ್ನ ಮೇಲೆ ಅನಗತ್ಯವಾಗಿ ಕೋಪ ಮಾಡಿಕೊಳ್ಳುತ್ತಿದ್ದಾರೆ. ನಾನು ಅವರ ವಯಸ್ಸನ್ನು ಗೌರವಿಸುತ್ತೇನೆ. ಆದರೆ ನನ್ನ ಮೇಲೆ ಕೋಪ ಮಾಡಿಕೊಳ್ಳುವ ಬದಲು ಅವರು ಹೈದರಾಬಾದ್ ನಿಜಾಮಾನ ಮೇಲೆ ಆಕ್ರೋಶ ಹೊರಹಾಕಬೇಕು. ಖರ್ಗೆಯವರ ಗ್ರಾಮವಾದ ವಾರ್ವಟ್ಟಿ ಒಮ್ಮೆ ಹೈದರಾಬಾದ್‌ನ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಆ ಸಮಯದಲ್ಲಿ ಬ್ರಿಟಿಷರು ರಾಷ್ಟ್ರವನ್ನು ವಿಭಜಿಸಲು ಮುಸ್ಲಿಂ ಲೀಗ್ ಅನ್ನು ಪ್ರೋತ್ಸಾಹಿಸಿದರು. ಅದಕ್ಕೆ ಕಾಂಗ್ರೆಸ್ ನಾಯಕತ್ವವು ಶರಣಾಯಿತು. ಸ್ವಾತಂತ್ರ‍್ಯದ ನಂತರ ನಿಜಾಮರಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಯಿತು ನಂತರ ಹಿಂಸಾಚಾರ ಆರಂಭವಾಯಿತು. ನಿಜಾಮರು ನಿಮ್ಮ ಗ್ರಾಮವನ್ನು ಸುಟ್ಟುಹಾಕಿದರು.

    ಹಿಂದೂಗಳನ್ನು ಬರ್ಬರವಾಗಿ ಕೊಂದರು ಮತ್ತು ನಿಮ್ಮ ತಾಯಿ, ಸಹೋದರಿ, ನಿಮ್ಮ ಕುಟುಂಬ ಸದಸ್ಯರನ್ನು ಸುಟ್ಟುಹಾಕಿದರು. ಈ ವಿಚಾರ ಖರ್ಗೆ ಅವರಿಗೆ ಗೊತ್ತಿದ್ದರೂ ಬಹಿರಂಗವಾಗಿ ಹೇಳಿಕೆ ನೀಡುತ್ತಿಲ್ಲ. ಮುಸ್ಲಿಂ ವೋಟ್‌ಬ್ಯಾಂಕ್‌ಗಾಗಿ ಅವರು ಎಲ್ಲವನ್ನೂ ಮರೆಯುತ್ತಾರೆ ಎಂದು ತಿರುಗೇಟು ನೀಡಿದ್ದರು.

  • ಮಹಾ ಕುಂಭಮೇಳ – ಬೆಂಗಳೂರು To ಪ್ರಯಾಗ್‌ರಾಜ್‌ ವಿಮಾನ ಟಿಕೆಟ್‌ ದರ ದುಬಾರಿಯೋ ದುಬಾರಿ

    ಮಹಾ ಕುಂಭಮೇಳ – ಬೆಂಗಳೂರು To ಪ್ರಯಾಗ್‌ರಾಜ್‌ ವಿಮಾನ ಟಿಕೆಟ್‌ ದರ ದುಬಾರಿಯೋ ದುಬಾರಿ

    – ಬುಧವಾರ ತ್ರಿವೇಣಿ ಸಂಗಮದಲ್ಲಿ ಭಕ್ತರಿಂದ ಮೌನಿ ಅಮವಾಸ್ಯೆ ಸ್ನಾನ
    – 10 ರಿಂದ 15 ಕೋಟಿಗೂ ಹೆಚ್ಚು ಜನ ಸೇರುವ ನಿರೀಕ್ಷೆ

    ಬೆಂಗಳೂರು: 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ (Maha Kumbh 2025) ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಕುಂಭಮೇಳವನ್ನ ಕಣ್ತುಂಬಿಕೊಳ್ಳಲು ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಪ್ರಯಾಗ್‌ರಾಜ್‌ಗೆ (Prayagraj) ಭೇಟಿ ಕೊಡ್ತಿದ್ದಾರೆ.

    ಬುಧವಾರ (ನಾಳೆ) ವಿಶೇಷವಾದ ಮೌನಿ ಅಮವಾಸ್ಯೆ ದಿನವಾಗಿರೋದ್ರಿಂದ ಪ್ರಯಾಗ್‌ರಾಜ್‌ನಲ್ಲಿರೋ ತ್ರಿವೇಣಿ ಸಂಗಮದಲ್ಲಿ ಸ್ನಾನ (Holy Bath) ಮಾಡಿದ್ರೇ ಎಲ್ಲವೂ ಒಳ್ಳೆಯದಾಗುತ್ತೆ, ಆರೋಗ್ಯ ವೃದ್ಧಿಸುತ್ತೆ, ಕಷ್ಟಕಾರ್ಪಣ್ಯಗಳು ನಶಿಸುತ್ತದೆ ಅನ್ನೋ ನಂಬಿಕೆ ಇದೆ. ಹೀಗಾಗಿ ಬುಧವಾರ ಕುಂಭಮೇಳದಲ್ಲಿ 10 ರಿಂದ 15 ಕೋಟಿ ಜನ ಸೇರುವ ನಿರೀಕ್ಷೆ ಇದೆ.

    ಬುಧವಾರ ಪ್ರಯಾಗ್‌ರಾಜ್‌ಗೆ ಹೋಗಲು ವಿಮಾನದ ಟಿಕೆಟ್‌ ಬುಕ್ (Flight Ticket Book) ಮಾಡಲು ಹೊರಟವರಿಗೆ ಡಬಲ್ ಶಾಕ್ ಆಗಿದೆ. ಹೌದು.. ಬುಧವಾರ ಬೆಂಗಳೂರಿನಿಂದ ಪ್ರಯಾಗ್‌ರಾಜ್‌ಗಿರುವ ಫ್ಲೈಟ್‌ ಟಿಕೆಟ್‌ ದರ 30 ರಿಂದ 39,000 ವರೆಗೆ ಏರಿಕೆಯಾಗಿದ್ದು, ಬೆಂಗಳೂರಿನಿಂದ ಪ್ರಯಾಗ್‌ರಾಜ್‌ಗೆ ಹೋಗುವ ಅಷ್ಟು ವಿಮಾನಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ.

    ಇದರಿಂದ ಟಿಕೆಟ್ ದರ ಹೆಚ್ಚಾಗಿದರೂ ಪರವಾಗಿಲ್ಲ, ಇತಂಹ ಮಹಾಪುಣ್ಯದ ದಿನ ಹೇಗಾದರೂ ಮಾಡಿ ಕುಂಭಮೇಳದ ಮಹಾ ಸ್ನಾನ ಮಾಡಬೇಕು ಅಂತಿದ್ದವರಿಗೆ ಫೈಟ್‌ಗಳು ಹೌಸ್ ಪುಲ್ ಆಗಿರೋದು ಬೇಸರ ತಂದಿದೆ.

    ವಿಮಾನ ಟಿಕೆಟ್‌ ದರ ಹೇಗಿದೆ?
    * ಬೆಂಗಳೂರು ಟು ಪ್ರಯಾಗ್ ರಾಜ್

    • ಸಾಮಾನ್ಯ ದಿನಗಳ ದರ 4 ರಿಂದ 8 ಸಾವಿರ ರೂ.
    • ಇಂದಿನ ದರ- 30 ರಿಂದ 45 ಸಾವಿರ ರೂ.
    • ಫೆಬ್ರವರಿ 26ರ ವರಗೆ ಕನಿಷ್ಠ ದರ 24 ಸಾವಿರ ರೂ.

    ದೆಹಲಿಯಿಂದ ಪ್ರಯಾಗ್‌ರಾಜ್‌ಗೆ

    • ಸಾಮಾನ್ಯ ದಿನಗಳ ದರ – 3 ರಿಂದ 6 ಸಾವಿರ ರೂ.
    • ಇಂದಿನ ದರ-20 ರಿಂದ 30 ಸಾವಿರ ರೂ.
    • ಫೆಬ್ರವರಿ 26ರ ವರೆಗೆ 18 ರಿಂದ 24 ಸಾವಿರದ ವರೆಗೆ ರೂ.

  • ಮಹಾ ಕುಂಭಮೇಳದಲ್ಲಿ ಆರೂವರೆ ಕೋಟಿ ಭಕ್ತರ ಪುಣ್ಯಸ್ನಾನ

    ಮಹಾ ಕುಂಭಮೇಳದಲ್ಲಿ ಆರೂವರೆ ಕೋಟಿ ಭಕ್ತರ ಪುಣ್ಯಸ್ನಾನ

    ಪ್ರಯಾಗ್‌ರಾಜ್‌: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಗಂಗಾ ತೀರದಲ್ಲಿ ಮಹಾ ಕುಂಭಮೇಳದ (Mahakumbh 2025) ಮೂರನೇ ದಿನವೂ ಭಕ್ತಸಾಗರ (Devotees) ತುಂಬಿ ತುಳುಕಿದೆ.

    ಈವರೆಗೂ ಆರೂವರೆ ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ (Holy bath) ಮಾಡಿದ್ದಾರೆ. ಮೊದಲ ದಿನ 1.75 ಕೋಟಿ ಮಂದಿ, 2ನೇ ದಿನ 3.50 ಕೋಟಿ ಮಂದಿ, ಮೂರನೇ ದಿನವಾದ ಇಂದು ಕೂಡ 1 ಕೋಟಿಗೂ ಹೆಚ್ಚು ಮಂದಿ ಕೊರೆವ ಚಳಿ ಲೆಕ್ಕಿಸದೇ ಅಮೃತ ಸ್ನಾನದಲ್ಲಿ ತೊಡಗಿದ್ದು ಕಂಡುಬಂತು.

    ಮಹಾಕುಂಭಮೇಳದಲ್ಲಿ ಪಾಲ್ಗೊಂಡಿರುವ ವಿದೇಶಿ ಭಕ್ತೆಯೊಬ್ಬರು, ಮಡಿಲಲ್ಲಿ ಗಣೇಶನ ವಿಗ್ರಹವನ್ನು ಹೊಂದಿರುವ ಫೋಟೋ ವೈರಲ್ ಆಗಿದೆ. ಬ್ಯೂಟಿ ಆಫ್ ಸನಾತನ್, ಜೈ ಗಣೇಶ್ ಎಂಬ ಕಾಮೆಂಟ್‌ಗಳು ಹೊರಹೊಮ್ಮಿದೆ. ಇನ್ನೂ 2ನೇ ದಿನ ಅಸ್ವಸ್ಥಗೊಂಡಿದ್ದ ಸ್ಟೀವ್ ಜಾಬ್ಸ್ ಪತ್ನಿ ಕಮಲಾ ಚೇತರಿಸಿಕೊಂಡಿದ್ದು, ಗಂಗೆಯಲ್ಲಿ ಮಿಂದೆದ್ದಿದ್ದಾರೆ ಎಂದು ಯುಪಿ ಆಡಳಿತ ತಿಳಿಸಿದೆ.

  • ಮಂತ್ರಾಲಯದಲ್ಲಿ ಸಂಭ್ರಮದ ಸಂಕ್ರಾಂತಿ- ತುಂಗಭದ್ರೆಯಲ್ಲಿ ಮಿಂದೇಳುತ್ತಿರುವ ಭಕ್ತರು

    ಮಂತ್ರಾಲಯದಲ್ಲಿ ಸಂಭ್ರಮದ ಸಂಕ್ರಾಂತಿ- ತುಂಗಭದ್ರೆಯಲ್ಲಿ ಮಿಂದೇಳುತ್ತಿರುವ ಭಕ್ತರು

    ರಾಯಚೂರು: ವರ್ಷದ ಮೊದಲನೇ ಹಬ್ಬ ಮಕರ ಸಂಕ್ರಾಂತಿಯನ್ನ ರಾಯಚೂರಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿ ದಡದಲ್ಲಿ ಜನ ಪುಣ್ಯಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಇನ್ನೂ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಮಂತ್ರಾಲಯ ಮಠದಲ್ಲೂ ಸಂಕ್ರಾಂತಿ ಸಂಭ್ರಮ ಜೋರಾಗಿದೆ.

    ಮಂತ್ರಾಲಯದಲ್ಲಿ ತುಂಗಸ್ನಾನಕ್ಕಾಗಿ ರಾಜ್ಯದ ಮೂಲೆ ಮೂಲೆಯಿಂದ ಭಕ್ತರ ದಂಡು ಹರಿದು ಬಂದಿದೆ. ತುಂಗಭದ್ರೆಗೆ ಪೂಜೆಯನ್ನ ಸಲ್ಲಿಸಿ ಭಕ್ತರು ಪಾವನರಾಗುತ್ತಿದ್ದಾರೆ. ನದಿಯಲ್ಲಿ ದೀಪಗಳನ್ನ ಹಚ್ಚಿ ತೇಲಿಬಿಡುವ ಮೂಲಕ ಭಕ್ತಿ ಸಮರ್ಪಿಸುತ್ತಿದ್ದಾರೆ. ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಈ ದಿನ ಪುಣ್ಯ ಸ್ನಾನ ಮಾಡಿದರೆ ಪಾಪಕರ್ಮಗಳೆಲ್ಲಾ ಕರಗಿ ಹೋಗುತ್ತವೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿ ತುಂಗಭದ್ರಾ ಸ್ನಾನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

    ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದು, ಭಕ್ತರು ಸ್ನಾನಕ್ಕಾಗಿ ಪರದಾಡುವ ಪರಸ್ಥಿತಿಯೂ ನಿರ್ಮಾಣವಾಗಿದೆ. ಆದರೂ ನಿಂತ ನೀರಿನಲ್ಲೆ ಅರಗೋಲಿನಲ್ಲಿ ತೆರಳಿ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ. ಹಬ್ಬದ ವಿಶೇಷ ಖಾದ್ಯಗಳನ್ನ ತಂದು ನದಿದಡದಲ್ಲಿ ಮನೆ ಮಂದಿಯಲ್ಲಾ ಕುಳಿತು ಊಟ ಮಾಡುತ್ತ ಸಂಕ್ರಾಂತಿ ಹಬ್ಬದ ಸವಿ ಸವಿಯುತ್ತಿದ್ದಾರೆ.

  • ದೀಪಾವಳಿಯಂದು ಎಣ್ಣೆ ಸ್ನಾನ ಯಾಕೆ ಮಾಡುತ್ತಾರೆ? ಮಹತ್ವ ಏನು?

    ದೀಪಾವಳಿಯಂದು ಎಣ್ಣೆ ಸ್ನಾನ ಯಾಕೆ ಮಾಡುತ್ತಾರೆ? ಮಹತ್ವ ಏನು?

    ದೀಪಾವಳಿಯನ್ನು ಒಟ್ಟು ಮೂರು ದಿನ ಆಚರಿಸಲಾಗುತ್ತದೆ. ಮೊದಲ ದಿನ ಮನೆಯರೆಲ್ಲರೂ ಎಣ್ಣೆ ಸ್ನಾನ ಮಾಡಲೇಬೇಕು. ದೀಪಾವಳಿಯ ಮೊದಲ ದಿನ ನರಕ ಚರ್ತುದಶಿಯನ್ನು ಕೆಲವು ಭಾಗಗಳಲ್ಲಿ ನೀರು ತುಂಬುವ ಹಬ್ಬ ಅಂತಲೂ ಕರೆಯುತ್ತಾರೆ. ಮನೆಯ ಎಲ್ಲ ಪಾತ್ರೆಗಳಲ್ಲಿ ಅಂದು ಮಡಿಯಿಂದ ನೀರು ತುಂಬಲಾಗುತ್ತದೆ.

    ಎಣ್ಣೆ ಸ್ನಾನ ಮಾಡುವ ಮಂದಿಗೆ ಯಾಕೆ ಈ ದಿನ ಎಣ್ಣೆ ಸ್ನಾನ ಮಾಡಲಾಗುತ್ತದೆ? ಬೇರೆ ಹಬ್ಬದ ದಿನದಂದು ಯಾಕೆ ಎಣ್ಣೆ ಸ್ನಾನ ಇಲ್ಲ ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಪುರಾಣ ಕಥೆಯಲ್ಲಿ ಸಿಗುತ್ತದೆ.

    ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿ ಪ್ರಜೆಗಳನ್ನು ಅತ್ಯಂತ ಯೋಗಕ್ಷೇಮದಿಂದ ನೋಡಿಕೊಳ್ಳುತ್ತಿರುತ್ತಾನೆ. ರಾಕ್ಷಸ ರಾಜನಾದರೂ ದಾನ ಧರ್ಮದಿಂದ ಹೆಸರುವಾಸಿಯಾಗಿದ್ದ ಬಲಿ ಮಹಾರಾಜನಿಗೆ ತನ್ನ ರೀತಿಯಲ್ಲಿ ಬೇರೆ ಯಾರು ಪ್ರಜೆಗಳನ್ನು ನೋಡಿಕೊಳ್ಳುವುದಿಲ್ಲ ಎಂಬ ಅಹಂಕಾರ ಬರುತ್ತದೆ. ಈತನನ್ನು ಹೇಗಾದರೂ ಮಾಡಿ ಸಂಹಾರ ಮಾಡಬೇಕೆಂದು ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ.

    ದೇವತೆಗಳಿಗೆ ಅಭಯನ ನೀಡಿದ ವಿಷ್ಣು ವಾಮನನ (ಬಾಲಕ) ರೂಪದಲ್ಲಿ ಬಲಿ ಮಹಾರಾಜನ ಬಳಿ ಬರುತ್ತಾನೆ. ವಾಮನ ಮಹಾರಾಜನ ಬಳಿ,”ತನ್ನ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ನೀಡಬೇಹುದೇ?” ಎಂದು ಕೇಳುತ್ತಾನೆ. ಇದನ್ನೂ ಓದಿ: ದೀಪಾವಳಿಯ ದೀಪಾರಾಧನೆ-ಮನೆಯ ಮುಂಭಾಗ ಇರಿಸುವ ದೀಪಗಳೆಷ್ಟಿರಬೇಕು?

    ಪ್ರಜಾಪರಿಪಾಲನೆಯಲ್ಲಿ ಯಶಸ್ವಿಕಂಡಿರುವ ನನಗೆ ಈ ಪುಟ್ಟ ಬಾಲಕನ ಬೇಡಿಕೆಯನ್ನು ಈಡೇರಿಸುವ ಯೋಗ್ಯತೆ ನನಗಿಲ್ವಾ ಎಂಬ ಅಹಂಕಾರದಿಂದ ಬಲೀಂದ್ರ ಮಹಾರಾಜ ವಾಮನನಿಗೆ,”ನೀನು ಕೇಳಿದ ಮೂರು ಹೆಜ್ಜೆ ಊರುವಷ್ಟು ಜಾಗ ನೀಡುತ್ತೇನೆ” ಎಂದು ವಚನವನ್ನು ಕೊಡುತ್ತಾನೆ.

    ಸ್ಥಳವನ್ನು ದಾನ ಪಡೆಯುವಾಗ ವಾಮನಮೂರ್ತಿ ಆಕಾಶದ ಉದ್ದಕ್ಕೂ ಬೆಳೆಯುತ್ತಾನೆ. ಒಂದು ಪಾದವನ್ನು ಭೂಮಿ ಮೇಲೆ, ಮತ್ತೊಂದು ಪಾದವನ್ನು ಆಕಾಶದ ಮೇಲೆ ಇರಿಸುತ್ತಾನೆ. ಇನ್ನೊಂದು ಪಾದ ಇಡಲು ಜಾಗ ಕಾಣುತ್ತಿಲ್ಲ ಎಲ್ಲಿ ಇಡಬೇಕು ಎಂದು ಕೇಳಿದಾಗ ಬಲಿ ಚಕ್ರವರ್ತಿಗೆ ಜ್ಞಾನೋದಯವಾಗಿ ನನ್ನ ತಲೆ ಮೇಲೆ ಇಡು ಎಂದು ಹೇಳುತ್ತಾನೆ. ಇದನ್ನೂ ಓದಿ: ದೀಪಾವಳಿ ಸಂಭ್ರಮಕ್ಕೆ ಜೊತೆಯಾಗಲಿದೆ ಪರಿಸರ ಸ್ನೇಹಿ ಹಸಿರು ಪಟಾಕಿ

    ನನ್ನ ತಲೆ ಮೇಲೆ ನಿಮ್ಮ ಪಾದ ಇಡುವ ಮೂಲಕ ನನ್ನಲ್ಲಿರುವ ಅಹಂಕಾರವೆಲ್ಲ ನಾಶವಾಗಲಿ ಎಂದು ವಾಮನನ ಬಳಿ ಬಲಿ ಕ್ಷಮೆ ಕೇಳುತ್ತಾನೆ. ಶ್ರೀಮನ್ನಾರಾಯಣ ತನ್ನ ಪಾದವನ್ನು ಬಲೀಂದ್ರ ಮಹಾರಾಜನ ಮೇಲೆ ಇರಿಸಿ ಪಾತಾಳಕ್ಕೆ ಕಳುಹಿಸುತ್ತಾನೆ. ಇದನ್ನೂ ಓದಿ: ದೀಪಾವಳಿಗೆ ರುಚಿ ರುಚಿಯಾದ ಕುಂಬಳಕಾಯಿ ಇಡ್ಲಿ ಮಾಡೋದು ಹೇಗೆ?

    ತಲೆ ಮೇಲೆ ಕಾಲನ್ನು ಇಡುವ ಮುನ್ನ ವಾಮನ ಬಳಿ ಬಲಿ, ನನ್ನ ಮಕ್ಕಳಂತೆ ನಾನು ಪ್ರಜೆಗಳನ್ನು ನೋಡಿದ್ದೇನೆ. ಹೀಗಾಗಿ ಪ್ರಜೆಗಳನ್ನು ನೋಡಲು ಅವಕಾಶ ನೀಡಬೇಕೆಂದು ಪ್ರಾರ್ಥನೆ ಮಾಡಿಕೊಳ್ಳುತ್ತಾನೆ. ಈ ಪ್ರಾರ್ಥನೆ ಸ್ವೀಕರಿಸಿದ ವಾಮನ ಅಸ್ತು ಎಂದು ಹೇಳಿ ತಲೆಯ ಮೇಲಿಟ್ಟು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ. ಇದನ್ನೂ ಓದಿ:  ದೀಪಾವಳಿ ಹಬ್ಬದ ಆಚರಣೆ ಹಾಗೂ ಅದರ ಮಹತ್ವ ಏನು?

    https://www.youtube.com/watch?v=bdq-b9Difjs&t=182s

    ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಅದೇನೆಂದರೆ ಆಶ್ವಯುಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜೆ ಮಾಡುವರು. ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ ಪೂಜೆ ಕೈಗೊಳ್ಳುತ್ತಾರೆ. ಆಶ್ವಯುಜ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪಾಡ್ಯ. ಇದನ್ನು ಬಲಿರಾಜ್ಯವೆಂದು ಹೇಳುತ್ತಾರೆ. ಆ ರೀತಿ ಆಚರಿಸಲ್ಪಡುವ ಕೊನೆಯ ದಿನವೇ ಬಲಿಪಾಡ್ಯಮಿ. ಈ ಅವಧಿಯಲ್ಲಿ ಬಲಿ ಚಕ್ರವರ್ತಿ ಪಾತಾಳದಿಂದ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರ ಪೂಜೆ ನಡೆಯುತ್ತದೆ. ಇದನ್ನೂ ಓದಿ: ದೀಪಾವಳಿಯಲ್ಲಿ ಧನಲಕ್ಷ್ಮೀ ಪೂಜೆ ಸಲ್ಲಿಸುವ ವಿಧಾನ ಹೇಗೆ? ಧನಲಕ್ಷ್ಮೀ ಚಕ್ರವನ್ನು ಯಾಕೆ ಬಳಕೆ ಮಾಡ್ತಾರೆ?

