Tag: Hogenakal

  • ಹೊಗೇನಕಲ್‌ನ ಒಂದಿಂಚು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡಲ್ಲ: ಸೋಮಣ್ಣ

    ಹೊಗೇನಕಲ್‌ನ ಒಂದಿಂಚು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡಲ್ಲ: ಸೋಮಣ್ಣ

    ಚಾಮರಾಜನಗರ: ಹೊಗೇನಕಲ್‌ನಲ್ಲಿ ಒಂದಿಂಚು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

    ಹೊಗೇನಕಲ್‌ನಲ್ಲಿ 400 ಎಕರೆ ವಿಸ್ತೀರ್ಣದ ನಡುಗುಡ್ಡೆಯನ್ನು ತಮಿಳುನಾಡು ಸರ್ಕಾರ ಅತಿಕ್ರಮಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯದ ಸಣ್ಣ ಹಕ್ಕನ್ನು ಸಹ ಬೇರೆಯವರಿಗೆ ಬಿಟ್ಟು ಕೊಡಲ್ಲ, ನಮ್ಮ ಹಕ್ಕನ್ನು ನಾವು ಕಾಯ್ದುಕೊಳ್ಳುತ್ತೇವೆ. ನಮಗೆ ಆ ಶಕ್ತಿಯಿದೆ ಎಂದರು.

    Somanna

    ಜಂಟಿ ಸರ್ವೆ ಪುನಾರಾಂಭಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಯಾವ್ಯಾವ ಕಾಲಕ್ಕೇ ಏನಾಗಬೇಕೋ ಆ ರೀತಿಯೇ ಆಗುತ್ತದೆ. ಕರ್ನಾಟಕದ ಒಂದು ಇಂಚು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡಲ್ಲ. ನಮ್ಮ ನೆಲದಲ್ಲಿ ಇನ್ನೊಬ್ಬರು ಬಂದು ಸೇರಿಕೊಳ್ಳಲು ಅವಕಾಶ ಕೊಡಲ್ಲ ಎಂದು ಭರವಸೆ ನೀಡಿದರು. ಇದನ್ನೂ ಓದಿ: ನನ್ನ ವಿಜಯನಗರದ ಜನ ದುಃಖದಲ್ಲಿದ್ದಾರೆ: ಆನಂದ್ ಸಿಂಗ್

    ತಮಿಳುನಾಡು ಕೈಗೊಂಡಿರುವ ಹೊಗೇನಕಲ್ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಕುಡಿದ ಮೇಲೆ ತಮಿಳುನಾಡಿನವರು ನೀರು ಕುಡಿಯುತ್ತಾರೆ ವಿನಾಃ ಅವರು ಕುಡಿದ ನೀರನ್ನು ನಾವು ಕುಡಿಯೋದಿಲ್ಲ, ಅವರ ಹಕ್ಕನ್ನು ಕಾಯ್ದುಕೊಳ್ಳೋದು ಅವರ ಕರ್ತವ್ಯ. ನಮ್ಮ ಹಕ್ಕನ್ನು ಕಾಯ್ದುಕೊಳ್ಳೋದು ನಮ್ಮ ಕರ್ತವ್ಯವಾಗಿದ್ದು, ನಮ್ಮ ಜನರಿಗೆ ಅನ್ಯಾಯ ಮಾಡಿಕೊಂಡು ಅವರಿಗೆ ನೀರು ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಮಗೆ ಗೌರವ ಕೊಟ್ಟಿದ್ದಕ್ಕೆ ಜಾರಕಿಹೊಳಿಗೆ ಅಭಿನಂದನೆ: ಎಚ್‍ಡಿಕೆ

  • ಹೊಗೆನಕಲ್ ಜಲಪಾತ ಸಂಪೂರ್ಣ ಜಲಾವೃತ – ಪ್ರವಾಸಿಗರ ಭೇಟಿಗೆ ನಿಷೇಧ: ವಿಡಿಯೋ

    ಹೊಗೆನಕಲ್ ಜಲಪಾತ ಸಂಪೂರ್ಣ ಜಲಾವೃತ – ಪ್ರವಾಸಿಗರ ಭೇಟಿಗೆ ನಿಷೇಧ: ವಿಡಿಯೋ

    ಚಾಮರಾಜನಗರ: ಭಾರಿ ಮಳೆಯಿಂದಾಗಿ ಅಪಾಯದ ಮಟ್ಟ ಮೀರಿ ಕಾವೇರಿ ನದಿ ಹರಿಯುತ್ತಿರುವ ಕಾರಣ ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಹೊಗೆನಕಲ್ ಜಲಪಾತಕ್ಕೆ ನಿಷೇಧ ಹೇರಲಾಗಿದೆ.

    ಸುತ್ತಮುತ್ತಲಿನ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯಗಳು ತುಂಬಿವೆ. ಆದ್ದರಿಂದ ಕೆಆರ್‍ಎಸ್ ಮತ್ತು ಕಬಿನಿಯಿಂದ ಅಧಿಕ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿಯು ಅಪಾಯಮಟ್ಟ ಹರಿಯುತ್ತಿರುವುದರಿಂದ ಕೊಳ್ಳೆಗಾಲದ ಸಮೀಪವಿರುವ ಹೊಗೆನಕಲ್ ಜಲಪಾತಕ್ಕೆ ಪ್ರವಾಸಿಗರ ವೀಕ್ಷಣೆಗೆ ನಿಷೇಧ ಹೇರಲಾಗಿದೆ.

    ಹೊಗೆನಕಲ್ ಜಲಪಾತ ಸಂಪೂರ್ಣ ಜಲಾವೃತಗೊಂಡಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ಪ್ರವೇಶವನ್ನು ನಿರಾಕರಿಸಲಾಗಿದೆ. ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯದಿಂದ ನೀರಿನ ಹೊರ ಹರಿವು ಕಡಿಮೆಯಾಗುವವರೆಗೂ ಪ್ರವಾಸಿಗರಿಗೆ ನಿಷೇಧ ಮುಂದುವರಿಯಲಿದೆ.

    ಸದ್ಯ ಹೊಗೆನಕಲ್ ಸಂಪೂರ್ಣ ಜಲಾವೃತಗೊಂಡಿದ್ದು, ಅಕ್ಕ-ಪಕ್ಕದ ಮನೆಗಳು ಸಹ ನೀರಿನಿಂದ ಮುಳುಗಡೆಯಾಗಿದೆ. ಈ ಮೊದಲು ಬೆಂಗಳೂರು ಮೂಲಕ ಇಬ್ಬರು ಟೆಕ್ಕಿಗಳು ಹೊಗೆನಕಲ್ ನಲ್ಲಿ ಕೊಚ್ಚಿ ಹೋಗಿ ತಮ್ಮ ಪ್ರಾಣಕಳೆದುಕೊಂಡಿದ್ದರು.

  • ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್

    ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್

    ಚಾಮರಾಜನಗರ: ಕಬಿನಿ ಜಲಾಶಯದಿಂದ 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಟ್ಟಿರುವ ಪರಿಣಾಮ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಗಗನಚುಕ್ಕಿ-ಭರಚುಕ್ಕಿ ಹಾಗೂ ಹೊಗೆನಕಲ್ ಜಲಪಾತಗಳು ಮೈದುಂಬಿ ಭೋರ್ಗರೆಯುತ್ತಿವೆ.

    ಎರಡು ದಿನಗಳಿಂದ ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ನಯಾಗರ ಫಾಲ್ಸ್ ಎಂದೇ ಹೆಸರುವಾಸಿಯಾಗಿರುವ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು ತಮ್ಮ ಸೌಂದರ್ಯವನ್ನು ಮತ್ತಷ್ಟು ಎಚ್ಚಿಸಿಕೊಂಡಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

    ಗಗನಚುಕ್ಕಿಯಲ್ಲಂತೂ ನೀರು ಆಕಾಶದೆತ್ತರದಿಂದ ಬೀಳುವಂತೆ ಬಾಸವಾಗುತ್ತಿದೆ. ಇನ್ನೂ ಹೊಗೆನಕಲ್ ಫಾಲ್ಸ್ ಕೂಡ ಇದಕ್ಕೆ ಕಡಿಮೆ ಇಲ್ಲದಂತೆ ಧುಮ್ಮುಕ್ಕಿ ಹರಿಯುತ್ತಿದೆ. ಎತ್ತ ನೋಡಿದರೂ ನೀರು ತುಂಬಿಕೊಂಡಿದೆ. ಈ ರಮಣೀಯ ದೃಶ್ಯವನ್ನು ನೋಡಲು ಪ್ರವಾಸಿಗರ ದಂಡೆ ಈ ಜಲಪಾತಗಳ ಕಡೆ ಹರಿದು ಬರುತ್ತಿದೆ.

    ಮೈದುಂಬಿ ಹರಿಯುತ್ತಿರುವ ಕಾವೇರಿ ಮತ್ತು ಕಪಿಲಾ ನದಿಗಳಿಂದಾಗಿ ಅಕ್ಕ-ಪಕ್ಕದ ಗ್ರಾಮಗಳು ಪ್ರವಾಹದ ಭೀತಿಯಲ್ಲಿವೆ.