Tag: hoax bomb

  • ರೈಲ್ವೆ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ – ಆತಂಕಗೊಂಡ ಪ್ರಯಾಣಿಕರು

    ರೈಲ್ವೆ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ – ಆತಂಕಗೊಂಡ ಪ್ರಯಾಣಿಕರು

    ಪಾಟ್ನಾ: ಬಿಹಾರದ ಪಾಟ್ನಾ ಜಂಕ್ಷನ್‍ನಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆ ಬಂದಿದ್ದು, ಕೆಲ ಕಾಲ ಪ್ರಯಾಣಿಕರಲ್ಲಿ ಆತಂಕವನ್ನು ಸೃಷ್ಟಿಸಿತ್ತು.

    ಬಿಹಾರದ ಪಾಟ್ನಾ (Patna) ರೈಲ್ವೆ ನಿಲ್ದಾಣದಲ್ಲಿ (Railway Station) ಬಾಂಬ್ ಇಟ್ಟಿದ್ದೇವೆ ಎಂದು ಅಪರಿಚಿತ ನಂಬರ್‌ನಿಂದ ಅಲ್ಲಿನ ಅಧಿಕಾರಿಗಳಿಗೆ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೆಲ ಕಾಲ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿದ್ದು, ಅಧಿಕಾರಿಗಳಲ್ಲೂ ಗೊಂದಲ ಉಂಟಾಗಿದೆ. ಆದರೆ ಅಲ್ಲಿನ ರೈಲ್ವೆ ಅಧಿಕಾರಿಗಳು ವಿಷಯ ತಿಳಿದ ತಕ್ಷಣ ರೈಲ್ವೆ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಿದ್ದು, ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದ್ದಾರೆ.

    ಘಟನೆಗೆ ಸಂಬಂಧಿಸಿ ಅವರು ಶೋಧ ಕಾರ್ಯಾಚರಣೆ ಹಾಗೂ ತನಿಖೆಯನ್ನು ನಡೆಸಿದ್ದಾರೆ. ಅದಾದ ಬಳಿಕ ಇದು ಹುಸಿ ಬಾಂಬ್ (Hoax Bomb) ಕರೆ ಎಂಬುದು ಖಚಿತವಾಗಿದ್ದು, ಅಲ್ಲಿದ್ದ ಪ್ರಯಾಣಿಕರು ನಿರಾಳರಾಗಿದ್ದಾರೆ. ಇದನ್ನೂ ಓದಿ: ನನಗೂ ರಾಜಕೀಯಕ್ಕೂ ಆಗಿ ಬರಲ್ಲ : ಶಿವರಾಜ್ ಕುಮಾರ್

    ಘಟನೆಗೆ ಸಂಬಂಧಿಸಿ ಪಾಟ್ನಾ ರೈಲ್ವೆ ಜಂಕ್ಷನ್‍ನ ಉಸ್ತುವಾರಿ ರಂಜಿತ್ ಕುಮಾರ್ ಮಾತನಾಡಿ, ಯಾವುದೇ ಬಾಂಬ್ ಪತ್ತೆಯಾದ ಬಗ್ಗೆ ನಮಗೆ ಮಾಹಿತಿ ಬಂದಿಲ್ಲ. ನಾವು ವಿಶೇಷ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಓದಿದ್ದು 8ನೇ ತರಗತಿ, ಆದ್ರೆ IPS ಅಧಿಕಾರಿ ಎಂದು ಮಹಿಳೆಯರನ್ನು ನಂಬಿಸಿ ಲಕ್ಷ ಲಕ್ಷ ಹಣ ದೋಚಿದ

    Live Tv
    [brid partner=56869869 player=32851 video=960834 autoplay=true]

  • ಭೇಟಿ ಮಾಡಲು ಬರುತ್ತಿದ್ದ ಹೆತ್ತವರನ್ನು ತಡೆಯಲು ವಿಮಾನದಲ್ಲೇ ಬಾಂಬ್ ಇದೆ ಎಂದ!

