Tag: HMPV

  • Assam | 10 ತಿಂಗಳ ಮಗುವಿನಲ್ಲಿ HMPV ಪತ್ತೆ

    Assam | 10 ತಿಂಗಳ ಮಗುವಿನಲ್ಲಿ HMPV ಪತ್ತೆ

    ಗುವಾಹಟಿ: ದೇಶಾದ್ಯಂತ ಸದ್ದು ಮಾಡುತ್ತಿರುವ ಚೀನಾದ ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಅಸ್ಸಾಂನ (Assam) 10 ತಿಂಗಳ ಮಗುವಿನಲ್ಲಿ ಪತ್ತೆಯಾಗಿದೆ.

    ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ದಿಬ್ರುಗಢ್‌ನಲ್ಲಿರುವ ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (AMCH) ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಮಕ್ಕಳಲ್ಲೇ ಪತ್ತೆಯಾದ ವೈರಸ್ – ಹೆಚ್‌ಎಂಪಿವಿ ಹಾನಿಕಾರಕವಲ್ಲ, ಭಯ ಪಡದಿರಿ… ನಿರ್ಲಕ್ಷ್ಯವೂ ಮಾಡದಿರಿ.!

    ಕಳೆದ 4 ದಿನಗಳ ಹಿಂದೆಯಷ್ಟೇ ಶೀತ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗ ಲಕ್ಷಣಗಳನ್ನು ಪರಿಗಣಿಸಿ ಪರೀಕ್ಷೆಗೆ ಒಳಪಡಿಸಿದ ನಂತರ ಮಗುವಿನಲ್ಲಿ ಹೆಚ್‌ಎಂಪಿವಿ ಸೋಂಕು ಇರೋದು ದೃಢವಾಗಿದೆ ಎಂದು AMCH ಸೂಪರಿಂಟೆಂಡೆಂಟ್ ಧೃಬಜ್ಯೋತಿ ಭುಯಾನ್ ಹೇಳಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ವೈರಸ್‌ ಆತಂಕ – 100 ಬೆಡ್‌ಗಳ ಆಸ್ಪತ್ರೆ, ವೈದ್ಯರ ತಂಡ ನಿಯೋಜನೆ 

    ಈ ವರ್ಷದಲ್ಲಿ ಅಸ್ಸಾಂನಲ್ಲಿ ಕಾಣಿಸಿಕೊಂಡ ಮೊದಲ ಸೋಂಕು ಇದಾಗಿದೆ. ಆದಾಗ್ಯೂ ಇದು ಹೊಸದೇನಲ್ಲ ಎಂದು ವೈದ್ಯರು ಹೇಳಿದ್ದಾರೆ. 2001ರಲ್ಲಿ ಮೊದಲಬಾರಿಗೆ ಗುರುತಿಸಲಾದ ಈ ವೈರಸ್‌ ಹಲವು ವರ್ಷಗಳಿಂದ ಜಾಗತಿಕವಾಗಿ ಅಸ್ತಿತ್ವದಲ್ಲಿದೆ. 2014ರಲ್ಲಿ ಅಸ್ಸಾಂನಲ್ಲಿ ದಿಬ್ರುಗಢ ಜಿಲ್ಲೆಯಲ್ಲಿ 110 ಪ್ರಕರಣಗಳನ್ನು ಗುರುತಿಸಿದ್ದೆವು. ಪ್ರತಿ ವರ್ಷವೂ ಇದು ಪತ್ತೆಯಾಗುತ್ತಿದೆ. ಜನ ಆತಂಕ ಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕೆ ವಹಿಸಿದ್ರೆ ಸಾಕು ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: HMPV ಜಾಗತಿಕವಾಗಿ ಪರಿಚಲನೆಯಲ್ಲಿದೆ – ಐಸಿಎಂಆರ್ ಎಚ್ಚರಿಕೆ

  • ಶಿವಮೊಗ್ಗ | ಕಳೆದ 4 ತಿಂಗಳ ಹಿಂದೆಯೇ ಐವರು ಮಕ್ಕಳಲ್ಲಿ HMPV ಪತ್ತೆ: ಡಾ.ಸರ್ಜಿ

    ಶಿವಮೊಗ್ಗ | ಕಳೆದ 4 ತಿಂಗಳ ಹಿಂದೆಯೇ ಐವರು ಮಕ್ಕಳಲ್ಲಿ HMPV ಪತ್ತೆ: ಡಾ.ಸರ್ಜಿ

    ಶಿವಮೊಗ್ಗ: ನಗರದಲ್ಲಿ (Shivamogga) ಕಳೆದ ಸೆಪ್ಟೆಂಬರ್‌ನಿಂದ ನವೆಂಬರ್‌ ತಿಂಗಳವರೆಗೆ ಐವರು ಮಕ್ಕಳಲ್ಲಿ HMPV ಸೋಂಕು ತಗುಲಿರುವುದು ದೃಢವಾಗಿತ್ತು. ಈ ಮಕ್ಕಳು ಚಿಕಿತ್ಸೆ ಪಡೆದು ಗುಣವಾಗಿದ್ದಾರೆ. ಸೋಂಕಿನ ಕುರಿತು ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಎಮ್‌ಎಲ್‌ಸಿ ಹಾಗೂ ಮಕ್ಕಳ ತಜ್ಞ ಡಾ.ಧನಂಜಯ್‌ ಸರ್ಜಿ (Dr.Sarji)ತಿಳಿಸಿದ್ದಾರೆ.

    ಸೋಂಕು ತಗುಲಿದ್ದ ಎಲ್ಲಾ ಮಕ್ಕಳು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಇದು ಸಾಮಾನ್ಯ ವೈರಸ್.‌ ಕೆಮ್ಮು, ಶೀತ, ಜ್ವರ ಬರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವವರು, ಹಿರಿಯರು ಎಚ್ಚರಿಕೆ ವಹಿಸಬೇಕು. ಈ ವೈರಸ್‌ ಬಗ್ಗೆ ಜನ ಆತಂಕ ಪಡಬೇಕಿಲ್ಲ ಎಂದು ಮಾಹಿತಿ ನೀಡಿದ್ದಾರೆ.

    ಚಿಕಿತ್ಸೆಗೆ ದಾಖಲಾಗಿದ್ದ ಮಕ್ಕಳ ಸ್ವ್ಯಾಬ್‌ ಪರೀಕ್ಷೆ ಮಾಡಿದಾಗ ಐವರಲ್ಲಿ ಹೆಚ್‌ಎಂಪಿವಿ ಸೋಂಕು ತಗುಲಿರುವುದು ಗೊತ್ತಾಗಿತ್ತು. ಅವರಿಗೆಲ್ಲ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಜನ ಆತಂಕಪಡುವ ಅಗತ್ಯ ಇಲ್ಲ ಎಂದಿದ್ದಾರೆ.

  • ಚೀನಿ ವೈರಸ್‌ ಪತ್ತೆಯಾದ 8 ತಿಂಗಳ ಮಗು ಇಂದು ಡಿಸ್ಚಾರ್ಜ್‌

    ಚೀನಿ ವೈರಸ್‌ ಪತ್ತೆಯಾದ 8 ತಿಂಗಳ ಮಗು ಇಂದು ಡಿಸ್ಚಾರ್ಜ್‌

    ಬೆಂಗಳೂರು: ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಸೋಂಕಿತ 8 ತಿಂಗಳ ಮಗು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದೆ.

    ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಕಾರಣ ಇಂದು ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದೆ. ಸೋಮವಾರ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಫತ್ರೆಗೆ ಭೇಟಿ ಮಗುವಿನ ಪೋಷಕರಿಂದ ಮಾಹಿತಿಯನ್ನು ಪಡೆದುಕೊಂಡಿದ್ದರು. ಇದನ್ನೂ ಓದಿ: Tumakuru| ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ಯುವಕ – ಅರಣ್ಯ ಇಲಾಖೆ ಸಿಬ್ಬಂದಿ ಶಾಕ್

     

    ಸದ್ಯಕ್ಕೆ ಮಗು ಈಗ ಆರೋಗ್ಯವಾಗಿದೆ. ಸೋಮವಾರವೇ ಡಿಸ್ಚಾರ್ಜ್‌ ಆಗಬೇಕಿತ್ತು. ಆದರೆ ವೈದ್ಯರು ಇಂದು ಒಂದು ದಿನ ಇರಲಿ ನಿಗಾದಲ್ಲಿ ಅಂತಾ ಚಿಕಿತ್ಸೆ ನೀಡಿದ್ದರು. ಇದನ್ನೂ ಓದಿ: ತಿರುಪತಿಯಂತೆ ಧರ್ಮಸ್ಥಳದಲ್ಲೂ ದರ್ಶನಕ್ಕೆ ಕ್ಯೂ ಕಾಂಪ್ಲೆಕ್ಸ್: ಏನಿದರ ವಿಶೇಷ? ಇಲ್ಲಿದೆ ಸಂಪೂರ್ಣ ವಿವರ

    ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ HMPV ಪತ್ತೆಯಾಗಿತ್ತು. ಸೋಂಕು ಕಾಣಿಸಿದ 3 ತಿಂಗಳ ಮಗು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರೆ 8 ತಿಂಗಳ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಾಣುತ್ತಿದೆ.

     

  • ಮಕ್ಕಳಲ್ಲಿ ಹೆಚ್ಚುತ್ತಿದೆ HMPV- ಮಕ್ಕಳ ತಜ್ಞರು ಪೋಷಕರಿಗೆ ಕೊಟ್ಟ ಎಚ್ಚರಿಕೆ ಏನು?

    ಮಕ್ಕಳಲ್ಲಿ ಹೆಚ್ಚುತ್ತಿದೆ HMPV- ಮಕ್ಕಳ ತಜ್ಞರು ಪೋಷಕರಿಗೆ ಕೊಟ್ಟ ಎಚ್ಚರಿಕೆ ಏನು?

    ಬೆಂಗಳೂರು: ಚೀನಾದಲ್ಲಿ (China) ಮತ್ತೆ ಮೆಡಿಕಲ್ ಎಮರ್ಜೆನ್ಸಿ ಶುರುವಾಗಿದ್ದು, ಇಡೀ ವಿಶ್ವವೇ ಮತ್ತೆ ಕೋವಿಡ್ ರೀತಿಯ ಭಯದಲ್ಲಿದೆ. ಈಗ ನಮ್ಮ ದೇಶದಲ್ಲೂ ಅದೇ ಮಾದರಿಯ ವೈರಸ್ ಪತ್ತೆಯಾಗಿದ್ದು, ಸಿಲಿಕಾನ್ ಸಿಟಿಯ ಮಕ್ಕಳಿಬ್ಬರಿಗೆ ಹೆಚ್‌ಎಂಪಿವಿ  (HMPV) ವೈರಸ್ ದೃಢವಾಗಿದೆ. ಈ ಹಿನ್ನೆಲೆ ಮಕ್ಕಳ ತಜ್ಞರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.

    ಹೆಚ್‌ಎಂಪಿ ವೈರಸ್ ಬಗ್ಗೆ ವೈದ್ಯಕೀಯ ಲೋಕ ಆತಂಕಗೊಂಡಿದೆ. ಚೀನಾದಲ್ಲಿ ಶುರುವಾಗಿರುವ ಈ ಹೆಚ್ಎಂಪಿ ವೈರಸ್ ಹೊಸ ವೇರಿಯಂಟಾ? ಅದರ ಪರಿಣಾಮವೇನು ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದರೆ, ಇದೇ ವೈರಸ್ ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಇರೋದು ಧೃಡ ಪಟ್ಟಿದೆ. ಇದನ್ನೂ ಓದಿ: “ಕಷ್ಟದಲ್ಲಿದ್ರೂ ತಂದೆ, ತಾಯಿ ಮಾತನಾಡ್ತಿಲ್ಲ, ಕಾಲ್‌ ಮಾಡಿದ್ರೂ ಕಟ್‌ ಮಾಡ್ತಿದ್ರು” – ಟೆಕ್ಕಿ ಅನೂಪ್‌ ಡೆತ್‌ನೋಟ್‌ನಲ್ಲಿ ಏನಿದೆ?

    ಈ ವೈರಸ್ ಹೊಸದಲ್ಲ. 2001ರಿಂದಲೇ ಇದ್ದು ಅತಂಹ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಇದು ಮತ್ತೊಂದು ಪ್ಯಾಂಡಮಿಕ್ ಆಗಿಬಿಡುವ ಸಾಧ್ಯತೆಗಳು ಹೆಚ್ಚಾಗಿದ್ದು, ಸರ್ಕಾರ ಈಗಾಗಲೇ ಮುನ್ನೆಚ್ಚರಿಕೆವಹಿಸುವಂತೆ ಸೂಚಿಸಿದೆ. ಇದು ಮಕ್ಕಳ ಮೇಲೆ ಬೇಗ ಪರಿಣಾಮ ಬೀರುವ ವೈರಸ್ ಆಗಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಮುಂಜಾಗ್ರತೆಯನ್ನ ಪೋಷಕರು ವಹಿಸಲೇಬೇಕು ಎಂದು ಮಕ್ಕಳ ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಫೆ.10 ರಿಂದ ಬೆಂಗಳೂರಿನಲ್ಲಿ `ಏರೋ ಇಂಡಿಯಾ 2025′ – ಏಷ್ಯಾದ ಅತಿದೊಡ್ಡ ಏರ್‌ ಶೋ!

    ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣದಿಂದ ಈ ವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆ ದಟ್ಟವಾಗಿದೆ. ನೆಗಡಿ, ಕೆಮ್ಮು, ಜ್ವರ, ಮೈಕೈ ನೋವು, ಉಸಿರಾಟದ ಸಮಸ್ಯೆ, ಸುಸ್ತು ಈ ವೈರಸ್‌ನಿಂದ ಉಂಟಾಗುವ ಪರಿಣಾಮವಾಗಿದೆ. ಹಾಗಾಗಿ ಮಕ್ಕಳಲ್ಲಿ ಈ ರೋಗ ಲಕ್ಷಣಗಳು ಕಂಡು ಬಂದರೆ ವೈದ್ಯರ ಬಳಿ ಕರೆದುಕೊಂಡು ಹೋಗುವಂತೆ ತಜ್ಞರು ಸೂಚಿಸಿದ್ದಾರೆ. ಜೊತೆಗೆ ಮೂರು ಅಥವಾ ಐದು ದಿನಗಳಲ್ಲಿ ಕಡಿಮೆ ಆಗದೇ ಇದ್ದರೆ ಹೆಚ್ಚಿನ ನಿಗ ವಹಿಸಬೇಕಾಗುತ್ತದೆ. ಇದನ್ನೂ ಓದಿ: ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗಲ್ಲ, 2026ರ ಒಳಗೆ ನಕ್ಸಲಿಸಂ ಕೊನೆಗೊಳಿಸುತ್ತೇವೆ: ಮತ್ತೆ ಶಾ ಶಪಥ

