Tag: holi celebration

  • ಶಮಿ ಮಗಳ ಹೋಳಿ ಆಚರಣೆ ಸರಿಯಲ್ಲ – ಇದು ಷರಿಯಾ ವಿರುದ್ಧ ಎಂದ ಜಮಾತ್ ಅಧ್ಯಕ್ಷ

    ಶಮಿ ಮಗಳ ಹೋಳಿ ಆಚರಣೆ ಸರಿಯಲ್ಲ – ಇದು ಷರಿಯಾ ವಿರುದ್ಧ ಎಂದ ಜಮಾತ್ ಅಧ್ಯಕ್ಷ

    ನವದೆಹಲಿ: ಭಾರತದ ವೇಗಿ ಮೊಹಮ್ಮದ್ ಶಮಿ (Mohammed Shami), ರಂಜಾನ್ ಸಮಯದಲ್ಲಿ ಉಪವಾಸ ಪಾಲಿಸಿಲ್ಲ ಎಂದು ಕೀಟಿಸಿದ ಬೆನ್ನಲ್ಲೇ ಶಮಿ ಪುತ್ರಿ ಹೋಳಿ ಆಚರಿಸಿದ ಬಗ್ಗೆ ಆಲ್ ಇಂಡಿಯಾ ಮುಸ್ಲಿಂ ಜಿಮಾತ್ ಅಧ್ಯಕ್ಷ ಮೌಲಾನ ಶಹಬುದ್ದೀನ್ ರಜ್ಜಿ ಟೀಕಿಸಿದ್ದಾರೆ.

    ಶಮಿ ಪುತ್ರಿ ಆಯ್‌ರಾ ಹೋಳಿ ಆಚರಿಸಿದ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅವರು, ಮುಸ್ಲಿಮರು ಹೋಳಿ ಆಚರಿಸುವುದು ಷರಿಯಾ ಕಾನೂನಿಗೆ ವಿರುದ್ಧವಾಗಿದೆ. ಶಮಿ ಪುತ್ರಿ ಚಿಕ್ಕವಳು. ಆಕೆ ಗೊತ್ತಲ್ಲದೇ ಹೋಳಿ ಆಚರಿಸಿದರೇ ತಪ್ಪಲ್ಲ. ಗೊತ್ತಿದ್ದೂ ಹೋಳಿ ಆಚರಿಸಿದ್ದರೆ ಅದು ಷರಿಯಾ ಪ್ರಕಾರ ತಪ್ಪು ಎಂದಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಏಕಾಏಕಿ ಕಾಗೆಗಳ ಸರಣಿ ಸಾವು – ಹಕ್ಕಿ ಜ್ವರದ ಆತಂಕ?

    ಈ ಬಗ್ಗೆ ನಾನು ಶಮಿ ಹಾಗೂ ಅವರ ಕುಟುಂಬಸ್ಥರಿಗೆ ಮನವಿ ಮಾಡಿದ್ದೇನೆ. ಷರಿಯಾ ಇಲ್ಲದನ್ನು ಮಕ್ಕಳಿಗೆ ಮಾಡಲು ಬಿಡಬೇಡಿ. ಹೋಳಿ ಹಿಂದೂಗಳ ದೊಡ್ಡ ಹಬ್ಬ, ಅವುಗಳ ಆಚರಣೆಯಿಂದ ನಾವು ದೂರವಿರಬೇಕು. ಗೊತ್ತಿದ್ದೂ ಹೋಳಿ ಆಚರಿಸಿದ್ದರೇ ಅದು ಖಂಡನೀಯ ಎಂದು ಹೇಳಿದ್ದಾರೆ. ಇದನ್ನೂ ಓದಿ: IPL 2025 | ಅತ್ಯುತ್ತಮ ಜೊತೆಯಾಟದಲ್ಲಿ ಆರ್‌ಸಿಬಿ ಆಟಗಾರರೇ ಟಾಪ್‌!

    ಶಮಿ ಪುತ್ರಿ ರಂಗಿನಾಟದಲ್ಲಿ ಮಿಂಚಿದ್ದ ಫೋಟೋವನ್ನು ಪತ್ನಿ ಹಸೀನ್ ಜಹಾನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ವೈರಲ್ ಆಗುತ್ತಿದ್ದಂತೆ ಕೆಲವರು ಶಮಿ ಪುತ್ರಿಯನ್ನು ನಿಂದಿಸಿದ್ದಾರೆ. ಇದನ್ನೂ ಓದಿ: ಕೆ.ಆರ್ ಮಾರ್ಕೆಟ್ ಫ್ಲೈಓವರ್ ಮೇಲೆ ಹಿಟ್& ರನ್ – ಆಟೋಗೆ ಕಾರು ಡಿಕ್ಕಿ, ಚಾಲಕನ ಕಾಲು ಮುರಿತ

    ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಶಮಿ, ಬೌಂಡರಿ ಲೈನ್ ಬಳಿ ಎನರ್ಜಿ ಡ್ರಿಂಕ್ ಕುಡಿಯುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಶಮಿ ರಂಜಾನ್ ಉಪವಾಸ ಪಾಲಿಸದೇ ಪಾಪ ಎಸಗಿದ್ದಾರೆ ಎಂದು ಶಹಬುದ್ದೀನ್ ರಜ್ಜಿ ಕಿಡಿಕಾರಿದ್ದರು.

  • ಕಲರ್ ಎರಚಬೇಡಿ ಎಂದಿದ್ದಕ್ಕೆ ವೃದ್ಧೆಯ ಕೊಂದೇ ಬಿಟ್ಟ ಯುವಕರು!

    ಕಲರ್ ಎರಚಬೇಡಿ ಎಂದಿದ್ದಕ್ಕೆ ವೃದ್ಧೆಯ ಕೊಂದೇ ಬಿಟ್ಟ ಯುವಕರು!

    ಜಾರ್ಖಂಡ್: ಹೋಳಿ ಆಚರಣೆ (Holy Celebration) ಯ ವೇಳೆ ನನ್ನ ಮೇಲೆ ಬಣ್ಣ ಎರಚಬೇಡಿ ಎಂದ ವೃದ್ಧೆಯನ್ನು ಯುವಕರ ಗುಂಪೊಂದು ಥಳಿಸಿ ಕೊಲೆಗೈದ ಘಟನೆ ಜಾರ್ಖಂಡ್‍ನ ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ.

    ಮೃತಳನ್ನು ಮುಟ್ಟಿ ದೇವಿ ಎಂದು ಗುರುತಿಸಲಾಗಿದೆ. ಬಲಬದ್ಧಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮೋರ್ ನಿಮಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 65 ವರ್ಷದ ವೃದ್ಧೆಯನ್ನು ಪಾನಮತ್ತ ಯುವಕರ ಗುಂಪು ಹತ್ಯೆ ಮಾಡಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ವಿಚಿತ್ರವಾದ ಎಲೆಕ್ಟ್ರಾನಿಕ್ ಬಲೂನು ಪತ್ತೆ – ಆತಂಕದಲ್ಲಿ ಜನ

    ಹೋಳಿ ಬಣ್ಣದಾಟದ ಸಮಯದಲ್ಲಿ ಕೆಲವೊಮ್ಮೆ ಬಲವಂತವಾಗಿ ಬಣ್ಣ ಎರಚಲಾಗುತ್ತದೆ. ಅಂತೆಯೇ ಇದನ್ನು ವೃದ್ಧೆಯೊಬ್ಬರು ವಿರೋಧಿಸಿದ್ದಾರೆ. ಈ ವೇಳೆ ಪಾನಮತ್ತ ಯುವಕರು ಆಕೆಗೆ ಥಳಿಸಿದ್ದಾರೆ. ಬಳಿಕ ಆಕೆ ಸಾವನ್ನಪ್ಪಿದ ವಿಚಾರ ತಿಳಿಯುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

    ಈ ಸಂಬಂಧ ಮೃತ ಮಹಿಳೆಯ ಪುತ್ರ ಮುರಾರಿ ಸಿಂಗ್, ಇದು ಯಾವುದೇ ದ್ವೇಷಕ್ಕಾಗಿ ನಡೆದ ಪ್ರಕರಣವಲ್ಲ, ನಾವು ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ. ಮದ್ಯದ ಅಮಲಿನಲ್ಲಿ ಹೋಳಿ ಆಚರಿಸುತ್ತಿದ್ದವರು ಬಲವಂತವಾಗಿ ಬಣ್ಣ ಹಚ್ಚುತ್ತಿದ್ದರು ಮತ್ತು ಜೋರಾಗಿ ಗಲಾಟೆ ಮಾಡುತ್ತಿದ್ದರು. ತಾಯಿ ಅವರ ಗೂಂಡಾಗಿರಿಯನ್ನು ವಿರೋಧಿಸಿದ್ದು, ಅವರು ಆಕೆಯ ಪ್ರಾಣ ಹೋಗುವವರೆಗೂ ಥಳಿಸಿದ್ದಾರೆ. ಇತ್ತ ತಾಯಿ ಸಾವನ್ನಪ್ಪಿದ ವಿಚಾರ ತಿಳಿಯುತ್ತಿದ್ದಂತೆಯೇ ನಾವು ಪೊಲೀಸರಿಗೆ ಮಾಹಿತಿ ನೀಡಿದೆವು. ಆದರೆ ಪೊಲೀಸರು ಬರುವ ಮೊದಲೇ ಅವರೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದರು ಎಂದರು.