    ದೀಪಾವಳಿಯ ದಿನದಂದು ಪ್ರಜೆಗಳನ್ನು ನೋಡಲು ಬಲೀಂದ್ರ ಮಹಾರಾಜ ಬರುತ್ತಾನೆ ಎಂಬ ನಂಬಿಕೆಯಿಂದ ಜನರು ಅಭ್ಯಂಜನ ಸ್ನಾನಾದಿಗಳನ್ನು ಮಾಡಿಕೊಂಡು ಮನೆಯ ಎಲ್ಲ ಪಾತ್ರೆಗಳಲ್ಲಿ ಶುದ್ಧವಾದ ನೀರನ್ನು ತುಂಬಿಸುತ್ತಾರೆ. ಎಣ್ಣೆ ಸ್ನಾನ ಮಾಡುವಾಗ ಸಪ್ತ ಚಿರಂಜೀವಿಗಳ (ಅಶ್ವತ್ಥಾಮ, ಬಲೀಂದ್ರ, ವೇದವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ ಮತ್ತು ಪರಶುರಾಮ) ಹೆಸರು ಹೇಳುತ್ತಾರೆ. ಕಾರಣ ಮನೆಯಲ್ಲಿರುವ ಮಕ್ಕಳು ಮತ್ತು ಕುಟುಂಬದ ಸದಸ್ಯರ ಆರೋಗ್ಯ ಆಯುಷ್ಯ ಚೆನ್ನಾಗಿರಲಿ ಎಂದು ಸ್ನಾನದ ಸಮಯದಲ್ಲಿ ಚಿರಂಜೀವಿಗಳ ಹೆಸರು ಇರುವ ಶ್ಲೋಕವಾದ ಅಶ್ವತ್ಥಾಮೋ ಬಲಿವ್ರ್ಯಾಸೋ ಹನೂಮಾಂಶ್ಚ ವಿಭೀಷಣಃ |. ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ || ಹೇಳಲಾಗುತ್ತದೆ.

    ಸ್ನಾನ ಮಾಡುವ ಮುನ್ನ ಎಣ್ಣೆಯನ್ನು ಏಳು ಚುಕ್ಕಿಗಳಾಗಿ ನಿಮ್ಮ ಉಂಗುರ ಬೆರಳಿನ ಮೂಲಕ ಇರಿಸಿ. ನಂತರ ಶ್ಲೋಕ ಹೇಳುತ್ತಾ, ಏಳು ಚುಕ್ಕಿಗಳನ್ನು ಉಂಗುರು ಬೆರಳಿನ ಮೂಲಕ ಅಳಿಸಿ, ಎಣ್ಣೆಯನ್ನು ನಿಮ್ಮ ತಲೆಯಲ್ಲಿರುವ ಸುಳಿಗೆ ಹಚ್ಚಿಕೊಂಡು ಸ್ನಾನ ಮಾಡಬೇಕು. ನಂತರ ಮಡಿಯಿಂದ ನಿಮ್ಮ ನಿಮ್ಮ ಕುಲದೇವತೆಗಳನ್ನು ಪ್ರಾರ್ಥನೆ ಮಾಡಬೇಕು. ಭೂಲೋಕದ ಸಂಚಾರಕ್ಕೆ ಬಂದಿರುವ ಬಲೀಂದ್ರನನ್ನು ಆಹ್ವಾನಿಸಬೇಕು.

    https://www.facebook.com/publictv/videos/3012367555654021/

    ಕಾರ್ತಿಕ ಮಾಸದಲ್ಲಿ ನಿರಂತರವಾಗಿ ಒಂದು ತಿಂಗಳು ದೀಪಾರಾಧನೆ ಮಾಡಬೇಕು. ಒಂದು ತಿಂಗಳ ದೀಪಾರಾಧನೆಯಿಂದ ನಿಮ್ಮ ಅಭಿವೃದ್ಧಿ ಜ್ಯೋತಿಯಂತೆ ಬೆಳಗುತ್ತದೆ. ಪಟಾಕಿ ಹೊಡೆಯುವ ಬದಲು ದೀಪಗಳನ್ನು ಹಚ್ಚಿ, ನಿಮ್ಮ ಅನಕೂಲಕ್ಕೆ ತಕ್ಕಂತೆ ದೀಪಗಳನ್ನು ದಾನ ಮಾಡಬಹುದು

  • ಭೀಮಾ ಪುಷ್ಕರದಲ್ಲಿ ಮಿಂದೆದ್ದು ಪಾವನರಾದ ಭಕ್ತರು

    ಭೀಮಾ ಪುಷ್ಕರದಲ್ಲಿ ಮಿಂದೆದ್ದು ಪಾವನರಾದ ಭಕ್ತರು

    ರಾಯಚೂರು: ತೆಲಂಗಾಣ ಕರ್ನಾಟಕ ಗಡಿಯಲ್ಲಿ ಭೀಮಾ ಪುಷ್ಕರದ ಸಂಭ್ರಮ ಮನೆಮಾಡಿದ್ದು, 12 ವರ್ಷಕ್ಕೆ ಒಮ್ಮೆ ಬರುವ ಭೀಮಾ ಪುಷ್ಕರದಲ್ಲಿ ಪುಣ್ಯ ಸ್ನಾನ ಮಾಡಲು ಜನ ದೂರದ ಊರುಗಳಿಂದ ಬರುತ್ತಿದ್ದಾರೆ.

    ಜಿಲ್ಲೆಯಲ್ಲಿ ಭೀಮಾನದಿ ಹರಿಯುವುದಿಲ್ಲವಾದರೂ ತೆಲಂಗಾಣ ಗಡಿಯಲ್ಲಿ ಭೀಮಾ-ಕೃಷ್ಣ ಸಂಗಮವಾಗುವುದರಿಂದ ಪುಷ್ಕರಕ್ಕೆ ಮಹತ್ವ ಬಂದಿದೆ. ನದಿಯಲ್ಲಿ ಮಾಡುವ ಸ್ನಾನ ಪುಣ್ಯ ಸ್ನಾನ ಅಂತಲೇ ಮೊದಲಿನಿಂದಲೂ ನಂಬಿಕೆ ಇದೆ. ಆದರೆ ಪುಷ್ಕರದ ವೇಳೆ ಆಯಾ ನದಿಯಲ್ಲಿ ಮುಕ್ಕೋಟಿ ದೇವರು ಮಿಂದೇಳುವುದರಿಂದ ಆ ಸ್ನಾನ ಪರಮ ಪವಿತ್ರ ಸ್ನಾನವೆಂದೇ ನಂಬಲಾಗುತ್ತದೆ.

    ಗುರು ಯಾವ ರಾಶಿಗೆ ಪ್ರವೇಶಿಸುತ್ತಾನೆ ಎನ್ನುವುದರ ಮೇಲೆ ಒಂದೊಂದು ನದಿಯ ಪುಷ್ಕರ ನಿರ್ಧಾರವಾಗುತ್ತದೆ. ಸಿಂಹ ರಾಶಿಯಲ್ಲಿ ಗೋದಾವರಿ ನದಿಗೆ, ಕನ್ಯಾ ರಾಶಿಯಲ್ಲಿ ಕೃಷ್ಣ ನದಿಗೆ, ತುಲಾ ರಾಶಿಯಲ್ಲಿ ಕಾವೇರಿ ನದಿಗೆ ಹಾಗೂ ವೃಶ್ಚಿಕ ರಾಶಿಯಲ್ಲಿ ಭೀಮಾನದಿಗೆ ಪುಷ್ಕರ ಬರುತ್ತದೆ.

    12 ವರ್ಷಗಳ ಬಳಿಕ ಭೀಮಾ ನದಿಯಲ್ಲಿ ಪುಷ್ಕರ ನಡೆಯುತ್ತಿದ್ದು, ವಿಶೇಷವಾಗಿ ಕೃಷ್ಣದೇವರಾಯ, ನಿಜಾಮಶಾಯಿ, ಆದಿಲ್‍ಶಾಯಿಗಳ ರಾಜ್ಯಗಳ ಗಡಿ ಸಂಗಮದ ಪ್ರದೇಶದಲ್ಲೆ ಈಗ 12 ದಿನ ಕಾಲ ಪುಷ್ಕರ ನಡೆಯುತ್ತಿದೆ. ಹೀಗಾಗಿ ರಾಯಚೂರಿನಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಭೀಮಾ ನದಿ ಪುಷ್ಕರದ ಪುಣ್ಯ ಸ್ನಾನಕ್ಕಾಗಿ ತೆಲಂಗಾಣಕ್ಕೆ ತೆರಳುತ್ತಿದ್ದಾರೆ.

    ಈ ಬಗ್ಗೆ ಅರ್ಚಕರಾದ ಶೇಷಗಿರಿಯಾಚಾರ್ ಪ್ರತಿಕ್ರಿಯಿಸಿ, ಪುಷ್ಕರಕ್ಕೆ ಬರುವ ಭಕ್ತರು ಪುಣ್ಯಸ್ನಾನದ ಜೊತೆ ಪಿಂಡ ಪ್ರಧಾನವನ್ನು ಮಾಡುತ್ತಾರೆ. ಇಲ್ಲಿ ದಾನಗಳನ್ನು ಮಾಡುವ ಮೂಲಕ ತಮ್ಮ ಪಾಪಕರ್ಮಗಳನ್ನು ಕಳೆದುಕೊಳ್ಳುತ್ತಾರೆ. ಈ ಬಾರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಿರುವುದರಿಂದ ಪುಷ್ಕರಕ್ಕೆ ಅನಾನುಕೂಲಗಳು ಸಹ ಆಗಿವೆ. ಆದರೂ ಸಹ ಪುಣ್ಯ ಸ್ನಾನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಜನ ಭೀಮಾನದಿಗೆ ಬರುತ್ತಾರೆ ಎಂದು ತಿಳಿಸಿದರು.

    ಪುಷ್ಕರದ ಕುರಿತು ಸ್ಥಳೀಯರಾದ ಚಕ್ರಪಾಣಿ ಆಚಾರ್ ಮಾತನಾಡಿ, ಕರ್ನಾಟಕದಲ್ಲೇ ಹೆಚ್ಚು ದೂರದವರೆಗೆ ಸಾಗುವ ಭೀಮಾನದಿಯು ತೆಲಂಗಾಣ ಪ್ರವೇಶಿಸಿ ಪುನಃ ಕೃಷ್ಣಾ ನದಿಯಲ್ಲಿ ಸಂಗಮವಾಗುತ್ತದೆ. ತೆಲಂಗಾಣದ ಮೆಹಬೂಬನಗರ ಜಿಲ್ಲೆಯ ಕೃಷ್ಣ ಮಂಡಲದಲ್ಲಿ ಬರುವ ಕುಸಮತಿ ಹಾಗೂ ತಂಗಡಗಿಯಲ್ಲಿ ಪುಷ್ಕರಕ್ಕೆ ಸಕಲ ವ್ಯವಸ್ಥೆಗಳನ್ನ ಮಾಡಲಾಗಿದೆ. ಗುರು ರಾಘವೇಂದ್ರ ಸ್ವಾಮಿಗಳ ಪ್ರೀತಿಗೆ ಪಾತ್ರರಾದ ಮಹಾಯತಿ ಕೃಷ್ಣದ್ವೈಪಾದರು ಐಕ್ಯವಾದ ಸ್ಥಳವು ಇಲ್ಲೇ ಇರುವುದರಿಂದ ಪುಷ್ಕರಕ್ಕೆ ಇನ್ನಷ್ಟು ಮಹತ್ವ ಬಂದಿದೆ ಎಂದು ವಿವರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಲಿನವಾಗ್ತಿದೆ ಮಲೆನಾಡಿನ ಕುಮಾರಧಾರಾ- ಪ್ರತಿನಿತ್ಯ ನದಿ ಸೇರ್ತಿದೆ ವಿಷಯುಕ್ತ ತ್ಯಾಜ್ಯ

    ಮಲಿನವಾಗ್ತಿದೆ ಮಲೆನಾಡಿನ ಕುಮಾರಧಾರಾ- ಪ್ರತಿನಿತ್ಯ ನದಿ ಸೇರ್ತಿದೆ ವಿಷಯುಕ್ತ ತ್ಯಾಜ್ಯ

    ಮಂಗಳೂರು: ಶ್ರೀ ಕುಕ್ಕೆಸುಬ್ರಹ್ಮಣ್ಯ ಸಕಲ ಪಾಪ ಪರಿಹಾರ ಮಾಡೋ ಪವಿತ್ರ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ದೇಶದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡ್ತಾರೆ. ಇಂತಹ ಪವಿತ್ರ ಕ್ಷೇತ್ರ ಈಗ ಮಲಿನ ಕ್ಷೇತ್ರ ಅಂತಲೂ ಕುಖ್ಯಾತಿ ಪಡೆಯುತ್ತಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಕುಮಾರಧಾರಾ ನದಿ ಸಂಪೂರ್ಣ ಮಲಿನವಾಗಿದೆ. ಇಲ್ಲಿನ ವ್ಯಾಪಾರಸ್ಥರು, ಹೋಟೆಲ್‍ನವರು ತ್ಯಾಜ್ಯಗಳನ್ನು ನೇರವಾಗಿ ನದಿಗೆ ಹಾಕುತ್ತಿರೋದ್ರಿಂದ ನೀರು ಕಲುಷಿತಗೊಂಡಿದೆ. ಕೆಲವೆಡೆ ಚರಂಡಿ ನೀರೂ ಕೂಡ ನದಿಗೆ ಸೇರ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತರು ಹರಕೆ ಮುಡಿ ನೀಡ್ತಾರೆ. ಹೆಚ್ಚಿನವರು ಸರ್ಪಸಂಸ್ಕಾರದಂತಹ ಸೇವೆಗಳನ್ನು ಮಾಡಿ ಕುಮಾರಧಾರಾ ನದಿಯಲ್ಲಿ ತೀರ್ಥ ಸ್ನಾನ ಮಾಡುವುದು ವಾಡಿಕೆ. ಆದ್ರೆ ಇಂತಹ ಕಲುಷಿತ ನೀರಲ್ಲಿ ಪಾಪ ಪರಿಹಾರ ಆಗೋ ಬದಲು ರೋಗ ರುಜಿನಗಳು ಅಂಟಿಕೊಳ್ಳುವ ಭೀತಿ ಎದುರಾಗಿದೆ.

    ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ 180 ಕೋಟಿ ರೂಪಾಯಿ ವೆಚ್ಚದ ಪ್ಲಾನ್ ಮಂಜೂರು ಮಾಡಿತ್ತು. ಅದರಂತೆ ವಸತಿಗೃಹ, ಬಸ್ ನಿಲ್ದಾಣ, ರಸ್ತೆ ಮೇಲ್ದರ್ಜೆಗೇರಿದ್ದರೂ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಇದರ ಮಧ್ಯೆ ಭಕ್ತರು ಕೂಡ ಸ್ನಾನ ಮಾಡಿ ಬಟ್ಟೆಗಳನ್ನು ನದಿಯಲ್ಲೇ ಹಾಕುತ್ತಿದ್ದು, ಇದನ್ನು ಸ್ವಚ್ಛ ಮಾಡುವ ವ್ಯವಸ್ಥೆ ಇಲ್ಲ.

    ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತರುತ್ತಿರುವ ದೇವಸ್ಥಾನ. ಆದ್ರೆ ಪರಿಒಸ್ಥಿತಿ ಇದೇ ರೀತಿ ಮುಂದುವರಿದರೆ ಕ್ಷೇತ್ರದ ಹೆಸರು ಹಾಳಾಗಬಹುದು. ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕಾಗಿದೆ.