Tag: Hollywood

  • I’m Loving It – ಕೊನೆಗೂ ಬ್ರೇಕಪ್ ಬಗ್ಗೆ ಮೌನಮುರಿದ ಸಿಡ್ನಿ ಸ್ವೀನಿ!

    I’m Loving It – ಕೊನೆಗೂ ಬ್ರೇಕಪ್ ಬಗ್ಗೆ ಮೌನಮುರಿದ ಸಿಡ್ನಿ ಸ್ವೀನಿ!

    ಹಾಲಿವುಡ್‌ನ ಪ್ರಸಿದ್ಧ ನಟಿ ಸಿಡ್ನಿ ಸ್ವೀನಿ (Sydney Sweeney) ಕೊನೆಗೂ ತಮ್ಮ ಬ್ರೇಕಪ್ (Breakup) ವಿಚಾರವಾಗಿ ಮಾತನಾಡಿದ್ದಾರೆ. ನನ್ನ ಹಾಗೂ ಜೊನಾಥನ್ ಡೇವಿನೊ (Jonathan Davino) ಮಧ್ಯೆ ಯಾವುದೇ ಸಂಬಂಧವಿಲ್ಲ, ನಾವಿಬ್ಬರು ಬ್ರೇಕಪ್ ಮಾಡಿಕೊಂಡಿದ್ದೇವೆ. ಇದೀಗ ನಾನು ಒಂಟಿಯಾಗಿರುವುದನ್ನೇ ಇಷ್ಟಪಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ಇತ್ತೀಚಿಗೆ ನಟಿ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂದು ವದಂತಿಗಳು ಕೇಳಿಬರುತ್ತಿದ್ದವು. ಈ ಕುರಿತು ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಬ್ರೇಕಪ್ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ. ನಾನು ಮದುವೆಯಾಗುತ್ತಿದ್ದೇನೆ ಎನ್ನುವುದು ಸುಳ್ಳು. ಸದ್ಯಕ್ಕೆ ನಾನು ಒಬ್ಬಂಟಿಯಾಗಿದ್ದೇನೆ ಹಾಗೂ ಇದನ್ನೇ ಇಷ್ಟಪಡುತ್ತಿದ್ದೇನೆ ಎಂದು ವದಂತಿಗಳನ್ನು ತಳ್ಳಿಹಾಕಿದ್ದಾರೆ.ಇದನ್ನೂ ಓದಿ: ಸ್ನಾನ ಮಾಡಿದ ನೀರನ್ನು ಸೋಪ್ ಮಾಡಿ 8 ಡಾಲರ್‌ಗೆ ಮಾರಾಟ ಮಾಡ್ತಿದ್ದಾಳೆ ಸಿಡ್ನಿ ಸ್ವೀನಿ!

    ಮೂರು ವರ್ಷಗಳ ಹಿಂದೆ ನಾನು ಹಾಗೂ ಜೊನಾಥನ್ ನಿಶ್ಚಿತಾರ್ಥ ಮಾಡಿಕೊಂಡಿದ್ದೆವು. ಆದರೆ ನಾವಿಬ್ಬರು ಬ್ರೇಕಪ್ ಮಾಡಿಕೊಂಡಿದ್ದೇವೆ. ಸದ್ಯ ನಮ್ಮಿಬ್ಬರ ಮಧ್ಯೆ ಯಾವುದೇ ಸಂಬಂಧವಿಲ್ಲ. ಆದರೆ ನಾನು ಈಗ ಒಬ್ಬಂಟಿಯಾಗಿರುವುದನ್ನು ತುಂಬಾ ಇಷ್ಟಪಡುತ್ತಿದ್ದೇನೆ. ನನ್ನ ಬಗ್ಗೆ ನಾನು ಹೆಚ್ಚಾಗಿ ತಿಳಿದುಕೊಳ್ಳುತ್ತಿದ್ದೇನೆ. ಜೊತೆಗೆ ನನ್ನ ಸ್ನೇಹಿತರೊಟ್ಟಿಗೆ ಹೆಚ್ಚಿನ ಸಮಯ ಕಳೆಯುತ್ತೇನೆ ಎಂದು ತಿಳಿಸಿದರು.

    ನಾನು ಹೇಗೆ ಜೀವನ ನಡೆಸಬೇಕು ಅಂದುಕೊಂಡಿದ್ದೆ, ಹಾಗೆಯೇ ಬದುಕುತ್ತಿದ್ದೇನೆ. ಕೆಲಸಕ್ಕೆ ಹೆಚ್ಚಿನ ಮಹತ್ವ ಕೊಡುತ್ತೇನೆ. ಹೊಸ ಕೆಲಸಗಳಿಂದ ಉತ್ಸುಕಳಾಗಿದ್ದೇನೆ. ಆದರೆ ಇದೆಲ್ಲದರಿಂದ ನನ್ನನ್ನು ದೂರ ಮಾಡಿದ್ದು ನನ್ನ ರಿಲೇಶನ್‌ಶಿಪ್ ಹಾಗೂ ಮದುವೆ. ಹೀಗಾಗಿ ಅದ್ಯಾವುದು ಕೂಡ ಸರಿ ಎನಿಸಲಿಲ್ಲ ಎಂದರು.

    2018ರಲ್ಲಿ ಡೇಟಿಂಗ್‌ನಲ್ಲಿದ್ದ ಇಬ್ಬರು, 2022ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಅದಾದ ಬಳಿಕ ಸಿಡ್ನಿ ಹಾಗೂ ಜೊನಾಥನ್ ತಮ್ಮ ನಿಶ್ಚಿತಾರ್ಥದ ಉಂಗುರ ಹಾಕಿಕೊಳ್ಳದೇ ಕೆಲವು ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದು, ಈ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಸದ್ಯ ನಟಿ `ಯುಪೋರಿಯಾ’ ಎಂಬ ವೆಬ್ ಸಿರೀಸ್‌ನಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ.

    ಇತ್ತೀಚಿಗಷ್ಟೇ ನಟಿ ತಾವು ಸ್ನಾನ ಮಾಡಿದ ನೀರಲ್ಲಿ `ಬಾತ್‌ವಾಟರ್ ಬ್ಲಿಸ್’ (Bathwater Bliss) ಎಂಬ ಸೋಪ್ ತಯಾರಾಗುತ್ತಿದೆ ಎಂಬ ಮಾಹಿತಿಯನ್ನು ಸ್ವತಃ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದರು.ಇದನ್ನೂ ಓದಿ: Miss World | ಥಾಯ್ಲೆಂಡ್‌ನ ಒಪಾಲ್ ಸುಚಾತಾಗೆ 72ನೇ ವಿಶ್ವ ಸುಂದರಿ ಕಿರೀಟ

  • ಹಾಲಿವುಡ್‌ನತ್ತ ಹೊರಟ ಬಾಲಿವುಡ್ ಬೋಲ್ಡ್ ಬ್ಯೂಟಿ ದಿಶಾ ಪಟಾನಿ!

    ಹಾಲಿವುಡ್‌ನತ್ತ ಹೊರಟ ಬಾಲಿವುಡ್ ಬೋಲ್ಡ್ ಬ್ಯೂಟಿ ದಿಶಾ ಪಟಾನಿ!

    ಬಾಲಿವುಡ್ ಬೆಡಗಿ ದಿಶಾ ಪಟಾನಿಗೆ (Disha Patani) ಗೋಲ್ಡನ್ ಚಾನ್ಸ್ ಸಿಕ್ಕಿದೆ. ಬಾಲಿವುಡ್‌ನಲ್ಲಿ ಸಕ್ಸಸ್ ಕಾಣದ ದಿಶಾ ಈಗ ಹಾಲಿವುಡ್‌ನಲ್ಲಿ (Hollywood) ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ಕ್ಷಮೆ ಕೇಳದ ಕಮಲ್ ಹಾಸನ್‌ಗೆ ಬ್ಯಾನ್ ಬಿಸಿ..!

    ಬಾಲಿವುಡ್‌ನಲ್ಲಿ ಸತತ ಸೋಲಿನ ಸುಳಿಯಲ್ಲಿದ್ದ ನಟಿಗೆ ಬಿಗ್ ಚಾನ್ಸ್ ಸಿಕ್ಕಿದ್ದು, ಖ್ಯಾತ ನಿರ್ದೇಶಕ ಕೆವಿನ್ ಸ್ಪೇಸಿ ನಿರ್ದೇಶನದ ಚಿತ್ರದ ಮೂಲಕ ಅವರು ಹಾಲಿವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾವಾಗಿದ್ದು, ನಟಿಗೆ ಪವರ್‌ಫುಲ್ ಪಾತ್ರವೇ ಸಿಕ್ಕಿದೆ ಎಂಬ ಸುದ್ದಿ ಓಡಾಡುತ್ತಿದೆ.

    cropped-DISHA-PATANI-5.jpg

    ಬಾಲಿವುಡ್‌ನಲ್ಲಿ ಸದಾ ಗ್ಲ್ಯಾಮರ್‌ನಿಂದಲೇ ಗಮನ ಸೆಳೆಯುವ ದಿಶಾ, ಹಾಲಿವುಡ್‌ನಲ್ಲಿ ಗೆದ್ದು ಬೀಗ್ತಾರಾ? ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ:ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ಸುದೀಪ್?

    ಎಂ.ಎಸ್ ಧೋನಿ, ಕಲ್ಕಿ 2598 ಎಡಿ, ಕಂಗುವ, ಭಘಿ 2 ಸಿನಿಮಾಗಳಲ್ಲಿ ದಿಶಾ ನಟಿಸಿದ್ದಾರೆ. `ವೆಲ್‌ಕಮ್ ಟು ದಿ ಜಂಗಲ್’ ಚಿತ್ರ ಈ ವರ್ಷದ ಅಂತ್ಯದಲ್ಲಿ ತೆರೆ ಕಾಣಲಿದೆ. ಈ ಸಿನಿಮಾದ ರಿಲೀಸ್ ಬಗ್ಗೆ ಡೇಟ್ ಅನೌನ್ಸ್ ಮಾಡಬೇಕಿದೆ.

  • ಸ್ನಾನ ಮಾಡಿದ ನೀರನ್ನು ಸೋಪ್ ಮಾಡಿ 8 ಡಾಲರ್‌ಗೆ ಮಾರಾಟ ಮಾಡ್ತಿದ್ದಾಳೆ ಸಿಡ್ನಿ ಸ್ವೀನಿ!

    ಸ್ನಾನ ಮಾಡಿದ ನೀರನ್ನು ಸೋಪ್ ಮಾಡಿ 8 ಡಾಲರ್‌ಗೆ ಮಾರಾಟ ಮಾಡ್ತಿದ್ದಾಳೆ ಸಿಡ್ನಿ ಸ್ವೀನಿ!

    – ಜೂನ್ 4ರಿಂದ ಆನ್‍ಲೈನ್‍ನಲ್ಲಿ ಲಿಮಿಟೆಡ್ ಎಡಿಷನ್ ಬಾತ್ ಸೋಪ್ ಲಭ್ಯ
    – 100 ಅದೃಷ್ಟಶಾಲಿಗಳಿಗೆ ಫ್ರೀ ಸೋಪ್‌!

    ಹಾಲಿವುಡ್‌ನ (Hollywood) ಪ್ರಸಿದ್ಧ ನಟಿ ಸಿಡ್ನಿ ಸ್ವೀನಿ (27) (Sydney Sweeney) ಸ್ನಾನ ಮಾಡಿದ ನೀರಲ್ಲಿ ಸೋಪ್‌ (Soap) ತಯಾರಾಗುತ್ತಿದೆ! ಈ ಮಾಹಿತಿಯನ್ನು ಸ್ವತಃ ಸಿಡ್ನಿ ಸ್ವೀನಿ ಹಂಚಿಕೊಂಡಿದ್ದಾರೆ. ಸೋಪ್‌ ಬಿಡುಗಡೆಯಾಗುವ ದಿನಕ್ಕಾಗಿ ಫ್ಯಾನ್ಸ್‌ ಕಾತರದಿಂದ ಕಾಯುತ್ತಿದ್ದಾರೆ.

    ನಟಿ ಬಾತ್‌ವಾಟರ್ ಬ್ಲಿಸ್ ಎಂಬ ಸೋಪ್‌ನ್ನು (Sydney’s Bathwater Bliss) ಪರಿಚಯಿಸುತ್ತಿದ್ದಾರೆ. ಇದು ಅವರ ಸ್ನಾನದ ನೀರಲ್ಲೇ ತಯಾರಾಗ್ತಿರೋದು ವಿಶೇಷ. ಡಾ. ಸ್ಕ್ವಾಚ್ ಎಂಬ ಸೋಪ್ ಕಂಪನಿಯೊಂದಿಗೆ ಅವರು ಈ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

    ಸಿಡ್ನಿ ಸ್ವೀನಿ ಹಾಲಿವುಡ್‌ನ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರಾಗಿದ್ದು, ಅವರು ʻಮೇಡಮ್ ವೆಬ್ʼ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಖ್ಯಾತಿ ಗಳಿಸಿದ್ದಾರೆ.

     

    View this post on Instagram

     

    A post shared by Dr. Squatch (@drsquatch)

    ಸೋಪ್‌ ಬೆಲೆ, ಬಿಡುಗಡೆ ದಿನಾಂಕ, ಖರೀದಿಸೋದು ಹೇಗೆ?
    ಈ ಸೋಪ್‌ನ ಬೆಲೆ 8 ಡಾಲರ್ ಆಗಿದ್ದು, ಕೇವಲ 5,000 ಪೀಸ್‌ ಮಾತ್ರ ತಯಾರಾಗಲಿವೆ. ಜೂನ್ 4 ರಿಂದ ಆನ್‌ಲೈನ್‌ನಲ್ಲಿ ಸೋಪ್ ಲಭ್ಯವಿರುತ್ತದೆ.

    ಸೋಪ್‌ ಬಿಡುಗಡೆ ಬಗ್ಗೆ ಮೇ 29 ರಂದು ಇನ್ಸ್ಟಾದಲ್ಲಿ ಸಿಡ್ನಿ ಸ್ವೀನಿ ಮಾಹಿತಿ ಹಂಚಿಕೊಂಡಿದ್ದರು. ಪೋಸ್ಟ್‌ನಲ್ಲಿ ʻನನ್ನ ಸ್ನಾನದ ನೀರಲ್ಲೇ ಈ ಸೋಪ್‌ ತಯಾರಾಗುತ್ತದೆʼ ಎಂದು ಅವರು ಬರೆದುಕೊಂಡಿದ್ದರು. ಅಲ್ಲದೇ ಅತ್ಯಂತ ಸೀಮಿತ ಆವೃತ್ತಿಯ ಸೋಪ್, ಜೂನ್‌ 4 ರಂದು drsquatch.com ವೆಬ್‌ಸೈಟ್‌ನಲ್ಲಿ ನಲ್ಲಿ ಲಭ್ಯವಿರಲಿದೆ ಎಂದು ಬರೆದುಕೊಂಡಿದ್ದರು.

    ಬಾತ್‌ವಾಟರ್ ಬ್ಲಿಸ್ ಸೋಪ್‌ನ ಸ್ಪೆಷಲ್‌ ಏನು ಗೊತ್ತಾ?
    ಎಫ್ಫೋಲಿಯೇಟಿಂಗ್ ಸ್ಯಾಂಡ್, ಪೈನ್ ಮರದ ತೊಗಟೆಯ ಎಣ್ಣೆ ಮತ್ತು ಸಿಡ್ನಿ ಸ್ವೀನಿಯ ಸ್ನಾನದ ನೀರಿನಿಂದ ಈ ಸೋಪ್‌ ತಯಾರಗುತ್ತದೆ. ಕೇವಲ 5,000 ಸೋಪ್‌ ತಯಾರಿಸುವುದರಿಂದ, ಇವು ಅದೃಷ್ಟ ಇರುವ ಅಭಿಮಾನಿಗಳ ಪಾಲಿಗೆ ಮಾತ್ರ ಸಿಗಲಿವೆ. ಇನ್ನೂ 100 ಜನ ಅದೃಷ್ಟ ಶಾಲಿಗಳಿಗೆ ಕಂಪನಿ ಉಚಿತವಾಗಿ ಒಂದೊಂದು ಸೋಪ್‌ ನೀಡಲಿದೆ ಎಂದು ವರದಿಯಾಗಿದೆ.

  • ಟ್ರಂಪ್ ಟ್ಯಾರಿಫ್ ಎಫೆಕ್ಟ್ – ಹಾಲಿವುಡ್ ಸಿನಿಮಾ ಬ್ಯಾನ್ ಮಾಡುತ್ತಾ ಚೀನಾ?

    ಟ್ರಂಪ್ ಟ್ಯಾರಿಫ್ ಎಫೆಕ್ಟ್ – ಹಾಲಿವುಡ್ ಸಿನಿಮಾ ಬ್ಯಾನ್ ಮಾಡುತ್ತಾ ಚೀನಾ?

    ಬೀಜಿಂಗ್: ಡೊನಾಲ್ಡ್‌ ಟ್ರಂಪ್‌ (Donald Trump) ಪ್ರತಿಸುಂಕ ಹೇರಿಗೆ ನೀತಿಯಿಂದ ಅಮೆರಿಕ ಮತ್ತು ಚೀನಾ ನಡುವೆ ಜೋರಾಗಿದೆ. ಹಾಲಿವುಡ್‌ ಸಿನಿಮಾಗಳನ್ನು ನಿಷೇಧಿಸಲು ಚೀನಾ ಯೋಜಿಸಿದೆ ಎಂದು ವರದಿಯಾಗಿದೆ.

    ಆದರೆ, ಈ ವಿಚಾರವನ್ನು ಬೀಜಿಂಗ್‌ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಅಮೆರಿಕ ಟ್ಯಾರಿಫ್‌ (Tariff) ಹಾಕಿದೆ. ಚೀನಾದ (China) ರಫ್ತು ವಸ್ತುಗಳ ಮೇಲೂ ಅಮೆರಿಕ ಪ್ರತಿಸುಂಕ ವಿಧಿಸುತ್ತಿದೆ. ಪ್ರತಿಕಾರ ತಂತ್ರದ ಭಾಗವಾಗಿ ಚೀನಾ ಈ ಕ್ರಮಕ್ಕೆ ಮುಂದಾಗಿದ್ದು, ಹಾಲಿವುಡ್‌ ಚಲನಚಿತ್ರಗಳನ್ನು ಬ್ಯಾನ್‌ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಸೇಡಿನ ಯೋಜನೆ ಬಿಡದಿದ್ದರೆ ಚೀನಾದ ಮೇಲೆ 50% ರಷ್ಟು ಸುಂಕ: ಟ್ರಂಪ್ ಎಚ್ಚರಿಕೆ

    ಚೀನಾದ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ.50 ರಷ್ಟು ಪ್ರತಿಸುಂಕ ವಿಧಿಸುವ ಪ್ರಸ್ತಾಪವನ್ನು ಟ್ರಂಪ್ ಮಂಡಿಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ವ್ಯಾಪಾರ ವಲಯದಲ್ಲಿ ನಡೆಯುತ್ತಿರುವ ತಿಕ್ಕಾಟವನ್ನು ಮತ್ತಷ್ಟು ತೀವ್ರಗೊಳಿಸಲಿದೆ.

    ಚೀನಾದ ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ಸಂಬಂಧಿಸಿದ WeChat ಖಾತೆಯ ಸಾಮಾಜಿಕ ಮಾಧ್ಯಮದಲ್ಲಿ ಚಲನಚಿತ್ರ ನಿಷೇಧದ ಸುದ್ದಿ ಹರಿದಾಡುತ್ತಿದೆ. ಆದರೆ ಚೀನಾ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಇದನ್ನೂ ಓದಿ: Black Monday| ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ – ಕರಗಿತು ಹೂಡಿಕೆದಾರರ 19 ಲಕ್ಷ ಕೋಟಿ

    ನಿಷೇಧ ಕ್ರಮವು ಚೀನಾದಲ್ಲಿ ಗಮನಾರ್ಹ ವೀಕ್ಷಕರನ್ನು ಹೊಂದಿರುವ ಹಾಲಿವುಡ್‌ (Hollywood) ಅನ್ನು ಟಾರ್ಗೆಟ್‌ ಮಾಡಲಾಗಿದೆ. 2024 ರಲ್ಲಿ, ಯುಎಸ್ ಚಲನಚಿತ್ರಗಳು ಚೀನೀ ಚಿತ್ರಮಂದಿರಗಳಲ್ಲಿ 585 ಮಿಲಿಯನ್ ಡಾಲರ್‌ ಗಳಿಸಿವೆ. ಇದು ದೇಶದ ಒಟ್ಟು ಬಾಕ್ಸ್ ಆಫೀಸ್ ಸಂಗ್ರಹದ ಸುಮಾರು 3.5% ರಷ್ಟಿದ್ದು, 17.7 ಬಿಲಿಯನ್ ಡಾಲರ್‌ ಎಂದು ಅಂದಾಜಿಸಲಾಗಿದೆ.

    ಅಮೆರಿಕದ (America) ಚಲನಚಿತ್ರಗಳ ಮೇಲಿನ ಸಂಪೂರ್ಣ ನಿಷೇಧವು ಚೀನಾದ ಮಾರುಕಟ್ಟೆಯ ಮೇಲೆ ಹೆಚ್ಚು ಅವಲಂಬಿತವಾಗಿರುವ ಹಾಲಿವುಡ್‌ನ ವಿದೇಶಿ ಆದಾಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

  • ಹಾಲಿವುಡ್ ನಟ ವಾಲ್ ಕಿಲ್ಮರ್ ನಿಧನ

    ಹಾಲಿವುಡ್ ನಟ ವಾಲ್ ಕಿಲ್ಮರ್ ನಿಧನ

    ಹಾಲಿವುಡ್‌ನ (Hollywood) ಖ್ಯಾತ ನಟ ವಾಲ್ ಕಿಲ್ಮರ್ (Val Kilmer) ಅವರು ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ಇದೀಗ 65ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ:ಬದುಕು ಕೊಟ್ಟ ರೆಸ್ಟೋರೆಂಟ್‌ಗೆ ಶೈನ್ ಶೆಟ್ಟಿ ಗುಡ್ ಬೈ- ಫ್ಯಾನ್ಸ್‌ಗೆ ಬಹಿರಂಗ ಪತ್ರ ಬರೆದ ನಟ

    ವಾಲ್ ಕಿಲ್ಮರ್‌ಗೆ 2014ರಲ್ಲಿ ಗಂಟಲು ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ನಿನ್ನೆ (ಏ.1) ವಾಲ್ ಕಿಲ್ಮರ್ ಅವರು ಲಾಸ್ ಏಂಜಲೀಸ್‌ನಲ್ಲಿ ವಿಧಿವಶರಾಗಿದ್ದಾರೆ. ಈ ವಿಚಾರವನ್ನು ಅವರ ಪುತ್ರಿ ಮರ್ಸಿಡಿಸ್ ಕಿಲ್ಮರ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ವದಂತಿಯ ನಡುವೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ ಐಶ್ವರ್ಯಾ ರೈ ದಂಪತಿ

    ‌’ಬ್ಯಾಟ್‌ಮ್ಯಾನ್ ಫಾರೆವರ್’ ಮತ್ತು ‌’ಜಿಮ್ ಮೊರಿಸನ್’ ಪಾತ್ರಗಳಿಂದ ವಾಲ್ ಕಿಲ್ಮರ್ ಫೇಮಸ್ ಆಗಿದ್ದರು. 1991ರ ‘ದಿ ಡೋರ್ಸ್’ ಚಿತ್ರದಲ್ಲಿನ ಅವರ ನಟನೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಹೀಗಿರುವಾಗ ಪ್ರತಿಭಾನ್ವಿತ ನಟ ನಿಧನವಾಗಿರುವ ಸುದ್ದಿ ತಿಳಿದು ಹಾಲಿವುಡ್ ಚಿತ್ರರಂಗ, ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

  • ಗುಡ್‌ ನ್ಯೂಸ್‌ ಕೊಟ್ಟ ‘ದಿ ವಿಲನ್‌’ ನಟಿ- ಆ್ಯಮಿ ಜಾಕ್ಸನ್‌ಗೆ ಗಂಡು ಮಗು

    ಗುಡ್‌ ನ್ಯೂಸ್‌ ಕೊಟ್ಟ ‘ದಿ ವಿಲನ್‌’ ನಟಿ- ಆ್ಯಮಿ ಜಾಕ್ಸನ್‌ಗೆ ಗಂಡು ಮಗು

    ನ್ನಡದ ‘ದಿ ವಿಲನ್’ (The Villain Kannada) ನಟಿ ಆ್ಯಮಿ ಜಾಕ್ಸನ್ (Amy Jackson) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಗುಡ್ ನ್ಯೂಸ್ ಅನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ. ಮಗುವಿನ ಹೆಸರಿನ ಸಮೇತ ಆ್ಯಮಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಮುಂಬೈ ಯೂನಿವರ್ಸಿಟಿಯಲ್ಲಿ ಡಾಕ್ಟರೇಟ್ ಪದವಿ ಪಡೆದ ‘ಚಾರ್‌ಮಿನಾರ್‌’ ನಟಿ ಮೇಘನಾ

    ಮುದ್ದಾದ ಗಂಡು ಮಗುವಿಗೆ (Baby Boy) ಆ್ಯಮಿ ಮತ್ತು ಎಡ್ ವೆಸ್ಟ್ವಿಕ್ ದಂಪತಿ ಪೋಷಕರಾದ ಖುಷಿಯಲ್ಲಿದ್ದಾರೆ. ಇದೀಗ ಮಗುವನ್ನು ಹಿಡಿದುಕೊಂಡು ಪತಿಯ ಜೊತೆ ನಟಿ ಪೋಸ್ ಮಾಡಿರುವ ಪೋಸ್ಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮುದ್ದಾದ ಮಗನಿಗೆ ‘ಆಸ್ಕರ್ ಅಲೆಕ್ಸಾಂಡರ್ ವೆಸ್ಟ್ವಿಕ್’ (Oscar Alexandar Westwick) ಎಂದು ಹೆಸರಿಡಲಾಗಿದೆ.

     

    View this post on Instagram

     

    A post shared by Ed Westwick (@edwestwick)

    ಅಂದಹಾಗೆ, ಹಾಲಿವುಡ್ ನಟ ಎಡ್ ವೆಸ್ಟ್ವಿಕ್ ಜೊತೆ ಆ್ಯಮಿ 2022ರಿಂದ ಡೇಟಿಂಗ್‌ನಲ್ಲಿದ್ದರು. ಆ ನಂತರ ಕಳೆದ ವರ್ಷ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  • ಹಾಲಿವುಡ್ ಸಿನೆಮಾದಲ್ಲಿ ಸಲ್ಮಾನ್ ಖಾನ್ ಆಟೋ ಡ್ರೈವರ್‌? – ಸೌದಿ ಅರೇಬಿಯಾದ ಶೂಟಿಂಗ್ ವಿಡಿಯೋ ಲೀಕ್!

    ಹಾಲಿವುಡ್ ಸಿನೆಮಾದಲ್ಲಿ ಸಲ್ಮಾನ್ ಖಾನ್ ಆಟೋ ಡ್ರೈವರ್‌? – ಸೌದಿ ಅರೇಬಿಯಾದ ಶೂಟಿಂಗ್ ವಿಡಿಯೋ ಲೀಕ್!