    ಮಕ್ಕಳ ತಜ್ಞರ ಸಲಹೆ ಏನು?
    * ಶಾಲೆಯಲ್ಲಿ ಮಕ್ಕಳು ಎಚ್ಚರಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು.
    * ಆಹಾರದ ಬಗ್ಗೆ ಎಚ್ಚರಿಕೆವಹಿಸಿ (ಬಿಸಿಯಾದ ಆಹಾರವನ್ನೇ ನೀಡಿ)
    * ತಂಪು ಪಾನೀಯಗಳನ್ನು ನೀಡಬೇಡಿ.
    * ಆಗಾಗ ಕೈ ಮತ್ತು ಮುಖವನ್ನು ತೊಳೆಯುವ ಮೂಲಕ ಶುಚಿತ್ವವನ್ನು ಕಾಪಾಡಿಸಿ.
    * ಮಾಸ್ಕ್ ಹಾಕಿಸೋದು ಉತ್ತಮ.
    * ಬೆಚ್ಚನೆ ಬಟ್ಟೆಗಳನ್ನು ಹಾಕಿಸಿ.
    * ಈ ರೋಗದ ಲಕ್ಷಣಗಳು ಇದ್ದವರಿಂದ ದೂರ ಇರಬೇಕು.
    * ಒಬ್ಬರಿಂದ ಒಬ್ಬರಿಗೆ ಹರಡುವ ವೈರಸ್ ಆಗಿರುವುದರಿಂದ ಕೊರೋನಾ ಸಮಯದಲ್ಲಿ ಪಾಲಿಸಿದ ನಿಯಮಗಳನ್ನು ಮತ್ತೆ ಪಾಲಿಸಿ.

  • ಮಕ್ಕಳಲ್ಲೇ ಪತ್ತೆಯಾದ ವೈರಸ್ – ಹೆಚ್‌ಎಂಪಿವಿ ಹಾನಿಕಾರಕವಲ್ಲ, ಭಯ ಪಡದಿರಿ… ನಿರ್ಲಕ್ಷ್ಯವೂ ಮಾಡದಿರಿ.!

    ಮಕ್ಕಳಲ್ಲೇ ಪತ್ತೆಯಾದ ವೈರಸ್ – ಹೆಚ್‌ಎಂಪಿವಿ ಹಾನಿಕಾರಕವಲ್ಲ, ಭಯ ಪಡದಿರಿ… ನಿರ್ಲಕ್ಷ್ಯವೂ ಮಾಡದಿರಿ.!

    – HMPV ಲಕ್ಷಣಗಳೇನು? ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು?
    – ಕರ್ನಾಟಕ, ಚೆನ್ನೈನಲ್ಲಿ ತಲಾ 2, ಗುಜರಾತ್‌, ಕೋಲ್ಕತ್ತಾದಲ್ಲಿ ತಲಾ 1 HMPV ಕೇಸ್‌

    ನವದೆಹಲಿ: 2019ರ ಡಿಸೆಂಬರ್‌ ವೇಳೆಗೆ ಚೀನಾದಲ್ಲಿ ಕಾಣಿಕೊಂಡಿದ್ದ ಕೊರೊನಾ ವೈರಸ್‌ ಇಡೀ ವಿಶ್ವವನ್ನೇ ಕಾಡಿತ್ತು. ಇದೀಗ ಚೀನಾದಿಂದಲೇ ಹಬ್ಬಿದ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ರಾಜ್ಯದ ಜನರ ನಿದ್ದೆಗೆಡಿಸಿದೆ. ಅದರಲ್ಲೂ ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಮಕ್ಕಳಲ್ಲೇ ವೈರಸ್‌ ಕಾಣಿಸಿಕೊಂಡಿದ್ದು, ಪೋಷಕರನ್ನು ಚಿಂತೆಗೀಡುಮಾಡಿದೆ. ಈ ನಡುವೆ ಜನರ ಆತಂಕ ದೂರ ಮಾಡುವ ಕೆಲಸವನ್ನು ತಜ್ಞ ವೈದ್ಯರು ಮಾಡಿದ್ದಾರೆ.

    ಕರ್ನಾಟಕ, ತಮಿಳುನಾಡು, ಗುಜರಾತ್‌, ಪ. ಬಂಗಾಳದಲ್ಲಿ ಕಾಣಿಸಿಕೊಂಡಿರುವ ಹೆಚ್‌ಎಂಪಿವಿ ಹೊಸತೇನಲ್ಲ, ಇದೂ ಹಾನಿಕಾರಕವೂ ಅಲ್ಲ. 2001ರಲ್ಲಿ ಮೊದಲಬಾರಿಗೆ ಗುರುತಿಸಲಾದ ಈ ವೈರಸ್‌ ಹಲವು ವರ್ಷಗಳಿಂದ ಜಾಗತೀಕವಾಗಿ ಅಸ್ತಿತ್ವದಲ್ಲಿದೆ. ಹಾಗಾಗಿ ಜನರು ಆತಂಕ ಪಡಬೇಕಿಲ್ಲ. ಹಾಗಂತ ನಿರ್ಲಕ್ಷ್ಯವೂ ಮಾಡುವಂತಿಲ್ಲ ಅಂತ ಐಸಿಎಂಆರ್ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಅಲ್ಲದೇ ಈ ವೈರಸ್‌ ಲಕ್ಷಣಗಳೇನು? ಹೇಗೆ ಹರಡುತ್ತದೆ? ಅನ್ನೋದರ ಕುರಿತು ಕಿಮ್ಸ್‌ನ ಮೈಕ್ರೋ ಬಯಲಾಜಿ ವಿಭಾಗದ ಡಾ. ಗಿರಿಧರ್ ಉಪಾಧ್ಯಯ ವರದಿಯೊಂದನ್ನ ಸಿದ್ಧಪಡಿಸಿದ್ದಾರೆ.

    HMPV – (ಹ್ಯೂಮನ್‌ ಮೈಕ್ರೋಪ್ಲಾಸ್ಮಾ ನ್ಯುನೋನಿಯಾ) ಸೋಂಕು.

    ಏನಿದರ ಗುಣಲಕ್ಷಣಗಳು?

    * ಕಫ
    * ಶೀತ
    * ಗಂಟಲು ನೋವು
    * ಜ್ವರ
    * ಸೀನುವುದು
    * ನ್ಯೂಮೋನಿಯಾ ಮಾದರಿ ಲಕ್ಷಣ

    ಇದು ಹೇಗೆ ಹರಡುತ್ತದೆ?

    * ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಒಬ್ಬರಿಂದ ಒಬ್ಬರಿಗೆ ಹರಡಲಿದೆ.
    * ಸೋಂಕಿತ ವ್ಯಕ್ತಿ ಕೆಮ್ಮಿದಾಗ ಸೀನಿದಾಗ ಹೊರಬಂದ ದ್ರಾವಣವನ್ನು ಮುಟ್ಟಿ ಅದೇ ಕೈನಿಂದ ಕಣ್ಣು, ಮೂಗು, ಬಾಯಿ ಮುಟ್ಟಿದಾಗಲೂ ಹರಡಬಹುದು.

    ಈ ವೈರಸ್‌ಗೆ ಚಿಕಿತ್ಸೆ ಇದ್ಯಾ?

    * HMPVಗೆ ಪ್ರತ್ಯೇಕ ಚಿಕಿತ್ಸೆ ಇಲ್ಲ
    * ಸೋಂಕಿತ ವ್ಯಕ್ತಿ ಚೆನ್ನಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು
    * ಗುಣಲಕ್ಷಣಗಳನ್ನು ಆಧರಿಸಿ ಔಷಧ ತೆಗೆದುಕೊಳ್ಳಬಹುದು
    * ನೀರಿನಾಂಶ ಇರುವ ಆಹಾರ ಹಣ್ಣುಗಳ ಸೇವನೆ
    * ಗಂಭೀರ ಸ್ವರೂಪಕ್ಕೆ ತಿರುಗಿದಾಗ ಆಸ್ಪತ್ರೆಗೆ ಹೋಗಬೇಕು.

    ತಡೆಗಟ್ಟುವುದು ಹೇಗೆ?

    * ಮಾಸ್ಕ್ ಧರಿಸುವಿಕೆ
    * ಕೈಗಳನ್ನು 20 ಸೆಕೆಂಡುಗಳ ಕಾಲ ಸೋಪಿನಿಂದ ತೊಳೆಯಬೇಕು
    * ಸೋಂಕಿತರೊಂದಿಗೆ ಅಂತರ ಕಾಯ್ದಕೊಳ್ಳಬೇಕು.

    ಯಾರಿಗೆಲ್ಲ ಸೋಂಕು ಬೇಗ ತಗುಲುವ ಸಾಧ್ಯತೆ?

    * 5 ವರ್ಷದೊಳಗಿನ ಮಕ್ಕಳು
    * ವಯೋವೃದ್ಧರು
    * ರೋಗನಿರೋಧಕ ಶಕ್ತಿ ಕಡಿಮೆ ಇರುವವರು
    * ಶ್ವಾಸಕೋಶ ಹಾಗೂ ಹೃದಯಸಂಬಂಧಿ ಸಮಸ್ಯೆ ಇರುವವರು

    ಏನೆಲ್ಲ ಗಂಭೀರ ಸಮಸ್ಯೆ ಬರಬಹುದು?

    * ನ್ಯೂಮೋನಿಯಾ
    * ಬ್ರ್ಯಾಂಕೈಟಿಸ್
    * ಆಸ್ತಮಾ
    * ಕಿವಿಯ ಸೋಂಕು

    ಯಾವಾಗ ವೈದ್ಯರನ್ನು ಭೇಟಿಯಾಗಬೇಕು?

    * ಉಸಿರಾಟದ ತೊಂದರೆ ಎದುರಾದಾಗ
    * ಉಸಿರಾಟದ ವೇಗ ಹೆಚ್ಚಾದಾಗ
    * ಏದುಸಿರು ಸಮಸ್ಯೆ ಎದುರಾದಗ
    * ತುಟಿ ಹಾಗೂ ಉಗುರಿನ ಸುತ್ತಾ ನೀಲಿ ಅಥವಾ ಬೂದು ಬಣ್ಣದ ಛಾಯೆ ಕಾಣಿಸಿದಾಗ
    * ಹೆಚ್ಚಿನ ಜ್ವರ ಕಾಣಿಸಿದಾಗ
    * ಡಿಹೈಡ್ರೇಷನ್ ಅಥವಾ ನಿರ್ಜಲೀಕರಣ ಸಮಸ್ಯೆ ಎದುರಾದಾಗ

  • ಮಹಾ ಕುಂಭಮೇಳಕ್ಕೆ ವೈರಸ್‌ ಆತಂಕ – 100 ಬೆಡ್‌ಗಳ ಆಸ್ಪತ್ರೆ, ವೈದ್ಯರ ತಂಡ ನಿಯೋಜನೆ

    ಮಹಾ ಕುಂಭಮೇಳಕ್ಕೆ ವೈರಸ್‌ ಆತಂಕ – 100 ಬೆಡ್‌ಗಳ ಆಸ್ಪತ್ರೆ, ವೈದ್ಯರ ತಂಡ ನಿಯೋಜನೆ

    – ಚೀನಾದಿಂದ ಬರುವ ವಿಮಾನಗಳನ್ನು ನಿಷೇಧಿಸಿ; ಕೇಂದ್ರಕ್ಕೆ ಮನವಿ

    ನವದೆಹಲಿ: ಚೀನಾ ಬಳಿಕ ಭಾರತದಲ್ಲೂ ಹೆಚ್‌ಎಂಪಿವಿ (HMPV) ಸೋಂಕು ಪ್ರಕರಣಗಳು ಪತ್ತೆಯಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.

    ಅದರಲ್ಲೂ, ಜನವರಿ 13ರಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ (Maha Kumbh Mela) ಆರಂಭವಾಗ್ತಿರುವ ಹೊತ್ತಲ್ಲೇ ದೇಶದಲ್ಲಿ ಹೆಚ್‌ಎಂಪಿವಿ ಸೋಂಕು ಪ್ರಕರಣ ಬೆಳಕಿಗೆ ಬಂದಿರೋದು ಉತ್ತರಪ್ರದೇಶ ಸರ್ಕಾರವನ್ನು ಆತಂಕಕ್ಕೆ ದೂಡಿದೆ. ಇದನ್ನೂ ಓದಿ: HMPV ಜಾಗತಿಕವಾಗಿ ಪರಿಚಲನೆಯಲ್ಲಿದೆ – ಐಸಿಎಂಆರ್ ಎಚ್ಚರಿಕೆ

    ಚೀನಾದಲ್ಲಿ (China) ಹೆಚ್‌ಎಂಪಿವಿ ಪ್ರಕರಣ ಕಳೆದ 10 ದಿನಗಳಲ್ಲಿ 600 ಪಟ್ಟು ಹೆಚ್ಚಾಗಿದೆ. ಹೀಗಾಗಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಕುಂಭಮೇಳದಲ್ಲಿ ಸೋಂಕು ಹಬ್ಬಬಹುದು ಎಂಬ ಆತಂಕವನ್ನು ಸಾಧುಗಳು ವ್ಯಕ್ತಪಡಿಸಿದ್ದಾರೆ. ಚೀನಾದಿಂದ ಬರುವ ವಿಮಾನಗಳನ್ನ ತಕ್ಷಣದಿಂದಲೇ ನಿಷೇಧಿಸಿ ಎಂದು ಕೇಂದ್ರವನ್ನು ಅಖಿಲ ಭಾರತ ಅಖಾರ ಪರಿಷತ್ ಆಗ್ರಹಿಸಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಎಸ್ಟೇಟ್ ಮ್ಯಾನೇಜರ್ ಮೇಲೆ ಅಕ್ರಮ ಬಾಂಗ್ಲಾ ವಲಸಿಗರಿಂದ ಕಲ್ಲು ತೂರಾಟ

    ಇನ್ನು, ಮಹಾಕುಂಭಮೇಳದಲ್ಲಿ ಈಗಾಗಲೇ 100 ಬೆಡ್‌ಗಳ ಆಸ್ಪತ್ರೆಯನ್ನು ರೆಡಿ ಮಾಡಲಾಗಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಮಧ್ಯೆ, ಮಹಾರಾಷ್ಟ್ರ ಸರ್ಕಾರ ಹೆಚ್‌ಎಂಪಿವಿ ಬಗ್ಗೆ ಮುಂಜಾಗ್ರತೆ ವಹಿಸಿ ಎಂದು ರಾಜ್ಯದ ಜನತೆಗೆ ತಿಳಿಸಿದೆ. ಈ ನಡುವೆ ಕೇಂದ್ರ ಸರ್ಕಾರ ಈಗಲೇ ಕ್ರಮ ಕೈಗೊಳ್ಳುವಂತೆ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣ – ಬಿಜೆಪಿ ಸತ್ಯಶೋಧನಾ ತಂಡದಿಂದ ಪರಿಶೀಲನೆ

  • HMPV ಜಾಗತಿಕವಾಗಿ ಪರಿಚಲನೆಯಲ್ಲಿದೆ – ಐಸಿಎಂಆರ್ ಎಚ್ಚರಿಕೆ

    HMPV ಜಾಗತಿಕವಾಗಿ ಪರಿಚಲನೆಯಲ್ಲಿದೆ – ಐಸಿಎಂಆರ್ ಎಚ್ಚರಿಕೆ

    ನವದೆಹಲಿ: ಕರ್ನಾಟಕ ಮತ್ತು ಗುಜುರಾತ್‌ನಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಪತ್ತೆಯಾದ ಬೆನ್ನಲೆ ಉನ್ನತ ವೈದ್ಯಕೀಯ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಸ್ಪಷ್ಟನೆ ನೀಡಿದ್ದು, ಭಾರತ ಸೇರಿದಂತೆ ಜಾಗತಿಕವಾಗಿ ವೈರಸ್ ಪರಿಚಲನೆಯಲ್ಲಿದೆ ಎಂದು ಎಚ್ಚರಿಸಿದೆ.

    ಉಸಿರಾಟದ ಕಾಯಿಲೆಗಳಲ್ಲಿ ಯಾವುದೇ ಸಂಭಾವ್ಯ ಹೆಚ್ಚಳವನ್ನು ನಿಭಾಯಿಸಲು ಭಾರತವು ಸುಸಜ್ಜಿತವಾಗಿದೆ ಎಂದು ಉನ್ನತ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ. ಇದನ್ನೂ ಓದಿ: Delhi Elections | ಗೃಹಲಕ್ಷ್ಮಿ ಮಾದರಿಯಲ್ಲಿ `ಪ್ಯಾರಿ ದೀದಿ’; ಮಹಿಳೆಯರಿಗೆ ಪ್ರತಿ ತಿಂಗಳು 2500 ರೂ. – `ಕೈʼ ಮೊದಲ ಗ್ಯಾರಂಟಿ!

    ಬೆಂಗಳೂರಿನಲ್ಲಿ ಎಚ್‌ಎಂಪಿವಿಯ ಎರಡೂ ಪ್ರಕರಣಗಳು ವರದಿಯಾಗುತ್ತಿದ್ದಂತೆ ಐಎಂಸಿಆರ್‌ನ ಈ ಹೇಳಿಕೆ ಬಂದಿದೆ. ಸೋಂಕಿತ 3 ತಿಂಗಳ ಮಗು ಡಿಸ್ಚಾರ್ಜ್ ಆಗಿದ್ದು, 8 ತಿಂಗಳ ಮಗು ಚೇತರಿಸಿಕೊಳ್ಳುತ್ತಿದೆ. ಆರೋಗ್ಯ ಇಲಾಖೆಯು ಇತರ ಪ್ರದೇಶಗಳು ಅಥವಾ ದೇಶಗಳಿಂದ ವೈರಸ್ ಬರುವುದನ್ನು ತಳ್ಳಿಹಾಕಿದೆ. ಸೋಂಕಿತ ಶಿಶುಗಳು ಮತ್ತು ಅವರ ಕುಟುಂಬಗಳು ಇತ್ತೀಚೆಗೆ ಯಾವುದೇ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ ಎಂದು ಹೇಳಿದರು. ಇದನ್ನೂ ಓದಿ: `ಕೈ’ಗೆ 60% ಕಮೀಷನ್ ಆರೋಪ: ಹೆಚ್‌ಡಿಕೆಗೆ ಬಿಜೆಪಿ ಸಾತ್ – ಸಿಎಂ ಸಚಿವರು ಟಕ್ಕರ್

    ಬಹು ಉಸಿರಾಟದ ವೈರಲ್ ರೋಗಕಾರಕಗಳ ವಾಡಿಕೆಯ ಕಣ್ಗಾವಲಿನ ಮೂಲಕ ಎರಡೂ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಅದು ಹೇಳಿದೆ. ಎಚ್‌ಎಂಪಿವಿ ಈಗಾಗಲೇ ಭಾರತವನ್ನು ಒಳಗೊಂಡಂತೆ ಜಾಗತಿಕವಾಗಿ ಚಲಾವಣೆಯಲ್ಲಿದೆ ಎಚ್‌ಎಂಪಿವಿಯೊಂದಿಗೆ ಸಂಬಂಧಿಸಿದ ಉಸಿರಾಟದ ಕಾಯಿಲೆಗಳ ಪ್ರಕರಣಗಳು ವಿವಿಧ ದೇಶಗಳಲ್ಲಿ ವರದಿಯಾಗಿದೆ ಎಂದು ಒತ್ತಿಹೇಳಲಾಗಿದೆ. ಇದಲ್ಲದೆ, ಐಸಿಎಂಆರ್ ಮತ್ತು ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ (ಐಡಿಎಸ್‌ಪಿ) ನೆಟ್ವರ್ಕ್‌ನ ಪ್ರಸ್ತುತ ಡೇಟಾವನ್ನು ಆಧರಿಸಿ, ಇನ್ಫ್ಲುಯೆನ್ಸ ತರಹದ ಕಾಯಿಲೆ (ಐಎಲ್‌ಐ) ಅಥವಾ ತೀವ್ರವಾದ ಉಸಿರಾಟದ ಕಾಯಿಲೆಯಲ್ಲಿ ಯಾವುದೇ ಅಸಾಮಾನ್ಯ ಉಲ್ಬಣವು ಕಂಡುಬಂದಿಲ್ಲ ಎಂದು ಐಸಿಎಂಆರ್ ಹೇಳಿದೆ.

    ಕೇಂದ್ರ ಆರೋಗ್ಯ ಸಚಿವಾಲಯವು ಲಭ್ಯವಿರುವ ಎಲ್ಲಾ ಕಣ್ಗಾವಲು ಚಾನೆಲ್‌ಗಳ ಮೂಲಕ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವಾಗ, ಐಸಿಎಂಆರ್ ವರ್ಷವಿಡೀ ಎಚ್‌ಎಂಪಿವಿ ಚಲಾವಣೆಯಲ್ಲಿರುವ ಪ್ರವೃತ್ತಿಯನ್ನು ಪತ್ತೆಹಚ್ಚುವುದನ್ನು ಮುಂದುವರಿಸುತ್ತದೆ ಎಂಬುದನ್ನು ಅದು ಗಮನಿಸಿದೆ.

    ಚೀನಾದಲ್ಲಿ ಪ್ರಕರಣಗಳ ಉಲ್ಬಣದ ನಂತರ ಎಚ್‌ಎಂಪಿವಿ ಮತ್ತು ಇತರ ಉಸಿರಾಟದ ವೈರಸ್‌ಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಕೇಂದ್ರವು ಈ ಹಿಂದೆ ಘೋಷಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ಇತರ ಆರೋಗ್ಯ ಸಂಸ್ಥೆಗಳ ಪ್ರತಿನಿಧಿಗಳು ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಜಂಟಿ ಮಾನಿಟರಿಂಗ್ ಗ್ರೂಪ್ ಅನ್ನು ನಡೆಸಿದರು. ಇದನ್ನೂ ಓದಿ: 40% ಆರೋಪಕ್ಕೆ ಕಾಂಗ್ರೆಸಿಗರು ಏನು ದಾಖಲೆ ಕೊಟ್ಟಿದ್ರು: ಬೊಮ್ಮಾಯಿ ಟಕ್ಕರ್

  • HMPV ವೈರಸ್ ಪತ್ತೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ: ಸಿದ್ದರಾಮಯ್ಯ

    HMPV ವೈರಸ್ ಪತ್ತೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ: ಸಿದ್ದರಾಮಯ್ಯ

    ಬೆಂಗಳೂರು: ರಾಜ್ಯದಲ್ಲಿ ಎರಡು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV)ವೈರಸ್ ಪತ್ತೆ ಹಿನ್ನೆಲೆಯಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು HMPV ಕೇಸ್ ಪತ್ತೆ ಆಗಿದೆ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಆರೋಗ್ಯ ಸಚಿವರಿಗೆ ಸೂಚನೆ ನೀಡಿದ್ದೇನೆ. ಈಗಾಗಲೇ ಸಚಿವರು ಸಭೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಿದೆ ಎಂದರು. ಇದನ್ನೂ ಓದಿ: ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ HMPV ಪತ್ತೆ – ದೃಢಪಡಿಸಿದ ICMR

     

    ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ಮಾಡುವ ವಿಚಾರ ಆರೋಗ್ಯ ಇಲಾಖೆ ನಿರ್ಧಾರ ಮಾಡುತ್ತದೆ. ಆರೋಗ್ಯ ಇಲಾಖೆ ಯಾವೆಲ್ಲ ಕ್ರಮ ಬೇಕೋ ಅ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ. HMPV ಅಪಾಯಕಾರಿ ಅಲ್ಲ. ಅದರೂ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ. ಆರೋಗ್ಯ ಇಲಾಖೆ ಏನೇನು ಕ್ರಮಕ್ಕೆ ಸೂಚನೆ ಕೊಡುತ್ತೋ ಸರ್ಕಾರ ಅ ಕ್ರಮಗಳನ್ನ ತೆಗೆದುಕೊಳ್ಳಲಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಚೀನಿ ವೈರಸ್ ಪತ್ತೆ| ಆರೋಗ್ಯ ಇಲಾಖೆ ಅಲರ್ಟ್ – ಏನು ಮಾಡಬೇಕು? ಏನು ಮಾಡಬಾರದು?

     

  • ಬೆಂಗಳೂರಿನಲ್ಲಿ ಚೀನಿ ವೈರಸ್ ಪತ್ತೆ| ಆರೋಗ್ಯ ಇಲಾಖೆ ಅಲರ್ಟ್ – ಏನು ಮಾಡಬೇಕು? ಏನು ಮಾಡಬಾರದು?

    ಬೆಂಗಳೂರಿನಲ್ಲಿ ಚೀನಿ ವೈರಸ್ ಪತ್ತೆ| ಆರೋಗ್ಯ ಇಲಾಖೆ ಅಲರ್ಟ್ – ಏನು ಮಾಡಬೇಕು? ಏನು ಮಾಡಬಾರದು?

    ಬೆಂಗಳೂರು: ನಗರದ 8 ತಿಂಗಳ ಮಗುವಿನಲ್ಲಿ (8 Month Old Baby) ಹೆಚ್‌ಎಂಪಿ ವೈರಸ್ (HMPV) ಪತ್ತೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ (Health Department) ಅಲರ್ಟ್ ಆಗಿದ್ದು ಜಿಲ್ಲಾವಾರು ಮಾಹಿತಿಯನ್ನು ಕೇಳಿದೆ.

    ಸರ್ಕಾರಿ ಅಥವಾ ಖಾಸಗಿ ಆಸ್ಫತ್ರೆಗಳಲ್ಲಿ ವೈರಸ್ ಪತ್ತೆಯಾದ ಬಗ್ಗೆ ಎಲ್ಲಾ ಡಿಹೆಚ್‌ಓಗಳಿಂದ ಆರೋಗ್ಯ ಇಲಾಖೆ ಮಾಹಿತಿ ಕೇಳಿದೆ. ಪ್ರತಿಯೊಂದು ಡೇಟಾ ಕೂಡ ಪತ್ತೆ ಮಾಡಬೇಕು. ವೈರಸ್ ಪತ್ತೆಯಾದ್ರೆ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಬೆಂಗಳೂರಿನ 8 ತಿಂಗಳ ಮಗುವಿನಲ್ಲಿ HMPV ವೈರಸ್‌ ಪತ್ತೆ

    ಏನು ