Tag: hollywoo

  • ಒಂದೇ ದಿನ ತೆರೆಗೆ ಅಬ್ಬರಿಸುತ್ತಿದೆ ರಣ್‌ಬೀರ್- ಆಲಿಯಾ ಭಟ್ ಸಿನಿಮಾ: ಬಾಕ್ಸಾಫೀಸ್‌ ಫೈಟ್‌

    ಒಂದೇ ದಿನ ತೆರೆಗೆ ಅಬ್ಬರಿಸುತ್ತಿದೆ ರಣ್‌ಬೀರ್- ಆಲಿಯಾ ಭಟ್ ಸಿನಿಮಾ: ಬಾಕ್ಸಾಫೀಸ್‌ ಫೈಟ್‌

    ಮುದ್ದು ಮಗಳು ರಾಹಾ (Raha) ಪಾಲನೆ ಪೋಷಣೆಯಲ್ಲಿ ಬ್ಯುಸಿಯಿರುವ ಆಲಿಯಾ ಭಟ್ (Alia Bhatt) ಸದ್ಯದಲ್ಲೇ ಸಿನಿಮಾಗೆ ಕಮ್‌ಬ್ಯಾಕ್ ಮಾಡೋಕೆ ರೆಡಿಯಾಗಿದ್ದಾರೆ. ಈ ಬೆನ್ನಲ್ಲೇ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್‌ಗೆ ಜಟಾಪಟಿ ಶುರುವಾಗಿದೆ. ಒಂದೇ ದಿನ ರಿಲೀಸ್ ಆಗಲಿದೆ ರಣ್‌ಬೀರ್ (Ranbir Kapoor) ಮತ್ತು ಆಲಿಯಾ (Alia Bhat) ನಟನೆಯ ಸಿನಿಮಾ ತೆರೆಕಾಣುತ್ತಿದೆ.

    ಆಲಿಯಾ ಭಟ್ ನಟನೆಯ ಮೊದಲ ಹಾಲಿವುಡ್ ಸಿನಿಮಾ `ಹಾರ್ಟ್ ಆಫ್ ಸ್ಟೋನ್’ (Heart Of Stone) ತೆರೆಗೆ ಅಪ್ಪಳಿಸಲು ರೆಡಿಯಾಗಿದೆ. ಆಗಸ್ಟ್ 11ಕ್ಕೆ ಆಲಿಯಾ ಭಟ್ (Alia Bhat) ನಟನೆಯ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೇ ದಿನ ರಣ್‌ಬೀರ್ ಮತ್ತು ರಶ್ಮಿಕಾ (Rashmika Mandanna) ನಟನೆಯ `ಅನಿಮಲ್’ (Animal Film) ಕೂಡ ತೆರೆಕಾಣುತ್ತಿದೆ. ಈ ಮೂಲಕ ಪತಿ ಮತ್ತು ಪತ್ನಿಯ ಸಿನಿಮಾ ಒಂದೇ ದಿನ ತೆರೆಗೆ ಬಂದಂತೆ ಆಗುತ್ತಿದೆ.

    ಇನ್ನೂ ಹಾಲಿವುಡ್ ಸಿನಿಮಾಗೆ ಭಾರತದಲ್ಲಿ ಒಳ್ಳೆಯ ಮಾರುಕಟ್ಟೆಯಿದೆ. ಆಲಿಯಾ ಅವರ ಮೊದಲ ಇಂಗ್ಲೀಷ್ ಸಿನಿಮಾವಾಗಿರುವ ಕಾರಣ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ. ರಣ್‌ಬೀರ್ ಮತ್ತು ರಶ್ಮಿಕಾ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರುವ  `ಅನಿಮಲ್’ ಚಿತ್ರದ ಮೇಲೂ ಕೂಡ ನಿರೀಕ್ಷೆ ಹೆಚ್ಚಾಗಿದೆ. ಇದನ್ನೂ ಓದಿ: ಉದ್ಯಮಿ ವಿಶಾಲ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ `ವಜ್ರಕಾಯ’ ನಟಿ ಶುಭ್ರ ಅಯ್ಯಪ್ಪ

    ಒಂದೇ ದಿನ ಥಿಯೇಟರ್‌ನಲ್ಲಿ ರಣ್‌ಬೀರ್ ಮತ್ತು ಆಲಿಯಾ ಚಿತ್ರ ಮುಖಾಮುಖಿಯಾಗುತ್ತಿರುವ ಕಾರಣ, ಯಾವ ಚಿತ್ರ ಗೆಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ಗೆಲ್ಲುತ್ತೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k