Tag: holkar stadium

  • ಆಸೀಸ್ ಸೋಲಿಸಿ ಏಕದಿನದಲ್ಲಿ ನಂಬರ್ ಒನ್ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ

    ಆಸೀಸ್ ಸೋಲಿಸಿ ಏಕದಿನದಲ್ಲಿ ನಂಬರ್ ಒನ್ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ

    ದುಬೈ: ಇಂದೋರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು 5 ವಿಕೆಟ್ ಗಳೊಂದಿಗೆ ಗೆಲ್ಲುವ ಮೂಲಕ ಟೀಂ ಇಂಡಿಯಾ ಈಗ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದೆ.

    ಸೆಪ್ಟೆಂಬರ್ 24ಕ್ಕೆ ಅಂತ್ಯಗೊಂಡ ಹೊಸ ಶ್ರೇಯಾಂಕ ಪಟ್ಟಿಯ ಪ್ರಕಾರ ಒಟ್ಟು 48 ಪಂದ್ಯಗಳಿಂದ 5,764 ಅಂಕಗಳೊಂದಿಗೆ 120 ರೇಟಿಂಗ್ ಸಂಪಾದಿಸಿದ ಭಾರತ ಮೊದಲ ಸ್ಥಾನವನ್ನು ಪಡೆದಿದೆ.

    50 ಪಂದ್ಯಗಳಿಂದ 5,957 ಅಂಗಳೊಂದಿಗೆ ದಕ್ಷಿಣ ಆಫ್ರಿಕಾ 119 ರೇಟಿಂಗ್ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, 50 ಪಂದ್ಯಗಳಿಂದ ಆಸ್ಟ್ರೇಲಿಯಾ 5,709 ಅಂಕ, 114 ರೇಟಿಂಗ್ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

    ಟೆಸ್ಟ್ ನಲ್ಲಿ 36 ಪಂದ್ಯಗಳಿಂದ 4,493 ಅಂಕಗಳೊಂದಿಗೆ 125 ರೇಟಿಂಗ್ ಸಂಪಾದಿಸಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಟಿ20ಯಲ್ಲಿ 13 ಪಂದ್ಯಗಳನ್ನು ಆಡಿರುವ ಭಾರತ 2,328 ಅಂಕಗಳೊಂದಿಗೆ 116 ರೇಟಿಂಗ್ ಪಾಯಿಂಟ್ ಪಡೆಯುವ ಮೂಲಕ 5ನೇ ಸ್ಥಾನವನ್ನು ಪಡೆದುಕೊಂಡಿದೆ.

     

     

  • ಇಂದೋರ್ ಭಾರತದ ಪಾಲಿಗೆ ಅದೃಷ್ಟದ ತಾಣ ಅನ್ನೋದು ಮತ್ತೆ ಸಾಬೀತಾಯ್ತು!

    ಇಂದೋರ್ ಭಾರತದ ಪಾಲಿಗೆ ಅದೃಷ್ಟದ ತಾಣ ಅನ್ನೋದು ಮತ್ತೆ ಸಾಬೀತಾಯ್ತು!

    ಇಂದೋರ್: ಆಸ್ಟ್ರೇಲಿಯಾವನ್ನು 5 ವಿಕೆಟ್ ಗಳಿಂದ ಬಗ್ಗು ಪಡೆಯುವ ಮೂಲಕ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ ಭಾರತದ ಪಾಲಿಗೆ ಅದೃಷ್ಟದ ತಾಣ ಎನ್ನುವುದು ಮತ್ತೆ ಸಾಬೀತಾಗಿದೆ.

    ಈ ಮೂಲಕ ಒಂದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದ ದಾಖಲೆಗೆ ಭಾರತ ಪಾತ್ರವಾಗಿದೆ. ಇದುವರೆಗೆ ಭಾರತ ಯಾವುದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದಿರುವ ದಾಖಲೆಗಳಿಲ್ಲ.

    ಶಾರ್ಜಾ, ಮೀರ್ ಪುರ, ದೆಹಲಿ ಹಾಗೂ ವಿಶಾಖಪಟ್ಟಣಂನಲ್ಲಿ ಭಾರತ ಸತತ 4 ಪಂದ್ಯಗಳನ್ನು ಗೆದ್ದಿತ್ತು. ಇದರ ಜೊತೆಗೆ ಟೀಂ ಇಂಡಿಯಾ ಸತತ 4 ಪಂದ್ಯಗಳನ್ನು ಆಸ್ಟ್ರೇಲಿಯಾ ವಿರುದ್ಧ ಗೆದ್ದಂತಾಗಿದು. ಇದು ಕೂಡಾ ಭಾರತದ ಪಾಲಿಗೆ ದಾಖಲೆ.

    ಈ ಹಿಂದೆ  ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳನ್ನು ಗೆದ್ದಿದ್ದರೆ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಲಾ ಒಂದೊಂದು ಗೆಲುವು ಒಲಿದಿತ್ತು. ಈಗ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲೂ ಗೆಲ್ಲುವ ಮೂಲಕ ತನ್ನ ಅಜೇಯ ಗೆಲುವಿನ ಸರಣಿಯನ್ನು ಟೀಂ ಇಂಡಿಯಾ ಮುಂದುವರಿಸಿದೆ.

    2006ರಲ್ಲಿ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಜಯ ಸಾಧಿಸಿದ್ದರೆ, 2008ರಲ್ಲಿ ಮತ್ತೆ ಇಂಗ್ಲೆಂಡ್ ವಿರುದ್ಧ 54 ರನ್ ಗಳ ಜಯವನ್ನು ಸಾಧಿಸಿತ್ತು. 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 153 ರನ್ ಗಳಿಂದ ಗೆದ್ದಿದ್ದರೆ, 2015 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 22 ರನ್ ಗಳಿಂದ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು.

    ಜಸ್‍ಪ್ರೀತ್ ಬುಮ್ರಾ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ, ಚಹಲ್ ಮತ್ತು ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.