Tag: Holi festival

  • ವಿದ್ಯಾರ್ಥಿನಿಯರ ಮೇಲೆ ಬಣ್ಣ ಎರಚಿದ ಕಿಡಿಗೇಡಿಗಳು – 8 ಮಂದಿ ಅಸ್ವಸ್ಥ

    ವಿದ್ಯಾರ್ಥಿನಿಯರ ಮೇಲೆ ಬಣ್ಣ ಎರಚಿದ ಕಿಡಿಗೇಡಿಗಳು – 8 ಮಂದಿ ಅಸ್ವಸ್ಥ

    ಗದಗ: ಹೋಳಿ ಹಬ್ಬದ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಮೊಟ್ಟೆ, ಸಗಣಿ, ಮರಳು, ರಾಸಾಯನಿಕ ಗೊಬ್ಬರ, ಪಿನಾಯಿಲ್, ಮದ್ಯಪಾನ, ಕಲುಷಿತ ಬಣ್ಣ, ಗಾಜಿನ ಪುಡಿ ಮಿಶ್ರಿತ ಬಣ್ಣ ಎಲ್ಲವನ್ನೂ ಮಿಶ್ರಣ ಮಾಡಿ ಎರಚಿದ ಪರಿಣಾಮ ದುರ್ವಾಸನೆಯಿಂದ ವಿದ್ಯಾರ್ಥಿನಿಯರು ಅಸ್ವಸ್ಥವಾದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ (Laxmeshwara) ತಾಲೂಕಿನ ಸುವರ್ಣಗಿರಿ ತಾಂಡದಲ್ಲಿ ನಡೆದಿದೆ.

    8 ವಿದ್ಯಾರ್ಥಿನಿಯರು ಶಾಲೆಗೆ ಹೋರಟಿದ್ದರು. ಇದಕ್ಕಾಗಿಯೇ ಕಾದು ಕುಳಿತಿದ್ದ ಪೋಲಿ ಯುವಕರ ಗುಂಪು ವಿದ್ಯಾರ್ಥಿನಿಗಳು ಬಸ್ ಹತ್ತುವ ಸಂದರ್ಭದಲ್ಲಿ ಏಕಾಏಕಿ ಬಣ್ಣ ಎರಚಿತು. ಇದರ ದುರ್ವಾಸನೆಗೆ ಉಸಿರಾಟದ ತೊಂದರೆಯಿಂದ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದರು. ಉಸಿರಾಟದ ತೊಂದರೆ, ಎದೆನೋವು, ಕಣ್ಣು ಉರಿ, ತಲೆನೋವು ಎಂದು ವಿದ್ಯಾರ್ಥಿನಿಯರು ಕಣ್ಣೀರಿಟ್ಟಿದ್ದರು. ಇದನ್ನೂ ಓದಿ: ಯುಪಿಯ ಪುರುಷನಿಗೆ ಪಾಕ್ ಏಜೆಂಟ್ ನೇಹಾ ಆಮಿಷ – ರಕ್ಷಣಾ ಇಲಾಖೆಯ ಮಾಹಿತಿ ಸೋರಿಕೆ ಮಾಡ್ತಿದ್ದವನ ಬಂಧನ

    ಕೂಡಲೇ ವಿದ್ಯಾರ್ಥಿಗಳನ್ನು ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ವಿದ್ಯಾರ್ಥಿನಿಯರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಅವರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಬಸ್ ಹರಿದು ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು

    ಆಸ್ಪತ್ರೆಗೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು. ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ವಿದ್ಯಾರ್ಥಿನಿಯರ ಪೋಷಕರು ಒತ್ತಾಯಿಸಿದರು. ಘಟನೆಯ ಕುರಿತು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆಡುಕನ್ನು ಸುಡುವ ಬಣ್ಣದ ಹಬ್ಬ – ಹೋಳಿಯ ಮಹತ್ವವೇನು? ಬಿಳಿ ಬಣ್ಣದ ಬಟ್ಟೆ ಧರಿಸುವುದು ಏಕೆ?

    ಕೆಡುಕನ್ನು ಸುಡುವ ಬಣ್ಣದ ಹಬ್ಬ – ಹೋಳಿಯ ಮಹತ್ವವೇನು? ಬಿಳಿ ಬಣ್ಣದ ಬಟ್ಟೆ ಧರಿಸುವುದು ಏಕೆ?

    ಹೋಳಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಇದನ್ನು ದೇಶಾದ್ಯಂತ ಬಹಳ ಆಡಂಬರದಿಂದ ಆಚರಿಸಲಾಗುತ್ತದೆ. ಹೋಳಿ ಹಬ್ಬ ಬಣ್ಣಗಳಿಂದ ಕೂಡಿರುವುದರಿಂದ ಎಲ್ಲರೂ ಪ್ರೀತಿಸುತ್ತಾರೆ. ಈ ಬಣ್ಣದ ಹಬ್ಬವು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಅಚ್ಚುಮೆಚ್ಚು. ಹಾಗಾಗಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ.

    ಬಣ್ಣಗಳ ಹಬ್ಬ ಎಂದೂ ಕರೆಯಲ್ಪಡುವ ಹೋಳಿಯನ್ನು ಸಾಂಪ್ರದಾಯಿಕವಾಗಿ ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಆಚರಿಸಲಾಗುತ್ತದೆ. ಹೋಳಿಯು ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಇದು ಹಿಂದೂ ತಿಂಗಳ ಫಾಲ್ಗುಣದೊಂದಿಗೆ ಸಂಬಂಧವನ್ನು ಹೊಂದಿದೆ. ಈ ದಿನ ಜನರು ತಮ್ಮ ದುಃಖ, ನೋವುಗಳನ್ನು ಮರೆತು ಎಲ್ಲರೂ ಒಂದಾಗಿ ಬಣ್ಣಗಳಿಂದ ಹೋಳಿಯನ್ನು ಸಂಭ್ರಮಿಸುತ್ತಾರೆ.

    – AI ಚಿತ್ರ

    ಹೋಳಿ ಹಬ್ಬವನ್ನು ಆಚರಿಸುವುದರಿಂದ ವಿವಿಧ ಭಯಗಳನ್ನು ದೂರ ಮಾಡಬಹುದು ಎಂಬ ನಂಬಿಕೆಯಿದೆ. ಹೋಳಿ ಹಬ್ಬದ ದಿನದಂದು ಬೆಳಿಗ್ಗೆ, ಜನರು ತೆರೆದ ಸ್ಥಳಗಳು, ಉದ್ಯಾನವನಗಳು ಮತ್ತು ಬೀದಿಗಳಲ್ಲಿ ಸ್ನೇಹಿತರನ್ನು, ಪ್ರೀತಿ ಪಾತ್ರರನ್ನು ಭೇಟಿ ಮಾಡುವ ಮೂಲಕ ಬಣ್ಣವನ್ನು ಎರಚಿಕೊಳ್ಳುತ್ತಾರೆ. ಹೋಳಿ ಹಬ್ಬದ ಪ್ರಮುಖ ಅಂಶವೆಂದರೆ ಅದು ಸೌಹಾರ್ದತೆಯಾಗಿದೆ. ಈ ದಿನದಂದು, ಎಲ್ಲಾ ವರ್ಗದ ಜನರು ಆಚರಣೆಗಳಲ್ಲಿ ಸೇರುವುದರಿಂದ ಸಾಮಾಜಿಕ ಅಡೆತಡೆಗಳು ದೂರಾಗುತ್ತದೆ. ಪ್ರೀತಿಯು ಪರಸ್ಪರ ಹೆಚ್ಚಾಗುತ್ತದೆ. ಅಪರಿಚಿತರು ಸ್ನೇಹಿತರಾಗುತ್ತಾರೆ. ಉತ್ತರ ಭಾರತದಲ್ಲಿ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಹೋಳಿ ಹಬ್ಬದ ದಿನ ಬಣ್ಣಗಳ ಆಟ ಮಾತ್ರವಲ್ಲದೇ ವಿಶೇಷ ಖಾದ್ಯಗಳನ್ನೂ ತಯಾರಿಸಲಾಗುತ್ತದೆ. ಮಥುರಾ ಮತ್ತು ವೃಂದಾವನದಂತಹ ಸ್ಥಳಗಳಲ್ಲಿ, ಈ ಹಬ್ಬವನ್ನು ಭಗವಾನ್ ಕೃಷ್ಣ ಮತ್ತು ರಾಧೆಯ ನಡುವಿನ ಪ್ರೀತಿಯ ಸಂಕೇತವಾಗಿಯೂ ಆಚರಿಸಲಾಗುತ್ತದೆ.

    ಹೋಳಿ ಹಬ್ಬದ ಮೊದಲ ದಿನದಂದು ಪೂಜೆಯನ್ನು ಮಾಡಲಾಗುತ್ತದೆ, ಕಟ್ಟಿಗೆಗಳ ರಾಶಿಯನ್ನು ಸುಡಲಾಗುತ್ತದೆ. ಇದನ್ನು ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವಾಗಿ ಸುಡಲಾಗುತ್ತದೆ. ಹೋಳಿ ಪೂಜೆಯನ್ನು ಮಾಡಲು ಹಸಿ ಹತ್ತಿ ದಾರ, ತೆಂಗಿನಕಾಯಿ, ಗುಲಾಬಿ ಪುಡಿ, ಸಿಂಧೂರ, ಅಕ್ಷತೆ, ಧೂಪ ಮತ್ತು ಹೂವುಗಳು, ಬತಾಶೆ, ಅರಿಶಿನ ಮತ್ತು ನೀರು ಅವಶ್ಯಕವಾಗಿರುತ್ತದೆ.

     

    ಹೋಲಿಕಾ ದಹನ ಹಿಂದಿನ ಕಥೆ ಏನು?
    ಹೋಲಿಕಾ ದಹನ ಕಥೆಯು ವಿಷ್ಣುವಿನ ಭಕ್ತನಾದ ಪ್ರಹ್ಲಾದನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ದಂತಕಥೆಯ ಪ್ರಕಾರ, ಪ್ರಹ್ಲಾದನ ತಂದೆ ರಾಕ್ಷಸ ರಾಜ ಹಿರಣ್ಯಕಶ್ಯಪ, ವಿಷ್ಣುವಿನ ಅತಿದೊಡ್ಡ ಶತ್ರು ಎಂದು ಪರಿಗಣಿಸಲ್ಪಟ್ಟಿದ್ದ ಮತ್ತು ತನ್ನನ್ನು ತಾನು ದೇವರೆಂದು ಪರಿಗಣಿಸಿಕೊಂಡಿದ್ದ. ಅವನು ತನ್ನ ರಾಜ್ಯದಲ್ಲಿ ಎಲ್ಲರೂ ದೇವರನ್ನು ಯಾರೂ ಆರಾಧಿಸಬಾರದು ಎಂದು ಆಜ್ಞಾಪಿಸಿದ್ದನು. ಆದರೆ ಅವನ ಮಗ ಪ್ರಹ್ಲಾದನು ವಿಷ್ಣುವಿನ ಮಹಾನ್ ಭಕ್ತನಾಗಿದ್ದನು. ತನ್ನ ಮಗ ದೇವರನ್ನು ಪೂಜಿಸುತ್ತಿರುವುದನ್ನು ಕಂಡ ಹಿರಣ್ಯಕಶಿಪು ತನ್ನ ಸ್ವಂತ ಮಗನನ್ನೇ ಶಿಕ್ಷಿಸಲು ನಿರ್ಧರಿಸಿದನು. ಹಿರಣ್ಯಕಶ್ಯಪು ಪ್ರಹ್ಲಾದನಿಗೆ ಹಲವು ಬಾರಿ ತೊಂದರೆ ನೀಡಲು ಪ್ರಯತ್ನಿಸಿದನು, ಆದರೆ ಯಾವುದೂ ಸಾಧ್ಯವಾಗಲಿಲ್ಲ.

    ಕೊನೆಗೆ ರಾಜ ಹಿರಣ್ಯಕಶ್ಯಪು ತನ್ನ ಸಹೋದರಿ ಹೋಲಿಕಾಳ ಸಹಾಯ ಕೇಳಿದ. ಹೋಲಿಕಾಗೆ ಬೆಂಕಿ ತನ್ನನ್ನು ಸುಡುವುದಿಲ್ಲ ಎಂಬ ವರವಿತ್ತು, ಆದ್ದರಿಂದ ಹೋಲಿಕಾ ಪ್ರಹ್ಲಾದನನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಬೆಂಕಿಯಲ್ಲಿ ಕುಳಿತಳು. ಆದರೆ ವಿಷ್ಣುವಿನ ಕೃಪೆಯಿಂದ ಹೋಲಿಕಾ ಆ ಬೆಂಕಿಯಲ್ಲಿ ಸುಟ್ಟುಹೋದಳು ಮತ್ತು ಪ್ರಹ್ಲಾದನು ಬದುಕುಳಿದನು. ಅಂದಿನಿಂದ ಹೋಲಿಕಾ ದಹನ ಹಬ್ಬವನ್ನು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವೆಂದು ಆಚರಿಸಲಾಗುತ್ತದೆ. ಹೋಲಿಕಾ ದಹನದ ಮರುದಿನ ಬಣ್ಣಗಳ ಹಬ್ಬ ಹೋಳಿಯನ್ನು ಆಚರಿಸಲಾಗುತ್ತದೆ.

    ‘ಹೋಲಿಕಾ ದಹನ’ ಪೂಜೆಯನ್ನು ಮಾಡುವುದಕ್ಕಾಗಿ, ಕಟ್ಟಿಗೆ ರಾಶಿಯ ಸುತ್ತಲೂ ಮೂರು ಅಥವಾ ಏಳು ಸುತ್ತಿ ಹತ್ತಿ ದಾರವನ್ನು ಸುತ್ತಲಾಗುತ್ತದೆ. ಇದರ ನಂತರ, ಗಂಗಾಜಲ, ಹೂವು ಮತ್ತು ಸಿಂಧೂರವನ್ನು ಇದರ ಮೇಲೆ ಚಿಮುಕಿಸಲಾಗುತ್ತದೆ. ನಂತರ ಜಪಮಾಲೆ, ಕುಂಕುಮ, ಅಕ್ಷತೆ, ಬತಾಶೆ, ಅರಿಶಿನ, ಗುಲಾಬಿ ಬಣ್ಣ ಮತ್ತು ತೆಂಗಿನಕಾಯಿ ಬಳಸಿ, ರಚನೆಯನ್ನು ಪೂಜಿಸಲಾಗುತ್ತದೆ.

    – AI ಚಿತ್ರ

     

    ಹೋಳಿ ಹಬ್ಬದಂದು ಬಿಳಿ ಬಟ್ಟೆಯನ್ನೇ ಧರಿಸುವುದೇಕೆ?
    ಹೋಳಿಯಾಡುವಾಗ ಬಿಳಿ ಬಣ್ಣದ ಬಟ್ಟೆಯನ್ನೇ ಹೆಚ್ಚಾಗಿ ಧರಿಸುತ್ತಾರೆ. ಬೇರೆ ದಿನಗಳಲ್ಲಿ ಬಣ್ಣ ತಾಕಿದರೆ ಬಟ್ಟೆ ಹಾಳಾಗುತ್ತದೆ ಎಂದು ಭಾವಿಸಿದರೂ ಹೋಳಿಯಲ್ಲಿ ಬೇಕಂತಲೇ ಬಿಳಿ ಬಣ್ಣದ ಬಟ್ಟೆ ಧರಿಸಿ ಹೋಳಿಯಾಡಿ ಸಂಭ್ರವಿಸುತ್ತಾರೆ. ಆದರೆ ಹೋಳಿ ಸಂದರ್ಭ ಬಿಳಿ ಬಣ್ಣದ ಬಟ್ಟೆ ಧರಿಸುವುದರ ಹಿಂದಿದೆ ಹಲವು ಧಾರ್ಮಿಕ ಕಾರಣಗಳು.

    ಬಿಳಿ ಬಟ್ಟೆಯ ಮೇಲೆ ಹಸಿರು, ಕೆಂಪು, ಗುಲಾಬಿ, ನೀಲಿ ಮತ್ತು ಹಳದಿ ಬಣ್ಣಗಳು ವಿಶೇಷವಾಗಿ ಕಾಣುತ್ತವೆ. ಅಷ್ಟೇ ಅಲ್ಲ, ಹೋಳಿ ಹಬ್ಬ ಬರುವುದು ಬೇಸಿಗೆ ಕಾಲದಲ್ಲಿ. ಈ ಸಮಯದಲ್ಲಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ದೇಹವನ್ನು ಶಾಖದಿಂದ ರಕ್ಷಿಸಲು ಮತ್ತು ಆರಾಮದಾಯಕವಾಗಿರಲು ಬಿಳಿ ಬಟ್ಟೆಗಳನ್ನು ಧರಿಸಲಾಗುತ್ತದೆ ಎಂಬುದು ಎಂದು ವಿಚಾರ.

    ಹೋಳಿ ಪ್ರೀತಿ ಹಂಚುವ ಹಬ್ಬವಾಗಿದೆ. ಹೋಳಿಯ ದಿನ ಜನರು ಪರಸ್ಪರ ದ್ವೇಷವನ್ನು ಮರೆತು ಪ್ರೀತಿಯಿಂದ, ಸಂತೋಷ ಹಂಚುತ್ತಾ ಈ ಹಬ್ಬವನ್ನು ಒಟ್ಟಿಗೆ ಆಚರಿಸುತ್ತಾರೆ. ಅಲ್ಲದೆ ಬಿಳಿ ಬಣ್ಣವನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಜನರು ಹೋಳಿ ಆಡುವಾಗ ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ.

  • ಹೋಳಿ ಹಬ್ಬಕ್ಕೆ ಕೋಳಿ ಸಾರು ಮಾಡಲ್ಲ ಅಂದಿದ್ದಕ್ಕೆ ಹೆಂಡತಿ ಕೈಮುರಿದ ಪತಿರಾಯ

    ಹೋಳಿ ಹಬ್ಬಕ್ಕೆ ಕೋಳಿ ಸಾರು ಮಾಡಲ್ಲ ಅಂದಿದ್ದಕ್ಕೆ ಹೆಂಡತಿ ಕೈಮುರಿದ ಪತಿರಾಯ

    ಮುಂಬೈ: ಹೋಳಿ ಹಬ್ಬದ ದಿನದಂದು ಕೋಳಿ ಸಾರು (Chicken Sambar) ಮಾಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಪತಿ, ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ (Maharashtra) ಚಂದ್ರಾಪುರದಲ್ಲಿ Chandrapura) ನಡೆದಿದೆ.

    ಪತ್ನಿ ಕೋಳಿ ಸಾರು ಮಾಡಲು ನಿರಾಕರಿಸಿದ್ದಕ್ಕೆ ಪತಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಆಕೆಯ ತಲೆಗೆ ಬಲವಾಗಿ ಹೊಡೆದಿದ್ದು, ಕೈ ಮೂಳೆ ಮೂಳೆ ಮುರಿಯುವಷ್ಟರ ಮಟ್ಟಿಗೆ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಆರೋಪಿ ಪತಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಮೊಬೈಲ್‌ ಕೊಡಿಸುವ ನೆಪದಲ್ಲಿ ಹುಬ್ಬಳ್ಳಿಗೆ ಕರೆಸಿಕೊಂಡ ಯುವಕ – ಅಪ್ರಾಪ್ತ ಬಾಲಕಿ ಮೇಲೆ ನಾಲ್ವರಿಂದ ಗ್ಯಾಂಗ್ ರೇಪ್

    crime 1

    ಏನಿದು ಕೋಳಿ ಸಾರಿನ ಕತೆ?
    ಹೋಳಿ ಹಬ್ಬದ ದಿನದಂದು ಪತಿ ಮನೆಗೆ ಕೋಳಿ ತಂದು, ಹೆಂಡತಿಗೆ ರುಚಿ-ರುಚಿಯಾಗಿ ಸಾರು ಮಾಡುವಂತೆ ಹೇಳಿದ್ದಾನೆ. ಆದ್ರೆ ಪತ್ನಿ ಆಗಲೇ ಊಟ ರೆಡಿಯಾಗಿದೆ, ಈಗ ಕೋಳಿ ಬೇಯಿಸಲು ಸಾಧ್ಯವಿಲ್ಲ ಎಂದಿದ್ದಾಳೆ. ಇದರಿಂದ ಪತಿಯ ಕೋಪ ನೆತ್ತಿಗೇರಿ, ಮನೆಯ ಅಂಗಳದಲ್ಲೇ ಬಿದ್ದಿದ್ದ ದೊಣ್ಣೆ ತಂದು ಮನಬಂದಂತೆ ಥಳಿಸಿದ್ದಾನೆ. ಇದನ್ನೂ ಓದಿ: 1,487 ಗ್ರಾಂ ಚಿನ್ನ ಸಾಗಾಟ ಮಾಡ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್

    ಪತ್ನಿಗೆ ತಲೆಗೆ ಹಲವು ಬಾರಿ ಹೊಡೆದು ತೀವ್ರ ರಕ್ತಸ್ರಾವವಾಗುವಂತೆ ಮಾಡಿದ್ದಾನೆ. ಇದರಿಂದ ತೀವ್ರ ಪೆಟ್ಟಾಗಿದ್ದು, ಆಕೆಯ ಕೈ ಮೂಳೆ ಸಹ ಮುರಿದಿದೆ. ಆಕೆಯ ಚೀರಾಟ ಕೇಳಿ ಮನೆಗೆ ದೌಡಾಯಿಸಿದ ನೆರೆಹೊರೆಯವರು ಜಗಳ ಬಿಡಿಸಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಗಾಯಗೊಂಡ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ಆರೋಪಿ ಪತಿಯನ್ನ ಬಂಧಿಸಿರುವ ಚಂದ್ರಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಹೆಂಡತಿ ಕೋಪ ಮಾಡಿಕೊಂಡಿದ್ದಾಳೆ – ಅತ್ತೆ ಮನೆಯಲ್ಲಿ ಹೋಳಿ ಆಚರಿಸೋಕೆ 10 ದಿನ ರಜೆ ಕೇಳಿದ ಇನ್ಸ್‌ಪೆಕ್ಟರ್‌

    ಹೆಂಡತಿ ಕೋಪ ಮಾಡಿಕೊಂಡಿದ್ದಾಳೆ – ಅತ್ತೆ ಮನೆಯಲ್ಲಿ ಹೋಳಿ ಆಚರಿಸೋಕೆ 10 ದಿನ ರಜೆ ಕೇಳಿದ ಇನ್ಸ್‌ಪೆಕ್ಟರ್‌

    ಲಕ್ನೋ: ಸಾಮಾನ್ಯವಾಗಿ ಯಾವುದೇ ಹಬ್ಬಗಳು ಬಂದಾಗಲೂ ಪೊಲೀಸರಿಗೆ (Police) ಬಿಡುವಿಲ್ಲದ ಕೆಲಸ ಇರುತ್ತದೆ. ಹಾಗಾಗಿ ಸಾಮಾನ್ಯ ದಿನಗಳಿಗಿಂತ ಭದ್ರತೆ ಹೆಚ್ಚಾಗಿಯೇ ಇರುತ್ತದೆ. ಆದ್ರೆ ಇಲ್ಲೊಬ್ಬರು ಪೊಲೀಸ್ ಅಧಿಕಾರಿ ತನ್ನ ಹೆಂಡತಿಯೊಂದಿಗೆ ಹೋಳಿ (Holi Festival) ಆಚರಿಸಲು 10 ದಿನ ರಜೆ ಕೇಳಿ ಸುದ್ದಿಯಾಗಿದ್ದಾರೆ.

    ಉತ್ತರಪ್ರದೇಶದ (Uttar Pradesh) ಫರೂಕಾಬಾದ್ ಜಿಲ್ಲೆಯ ಇನ್ಸ್‌ಪೆಕ್ಟರ್‌ ಹೋಳಿಗೆ ಮುಂಚಿತವಾಗಿ 10 ದಿನಗಳ ರಜೆ ಕೇಳಿದ್ದಾರೆ. ದಾಂಪತ್ಯ ಕಲಹ ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದಾರೆ. ರಜೆಯ ಅರ್ಜಿ ಇದೀಗ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ನೌಕಾಸೇನೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಮೂವರು ಪೈಲೆಟ್‌ಗಳ ರಕ್ಷಣೆ

    ರಜೆ ಅರ್ಜಿಯಲ್ಲಿ ಏನಿದೆ?
    `ಮದುವೆಯಾಗಿ (Marriage) 22 ವರ್ಷಗಳಾದರೂ ನಾನು ಅತ್ತೆ ಮನೆಗೆ ಹೋಗಿ ಹೋಳಿ ಆಚರಿಸಲು ಸಾಧ್ಯವಾಗಿಲ್ಲ. ಇದರಿಂದ ನನ್ನ ಹೆಂಡತಿ ತುಂಬಾ ಕೋಪಗೊಂಡಿದ್ದಾಳೆ. ಈ ಬಾರಿ ಅಲ್ಲಿಗೆ ಹೋಗಲೇಬೇಕೆಂದು ಹಠ ಹಿಡಿದು ಕುಳಿತಿದ್ದಾಳೆ. ರಜೆ ಇಲ್ಲದೆ ಹೋಗಿಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನನ್ನ ಪರಿಸ್ಥಿತಿ ಅರ್ಥ ಮಾಡಿಕೊಂಡು 10 ದಿನ ಸಾಮಾನ್ಯ ರಜೆ ಒದಗಿಸಿ’ ಎಂದು ಅರ್ಜಿ ಸಲ್ಲಿಸಿದ್ದಾರೆ.

    ಅರ್ಜಿಯನ್ನು ಓದಿದ ನಂತರ ಎಸ್ಪಿ ಅಶೋಕ್ ಕುಮಾರ್ ಮಾರ್ಚ್ 4 ರಿಂದ ಇನ್ಸ್‌ಪೆಕ್ಟರ್‌ಗೆ 5 ದಿನಗಳ ಸಾಮಾನ್ಯ ರಜೆ ನೀಡಿದ್ದಾರೆ. ಇದನ್ನೂ ಓದಿ: ಇಂಡಿಗೊ ವಿಮಾನದಲ್ಲಿ ಸಿಗರೇಟ್ ಸೇದಿ ಆತಂಕ ತಂದೊಡ್ಡಿದ ಯುವತಿ

  • ಹೋಳಿ ಹಬ್ಬದಲ್ಲೂ ಕಾಶ್ಮೀರ್ ಫೈಲ್ಸ್ ಹವಾ- ಅನುಪಮ್ ಖೇರ್‌ನಂತೆ ಕಾಣಿಸಿಕೊಂಡ ಯುವಕರು

    ಹೋಳಿ ಹಬ್ಬದಲ್ಲೂ ಕಾಶ್ಮೀರ್ ಫೈಲ್ಸ್ ಹವಾ- ಅನುಪಮ್ ಖೇರ್‌ನಂತೆ ಕಾಣಿಸಿಕೊಂಡ ಯುವಕರು

    ಕೊಪ್ಪಳ: ದೇಶಾದ್ಯಂತ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಬಿಡುಗಡೆಯಾಗಿ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಅಂದಿನಿಂದ ರಾಜಕಾರಣಿಗಳು, ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಚಿತ್ರದ ಬಗ್ಗೆ ಪ್ರಚಾರ ಮಾಡುತ್ತಲೇ ಬಂದಿದ್ದಾರೆ. ಇದೀಗ ಕೊಪ್ಪಳ ಜಿಲ್ಲೆಯ ಯುವಕರು ಹೋಳಿ ಹಬ್ಬದದಲ್ಲಿ ವಿಭಿನ್ನವಾಗಿ ಮುಖಕ್ಕೆ ಬಣ್ಣ ಬಳಿದು ಕಾಶ್ಮೀರ್ ಫೈಲ್ಸ್ ಚಿತ್ರದ ಪ್ರಚಾರಕ್ಕೆ ಮುಂದಾಗಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ನಟಿಸಿದ ಅನುಪಮ್ ಖೇರ್ ಪಾತ್ರವನ್ನು ಜನರು ಅತೀ ಹೆಚ್ಚು ಮೆಚ್ಚಿಕೊಂಡಿದ್ದರು. ಸಿನಿಮಾ ಪ್ರಾರಂಭದಲ್ಲಿ ಅನುಪಮ್ ಖೇರ್ ಮುಖಕ್ಕೆ ಈಶ್ವರನಂತೆ ಹೋಲುವ ನೀಲಿ ಬಣ್ಣವನ್ನು ಬಳಿದ ವೇಷ ಜನರಿಗೆ ಭಾರೀ ಇಷ್ಟವಾಗಿತ್ತು. ಇದೀಗ ಕೊಪ್ಪಳ ಜಿಲ್ಲೆ ಗಂಗಾವತಿಯ ಕೆಲ ಯುವಕರು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಅನುಪಮ್ ಖೇರ್‌ರಂತೆ ಮುಖಕ್ಕೆ ನೀಲಿ ಬಣ್ಣ ಬಳಿದು ಸಿನಿಮಾ ಪ್ರಚಾರ ಮಾಡಿದ್ದಾರೆ. ಇದನ್ನೂ ಓದಿ: ಸ್ಟೇಜ್‌ನತ್ತ ನುಗ್ಗಿದ ಫ್ಯಾನ್ಸ್‌ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ- RRR ಪ್ರೀ-ರಿಲೀಸ್‌ ಇವೆಂಟ್‌ ತಡವಾಗಿ ಆರಂಭ

    ಮುಖಕ್ಕೆ ನೀಲಿ ಬಣ್ಣ ಬಳಿದು, ಹಣೆಗೆ ತಿಲಕ ಇಟ್ಟು ಕೆಲ ಹುಡುಗರು ತಮ್ಮ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಮೊದಲಿಗೆ 6 ಜನ ನಿಂತು ತೆಗೆಸಿಕೊಂಡಿದ್ದ ಫೋಟೋ ಕೆಲವೇ ಹೊತ್ತಿನಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ಕೋಲಾರದ ಕ್ಲಾಕ್ ಟವರ್ ಮೇಲೆ 74 ವರ್ಷಗಳ ಬಳಿಕ ರಾರಾಜಿಸಿದ ತ್ರಿವರ್ಣ ಧ್ವಜ

     

  • ಇಸ್ಕಾನ್ ದೇವಾಲಯದಲ್ಲಿ ಹೋಳಿ ಹುಣ್ಣಿಮೆ ಸಂಭ್ರಮ

    ಇಸ್ಕಾನ್ ದೇವಾಲಯದಲ್ಲಿ ಹೋಳಿ ಹುಣ್ಣಿಮೆ ಸಂಭ್ರಮ

    ಬೆಂಗಳೂರು: ಶ್ರೀ ಚೈತನ್ಯ ಮಹಾಪ್ರಭುಗಳ 536ನೇ ಜಯಂತಿ ಹಾಗೂ ಹೋಳಿ ಹಬ್ಬದ ಸಂಭ್ರಮಾಚರಣೆಯನ್ನು ರಾಜಾಜಿನಗರದ ಇಸ್ಕಾನ್ ದೇವಾಲಯದಲ್ಲಿ ಶುಕ್ರವಾರ ವೈಭವಯುತವಾಗಿ ಆಚರಿಸಲಾಯಿತು.

    ಸಂಜೆ 6 ಗಂಟೆಗೆ ಶ್ರೀ ಚೈತನ್ಯ ಮಹಾಪ್ರಭುಗಳ ಉತ್ಸವಮೂರ್ತಿಯನ್ನು ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿಟ್ಟು, ದೇವಸ್ಥಾನದ ಪ್ರಾಂಗಣದಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಉತ್ಸವ ಮೂರ್ತಿಗಳಿಗೆ ಭವ್ಯವಾದ ಅಭಿಷೇಕ ನಡೆಯಿತು. ಇದನ್ನೂ ಓದಿ: ಟಿಬೆಟಿಯನ್ನರಿಗೆ ಹೂಸ ವರ್ಷದ ಸಂಭ್ರಮ – ವಿಶ್ವದ ಅತೀ ದೊಡ್ಡ ಪರದೆ ಅನಾವರಣ

    ಈ ಸಂದರ್ಭದಲ್ಲಿ ಇಸ್ಕಾನ್ ಬೆಂಗಳೂರಿನ ಅಧ್ಯಕ್ಷ ಶ್ರೀ ಮಧುಪಂಡಿತ್ ದಾಸ್, ಉತ್ಸವದ ಆಚರಣೆಯ ಉದ್ದೇಶವನ್ನು ಪ್ರವಚನದ ಮೂಲಕ ತಿಳಿಸಿಕೊಟ್ಟರು. ಶಯನ ಆರತಿ ಮತ್ತು ಶಯನ ಪಲ್ಲಕ್ಕಿಯೊಂದಿಗೆ ಜಯಂತಿಯ ಸಂಭ್ರಮಾಚರಣೆ ಮುಕ್ತಾಯಗೊಂಡಿತು. ಇದನ್ನೂ ಓದಿ: ಗದ್ದುಗೆ ಏರಿದ ಶಿರಸಿ ಮಾರಿಕಾಂಬಾ – ಹರಿದುಬಂದ ಜನಸಾಗರ

  • ಕಾಮಣ್ಣನ ಹಬ್ಬಕ್ಕೆ ಶಸ್ತ್ರಾಸ್ತ್ರ ಹೊರ ತರುವ ಗ್ರಾಮಸ್ಥರು

    ಕಾಮಣ್ಣನ ಹಬ್ಬಕ್ಕೆ ಶಸ್ತ್ರಾಸ್ತ್ರ ಹೊರ ತರುವ ಗ್ರಾಮಸ್ಥರು

    ಧಾರವಾಡ: ಆ ಗ್ರಾಮದಲ್ಲಿ ಹೋಳಿ ಹಬ್ಬ ಬಂದರೆ ಸಾಕು, ಗ್ರಾಮದ ಜನರೆಲ್ಲಾ ಕೈಯಲ್ಲಿ ಆಯುಧಗಳನ್ನ ಹಿಡಿದುಕೊಂಡು ನಿಲ್ಲುತ್ತಾರೆ. ಏಕೆಂದರೆ ಆ ಗ್ರಾಮದ ಕಾಮಣ್ಣನೇ ಇದಕ್ಕೆ ಕಾರಣ.

    ಹೌದು, ಜಿಲ್ಲೆಯ ಮುಳಮುತ್ತಲ ಗ್ರಾಮದಲ್ಲಿ ಕಾಮಣ್ಣನ ಹಬ್ಬ ಬಂದರೆ ಸಾಕು, ಇಡೀ ಗ್ರಾಮದ ಜನ ಕೈಯಲ್ಲಿ ಆಯುಧಗಳನ್ನು ಹಿಡಿದು ಕಾಮಣ್ಣನನ್ನು ಕಾವಲು ಕಾಯುತ್ತಾರೆ. ಇದನ್ನೂ ಓದಿ: ಡ್ರೋಣ್ ಕ್ಯಾಮೆರಾ ಮೂಲಕ ಆರೋಪಿ ಸೆರೆಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರು..!

    ಏಕೆಂದರೆ ಈ ಕಾಮಣ್ಣನ ಮುಖ ಕಳ್ಳತನ ಮಾಡಲು ಬರುತ್ತಾರೆ ಎಂಬುದಕ್ಕೆ ಇದನ್ನು ಕಾವಲು ಕಾಯುತ್ತಾರೆ. ಇನ್ನು ಇಡೀ ರಾತ್ರಿ ಗ್ರಾಮದ ಜನ ಈ ಕಾಮಣ್ಣನ ದರ್ಶನ ಪಡೆಯುತ್ತಾರೆ. ಅಲ್ಲದೇ ತಮ್ಮ ಇಷ್ಟಾರ್ಥಗಳನ್ನು ಕೂಡ ಈ ಕಾಮಣ್ಣ ಎದುರು ಇಡುತ್ತಾರೆ. ನಾಳೆಯ ದಿನ ಬೆಳಗ್ಗೆ ಕಾಮದಹನ ಮಾಡಿ ನಂತರ ರಂಗ ಪಂಚಮಿ ಆಚರಣೆ ಮಾಡುತ್ತಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಮದ್ಯ ಮಾರಾಟ ನಿಷೇಧ

    ಜಿಲ್ಲೆಯ ಅಣ್ಣಿಗೇರಿಯಿಂದ ಈ ಕಾಮಣ್ಣ ಮುಖವಾಡ ತಂದು ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. ಹೀಗಾಗಿ ಅಲ್ಲಿಯ ಜನ ಇದನ್ನ ಕದ್ದು ಹೋಗಬಹುದು ಎನ್ನುವ ಕಾರಣಕ್ಕೆ ತಲ್ವಾರ್, ಮಚ್ಚು, ಕೊಡಲಿ ಹಿಡಿದು ಕಾವಲು ಕಾಯುತ್ತಾರೆ.

  • ಹೋಳಿ ಆಡುವ ನೆಪದಲ್ಲಿ ವಸೂಲಿ ದಂಧೆ

    ಹೋಳಿ ಆಡುವ ನೆಪದಲ್ಲಿ ವಸೂಲಿ ದಂಧೆ

    ಚಿಕ್ಕೊಡಿ: ಹೋಳಿ ಹಬ್ಬದ ನಿಮಿತ್ತ ಬಣ್ಣ ಆಡುವ ನೆಪದಲ್ಲಿ ಕೆಲ ಯುವಕರು ವಸೂಲಿ ದಂಧೆಗೆ ಇಳಿದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಕ್ಕೋಡಿ ರೋಡ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ.

    ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ತಡೆದು ವಸೂಲಿಗೆ ಇಳಿದಿರುವ ಖದೀಮರು ಹೆದ್ದಾರಿಯ ಮೇಲೆ ಮರದ ದಿಂಬುಗಳನ್ನ ಅಳವಡಿಸಿ ಹಣ ವಸೂಲಿ ಮಾಡುತ್ತಿದ್ದರು. ಪ್ರತಿ ವಾಹನದಿಂದ 30 ರಿಂದ 50 ರೂಪಾಯಿವರೆಗೆ ವಸೂಲಿ ಮಾಡುತ್ತಿದ್ದಾರೆ. ಹಣ ನೀಡಿದರೇ ಮಾತ್ರ ಮುಂದೆ ಹೋಗಲು ಅವಕಾಶ ಕಲ್ಪಿಸುತ್ತಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಸಮಯದಲ್ಲೇ ಉಪಚುನಾವಣೆ ಯಾಕೆ – ಆಯೋಗದ ವಿರುದ್ಧ ಮಮತಾ ಕಿಡಿ

    30ಕ್ಕೂ ಹೆಚ್ಚು ಜನರಿಂದ ಹೆದ್ದಾರಿ ಮೇಲೆ ಹಗಲು ದರೋಡೆ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದರು. ಪೊಲೀಸರಿಗೆ ಮಾಹಿತಿ ನೀಡಿದರು ಸ್ಥಳಕ್ಕೆ ಬಾರದ ಪೊಲೀಸರ ವಿರುದ್ದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಪ್ರತಿ ಬಣ್ಣದಲ್ಲೂ ಇದೆ ಹರುಷ – ಹೋಳಿ ಹಬ್ಬಕ್ಕೆ ಶುಭಕೋರಿದ ಪ್ರಧಾನಿ

    ಪ್ರತಿ ಬಣ್ಣದಲ್ಲೂ ಇದೆ ಹರುಷ – ಹೋಳಿ ಹಬ್ಬಕ್ಕೆ ಶುಭಕೋರಿದ ಪ್ರಧಾನಿ

    ನವದೆಹಲಿ: ಕೋವಿಡ್ ಇಳಿಮುಖವಾದ ನಂತರ ಇಡೀ ದೇಶವು ಸಂಭ್ರಮದಿಂದ ಹೋಳಿಹಬ್ಬ ಆಚರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‍ಸಿಂಗ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಹುಲ್‍ಗಾಂಧಿ ಸೇರಿದಂತೆ ಪ್ರಮುಖರು ಹಬ್ಬಕ್ಕೆ ಶುಭ ಕೋರಿದ್ದಾರೆ.

    `ನಿಮ್ಮೆಲ್ಲರಿಗೂ ಪರಸ್ಪರ ಪ್ರೀತಿ ವಾತ್ಸಲ್ಯ ಹಾಗೂ ಸಹೋದರತ್ವ ಸಂಕೇತವಾಗಿರುವ ಹೋಳಿಹಬ್ಬದ ಶುಭಾಶಯಗಳು. ಈ ಬಣ್ಣದ ಹಬ್ಬದಲ್ಲಿ ಪ್ರತಿಯೊಂದು ಬಣ್ಣವೂ ನಿಮ್ಮ ಜೀವನದಲ್ಲಿ ಸಂತೋಷ, ಹರುಷ ತರಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನಿಯನ್ನರು ಕೆನಡಾದಲ್ಲಿ 3 ವರ್ಷ ಉಳಿಯಬಹುದು

    ರಕ್ಷಣಾ ಸಚಿವ ರಾಜನಾಥ್ ಸಿಂಗ್, `ಇದು ಸಕಾರಾತ್ಮಕತೆ, ಚೈತನ್ಯ, ಸಂತೋಷ ಹಾಗೂ ಸಾಮರಸ್ಯಕ್ಕೆ ಸಂಬಂಧಿಸಿದ ಬಣ್ಣಗಳ ಹಬ್ಬವಾಗಿದೆ. ಎಲ್ಲರಿಗೂ ಹಬ್ಬದ ಶುಭಾಶಯಗಳು’ ಎಂದಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಸಹ ಹೋಳಿ ಹಬ್ಬದ ಸಂದೇಶ ಕೋರಿದ್ದು, `ಹೃದಯಗಳನ್ನು ಬೆಸೆಯುವ ಈ ಹೋಳಿಹಬ್ಬ ಪ್ರತಿಯೊಬ್ಬರಿಗೂ ಹರುಷ ತರಲಿ. ಕೋವಿಡ್ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಇಳಿಕೆಯಾಗುತ್ತಿರುವುದು ಹರ್ಷದಾಯಕ. ಆದಾಗ್ಯೂ ಹಲವಾರು ದೇಶಗಳಲ್ಲಿ ಮತ್ತೆ ಅಲೆ ಮುಂದುವರಿಯುತ್ತಿದ್ದು ಎಚ್ಚರಿಕೆಯಿಂದಿರುವಂತೆ ಜನರಿಗೆ ಸೂಚಿಸಲಾಗುತ್ತಿದೆ’ ಎಂದೂ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ವ್ಯಕ್ತಿ ಕೊಲೆಗೈದು ಅರ್ಧಂಬರ್ಧ ಶವ ಸುಟ್ಟು ಪರಾರಿಯಾದ ಹಂತಕರು

    On Holi, PM Scott Morrison Thanks Indian Australians With Special Message

    ಆಸ್ಟ್ರೇಲಿಯಾ ಪ್ರಧಾನಿಯ ಶುಭಸಂದೇಶ
    ಹೋಳಿಹಬ್ಬದ ಪ್ರಯುಕ್ತ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯರಿಗೆ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರೂ ಶುಭ ಹಾರೈಸಿದ್ದಾರೆ. ಈ ಕುರಿತು ಅಧೀಕೃತ ಪ್ರಕಟಣೆ ಹೊರಡಿಸಿರುವ ಅವರು, `ನಾನು ಭಾರತೀಯ ಆಸ್ಟ್ರೇಲಿಯನ್ ಸಮುದಾಯಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ ಸ್ವಂತ ಕುಟುಂಬಗಳಿಗೆ ಮಾತ್ರವಲ್ಲದೆ ಎಲ್ಲ ಆಸ್ಟ್ರೇಲಿಯನ್ನರಿಗೂ ನೀವು ಪ್ರೀತಿ ಮತ್ತು ಕಾಳಜಿಯನ್ನು ತೋರಿಸಿದ್ದೀರಿ. ಅಲ್ಲದೆ, ಕೋವಿಡ್ ಕಾರಣದಿಂದ ಅಂತರ ಮೂಡಿದ್ದ ಸಮುದಾಯಗಳ ನಡುವೆ ಇಂತಹ ಆಚರಣೆಗಳು ಸ್ನೇಹ ಹಾಗೂ ಏಕತೆಯ ಉತ್ಸಾಹದಲ್ಲಿ ನಮ್ಮನ್ನು ಒಟ್ಟಿಗೇ ಸೇರಿಸುತ್ತವೆ, ಭವಿಷ್ಯದ ಭರವಸೆಗಳನ್ನೂ ಪ್ರೇರೇಪಿಸುತ್ತದೆ’ ಎಂದು ಸಂದೇಶ ನೀಡಿದ್ದಾರೆ.

  • ಹೋಳಿ ಹಬ್ಬಕ್ಕೆ ಮಾಡಿ ಗರಂ ಗರಂ ಮಸಾಲೆ ವಡೆ

    ಹೋಳಿ ಹಬ್ಬಕ್ಕೆ ಮಾಡಿ ಗರಂ ಗರಂ ಮಸಾಲೆ ವಡೆ

    ಬೇಕಾಗುವ ಸಾಮಗ್ರಿಗಳು:
    * ಮೈದಾಹಿಟ್ಟು- 1 ಕಪ್
    * ಅಕ್ಕಿ ಹಿಟ್ಟಿ- 1ಕಪ್
    * ಹೋಳಿಗೆ ರವೆ- 1ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಜೀರಿಗೆ- ಸ್ವಲ್ಪ
    * ಅಡುಗೆ ಎಣ್ಣೆ- 1 ಕಪ್
    * ಹಸಿಮೆಣಸಿನಕಾಯಿ- 5 ರಿಂದ 6
    * ಈರುಳ್ಳಿ- 1
    * ಕೊತ್ತಂಬರಿ, ಕರಿಬೇವಿ- ಸ್ವಲ್ಪ

    ಮಾಡುವ ವಿಧಾನ:
    * ಈರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಹಸಿಮೆಣಸಿನಕಾಯಿ, ಎಲ್ಲವನ್ನು ಸಣ್ಣಕ್ಕೆ ಕಟ್ ಮಾಡಿ ಕೊಂಡು ಮೈದಾ ಹಿಟ್ಟು, ಅಕ್ಕಿ ಹಿಟ್ಟು, ಹೋಳಿಗೆ ರವೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

    * ನಂತರ ಹಿಟ್ಟಿನ ಮಿಶ್ರಣದಿಂದ ವಡೆಯನ್ನು ತಟ್ಟಿಕೊಳ್ಳಬೇಕು.
    * ನಂತರ ಅಡುಗೆ ಎಣ್ಣೆಯನ್ನು ಬಿಸಿ ಮಾಡಿ ವಡೆಗಳನ್ನು ಬಿಟ್ಟು ಬೇಯಿಸಿದರೆ ರುಚಿಯಾ ವಡೆ ಸವಿಯಲು ಸಿದ್ಧವಾಗುತ್ತದೆ.