Tag: hollywood actor

  • ಧನುಷ್ ನಟನೆಯ ಹಾಲಿವುಡ್ `ದಿ ಗ್ರೇ ಮ್ಯಾನ್’ ಫಸ್ಟ್ ಲುಕ್ ರಿಲೀಸ್

    ಧನುಷ್ ನಟನೆಯ ಹಾಲಿವುಡ್ `ದಿ ಗ್ರೇ ಮ್ಯಾನ್’ ಫಸ್ಟ್ ಲುಕ್ ರಿಲೀಸ್

    ಟ ಧನುಷ್ ಕಾಲಿವುಡ್ ಅಂಗಳದ ಪ್ರತಿಭಾನ್ವಿತ ಕಲಾವಿದ. ಎಲ್ಲಾ ಭಾಷೆಗಳನ್ನು ಮೀರಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಲಿವುಡ್, ಬಾಲಿವುಡ್ ನಂತರ ಈಗ ಹಾಲಿವುಡ್‌ನಲ್ಲೂ ಮಿರ ಮಿರ ಅಂತಾ ಮಿಂಚ್ತಿದ್ದಾರೆ. ಧನುಷ್ ನಟನೆಯ ಹಾಲಿವುಡ್ ಬಹುನಿರೀಕ್ಷಿತ `ದಿ ಗ್ರೇ ಮ್ಯಾನ್’ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದೆ.

    ಎಲ್ಲಾ ವುಡ್‌ಗಳಲ್ಲಿ ಸೌಂಡ್ ಮಾಡ್ತಿರೋ ಧನುಷ್ `ದಿ ಗ್ರೇ ಮ್ಯಾನ್’ ಇಂಗ್ಲೀಷ್ ಚಿತ್ರಕ್ಕೆ ಬಣ್ಣಹಚ್ಚಿದ್ದಾರೆ. ಧನುಷ್ ಪಾತ್ರ ಹೇಗಿರಲಿದೆ ಅಂತಾ ಚಿತ್ರದ ಲುಕ್‌ನ್ನ ಇದೀಗ ಚಿತ್ರತಂಡ ರಿವೀಲ್ ಮಾಡಿದೆ. ಕಾರಿನ ಮೇಲೆ ಮಂಡಿಯೂರಿ ನಿಂತಿದ್ದು, ಮುಖದ ಮೇಲೆ ರಕ್ತದ ಕಲೆಯಿದೆ. ಗ್ರೇ ಸೂಟ್‌ನಲ್ಲಿ ಫುಲ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಧನುಷ್ ಪಾತ್ರದ ಕುರಿತು ಸಿನಿಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ : ಸುದೀಪ್ ಸರಣಿ ಟ್ವಿಟ್ ಗೆ ತಪ್ಪಾಗಿ ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್

    `ದಿ ಗ್ರೇ ಮ್ಯಾನ್’ ಚಿತ್ರವನ್ನು ಅಂಥೋನಿ ಮತ್ತು ಜೋ ರಸ್ಸೋ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಟ ಧನುಷ್ ಎಂದು ಮಾಡಿರದ ಭಿನ್ನ ಪಾತ್ರ ಡಿಫರೆಂಟ್ ಗೆಟೆಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಯಾನ್ ಗೋಸ್ಲಿಂಗ್, ಕ್ರಿಸ್ ಇವಾನ್ಸ್ ಇನ್ನು ಮುಂತದವರು ಸಾಥ್ ನೀಡಿದ್ದಾರೆ. `ದಿ ಗ್ರೇ ಮ್ಯಾನ್’ ಚಿತ್ರ ಒಟಿಟಿನಲ್ಲಿ ಇದೇ ಜುಲೈ 22ರಂದು ರಿಲೀಸ್ ಆಗಲಿದೆ. ಧನುಷ್ ನಟನೆಯ ಹಾಲಿವುಡ್ ಚಿತ್ರ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡಬಹುದು ಅಂತಾ ಕಾದು ನೋಡಬೇಕಿದೆ.

  • ಉಕ್ರೇನ್ ನಿಂದ ಪಲಾಯನ ಮಾಡಿದ ಹಾಲಿವುಡ್ ಸ್ಟಾರ್

    ಉಕ್ರೇನ್ ನಿಂದ ಪಲಾಯನ ಮಾಡಿದ ಹಾಲಿವುಡ್ ಸ್ಟಾರ್

    ಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೋಟ್ಯಾಂತರ ಜನರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಯುದ್ಧಕ್ಕೆ ಬಡವನೂ ಒಂದೇ, ಶ್ರೀಮಂತೂ ಒಂದೇ ಎನ್ನುವಂತೆ ಸಾವಿನ ದವಡೆಯಿಂದ ಪಾರಾಗಲು ಗಣ್ಯರು, ನಟರು, ಸಾಮಾನ್ಯರು ಎನ್ನದೇ  ಉಕ್ರೇನ್ ಪ್ರಜೆಗಳು ಮತ್ತು ಅಲ್ಲಿ ವಾಸವಿರುವ ಇತರ ದೇಶಗಳ ಪ್ರಜೆಗಳು ರಾತ್ರೋರಾತ್ರಿ ಉಕ್ರೇನ್ ತೊರೆಯುತ್ತಿದ್ದಾರೆ. ಅಲ್ಲಿ ವಾಸವಿದ್ದ ಹಾಲಿವುಡ್ ನ ಸ್ಟಾರ್, ತಾವೂ ಆ ದೇಶ ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ : ಪಟ್ಟಭದ್ರ ಹಿತಾಸಕ್ತಿಯಿಂದ ಪೆದ್ರೊ ವಂಚಿತ : ಚಿತ್ರೋತ್ಸವದ ಬಗ್ಗೆ ರಿಷಭ್ ಶೆಟ್ಟಿ ಅಸಮಾಧಾನ

    ಅಮೆರಿಕದ ನಟ ಸೀನ್ ಜಸ್ಟಿನ್ ಪೆನ್ ಕಾಲ್ನಡಿಗೆಯಲ್ಲಿ ಉಕ್ರೇನ್ ನಿಂದ ಪೋಲ್ಯಾಂಡ್ ಗಡಿಗೆ ಸಾಗಿದ್ದಾರೆ. ಆ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು “ಮೈಲ್ಸ್ ಟು ಪೊಲೀಸ್ ಬಾರ್ಡರ್” ಎಂದು ಬರೆದು ಟ್ವಿಟ್ ಮಾಡಿದ್ದಾರೆ. “ನನ್ನ ಕಾರನ್ನು ರಸ್ತೆ ಬದಿಯಲ್ಲೇ ನಾನು ಬಿಟ್ಟು ಬಂದೆ. ನಂತರ ನಾನು ನನ್ನ ಸಹೋದ್ಯೋಗಿಗಳು ಹಲವು ಮೈಲುಗಳನ್ನು ನಡೆದುಕೊಂಡೇ ಸಾಗಿದೆವು. ಈಗ ನಾವು ನಮ್ಮ ಗಡಿಗೆ ಬಂದು ತಲುಪಿದ್ದೇವೆ” ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ : EXCLUSIVE: ಸ್ಯಾಂಡಲ್‌ವುಡ್‌ಗೆ ವಾಪಸ್ಸಾದ ಮೀಟೂ ಪರ ಧ್ವನಿ ಎತ್ತಿದ್ದ ನಟಿ ಸಂಗೀತಾ

    https://twitter.com/SeanPenn/status/1498390093375016965?cxt=HHwWisCoqbz2rMspAAAA

    ಅಮೆರಿಕಾದ ಖ್ಯಾತ ನಟ ಮತ್ತು ಚಲನಚಿತ್ರ ನಿರ್ಮಾಪಕರೂ ಆಗಿರುವ ಸೀನ್ ಜಸ್ಟಿನ್ ಪೆನ್, ಮಿಸ್ಟಿಕ್ ರಿವರ್ ಮತ್ತು ಬಯೋಪಿಕ್ ಮೀಲ್ಕ್ ಸಿನಿಮಾದ ನಟನೆಗಾಗಿ ಅವರು ಎರಡು ಬಾರಿ ಆಸ್ಕರ್ ಪ್ರಶಸ್ತಿಪಡೆದಿದ್ದಾರೆ. ಅಪರಾಧ ನಾಟಕಗಳ ಮೂಲಕ ರಂಗಭೂಮಿಯಲ್ಲೂ ಫೇಮಸ್ ಆದ ನಟ ಇವರು.

  • ಹಾಲಿವುಡ್ ನಟನಿಗಾಗಿ ‘ಆರ್‌ಆರ್‌ಆರ್’ ಚಿತ್ರ ಬಿಡುಗಡೆಯನ್ನು ಮುಂದೂಡಿದ ರಾಜಮೌಳಿ

    ಹಾಲಿವುಡ್ ನಟನಿಗಾಗಿ ‘ಆರ್‌ಆರ್‌ಆರ್’ ಚಿತ್ರ ಬಿಡುಗಡೆಯನ್ನು ಮುಂದೂಡಿದ ರಾಜಮೌಳಿ

    ಹೈದರಾಬಾದ್: ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರ ಬಿಡುಗಡೆಯನ್ನು ಹಾಲಿವುಡ್ ನಟನಿಗಾಗಿ ಮುಂದೂಡಲಾಗಿದೆ.

    2018ರ ನವೆಂಬರಿನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಈ ವರ್ಷದ ಜುಲೈ ತಿಂಗಳ ಕೊನೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಆದರೆ ಇತ್ತೀಚೆಗಷ್ಟೇ ಚಿತ್ರತಂಡ ಈ ಚಿತ್ರವನ್ನು ಮುಂದಿನ ವರ್ಷ ಜನವರಿ 8ಕ್ಕೆ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿತ್ತು. ಆದರೆ ಆಕೆ ಎಂಬುದರ ಕಾರಣವನ್ನು ಹೇಳಿರಲಿಲ್ಲ. ಆದರೆ ಚಿತ್ರ ಮುಂದೂಡಿದ್ದೇಕೆ ಎಂಬುದು ಈಗ ರಿವೀಲ್ ಆಗಿದೆ.

    ಆರ್‌ಆರ್‌ಆರ್ ಚಿತ್ರದಲ್ಲಿ ಜೂ. ಎನ್‍ಟಿಆರ್ ಹಾಗೂ ರಾಮ್‍ಚರಣ್ ಅವರ ಜೊತೆ ಹಾಲಿವುಡ್ ನಟ ಕೂಡ ನಟಿಸುತ್ತಿದ್ದಾರೆ. ಚಿತ್ರೀಕರಣದ ವೇಳೆ ಹಾಲಿವುಡ್ ನಟ ತೀವ್ರವಾಗಿ ಗಾಯಗೊಂಡಿದ್ದು, ದೀರ್ಘ ಸಮಯದ ವಿಶ್ರಾಂತಿಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಾಲಿವುಡ್ ನಟ, ರಾಮ್‍ಚರಣ್ ಅವರ ಜೊತೆಗೆ ಚಿತ್ರದಲ್ಲಿ ಹಲವು ದೃಶ್ಯಗಳಲ್ಲಿ ನಟಿಸಿದ್ದಾರೆ. ಆದರೆ ಇವರಿಬ್ಬರ ಶೂಟಿಂಗ್ ಇನ್ನೂ ಪೂರ್ಣಗೊಂಡಿಲ್ಲ. ನಟ ವಿಶ್ರಾಂತಿ ಪಡೆದು ಬಂದ ಬಳಿಕವಷ್ಟೇ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧಾರ ಮಾಡಿದೆ.

    ಆರ್‌ಆರ್‌ಆರ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, 1920ರ ಕಾಲಘಟ್ಟದಲ್ಲಿ ನಡೆಯುವ ಕತೆ ಇದಾಗಿದೆ. ಅದಕ್ಕೆ ತಕ್ಕಂತೆ ಅದ್ಧೂರಿಯಾಗಿ ಸೆಟ್ ನಿರ್ಮಾಣ ಮಾಡಿ ಚಿತ್ರೀಕರಣ ನಡೆಸುತ್ತಿದ್ದಾರೆ. ಈ ಚಿತ್ರ ಹೈದರಾಬಾದ್‍ನ ನಿಜಾಮರ ಹಾಗೂ ಬ್ರಿಟಿಷರ ಆಡಳಿತದ ವಿರುದ್ಧ ಕೋಮರಾಮ್ ಭೀಮ ಮತ್ತು ಅಲ್ಲುರಿ ಸೀತಾರಾಮ ರಾಜು ಹೋರಾಟ ನಡೆಸುವ ಕತೆ ಆಗಿದ್ದು, ಜೂ. ಎನ್‍ಟಿಆರ್ ಕೋಮರಾಮ್ ಭೀಮನಾಗಿ ಕಾಣಿಸಿಕೊಂಡರೆ, ರಾಮ್ ಚರಣ್ ಸೀತಾರಾಮ ರಾಜನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    300 ಕೋಟಿ ಬಜೆಟ್‍ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ಕಲಾವಿದರಾದ ಅಲಿಯಾ ಭಟ್ ಮತ್ತು ಅಜಯ್ ದೇವಗನ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಹತ್ತು ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಕನ್ನಡದಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಡಿವಿವಿ ದಾನಯ್ಯ ಅವರು ಈ ಚಿತ್ರವನ್ನು ಡಿವಿವಿ ಎಂಟರ್‍ಟೈನ್‍ಮೆಂಟ್ಸ್‍ನಡಿ ನಿರ್ಮಾಣ ಮಾಡುತ್ತಿದ್ದು, ಎಂ.ಎಂ ಕೀರ್ವಾಣಿ ಸಂಗೀತ ನೀಡುತ್ತಿದ್ದಾರೆ.

  • ಪಾವಗಡದಲ್ಲಿರೋ ಬೃಹತ್ ಸೋಲಾರ್ ಪಾರ್ಕ್ ಗೆ ಹಾಲಿವುಡ್ ನಟ ಮೆಚ್ಚುಗೆ

    ಪಾವಗಡದಲ್ಲಿರೋ ಬೃಹತ್ ಸೋಲಾರ್ ಪಾರ್ಕ್ ಗೆ ಹಾಲಿವುಡ್ ನಟ ಮೆಚ್ಚುಗೆ

    ಬೆಂಗಳೂರು: ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಸೋಲಾರ್ ಪಾರ್ಕ್‍ಗೆ ವಿಶ್ವ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಹಾಲಿವುಡ್‍ನ ಖ್ಯಾತ ನಟ ಲಿಯೊನಾರ್ಡೊ ಡಿ ಕಾಪ್ರಿಯೊ ಸಹ ಟ್ವಿಟ್ಟರ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ಸೋಲಾರ್ ಪಾರ್ಕ್ ಕುರಿತು ಅಮೆರಿಕದ ಲಾಸ್ ಏಂಜಲೀಸ್ ಟೈಮ್ಸ್ ವರದಿ ಪ್ರಕಟಿಸಿದೆ. `ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಭಾರತದಲ್ಲಿ ನಿರ್ಮಾಣವಾಗುತ್ತಿದೆ’ ಎಂಬ ಶೀರ್ಷಿಕೆಯಡಿ ಸೋಮವಾರ ಸೋಲಾರ್ ಪಾರ್ಕ್ ಬಗ್ಗೆ ವಿಸ್ತೃತ ವರದಿ ಪ್ರಕಟಿಸಲಾಗಿದೆ. ಸೋಲಾರ್ ಪಾರ್ಕ್ ಪೂರ್ಣಗೊಂಡ ಬಳಿಕ 2,000 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, 7 ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಹಾಲಿವುಡ್ ನಟ ರೀಟ್ವೀಟ್: ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಬಗ್ಗೆ ನಟ ಲಿಯೊನಾರ್ಡೊ ಡಿ ಕಾಪ್ರಿಯೊ ಸಹ ಟ್ವಿಟರ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಲಾಸ್ ಏಂಜಲೀಸ್ ಟೈಮ್ಸ್‍ನ ವರದಿಯನ್ನು ಅವರು ರಿಟ್ವೀಟ್ ಮಾಡುವ ಮೂಲಕ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ `ರಾಹುಲ್ ಗಾಂಧಿ ಫ್ಯಾನ್ಸ್ ಫ್ರಮ್ ಬೆಳಗಾವಿ’ ಫೇಸ್‍ಬುಕ್ ಪುಟದಲ್ಲಿ `ಪಾವಗಡದ ಬೃಹತ್ ಸೌರಪಾರ್ಕ್ ಗೆ ಹಾಲಿವುಡ್ ನಟ ಲಿಯೊನಾರ್ಡೊ ಡಿ ಕಾಪ್ರಿಯೊ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಅಪ್ಲೋಡ್ ಮಾಡಿದ್ದಾರೆ.

    `2025ರ ವೇಳೆಗೆ ಅವಶ್ಯ ಇರುವ ಶೇ. 50ರಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಇಂಧನಗಳ ಮೂಲಕವೇ ಉತ್ಪಾದಿಸುವುದು ನಮ್ಮ ಗುರಿ. ಈ ಕನಸಿಗೆ ನಾವು ಶಂಕುಸ್ಥಾಪನೆ ಮಾಡಿದ್ದೇವೆ. ಮುಂದಿನ 5-7 ವರ್ಷಗಳಲ್ಲಿ ಇದನ್ನು ಸಾಧಿಸುವ ಆಶಾಭಾವನೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಜತೆಗೆ, ಲಾಸ್ ಏಂಜಲೀಸ್ ಟೈಮ್ಸ್ ವರದಿಯನ್ನೂ ಉಲ್ಲೇಖಿಸಿದ್ದಾರೆ.