Tag: Holi festival

  • ಹೋಳಿ ಸ್ಪೆಷಲ್ – ಥಂಡಾಯಿ ಪೌಡರ್ ಮಿಲ್ಕ್ ಮಾಡುವ ವಿಧಾನ

    ಹೋಳಿ ಸ್ಪೆಷಲ್ – ಥಂಡಾಯಿ ಪೌಡರ್ ಮಿಲ್ಕ್ ಮಾಡುವ ವಿಧಾನ

    ಇಂದು ಎಲ್ಲೆಲ್ಲೂ ಬಣ್ಣದ ಹಬ್ಬ. ಕುಟುಂಬದವರು, ಸ್ನೇಹಿತರು, ಮಕ್ಕಳು ಎಲ್ಲರೂ ಒಟ್ಟಿಗೆ ಸೇರಿ ಬಣ್ಣಗಳಲ್ಲಿ ಮಿಂದೇಳುತ್ತಾರೆ. ಪ್ರತಿ ಹಬ್ಬಕ್ಕೂ ಅದರದ್ದೆ ಆದ ಸಿಹಿ ತಿನಿಸು ಇರುತ್ತದೆ. ಅದೇ ಹೋಳಿ ಹಬ್ಬದ ಪ್ರಯುಕ್ತ ಥಂಡಾಯಿ ಪೌಡರ್ ಹಾಲು ಮಾಡುವ ವಿಧಾನ ಇಲ್ಲದೆ.

    ಬೇಕಾಗುವ ಸಾಮಾಗ್ರಿಗಳು
    1. ಬಾದಾಮಿ – ಅರ್ಧ ಕಪ್ (75 ಗ್ರಾಂ)
    2. ಗೋಡಂಬಿ – ಒಂದು ಕಪ್ (140 ಗ್ರಾಂ)
    3. ಪಿಸ್ತಾ – ಅರ್ಧ ಕಪ್(60 ಗ್ರಾಂ)
    4. ಜೀರಿಗೆ – 3 ಚಮಚ
    5. ಗಸಗಸೆ – 2 ಚಮಚ
    6. ಕೇಸರಿ – ಚಿಟಿಕೆ
    7. ಮೆಣಸು – 1 ಚಮಚ
    8. ಏಲಕ್ಕಿ – 10-12
    9. ಕಲ್ಲಂಗಡಿ ಹಣ್ಣಿನ ಬೀಜಗಳು- ಕಾಲ್‍ ಕಪ್(38 ಗ್ರಾಂ)
    10. ಒಳಗಿದ ಗುಲಾಬಿ ದಳಗಳು – 1 ಚಮಚ
    11. ಚಕ್ಕೆ – ಒಂದು

    ಮಾಡುವ ವಿಧಾನ
    * ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಗೋಡಂಬಿ, ಬಾದಾಮಿ, ಪಿಸ್ತಾ, ಕಲ್ಲಂಗಡಿ ಹಣ್ಣಿನ ಬೀಜಗಳು ಹಾಕಿ 5-10 ನಿಮಿಷ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ.
    * ಪುಡಿಯನ್ನು ಒಂದು ಬೌಲ್‍ಗೆ ಹಾಕಿಕೊಳ್ಳಿ.
    * ಈಗ ಅದೇ ಜಾರಿಗೆ ಮೆಣಸು, ಜೀರಿಗೆ, ಗಸಗಸೆ, ಒಣಗಿದ ಗುಲಾಬಿ ದಳಗಳು, ಏಲಕ್ಕಿ, ಚಕ್ಕೆ, ಕೇಸರಿ ಹಾಕಿ 10-15 ನಿಮಿಷ ರುಬ್ಬಿಕೊಳ್ಳಿ.
    * ಈಗ ಮೊದಲು ಮಾಡಿಟ್ಟುಕೊಂಡಿದ್ದ ಪುಡಿಗೆ ಇದನ್ನು ಹಾಕಿ ಮಿಕ್ಸ್ ಮಾಡಿ.
    * ಈಗ ಒಂದು ಲೋಟ ಬಿಸಿ ಹಾಲು ತೆಗೆದುಕೊಂಡು ಅದಕ್ಕೆ 3 ಚಮಚ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ.
    * ಈಗ ಇನ್ನೊಂದು ಲೋಟ ಹಾಲಿಗೆ ಸಕ್ಕರೆ ಹಾಕಿ ಮಿಕ್ಸ್ ಮಾಡಿ, ಬಳಿಕ ಪುಡಿ ಮಿಕ್ಸ್ ಮಾಡಿದ್ದ ಹಾಲನ್ನು ಅದರೊಳಗೆ ಹಾಕಿ ಮಿಕ್ಸ್ ಮಾಡಿದರೆ ಥಂಡಾಯಿ ಹಾಲು ಕುಡಿಯಲು ಸಿದ್ಧ.

  • ಹೋಳಿ ಹಬ್ಬ ಯಾಕೆ ಆಚರಣೆ ಮಾಡ್ತಾರೆ..? ಮಹತ್ವವೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

    ಹೋಳಿ ಹಬ್ಬ ಯಾಕೆ ಆಚರಣೆ ಮಾಡ್ತಾರೆ..? ಮಹತ್ವವೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

    ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸಲಾಗುತ್ತದೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಯಾವುದೇ ಹಬ್ಬವೂ ತನ್ನದೇ ಆದ ಆಚಾರ ಸಂಪ್ರದಾಯಗಳನ್ನು ಹೊಂದಿರುತ್ತದೆ. ಅದೇ ರೀತಿ ಹೋಳಿ ಬಣ್ಣಗಳ ಹಬ್ಬವಾಗಿದ್ದು, ದೂರದ ಊರಿನವರು ತಮ್ಮ ತಾಯ್ನಾಡಿಗೆ ಬಂದು ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ವಸಂತ ಮಾಸದಲ್ಲಿ ಆಚರಿಸಲಾಗುತ್ತದೆ. ಚಳಿಗಾಲದ ಕೊನೆಯನ್ನು ವಸಂತದ ಆಗಮನವನ್ನು ಸಾರುವ ಹಬ್ಬವಾಗಿದೆ. ಜನರು ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ.

    ಹೋಳಿ ಹಬ್ಬವನ್ನು ದಿನದಂದು ಮಕ್ಕಳಿಂದ ದೊಡ್ಡವರ ತನಕ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಹಬ್ಬದ ಆಚರಣೆಯಲ್ಲಿ ದಿನ ಕಾಮನ ಸುಂದರ ಪ್ರತಿಮೆ ಮಾಡಿ ಶೃಂಗರಿಸಿ ಊರಿನ ಕಾಮನ ಕಟ್ಟೆಯ ಮೇಲೆ ಚಪ್ಪರ ಕಟ್ಟಿ ಇಡುತ್ತಾರೆ. ಕಾಮನ ಮುಂದೆ ಮಂಗಳ ವಾದ್ಯಗಳನ್ನು ಊದುತ್ತಾರೆ ಅದಲ್ಲದೆ ಪರಸ್ಪರ ಬೈಗುಳ, ಬಣ್ಣದ ನೀರು, ಸಗಣಿಯ ಗಂಜಲಗಳನ್ನು ಎರಚುತ್ತಾರೆ.

    ಹೋಳಿಯ ಇತಿಹಾಸ?
    ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದನು. ಆತ ದುರಹಂಕಾರಿಯೂ ಹಾಗೂ ಕ್ರೂರಿಯೂ ಆಗಿದ್ದನು. ತಾರಕಾಸುರ ತನಗೆ ಸಾವು ಬರದಿರಲಿ ಎಂದು ತಪಸ್ಸು ಮಾಡಿದ್ದನು. ಆಗ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಆಗ ನನಗೆ ಮರಣ ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಎಂಬ ವರವನ್ನು ಕೇಳಿದ್ದನು. ತಾರಕಾಸುರನ ತಪ್ಪಸ್ಸನ್ನು ಮೆಚ್ಚಿ ಬ್ರಹ್ಮ ವರವನ್ನು ಕೊಡುತ್ತಾನೆ. ಆಗ ತನಗೆ ವರ ಸಿಕ್ಕಿದೆ ಎಂದು ತಾರಕಾಸುರ ಮೆರೆಯುತ್ತಿರುತ್ತಾನೆ.

    ಇತ್ತ ಭೋಗ ಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ಆಗ ದೇವತೆಗಳು ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ ಅಂದರೆ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದ್ದರು. ಈ ವೇಳೆ ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು “ಕಾಮನ ಹುಣ್ಣಿಮೆ”ಯಾಗಿ ಆಚರಿಸಲ್ಪಡುತ್ತದೆ.

    ಮತ್ತೊಂದು ಕಥೆ:
    ಹಿರಣ್ಯಕಶಿಪುವಿನ ಸಹೋದರಿ ಹೋಲಿಕಾ ಇದ್ದಳು. ಹಿರಣ್ಯಕಶಿಪು ತನ್ನ ರಾಜ್ಯದಲ್ಲಿ ದೇವರನ್ನು ಪೂಜಿಸುವುದನ್ನು ನಿಷೇಧಿಸಿದ್ದು, ತನ್ನನ್ನೇ ದೇವರೆಂದು ಪೂಜಿಸುವಂತೆ ಆದೇಶಿಸಿದ್ದನು. ಆದರೆ ಆತನ ಮಗ ಪ್ರಹ್ಲಾದ ವಿಷ್ಣು ದೇವರ ಪರಮ ಭಕ್ತನಾಗಿದ್ದನು. ತಾನು ಎಷ್ಟೆ ಪ್ರಯತ್ನ ಮಾಡಿದರು ಮಗನಿಂದ ವಿಷ್ಣು ದೇವರ ಆರಾಧಾನೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಕೊನೆಗೆ ಹಿರಣ್ಯಕಶಿಪು ತನ್ನ ಮಗನನ್ನು ದಂಡಿಸಲು ತೀರ್ಮಾನಿಸುತ್ತಾನೆ. ಆಗ ಬೆಂಕಿಯು ಸುಡದಂತೆ ವರವನ್ನು ಪಡೆದಿದ್ದ ತನ್ನ ತಂಗಿ ಹೋಲಿಕಾಳ ಸಹಾಯವನ್ನು ಹಿರಣ್ಯಕಶಿಪು ಪಡೆಯುತ್ತಾನೆ. ಹಿರಣ್ಯಕಶಿಪು ತನ್ನ ಮಗನನ್ನು ಆಕೆಯ ತೊಡೆಯ ಮೇಲೆ ಕೂರಿಸಿಕೊಳ್ಳುವಂತೆ ತಂಗಿಯಲ್ಲಿ ಕೇಳಿದನು. ಹೋಲಿಕಾ ಅಣ್ಣನ ಆಜ್ಞೆಯಂತೆ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾಳೆ. ಆದರೆ ಈ ಪಾಪಕೃತ್ಯವನ್ನು ಹೋಲಿಕಾ ಮಾಡಿದ್ದರಿಂದಾಗಿ, ಆಕೆಯ ವರ ನಿಷ್ಫಲವಾಗುತ್ತದೆ. ಇದರಿಂದ ಹೋಲಿಕಾ ಸುಟ್ಟು ಬೂದಿಯಾಗುತ್ತಾಳೆ. ಪ್ರಹ್ಲಾದ ಸುರಕ್ಷಿತವಾಗಿ ಬೆಂಕಿಯಿಂದ ಹೊರಬರುತ್ತಾನೆ. ಅದಕ್ಕಾಗಿ ಪ್ರತೀ ವರ್ಷ ಹೋಲಿಯ ಮುನ್ನ ಹಿಂದೂ ಮನೆಗಳಲ್ಲಿ ಹೋಲಿಕನನ್ನು ಸುಡುತ್ತಾರೆ.

    ಈ ಹಬ್ಬ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಒಂದುಗೂಡಿಸುತ್ತದೆ ಮತ್ತು ಹಬ್ಬದ ಸಡಗರವನ್ನು ಪ್ರತಿಯೊಬ್ಬರಲ್ಲಿ ತುಂಬುತ್ತದೆ. ಕೆಟ್ಟದ್ದು ಒಳ್ಳೆಯದರ ಮುಂದೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ಹೋಳಿ ಹಬ್ಬ ಸಾರುತ್ತದೆ. ದುಷ್ಕ್ರತ್ಯಗಳು ದೇವರ ಶಕ್ತಿಯ ಎದುರು ಎಂದಿಗೂ ಜಯವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸಾರ ಈ ಹಬ್ಬದ ಹಿಂದಿದೆ. ಹೋಲಿಕನಂತೆ ಕೆಟ್ಟ ಶಕ್ತಿಗಳು, ದುಷ್ಟ ಆಲೋಚನೆಗಳು ನಾಶವಾಗಿ ಹೊಸದರ ಪ್ರಾರಂಭದ ಕಡೆಗೆ ಮನುಷ್ಯರು ಹೋಗುತ್ತಾರೆ.

  • ಹೋಳಿ ಹಬ್ಬ – ಧಾರವಾಡದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ

    ಹೋಳಿ ಹಬ್ಬ – ಧಾರವಾಡದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ

    ಧಾರವಾಡ: ಜಿಲ್ಲೆಯಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರುವ ಹಿತದೃಷ್ಟಿಯಿಂದ ಮಾರ್ಚ್ 17 ರಿಂದ 21 ರವರೆಗೆ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ಮದ್ಯಪಾನ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

    ನಗರದ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರು ಆದೇಶ ಹೊರಡಿಸಿದ್ದಾರೆ. ಮಾರ್ಚ್ 17 ರಿಂದ 20 ರವರೆಗೆ ಧಾರವಾಡ ಗ್ರಾಮೀಣ ತಾಲ್ಲೂಕು, ಹುಬ್ಬಳ್ಳಿ ಗ್ರಾಮೀಣ ತಾಲೂಕು, ನವಲಗುಂದ ತಾಲ್ಲೂಕು, ಅಣ್ಣಿಗೇರಿ ತಾಲ್ಲೂಕು, ಅಳ್ನಾವರ, ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮಗಳಲ್ಲಿ ನಿಷೇಧಿಲಾಗಿದೆ. ಇದನ್ನೂ ಓದಿ: ನಾಯಕರಷ್ಟೇ ನಮಗೂ ಸಮಾನ ಅವಕಾಶ ಬೇಕು: ಕೃತಿ ಸನೋನ್

    ಮಾರ್ಚ್ 16 ರಿಂದ 19 ರವರೆಗೆ ಕುಂದಗೋಳ ತಾಲೂಕು, ಅಳ್ನಾವರ ತಾಲೂಕು, ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಗ್ರಾಮಗಳಾದ ಸುಳ್ಳ ಮತ್ತು ಕಿರೇಸೂರು ಗ್ರಾಮಗಳಲ್ಲಿ, ಮಾರ್ಚ್ 19 ರಿಂದ 22 ರವರೆಗೆ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಮದ್ಯಪಾನ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಮಿಸ್ ವರ್ಲ್ಡ್ 2021: ಭಾರತೀಯ ಮೂಲದ ಶ್ರೀಸೈನಿ ರನ್ನರ್ ಅಪ್, ಕರೋಲಿನಾ ಬಿಲಾವ್ಸ್ಕಾಗೆ ‘ವಿಶ್ವ ಸುಂದರಿ’ ಕಿರೀಟ

  • ಹುಬ್ಬಳ್ಳಿಯಲ್ಲಿ ಮಾಸ್ಕ್ ಹಾಕಿಕೊಂಡ ಕಾಮ-ರತಿ

    ಹುಬ್ಬಳ್ಳಿಯಲ್ಲಿ ಮಾಸ್ಕ್ ಹಾಕಿಕೊಂಡ ಕಾಮ-ರತಿ

    ಹುಬ್ಬಳ್ಳಿ: ಕೊರೊನಾ ಎರಡನೇ ಅಲೆ ಆತಂಕ ಮನೆ ಮಾಡಿದ್ದು, ಇಷ್ಟಾದರೂ ಜನ ಕೊರೊನಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಹೀಗಾಗಿ ಈ ಕುರಿತು ಜಾಗೃತಿ ಮೂಡಿಸಲು ನಗರದ ಮರಾಠಾಗಲ್ಲಿಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಕಾಮ-ರತಿಯರಿಗೆ ಮಾಸ್ಕ್ ಹಾಕಲಾಗಿದೆ. ಈ ಮೂಲಕ ವಿಶೇಷವಾಗಿ ಹೋಳಿ ಹಬ್ಬ ಆಚರಿಸಲಾಗಿದೆ.

    ನಗರದಲ್ಲಿ ರಂಗಪಂಚಮಿಯ ಅಂಗವಾಗಿ ಕಾಮ-ರತಿಯರ ದಹನ ಮಾಡಿದ್ದು, ಇದಕ್ಕಿಂತ ಪೂರ್ವದಲ್ಲಿ ಪ್ರಮುಖ ಸ್ಥಳದಲ್ಲಿ ಕೂರಿಸಿರುವ ಕಾಮ-ರತಿಯರ ಮುಖಕ್ಕೆ ಮಾಸ್ಕ್ ಹಾಕುವ ಮೂಲಕ ಜಾಗೃತಿ ಮೂಡಿಸಲಾಗಿದೆ.

    ಹುಬ್ಬಳ್ಳಿಯ ಈ ವಿಶೇಷ ಕಾಮ-ರತಿಯರನ್ನು ಜನ ನೋಡುತ್ತಲೇ, ಕಿಸೆಯಲ್ಲಿದ್ದ, ವಾಹನದಲ್ಲಿದ್ದ ಮಾಸ್ಕ್ ನ್ನು ಬಳಕೆ ಮಾಡಲು ಮುಂದಾಗುತ್ತಿದ್ದಾರೆ. ಈ ಮೂಲಕ ದಹಿಸಲ್ಪಡುವ ಕಾಮ-ರತಿಯರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.

  • ನಿಷೇಧದ ನಡುವೆಯೂ ಜಿಲ್ಲಾದ್ಯಂತ ಹೋಳಿ ಹಬ್ಬ ಆಚರಣೆ

    ನಿಷೇಧದ ನಡುವೆಯೂ ಜಿಲ್ಲಾದ್ಯಂತ ಹೋಳಿ ಹಬ್ಬ ಆಚರಣೆ

    ಯಾದಗಿರಿ: ಜಿಲ್ಲಾಡಳಿತದ ನಿಷೇಧ ನಡುವೆಯೂ ಯಾದಗಿರಿ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಹೋಳಿ ಹಬ್ಬ ಆಚರಣೆ ಮಾಡಲಾಯಿತು.

    ಕೊರೊನಾ ಆತಂಕ ಹಿನ್ನೆಲೆ ಜಿಲ್ಲಾಡಳಿತದಿಂದ ಸಾರ್ವಜನಿಕವಾಗಿ ನಡೆಸುವ ಹೋಳಿ ಹಬ್ಬಕ್ಕೆ ಬ್ರೇಕ್ ಹಾಕಲಾಗಿದೆ. ಅಲ್ಲದೆ ಒಂದು ದಿನದ ಮಟ್ಟಿಗೆ ಮದ್ಯ ಮಾರಾಟವನ್ನು ಸಹ ನಿಷೇಧ ಮಾಡಲಾಗಿದೆ. ಹೀಗಿದ್ದರೂ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಜನ ಸಡಗರ ಸಂಭ್ರಮದಿಂದ ಬಣ್ಣದೋಕಳಿಯಲ್ಲಿ ಮಿಂದೆದ್ದರು.

    ನಗರದಲ್ಲಿ ಯುವಕರು ಮತ್ತು ಯುವತಿಯರು ತಮ್ಮ-ತಮ್ಮ ಏರಿಯಾಗಳಲ್ಲಿ ಒಬ್ಬರ ಮೇಲೆ ಒಬ್ಬರು ಬಣ್ಣ ಹಾಕಿ, ತಮಟೆ ಸದ್ದಿಗೆ ಸಖತ್ ಸ್ಟೇಪ್ ಹಾಕಿದರೆ, ಗ್ರಾಮೀಣ ಭಾಗದ ವಿವಿಧ ತಾಂಡಗಳಲ್ಲಿ ಬಂಜಾರ ಸಮುದಾಯದವರು ಸಾಂಪ್ರದಾಯಿಕ ಶೈಲಿಯಲ್ಲಿ ನೃತ್ಯಕ್ಕೆ ಹೆಜ್ಜೆ ಹಾಕಿ ಖುಷಿಪಟ್ಟರು.

  • ಹೋಳಿ ಆಡಿ, ನದಿ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು- ಓರ್ವನ ಸ್ಥಿತಿ ಗಂಭೀರ

    ಹೋಳಿ ಆಡಿ, ನದಿ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು- ಓರ್ವನ ಸ್ಥಿತಿ ಗಂಭೀರ

    ಹಾವೇರಿ: ಊರಿನ ಯುವಕರು, ಹುಡುಗರೆಲ್ಲ ಸೇರಿ ಹೋಳಿ ಹಬ್ಬದ ಪ್ರಯುಕ್ತ ಬಣ್ಣ ಆಡಿ ಸಂಭ್ರಮಿಸಿದ್ದರು. ಗ್ರಾಮದಲ್ಲಿ ಸಹಜವಾಗಿಯೇ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಆದರೆ ಬಣ್ಣದಾಟದ ನಂತರ ನದಿಗೆ ಸ್ನಾನಕ್ಕೆಂದು ತೆರಳಿದ್ದ ವೇಳೆ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಓರ್ವ ಬಾಲಕ ತೀವ್ರ ಅಸ್ವಸ್ಥಗೊಂಡ ಘಟನೆ ತಾಲೂಕಿನ ನಾಗನೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬಳಿ ಇರುವ ವರದಾ ನದಿಯಲ್ಲಿ ಈ ದುರ್ಘಟನೆ ನಡೆದಿದ್ದು, ಮೃತ ಬಾಲಕರನ್ನು ಮಹೇಶ್ ಮುರಡಣ್ಣನವರ್(10), ವೀರೇಶ್ ಅಕ್ಕಿವಳ್ಳಿ(10) ಎಂದು ಗುರುತಿಸಲಾಗಿದೆ. ಯೋಗೇಶ್ ಎಂಬ 7 ವರ್ಷದ ಬಾಲಕ ತೀವ್ರ ಅಸ್ವಸ್ಥಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಇಬ್ಬರು ಬಾಲಕರ ದೇಹಗಳನ್ನು ಸ್ಥಳೀಯರು ವರದಾ ನದಿಯಿಂದ ಹೊರ ತೆಗೆದಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಹೋಳಿ ಹಬ್ಬಕ್ಕೆ ಫ್ರೂಟ್ ಕಸ್ಟರ್ಡ್, ನಿಂಬೆ ಹಣ್ಣಿನ ಜ್ಯೂಸ್

    ಹೋಳಿ ಹಬ್ಬಕ್ಕೆ ಫ್ರೂಟ್ ಕಸ್ಟರ್ಡ್, ನಿಂಬೆ ಹಣ್ಣಿನ ಜ್ಯೂಸ್

    ಹೋಳಿ ಹಬ್ಬದ ಸಂಭ್ರಮ ಜೋರಾಗಿದೆ. ಗೆಳಯರ ಜೊತೆ ರಂಗುರಂಗಿನಿ ಓಕುಳಿ ಆಡಿ ಸುಸ್ತಾಗಿರೋವಾಗ ಕೂಲ್ ಆಗಿ ರುಚಿಯಾಗಿ ಆಗಿರೋದನ್ನು ತಿನ್ನಬೇಕು ಅಥವಾ ಕುಡಿಯಬೇಕು ಅನ್ನಿಸುತ್ತೆ. ಅಲ್ಲದೆ ಬೇಸಿಗೆಯ ಸುಡುಬಿಸಿಲಿನಲ್ಲಿ ದಣಿದು ಬಂದಾಗಲೂ ತಂಪಾದ ಪಾನಿಯ ಕುಡಿದರೆ ಮನಸ್ಸಿಗೆ ಹಿತ ಎನ್ನಿಸುತ್ತದೆ. ಇದಕ್ಕಾಗಿ ಇಲ್ಲಿದೆ ಸುಲಭವಾದ ಫ್ರೂಟ್ ಕಸ್ಟರ್ಡ್ ರೆಸಿಪಿ ಹಾಗೂ ನಿಂಬೆ ಹಣ್ಣಿನ ಜ್ಯೂಸ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಹಾಲು- 2 ಕಪ್
    2. ಕಸ್ಟರ್ಡ್ ಪೌಡರ್- 2 ಚಮಚ (ಮಾರುಕಟ್ಟೆಯಲ್ಲಿ ಲಭ್ಯ, ವೆನಿಲ್ಲಾ ಫ್ಲೇವರ್ ಆಯ್ದುಕೊಳ್ಳಬಹುದು)
    3. ಸಕ್ಕರೆ- 1/4 ಕಪ್
    4. ಕಪ್ಪು/ಬಿಳಿ ಸೀಡ್ಲೆಸ್ ದ್ರಾಕ್ಷಿ – 1/4 ಕಪ್(ಕಟ್ ಮಾಡಿಟ್ಟುಕೊಳ್ಳಿ)
    5. ಬಾಳೆಹಣ್ಣು – 1/4 ಕಪ್
    6. ದಾಳಿಂಬೆ – 1/4 ಕಪ್
    7. ಮಾವಿನ ಹಣ್ಣು 1/4 ಕಪ್
    8. ಸೇಬು – 1/4 ಕಪ್
    9. ಏಲಕ್ಕಿ – 1/4 ಚಮಚ

    ಮಾಡುವ ವಿಧಾನ:

    * ಒಲೆಯ ಮೇಲೆ ಒಂದು ಪಾತ್ರೆಯಲ್ಲಿ 2 ಕಪ್ ಹಾಲು ಹಾಕಿ ಬಿಸಿ ಮಾಡಿ.
    * ಒಂದು ಕಪ್‍ನಲ್ಲಿ ಕಸ್ಟರ್ಡ್ ಪೌಡರ್‍ಗೆ 3 ಚಮಚ ಹಾಲಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕುದಿಯುತ್ತಿರುವ ಹಾಲಿಗೆ ಬೆರೆಸಿ.
    * ಅದಕ್ಕೆ ಸಕ್ಕರೆ ಹಾಕಿ ಸ್ವಲ್ಪ ದಪ್ಪ ಹಾಗೂ ಹಳದಿ ಕಲರ್ ಬರೋವರೆಗೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಬೌಲ್ ಗೆ ಹಾಕಿ ತಣ್ಣಗಾಗಲು ಬಿಡಿ.
    * ಹಾಲು ತಣ್ಣಗಾದ ಬಳಿಕ ಅದಕ್ಕೆ ಕಟ್ ಮಾಡಿದ ದ್ರಾಕ್ಷಿ, ಬಾಳೆಹಣ್ಣು, ದಾಳಿಂಬೆ, ಮಾವಿನ ಹಣ್ಣು, ಸೇಬು, ಏಲಕ್ಕಿ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, 2 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿ ಇಟ್ಟು ನಂತರ ಸವಿಯಲು ಕೊಡಿ.

    ಬೇಕಾಗುವ ಸಾಮಗ್ರಿಗಳು:
    * ನಿಂಬೆಹಣ್ಣು-1
    * ಪುದೀನಾ-2 ಎಲೆ
    * ಸಕ್ಕರೆ- ಕಾಲು ಕಪ್
    * ಶುಂಠಿ- ಕಾಲು ಇಂಚು
    * ತೆಂಗಿನ ಕಾಯಿ
    * ಐಸ್ ಕ್ಯೂಬ್- 1ಕಪ್

    ಮಾಡುವ ವಿಧಾನ:
    * ಒಂದು ಮಿಕ್ಸಿ ಜಾರಿಗೆ ಸಕ್ಕೆರೆ, ತುರಿದ ತೆಂಗಿನ ಕಾಯಿ, ನಿಂಬೆಹಣ್ಣು, ಶುಂಠಿ ಪುದೀನಾ, ಹಾಗು ನಿಂಬೆ ಹಣ್ಣಿನ ಸಿಪ್ಪೆಯನ್ನು ಹಾಕಿ ಚೆನ್ನಾಗಿ ರುಬ್ಬಬೇಕು
    * ನಂತರ ಈ ಮೊದಲು ರುಬ್ಬಿದ ಜ್ಯೂಸ್‍ನ್ನು ಸೋಸಿ ತೆಗೆಯಬೇಕು.
    * ನಂತರ ನಿಮೆಗ ಬೇಕಾದಷ್ಟು ಐಸ್ ಕ್ಯೂಬ್ ಹಾಕಿ ಜ್ಯೂಸ್ ಹಾಕಿದರೆ ರುಚಿಯಾದ ಕಬ್ಬಿನ ಹಾಲಿನ ಟೇಸ್ಟ್ ಕೊಡುವ ಬೇಸಿಗೆಗೆ ರಿಫ್ರೆಶಿಂಗ್ ನಿಂಬೆ ಹಣ್ಣಿನ ಜೂಸ್ ಹೊಸ ರೀತಿ ಮಾಡಿ ಸವಿಯಿರಿ.

  • ‘ಜೊತೆಜೊತೆಯಲಿ’ ನಟಿಯ ಜೊತೆ ಬಿಗ್‍ಬಾಸ್ ವಿನ್ನರ್ ಶೈನ್ ಶೆಟ್ಟಿ

    ‘ಜೊತೆಜೊತೆಯಲಿ’ ನಟಿಯ ಜೊತೆ ಬಿಗ್‍ಬಾಸ್ ವಿನ್ನರ್ ಶೈನ್ ಶೆಟ್ಟಿ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ರ ವಿನ್ನರ್ ಶೈನ್ ಶೆಟ್ಟಿ ತುಂಬಾ ಬ್ಯುಸಿಯಾಗಿದ್ದಾರೆ. ಮೂರು ದಿನಗಳ ಹಿಂದೆಯಷ್ಟೆ ಮಂಗಳೂರಿನಲ್ಲಿ ನಡೆದಿದ್ದ ಹೋಳಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಇದೀಗ ‘ಜೊತೆಜೊತೆಯಲಿ’ ಸೀರಿಯಲ್ ಖ್ಯಾತಿಯ ನಟಿ ಮೇಘಾ ಶೆಟ್ಟಿ ಜೊತೆ ಕಾಣಿಸಿಕೊಂಡಿದ್ದಾರೆ.

    ಮೈಸೂರಿನಲ್ಲಿ ನಡೆದ ಹೋಳಿ ಕಾರ್ಯಕ್ರಮದಲ್ಲಿ ಶೈನ್ ಶೆಟ್ಟಿ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ನಟಿ ಮೇಘಾ ಶೆಟ್ಟಿ ಕೂಡ ಭಾಗಿಯಾಗಿದ್ದರು. ಮೇಘಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆಜೊತೆಯಲಿ’ ಸೀರಿಯಲ್‍ನಲ್ಲಿ ಅನು ಸಿರಿಮನೆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೀಗಾಗಿ ಮೇಘಾ ಶೆಟ್ಟಿ ಎನ್ನುವುದಕ್ಕಿಂದ ಅನು ಸಿರಿಮನೆ ಎಂದರೆ ಜನರಿಗೆ ಗೊತ್ತಾಗುತ್ತದೆ. ಅಷ್ಟರ ಮಟ್ಟಿಗೆ ಅನು ಧಾರಾವಾಹಿ ಮೂಲಕ ಖ್ಯಾತಿಗಳಿಸಿದ್ದಾರೆ.

    ಶೈನ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಇಬ್ಬರು ಮೈಸೂರಿನಲ್ಲಿ ನಡೆದ ರಂಗ್ ದೇ 2020 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿಮಾನಿಗಳ ಜೊತೆ ಹೋಳಿ ಆಚರಿಸಿದರು. ಇಬ್ಬರೂ ಸಹ ಹೋಳಿ ಸಂಭ್ರಮದ ಫೋಟೋ ಮತ್ತು ವಿಡಿಯೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    https://www.instagram.com/p/B9niyKVnx8q/

    ಬಣ್ಣಗಳ ಹಬ್ಬ, ಮೈಸೂರಿನ ರಂಗ್ ದೇ ಕಾರ್ಯಕ್ರಮದಲ್ಲಿ ಜನರೊಂದಿಗೆ ಹೋಳಿ ಆಚರಿಸಲಾಯಿತು. ಜೊತೆಗೆ ಜೊತೆಜೊತೆಯಲಿ ಸೀರಿಯಲ್ ನಟಿ ಕೂಡ ಭಾಗಿಯಾಗಿದ್ದರು ಎಂದು ಬರೆದುಕೊಂಡಿದ್ದಾರೆ. ಇನ್ನೂ ಮೇಘಾ ಶೆಟ್ಟಿ “ರಂಗ್ ದೇ ಮೈಸೂರು 2020 ಕಾರ್ಯಕ್ರಮದಲ್ಲಿ ಅಭಿಮಾನಿಗಳ ಜೊತೆ ಹೋಳಿ ಹಬ್ಬವನ್ನು ಆಚರಿಸಿದ ಅದ್ಭುತ ಕ್ಷಣಗಳು, ಜೊತೆಗೆ ಶೈನ್ ಶೆಟ್ಟಿರವರು ಕೂಡ ಭಾಗಿಯಾಗಿದ್ದರು” ಎಂದು ಬರೆದು ವಿಡಿಯೋ ಶೇರ್ ಮಾಡಿದ್ದಾರೆ.

    https://www.instagram.com/p/B9eQ6EcH6Y2/

    ಇದೇ ವೇಳೆ ಶೈನ್ ಶೆಟ್ಟಿ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದುಕೊಂಡಿದ್ದಾರೆ. ಮಂಗಳೂರು ಹೋಳಿ ಕಾರ್ಮಕ್ರಮದಲ್ಲಿ ಶೈನ್ ಶೆಟ್ಟಿ ಜೊತೆ ದೀಪಿಕಾ ದಾಸ್ ಮತ್ತು ಚಂದನಾ ಇಬ್ಬರೂ ಕೂಡ ಭಾಗಿಯಾಗಿದ್ದರು.

    https://www.instagram.com/p/B9g5V_GgjBM/

  • ಹೋಳಿ ಹಬ್ಬಕ್ಕೆ ‘ರಾಬರ್ಟ್’ ಚಿತ್ರದಿಂದ ಗುಡ್‍ನ್ಯೂಸ್- ಸರ್ಪ್ರೈಸ್ ತಿಳಿಸಿದ ತರುಣ್ ಸುಧೀರ್

    ಹೋಳಿ ಹಬ್ಬಕ್ಕೆ ‘ರಾಬರ್ಟ್’ ಚಿತ್ರದಿಂದ ಗುಡ್‍ನ್ಯೂಸ್- ಸರ್ಪ್ರೈಸ್ ತಿಳಿಸಿದ ತರುಣ್ ಸುಧೀರ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿ ತಂಡ ಇತ್ತೀಚೆಗಷ್ಟೆ ಚಿತ್ರದ ಮೊದಲ ಲಿರಿಕಲ್ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್‍ನ್ಯೂಸ್ ನೀಡಿತ್ತು. ಇದೀಗ ಚಿತ್ರತಂಡ ಹೋಳಿ ಹಬ್ಬಕ್ಕೆ ಮತ್ತೊಂದು ಸರ್ಪ್ರೈಸ್ ಕೊಟ್ಟಿದೆ.

    ಚಿತ್ರದ ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡುವ ಮೂಲಕ ಆ ಸರ್ಪ್ರೈಸ್ ಬಗ್ಗೆ ತಿಳಿಸಿದ್ದಾರೆ. ಅಂದರೆ ಹೋಳಿ ಹಬ್ಬಕ್ಕೆ ‘ರಾಬರ್ಟ್’ ಸಿನಿಮಾದ ಎರಡನೇ ಸಾಂಗ್ ರಿಲೀಸ್ ಆಗಲಿದೆ. ಹೀಗಾಗಿ ದರ್ಶನ್ ಅಭಿಮಾನಿಗಳಿಗೆ ಹೋಳಿ ಹಬ್ಬಕ್ಕೆ ಉಡುಗೊರೆ ಸಿಕ್ಕಿದಂತಾಗಿದೆ.

    “ಈ ಹಾಡು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಈ ಸಾಂಗನ್ನು ಯಾವಾಗಲಾದರೂ ಕೇಳಿದರೆ ನಮಗೆ ಅಪಾರ ಶಕ್ತಿ ನೀಡುತ್ತದೆ. ಹೋಳಿ ಹಬ್ಬದ ಸಂಭ್ರಮಕ್ಕೆ ನಾವು ಸಿನಿಮಾದ ಎರಡನೇ ‘ಜೈಶ್ರೀರಾಮ್’ ಹಾಡನ್ನು ಬಿಡುಗಡೆ ಮಾಡುತ್ತಿದ್ದೇವೆ. ಮಾರ್ಚ್ 9 ರಂದು ಮಧ್ಯಾಹ್ನ 12.03 ನಿಮಿಷಕ್ಕೆ ಹಾಡು ಬಿಡುಗಡೆಯಾಲಿದೆ” ಎಂದು ಬರೆದುಕೊಂಡಿದ್ದಾರೆ.

    ‘ಜೈಶ್ರೀರಾಮ್’ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈ ಹಿಂದೆ ‘ಹಡಗು ಹಿಡಿದು ಪಡೆಯೇ ಬರಲಿ, ಹೊಸಕಿ ಬಿಡುವೆ ಕಾಲಡಿ, ಡಿ.. ಡಿ ಬಾ ನಾ ರೆಡಿ’ ಹಾಡನ್ನು ಬಿಡುಗಡೆ ಮಾಡಿತ್ತು. ಇದೀಗ ‘ಜೈಶ್ರೀರಾಮ್’ ಹಾಡನ್ನು ರಿಲೀಸ್ ಮಾಡಲಿದೆ.

    ಸಂಜಯ್, ಅಕ್ಬರ್ ಹಾಗೂ ರಾಬರ್ಟ್ ಎಂದು ಮೂರು ಪಾತ್ರದಲ್ಲಿ ದರ್ಶನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಶಾ ಭಟ್ ಸಿನಿಮಾದ ನಾಯಕಿಯಾಗಿದ್ದು, ಜಗಪತಿ ಬಾಬು ವಿಲನ್ ಆಗಿ ದರ್ಶನ್‍ಗೆ ಟಕ್ಕರ್ ಕೊಟ್ಟಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಸಿನಿಮಾದ ಆ್ಯಕ್ಷನ್ ಕಟ್ ಹೇಳಿದ್ದು, ಉಮಾಪತಿ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ.

  • ಸಾರ್ವಜನಿಕ ಸ್ಥಳದಲ್ಲಿ ಹೋಳಿ ಆಚರಣೆಗೆ ಬ್ರೇಕ್

    ಸಾರ್ವಜನಿಕ ಸ್ಥಳದಲ್ಲಿ ಹೋಳಿ ಆಚರಣೆಗೆ ಬ್ರೇಕ್

    ಬೆಂಗಳೂರು: ಇಡೀ ವಿಶ್ವದೆಲ್ಲೆಡೆ ಮಹಾಮಾರಿ ಕೊರೊನಾ ವೈರಸ್ ಭೀತಿ ತಲ್ಲಣ ಆತಂಕ ಸೃಷ್ಟಿಸಿದೆ. ಈ ಮಹಾಮಾರಿ ಭಾರತಕ್ಕೂ ವಕ್ಕರಿಸಿದ್ದು, ಸಿಲಿಕಾನ್ ಸಿಟಿ ಮಂದಿ ಕೂಡ ಬೆಚ್ಚಿ ಬಿದ್ದಿದ್ದಾರೆ. ಜೊತೆಗೆ ಹೋಳಿ ಹಬ್ಬದ ಸಂಭ್ರಮಕ್ಕೂ ಕೊರೊನಾ ಬ್ರೇಕ್ ಹಾಕಲಿದೆ.

    ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬೇಡಿ, ಜನರ ಗುಂಪಿನಲ್ಲಿ ಯಾರಿಗಾದರೂ ಈ ವೈರಸ್ ಇದ್ದರೆ ಅದು ಹರಡತ್ತೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಕೊಟ್ಟಿದೆ. ಈ ಕೊರೊನಾ ವೈರಸ್ ಭೀತಿ ಹೋಳಿ ಹಬ್ಬಕ್ಕೂ ಆಗಿದ್ದು ಸಾರ್ವಜನಿಕರು ಅದ್ಧೂರಿಯಾಗಿ ಹೆಚ್ಚಿನ ಜನ ಸೇರಿ ಹಬ್ಬ ಮಾಡಬೇಡಿ ಎಂದು ಮೋದಿ ಮತ್ತು ಗೃಹಮಂತ್ರಿ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಹೆಚ್ಚು ಜನ ಸೇರುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ – ಪ್ರಧಾನಿ ಮೋದಿ ಮನವಿ

    ಹೋಳಿ ಎಂದು ಕರೆಯುವ ಬಣ್ಣದ ಹಬ್ಬಕ್ಕೆ ರಂಗು ರಂಗಿನ ಬಣ್ಣಗಳು ಚೀನಾ ದೇಶದಿಂದ ಶೇ. 90ರಷ್ಟು ಆಮದು ಆಗುತ್ತಿತ್ತು. ಚೀನಾ ದೇಶದಲ್ಲಿ ಕೊರೊನಾದ ರಂಗೂ ಹೋಳಿ ಹಬ್ಬದ ರಂಗಿಗ್ಗಿಂತ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಹೋಳಿ ಆಡಲು ಬಳಸುವ ಸಾಕಷ್ಟು ಆಟಿಕೆಗಳು ಸಹ ಚೀನಾದಿಂದ ಬರುತ್ತಿದ್ದ ವಸ್ತುಗಳೇ ಎನ್ನುವುದು ವಿಪರ್ಯಾಸ.

    ಈ ಬಾರಿ ಚೀನಾದಿಂದ ಹೋಳಿ ಹಬ್ಬಕ್ಕೆ ಸಂಬಂಧಿಸಿದ ವಸ್ತುಗಳು ಭಾರತಕ್ಕೇ ಬರುತ್ತಿಲ್ಲ. ಇದರಿಂದ ಬಣ್ಣಗಳ ಬೆಲೆ ದುಪ್ಪಟ್ಟು ಆಗಲಿದೆ. ಹೀಗಾಗಿ  ಸಾರ್ವಜನಿಕ ಸ್ಥಳಗಳಲ್ಲಿ, ಸ್ಟಾರ್ ಹೋಟೆಲ್ ಗಳು ಹೋಳಿ ಹಬ್ಬವನ್ನು ಆಚರಣೆ ಮಾಡದೇ ಇರಲು ನಿರ್ಧರ ತೆಗೆದುಕೊಂಡಿದೆ.

    ಹೋಳಿ ಹಬ್ಬವನ್ನು ಗುಂಪು ಗುಂಪಾಗಿ ಆಚರಣೆ ಮಾಡುವುದರಿಂದ ಕೊರೊನಾ ಹರಡುವ ಚಾನ್ಸ್ ಇದೆ. ಹೀಗಾಗಿ ಈ ಬಾರಿ ಹೋಳಿಯಿಂದ ದೂರ ಇರುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.