Tag: Hollywood film actress

  • ನೀಲಿ ಚಿತ್ರ ನಟಿಯನ್ನು ತುಂಡು, ತುಂಡಾಗಿ ಕತ್ತರಿಸಿದ ಬಾಯ್‍ಫ್ರೆಂಡ್ – ಸ್ಟೋರಿ ಕೇಳಿ ಬೆಚ್ಚಿಬಿದ್ದ ಪೊಲೀಸರು

    ನೀಲಿ ಚಿತ್ರ ನಟಿಯನ್ನು ತುಂಡು, ತುಂಡಾಗಿ ಕತ್ತರಿಸಿದ ಬಾಯ್‍ಫ್ರೆಂಡ್ – ಸ್ಟೋರಿ ಕೇಳಿ ಬೆಚ್ಚಿಬಿದ್ದ ಪೊಲೀಸರು

    ಹಾಲಿವುಡ್ ನೀಲಿ ಚಿತ್ರಗಳ ತಾರೆಯನ್ನು ಹತ್ಯೆಗೈದು, ಆಕೆಯ ಮುಖವನ್ನು ಸುಟ್ಟು, ದೇಹದ ಭಾಗಗಳನ್ನು ತುಂಡು, ತುಂಡಾಗಿ ಕತ್ತರಿಸಿ ಗೋಣಿಚೀಲದಲ್ಲಿ ತುಂಬಿ ಬಿಸಾಕಿರುವ ವಿಕೃತ ಘಟನೆ ಇಟಲಿಯಲ್ಲಿ ನಡೆದಿದೆ.

    ಹತ್ಯೆಯಾ ನಟಿಯನ್ನು ಕರೋಲ್ ಮಾಲ್ಟೆಸಿ ಎಂದು ಗುರುತಿಸಲಾಗಿದ್ದು, ಆಕೆಯ ಬಾಯ್ ಫ್ರೆಂಡ್ ಡೇವಿಡ್ ಫೊಂಟೋನಾ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಬ್ರೇಸಿಯಾ ನಗರದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

    Carol maltesi

    ಬ್ಯಾಂಕರ್ ಆಗಿದ್ದ ಡೇವಿಡ್ ಫೊಂಟೋನಾ, ಕರೋಲ್ ಅವರ ನೆರೆ ಮನೆಯಲ್ಲಿ ವಾಸವಾಗಿದ್ದ. ಅಲ್ಲದೇ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕೆಲವು ತಿಂಗಳ ಹಿಂದೆ ಇಬ್ಬರ ನಡುವೆ ಜಗಳ ನಡೆದಿತ್ತು. ನಂತರ ಜನವರಿಯಲ್ಲಿ ನಟಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆಗೈದಿದ್ದಾನೆ. ನಂತರ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‍ನಲ್ಲಿಟ್ಟಿದ್ದಾನೆ. ದೇಹವನ್ನು ಸುಡಲು ಕೂಡ ಪ್ರಯತ್ನಿಸಿದ್ದಾನೆ. ಆದರೆ ಸಾಧ್ಯವಾಗದ ಕಾರಣ ಕೊನೆಗೆ ಕತ್ತರಿಸಿದ ದೇಹದ ತುಂಡುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ರಸ್ತೆಗೆ ಎಸೆದಿದ್ದಾನೆ.

    ಪೋಲ್ ಡ್ಯಾನ್ಸ್ ಒಂದಕ್ಕೆ ಹಾಜರಾಗಬೇಕಿದ್ದ ಕರೋಲ್ ಜನವರಿಯಿಂದ ನಾಪತ್ತೆಯಾಗಿರುವುದನ್ನು ಗಮನಿಸಿದ ಆಯೋಜಕರು ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತೊಂದೆಡೆ ಡೇವಿಡ್ ಕರೋಲ ಮನೆ ಬಾಡಿಗೆ ಕಟ್ಟಿ, ಆಕೆಯ ಮೊಬೈಲ್‍ನಿಂದ ಇತರರಿಗೆ ಸಂದೇಶ ಕಳುಹಿಸಿ ತನಗೂ ಸಂದೇಶ ಕಳುಹಿಸಿಕೊಂಡು, ಅದಕ್ಕೆ ರಿಪೈ ಸಹ ನೀಡಿ, ಕರೋಲ ಇನ್ನೂ ಬದುಕಿದ್ದಾಳೆ ಎಂದು ನಂಬಿಸಲು ಪ್ರಯತ್ನಿಸಿದ್ದಾನೆ. ಆದರೆ ತನಿಖೆ ಕೈಗೊಂಡ ಪೊಲೀಸರಿಗೆ ನಗರದ ಬಳಿ ಕಣಿವೆ ಪ್ರದೇಶದಲ್ಲಿ ದೇಹದ ತುಂಡುಗಳು ಪತ್ತೆಯಾಗಿದೆ. ಈ ವೇಳೆ ದೇಹದ ಮೇಲಿರುವ ಟ್ಯಾಟೂಗಳ ಗುರುತು ನಟಿ ದೇಹದ ಮೇಲಿರುವ ಟ್ಯಾಟೂಗಳೊಂದಿಗೆ ಹೋಲುತ್ತದೆ ಎಂದು ಪತ್ರಕರ್ತರೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: 2 ವರ್ಷದಿಂದ ಜಾರಿಯಲ್ಲಿದ್ದ ಕಡ್ಡಾಯ ಮಾಸ್ಕ್ ನಿಯಮವನ್ನ ತೆಗೆದು ಹಾಕಿದ ತೆಲಂಗಾಣ ಸರ್ಕಾರ

    ನಂತರ ತಮ್ಮ ಬಳಿ ಇದ್ದ ಕರೋಲ ಮೊಬೈಲ್ ಸಂಖ್ಯೆಗೆ ಅನುಮಾನದಿಂದ ಸಂದೇಶ ಕಳುಹಿಸಿದ ಪತ್ರಕರ್ತರಿಗೆ ತುಂಬಾ ಜನ ಆ ಹುಡುಗಿಯ ಬಗ್ಗೆ ನನಗೆ ಹೇಳಿದ್ದಾರೆ. ಆದರೆ ನಾನು ಆರಾಮವಾಗಿದ್ದೇನೆ ಎಂದು ರಿಪ್ಲೈ ನೀಡಿದ್ದಾನೆ. ಸತ್ತ ವ್ಯಕ್ತಿಯ ಮೊಬೈಲ್‍ನಿಂದ ಕೊಲೆಗಾರ ಮಾತ್ರವೇ ರಿಪ್ಲೈ ಮಾಡಬಲ್ಲ ಎಂದು ಊಹಿಸಿದ ಪತ್ರಕರ್ತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೊನೆಗೆ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ.