Tag: holi recipe

  • ಸಿಂಪಲ್ ಆಲೂ ಚಾಟ್ ಮಾಡೋ ವಿಧಾನ

    ಸಿಂಪಲ್ ಆಲೂ ಚಾಟ್ ಮಾಡೋ ವಿಧಾನ

    ಹೋಳಿ ಹಬ್ಬದ ಟೈಮಲ್ಲಿ ಓಕುಳಿಯೊಂದಿಗೆ ಆಟವಾಡಿದ ನಂತರ ಹೊಟ್ಟೆ ಚುರುಗುಟ್ಟದೆ ಇರದು. ಹಾಗಂತ ಬಣ್ಣ ಬಳಿದುಕೊಂಡು ಊಟ ಮಾಡೋಕಾಗಲ್ಲ. ಇಂಥ ಹೊತ್ತಲ್ಲಿ ಏನಾದ್ರೂ ಸಿಂಪಲ್ ಚಾಟ್ಸ್ ತಿಂದ್ರೆ ಮನಸ್ಸಿಗೆ ಖುಷಿ. ಹೋಳಿ ಅಲ್ಲದಿದ್ರೂ ಮನೆಯಲ್ಲಿ ಸಂಜೆ ವೇಳೆಗೆ ಸುಲಭವಾಗಿ ಮಾಡಬಹುದಾದ ಆಲೂ ಚಾಟ್ ರೆಸಿಪಿ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು: 
    1. ಆಲೂಗಡ್ಡೆ – 3 ಮಧ್ಯಮ ಗಾತ್ರದ್ದು
    2. ಖಾರದ ಪುಡಿ- 1 ಚಮಚ
    3. ಹುರಿದ ಜೀರಿಗೆ ಪುಡಿ- 1/2 ಚಮಚ
    4. ಆಮ್ಚೂರ್ ಪುಡಿ- 1/4 ಚಮಚ
    5. ಚಾಟ್ ಮಸಾಲಾ- 1/4 ಚಮಚ
    6. ಉಪ್ಪು- ರುಚಿಗೆ ತಕ್ಕಷ್ಟು
    7. ಎಣ್ಣೆ – 1 ಚಮಚ
    8. ನಿಂಬೆಹಣ್ಣು- 1/2 ಹೋಳು
    9. ಕೊತ್ತಂಬರಿ ಸೊಪ್ಪು- 1 ಚಮಚ

    ಮಾಡುವ ವಿಧಾನ:
    * ಕುಕ್ಕರ್‍ನಲ್ಲಿ ನೀರು, ತೊಳೆದ ಅಲೂಗಡ್ಡೆಗಳನ್ನ ಹಾಕಿ 2 ವಿಷಲ್ ಬರುವವರೆಗೆ ಬೇಯಿಸಿ. ಆಲೂಗಡ್ಡೆ ಮೆತ್ತಗಾಗಬಾರದು, ಕಟ್ ಮಾಡುವಷ್ಟು ಗಟ್ಟಿ ಇರಬೇಕು
    * ಬೆಂದ ಆಲೂಗಡ್ಡೆಗಳ ಸಿಪ್ಪೆ ತೆಗೆದು, ಚೌಕಾಕಾರದಲ್ಲಿ ಕಟ್ ಮಾಡಿಕೊಳ್ಳಿ.
    * ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಕಟ್ ಮಾಡಿದ ಆಲೂಗಡ್ಡೆ ತುಂಡುಗಳನ್ನ ಹಾಕಿ 7-10 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿ ತೆಗೆಯಿರಿ.
    * ಒಂದು ಸಣ್ಣ ಪಾತ್ರೆಯಲ್ಲಿ ಫ್ರೈ ಮಾಡಿದ ಆಲೂಗಡ್ಡೆ ಹಾಕಿ, ಅದರ ಮೇಲೆ ಜೀರಿಗೆ ಪುಡಿ, ಖಾರದ ಪುಡಿ, ಆಮ್ಚೂರ್ ಪುಡಿ, ಚಾಟ್ ಮಸಾಲಾ ಹಾಗೂ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
    * ನಂತರ ಸ್ವಲ್ಪ ನಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪು ಉದುರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ, ಬಿಸಿಯಿರುವಾಗಲೇ ಸವಿಯಲು ಕೊಡಿ.