Tag: Holenarasipur

  • ಹೊಳೆನರಸೀಪುರ | ಜಾತಿಗಣತಿಗೆ ತೆರಳುವಾಗ ನಾಯಿಗೆ ಸ್ಕೂಟರ್ ಡಿಕ್ಕಿ – ಶಿಕ್ಷಕಿಗೆ ಗಂಭೀರ ಗಾಯ

    ಹೊಳೆನರಸೀಪುರ | ಜಾತಿಗಣತಿಗೆ ತೆರಳುವಾಗ ನಾಯಿಗೆ ಸ್ಕೂಟರ್ ಡಿಕ್ಕಿ – ಶಿಕ್ಷಕಿಗೆ ಗಂಭೀರ ಗಾಯ

    ಹಾಸನ: ಜಾತಿಗಣತಿಗೆ (Caste Census) ತೆರಳುವಾಗ ನಾಯಿಗೆ ಶಿಕ್ಷಕಿಯ ಸ್ಕೂಟರ್ ಡಿಕ್ಕಿಯಾಗಿ (Accident) ಗಂಭೀರವಾಗಿ ಗಾಯಗೊಂಡ ಘಟನೆ ಹೊಳೆನರಸೀಪುರದ (Holenarasipur) ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ವಡ್ಡರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರಾಧಾ ಗಾಯಗೊಂಡವರು. ಬೆಳಗ್ಗೆ 10 ಗಂಟೆ ಸಮಯದಲ್ಲಿ ಅವರು ಸಮೀಕ್ಷೆಗೆ ತೆರಳುತ್ತಿದ್ದರು. ಈ ವೇಳೆ ಅವರ ಸ್ಕೂಟರ್‍ಗೆ ನಾಯಿ ಅಡ್ಡ ಬಂದಿದ್ದು, ಡಿಕ್ಕಿಯಾಗಿ ಬಿದ್ದಿದ್ದಾರೆ. ರಸ್ತೆಗೆ ಬಿದ್ದಿದ್ದರಿಂದ ಅವರಿಗೆ ಗಂಭಿರ ಗಾಯಗಳಾಗಿವೆ. ಇದನ್ನೂ ಓದಿ: ಜಾತಿಗಣತಿಗೆ ತರಳಿದ್ದ ಶಿಕ್ಷಕಿ ಮೇಲೆ ಬೀದಿನಾಯಿಗಳ ದಾಳಿ – ರಕ್ಷಣೆಗೆ ಬಂದ 7 ಮಂದಿಗೂ ಕಚ್ಚಿದ ಶ್ವಾನಗಳು

    ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದ ಶಿಕ್ಷಕಿಗೆ ಸ್ಥಳೀಯರು ಉಪಚಾರ ಮಾಡಿದ್ದಾರೆ. ಬಳಿಕ ಅವರನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಜಿಲ್ಲೆಯಲ್ಲಿ ಜಾತಿಗಣತಿಗೆ ತೆರಳುವವರಿಗೆ ನಾಯಿಗಳ ಉಪಟಳ ಹೆಚ್ಚಾಗಿದೆ. ಬೇಲೂರಿನ ಜೈಭೀಮ್ ನಗರದಲ್ಲಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯೊಬ್ಬರಿಗೆ ಬೀದಿನಾಯಿಗಳು ಕಚ್ಚಿ ಗಂಭಿರವಾಗಿ ಗಾಯಗೊಳಿಸಿದ್ದವು. ಈ ವೇಳೆ ಕಾಪಾಡಲು ಬಂದಿದ್ದ ಶಿಕ್ಷಕಿಯ ಪತಿ ಸೇರಿ ಇನ್ನಿತರ 7 ಜನರನ್ನು ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರು | ಸಿಲಿಂಡರ್ ಸ್ಫೋಟ – ಮೂರು ಗಂಟೆಗಳ ಕಾಲ ಹೊತ್ತಿ ಉರಿದ ಗೋಡೌನ್‌

  • ಹೊಳೆನರಸೀಪುರ | ಪೊಲೀಸರ ಸೂಚನೆ ಮೇರೆಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳನ್ನೇ ಕದ್ದೊಯ್ದ ಕಳ್ಳ!

    ಹೊಳೆನರಸೀಪುರ | ಪೊಲೀಸರ ಸೂಚನೆ ಮೇರೆಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳನ್ನೇ ಕದ್ದೊಯ್ದ ಕಳ್ಳ!

    ಹಾಸನ: ಸುರಕ್ಷತೆಗಾಗಿ ಅಳವಡಿಸಲಾಗಿದ್ದ 3 ಸಿಸಿ ಕ್ಯಾಮೆರಾಗಳನ್ನು ಕಳ್ಳನೊಬ್ಬ ಕದ್ದೊಯ್ದ ಪ್ರಕರಣ ಹೊಳೆನರಸೀಪುರದ (Holenarasipur) ಪೇಟೆ ಬೀದಿಯಲ್ಲಿ ನಡೆದಿದೆ.

    ಪೊಲೀಸರ ಸೂಚನೆ ಮೇರೆಗೆ ಪೇಟೆ ಬೀದಿಯಲ್ಲಿರುವ ಅಂಗಡಿಗಳಿಗೆ ಸಿಸಿಟಿವಿಗಳನ್ನು ಮಾಲೀಕರು ಅಳವಡಿಸಿದ್ದರು. ಶುಕ್ರವಾರ ಮುಂಜಾನೆ 3:30ರ ಸುಮಾರಿಗೆ ಬಂದ ಕಳ್ಳ, ಸಿಸಿ ಕ್ಯಾಮೆರಾಗಳನ್ನು ಕದ್ದೊಯ್ದಿದ್ದಾನೆ. ಕಳ್ಳ ಸಿಸಿ ಕ್ಯಾಮೆರಾಗಳನ್ನು ಕೀಳುವ ದೃಶ್ಯ ಮತ್ತೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕಲಬುರಗಿ | ತಂದೆ ಮೇಲಿನ ಸೇಡಿಗಾಗಿ ಮಗಳನ್ನ ಕೊಂದ ಪಾಪಿ

    ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕಳ್ಳತನ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಕೋ ಲಿವಿಂಗ್ ಪಿಜಿಯಲ್ಲಿ ಸೆಕ್ಸ್‌ಗೆ ಒಪ್ಪದ ಯುವತಿಗೆ ಚಾಕು ಇರಿದ ಟೆಕ್ಕಿ

  • ಹಾಸನ | ಹೊಳೆನರಸೀಪುರದಲ್ಲಿ ನಾಲ್ವರು ಖತರ್ನಾಕ್ ಕಳ್ಳಿಯರ ಬಂಧನ

    ಹಾಸನ | ಹೊಳೆನರಸೀಪುರದಲ್ಲಿ ನಾಲ್ವರು ಖತರ್ನಾಕ್ ಕಳ್ಳಿಯರ ಬಂಧನ

    – ಚಿನ್ನ ಕದ್ದ ಚೋರಿಯರು ಸಿಕ್ಕಿಬಿದ್ದದ್ದು ಹೇಗೆ?
    – 6.38 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೀಜ್‌

    ಹಾಸನ: ಜಿಲ್ಲೆಯ ಹೊಳೆನರಸೀಪುರ ನಗರ ಠಾಣೆ ಪೊಲೀಸರು (Holenarasipur City Police) ಕಾರ್ಯಾಚರಣೆ ನಡೆಸಿ ನಾಲ್ವರು ಖತರ್ನಾಕ್ ಕಳ್ಳಿಯರನ್ನು ಬಂಧಿಸಿ 6.38 ಲಕ್ಷ ರೂ. ಮೌಲ್ಯದ ಚಿನ್ನಾಭರಣ (Jewellery) ವಶಪಡಿಸಿಕೊಂಡಿದ್ದಾರೆ.

    ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ, ಕುಪ್ಪಂ ಗ್ರಾಮದ ಶಶಿ (35), ಮಾಧವಿ (40), ಅಕಿಲ (30) ಹಾಗೂ ವಿದ್ಯಾ (29) ಬಂಧಿತ ಕಳ್ಳಿಯರು. ಇದನ್ನೂ ಓದಿ: ಹನಿಮೂನ್‌ಗೆ ತೆರಳಿದ್ದ ದಂಪತಿ ನಾಪತ್ತೆ ಕೇಸ್‌ – ಮೂವರು ಪುರುಷರೊಟ್ಟಿಗೆ ದಂಪತಿ ನೋಡಿದ್ದೆ: ಸ್ಫೋಟಕ ಸಂಗತಿ ಬಿಚ್ಚಿಟ್ಟ ಗೈಡ್‌

    ನಾಲ್ವರು ಒಂದೇ ಗ್ರಾಮದವರಾಗಿದ್ದು ಕಳ್ಳತನವನ್ನೇ ಫ್ಯಾಷನ್‌ ಮಾಡಿಕೊಂಡಿದ್ದರು. ಬಂಧಿತ ಶಶಿ ಹಾಗೂ ವಿದ್ಯಾ ವಿರುದ್ಧ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ (Bengaluru Police Station) ಕಳ್ಳತನ ಪ್ರಕರಣಗಳು ದಾಖಲಾಗಿವೆ. ಮಾಧವಿ ಹಾಗೂ ಅಕಿಲ ಮೊದಲ ಪ್ರಕರಣದಲ್ಲಿ ಬಂಧನವಾಗಿದ್ದಾರೆ. ಶಶಿ ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದು ಉಳಿದ ಮೂವರು ಕ್ರಷರ್‌ಗಳಲ್ಲಿ ಕಲ್ಲು ಒಡೆಯುವ ಕೆಲಸ ಮಾಡಿಕೊಂಡಿದ್ದಾರೆ.

    ಕೆಎಸ್‌‍ಆರ್‌ಟಿಸಿ ಬಸ್‌‍ಗಳಲ್ಲಿ ಪ್ರಯಾಣಿಸುತ್ತಿದ್ದ ಅಮಾಯಕ ಮಹಿಳೆಯರೇ ಇವರೇ ಟಾರ್ಗೆಟ್‌ ಆಗಿದ್ದು ನೂಕುನುಗ್ಗಲಿನಲ್ಲಿ ಮಹಿಳೆಯರು ಕೆಎಸ್‌‍ಆರ್‌ಟಿಸಿ ಬಸ್‌‍ ಹತ್ತುವಾಗ ಅವರ ಮೈ ಮೇಲಿನ ಚಿನ್ನದ ಒಡವೆ, ವ್ಯಾನಿಟಿ ಬ್ಯಾಗ್‌ಗಳಿದ್ದ ಚಿನ್ನಾಭರಣಗಳನ್ನ ದೋಚುತ್ತಿದ್ದರು. ತಾವು ಸಹ ಬಸ್‌‍ ಹತ್ತುವರಂತೆ ನಟನೆ ಮಾಡುತ್ತಿದ್ದು ಯಾರಿಗೂ ಸಂಶಯ ಬರುತ್ತಿರಲಿಲ್ಲ.‌ ಇದನ್ನೂ ಓದಿ: ಎಲ್ರೂ ಬಂದು ಹೇಗಾಯ್ತು ಹುಷಾರಾಗಿ ಅಂತಾರೆ, ಪರಿಹಾರ ಮಾತ್ರ ಇಲ್ಲ: ಆರ್‌ಸಿಬಿ ಫ್ಯಾನ್ಸ್ ನೋವಿನ ಮಾತು

    ಸದ್ಯ ಬಂಧಿತರಿಂದ 35 ಗ್ರಾಂ ತೂಕದ ಚಿನ್ನದ ಸರ, 22 ಗ್ರಾಂ ತೂಕದ ನೆಕ್ಲೆಸ್‌, 5 ಗ್ರಾಂ ತೂಕದ ಬೆಳ್ಳಿ ಗಣಪತಿ ಡಾಲರ್‌ ಹಾಗೂ 29 ಗ್ರಾಂ ತೂಕದ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮಹಮದ್ ಸುಜೇತಾ ಮಾಹಿತಿ ನೀಡಿದರು.

  • ಬಾತ್‌ರೂಂನಲ್ಲಿ ಹೃದಯಾಘಾತ – ಕುಸಿದು ಬಿದ್ದು ಯುವತಿ ಸಾವು

    ಬಾತ್‌ರೂಂನಲ್ಲಿ ಹೃದಯಾಘಾತ – ಕುಸಿದು ಬಿದ್ದು ಯುವತಿ ಸಾವು

    ಹಾಸನ : ಹೃದಯಾಘಾತದಿಂದ ಯುವತಿ ಸಾವನ್ನಪ್ಪಿದ ಘಟನೆ ಹೊಳೆನರಸೀಪುರ (Holenarasipur) ಪಟ್ಟಣದಲ್ಲಿ ನಡೆದಿದೆ.

    ಸಂಧ್ಯಾ (19) ಮೃತ ಯುವತಿ. ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ನಿವಾಸಿಗಳಾದ ವೆಂಕಟೇಶ್-ಪೂರ್ಣಿಮ ದಂಪತಿ ಪುತ್ರಿ ಸಂಧ್ಯಾ ಅಂತಿಮ ವರ್ಷದ ಡಿಪ್ಲೊಮಾ ಮುಗಿಸಿದ್ದಳು.

    ಬಾತ್‌ರೂಂಗೆ ತೆರಳಿದ್ದ ವೇಳೆ ಸಂಧ್ಯಾ ಕುಸಿದು ಬಿದ್ದಿದ್ದಾಳೆ. ಕೂಡಲೇ ಬಾತ್‌ರೂಂ ಬಾಗಿಲು ಒಡೆದು ಪೋಷಕರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು. ಆದರೆ ಅಷ್ಟು ಹೊತ್ತಿಗೆ ಸಂಧ್ಯಾಳ ಪ್ರಾಣ ಪಕ್ಷಿ ಹೋಗಿತ್ತು.  ಇದನ್ನೂ ಓದಿ: Anekal | ಸೂಟ್‌ಕೇಸ್‌ನಲ್ಲಿ ಅಪರಿಚಿತ ಬಾಲಕಿ ಶವ ಪತ್ತೆ

    ಸಂಧ್ಯಾಕೆಲ ವರ್ಷಗಳಿಂದ ಬಿಪಿ-ಶುಗರ್‌ನಿಂದ ಬಳಲುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

  • ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತಾ? – ಎಂ.ಸಿ ಸುಧಾಕರ್ ವಿರುದ್ಧ ರೇವಣ್ಣ ಗರಂ

    ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತಾ? – ಎಂ.ಸಿ ಸುಧಾಕರ್ ವಿರುದ್ಧ ರೇವಣ್ಣ ಗರಂ

    ಹಾಸನ: ಬಡವರು ಕೂಲಿ ಕೆಲಸ ಮಾಡಿ ಮಕ್ಕಳನ್ನು ಓದಿಸುತ್ತಿದ್ದಾರೆ. 470 ಕಾಲೇಜುಗಳ ಶುಲ್ಕದ ದುಡ್ಡನ್ನು ಬೆಂಗಳೂರಿಗೆ ತರಿಸಿಕೊಂಡು ಗಿರಾಕಿಗಳು ಟೆಂಡರ್ ಕರಿತಾರೆ. ಇದೆಲ್ಲಾ ಮಾಡೋದ್ರಿಂದ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತಾ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D Revanna) ಕಿಡಿಕಾರಿದ್ದಾರೆ.

    ಹೊಳೆನರಸೀಪುರ (Holenarasipur) ಪಟ್ಟಣದ ಮಹಿಳಾ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ಈ ವೇಳೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಶುಲ್ಕದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಎಷ್ಟು ದಿನ ನೀವು ಬಡವರ ಮಕ್ಕಳನ್ನು ಗೋಳಾಡಿಸುತ್ತೀರಿ? ಏನ್ರೀ ಆಗಿರೋದು ನಿಮಗೆ, ಕಾಲೇಜಿನ ಮಕ್ಕಳ ಶುಲ್ಕದ ದುಡ್ಡನ್ನು ಹೊಡೆಯಬೇಕಾ? ನಿಮ್ಮ ಕುಟುಂಬವೂ ನಾಶ ಆಗುತ್ತೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ವಿದ್ಯಾರ್ಥಿಗಳಿಗೆ (Students) ಗುಣಮಟ್ಟದ ಶಿಕ್ಷಣ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಅದರೆ, ಮಕ್ಕಳು ಕಟ್ಟುವ ಶುಲ್ಕದ ದುಡ್ಡನ್ನು ಈ ಗಿರಾಕಿಗಳು ಬಿಡುತ್ತಿಲ್ಲ. ಉನ್ನತ ಶಿಕ್ಷಣ ಸಚಿವರಿಗೆ ನಾನು ಹೇಳೋದು ಇಷ್ಟೇ, ಬಡವರ ಬಗ್ಗೆ ಕರುಣೆ ಇಡಿ ಎಂದು ವೇದಿಕೆ ಮೇಲೆಯೇ ಅಸಮಾಧಾನ ಹೊರಹಾಕಿದ್ದಾರೆ.

  • ಹೊಳೆನರಸೀಪುರದಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ

    ಹೊಳೆನರಸೀಪುರದಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ

    ಹಾಸನ: ಕಳೆದ ಮೂರ್ನಾಲ್ಕು ತಿಂಗಳಿಂದ ಹೊಳೆನರಸೀಪುರದ (Holenarasipur) ಕೆಲವು ಗ್ರಾಮಗಳಲ್ಲಿ ಆತಂಕ ಮೂಡಿಸಿದ್ದ ಚಿರತೆ (Leopard) ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.

    ಎರಡುವರೆ ವರ್ಷದ ಹೆಣ್ಣು ಚಿರತೆ ಇದಾಗಿದ್ದು, ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಗ್ರಾಮಕ್ಕೆ ನುಗ್ಗಿ ಕುರಿ, ಸಾಕು ನಾಯಿಗಳನ್ನು ಹೊತ್ತೊಯ್ದು ತಿಂದು ಹಾಕಿತ್ತು. ಇದರಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು.

    ಇತ್ತೀಚೆಗೆ ಹಗಲು ವೇಳೆ ರೈತರ ಜಮೀನಿನಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಇದಾದ ಬಳಿಕ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು. ಇದಾದ ಬಳಿಕ ಅರಣ್ಯ ಇಲಾಖೆ ಬೋನ್ ಅಳವಡಿಸಿತ್ತು.

    ಬೋನಿನೊಳಗೆ ನಾಯಿ ಕಟ್ಟಲಾಗಿತ್ತು. ನಾಯಿಯನ್ನು ತಿನ್ನಲು ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

  • ಶಂಕಿತ ಡೆಂಗ್ಯೂಗೆ ಹಾಸನದ ಬಾಲಕಿ ಬಲಿ – ಜಿಲ್ಲೆಯಲ್ಲಿ ಮೃತರ ಸಂಖ್ಯೆ 4ಕ್ಕೆ ಏರಿಕೆ

    ಶಂಕಿತ ಡೆಂಗ್ಯೂಗೆ ಹಾಸನದ ಬಾಲಕಿ ಬಲಿ – ಜಿಲ್ಲೆಯಲ್ಲಿ ಮೃತರ ಸಂಖ್ಯೆ 4ಕ್ಕೆ ಏರಿಕೆ

    ಹಾಸನ: ಜಿಲ್ಲೆಯಲ್ಲಿ (Hassan) ಶಂಕಿತ ಡೆಂಗ್ಯೂಗೆ (Dengue) ಮತ್ತೋರ್ವ ಬಾಲಕಿ ಮೃತಪಟ್ಟಿದ್ದಾಳೆ. ಈ ಮೂಲಕ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂವಿನಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ.

    ಮೃತ ಬಾಲಕಿಯನ್ನು ಹೊಳೆನರಸೀಪುರ (Holenarasipur) ತಾಲ್ಲೂಕಿನ, ದೊಡ್ಡಳ್ಳಿ ಗ್ರಾಮದ ಸಮೃದ್ಧಿ (8) ಎಂದು ಗುರುತಿಸಲಾಗಿದೆ. ಬಾಲಕಿ ಗ್ರಾಮದ ರಮೇಶ್-ಅಶ್ವಿನಿ ದಂಪತಿಯ ಪುತ್ರಿಯಾಗಿದ್ದು, ಕಳೆದ 4 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಮೂರು ದಿನದ ಹಿಂದೆ ಬಾಲಕಿಯನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಮೈಸೂರಿನ ಅಪೋಲೊ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಇದೀಗ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ರೈತರಿಗೆ ಕೋಚಿಮುಲ್ ಬಿಗ್ ಶಾಕ್ – ಹಾಲು ಉತ್ಪಾದಕರಿಗೆ 2 ರೂ. ಕಡಿತ

    ಕಳೆದ ಒಂದು ವಾರದಲ್ಲಿ ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂಗೆ ನಾಲ್ವರು ಬಾಲಕಿಯರು ಬಲಿಯಾಗಿದ್ದಾರೆ. ಹೊಳೆನರಸೀಪುರ ತಾಲ್ಲೂಕಿನಲ್ಲೇ ಮೂವರು ಬಾಲಕಿಯರು ಬಲಿಯಾಗಿದ್ದಾರೆ. ಒಟ್ಟಾರೆ ಡೆಂಗ್ಯೂ ಮಹಾಮಾರಿಯಿಂದ ಹಾಸನ ಜಿಲ್ಲೆಯ ಜನತೆ ನಲಗುತ್ತಿದ್ದು, ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ – ಎಲ್ಲೆಲ್ಲಿ ಏನಾಗಿದೆ?

  • ಹೊಳೆನರಸೀಪುರದ ಪ್ರಜ್ವಲ್ ನಿವಾಸದಲ್ಲಿ ಎಸ್‍ಐಟಿಯಿಂದ ಸ್ಥಳ ಮಹಜರು

    ಹೊಳೆನರಸೀಪುರದ ಪ್ರಜ್ವಲ್ ನಿವಾಸದಲ್ಲಿ ಎಸ್‍ಐಟಿಯಿಂದ ಸ್ಥಳ ಮಹಜರು

    ಹಾಸನ: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನಕ್ಕೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಎಸ್‍ಐಟಿ (SIT) ಅಧಿಕಾರಿಗಳು ಅವರ ಹೊಳೆನರಸೀಪುರದ (Holenarasipur) ಚೆನ್ನಾಂಬಿಕಾ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಈ ಮೂಲಕ 43 ದಿನಗಳ ಬಳಿಕ ಹೊಳೆನರಸೀಪುರಕ್ಕೆ ಪ್ರಜ್ವಲ್ ಆಗಮನವಾಗಿದೆ.

    ಡಿವೈಎಸ್‍ಪಿ ಸತ್ಯನಾರಾಯಣ ನೇತೃತ್ವದಲ್ಲಿ ಕ್ಯೂಆರ್‌ಟಿ ವಾಹನದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಮಾಧ್ಯಮಗಳ ಕ್ಯಾಮೆರಾಗಳಿಗೆ ಕಾಣದಂತೆ ಅವರ ನಿವಾಸಕ್ಕೆ ಕರೆದೊಯ್ಯಲಾಯಿತು. ಎಸ್‍ಐಟಿ ಅಧಿಕಾರಿಗಳೊಂದಿಗೆ ಎಫ್‍ಎಸ್‍ಎಲ್ ಅಧಿಕಾರಿಗಳು ಸಹ ಮಾಹಿತಿ ಕಲೆಹಾಕುತ್ತಿದ್ದಾರೆ.

    ಚೆನ್ನಾಂಬಿಕಾ ನಿವಾಸದ ಎದುರು ಎಎಸ್‍ಪಿ ವೆಂಕಟೇಶ್ ನಾಯ್ಡು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ಬಂಧನಕ್ಕೊಳಗಾಗಿರುವ ಆರೋಪಿ ಪ್ರಜ್ವಲ್ ಹಲವು ಮಹಿಳೆಯ ಜೊತೆ ಇದ್ದಾರೆ ಎನ್ನಲಾದ ವೀಡಿಯೋ ವೈರಲ್ ಆಗಿತ್ತು. ವೀಡಿಯೋಗಳು ವೈರಲ್ ಆಗುತ್ತಿದ್ದಂತೆ ಅವರು ಜರ್ಮನಿಗೆ ತೆರಳಿ ತಲೆಮರೆಸಿಕೊಂಡಿದ್ದರು. ಸುಮಾರು 34 ದಿನಗಳ ಕಾಲ ಯಾರ ಸಂಪರ್ಕಕ್ಕೂ ಸಿಗದೇ ಜರ್ಮನಿಯಲ್ಲಿದ್ದರು. ಬಳಿಕ ಭಾರತಕ್ಕೆ ಮರಳುತ್ತಿದ್ದಂತೆ ಎಸ್‍ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದರು.

  • ಹೆಚ್.ಡಿ.ರೇವಣ್ಣ ನಿವಾಸಕ್ಕೆ ಎಸ್‍ಐಟಿ ತಂಡ – ಸಂತ್ರಸ್ತೆ ಸಮ್ಮುಖದಲ್ಲಿ ಸ್ಥಳ ಮಹಜರು

    ಹೆಚ್.ಡಿ.ರೇವಣ್ಣ ನಿವಾಸಕ್ಕೆ ಎಸ್‍ಐಟಿ ತಂಡ – ಸಂತ್ರಸ್ತೆ ಸಮ್ಮುಖದಲ್ಲಿ ಸ್ಥಳ ಮಹಜರು

    ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣ (H.DRevanna) ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ಆರಂಭಿಸಿರುವ ಎಸ್‍ಐಟಿ (SIT) ಅಧಿಕಾರಿಗಳು, ಹೊಳೆನರಸೀಪುರದ  (Holenarasipur) ಅವರ ನಿವಾಸದಲ್ಲಿ ಸಂತ್ರಸ್ತೆಯ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.

    ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಸಂತ್ರಸ್ತ ಮಹಿಳೆಯ ಅಪಹರಣ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆ ರೇವಣ್ಣ ವಿರುದ್ಧ ಆರೋಪಿಸಿರುವ ಮಹಿಳೆಯ ಸಮ್ಮುಖದಲ್ಲಿ, ಅಡುಗೆ ಮನೆ, ಬೆಡ್ ರೂಂ ಹಾಗೂ ಸ್ಟೋರ್‌ ರೂಮ್‌ನಲ್ಲಿ ಮಹಜರು ನಡೆಸಿದ್ದಾರೆ. ಮನೆಯಲ್ಲಿ ಭವಾನಿ ರೇವಣ್ಣ ಇಲ್ಲದ ವೇಳೆ ಈ ಮೂರು ಕಡೆ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.

    ಡಿವೈಎಸ್‍ಪಿ ಸತ್ಯ ನಾರಾಯಣ್ ಸಿಂಗ್, ಸುಮರಾಣಿ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಆಗಮಿಸಿರುವ ಎಸ್‍ಐಟಿ ತಂಡ ಪರಿಶೀಲನೆ ನಡೆಸುತ್ತಿದೆ. ಮನೆಯಲ್ಲಿ ಹೆಚ್.ಡಿ ರೇವಣ್ಣ ಹಾಗೂ ಪತ್ನಿ ಭವಾನಿ ರೇವಣ್ಣ ಇದ್ದು, ಮನೆಯ ಬಳಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ಮನೆ ದೇವರು ಈಶ್ವರನ ಪ್ರಸಾದ ತಂದ ಅರ್ಚಕ

    ಸ್ಥಳ ಮಹಜರು ವೇಳೆ ಹೊಳೆನರಸೀಪುರ ನಗರ ಪೊಲೀಸ್ ಠಾಣೆ ಪೊಲೀಸರು, ಇನ್ಸ್‌ಪೆಕ್ಟರ್‌ ಸುರೇಶ್‍ಕುಮಾರ್ ಹಾಗೂ ಸಬ್‍ಇನ್ಸ್‍ಪೆಕ್ಟರ್ ಅಜಯ್‍ಕುಮಾರ್ ಎಸ್‍ಐಟಿ ತಂಡಕ್ಕೆ ಸಹಕಾರ ನೀಡಿದ್ದಾರೆ. ಈ ವೇಳೆ ಸ್ಥಳೀಯ ಪೊಲೀಸರು ಮನೆಯಲ್ಲಿದ್ದ ಸಿಪಿಯು, ಮಾನೀಟರ್, ಪ್ರಿಂಟರ್‌ನ್ನು ವಶಕ್ಕೆ ಪಡೆದಿದ್ದಾರೆ.

    ಏನಿದು ಪ್ರಕರಣ?
    ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳ ಪೆನ್‍ಡ್ರೈವ್ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ವೀಡಿಯೋಗಳು ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆಯರು ಮಹಿಳಾ ಆಯೋಗದ ಮೊರೆ ಹೋಗಿದ್ದು, ಸರ್ಕಾರ ಪ್ರಕರಣದ ತನಿಖೆಗೆ ಎಸ್‍ಐಟಿ ರಚನೆ ಮಾಡಿತ್ತು. ಇದಾದ ಬೆನ್ನಲ್ಲೇ ಮಾಜಿ ಸಚಿವ ರೇವಣ್ಣ ವಿರುದ್ಧ ಸಹ ಲೈಂಗಿಕ ದೌರ್ಜನ್ಯ ಹಾಗೂ ಸಂತ್ರಸ್ತೆಯ ಅಪಹರಣದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಎಸ್‍ಐಟಿ ತನಿಖೆ ನಡೆಸುತ್ತಿದೆ. ಇನ್ನೂ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದು, ಅವರಿಗೆ ಲುಕ್‍ಔಟ್ ನೋಟಿಸ್ ಜಾರಿಗೊಳಿಸಲಾಗಿದೆ. ಅಲ್ಲದೇ ರೇವಣ್ಣ ಸಹ ವಿದೇಶಕ್ಕೆ ತೆರಳುವ ಶಂಕೆಯ ಮೇಲೆ ಅವರ ಮೇಲೂ ಲುಕ್‍ಔಟ್ ನೋಟಿಸ್ ಜಾರಿಗೊಳಿಸಲಾಗಿದೆ. ಇದನ್ನೂ ಓದಿ: ಸಂತ್ರಸ್ತ ಮಹಿಳೆಯರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಿ: ಸಿಎಂ ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಪತ್ರ

  • ಅಪ್ರಾಪ್ತೆ ಎಂದು ಬುದ್ಧಿಮಾತು – ವಿಷ ಸೇವಿಸಿ ರೈಲ್ವೇ ಹಳಿ ಮೇಲೆ ಮಲಗಿದ ಪ್ರೇಮಿಗಳು

    ಅಪ್ರಾಪ್ತೆ ಎಂದು ಬುದ್ಧಿಮಾತು – ವಿಷ ಸೇವಿಸಿ ರೈಲ್ವೇ ಹಳಿ ಮೇಲೆ ಮಲಗಿದ ಪ್ರೇಮಿಗಳು

    – ಯುವಕ ಸಾವು, ಅಪ್ರಾಪ್ತೆಗೆ ಮುಂದುವರೆದ ಚಿಕಿತ್ಸೆ

    ಹಾಸನ: ಮದುವೆಗೆ ಪೋಷಕರು ವಿರೋಧಿಸಿದ್ದಕ್ಕೆ ಹೊಳೆನರಸೀಪುರದಲ್ಲಿ (Holenarasipur) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳಲ್ಲಿ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವಿಗೀಡಾಗಿದ್ದಾನೆ.

    ಮೃತ ಯುವಕನನ್ನು ನಗರನಹಳ್ಳಿ ಗ್ರಾಮದ ರಾಜು (24) ಎಂದು ಗುರುತಿಸಲಾಗಿದೆ. ಮೃತ ಯುವಕ ಡಿಗ್ರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ. ಅಪ್ರಾಪ್ತೆ ಎನ್ನುವ ಕಾರಣಕ್ಕೆ ಮದುವೆಗೆ ನಿರಾಕರಿಸಿ ಪೋಷಕರು, ಬುದ್ಧಿವಾದ ಹೇಳಿದ್ದರು. ಇದರಿಂದ ನೊಂದ ಪ್ರೇಮಿಗಳು (Lovers) ವಿಷ ಸೇವಿಸಿ, ಹೊಳೆನರಸೀಪುರ ಪಟ್ಟಣದ ಹೇಮಾವತಿ ನದಿ ಸೇತುವೆ ಬಳಿಯ ರೈಲ್ವೇ ಹಳಿ ಮೇಲೆ ಮಲಗಿದ್ದರು. ಹಳಿ ಮೇಲೆ ಒದ್ದಾಡುತ್ತಿದ್ದ ಇಬ್ಬರನ್ನು ನೋಡಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಇದನ್ನೂ ಓದಿ: ತಲೆನೋವಿನಿಂದ ಬೇಸತ್ತು 7 ತಿಂಗಳ ಗರ್ಭಿಣಿ ಆತ್ಮಹತ್ಯೆ

    ಸ್ಥಳಕ್ಕೆ ಬಂದ ಪೊಲೀಸರು ಜೀಪ್‍ನಲ್ಲೇ ಇಬ್ಬರನ್ನು ನಗರದ ಆಸ್ಪತ್ರೆಗೆ ಕರೆತಂದು, ಚಿಕಿತ್ಸೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ಹಾಸನದ (Hassan) ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಯುವಕ ಮೃತಪಟ್ಟಿದ್ದು, ಅಪ್ರಾಪ್ತೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತ ಯುವಕ ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.

    ಈ ಸಂಬಂಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಹಲ್ಲೆ- ಆರೋಪಿಗಳ ಬಂಧನಕ್ಕೆ ಒತ್ತಾಯ