Tag: Holi

  • ಹೋಳಿ ಆಡುವ ನೆಪದಲ್ಲಿ ವಸೂಲಿ ದಂಧೆ

    ಹೋಳಿ ಆಡುವ ನೆಪದಲ್ಲಿ ವಸೂಲಿ ದಂಧೆ

    ಚಿಕ್ಕೊಡಿ: ಹೋಳಿ ಹಬ್ಬದ ನಿಮಿತ್ತ ಬಣ್ಣ ಆಡುವ ನೆಪದಲ್ಲಿ ಕೆಲ ಯುವಕರು ವಸೂಲಿ ದಂಧೆಗೆ ಇಳಿದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಕ್ಕೋಡಿ ರೋಡ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ.

    ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ತಡೆದು ವಸೂಲಿಗೆ ಇಳಿದಿರುವ ಖದೀಮರು ಹೆದ್ದಾರಿಯ ಮೇಲೆ ಮರದ ದಿಂಬುಗಳನ್ನ ಅಳವಡಿಸಿ ಹಣ ವಸೂಲಿ ಮಾಡುತ್ತಿದ್ದರು. ಪ್ರತಿ ವಾಹನದಿಂದ 30 ರಿಂದ 50 ರೂಪಾಯಿವರೆಗೆ ವಸೂಲಿ ಮಾಡುತ್ತಿದ್ದಾರೆ. ಹಣ ನೀಡಿದರೇ ಮಾತ್ರ ಮುಂದೆ ಹೋಗಲು ಅವಕಾಶ ಕಲ್ಪಿಸುತ್ತಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಸಮಯದಲ್ಲೇ ಉಪಚುನಾವಣೆ ಯಾಕೆ – ಆಯೋಗದ ವಿರುದ್ಧ ಮಮತಾ ಕಿಡಿ

    30ಕ್ಕೂ ಹೆಚ್ಚು ಜನರಿಂದ ಹೆದ್ದಾರಿ ಮೇಲೆ ಹಗಲು ದರೋಡೆ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದರು. ಪೊಲೀಸರಿಗೆ ಮಾಹಿತಿ ನೀಡಿದರು ಸ್ಥಳಕ್ಕೆ ಬಾರದ ಪೊಲೀಸರ ವಿರುದ್ದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ರಾಯಚೂರಿನಲ್ಲಿ ಮದ್ಯ ಮಾರಾಟ ನಿಷೇಧ

    ರಾಯಚೂರಿನಲ್ಲಿ ಮದ್ಯ ಮಾರಾಟ ನಿಷೇಧ

    ರಾಯಚೂರು: ಬಿಸಿಲ ನಾಡು ರಾಯಚೂರಿನಲ್ಲಿ ಹೋಳಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪರಸ್ಪರ ಬಣ್ಣ ಎರಚಿಕೊಂಡು ಜನ ಸಂಭ್ರಮ ಪಡುತ್ತಿದ್ದಾರೆ. ಬಿರುಬೇಸಿಗೆಯಲ್ಲಿ ಹೋಳಿ ಹಬ್ಬ ಜನರಿಗೆ ತಂಪನೆರೆಯುತ್ತಿದೆ. ವಯಸ್ಸಿನ ಭೇದ ಮರೆತು ಹೋಳಿಯಲ್ಲಿ ಜನ ಮಿಂದೇಳುತ್ತಿದ್ದಾರೆ.

    ಸಂಗೀತ ವಾದ್ಯ, ನೃತ್ಯ ಮಾಡುವ ಮೂಲಕ ಹೋಳಿ ಆಚರಣೆ ಮಾಡಲಾಗುತ್ತಿದೆ. ಕಾಮಣ್ಣನ ದಹನ ಬಳಿಕ ಬೆಳಗ್ಗಿನಿಂದಲೇ ಹೋಳಿ ಆಚರಣೆ ಜೋರಾಗಿದೆ. ಹೋಳಿ ಹಬ್ಬದಲ್ಲಿ ಕಾಮಣ್ಣನ ದಹನ ಹಾಗೂ ಪರಸ್ಪರ ಬಣ್ಣ ಎರಚಾಡುವುದರಿಂದ ಹಾಗೂ ಹಿಜಬ್ ವಿವಾದ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್

    ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ಆಕಸ್ಮಿಕ ಅಗ್ನಿ ಅವಘಡ – ಲಕ್ಷಾಂತರ ಮೌಲ್ಯದ ಕಬ್ಬು ಬೆಂಕಿಗಾಹುತಿ

  • ಪ್ರತಿ ಬಣ್ಣದಲ್ಲೂ ಇದೆ ಹರುಷ – ಹೋಳಿ ಹಬ್ಬಕ್ಕೆ ಶುಭಕೋರಿದ ಪ್ರಧಾನಿ

    ಪ್ರತಿ ಬಣ್ಣದಲ್ಲೂ ಇದೆ ಹರುಷ – ಹೋಳಿ ಹಬ್ಬಕ್ಕೆ ಶುಭಕೋರಿದ ಪ್ರಧಾನಿ

    ನವದೆಹಲಿ: ಕೋವಿಡ್ ಇಳಿಮುಖವಾದ ನಂತರ ಇಡೀ ದೇಶವು ಸಂಭ್ರಮದಿಂದ ಹೋಳಿಹಬ್ಬ ಆಚರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‍ಸಿಂಗ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಹುಲ್‍ಗಾಂಧಿ ಸೇರಿದಂತೆ ಪ್ರಮುಖರು ಹಬ್ಬಕ್ಕೆ ಶುಭ ಕೋರಿದ್ದಾರೆ.

    `ನಿಮ್ಮೆಲ್ಲರಿಗೂ ಪರಸ್ಪರ ಪ್ರೀತಿ ವಾತ್ಸಲ್ಯ ಹಾಗೂ ಸಹೋದರತ್ವ ಸಂಕೇತವಾಗಿರುವ ಹೋಳಿಹಬ್ಬದ ಶುಭಾಶಯಗಳು. ಈ ಬಣ್ಣದ ಹಬ್ಬದಲ್ಲಿ ಪ್ರತಿಯೊಂದು ಬಣ್ಣವೂ ನಿಮ್ಮ ಜೀವನದಲ್ಲಿ ಸಂತೋಷ, ಹರುಷ ತರಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನಿಯನ್ನರು ಕೆನಡಾದಲ್ಲಿ 3 ವರ್ಷ ಉಳಿಯಬಹುದು

    ರಕ್ಷಣಾ ಸಚಿವ ರಾಜನಾಥ್ ಸಿಂಗ್, `ಇದು ಸಕಾರಾತ್ಮಕತೆ, ಚೈತನ್ಯ, ಸಂತೋಷ ಹಾಗೂ ಸಾಮರಸ್ಯಕ್ಕೆ ಸಂಬಂಧಿಸಿದ ಬಣ್ಣಗಳ ಹಬ್ಬವಾಗಿದೆ. ಎಲ್ಲರಿಗೂ ಹಬ್ಬದ ಶುಭಾಶಯಗಳು’ ಎಂದಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಸಹ ಹೋಳಿ ಹಬ್ಬದ ಸಂದೇಶ ಕೋರಿದ್ದು, `ಹೃದಯಗಳನ್ನು ಬೆಸೆಯುವ ಈ ಹೋಳಿಹಬ್ಬ ಪ್ರತಿಯೊಬ್ಬರಿಗೂ ಹರುಷ ತರಲಿ. ಕೋವಿಡ್ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಇಳಿಕೆಯಾಗುತ್ತಿರುವುದು ಹರ್ಷದಾಯಕ. ಆದಾಗ್ಯೂ ಹಲವಾರು ದೇಶಗಳಲ್ಲಿ ಮತ್ತೆ ಅಲೆ ಮುಂದುವರಿಯುತ್ತಿದ್ದು ಎಚ್ಚರಿಕೆಯಿಂದಿರುವಂತೆ ಜನರಿಗೆ ಸೂಚಿಸಲಾಗುತ್ತಿದೆ’ ಎಂದೂ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ವ್ಯಕ್ತಿ ಕೊಲೆಗೈದು ಅರ್ಧಂಬರ್ಧ ಶವ ಸುಟ್ಟು ಪರಾರಿಯಾದ ಹಂತಕರು

    On Holi, PM Scott Morrison Thanks Indian Australians With Special Message

    ಆಸ್ಟ್ರೇಲಿಯಾ ಪ್ರಧಾನಿಯ ಶುಭಸಂದೇಶ
    ಹೋಳಿಹಬ್ಬದ ಪ್ರಯುಕ್ತ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯರಿಗೆ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರೂ ಶುಭ ಹಾರೈಸಿದ್ದಾರೆ. ಈ ಕುರಿತು ಅಧೀಕೃತ ಪ್ರಕಟಣೆ ಹೊರಡಿಸಿರುವ ಅವರು, `ನಾನು ಭಾರತೀಯ ಆಸ್ಟ್ರೇಲಿಯನ್ ಸಮುದಾಯಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ ಸ್ವಂತ ಕುಟುಂಬಗಳಿಗೆ ಮಾತ್ರವಲ್ಲದೆ ಎಲ್ಲ ಆಸ್ಟ್ರೇಲಿಯನ್ನರಿಗೂ ನೀವು ಪ್ರೀತಿ ಮತ್ತು ಕಾಳಜಿಯನ್ನು ತೋರಿಸಿದ್ದೀರಿ. ಅಲ್ಲದೆ, ಕೋವಿಡ್ ಕಾರಣದಿಂದ ಅಂತರ ಮೂಡಿದ್ದ ಸಮುದಾಯಗಳ ನಡುವೆ ಇಂತಹ ಆಚರಣೆಗಳು ಸ್ನೇಹ ಹಾಗೂ ಏಕತೆಯ ಉತ್ಸಾಹದಲ್ಲಿ ನಮ್ಮನ್ನು ಒಟ್ಟಿಗೇ ಸೇರಿಸುತ್ತವೆ, ಭವಿಷ್ಯದ ಭರವಸೆಗಳನ್ನೂ ಪ್ರೇರೇಪಿಸುತ್ತದೆ’ ಎಂದು ಸಂದೇಶ ನೀಡಿದ್ದಾರೆ.

  • ಹೋಳಿ ಹಬ್ಬದ ಪ್ರಯುಕ್ತ ಪ್ರಾಣಿಗಳ ಮೇಲೆ ಬಣ್ಣ ಬಳಸದಿರಲು ಸೂಚನೆ: ಡಾ. ಉಮಾಪತಿ

    ಹೋಳಿ ಹಬ್ಬದ ಪ್ರಯುಕ್ತ ಪ್ರಾಣಿಗಳ ಮೇಲೆ ಬಣ್ಣ ಬಳಸದಿರಲು ಸೂಚನೆ: ಡಾ. ಉಮಾಪತಿ

    ಬೆಂಗಳೂರು: ಹೋಳಿ ಹಬ್ಬದ ಸಂದರ್ಭದಲ್ಲಿ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ಹಸು, ಮೇಕೆ, ಕುರಿ ಇತ್ಯಾದಿಗಳ ಮೇಲೆ ಬಣ್ಣವನ್ನು ಬಳಸದಿರುವಂತೆ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯದರ್ಶಿಗಳು ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಬೆಂಗಳೂರು ನಗರ ಜಿಲ್ಲಾ ಉಪನಿರ್ದೇಶಕರಾದ ಡಾ. ಪಿ.ಉಮಾಪತಿಯವರು ಸಾರ್ವಜನಿಕರನ್ನು ಆಗ್ರಹಿಸಿದ್ದಾರೆ.

    ರಾಸಯನಿಕವಾಗಲಿ ಅಥವಾ ನೈಸರ್ಗಿಕ ಬಣ್ಣವಾಗಲಿ ಪ್ರಾಣಿಗಳ ದೇಹದೊಳಗೆ ಚರ್ಮ, ಬಾಯಿ, ಕಣ್ಣು ಅಥವಾ ಮೂಗಿನ ಮೂಲಕ ಪ್ರವೇಶಿಸಿದ್ದಲ್ಲಿ ವಿವಿಧ ರೀತಿಯ ಅಲರ್ಜಿ, ವಾಂತಿ ಹಾಗೂ ಕುರುಡುತನವನ್ನೂ ಸಹ ತರುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹೋಳಿ ಹಬ್ಬ – ಧಾರವಾಡದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ

    ಜನರ ಮೋಜಿಗಾಗಿ ಆಡುವ ಬಣ್ಣದ ಆಟವು ಪ್ರಾಣಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಇದನ್ನು ತಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆ ಕಾಯ್ದೆ 1960(PCAACT) ಅನ್ವಯ ಇದು ಕಾನೂನು ಬಾಹಿರವಾಗಿದ್ದು ಅಂತಹ ಯಾವುದೇ ಪ್ರಕರಣಗಳು ವರದಿಯಾದ್ದಲ್ಲಿ, ಕಾಯ್ದೆಯ ನಿಯಮಗಳ ಅನ್ವಯ ಕ್ರಮ ಜರುಗಿಸಲಾಗುವುದೆಂದು ಅವರು ಎಚ್ಚರಿಸಿದ್ದಾರೆ.

     

  • ಬರುತ್ತಿದೆ ಹೋಳಿ- ಚರ್ಮ ಸುರಕ್ಷತೆಗೆ ಇರಲಿ ಒಂದಿಷ್ಟು ಕಾಳಜಿ

    ಬರುತ್ತಿದೆ ಹೋಳಿ- ಚರ್ಮ ಸುರಕ್ಷತೆಗೆ ಇರಲಿ ಒಂದಿಷ್ಟು ಕಾಳಜಿ

    2022ರ ಹೋಳಿ ಹಬ್ಬ ಹತ್ತಿರವಾಗುತ್ತಿದೆ. ಎಲ್ಲೆಡೆ ಬಗೆ-ಬಗೆಯ ಬಣ್ಣಗಳು ರಂಗೇರಿಸಲು ಸಜ್ಜಾಗುತ್ತಿವೆ. ಹೌದು… ಹೋಳಿ ಎಂದೊಡನೆ ಎಲ್ಲರಿಗೂ ನೆನಪಾಗುವುದೇ ಬಣ್ಣದ ರಂಗು. ಅಂದು ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ, ನೀರಿನೊಂದಿಗೆ ಮಿಶ್ರಣ ಮಾಡಿ ಹೋಳಿ ಹಾಡುತ್ತಾ ಸಂಭ್ರಮಿಸುತ್ತಾರೆ. ಸೆಲಿಬ್ರೆಟಿಗಳ ಮನೆಗಳಲ್ಲಂತೂ ಇದು ಕೊಂಚ ಹೆಚ್ಚೆಂದೇ ಹೇಳಬಹುದು. ಆದರೆ, ಬಣ್ಣ ಹಾಕುವುದು ಸಂಭ್ರಮಕ್ಕೆ ಅಷ್ಟೇ ಅಲ್ಲ ಅಪಾಯವನ್ನೂ ಉಂಟುಮಾಡುತ್ತದೆ. ಬಣ್ಣದಲ್ಲಿ ಅಡಗಿರುವ ಹಾನಿಕಾರಕ ರಾಸಾಯನಿಕ ಅಂಶಗಳು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ನಿಮ್ಮ ಚರ್ಮದ ಮೇಲೂ ಒಂದಿಷ್ಟು ಕಾಳಜಿ ಇರಬೇಕು. ಅದಕ್ಕೇನು ಮಾಡಬೇಕು? ಎಂಬುದರ ಬಗ್ಗೆ ಚರ್ಮರೋಗತಜ್ಞರಾದ ಪೂಜಾ ನಾಗದೇವ್ ಅವರು ಒಂದಿಷ್ಟು ಟಿಪ್ಸ್‌ಗಳನ್ನು ನೀಡಿದ್ದಾರೆ. ಅವುಗಳನ್ನಿಲ್ಲಿ ನೋಡಬಹುದು.

    ಐಸ್‍ಕ್ಯೂಬ್ ಹಚ್ಚಿ: ಚರ್ಮವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಮೊದಲು ಮುಖವನ್ನು ಐಸ್‍ಕ್ಯೂಬ್‍ಗಳಿಂದ ಉಜ್ಜಬೇಕು. ಇದರಿಂದ ಚರ್ಮದ ಮೇಲೆ ತೆರೆದ ರಂಧ್ರಗಳಿದ್ದರೆ ಮುಚ್ಚಿಕೊಳ್ಳುತ್ತದೆ. ಹೋಳಿ ಹಬ್ಬದಲ್ಲಿ ಕೆಮಿಕಲ್ ಬಣ್ಣಗಳಿಂದ ಚರ್ಮದ ಕಾಂತಿ ಹಾಳಾಗುವುದನ್ನು ತಪ್ಪಿಸುತ್ತದೆ. ಐಸ್ ಕ್ಯೂಬ್‍ನಿಂದ 10 ನಿಮಿಷಗಳ ಕಾಲ ಮಸಾಜ್ ಮಾಡಿದ ನಂತರ ಸಾವಯವ ತೈಲವನ್ನು ಹಾಕಿದರೆ, ನಂತರದಲ್ಲಿ ಉಂಟಾಗುವ ಮೊಡವೆಗಳನ್ನು ತಡೆಯಬಹುದು. ಇದನ್ನೂ ಓದಿ: ಸ್ಕೂಟಿ ಕಲಿಯಲು ಹೋದ ಪತ್ನಿಯನ್ನು ಕೊಲ್ಲಲು ಮುಂದಾದ ಪತಿ

    ತೆಂಗಿನ ಎಣ್ಣೆ ಸೂಕ್ತ: ಮನೆಯಿಂದ ಹೊರಗೆ ಹೋಗುವ ಮೊದಲು ನಿಮ್ಮ ದೇಹ ಅಥವಾ ಮುಖಕ್ಕೆ ಮಂದವಾಗಿ ಮಾಯಿಶ್ಚರೈಸರ್ ಅಥವಾ ತೆಂಗಿನ ಎಣ್ಣೆಯನ್ನು ಹಚ್ಚುವುದು ಸೂಕ್ತ. ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮವು ಎಣ್ಣೆಯನ್ನು ಬಹುಬೇಗನೇ ಹೀರಿಕೊಳ್ಳುತ್ತದೆ. ಇದರಿಂದ ಬಣ್ಣ ಹಾಕಿದರೂ ಚರ್ಮಕ್ಕೆ ಯಾವುದೇ ಹಾನಿಯಾಗದಂತೆ ಇದು ನೋಡಿಕೊಳ್ಳುತ್ತದೆ. ನಂತರ ಬಣ್ಣವನ್ನು ನೀರಿನಿಂದ ಸುಲಭವಾಗಿ ತೆಗೆದುಹಾಕಬಹುದು.

    ಸೂರ್ಯನಕಾಂತಿ ಮರೆಮಾಚದಿರಲಿ:  ಸಹಜವಾಗಿ ಹೋಳಿ ಹಬ್ಬ ಹೊರಾಂಗಣದಲ್ಲಿಯೇ ನಡೆಯುವುದರಿಂದ ಸೂರ್ಯನ ಬೆಳಕಿಗೆ ಹೋಳಿ ಬಣ್ಣ ಹಾಗೂ ನೀರಿಗೆ ನಿರಂತರವಾಗಿ ಒಡ್ಡಿಕೊಳ್ಳುತ್ತದೆ. ಇದರಿಂದ ಚರ್ಮವನ್ನು ನಿರ್ಜಲೀಕರಣಗೊಳಿಸಬಹುದು. ಇದರಿಂದಾಗಿ ಒಮ್ಮೆ ಚರ್ಮವು ಬೇರೊಂದು ಬಣ್ಣಕ್ಕೆ ತಿರುಗಿದರೆ ಸ್ವ-ಭಾವಕ್ಕೆ ಮರುಪಡೆಯುವುದು ತುಂಬಾ ಕಷ್ಟವಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸುವುದು ಅವಶ್ಯಕ. ಇದನ್ನೂ ಓದಿ: ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಪತಿ- ಪತ್ನಿಯಿಂದ ಲವ್ ಜಿಹಾದ್ ಆರೋಪ

    ಉಗುರು ಬಣ್ಣ ಹಚ್ಚಿ: ನೀವು ಇಷ್ಟ ಪಡುವ ಯಾವುದೇ ಬಣ್ಣದಿಂದ ನಿಮ್ಮ ಕೈ ಮತ್ತು ಕಾಲಿನ ಬೆರಳುಗಳು ಅದೇ ಬಣ್ಣದ ಸ್ವರೂಪ ಪಡೆಯಬಹುದು. ಹಾಗಾಗಿ ನೀವು ಉಗುರು ಬಣ್ಣವನ್ನು ಹಚ್ಚುವುದರಿದ ಅದು ನೈಜ ಚರ್ಮದ ಬಣ್ಣದಿಂದ ಸುರಕ್ಷಿತವಾಗಿರಿಸುತ್ತದೆ. ಹೋಳಿಯ ನಂತರ ನೇಲ್ ಪಾಲಿಶ್ ರಿಮೂವರ್ ಅನ್ನು ಬಳಸಿ ಉಗುರು ಬಣ್ಣ ಮತ್ತು ಎಲ್ಲಾ ಹೋಳಿ ಬಣ್ಣವನ್ನು ಒಂದೇ ಸಮಯದಲ್ಲಿ ಸುಲಭವಾಗಿ ತೆಗೆದುಹಾಕಬಹುದು. ನೀವು ವರ್ಣರಂಜಿತ ಉಗುರು ಬಣ್ಣವನ್ನು ಬಳಸಲು ಬಯಸದಿದ್ದರೆ, ಸ್ಪಷ್ಟವಾದ ಟಾಪ್ ಕೋಟ್ ಸಾಕು.

    ಲಿಪ್ ಬಗ್ಗೆಯೂ ಕೇರ್ ಇರಲಿ:  ಹೋಳಿಯ ಬಣ್ಣದಲ್ಲಿ ಮಿಶ್ರಣಗೊಂಡಿರುವ ಬಣ್ಣಗಳನ್ನು ಮುಖಕ್ಕೆ ಎರಚಿದಾಗ ಇದರಲ್ಲಿನ ಹಾನಿಕಾರಕ ರಾಸಾಯನಿಕಗಳು ತುಟಿಯ ಅಂದವನ್ನು ಹಾಳುಮಾಡುತ್ತವೆ. ಆದ್ದರಿಂದ ಲಿಪ್‍ಬಾಮ್ ಅನ್ನು ಹಚ್ಚಿ, ಇದರಿಂದ ತುಟಿಯ ಮೇಲೆ ಕೂರುವ ಒಂದು ಪದರವು ಬಣ್ಣಗಳಿಂದ ರಕ್ಷಣೆ ಒದಗಿಸುತ್ತದೆ.

  • ಯುಗಾದಿ ಹಬ್ಬಕ್ಕೆ ಕಾಯಿ ಹೋಳಿಗೆ

    ಯುಗಾದಿ ಹಬ್ಬಕ್ಕೆ ಕಾಯಿ ಹೋಳಿಗೆ

    ಯುಗಾದಿ ಹಬ್ಬ ಹತ್ತಿರ ಬರುತ್ತಿದೆ. ಮನೆಯಲ್ಲಿ ಸಿಹಿಯಾದ ತಿಂಡಿಗಳನ್ನು ಮಾಡಬೇಕು. ಹಬ್ಬ ಎಂದರೆ ಮೊದಲಿಗೆ ನೆನಪಿಗೆ ಬರುವುದೆ ಹೋಳಿಗೆ. ಬೇಳೆ ಹೋಳಿಗೆ ತಿಂದು ಬೇಸರವಾಗಿದ್ರೆ ಈ ಬಾರಿ ಮನೆಯೆಲ್ಲಿ ಕಾಯಿ ಹೋಳಿಗೆ ಮಾಡಿ ಸವಿಯಿರಿ. ಇಲ್ಲಿದೆ ಮಾಡುವ ವಿಧಾನ…

