ಗದಗ: ಹೋಳಿ (Holi) ಹಬ್ಬದ ಸಂದರ್ಭದಲ್ಲಿ ಗ್ರಾಮದ ತುಂಬೆಲ್ಲಾ ರಂಗುರಂಗಿನ ಹೋಳಿ ಆಟವಾಡಿ ಕೆರೆಯಲ್ಲಿ ಸ್ನಾನಕ್ಕೆ ಹೋದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗದಗ (Gadag) ಜಿಲ್ಲೆಯ ಲಕ್ಷ್ಮೇಶ್ವರ (Laxmeshwara) ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದಿದೆ.
ಮೂರು ಜನ ದಡದಲ್ಲಿ ಸ್ನಾನ ಮಾಡಿದ್ದಾರೆ. ಆದರೆ ದೇವೇಂದ್ರ ಒಂದು ದಡದಿಂದ ಮತ್ತೊಂದು ದಡ ತಲುಪುವ ದುಸ್ಸಾಹಸಕ್ಕೆ ಮುಂದಾಗಿದ್ದಾನೆ. ಕೆರೆಯ ಮಧ್ಯಭಾಗದ ಕೆಸರಿನಲ್ಲಿ ಸಿಲುಕಿ ಮುಳುಗಿದ್ದಾನೆ. ಜೊತೆಗೆ ಹೋಗಿದ್ದ ಸ್ನೇಹಿತರ ಮಾಹಿತಿಯ ಆಧಾರದ ಮೇರೆಗೆ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿಯಿಂದ ಬಾಲಕನಿಗಾಗಿ ಶೋಧ ಕಾರ್ಯನಡೆಸಿದರು. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಬಾಲಕನ ಮೃತ ದೇಹ ಹೊರತೆಗೆದಿದ್ದಾರೆ. ಹಬ್ಬದ ಸಂಭ್ರಮದ ದಿನದಂದು ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಗದಗ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದ್ದಕ್ಕೆ ಇಬ್ಬರು ಪುತ್ರರನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದು ನೇಣಿಗೆ ಶರಣಾದ ತಂದೆ
ಇನ್ನೂ ಇತ್ತೀಚೆಗೆ ಕತ್ರಿನಾ ಕುಕ್ಕೆ ದೇಗುಲಕ್ಕೆ ಭೇಟಿ ನೀಡಿದ್ದರು. 2 ದಿನಗಳ ಕಾಲ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆ, ಸರ್ಪ ಸಂಸ್ಕಾರ ಸೇವೆ, ನಾಗ ಪ್ರತಿಷ್ಠಾ ಪೂಜೆ ಮಾಡಿಸಿದ್ದರು. ಸಂತಾನ, ವ್ಯವಹಾರಿಕ, ಕೌಟುಂಬಿಕ, ಜೀವನದ ಒಳಿತಿಗಾಗಿ ವಿಶೇಷ ಪೂಜೆ ಮಾಡಿಸಿದ್ದರು.
ಚಿಕ್ಕಮಗಳೂರು: ದತ್ತಪೀಠದಲ್ಲಿ (Datta Peeta) ಸಾಂಪ್ರದಾಯಿಕ ಹೋಳಿ (Holi) ಆಚರಣೆಗೆ ಹಿಂದೂ ಸಂಘಟನೆಗಳು ಮುಂದಾಗಿದ್ದು, ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.
ಹೋಳಿ ಹುಣ್ಣಿಮೆ ಹಿನ್ನೆಲೆ, ಹಿಂದೂ ಸಂಘಟನೆಗಳು ದತ್ತಪೀಠದಲ್ಲಿ ಹೋಳಿ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದವು. ಅಲ್ಲದೇ ಔಂದುಬರ ವೃಕ್ಷದ ಬಳಿ ಹೋಳಿ ಆಚರಣೆಗೆ ಅನುಮತಿ ಕೇಳಲಾಗಿತ್ತು. ಮಾ.15ರಿಂದ 3 ದಿನಗಳ ಕಾಲ ದತ್ತಪೀಠದಲ್ಲಿ ಉರುಸ್ ಆಚರಣೆ ನಡೆಯಲಿದ್ದು, ಹೋಳಿ ಆಚರಣೆಗೆ ಅನುಮತಿ ನೀಡಲು ಜಿಲ್ಲಾಡಳಿತ ನಿರಾಕರಿಸಿದೆ. ಇದನ್ನೂ ಓದಿ: ಟಿಕೆಟ್ ಕಳೆದುಕೊಂಡು ವರ್ಷವಾಯ್ತು, ಜನರ ಆಶೀರ್ವಾದ ಇವತ್ತಿಗೂ ಹಾಗೇ ಇದೆ: ಪ್ರತಾಪ್ ಸಿಂಹ
ನವದೆಹಲಿ: ಹೋಳಿ ಹಬ್ಬ (Holi) ಪ್ರತಿಯೊಬ್ಬರ ಜೀವನದಲ್ಲಿ ಹೊಸ ಉತ್ಸಾಹ ಮತ್ತು ಶಕ್ತಿ ತುಂಬಲಿ ಎಂದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ದೇಶದ ಜನರಿಗೆ ಶುಭ ಹಾರೈಸಿದ್ದಾರೆ.
ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಸಂತೋಷದಿಂದ ತುಂಬಿರುವ ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಉತ್ಸಾಹ ತುಂಬಲಿ. ದೇಶವಾಸಿಗಳಲ್ಲಿ ಏಕತೆಯ ಬಣ್ಣವನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಾ.17ಕ್ಕೆ ಪುನೀತ್ ಹುಟ್ಟುಹಬ್ಬ – ‘ಅಪ್ಪು’ ಸಿನಿಮಾ ರೀ-ರಿಲೀಸ್
ಜೈಪುರ್: ಹೋಳಿ (Holi) ಹಬ್ಬದಂದು ಬಣ್ಣ ಹಚ್ಚಿಸಿಕೊಳ್ಳಲು ನಿರಾಕರಿಸಿದ ಯುವಕನನ್ನು ಮೂವರು ವ್ಯಕ್ತಿಗಳು ಸೇರಿ ಥಳಿಸಿ ಬಳಿಕ ಕತ್ತು ಹಿಸುಕಿ ಹತ್ಯೆಗೈದ ಘಟನೆ ರಾಜಸ್ಥಾನದಲ್ಲಿ (Rajasthan) ನಡೆದಿದೆ.
ಬುಧವಾರ ಸಂಜೆ ದೌಸಾ ಜಿಲ್ಲೆಯ ರಾಲ್ವಾಸ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹತ್ಯೆಗೀಡಾದ ಯುವಕನನ್ನು ಹಂಸರಾಜ್ ಎಂದು ಗುರುತಿಸಲಾಗಿದೆ. ಹಂಸರಾಜ್ ಸ್ಥಳೀಯ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ. ಇಲ್ಲಿಗೆ ಬಂದ ಅಶೋಕ್, ಬಬ್ಲು ಮತ್ತು ಕಲುರಾಮ್ ಬಣ್ಣ ಬಳಿಯಲು ಯತ್ನಿಸಿದ್ದರು. ಈ ವೇಳೆ ಯುವಕ ನಿರಾಕರಿಸಿದ್ದಕ್ಕೆ, ಮೂವರು ಆತನಿಗೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದರು. ಬಳಿಕ ಅದರಲ್ಲಿ ಒಬ್ಬ ಕತ್ತು ಹಿಸುಕಿ ಆತನನ್ನು ಹತ್ಯೆಗೈದಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ದಿನೇಶ್ ಅಗರ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮರಾಠಿಯಲ್ಲಿ ಮಾತನಾಡುವಂತೆ ಪಿಡಿಓಗೆ ಧಮ್ಕಿ – ಆರೋಪಿ ಹಿಂಡಲಗಾ ಜೈಲಿಗೆ
ಹತ್ಯೆಯನ್ನು ಖಂಡಿಸಿ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಹಂಸರಾಜ್ ಅವರ ಶವವನ್ನು ಈ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರಿಸಿ ಪ್ರತಿಭಟನೆ ನಡೆಸಿದ್ದಾರೆ. ಮೃತನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ, ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಕೆಲಸ ನೀಡಬೇಕು. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಅಯೋಧ್ಯೆ: ಹೋಳಿ (Holi) ಹಬ್ಬದಂದು ಅಯೋಧ್ಯೆಯಾದ್ಯಂತ (Ayodhya) ಎಲ್ಲಾ ಮಸೀದಿಗಳಲ್ಲಿ (Mosques) ಶುಕ್ರವಾರದ ನಮಾಜ್‌ನ್ನು ಮಧ್ಯಾಹ್ನ 2 ಗಂಟೆಯ ನಂತರ ಸಲ್ಲಿಸಲಾಗುವುದು ಎಂದು ನಗರದ ಮುಖ್ಯ ಧರ್ಮಗುರು ಮೊಹಮ್ಮದ್ ಹನೀಫ್ (Mohammad Haneef) ತಿಳಿಸಿದ್ದಾರೆ.
ಹೋಳಿ ಆಚರಣೆಗಳಿಗೆ ಅನುಗುಣವಾಗಿ ನಮಾಜ್‌ನ ಸಮಯವನ್ನು ಸರಿಹೊಂದಿಸಲಾಗುವುದು. ಎಲ್ಲಾ ಮಸೀದಿಗಳು ಮಧ್ಯಾಹ್ನ 2 ಗಂಟೆಯ ನಂತರ ಪ್ರಾರ್ಥನೆ ಸಲ್ಲಿಸುವಂತೆ ನಾವು ನಿರ್ದೇಶಿಸಿದ್ದೇವೆ. ಹೋಳಿ ಹಬ್ಬದ ಸಮಯದಲ್ಲಿ ಎಲ್ಲಾ ಮುಸ್ಲಿಂ ಸಮುದಾಯದ ಸದಸ್ಯರು ತಾಳ್ಮೆಯಿಂದ ಇರಬೇಕು. ಯಾರಾದರೂ ಅವರಿಗೆ ಬಣ್ಣ ಹಚ್ಚಿದರೆ, ಅವರು ಮುಗುಳ್ನಗೆಯೊಂದಿಗೆ ಪ್ರತಿಕ್ರಿಯಿಸಬೇಕು. ಪ್ರೀತಿ ಮತ್ತು ಗೌರವದ ಮನೋಭಾವದಿಂದ ‘ಹೋಳಿ ಮುಬಾರಕ್’ ಎಂದು ಹೇಳಬೇಕು ಎಂದು ಸಲಹೆ ನೀಡಿದ್ದಾರೆ.
ಹೋಳಿ ಮತ್ತು ಜುಮಾ ಹೊಂದಿಕೆಯಾಗುವುದು ಇದೇ ಮೊದಲಲ್ಲ. ಇದು ಆಗಾಗ ಸಂಭವಿಸುತ್ತಿರುತ್ತದೆ. ಇದು ನಮಗೆ ಏಕತೆಯನ್ನು ಬೆಳೆಸಲು ಒಂದು ಉತ್ತಮ ಅವಕಾಶವಾಗಿದೆ ಎಂದಿದ್ದಾರೆ.
ಇದೇ ವೇಳೆ ಜನರಿಗೆ ಹೋಳಿ ಹಬ್ಬದ ಶುಭಾಶಯಗಳನ್ನು ಅವರು ತಿಳಿಸಿದರು. ನಮ್ಮ ಹಿಂದೂ ಸಹೋದರರಿಗೆ ಹೋಳಿಗೆ ಶುಭ ಹಾರೈಸುತ್ತೇವೆ. ಅವರ ಸಂತೋಷದಲ್ಲಿ ನಾವು ಭಾಗಿಯಾಗುತ್ತೇವೆ ಎಂದಿದ್ದಾರೆ.
ಹೋಳಿಗೆ ಆಚರಣೆಗೆ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಆ ದಿನ ಯಾವುದೇ ಕೋಮು ಉದ್ವಿಗ್ನತೆ ನಡೆಯದಂತೆ ಶಾಂತಿ ಸಮಿತಿ ಸಭೆಗಳನ್ನು ಸಹ ನಡೆಸಲಾಗುತ್ತಿದೆ ಎಂದು ಅಯೋಧ್ಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಚಂದ್ರ ವಿಜಯ್ ಸಿಂಗ್ ತಿಳಿಸಿದ್ದಾರೆ.
ಹೋಳಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಇದನ್ನು ದೇಶಾದ್ಯಂತ ಬಹಳ ಆಡಂಬರದಿಂದ ಆಚರಿಸಲಾಗುತ್ತದೆ. ಹೋಳಿ ಹಬ್ಬ ಬಣ್ಣಗಳಿಂದ ಕೂಡಿರುವುದರಿಂದ ಎಲ್ಲರೂ ಪ್ರೀತಿಸುತ್ತಾರೆ. ಈ ಬಣ್ಣದ ಹಬ್ಬವು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಅಚ್ಚುಮೆಚ್ಚು. ಹಾಗಾಗಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ.
ಬಣ್ಣಗಳ ಹಬ್ಬ ಎಂದೂ ಕರೆಯಲ್ಪಡುವ ಹೋಳಿಯನ್ನು ಸಾಂಪ್ರದಾಯಿಕವಾಗಿ ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಆಚರಿಸಲಾಗುತ್ತದೆ. ಹೋಳಿಯು ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಇದು ಹಿಂದೂ ತಿಂಗಳ ಫಾಲ್ಗುಣದೊಂದಿಗೆ ಸಂಬಂಧವನ್ನು ಹೊಂದಿದೆ. ಈ ದಿನ ಜನರು ತಮ್ಮ ದುಃಖ, ನೋವುಗಳನ್ನು ಮರೆತು ಎಲ್ಲರೂ ಒಂದಾಗಿ ಬಣ್ಣಗಳಿಂದ ಹೋಳಿಯನ್ನು ಸಂಭ್ರಮಿಸುತ್ತಾರೆ.
– AI ಚಿತ್ರ
ಹೋಳಿ ಹಬ್ಬವನ್ನು ಆಚರಿಸುವುದರಿಂದ ವಿವಿಧ ಭಯಗಳನ್ನು ದೂರ ಮಾಡಬಹುದು ಎಂಬ ನಂಬಿಕೆಯಿದೆ. ಹೋಳಿ ಹಬ್ಬದ ದಿನದಂದು ಬೆಳಿಗ್ಗೆ, ಜನರು ತೆರೆದ ಸ್ಥಳಗಳು, ಉದ್ಯಾನವನಗಳು ಮತ್ತು ಬೀದಿಗಳಲ್ಲಿ ಸ್ನೇಹಿತರನ್ನು, ಪ್ರೀತಿ ಪಾತ್ರರನ್ನು ಭೇಟಿ ಮಾಡುವ ಮೂಲಕ ಬಣ್ಣವನ್ನು ಎರಚಿಕೊಳ್ಳುತ್ತಾರೆ. ಹೋಳಿ ಹಬ್ಬದ ಪ್ರಮುಖ ಅಂಶವೆಂದರೆ ಅದು ಸೌಹಾರ್ದತೆಯಾಗಿದೆ. ಈ ದಿನದಂದು, ಎಲ್ಲಾ ವರ್ಗದ ಜನರು ಆಚರಣೆಗಳಲ್ಲಿ ಸೇರುವುದರಿಂದ ಸಾಮಾಜಿಕ ಅಡೆತಡೆಗಳು ದೂರಾಗುತ್ತದೆ. ಪ್ರೀತಿಯು ಪರಸ್ಪರ ಹೆಚ್ಚಾಗುತ್ತದೆ. ಅಪರಿಚಿತರು ಸ್ನೇಹಿತರಾಗುತ್ತಾರೆ. ಉತ್ತರ ಭಾರತದಲ್ಲಿ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಹೋಳಿ ಹಬ್ಬದ ದಿನ ಬಣ್ಣಗಳ ಆಟ ಮಾತ್ರವಲ್ಲದೇ ವಿಶೇಷ ಖಾದ್ಯಗಳನ್ನೂ ತಯಾರಿಸಲಾಗುತ್ತದೆ. ಮಥುರಾ ಮತ್ತು ವೃಂದಾವನದಂತಹ ಸ್ಥಳಗಳಲ್ಲಿ, ಈ ಹಬ್ಬವನ್ನು ಭಗವಾನ್ ಕೃಷ್ಣ ಮತ್ತು ರಾಧೆಯ ನಡುವಿನ ಪ್ರೀತಿಯ ಸಂಕೇತವಾಗಿಯೂ ಆಚರಿಸಲಾಗುತ್ತದೆ.
ಹೋಳಿ ಹಬ್ಬದ ಮೊದಲ ದಿನದಂದು ಪೂಜೆಯನ್ನು ಮಾಡಲಾಗುತ್ತದೆ, ಕಟ್ಟಿಗೆಗಳ ರಾಶಿಯನ್ನು ಸುಡಲಾಗುತ್ತದೆ. ಇದನ್ನು ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವಾಗಿ ಸುಡಲಾಗುತ್ತದೆ. ಹೋಳಿ ಪೂಜೆಯನ್ನು ಮಾಡಲು ಹಸಿ ಹತ್ತಿ ದಾರ, ತೆಂಗಿನಕಾಯಿ, ಗುಲಾಬಿ ಪುಡಿ, ಸಿಂಧೂರ, ಅಕ್ಷತೆ, ಧೂಪ ಮತ್ತು ಹೂವುಗಳು, ಬತಾಶೆ, ಅರಿಶಿನ ಮತ್ತು ನೀರು ಅವಶ್ಯಕವಾಗಿರುತ್ತದೆ.
ಹೋಲಿಕಾ ದಹನ ಹಿಂದಿನ ಕಥೆ ಏನು?
ಹೋಲಿಕಾ ದಹನ ಕಥೆಯು ವಿಷ್ಣುವಿನ ಭಕ್ತನಾದ ಪ್ರಹ್ಲಾದನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ದಂತಕಥೆಯ ಪ್ರಕಾರ, ಪ್ರಹ್ಲಾದನ ತಂದೆ ರಾಕ್ಷಸ ರಾಜ ಹಿರಣ್ಯಕಶ್ಯಪ, ವಿಷ್ಣುವಿನ ಅತಿದೊಡ್ಡ ಶತ್ರು ಎಂದು ಪರಿಗಣಿಸಲ್ಪಟ್ಟಿದ್ದ ಮತ್ತು ತನ್ನನ್ನು ತಾನು ದೇವರೆಂದು ಪರಿಗಣಿಸಿಕೊಂಡಿದ್ದ. ಅವನು ತನ್ನ ರಾಜ್ಯದಲ್ಲಿ ಎಲ್ಲರೂ ದೇವರನ್ನು ಯಾರೂ ಆರಾಧಿಸಬಾರದು ಎಂದು ಆಜ್ಞಾಪಿಸಿದ್ದನು. ಆದರೆ ಅವನ ಮಗ ಪ್ರಹ್ಲಾದನು ವಿಷ್ಣುವಿನ ಮಹಾನ್ ಭಕ್ತನಾಗಿದ್ದನು. ತನ್ನ ಮಗ ದೇವರನ್ನು ಪೂಜಿಸುತ್ತಿರುವುದನ್ನು ಕಂಡ ಹಿರಣ್ಯಕಶಿಪು ತನ್ನ ಸ್ವಂತ ಮಗನನ್ನೇ ಶಿಕ್ಷಿಸಲು ನಿರ್ಧರಿಸಿದನು. ಹಿರಣ್ಯಕಶ್ಯಪು ಪ್ರಹ್ಲಾದನಿಗೆ ಹಲವು ಬಾರಿ ತೊಂದರೆ ನೀಡಲು ಪ್ರಯತ್ನಿಸಿದನು, ಆದರೆ ಯಾವುದೂ ಸಾಧ್ಯವಾಗಲಿಲ್ಲ.
ಕೊನೆಗೆ ರಾಜ ಹಿರಣ್ಯಕಶ್ಯಪು ತನ್ನ ಸಹೋದರಿ ಹೋಲಿಕಾಳ ಸಹಾಯ ಕೇಳಿದ. ಹೋಲಿಕಾಗೆ ಬೆಂಕಿ ತನ್ನನ್ನು ಸುಡುವುದಿಲ್ಲ ಎಂಬ ವರವಿತ್ತು, ಆದ್ದರಿಂದ ಹೋಲಿಕಾ ಪ್ರಹ್ಲಾದನನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಬೆಂಕಿಯಲ್ಲಿ ಕುಳಿತಳು. ಆದರೆ ವಿಷ್ಣುವಿನ ಕೃಪೆಯಿಂದ ಹೋಲಿಕಾ ಆ ಬೆಂಕಿಯಲ್ಲಿ ಸುಟ್ಟುಹೋದಳು ಮತ್ತು ಪ್ರಹ್ಲಾದನು ಬದುಕುಳಿದನು. ಅಂದಿನಿಂದ ಹೋಲಿಕಾ ದಹನ ಹಬ್ಬವನ್ನು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವೆಂದು ಆಚರಿಸಲಾಗುತ್ತದೆ. ಹೋಲಿಕಾ ದಹನದ ಮರುದಿನ ಬಣ್ಣಗಳ ಹಬ್ಬ ಹೋಳಿಯನ್ನು ಆಚರಿಸಲಾಗುತ್ತದೆ.
‘ಹೋಲಿಕಾ ದಹನ’ ಪೂಜೆಯನ್ನು ಮಾಡುವುದಕ್ಕಾಗಿ, ಕಟ್ಟಿಗೆ ರಾಶಿಯ ಸುತ್ತಲೂ ಮೂರು ಅಥವಾ ಏಳು ಸುತ್ತಿ ಹತ್ತಿ ದಾರವನ್ನು ಸುತ್ತಲಾಗುತ್ತದೆ. ಇದರ ನಂತರ, ಗಂಗಾಜಲ, ಹೂವು ಮತ್ತು ಸಿಂಧೂರವನ್ನು ಇದರ ಮೇಲೆ ಚಿಮುಕಿಸಲಾಗುತ್ತದೆ. ನಂತರ ಜಪಮಾಲೆ, ಕುಂಕುಮ, ಅಕ್ಷತೆ, ಬತಾಶೆ, ಅರಿಶಿನ, ಗುಲಾಬಿ ಬಣ್ಣ ಮತ್ತು ತೆಂಗಿನಕಾಯಿ ಬಳಸಿ, ರಚನೆಯನ್ನು ಪೂಜಿಸಲಾಗುತ್ತದೆ.
– AI ಚಿತ್ರ
ಹೋಳಿ ಹಬ್ಬದಂದು ಬಿಳಿ ಬಟ್ಟೆಯನ್ನೇ ಧರಿಸುವುದೇಕೆ?
ಹೋಳಿಯಾಡುವಾಗ ಬಿಳಿ ಬಣ್ಣದ ಬಟ್ಟೆಯನ್ನೇ ಹೆಚ್ಚಾಗಿ ಧರಿಸುತ್ತಾರೆ. ಬೇರೆ ದಿನಗಳಲ್ಲಿ ಬಣ್ಣ ತಾಕಿದರೆ ಬಟ್ಟೆ ಹಾಳಾಗುತ್ತದೆ ಎಂದು ಭಾವಿಸಿದರೂ ಹೋಳಿಯಲ್ಲಿ ಬೇಕಂತಲೇ ಬಿಳಿ ಬಣ್ಣದ ಬಟ್ಟೆ ಧರಿಸಿ ಹೋಳಿಯಾಡಿ ಸಂಭ್ರವಿಸುತ್ತಾರೆ. ಆದರೆ ಹೋಳಿ ಸಂದರ್ಭ ಬಿಳಿ ಬಣ್ಣದ ಬಟ್ಟೆ ಧರಿಸುವುದರ ಹಿಂದಿದೆ ಹಲವು ಧಾರ್ಮಿಕ ಕಾರಣಗಳು.
ಬಿಳಿ ಬಟ್ಟೆಯ ಮೇಲೆ ಹಸಿರು, ಕೆಂಪು, ಗುಲಾಬಿ, ನೀಲಿ ಮತ್ತು ಹಳದಿ ಬಣ್ಣಗಳು ವಿಶೇಷವಾಗಿ ಕಾಣುತ್ತವೆ. ಅಷ್ಟೇ ಅಲ್ಲ, ಹೋಳಿ ಹಬ್ಬ ಬರುವುದು ಬೇಸಿಗೆ ಕಾಲದಲ್ಲಿ. ಈ ಸಮಯದಲ್ಲಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ದೇಹವನ್ನು ಶಾಖದಿಂದ ರಕ್ಷಿಸಲು ಮತ್ತು ಆರಾಮದಾಯಕವಾಗಿರಲು ಬಿಳಿ ಬಟ್ಟೆಗಳನ್ನು ಧರಿಸಲಾಗುತ್ತದೆ ಎಂಬುದು ಎಂದು ವಿಚಾರ.
ಹೋಳಿ ಪ್ರೀತಿ ಹಂಚುವ ಹಬ್ಬವಾಗಿದೆ. ಹೋಳಿಯ ದಿನ ಜನರು ಪರಸ್ಪರ ದ್ವೇಷವನ್ನು ಮರೆತು ಪ್ರೀತಿಯಿಂದ, ಸಂತೋಷ ಹಂಚುತ್ತಾ ಈ ಹಬ್ಬವನ್ನು ಒಟ್ಟಿಗೆ ಆಚರಿಸುತ್ತಾರೆ. ಅಲ್ಲದೆ ಬಿಳಿ ಬಣ್ಣವನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಜನರು ಹೋಳಿ ಆಡುವಾಗ ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ.
ಹೋಳಿಯು ದೇಶದಾದ್ಯಂತ ಹೆಚ್ಚು ಉತ್ಸಾಹ ಮತ್ತು ಸಡಗರದಿಂದ ಆಚರಿಸಲಾಗುವ ಅತ್ಯಂತ ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದು. ಇದು ಸಾಮಾನ್ಯ ಹಬ್ಬವಲ್ಲ, ರಂಗಿನಾಟದಲ್ಲಿ ಜಗತ್ತಿಗೇ ಮೋಡಿ ಮಾಡಿರುವ ಹಬ್ಬ.. ಬಣ್ಣದೋಕುಳಿಯ ಆಟವೆಂದರೆ, ಸಂಭ್ರಮದ ಉತ್ಸವ. ಸಂಪ್ರದಾಯ, ಆಧುನಿಕತೆ, ಆಕರ್ಷಣೆ, ಜನಪ್ರಿಯತೆಗಳಲ್ಲಿ ಜಗತ್ತಿನ ಯಾವ ಹಬ್ಬವೂ ಇದನ್ನು ಸರಿಗಟ್ಟಲು ಸಾಧ್ಯವಿಲ್ಲ…
ಅಂದು ನಮ್ಮ ಜನ ಅದರಲ್ಲೂ, ಉತ್ಸಾಹಿ ಯುವಕ-ಯುವತಿಯರು ಮುಂಜಾನೆಯೇ ಬಣ್ಣಗಳನ್ನು ಹಿಡಿದು ಬೀದಿಗಿಳಿಯುತ್ತಾರೆ. ತಾವು ಬಣ್ಣ ಹಚ್ಚಿಕೊಳ್ಳುವುದು ಮಾತ್ರವೇ ಅಲ್ಲ, ದಾರಿಯಲ್ಲಿ ಹೋಗುವವರಿಗೆಲ್ಲ ಬಣ್ಣದ ಬಲವಂತದ ಲೇಪ ಹಾಕಿಬಿಡುತ್ತಾರೆ. ಬೇಡ ಅಂದ್ರೂ ಬಿಡದೇ, ಕನಿಷ್ಠ ಒಂದು ತಿಲಕವನ್ನಾದ್ರೂ ಹಚ್ಚಿದ್ರೇನೆ ಅವರಿಗೆ ಸಮಾಧಾನ. ಇನ್ನೂ ಕೆಲವರಿಗೆ ಬಣ್ಣದೋಕುಳಿಯಲ್ಲಿ ಒದ್ದೆಯಾಗದಿದ್ದರೆ ನಿದ್ರೆನೇ ಬರಲ್ಲ. ಬಣ್ಣವನ್ನು ನೀರಿನಲ್ಲಿ ಕಲಸಿ ಸಿಕ್ಕವರ ಮುಖಕ್ಕೆ ಎರಚುವುದೆಂದರೆ ಎಲ್ಲಿಲ್ಲದ ಸಂಭ್ರಮ. ಇನ್ನೂ ಹೆಚ್ಚಿನ ಉತ್ಸಾಹಿಗಳು ಬಕೆಟ್ ನೀರಿನಲ್ಲಿ ಬಣ್ಣ ಕಲಸಿ ಮೈಮೇಲೆ ಎರಚುತ್ತಾರೆ. ಎಳೆಯರು ಮತ್ತು ಹೆಂಗಸರು ನೀರು ಎರಚಲು ಪಿಚಕಾರಿ ಬಳಸಿದರೆ, ಅದನ್ನು ಅಪಾಯ ಎಂದು ಭಾವಿಸುವವರು ಮಹಡಿಗಳ ಮೇಲಿನಿಂದ ಬಣ್ಣದ ನೀರು ತುಂಬಿದ ಬಲೂನುಗಳನ್ನು ಎಸೆಯುತ್ತಾರೆ. ಶಾಲೆ, ಕಾಲೇಜುಗಳಲ್ಲೂ ಈ ಸಂಭ್ರಮಕ್ಕೆ ಎಲ್ಲೆ ಇಲ್ಲ.
ಅದರಂತೆ ಹೋಳಿ ಅತಿರೇಕಗಳ ಹಬ್ಬ ಅಂದ್ರೂ ತಪ್ಪಾಗಲಾದರು. ಇದರ ಉತ್ಸಾಹ, ಆವೇಶ ಬಣ್ಣ ಹಚ್ಚುವುದಷ್ಟಕ್ಕೇ ತೀರುವುದಿಲ್ಲ. ಭಾಂಗ್ ಕುಡಿದು ಮತ್ತೇರಿ ಚೇಷ್ಠೆಯಾಡುವುದು, ಸಿಕ್ಕವರನ್ನು ಛೇಡಿಸುವುದು, ಬಣ್ಣದ ಕೆಸರಿನಲ್ಲಿ ಎಳೆದು ಮುಳುಗಿಸುವುದು, ಹೆಂಗಳೆಯರೊಡನೆ ಸರಸವಾಡುವುದು… ಉಂಟು. ಯಾದ್ರೂ ಚಕಾರ ಎತ್ತಿದ್ರೆ ಅದಕ್ಕೆ ಉತ್ತರ ಕೂಡ ರೆಡಿ ಇರುತ್ತೆ. ತಪ್ಪು ಭಾವಿಸಬೇಡ ಗೆಳೆಯ ಇದು ಹೋಳಿ ಹಬ್ಬ ಅಂತ ಮುಂದ್ಕೆ ಹೋಗ್ತಾ ಇರ್ತಾರೆ. ಆದ್ರೆ ಇದನ್ನೆ ನೆಪ ಮಾಡಿಕೊಳ್ಳುವ ಕೆಲವು ಕಿಡಿಗೇಡಿಗಳು… ಹೆಣ್ಣು ಮಕ್ಕಳ ಮೈಕೈ ಮುಟ್ಟೋದು.. ಹೆಂಗಸರು, ದಾರಿ ಹೋಕರೊದಡನೆ ಕಿರಿ ಕಿರಿ ಮಾಡೋದು ಮಾಡುತ್ತಿರುತ್ತಾರೆ.
People celebrate Holi festival of colours in Bagalakote on Monday. -KPN ### Holi in Bagalakote
ಬಣ್ಣದ ಪುಂಡರಿದ್ದಾರೆ ಎಚ್ಚರಿಕೆ
ಹೋಳಿಯ ದಿನ ರಂಗಿನಾಟದ ಸಂಭ್ರಮ ಹುಚ್ಚಾಟದ ಎಲ್ಲ ಎಲ್ಲೆಗಳನ್ನು ಮೀರುವುದು ನೋಡುತ್ತಲೇ ಇರಯತ್ತೇವೆ. ಬೀದಿಗಳಲ್ಲಿ ಹೋಳಿ ಗುಂಪುಗಳ ರಂಪಾಟ ಬಡಪಾಯಿ ದಾರಿಹೋಕರ ಮೇಲೂ ಎರಗುತ್ತದೆ. ಈ ಹುಚ್ಚಾಟದಲ್ಲಿ ಹೋಳಿ ಅಶ್ಲೀಲವಾಗುತ್ತದೆ, ಅಪಾಯಕಾರಿಯಾಗುತ್ತದೆ. ರಂಗಿನ ಜೊತೆಗೇ ಹುಚ್ಚಾಟದ ಎಲ್ಲೆಗಳೂ ಮೀರುತ್ತಾ ಹೋಗುತ್ತಿವೆ. ಹೋಳಿಯಾಟದ ಸಂಭ್ರಮದಲ್ಲಿ ಹತ್ತಿರದ ಗೆಳೆಯರೂ ಮಿತಿ, ಮರ್ಯಾದೆ ತಪ್ಪುತ್ತಾರೆ. ಪುಂಡರು ಮತ್ತು ರೌಡಿಗಳೂ ರಂಗಿನ ನೆವದಲ್ಲಿ ದಾರಿಹೋಕರ ಜೊತೆ ಹುಚ್ಚಾಟ ಆಡುತ್ತಾರೆ. ನಮ್ಮ ರಾಜಧಾನಿ ಬೆಂಗಳೂರಿನಲ್ಲೂ ಬಣ್ಣದ ಪುಂಡರ ಹಾವಳಿಗೇನು ಕಡಿಮೆಯಿಲ್ಲ.
People celebrate Holi Festival of colours in Davangere on Friday. -KPN ### Davangere: Holi celebration
ಕೆಲವೊಮ್ಮೆ ಎಲ್ಲಿಂದ ಹೊಡೆತ ಬರುತ್ತದೆ ಎಂದು ಹೇಳುವುದು ಅಸಾಧ್ಯ. ಹೋಳಿಯ ದಿನ ಬಣ್ಣದ ನೀರಿನ ಬಲೂನುಗಳನ್ನು ಮಾತ್ರವೇ ಅಲ್ಲ, ಮೊಟ್ಟೆ, ಕಸ, ಅಮೇಧ್ಯಗಳನ್ನು ಎಸೆಯುವವರೂ ಇದ್ದಾರೆ. ಇವುಗಳಿಂದ ಹೆಚ್ಚಿನ ಅಪಾಯ ಇಲ್ಲ. ಆದರೆ, ಕುತ್ತಿತ ಮೋಜಿಗಾಗಿ ಟಾರ್, ಗ್ರೀಸ್, ಕಲ್ಲು, ಕಲ್ಲೆಣ್ಣೆ ಎಸೆಯುವವರೂ ಇದ್ದಾರೆ.
ಹೋಳಿಯ ಬಣ್ಣಗಳು ಸುರಕ್ಷಿತವಲ್ಲ. ಮನೆಯಲ್ಲೇ ತಯಾರಿಸಿದ ಬಣ್ಣಗಳನ್ನು ಬಳಸುವುದು ಉತ್ತಮ. ಪ್ರಾಕೃತಿಕ ಬಣ್ಣಗಳನ್ನೇ ಖರೀದಿಸಿ. ಕೆಂಪು ಮತ್ತು ಗುಲಾಬಿ ಬಣ್ಣಗಳು ನೋಡಲು ಆಕರ್ಷಕ, ಬೇಗನೆ ತೊಳೆದು ಹೋಗುತ್ತವೆ. ಆದರೆ ನೇರಳೆ, ಹಸುರು, ಹಳದಿ, ಕಿತ್ತಳೆ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳಿವೆ. ಇವುಗಳಿಂದ ದೂರ ಇರಿ ಎನ್ನುವುದು ತಜ್ಞ ವೈದ್ಯರ ಸಲಹೆ.
ಕರ್ನಾಟಕದಲ್ಲಿ ಕಾಮನ ಹಬ್ಬ
ಕರ್ನಾಟಕದಲ್ಲಿ ಹೋಳಿಗೆ ʻಕಾಮನ ಹಬ್ಬ’ ಎಂದು ಹೆಸರು. ಕಾಮನೆಗಳನ್ನು ಬೆಂಕಿಯಲ್ಲಿ ಸುಟ್ಟು ಭಗವಂತನ ಧ್ಯಾನ ಮಾಡಬೇಕಾದ ದಿನ ಇದು. ಆದರೆ, ಸಂಪ್ರದಾಯಕ್ಕಿಂತ ಹೆಚ್ಚಾಗಿ ಮನೋರಂಜನೆಯ ಹಬ್ಬ ಇದಾಗಿದೆ. ಹೆಚ್ಚಾಗಿ ಗಂಡುಮಕ್ಕಳು ಮನೆಮನೆಗೆ ಹೋಗಿ ಹಣ, ಕಟ್ಟಿಗೆ ಮತ್ತು ಬೆರಣಿ ಸಂಗ್ರಹಿಸುತ್ತಾರೆ. ಉರುವಲುಗಳನ್ನು ಒಂದೆಡೆ ರಾಶಿ ಹಾಕಿ ಉರಿಸುತ್ತಾರೆ. ನೆರೆಮನೆಗಳಿಂದ ಇದನ್ನು ಕದ್ದುಕೊಂಡು ಬರುವುದೇ ಒಂದು ಗಮ್ಮತ್ತು. ಇದನ್ನೆಲ್ಲ ರಾಶಿ ಹಾಕಿ ರಾತ್ರಿ ದೊಡ್ಡದಾಗಿ ಬೆಂಕಿ ಉರಿಸುತ್ತಾರೆ. ʻಕಾಮನ ಕಟ್ಟಿಗೆ, ಭೀಮನ ಬೆರಣಿʼ ಎಂದು ಹಾಡುತ್ತಾರೆ. ಮನೆ ಮನೆಗಳಲ್ಲಿ ಹೆಂಗಸರು ಕಾಮದೇವನಿಗಾಗಿ ಹೋಳಿಗೆ ತಯಾರಿಸುತ್ತಾರೆ. ಇದನ್ನು ಬೆಂಕಿ ಕುಂಡದಲ್ಲಿ ಕಾಮದೇವನಿಗೆ ಅರ್ಪಿಸುತ್ತಾರೆ.
ಒಟ್ಟಿನಲ್ಲಿ ಪ್ರತಿ ವರ್ಷ ಬರುವ ಈ ಹೋಳಿ ಎಲ್ಲೆ ಮೀರದಿರಲಿ ಎನ್ನುವುದೇ ಎಲ್ಲರ ಆಶಯ.
ಪಾಟ್ನಾ: ಹೋಳಿ (Holi) ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು ಮನೆಯೊಳಗೆ ಇರುವಂತೆ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ತಿಳಿಸಿದ್ದಾರೆ. ಈ ವರ್ಷದ ಹೋಳಿ ಹಬ್ಬವು ಮಾರ್ಚ್ 14 ರಂದು ಬರುತ್ತದೆ. ಇದು ರಂಜಾನ್ ತಿಂಗಳ ಶುಕ್ರವಾರದ ಪ್ರಾರ್ಥನೆ ದಿನವೇ ನಡೆಯಲಿದೆ.
ಮಧುಬನಿ ಜಿಲ್ಲೆಯ ಬಿಸ್ಫಿಯ ಶಾಸಕರಾಗಿರುವ ಹರಿಭೂಷಣ್ ಠಾಕೂರ್ ಮಾತನಾಡಿ, ಈ ಬಾರಿ ಹೋಳಿ ಶುಕ್ರವಾರ ದಿನ ಬರುತ್ತದೆ. ಹೋಳಿ ಸಮಯದಲ್ಲಿ ಮನೆಯೊಳಗೆ ಇರಿ. ಅದನ್ನು ಯಾವುದೇ ಅಡೆತಡೆಯಿಲ್ಲದೆ ಆಚರಿಸೋಣ ಎಂದು ನಾನು ಅವರಿಗೆ ಮನವಿ ಮಾಡುತ್ತೇನೆ. 52 ಶುಕ್ರವಾರಗಳಿವೆ. ಅವರು (ಮುಸ್ಲಿಮರು) ಹೋಳಿ ದಿನ ಮಾತ್ರ ಹೊರಗೆ ಬರುವುದನ್ನು ತಪ್ಪಿಸಬಹುದು ಎಂದು ತಿಳಿಸಿದ್ದಾರೆ.
ಹೋಳಿಯಂದು ಹೊರಗೆ ಹೋದಾಗ ಮುಸ್ಲಿಮರ ಮೇಲೆ ಯಾರಾದರು ಬಣ್ಣ ಹಚ್ಚಿದರೆ ನೊಂದುಕೊಳ್ಳಬೇಡಿ ಎಂದು ಶಾಸಕ ತಿಳಿಸಿದ್ದಾರೆ.
ಮುಸ್ಲಿಮರು ಅಬಿರ್ ಮತ್ತು ಗುಲಾಲ್ ಮಾರಾಟ ಮಾಡುವ ಮೂಲಕ ಹಣ ಗಳಿಸುತ್ತಾರೆ. ಆದರೆ ಹೋಳಿಯಂದು ತಮ್ಮ ಮೇಲೆ ಬಣ್ಣ ಎರಚುವುದರಿಂದ ದೂರವಿರಲು ಬಯಸುತ್ತಾರೆ. ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪರಸ್ಪರರ ಧರ್ಮ ಮತ್ತು ಧಾರ್ಮಿಕ ಆಚರಣೆಗಳನ್ನು ಗೌರವಿಸುವುದು ಅತ್ಯಗತ್ಯ ಎಂದು ಹೇಳಿದ್ದಾರೆ.
ಶಾಸಕರ ಹೇಳಿಕೆಯನ್ನು ಟೀಕಿಸಿದ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್, ಬಿಜೆಪಿ ವಿಭಜಕ ರಾಜಕೀಯ ಮಾಡುತ್ತಿದೆ. ಬಿಜೆಪಿ ಕೋಮು ಉದ್ವಿಗ್ನತೆಗೆ ಕಾರಣವಾಗುವ ಹೇಳಿಕೆಗಳನ್ನು ನೀಡಲು ಅವಕಾಶಗಳನ್ನು ಹುಡುಕುತ್ತದೆ ಎಂದು ಆರೋಪಿಸಿದ್ದಾರೆ.
ಹೋಳಿ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು ಮನೆಯೊಳಗೆ ಇರುವಂತೆ ಸಂಭಾಲ್ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಸಲಹೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೆಂಬಲಿಸಿದ್ದರು. ಅದರ ಬೆನ್ನಲ್ಲೇ, ಬಿಹಾರ ಶಾಸಕರೂ ಅದೇ ರೀತಿ ಹೇಳಿಕೆ ನೀಡಿದ್ದಾರೆ.