Tag: Holi

  • ಮಹಿಳೆಯನ್ನು ಎಳೆದಾಡಿ ಕಿರುಕುಳ- ಮೂವರ ಬಂಧನ

    ಮಹಿಳೆಯನ್ನು ಎಳೆದಾಡಿ ಕಿರುಕುಳ- ಮೂವರ ಬಂಧನ

    ನವದೆಹಲಿ: ಜಪಾನ್ (Japan) ಪ್ರವಾಸಿ ಮಹಿಳೆಯೊಬ್ಬರಿಗೆ ಹೋಳಿ (Holi) ಆಚರಣೆ ವೇಳೆ ಕಿರುಕುಳ ನೀಡಿದ ಆರೋಪದ ಮೇಲೆ ಮೂರು ಜನರನ್ನು ಬಂಧಿಸಲಾಗಿದೆ ಎಂದು ದೆಹಲಿ (Delhi) ಪೊಲೀಸರು ತಿಳಿಸಿದ್ದಾರೆ.

    ದೆಹಲಿಯ ಪಹರ್‌ಗಂಜ್‌ನಲ್ಲಿ (Paharganj) ತಂಗಿದ್ದ ಮಹಿಳೆಗೆ, ಅದೇ ಊರಿನ ಮೂವರು ಕಿರುಕುಳ ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

    KILLING CRIME

    ಮಹಿಳೆಯನ್ನು ಎಳೆದಾಡಿ `ಹೋಳಿ ಹೈ’ ಎಂಬ ಘೋಷಣೆ ಕೂಗಿ ಮೈಗೆ ಬಣ್ಣ ಬಳಿದಿದ್ದಾರೆ. ಒಬ್ಬ ಆಕೆಯ ತಲೆಯ ಮೇಲೆ ಮೊಟ್ಟೆ ಒಡೆದಿದ್ದಾನೆ. ಕೊನೆಯಲ್ಲಿ ಒಬ್ಬನಿಗೆ ಕೆನ್ನೆಗೆ ಆಕೆ ಬಾರಿಸಿದ್ದು ವೀಡಿಯೋದಲ್ಲಿ ಸೆರೆಯಾಗಿತ್ತು. ಇದನ್ನೂ ಓದಿ: ಬಾಲಕಿಯನ್ನು ರೇಪ್ ಮಾಡಿ ಪೊದೆಗೆ ಎಸೆದ ಕುಡುಕ!

    ವೀಡಿಯೋ ವೈರಲ್ ಆಗುತ್ತಿದ್ದಂತೆ ಕಿರುಕುಳ ನೀಡಿದವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ನಡುವೆಯೇ ಯುವತಿ ಬಾಂಗ್ಲಾದೇಶಕ್ಕೆ ( Bangladesh) ತೆರಳಿದ್ದಾಳೆ. ಟ್ವಿಟ್ಟರ್‌ನಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿದ್ದೇನೆ ಎಂದು ಬರೆದುಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸ್ಥಳೀಯ ಗುಪ್ತಚರ (Intelligence) ಅಧಿಕಾರಿಗಳು ಆರೋಪಿಗಳನ್ನು ಗುರುತಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಜಪಾನ್ ರಾಯಭಾರಿ ಕಚೇರಿಯೊಂದಿಗೆ ಈ ಬಗ್ಗೆ ಮಾತಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಹೆಸರಿನಲ್ಲಿ ನಟಿಯ ತಾಯಿ ಬಳಿ ಹಣ ಪೀಕಿದ ವ್ಯಕ್ತಿ

  • ಕಾಮಣ್ಣನ ಪ್ರತಿಷ್ಠಾಪನೆಗೆ ನಿರಾಕರಣೆ- ಮತ್ತೊಂದು ವಿವಾದಕ್ಕೆ ಸಾಕ್ಷಿಯಾದ ಹುಬ್ಬಳ್ಳಿ ಈದ್ಗಾ ಮೈದಾನ

    ಕಾಮಣ್ಣನ ಪ್ರತಿಷ್ಠಾಪನೆಗೆ ನಿರಾಕರಣೆ- ಮತ್ತೊಂದು ವಿವಾದಕ್ಕೆ ಸಾಕ್ಷಿಯಾದ ಹುಬ್ಬಳ್ಳಿ ಈದ್ಗಾ ಮೈದಾನ

    ಹುಬ್ಬಳಿ: ಇಷ್ಟು ದಿನ ತಣ್ಣಗಾಗಿದ್ದ ಹುಬ್ಬಳಿ (Hubballi) ರಾಣಿ ಚೆನ್ನಮ್ಮ (Rani Chennamma) ಈದ್ಗಾ ಮೈದಾನದಲ್ಲಿ (Idgah Maidan) ಮತ್ತೆ ವಿವಾದದ ಕಿಡಿ ಹೊತ್ತಿಕೊಂಡಿದೆ. ಕಾಮಣ್ಣನ ಪ್ರತಿಷ್ಠಾಪನೆಗೆ ಹಿಂದೂಪರ ಸಂಘಟನೆಗಳ ಮನವಿಗೆ ಮಹಾನಗರ ಪಾಲಿಕೆಯ ದ್ವಂದ್ವ ನೀತಿಯಿಂದಾಗಿ ಮತ್ತೆ ಈದ್ಗಾ ಮೈದಾನ ಸುದ್ದಿಯಾಗಿದೆ.

    ಹಿಂದೂಪರ ಸಂಘಟನೆಗಳ ಮನವಿಯ ಮೇರೆಗೆ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಪಾಲಿಕೆ ಮೆಯರ್ ಈರೇಶ್ ಅಂಚಟಗೇರಿ ಅನುಮತಿ ನೀಡಿದ್ದರು. ಆದರೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅನುಮತಿ ನೀಡಲು ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ನಿರಾಕರಣೆ ಮಾಡಿದ್ದಾರೆ. ಆಯುಕ್ತರ ನಿರ್ಧಾರಕ್ಕೆ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಮಾಡಾಳ್ ಭ್ರಷ್ಟಾಚಾರ ಪಕ್ಷಕ್ಕೆ ಮುಜುಗರ; ಆರೋಪಿಗಳ ಪರ ಜೈಕಾರ ಹಾಕೋದು ಡಿಕೆಶಿ ಸಂಸ್ಕೃತಿ – ಸಿ.ಟಿ ರವಿ

    ಅನುಮತಿ ನೀಡಿದರೆ ಈದ್ಗಾ ಮೈದಾನದ ಆವರಣದೊಳಗೆ ಕಾಮಣ್ಣನ ಕೂರಿಸುತ್ತೇವೆ. ಇಲ್ಲದಿದ್ದರೆ ಮೈದಾನದ ಹೊರಗಡೆಯೇ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ. ಮೂರು ದಿನಗಳ ಕಾಲ ಹೋಳಿ (Holi) ಆಚರಣೆ ಮಾಡುತ್ತೇವೆ ಎಂದು ಮೈದಾನದ ಎದುರು ಪ್ರತಿಭಟಿಸಿ ಪಾಲಿಕೆಗೆ ಎಚ್ಚರಿಕೆ ನೀಡಿವೆ. ಪ್ರತಿಭಟನೆ ಬೆನ್ನಲ್ಲೇ ಮೈದಾನಕ್ಕೆ ಬಿಗಿ ಪೊಲೀಸ್ ಭದ್ರತೆ ಹಾಕಲಾಗಿದೆ. ಈ ಹಿಂದೆ ಗಣಪತಿ ಪ್ರತಿಷ್ಠಾಪನೆ (Ganesh Chaturth) ವಿಚಾರದಲ್ಲಿ ಈದ್ಗಾ ಮೈದಾನ ಸುದ್ದಿಯಾಗಿತ್ತು. ಇದನ್ನೂ ಓದಿ: ಕಲರ್ ಎರಚಬೇಡಿ ಎಂದಿದ್ದಕ್ಕೆ ವೃದ್ಧೆಯ ಕೊಂದೇ ಬಿಟ್ಟ ಯುವಕರು!

  • ಆಪ್ ನಾಯಕರ ಬಂಧನ – ಹೋಳಿ ತೊರೆದು ಧ್ಯಾನ ಆರಂಭಿಸಿದ ಕೇಜ್ರಿವಾಲ್

    ಆಪ್ ನಾಯಕರ ಬಂಧನ – ಹೋಳಿ ತೊರೆದು ಧ್ಯಾನ ಆರಂಭಿಸಿದ ಕೇಜ್ರಿವಾಲ್

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ದೇಶಕ್ಕಾಗಿ ಪ್ರಾರ್ಥನೆಯನ್ನು ಪ್ರಾರಂಭಿಸಿದ್ದಾರೆ. ಪಕ್ಷದ ನಾಯಕರಾದ ಸತ್ಯೇಂದ್ರ ಜೈನ್ (Satyendar Jain) ಮತ್ತು ಮನೀಶ್ ಸಿಸೋಡಿಯಾ (Manish Sisodia) ಬಂಧನವನ್ನು ಖಂಡಿಸಿ ಅವರು ಹೋಳಿಯನ್ನು (Holi) ಆಚರಿಸದೆ ಧ್ಯಾನ ಆರಂಭಿಸಿದ್ದಾರೆ.

    ಬೆಳಗ್ಗೆ 10 ಗಂಟೆಯಿಂದ ಸಂಜೆ ಐದು ಗಂಟೆವರೆಗೂ ದೇಶದ ಒಳಿತಿಗಾಗಿ ಧ್ಯಾನ ಮಾಡುವುದಾಗಿ ಅವರು ಮಂಗಳವಾರ ಹೇಳಿದ್ದರು. ಅಂತೆಯೇ ಕೇಜ್ರಿವಾಲ್ ಧ್ಯಾನ ಆರಂಭಿಸಿದ್ದಾರೆ. ಇದಕ್ಕೂ ಮೊದಲು ಅವರು ರಾಜಘಾಟ್‌ಗೆ ತೆರಳಿ ಮಹಾತ್ಮಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿದರು‌.

    ಶಾಲೆ ಕಾಲೇಜು, ಆಸ್ಪತ್ರೆಗಳನ್ನು ಕಟ್ಟುವ ನಾಯಕರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ದೇಶವನ್ನು ದರೋಡೆ ಮಾಡುವ ಜನರನ್ನು ಪ್ರಧಾನಿ ನರೇಂದ್ರ ಮೋದಿ ಅಪ್ಪಿಕೊಳ್ಳುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದ್ದಾರೆ. ಜೈನ್ ಮತ್ತು ಸಿಸೋಡಿಯಾ ಜೈಲಿನಲ್ಲಿರುವ ಬಗ್ಗೆ ನನಗೆ ಆತಂಕವಿಲ್ಲ. ಅವರು ಧೈರ್ಯಶಾಲಿಗಳು ಮತ್ತು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಾಗಿದ್ದಾರೆ. ಆದರೆ ದೇಶದ ದುರದೃಷ್ಟಕರ ಸ್ಥಿತಿಯು ನನ್ನನ್ನು ಚಿಂತೆಗೀಡು ಮಾಡಿದೆ. ಇದನ್ನೂ ಓದಿ: ಮೀಸಲು ಅರಣ್ಯದಲ್ಲಿ 60ಕ್ಕೂ ಹೆಚ್ಚು ಫೈರಿಂಗ್ ಕಾಟ್ರೇಜ್ ಪತ್ತೆ, ತನಿಖೆಗೆ ಇಳಿದ ಅರಣ್ಯ ಇಲಾಖೆ

    ನಾನು ದೇಶಕ್ಕಾಗಿ ಧ್ಯಾನ ಮಾಡುತ್ತೇನೆ, ಪ್ರಾರ್ಥಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾಡುತ್ತಿರುವುದು ತಪ್ಪು ಎಂದು ನೀವು ಭಾವಿಸಿದರೆ ಮತ್ತು ನಿಮಗೂ ದೇಶದ ಬಗ್ಗೆ ಚಿಂತೆ ಇದ್ದರೆ ಹೋಳಿ ಆಚರಿಸಿದ ನಂತರ, ದಯವಿಟ್ಟು ಪ್ರಾರ್ಥಿಸಲು ಸಮಯ ಮೀಸಲಿಡಿ ಎಂದು ಸಾರ್ವಜನಿಕರಿಗೆ ಕೇಜ್ರಿವಾಲ್ ಕರೆ ನೀಡಿದ್ದರು. ಇದನ್ನೂ ಓದಿ: ಮಾ.9ರ ಕರ್ನಾಟಕ ಬಂದ್‌ ವಾಪಸ್ ಪಡೆದ ಕಾಂಗ್ರೆಸ್

  • ಹೋಳಿ ಬಣ್ಣ ತಾಗಬಾರದೆಂದು ಇಡೀ ಮಸೀದಿಯನ್ನೇ ಟಾರ್ಪಲ್‌ನಿಂದ ಮುಚ್ಚಿದ್ರು

    ಹೋಳಿ ಬಣ್ಣ ತಾಗಬಾರದೆಂದು ಇಡೀ ಮಸೀದಿಯನ್ನೇ ಟಾರ್ಪಲ್‌ನಿಂದ ಮುಚ್ಚಿದ್ರು

    ಲಕ್ನೋ: ಹೋಳಿ (Holi) ಬಣ್ಣ ತಾಗಬಾರದೆಂದು ಎಂದು ಇಡೀ ಮಸೀದಿಯನ್ನು (Mosque) ಟಾರ್ಪಲ್‌ನಿಂದ ಮುಚ್ಚಿದ ಘಟನೆ ಉತ್ತರಪ್ರದೇಶದ (Uttar Pradesh) ಅಲಿಘರ್‌ನಲ್ಲಿ (Aligarh) ನಡೆದಿದೆ.

    ಹೋಳಿ ದಿನದಂದು ಪೊಲೀಸ್ ಆಡಳಿತದ ಸೂಚನೆಯ ಮೇರೆಗೆ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಲಿಘರ್‌ನ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿರುವ ಅಬ್ದುಲ್ ಕರೀಮ್ ಮಸೀದಿಯಲ್ಲಿ ಟಾರ್ಪಲ್‌ನಿಂದ (Tarpaulin) ಮುಚ್ಚಲಾಗಿದೆ.

    ಕಳೆದ ಕೆಲವು ವರ್ಷಗಳಿಂದ ಹೋಳಿ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶದ ಮಸೀದಿಯನ್ನು ಹೋಳಿಯ ಹಿಂದಿನ ದಿನ ರಾತ್ರಿ ವೇಳೆ  ಟಾರ್ಪಲ್‌ನಿಂದ ಮುಚ್ಚಲಾಗುತ್ತದೆ. ಆದ್ದರಿಂದ ಹೋಳಿಯಿಂದಾಗಿ ಮಸೀದಿಯ ಮೇಲೆ ಯಾರೂ ಬಣ್ಣ ಎರಚುವುದಿಲ್ಲ. ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಾದ ಬಿಸಿಗಾಳಿ – ಬೇಸಿಗೆ ಗೈಡ್‌ಲೈನ್ಸ್ ಹೊರಡಿಸಿದ ಆರೋಗ್ಯ ಇಲಾಖೆ

    ಮಸೀದಿಯ ಆಡಳಿತ ಮಂಡಳಿಯ ಹಾಜಿ ಮೊಹಮ್ಮದ್ ಇಕ್ಬಾಲ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಂದಾಗಿನಿಂದ ಮಸೀದಿಯನ್ನು ಮುಚ್ಚಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಡಳಿತದ ಸೂಚನೆಯ ಮೇರೆಗೆ ನಾವು ಮಸೀದಿಯನ್ನು ಟಾರ್ಪಲ್‌ನಿಂದ ಮುಚ್ಚಿದ್ದೇವೆ. ಆದ್ದರಿಂದ ಯಾರೂ ಮಸೀದಿಗೆ ಬಣ್ಣವನ್ನು ಎರೆಚಬಾರದು ಎಂದು ಹೇಳಿದರು. ಇದನ್ನೂ ಓದಿ: ದೇಗುಲದ ರಥಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು!

  • ವರಮಹಾಲಕ್ಷ್ಮಿ ಹಬ್ಬದ ವಿಶೇಷ ‘ಹೋಳಿಗೆ’ – ಮಾಡುವ ಸುಲಭ ವಿಧಾನ

    ವರಮಹಾಲಕ್ಷ್ಮಿ ಹಬ್ಬದ ವಿಶೇಷ ‘ಹೋಳಿಗೆ’ – ಮಾಡುವ ಸುಲಭ ವಿಧಾನ

    ರಮಹಾಲಕ್ಷ್ಮಿ ಹಬ್ಬದ ಎಂದಾಕ್ಷಣ ನಮಗೆ ಅಡುಗೆಯಲ್ಲಿ ನೆನಪಾಗುವುದೇ ‘ಹೋಳಿಗೆ’. ಎಲ್ಲರೂ ಇಷ್ಟಪಟ್ಟು ತಿನ್ನುವ ಸಿಹಿ ತಿಂಡಿಯಲ್ಲಿ ಹೋಳಿಗೆ ಆಗ್ರಸ್ಥಾನದಲ್ಲಿದೆ. ಅದರಲ್ಲಿಯೂ ಈ ವರಮಹಾಲಕ್ಷ್ಮಿ ಹಬ್ಬದಲ್ಲಿ ‘ಹೋಳಿಗೆ’ ವಿಶೇಷ ರೆಸಿಪಿಯಾಗಿರುತ್ತೆ. ಅದಕ್ಕೆ ಇಂದು ನೀವು ಸುಲಭವಾಗಿ ಮತ್ತು ಬೇಗ ಹೇಗೆ ‘ಹೋಳಿಗೆ’ ಮಾಡಬಹುದು ಎಂದು ಹೇಳಿಕೊಡುತ್ತೇವೆ.

    ಬೇಕಾಗಿರುವ ಪದಾರ್ಥಗಳು:
    * ಮೈದಾ – 1 ಕಪ್
    * ಕಡ್ಲೆ ಬೇಳೆ – 1 ಕಪ್
    * ಅರಿಶಿನ – 2 ಟೀಸ್ಪೂನ್
    * ಉಪ್ಪು – 1 ಟೀಸ್ಪೂನ್


    * ನೀರು – ಅರ್ಧ ಕಪ್
    * ಎಣ್ಣೆ – ಅರ್ಧ ಕಪ್
    * ಬೆಲ್ಲ – 1 ಕಪ್
    * ಏಲಕ್ಕಿ ಪುಡಿ / ಎಲಾಚಿ ಪು – 1 ಟೀಸ್ಪೂನ್
    * ಬೇಕಾಗಿರುವಷ್ಟು ತುಪ್ಪ

    ಮಾಡುವ ವಿಧಾನ:
    * ಮೊದಲನೆಯದಾಗಿ, ದೊಡ್ಡ ಮಿಕ್ಸಿಂಗ್ ಬೌಲ್‍ನಲ್ಲಿ 1 ಕಪ್ ಮೈದಾ, 1 ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ಚೆನ್ನಾಗಿ ಮಿಕ್ಸ್ ಮಾಡಿ. ಅಗತ್ಯವಿರುವಷ್ಟು ನೀರನ್ನು ಸೇರಿಸಿ ಹಿಟ್ಟನ್ನು ತಯಾರಿಸಿ.
    * ಹಿಟ್ಟಿಗೆ ಹೆಚ್ಚು ಎಣ್ಣೆಯನ್ನು ಹಾಕಿ ಮೃದುವಾಗಿ ಕಲಸಿ. ಕನಿಷ್ಠ 3 ಗಂಟೆಗಳ ಕಾಲ ಮುಚ್ಚಿ ಇಡಿ.
    * ಪ್ರೆಶರ್ ಕುಕ್ಕರ್‍ನಲ್ಲಿ ಕಡ್ಲೆ ಬೇಳೆ, 1 ಕಪ್ ನೀರು ,1 ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ 2 ಸೀಟಿಗಳಿಗೆ ಬೇಯಿಸಿರಿ.
    * 10 ನಿಮಿಷಗಳ ಕಾಲ ಹಾಗೆ ಇಡಿ, ಇದರಿಂದ ನೀರನ್ನು ಹೊರಹಾಕಿ. ಅದಕ್ಕೆ 1 ಕಪ್ ಬೆಲ್ಲವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಬೆಲ್ಲ ಕರಗುವ ತನಕ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಬೇಯಿಸಿ.


    * ಹೆಚ್ಚುವರಿಯಾಗಿ 1 ಟೀಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ, 5 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ.
    * ಈ ಮಿಶ್ರಣವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಹೆಚ್ಚು ನುಣ್ಣಗೆ ರುಬ್ಬಿಕೊಳ್ಳಬೇಡಿ. ಇಲ್ಲಿಗೆ ನಿಮ್ಮ ಹೋಳಿಗೆ ಮಿಶ್ರಣ ರೆಡಿ.
    * ಹಿಟ್ಟಿನ ಮಿಶ್ರಣವನ್ನು ಸಣ್ಣ ಚೆಂಡಿನ ಗಾತ್ರ ಮಾಡಿ ಅದನ್ನು ಚಪ್ಪಟೆಯಾಕಾರದಲ್ಲಿ ತಟ್ಟಿ ನಂತರ ಹೋಳಿಗೆ ಮಿಶ್ರಣವನ್ನು ಮಧ್ಯದಲ್ಲಿ ಇಟ್ಟು ಜೋಳದ ರೊಟ್ಟಿಯಂತೆ ತಟ್ಟಿ.

    * ಇತ್ತ ಮೊದಲೇ ಗ್ಯಾಸ್ ಆನ್ ಮಾಡಿಟ್ಟುಕೊಂಡು ಹೋಳಿಗೆ ತಟ್ಟಿದ ತಕ್ಷಣ ತವಾದ ಮೇಲೆ ಹಾಕಿ ಬೇಯಿಸಿ. ಅದರ ಮೇಲೆ ತುಪ್ಪ ಹಾಕಿ.
    * ಎರಡು ಬದಿಯು ಚೆನ್ನಾಗಿ ಬೇಯಿಸಿ.

    – ಅಂತಿಮವಾಗಿ, ತುಪ್ಪ / ತೆಂಗಿನ ಹಾಲು / ಮಾವಿನ ರಸಾಯನದೊಂದಿಗೆ ಹೋಳಿಗೆ / ಒಬ್ಬಟ್ಟು ಬಡಿಸಿ.

    Live Tv
    [brid partner=56869869 player=32851 video=960834 autoplay=true]

  • ಬಣ್ಣ ಎರಚಾಡುವಾಗ ಎರಡು ಗುಂಪುಗಳ ನಡುವೆ ಗಲಾಟೆ: ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣ

    ಬಣ್ಣ ಎರಚಾಡುವಾಗ ಎರಡು ಗುಂಪುಗಳ ನಡುವೆ ಗಲಾಟೆ: ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣ

    ಚಿಕ್ಕೋಡಿ: ರಂಗ ಪಂಚಮಿ ಹಬ್ಬದ ಪ್ರಯುಕ್ತ ಬಣ್ಣ ಆಡುವ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಆಗಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ನಡೆದಿದೆ.

    ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ  ಬಣ್ಣ ಎರಚಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಆಗಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷನನ್ನು ತಳ್ಳಾಡುವುದರ ಜೊತೆಗೆ ಪೊಲೀಸರ ಮೇಲೆಯೇ ಯುವಕರ ಗುಂಪೊಂದು ಹಲ್ಲೆ ಮಾಡಿದೆ.

    ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿಕ್ಕೋಡಿ ಪಿಎಸ್‍ಐ ಹಾಗೂ ಸಿಬ್ಬಂದಿ ದೌಡಾಯಿಸಿದ್ದಾರೆ. ಹೆಚ್ಚಿನ ಪೊಲೀಸ್ ನಿಯೋಜನೆ ಬಳಿಕ ಪರಿಸ್ಥಿತಿ ಹತೋಟಿಗೆ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಕರೋಶಿ ಗ್ರಾಮ ಸಂಪೂರ್ಣ ಬಂದ್ ಆಗಿದೆ. ಇದನ್ನೂ ಓದಿ: ಮರಿ ಜೊತೆ ಇದ್ದ ಆನೆ ಮೇಲೆ ಜೆಸಿಬಿ ಹರಿಸಲು ಮುಂದಾದ ಚಾಲಕ – ಸಾರ್ವಜನಿಕರಿಂದ ಆಕ್ರೋಶ

    ಸದ್ಯ ಕರೋಶಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಜನರು ಆತಂಕದಲ್ಲಿದ್ದಾರೆ. ಸ್ಥಳದಲ್ಲೆ ಪೊಲೀಸ್ ಹಿರಿಯ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.  ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಗೋಮಾಂಸ ಸಾಗಿಸುತ್ತಿದ್ದಾನೆಂದು ಶಂಕಿಸಿ ಹಿಗ್ಗಾಮುಗ್ಗಾ ಥಳಿಸಿದ್ರು

  • ಇಸ್ಕಾನ್ ದೇವಾಲಯದಲ್ಲಿ ಹೋಳಿ ಹುಣ್ಣಿಮೆ ಸಂಭ್ರಮ

    ಇಸ್ಕಾನ್ ದೇವಾಲಯದಲ್ಲಿ ಹೋಳಿ ಹುಣ್ಣಿಮೆ ಸಂಭ್ರಮ

    ಬೆಂಗಳೂರು: ಶ್ರೀ ಚೈತನ್ಯ ಮಹಾಪ್ರಭುಗಳ 536ನೇ ಜಯಂತಿ ಹಾಗೂ ಹೋಳಿ ಹಬ್ಬದ ಸಂಭ್ರಮಾಚರಣೆಯನ್ನು ರಾಜಾಜಿನಗರದ ಇಸ್ಕಾನ್ ದೇವಾಲಯದಲ್ಲಿ ಶುಕ್ರವಾರ ವೈಭವಯುತವಾಗಿ ಆಚರಿಸಲಾಯಿತು.

    ಸಂಜೆ 6 ಗಂಟೆಗೆ ಶ್ರೀ ಚೈತನ್ಯ ಮಹಾಪ್ರಭುಗಳ ಉತ್ಸವಮೂರ್ತಿಯನ್ನು ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿಟ್ಟು, ದೇವಸ್ಥಾನದ ಪ್ರಾಂಗಣದಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಉತ್ಸವ ಮೂರ್ತಿಗಳಿಗೆ ಭವ್ಯವಾದ ಅಭಿಷೇಕ ನಡೆಯಿತು. ಇದನ್ನೂ ಓದಿ: ಟಿಬೆಟಿಯನ್ನರಿಗೆ ಹೂಸ ವರ್ಷದ ಸಂಭ್ರಮ – ವಿಶ್ವದ ಅತೀ ದೊಡ್ಡ ಪರದೆ ಅನಾವರಣ

    ಈ ಸಂದರ್ಭದಲ್ಲಿ ಇಸ್ಕಾನ್ ಬೆಂಗಳೂರಿನ ಅಧ್ಯಕ್ಷ ಶ್ರೀ ಮಧುಪಂಡಿತ್ ದಾಸ್, ಉತ್ಸವದ ಆಚರಣೆಯ ಉದ್ದೇಶವನ್ನು ಪ್ರವಚನದ ಮೂಲಕ ತಿಳಿಸಿಕೊಟ್ಟರು. ಶಯನ ಆರತಿ ಮತ್ತು ಶಯನ ಪಲ್ಲಕ್ಕಿಯೊಂದಿಗೆ ಜಯಂತಿಯ ಸಂಭ್ರಮಾಚರಣೆ ಮುಕ್ತಾಯಗೊಂಡಿತು. ಇದನ್ನೂ ಓದಿ: ಗದ್ದುಗೆ ಏರಿದ ಶಿರಸಿ ಮಾರಿಕಾಂಬಾ – ಹರಿದುಬಂದ ಜನಸಾಗರ

  • ಬೀದರ್‌ನ ಮಸೀದಿಗಳಿಗೆ ಪ್ಲಾಸ್ಟಿಕ್ ಹೊದಿಕೆ

    ಬೀದರ್‌ನ ಮಸೀದಿಗಳಿಗೆ ಪ್ಲಾಸ್ಟಿಕ್ ಹೊದಿಕೆ

    ಬೀದರ್: ಇಂದು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬೀದರ್‌ನ  ಮಸೀದಿಗಳಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ.

    ನಗರದ ಹುಮ್ನಾಬಾದ್ ಪಟ್ಟಣದಲ್ಲಿರುವ ಜನ ಬಿಡ ಪ್ರದೇಶದಲ್ಲಿರುವ ಮಸೀದಿಗಳಿಗೆ ಹುಮ್ನಾಬಾದ್ ಪುರಸಭೆಯಿಂದ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಹುಮ್ನಾಬಾದ್‍ನ ಜೀರಪೇಟೆ ಓಣಿಯ ಗೋಸಿಸಾಬ್ ಮಸೀದಿ, ಅಖಾಡಾ ನೂರ್ ಮಸೀದಿ, ಜಾಮಾ ಮಸೀದಿ ಸೇರಿದಂತೆ ಜಿಲ್ಲೆಯ ಅತೀ ಸೂಕ್ಷ್ಮ ಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ಲಾಸ್ಟಿಕ್ ಹೊದಿಕೆಯನ್ನು ಹಾಕಲಾಗಿದೆ. ಇದನ್ನೂ ಓದಿ: ಹೆಣ್ಣುಮಕ್ಕಳೇ ನಾನು ಪ್ರಧಾನಮಂತ್ರಿಯಾಗಲು ಶಕ್ತಿ ಕೊಟ್ಟಿದ್ದು: ಹೆಚ್‍ಡಿಡಿ

    ಕಳೆದ ಬಾರಿ ಕಿಡಗೇಡಿಗಳು ಮಸೀದಿ ಮೇಲೆ ಬಣ್ಣವನ್ನು ಹಾಕಿ ಕೋಮು ಗಲಭೆಗೆ ಕಾರಣವಾಗಿತ್ತು. ಹೀಗಾಗಿ ಈ ಬಾರಿ ಈ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಪ್ಲಾಸ್ಟಿಕ್ ಹೊದಿಕೆ ಜೊತೆಗೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ನಾನೂ ಹಿಂದೂ ಸಮಾಜದಲ್ಲಿಯೇ ಹುಟ್ಟಿದ್ದೇನೆ: ಎಚ್‍ಡಿಕೆ

  • ಸ್ಯಾಂಡಲ್ ವುಡ್ ನಲ್ಲಿ ಯಾರೆಲ್ಲ ಹೋಳಿ ಆಡಿದರು ಗೊತ್ತಾ?: ಹ್ಯಾಪಿ ಹೋಳಿ

    ಸ್ಯಾಂಡಲ್ ವುಡ್ ನಲ್ಲಿ ಯಾರೆಲ್ಲ ಹೋಳಿ ಆಡಿದರು ಗೊತ್ತಾ?: ಹ್ಯಾಪಿ ಹೋಳಿ

    ಚಂದನವನ ಮೊದಲೇ ಕಲರ್ ಫುಲ್ ಜಗತ್ತು. ಈ ಜಗತ್ತನ್ನು ಮತ್ತಷ್ಟು ಕಲರ್ ಫುಲ್ ಆಗಿ ಮಾಡಿದೆ ಹೋಳಿ ಹಬ್ಬ. ಸ್ಯಾಂಡಲ್ ವುಡ್ ಮತ್ತು ಕಿರುತೆರೆಯ ಅನೇಕ ತಾರೆಯರು ಇಂದು ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಈ ಮೂಲಕ ಎಲ್ಲರ ಬದುಕೂ ಬಣ್ಣವಾಗಿರಲಿ ಎಂದು ಹಾರೈಸಿದ್ದಾರೆ

    ಅವನೇ ಶ್ರೀಮನ್ ನಾರಾಯಣ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಶಾನ್ವಿ ಶ್ರೀವಾತ್ಸ ಅವರ ಕುಟುಂಬದೊಂದಿಗೆ ಹೋಳಿ ಆಚರಿಸಿದ್ದಾರೆ. ತಾಯಿ ಮತ್ತು ಕುಟುಂಬದ ಅನೇಕ ಸದಸ್ಯರಿಗೆ ಬಣ್ಣ ಹಚ್ಚವ ಮೂಲಕ ಹೋಳಿ ಆಚರಿಸಿದ್ದಾರೆ. ಇದನ್ನೂ ಓದಿ : ಪುನೀತ್ ಗೆ ಮರಣೋತ್ತರ ‘ ಸಹಕಾರ ರತ್ನ’ ಪ್ರಶಸ್ತಿ: ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ

    ಕನ್ನಡ ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಕಾವ್ಯ ಶಾಸ್ತ್ರೀ ಕೂಡ ಇಂದು ಸಡಗರದಿಂದ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಫ್ರೆಂಡ್ಸ್ ಮತ್ತು ಕುಟುಂಬದ ಇತರ ಸದಸ್ಯರ ಜೊತೆ ಅವರು ಬಣ್ಣವನ್ನು ವಿನಿಮಯ ಮಾಡಿಕೊಂಡಿದ್ದಾರೆ.

    ಕಿರುತೆರೆ ನಟಿ, ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಹೋಳಿ ಹಬ್ಬಕ್ಕೆ ಎಲ್ಲರಿಗೂ ಶುಭಾಶಯ ಕೋರಿದ್ದಾರೆ. ವಿದೇಶದಿಂದ ವಾಪಸ್ಸಾಗಿರುವ ಅವರು ಕುಟುಂಬದೊಂದಿಗೆ ಹೋಳಿಯನ್ನು ಆಚರಿಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2.. ಹುಷಾರ್, ಮಾರ್ಚ್ 21ಕ್ಕೆ ತೂಫಾನ್ ಅಪ್ಪಳಿಸಲಿದೆ!

    ಜಾಕಿ, ಭಜರಂಗಿ 2 ಸೇರಿದಂತೆ ಅನೇಕ ಕನ್ನಡ ಸಿನಿಮಾಗಳನ್ನು ಮಾಡಿರುವ, ಮಲಯಾಳಂ ನಟಿ, ಕರ್ನಾಟಕದ ಸೊಸೆ ಭಾವನಾ ಮೆನನ್ ಕೂಡ ಹೋಳಿ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಭಜರಂಗಿ 2 ಸಿನಿಮಾದಲ್ಲಿಯ ಹೋಳಿ ದೃಶ್ಯದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

    ಪಾರು ಧಾರಾವಾಹಿಯ ಖ್ಯಾತಿಯ ನಟ ಶರತ್ ಪದ್ಮನಾಭ್ ಕೂಡ ಈ ಬಾರಿ ಹೋಳಿಯನ್ನು ಸಡಗರದಿಂದ ಆಚರಿಸಿದ್ದಾರೆ. ಗೆಳೆಯರು ಮತ್ತು ಆಪ್ತರೊಂದಿಗೆ ಹೋಳಿ ಆಡಿರುವ ಅವರು ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ಬಿಗ್ ಬಾಸ್ ಖ್ಯಾತಿಯ ತೇಜಸ್ವಿನಿ ಪ್ರಕಾಶ್ ಕೂಡ ಹೋಳಿಯನ್ನು ಕುಟುಂಬದೊಂದಿಗೆ ಆಚರಿಸಿದ್ದಾರೆ. ಆ ಫೋಟೋವನ್ನು ಅಭಿಮಾನಿಗಳಿಗಾಗಿ ಶೇರ್ ಮಾಡಿದ್ದು, ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

    ಕನ್ನಡದ ಖ್ಯಾತ ನಟ ವಸಿಷ್ಠ ಸಿಂಹ ಕೂಡ ಇಂದು ಬೆಂಗಳೂರಿನಲ್ಲಿ ಮಕ್ಕಳೊಂದಿಗೆ ಹೋಳಿ ಆಡಿದ್ದಾರೆ. ಮಕ್ಕಳ ಜತೆ ಮಕ್ಕಳಾಗಿ ಅವರು ಬಣ್ಣ ಹಚ್ಚಿದ್ದಾರೆ. ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಶುಭಾಶಯ ಹೇಳಿದ್ದಾರೆ.

  • ಹೋಳಿ ಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಸಚಿವ ಪ್ರಭು ಚವ್ಹಾಣ್

    ಹೋಳಿ ಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಸಚಿವ ಪ್ರಭು ಚವ್ಹಾಣ್

    ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ ರಂಗು ರಂಗಿನ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಜನರೊಂದಿಗೆ ಸಚಿವ ಪ್ರಭು ಚವ್ಹಾಣ್ ಅವರು ನೃತ್ಯ ಮಾಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Prabhu Chauhan

    ಔರಾದ್ ತಾಲೂಕಿನ ಬೋಂತಿ ತಾಂಡದಲ್ಲಿ ಹೋಳಿ ಹಬ್ಬವನ್ನು ಲಂಬಾಣಿ ಸಮುದಾಯದವರು ಬಹಳ ವಿಶೇಷವಾಗಿ ಆಚರಿಸಿದ್ದಾರೆ. ಅದರಲ್ಲಿಯೂ ಡಿಜೆ ಹಾಕಿಕೊಂಡು ನೃತ್ಯ ಮಾಡುತ್ತಿದ್ದ ಮಹಿಳೆಯರು ಮತ್ತು ಜನರೊಂದಿಗೆ ಪ್ರಭು ಚವ್ಹಾಣ್ ಅವರು ಕೂಡಾ ಬೊಬ್ಬೆ ಹೊಡೆದು, ಕುಣಿದು ಕುಪ್ಪಳಿಸಿದ್ದಾರೆ ಇದನ್ನೂ ಓದಿ: ಉಕ್ರೇನ್ ಮೇಲೆ ಯುದ್ಧ ಸಾರಿ ಕೈಸುಟ್ಟುಕೊಂಡ ರಷ್ಯಾ

    Prabhu Chauhan

    ನಿಷೇಧಾಜ್ಞೆ ನಡುವೆ ಜಿಲ್ಲೆಯಾದ್ಯಂತ ಹೋಳಿ ಸಂಭ್ರಮದಲ್ಲಿ ಜನರು ಭಾಗಿಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆಯಾಗದಂತೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‍ಗೊಳಿಸಲಾಗಿದೆ. ಎರಡು ವರ್ಷದಿಂದ ಕೋವಿಡ್ ಕಾರಣಗಳಿಂದ ಹೋಳಿ ಹಬ್ಬ ಆಚರಣೆ ಮಾಡಿರಲಿಲ್ಲ. ಆದರೆ ಈ ಬಾರಿ ಕೋವಿಡ್ ಇಲ್ಲದ ಕಾರಣ ಹೋಳಿ ಹಬ್ಬವನ್ನು ಬಹಳ ಅದ್ದೂರಿಗೆ ಜನ ಆಚರಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿಗೆ ಬರಲಿದೆ ರಷ್ಯಾದ ಅಗ್ಗದ ಕಚ್ಚಾ ತೈಲ