    ಬೇಕಾಗುವ ಸಾಮಗ್ರಿಗಳು:
    * ಕಾಯಿ- 3 ಕಪ್
    * ಬೆಲ್ಲ- 2 ಕಪ್
    * ಹುರಗಡಲೆ- 1 ಟೇಬಲ್ ಸ್ಪೂನ್
    * ಗಸಗಸೆ- 2 ಟೀ ಸ್ಪೂನ್
    * ಏಲಕ್ಕಿ ಪುಡಿ – 1 ಟೀ ಸ್ಪೂನ್
    * ಹೋಳಿಗೆ ರವೆ- ಕಾಲು ಕೆಜಿ
    * ಮೈದಾಹಿಟ್ಟು- 100 ಗ್ರಾಂ
    * ಅರಿಶಿನ- 1 ಟೀ ಸ್ಪೂನ್
    * ಅಡುಗೆ ಎಣ್ಣೆ- 1 ಕಪ್
    * ಉಪ್ಪು ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಒಂದು ಅಗಲವಾದ ಪಾತ್ರೆಗೆ ಹೋಳಿಗೆ ರವೆ, ಮೈದಾಹಿಟ್ಟು, ಅರಿಶಿನ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಕಲಸುತ್ತಾ ಬನ್ನಿ. ಹಿಟ್ಟು ಮೃದುವಾಗಿರಬೇಕು, ಹೆಚ್ಚು ಗಟ್ಟಿಗಿದ್ರೆ ಹೋಳಿಗೆ ಲಟ್ಟಿಸುವುದು ಕಷ್ಟವಾಗುತ್ತದೆ.
    * ಈ ಮಿಶ್ರಣಕ್ಕೆ ಸ್ವಲ್ಪ ಎಣ್ಣೆ ಸೇರಿಸಿ ಮೃದುವಾಗಿರುವಂತೆ ಕಲಸಿ ಒಂದು ಪಾತ್ರೆಗೆ ಹಾಕಿ 1 ಗಂಟೆ ಸಮಯ ಮುಚ್ಚಿ ಇಟ್ಟಿರಬೇಕು.

    * ಒಂದು ಮಿಕ್ಸಿ ಜಾರಿಗೆ ಕಾಯಿತುರಿ, ಹುರಿಗಡೆಲೆ ಹಾಕಿ 2 ಸ್ಪೂನ್ ನೀರು ಹಾಕಿ ಸಣ್ಣದಾಗಿ ರುಬ್ಬಿಕೊಳ್ಳಬೇಕು.
    * ಒಲೆ ಮೇಲೆ ಒಂದು ಪಾತ್ರೆಗೆ ಬೆಲ್ಲ, ನೀರು ಹಾಕಿ ಕುದಿಸಿ. ಬೆಲ್ಲ ಕರಗಿ ನೀರು ಕುದಿಯುವಾಗ ಅದಕ್ಕೆ ರುಬ್ಬಿರುವ ಕಾಯಿ ಮಿಶ್ರಣವನ್ನು ಹಾಕಬೇಕು.
    * ಏಲಕ್ಕಿ ಪುಡಿ ಹಾಕಿ ಕಲಸಿ. ಈ ಮಿಶ್ರಣ ಬಣ್ಣ ಬದಲಾಗಿ ಗಟ್ಟಿಯಾಗಿ ಬರುವವರೆಗೆ ಸಣ್ಣ ಉರಿ ಬೆಂಕಿಯಲ್ಲಿ ಬೇಯಿಸಬೇಕು. ಇದಕ್ಕೆ ಗಸಗಸೆ, ಏಲಕ್ಕಿ ಹಾಕಿ ಮಿಶ್ರಣವನ್ನು ಸಿದ್ಧಪಡಿಸಿಕೊಳ್ಳಬೇಕು.

    * ಊರ್ಣಕ್ಕೆ ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಟ್ಟುಕೊಳ್ಳಿ.
    * ಕೈಗೆ ಎಣ್ಣೆ ಸವರಿಕೊಂಡು ತೆಗೆದುಕೊಂಡು ಹಿಟ್ಟನ್ನು ಕೈಯಲ್ಲಿ ಸ್ವಲ್ಪ ಅಗಲ ಮಾಡಿ ಊರ್ಣವನ್ನು ಅದರೊಳಗೆ ಇಟ್ಟು ಹೋಳಿಗೆ ಪೇಪರ್ ಮೇಲೆ ಇಟ್ಟು ಲಟ್ಟಿಸಿ.
    * ತವಾ ಬಿಸಿಯಾದ ಮೇಲೆ ಹಾಕಿ ಎರಡು ಕಡೆ ಬೇಯಿಸಿದ್ರೆ ಕಾಯಿ ಹೋಳಿಗೆ ಸವಿಯಲು ಸಿದ್ಧವಾಗುತ್ತದೆ. ಬಿಸಿಯಾದ ತುಪ್ಪದೊಂದಿಗೆ ಹೋಳಿಗೆಯನ್ನು ಸವಿಯ ಬಹುದಾಗಿದೆ.

  • ಬೇಡಿದ ವರಗಳನ್ನು ನೀಡುವ ಬಂಗಾರದ ರತಿ, ಕಾಮರು

    ಬೇಡಿದ ವರಗಳನ್ನು ನೀಡುವ ಬಂಗಾರದ ರತಿ, ಕಾಮರು

    ಗದಗ: ನಗರದ ಕಿಲ್ಲಾ ಓಣಿಯಲ್ಲಿ ವಿಶೇಷ ಹಾಗೂ ವಿಭಿನ್ನವಾದ ರತಿ-ಕಾಮರಿದ್ದಾರೆ. ಅವರು ಮದುವೆ ಆಗದವರಿಗೆ ಕಂಕಣ ಭಾಗ್ಯ. ಮಕ್ಕಳು ಆಗದವರಿಗೆ ಸಂತಾನ ಭಾಗ್ಯ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ. ಬಡವರಿಗೆ ಸಿರಿತನ ಭಾಗ್ಯ ಕರುಣಿಸುತ್ತಾರೆ. ಏನಿದು ಚುನಾವಣೆಗಳ ಭರವಸೆ ಅಂತಾ ಅಂದುಕೊಳ್ಳಬೇಡಿ. ಇದು ಬೇಡಿ ಬಂದವರಿಗೆ ಬಯಸಿದ್ದನ್ನು ನೀಡುವ ಗದಗದ ಇಷ್ಟಾರ್ಥ ರತಿ-ಕಾಮರ ಜಾತ್ರೆಯ ವಿಶೇಷವಾಗಿದೆ.

    ನಗರದಲ್ಲಿ 155 ವರ್ಷಗಳಿಂದ ಈ ಕಾಮ-ರತಿಯರನ್ನು ಪ್ರತಿಷ್ಠಾಪಿಸುತ್ತಾ ಬಂದಿದ್ದಾರೆ. ಇದಕ್ಕೆ ಸರ್ಕಾರಿ ರತಿ-ಕಾಮರು ಎಂತೆಲ್ಲಾ ಕರೆಯುತ್ತಾರೆ. ಇಲ್ಲಿಯ ರತಿಗೆ ಪ್ರತಿವರ್ಷ ಸುಮಾರು 25 ರಿಂದ 30 ಕೆಜಿ ವರೆಗೆ ಬಂಗಾರದ ವಿವಿಧ ಲೇಪನಗಳನ್ನ ಹಾಕಲಾಗುತ್ತದೆ. ಮನ್ಮಥ ಅಪ್ಪಟ ಚಿನ್ನದ ಕಂಠಿಹಾರ, ರತಿಗೆ ಕಿಲೋ ಗಟ್ಟಲೆ ಚಿನ್ನದ ಸರಗಳಿಂದ ಅಲಂಕರಿಸಿ ರತಿ-ಮನ್ಮಥರನ್ನು ಅದ್ದೂರಿಯಾಗಿ ಸಿದ್ಧಮಾಡುತ್ತಾರೆ.

    ತಮ್ಮ ಮನೆಯಲ್ಲಿರುವ ಬಂಗಾರದ ವವಸ್ತುಗಳನ್ನು ಈ ರತಿಗೆ ನೀಡಿದರೆ ಬರುವ ವರ್ಷದಲ್ಲಿ ಮತ್ತಷ್ಟು ಬಂಗಾರ ಹೆಚ್ಚಾಗುತ್ತೆ ಎಂಬ ನಂಬಿಕೆ. ರಾಶಿಗಟ್ಟಲೆ ಬಂಗಾರದ ಆಭರಣಗಳು ಇಲ್ಲಿ ಜಮಾವಣೆಯಾಗಿರುತ್ತವೆ. ಭಕ್ತರು ಕೊಡುವ ಆಭರಣಗಳನ್ನು ಈ ರತಿ-ಕಾಮರ ಕಮೀಟಿಯವರು ಅವುಗಳಿಗೆ ಅವರ ಹೆಸರು ಬರೆದು ನೊಂದಾಯಿಸಿಕೊಂಡು ಒಂದು ಚೀಟಿ ಕೊಡುತ್ತಾರೆ. ಆ ಬಂಗಾರಕ್ಕೆ ಭಕ್ತರ ಹೆಸರಿನ ಒಂದು ಸಣ್ಣ ಚೀಟಿ ಸಹ ಬರೆದು ಹಾಕಲಾಗುತ್ತದೆ. ಜೊತೆಗೆ ಭದ್ರತೆ ಕೂಡಾ ಇರುವುದರಿಂದ ಒಂದು ತುಂಡು ಬಂಗಾರ ಸಹ ಕದಲುವುದಿಲ್ಲ. ಭಕ್ತರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಇದು ಹಿಂದಿನಿಂದ ನಡೆದು ಬಂದ ಸಂಪ್ರದಾಯ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕೊರೊನಾ 2ನೇ ಅಲೆಯ ಮಧ್ಯೆಯೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. 155 ವರ್ಷಗಳ ಇತಿಹಾಸವಿರುವ ನಗರದ ರತಿ-ಕಾಮರ ಹೋಳಿ ಆಚರಣೆಗೆ ತನ್ನದೆ ಆದ ವೈಶಿಷ್ಟ್ಯವಿದೆ. 5 ದಿನಗಳ ವರೆಗೆ ರತಿ ಮನ್ಮಥರನ್ನು ಪ್ರತಿಷ್ಠಾಪಿಸುತ್ತಾರೆ. ಪ್ರತಿ ನಿತ್ಯ ಎರಡು ಭಾರಿ ಸಿಹಿ ಅಡುಗೆ ಎಡೆಮಾಡುವ ಮೂಲಕ ಪೂಜೆ ಮಾಡುತ್ತಾರೆ. ಈ ರತಿ ಕಾಮರಿಗೆ ಪೂಜೆ ಸಲ್ಲಿಸಿದರೆ ಮದುವೆಯಾಗದವರಿಗೆ ಕಂಕಣ ಭಾಗ್ಯ, ಮಕ್ಕಳಾಗದವರಿಗೆ ಸಂತಾನ ಭಾಗ್ಯ, ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ, ಸೊಂಬೆರಿಗಳಿಗೆ ಸಿರಿತನ ಹೀಗೆ ಬೇಡಿಬಂದ ಭಕ್ತರಿಗೆ ಬಯಸಿದ್ದನ್ನೆಲ್ಲವನ್ನು ನೀಡುವ ಸರಸ ಭಂಗಿಯ ಕಲ್ಪ ವೃಕ್ಷವಿದ್ದಂತೆ ಎಂಬ ನಂಬಿಕೆ ಇದೆ.

    ಜಾತ್ರೆಯಲ್ಲಿ ಅನೇಕ ಯುವತಿಯರು ಕಂಕಣ ಕಟ್ಟಿದರು, ಮಕ್ಕಳಾಗದ ಮಹಿಳೆಯರು ತೊಟ್ಟಿಲು, ಅರಿಶಿನ ಕುಂಕುಮ, ಕಣವಿಟ್ಟರು. ನಿರುದ್ಯೋಗಿಗಳು ಭಕ್ತಿಯಿಂದ ಬೇಡಿಕೊಂಡರು. ಈ ಬಂಗಾರದ ರತಿ-ಕಾಮರ ದರ್ಶನಕ್ಕೆ ವಿವಿಧ ಜಿಲ್ಲೆಯಿಂದಲೂ ಭಕ್ತರು ಬರುತ್ತಾರೆ. ಸುಮಾರು 30 ಕೆಜಿ ವರೆಗೆ ಬೆಳ್ಳಿ-ಬಂಗಾರ ವಸ್ತುಗಳನ್ನ ಮೂರ್ತಿಗೆ ಹಾಕುತ್ತಾರೆ. ಈ ಬಂಗಾರದ ರತಿ-ಕಾಮರನ್ನು ನೋಡಲು ಅನೇಕ ಭಕ್ತ ಸಮೂಹವೇ ಇಲ್ಲಿಗೆ ಹರಿದು ಬಂದು ಭಕ್ತಿಯಿಂದ ಬೇಡಿಕೊಂಡಿದ್ದಾರೆ. ಜನರು ತಮ್ಮ ಬೇಡಿಕೆಗಳಿಗೆ ಸರ್ಕಾರಕ್ಕೆ ಮೊರೆ ಇಟ್ಟರೆ ಅದು ಈಡೇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಕೊರಳಲ್ಲಿ ಕೆಜಿಗಟ್ಟಲೆ ಚಿನ್ನದ ಸರ ಹಾಕಿಕೊಂಡು ಮೆರೆಯುವ ಗದುಗಿನ ಸರ್ಕಾರಿ ರತಿಕಾಮರನ್ನು ಬೇಡಿಕೊಂಡರೆ ಈಡೇರುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

  • ಬಿಗ್‍ಬಾಸ್ ಮನೆಯಲ್ಲಿ ರಂಗೇರ್ತು ರಂಗು ರಂಗಿನ ಹೋಳಿ ಹಬ್ಬ!

    ಬಿಗ್‍ಬಾಸ್ ಮನೆಯಲ್ಲಿ ರಂಗೇರ್ತು ರಂಗು ರಂಗಿನ ಹೋಳಿ ಹಬ್ಬ!

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಗನಿಂದಲೂ ಮನೆಕೆಲಸ, ಟಾಸ್ಕ್ ಗಳಲ್ಲಿ ಬ್ಯುಸಿಯಾಗಿದ್ದ ಮಂದಿ ನಿನ್ನೆ ಬಣ್ಣದೋಕುಳಿಯಲ್ಲಿ ಮಿಂದಿದ್ದಾರೆ.

    ಬೆಳಗ್ಗೆ ಎದ್ದೆ ಎಳುತ್ತಿದ್ದಂತೆಯೇ ನಟ ಶಿವರಾಜ್‍ಕುಮಾರ್ ಅಭಿನಯದ ಪ್ರೀತ್ಸೆ ಸಿನಿಮಾದ ‘ಹೋಳಿ’ ಸಾಂಗ್ ಪ್ಲೇ ಮಾಡುವುದರ ಮೂಲಕ ಮನೆಮಂದಿಗೆ ಬಿಗ್‍ಬಾಸ್ ವಿಶ್ ಮಾಡಿದ್ದಾರೆ. ಹಾಡು ಪ್ರಾರಂಭವಾಗುತ್ತಿದ್ದಂತೆಯೇ ಮೈ ಮುರಿದುಕೊಂಡು ಎಂದ ಮನೆಯ ಮಂದಿ ಗಾರ್ಡನ್ ಏರಿಯಾಗೆ ಬಂದಾಗ ಅಲ್ಲಿದ್ದ ಹೋಳಿಯನ್ನು ನೋಡಿ ಫುಲ್ ಖುಷ್ ಆಗುತ್ತಾರೆ.

    ಬಳಿಕ ಫ್ರೆಶ್ ಆಪ್ ಆಗಿ ಬಟ್ಟೆ ಬದಲಾಯಿಸಿಕೊಂಡು ಬಂದ ಮನೆಮಂದಿ ಗಾರ್ಡನ್ ಏರಿಯಾದ ಮೇಜಿನ ಮೇಲೆ ಇರಿಸಿದ್ದ ಬಣ್ಣಗಳನ್ನು ಎತ್ತಿಕೊಂಡು ಒಬ್ಬರಿಗೊಬ್ಬರು ಹಚ್ಚಿಕೊಳ್ಳುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಈ ವೇಳೆ ಬಿಗ್‍ಬಾಸ್ ಮನೆ ಮಂದಿಗಾಗಿ  ಪ್ರೇಮ್ ಅಭಿನಯದ ಡಿಕೆ ಸಿನಿಮಾದ ‘ಸೆಸಮ್ಮ’ ಸಾಂಗ್‍ನನ್ನು ಪ್ಲೇ ಮಾಡುತ್ತಾರೆ. ಹಾಡಿಗೆ ಶುಭ ಹಾಗೂ ಮಂಜು ಮಸ್ತ್ ಮಸ್ತ್ ಸ್ಟೆಪ್ ಹಾಕಿದರೆ, ರಾಜೀವ್, ವಿಶ್ವನಾಥ್, ರಘು ಸೇರಿದಂತೆ ಮತ್ತೆ ಕೆಲವರು ನೆಲದ ಮೇಲೆ ಉರುಳಾಡಿ ಸಖತ್ ಡ್ಯಾನ್ಸ್ ಮಾಡಿದ್ದಾರೆ.

    ಕೊನೆಗೆ ಹಾಡು ಮುಕ್ತಾಯವಾಗುತ್ತಿದ್ದಂತೆಯೇ ಮನೆಯ ಮಂದಿ ಕ್ಯಾಮೆರಾ ಮುಂದೆ ನಿಂತು ಸಮಸ್ತ ನಾಡಿನ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಶುಭಾಶಯ ತಿಳಿಸಿದ್ದಾರೆ.

    ಒಟ್ಟಾರೆ ಇಷ್ಟು ದಿನ ಹೊರಗಡೆ ಹೋಳಿ ಹಬ್ಬ ಆಚರಿಸುತ್ತಿದ್ದ ಮಂದಿ, ಇದೀಗ ಬಿಗ್‍ಬಾಸ್ ಮನೆಯಲ್ಲಿ ಬಣ್ಣದ ಆಟ ಆಡುವ ಮೂಲಕ ಸಖತ್ ಎಂಜಾಯ್ ಮಾಡಿದ್ದಾರೆ.

  • ಯುಗಾದಿ, ಶಬ್ ಎ ಬರತ್, ಗುಡ್‌ಫ್ರೈಡೇ ಸೇರಿದಂತೆ ಎಲ್ಲ ಹಬ್ಬಗಳ ಆದ್ಧೂರಿ ಆಚರಣೆಗೆ ಬ್ರೇಕ್‌

    ಯುಗಾದಿ, ಶಬ್ ಎ ಬರತ್, ಗುಡ್‌ಫ್ರೈಡೇ ಸೇರಿದಂತೆ ಎಲ್ಲ ಹಬ್ಬಗಳ ಆದ್ಧೂರಿ ಆಚರಣೆಗೆ ಬ್ರೇಕ್‌

    ಬೆಂಗಳೂರು: ಕೊರೊನಾ ಎರಡನೇ ಅಲೆ ಸ್ಫೋಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದ್ದೂರಿ ಹಬ್ಬ ಆಚರಣೆಗೆ ಕರ್ನಾಟಕ ಸರ್ಕಾರ ಬ್ರೇಕ್‌ ಹಾಕಿದೆ.

    ಯುಗಾದಿ, ಹೋಳಿ, ಶಬ್ ಎ ಬರತ್, ಗುಡ್ ಫ್ರೈಡೇ ಮುಂತಾದ ಎಲ್ಲಾ ಹಬ್ಬಗಳನ್ನು ಸಾರ್ವಜನಿಕ ಸ್ಥಳ, ಮೈದಾನ, ಸಾರ್ವಜನಿಕ ಪಾರ್ಕ್‌, ಮಾರ್ಕೆಟ್ ಮತ್ತು ಪ್ರಾರ್ಥನಾ ಮಂದಿರಗಳಲ್ಲಿ ಆಚರಿಸುವುದಕ್ಕೆ ನಿಷೇಧ ಹೇರಲಾಗಿದೆ.

    ಹಬ್ಬ ಆಚರಣೆ ಸಲುವಾಗಿ ಗುಂಪು ಸೇರುವಿಕೆಗೆ ನಿಷೇಧ ಹೇರಲಾಗಿದ್ದು, ನಿಯಮ ಉಲ್ಲಂಘಿಸಿದರೆ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆ(ಎಸ್‌‌ಡಿಎಂಎ) ಅಡಿ ಕೇಸ್‌ ದಾಖಲಾಗಿಸಲಾಗುವುದು ಎಚ್ಚರಿಕೆ ನೀಡಲಾಗಿದೆ.

    ಬಿಬಿಎಂಪಿ ಆಯುಕ್ತರು, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿ ಪರಿಸ್ಥಿತಿ ನಿಭಾಯಿಸಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

  • ಕೃಷ್ಣಮಠದಲ್ಲಿ ಸಾಂಪ್ರದಾಯಿಕ ಹೋಳಿ ಆಚರಣೆ- ರಥಬೀದಿಯಲ್ಲಿ ಮೆರವಣಿಗೆ

    ಕೃಷ್ಣಮಠದಲ್ಲಿ ಸಾಂಪ್ರದಾಯಿಕ ಹೋಳಿ ಆಚರಣೆ- ರಥಬೀದಿಯಲ್ಲಿ ಮೆರವಣಿಗೆ

    ಉಡುಪಿ: ಹೋಳಿ ಹುಣ್ಣಿಮೆ ಒಂದು ದಿನದ ಆಚರಣೆಯಾದರೂ, ಕರಾವಳಿಯಲ್ಲಿ ಹೋಳಿ ಆಚರಣೆ ಮಾತ್ರ ಒಂದು ವಾರ ನಡೆಯುತ್ತದೆ. ಉಡುಪಿಯ ಸಾರ್ವಜನಿಕರು ಸಾಕಷ್ಟು ಮಂದಿ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಮಠ ಮತ್ತು ದೇವಸ್ಥಾನಗಳಲ್ಲಿ ಹೋಳಿ ಆಚರಣೆ ಬಹಳ ಅಪರೂಪ.

    ಉಡುಪಿ ಶ್ರೀಕೃಷ್ಣ ಮಠದಲ್ಲಿ ಹೋಳಿ ಹುಣ್ಣಿಮೆಯ ಕಾಮದಹನ ಆಚರಿಸಲಾಯಿತು. ಉಡುಪಿ ಕೃಷ್ಣ ಮಠದ ಪೂಜಾ ಅಧಿಕಾರ ಪರ್ಯಾಯ ಅದಮಾರು ಮಠದ ಬಳಿ ಇದೆ. ಅದಮಾರು ಈಶಪ್ರಿಯತೀರ್ಥ ಸ್ವಾಮೀಜಿ ಅವರ ಆಣತಿಯಂತೆ ಹೋಳಿ ಹುಣ್ಣಿಮೆಯನ್ನು ರಥ ಬೀದಿಯಲ್ಲಿ ಆಚರಿಸಲಾಯಿತು. ಬಣ್ಣದ ಓಕುಳಿ ಇಲ್ಲದೆ ರಥಬೀದಿಯಲ್ಲಿ ಸಾಂಪ್ರದಾಯಿಕ ಆಚರಣೆ ಈ ಕಾಮ ದಹನ ನಡೆದಿದೆ.

    ಪ್ರತಿ ದಿನ ಶ್ರೀ ಕೃಷ್ಣನಿಗೆ ನಡೆಯುವ ಉತ್ಸವದಂತೆ ಹೋಳಿ ಹುಣ್ಣಿಮೆಯನ್ನು ಆಚರಿಸಲಾಯಿತು. ಹೋಳಿ ಹಿನ್ನೆಲೆಯಲ್ಲಿ ಕೃಷ್ಣ ಮಠದ ರಥಬೀದಿಯಲ್ಲಿ ಕಾಮನ ಭಾವಚಿತ್ರವನ್ನು ಹಿಡಿದು ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಬಿರುದಾವಳಿಗಳು ಇದ್ದವು. ಮಠದ ಸಿಬ್ಬಂದಿ ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.