    2021ರ ಅರ್ಜೆಂಟೈನಾದ (Argentina) ಸೆವೆನ್ ಡಾಗ್ಸ್ ಸಿನೆಮಾದ ರಿಮೇಕ್ (Remake) ಸೌದಿ ಅರೇಬಿಯಾದಲ್ಲಿ ನಡೆಯುತ್ತಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಆಟೋ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಸಲ್ಮಾನ್ ಖಾನ್ ಫಸ್ಟ್ ಲುಕ್ ಆನ್‌ಲೈನ್‌ನಲ್ಲಿ ವೈರಲ್ ಆಗ್ತಿದ್ದಂತೆ, ಆಟೋ ಡ್ರೈವರ್ ವೇಷ ಧರಿಸಿರುವ ಹಲವಾರು ವಿಡಿಯೊಗಳು ವೈರಲ್ ಆಗುತ್ತಿವೆ. ಶೂಟಿಂಗ್‌ನಲ್ಲಿ ಸಲ್ಮಾನ್ ಖಾನ್ ಜೊತೆ ಸ್ನೇಹಿತ ಮತ್ತು ನಟ ಸಂಜಯ್ ದತ್ ಇದ್ದರು. ಇದನ್ನೂ ಓದಿ: ಆರ್‌ಸಿಬಿ ಹ್ಯಾಟ್ರಿಕ್ ಕನಸು ಭಗ್ನ – ಮುಂಬೈಗೆ 4 ವಿಕೆಟ್‌ಗಳ ರೋಚಕ ಜಯ

    ಈ ವಿಡಿಯೋದಲ್ಲಿ ಸಲ್ಮಾನ್ ಖಾನ್ ಕಂದು ಬಣ್ಣದ ಶರ್ಟ್‌ನೊಂದಿಗೆ ಚೆಕ್ಸ್ ಶರ್ಟ್, ಮ್ಯಾಚಿಂಗ್ ಪ್ಯಾಂಟ್ ಮತ್ತು ಕೂಲಿಂಗ್ ಗ್ಲಾಸ್ ಧರಿಸಿ, ಆಟೋ ರಿಕ್ಷಾದ ಮೇಲೆ ಪೋಸ್ ಕೊಟ್ಟಿದ್ದಾರೆ. ಸಂಜಯ್ ದತ್ ನೀಲಿ ಸೂಟ್ ಧರಿಸಿದ್ದಾರೆ. ಇದನ್ನೂ ಓದಿ: Champions Trophy: ರಿಯಾನ್ ರಿಕಲ್ಟನ್ ಶತಕ – ಅಫ್ಘಾನ್​ ವಿರುದ್ಧ ದ.ಆಫ್ರಿಕಾಗೆ 107 ರನ್‌ಗಳ ಭರ್ಜರಿ ಜಯ 

    ಇನ್ನೊಂದು ವಿಡಿಯೋದಲ್ಲಿ ಸಲ್ಮಾನ್ ಖಾನ್ ಭಾರೀ ಭದ್ರತೆಯ ನಡುವೆ ಶೂಟಿಂಗ್ ಸ್ಥಳಕ್ಕೆ ಆಗಮಿಸುತ್ತಿರುವುದು ಸೆರೆಯಾಗಿದೆ. ದುಬೈನಲ್ಲಿ ನಿರ್ಮಿಸಲಾದ ಬೃಹತ್ ಸೆಟ್ ಮುಂಬೈನ ಧಾರಾವಿ ಸ್ಲಮ್‌ನ್ನು ಹೋಲುವಂತೆ ನಿರ್ಮಿಸಲಾಗಿದೆ. ಇದನ್ನೂ ಓದಿ: ಅಟಲ್‌ಜೀ ಸಂಘಟನೆ, ಹೋರಾಟವು ಕಾರ್ಯಕರ್ತರಿಗೆ ಪ್ರೇರಣಾಶಕ್ತಿ: ಯಡಿಯೂರಪ್ಪ

    ಇದಕ್ಕೂ ಮೊದಲು ಇನ್ಟಾಗ್ರಾಮ್‌ನಲ್ಲಿ ಸಲ್ಮಾನ್ ಖಾನ್ ಅವರ ಅಂಗರಕ್ಷಕ ಶೇರಾ, ಸೂಪರ್‌ಸ್ಟಾರ್ ಮತ್ತು ರಷ್ಯಾದ ಮಾಜಿ ಮಿಶ್ರ ಕಲಾವಿದ ಖಬೀಬ್ ನೂರ್ಮಗೊಮೆಡೋವ್ ಅವರೊಂದಿಗಿನ ಫೋಟೋಗಳನ್ನು ʻಎರಡು ಲೆಜೆಂಡ್‌ಗಳು ಒಂದೇ ಫ್ರೇಮ್‌ನಲ್ಲಿ’ ಎಂದು ಬರೆದುಕೊಂಡು ಹಂಚಿಕೊಂಡಿದ್ದರು. ಇದನ್ನೂ ಓದಿ: 43 ಬಾಲ್‌ಗೆ 81 ರನ್‌ ಚಚ್ಚಿದ ಎಲ್ಲಿಸ್‌ ಪೆರ್ರಿ – ಮುಂಬೈಗೆ 168 ರನ್‌ಗಳ ಗುರಿ ನೀಡಿದ ಆರ್‌ಸಿಬಿ

     

    View this post on Instagram

     

    A post shared by shera (@beingshera)

    ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಪಾತ್ರವನ್ನು ಗೌಪ್ಯವಾಗಿಡಲಾಗಿತ್ತು, ಆದರೂ ವೈರಲ್ ಆಗಿರುವ ವಿಡಿಯೋಗಳ ಮೂಲಕ ರಿವೀಲ್ ಆಗಿದೆ. ಈ ಮೂಲಕ ಬಾಲಿವುಡ್‌ನಿಂದ ಹಾಲಿವುಡ್‌ಗೆ ಕಾಲಿಟ್ಟ ಭಾರತೀಯ ನಟರ ಸಾಲಿಗೆ ಸಲ್ಮಾನ್ ಖಾನ್ ಸಹ ಸೇರಿದ್ದಾರೆ. ಇದನ್ನೂ ಓದಿ: ಟೋಲ್ ಗೇಟ್ ತಪ್ಪಿಸಲು ಹೋಗಿ ಟೋಲ್ ಸಿಬ್ಬಂದಿಗೆ ಗುದ್ದಿಸಿ ಪಿಕಪ್ ವಾಹನ ಚಾಲಕ ಎಸ್ಕೇಪ್

  • ಚಿಲ್ಕೂರ್ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಚೋಪ್ರಾ

    ಚಿಲ್ಕೂರ್ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಚೋಪ್ರಾ

    ಹಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ತೆಲಂಗಾಣದ ಚಿಲ್ಕೂರ್ ಬಾಲಾಜಿ ದೇವಸ್ಥಾನಕ್ಕೆ (Chilkur Balaji Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಸುದೀಪ್ ಇಲ್ಲದೇ ಬಿಗ್ ಬಾಸ್ ಊಹಿಸಿಕೊಳ್ಳೋಕೆ ಸಾಧ್ಯವಿಲ್ಲ: ಧನರಾಜ್ ಆಚಾರ್

    ಇಂದು (ಜ.21) ಚಿಲ್ಕೂರ್ ಬಾಲಾಜಿ ದೇವಸ್ಥಾನಕ್ಕೆ ಪ್ರಿಯಾಂಕಾ ಚೋಪ್ರಾ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಕೆಲ ಕಾಲ ದೇವಸ್ಥಾನದಲ್ಲಿ ನಟಿ ಸಮಯ ಕಳೆದಿದ್ದಾರೆ. ದೇವಸ್ಥಾನಕ್ಕೆ ಭೇಟಿ ಕೊಟ್ಟ ಫೋಟೋ ಶೇರ್ ಮಾಡಿ, ಶ್ರೀ ಬಾಲಾಜಿ ಆಶೀರ್ವಾದದಿಂದ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Priyanka (@priyankachopra)

    ನಮ್ಮ ಸುತ್ತಲೂ ಶಾಂತಿ ಮತ್ತು ಸಮೃದ್ಧಿಯನ್ನು ಕಂಡುಕೊಳ್ಳೋಣ. ಎಲ್ಲಾ ಅನುಗ್ರಹ ಎಂದು ನಟಿ ಬರೆದುಕೊಂಡಿದ್ದಾರೆ. ಜೊತೆಗೆ ರಾಮ್ ಚರಣ್ ಪತ್ನಿಗೆ ಉಪಾಸನಾಗೆ ಪ್ರಿಯಾಂಕಾ ಥ್ಯಾಂಕ್ಯೂ ಎಂದಿದ್ದಾರೆ.

    ಇನ್ನೂ ರಾಜಮೌಳಿ ಮತ್ತು ಮಹೇಶ್ ಬಾಬು (Mahesh Babu) ನಟನೆಯ ಹೊಸ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದರ ನಡುವೆ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಹೊಸ ಅಧ್ಯಾಯ ಆರಂಭ ಎಂದು ನಟಿ ಬರೆದುಕೊಂಡಿರೋದು ನೋಡಿ ಊಹಾಪೋಹಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಂತೆ ಆಗಿದೆ. ಮಹೇಶ್ ಬಾಬು ಜೊತೆಗಿನ ಸಿನಿಮಾ ಕುರಿತು ಸದ್ಯದಲ್ಲೇ ಅನೌನ್ಸ್ ಮಾಡ್ತಾರಾ? ಎಂದು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

  • 27 ವರ್ಷದ ಹಾಲಿವುಡ್ ನಟಿ ಜೊತೆ ಧನುಷ್ ರೊಮ್ಯಾನ್ಸ್

    27 ವರ್ಷದ ಹಾಲಿವುಡ್ ನಟಿ ಜೊತೆ ಧನುಷ್ ರೊಮ್ಯಾನ್ಸ್

    ಮಿಳು ನಟ ಧನುಷ್ (Dhanush) ಸದಾ ವಿಭಿನ್ನ ಪಾತ್ರಗಳ ಮೂಲಕ ರಂಜಿಸುತ್ತಲೇ ಇರುತ್ತಾರೆ. ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸುತ್ತಾರೆ. ಬಹುಭಾಷೆಗಳಲ್ಲಿ ಕಮಾಲ್ ಮಾಡಿರುವ ಧನುಷ್ ಇದೀಗ ಮತ್ತೊಮ್ಮೆ ಹಾಲಿವುಡ್‌ಗೆ (Hollywood) ಹಾರಲು ಮುಂದಾಗಿದ್ದಾರೆ. 27 ವರ್ಷದ ಹಾಲಿವುಡ್ ಬೆಡಗಿ ಸಿಡ್ನಿ ಸ್ವೀನಿ ಜೊತೆ ನಟ ರೊಮ್ಯಾನ್ಸ್ ಮಾಡಲಿದ್ದಾರೆ.

    ದಿ ಎಕ್ಸಾರ್ಡಿನರಿ ಜರ್ನಿ ಆಫ್ ಎ ಫಕೀರ್, ದಿ ಗ್ರೇ ಮ್ಯಾನ್ ಎಂಬ ಇಂಗ್ಲಿಷ್ ಸಿನಿಮಾಗಳಲ್ಲಿ ನಟ ಅಭಿನಯಿಸಿದ್ದಾರೆ. ಇದೀಗ ‌’ಸ್ಟ್ರೀಟ್‌ ಫೈಟರ್’ (Street Fighter) ಎಂಬ ಹಾಲಿವುಡ್ ಸಿನಿಮಾದಲ್ಲಿ ಧನುಷ್ ನಟಿಸಲು ರೆಡಿಯಾಗಿದ್ದಾರೆ. ಅವರಿಗೆ ಸಿಡ್ನಿ ಸ್ವೀನಿ (Sydney Sweeney) ನಾಯಕಿಯಾಗಲಿದ್ದಾರೆ. ಇಬ್ಬರಿಗೂ ನಟನೆಗೆ ಸ್ಕೋಪ್ ಇರುವಂತಹ ಪಾತ್ರವೇ ಸಿಕ್ಕಿದೆ. ಇದನ್ನೂ ಓದಿ:‘ಅಯೋಗ್ಯ 2’ಗೆ ಅದ್ಧೂರಿ ಮುಹೂರ್ತ- ಮತ್ತೆ ಜೊತೆಯಾದ ಸತೀಶ್‌ ನೀನಾಸಂ, ರಚಿತಾ ರಾಮ್

    ಇನ್ನೂ ಧನುಷ್ ಕೈಯಲ್ಲಿ ‘ಕುಬೇರ’ ಎಂಬ ಸಿನಿಮಾವಿದೆ. ಇವರೊಂದಿಗೆ ರಶ್ಮಿಕಾ ಮಂದಣ್ಣ (Rashmika Mandanna), ನಾಗಾರ್ಜುನ ಅಕ್ಕಿನೇನಿ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಇಡ್ಲಿ ಕಡೈ’ ಎಂಬ ಚಿತ್ರವನ್ನು ಧನುಷ್ ನಿರ್ದೇಶನ ಮಾಡಲಿದ್ದಾರೆ. ಇಳಯರಾಜ ಜೀವನ ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ.

  • ಯಶ್ ಜೊತೆಗಿನ ಫೋಟೋ ಹಂಚಿಕೊಂಡ ಹಾಲಿವುಡ್ ನಟಿ

    ಯಶ್ ಜೊತೆಗಿನ ಫೋಟೋ ಹಂಚಿಕೊಂಡ ಹಾಲಿವುಡ್ ನಟಿ

    ನ್ಯಾಷನಲ್ ಯಶ್ (Yash) ಅವರು ಮುಂಬೈನಲ್ಲಿ ‘ಟಾಕ್ಸಿಕ್’ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಹಾಲಿವುಡ್ ನಟಿ ಟೆಟಿಯಾನಾ ಗೈದರ್ ಜೊತೆ ಯಶ್ ಕಾಣಿಕೊಂಡಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ರಾಕಿ ಬಾಯ್ ಜೊತೆಗಿನ ಫೋಟೋವನ್ನು ಹಾಲಿವುಡ್ (Hollywood) ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಗೃಹಪ್ರವೇಶದ ಸಂಭ್ರಮದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ಸೋನು ಗೌಡ

    ಇತ್ತೀಚೆಗೆ ಯಶ್ ಅವರನ್ನು ಹಾಲಿವುಡ್ ನಟಿ ಟೆಟಿಯಾನಾ ಗೈದರ್ ಭೇಟಿಯಾಗಿದ್ದಾರೆ. ನಟಿ ಗನ್ ಸಖತ್ ಆ್ಯಕ್ಷನ್ ಮಾಡಿರುವ ಸಣ್ಣ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಇದನ್ನು ಟೆಟಿಯಾನಾ ಚಪ್ಪಾಳೆ ಹೊಡೆದು ವೆಲ್ ಡನ್ ಎಂದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬೆಲ್ಲಾ ಸದ್ದು ಮಾಡುತ್ತಿವೆ. ಈ ಬೆನ್ನಲ್ಲೇ ಈ ಹಾಲಿವುಡ್ ನಟಿ ಕೂಡ ಟಾಕ್ಸಿಕ್ ಚಿತ್ರದಲ್ಲಿ ನಟಿಸುತ್ತಿದ್ದಾರಾ? ಎಂದು ನೆಟ್ಟಿಗರ ಚರ್ಚೆ ಶುರುವಾಗಿದೆ.

    ಇತ್ತೀಚೆಗೆ ಮುಂಬೈನಲ್ಲಿ ನಡೆಯುತ್ತಿರುವ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್‌ನಲ್ಲಿ ಹಾಲಿವುಡ್ ನಟ ಜೆಜೆ ಪರ‍್ರಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಯಾವದಕ್ಕೂ ತಂಡದ ಕಡೆಯಿಂದ ಸಿನಿಮಾ ಕುರಿತು ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.

    ಇನ್ನೂ ‘ಕೆಜಿಎಫ್ 2’ ಸಕ್ಸಸ್ ನಂತರ ಯಶ್ ‘ಟಾಕ್ಸಿಕ್’ (Toxic) ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಯಶ್ ಜೊತೆ ಕೆವಿಎನ್ ಸಂಸ್ಥೆ ನಿರ್ಮಾಣದ ಹೊಣೆ ಹೊತ್ತಿದೆ.