    ಭೇಟಿ ಮಾಡಲು ಬರುತ್ತಿದ್ದ ಹೆತ್ತವರನ್ನು ತಡೆಯಲು ವಿಮಾನದಲ್ಲೇ ಬಾಂಬ್ ಇದೆ ಎಂದ!

    ಪ್ಯಾರಿಸ್: ತನ್ನನ್ನು ಭೇಟಿಯಾಗಲು ಬರುತ್ತಿದ್ದ ತಂದೆ ತಾಯಿಯನ್ನು ತಡೆಯಲು ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂದು ಈಸಿ ಜೆಟ್ ಏರ್‌ಲೈನ್ಸ್ ಗೆ ಕರೆ ಮಾಡಿ ಸುಳ್ಳು ಸುದ್ದಿ ಹಬ್ಬಿಸಿದ ಪುತ್ರ ಪೊಲೀಸರ ಅತಿಥಿಯಾಗಿದ್ದಾನೆ.

    ತಂದೆ ತಾಯಿಯನ್ನು ಬಿಟ್ಟು ವಿದ್ಯಾಭ್ಯಾಸಕ್ಕೆ ದೂರದ ಊರಿಗೆ ಹೋಗುವ ಮಕ್ಕಳು ತಮ್ಮ ಹೆತ್ತವರನ್ನು ಯಾವಾಗ ನೋಡುತ್ತೇವೆ ಅಂತ ಕಾಯುತ್ತಿರುತ್ತಾರೆ. ಆದ್ರೆ ಪಶ್ಚಿಮ ಫ್ರಾನ್ಸಿನ ರೆನೆಸ್‍ನಲ್ಲಿ ಓದುತ್ತಿದ್ದ 23 ವರ್ಷದ ವಿದ್ಯಾರ್ಥಿಯೊಬ್ಬ ತಂದೆ ತಾಯಿ ತನ್ನನ್ನು ನೋಡಲು ಬರುವುದು ಇಷ್ಟವಿಲ್ಲದೆ ಅವರು ಬರುತ್ತಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂದು ವಾರದ ಹಿಂದೆ ಸುಳ್ಳು ಸುದ್ದಿ ಹಬ್ಬಿಸಿದ್ದನು. ವಿದ್ಯಾರ್ಥಿಯ ಈ ಹುಚ್ಚಾಟಕ್ಕೆ ದಾರಿ ಮಧ್ಯದಲ್ಲೇ ಈಸಿ ಜೆಟ್ ವಿಮಾನ ಹಿಂತಿರುಗಿತ್ತು.

    ಬಳಿಕ ಈ ಸುದ್ದಿ ಸುಳ್ಳು ಅಂತ ಗೊತ್ತಾದ ಮೇಲೆ ತನಿಖೆ ನಡೆಸಿದಾಗ ವಿದ್ಯಾರ್ಥಿ ಸಿಕ್ಕಿಬಿದ್ದಿದ್ದು, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸುಳ್ಳು ಕರೆಯಿಂದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು ಭಯಪಟ್ಟಿದ್ದರು. ಅಲ್ಲದೆ ಈ ಸುದ್ದಿ ಹಿಂದೆ ಭಯೋತ್ಪಾದಕರ ಕೈವಾಡವಿರಬಹುದಾ ಅಂತ ಶಂಕಿಸಿದ್ದರು. ಆದ್ರೆ ತನಿಖೆ ಬಳಿಕ ವಿದ್ಯಾರ್ಥಿಯ ಹುಚ್ಚಾಟ ಬೆಳಕಿಗೆ ಬಂದಿದೆ.

    ಸದ್ಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿಯ ಮೇಲಿನ ಆರೋಪ ಸಾಬೀತಾದರೆ ನ್ಯಾಯಾಲಯವು ಸುಮಾರು 5 ವರ್ಷಗಳ ಕಾಲ ಜೈಲು ಶಿಕ್ಷೆ, 85 ಸಾವಿರ ಡಾಲರ್(ಅಂದಾಜು 60 ಲಕ್ಷ ರೂ.) ದಂಡ ವಿಧಿಸುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv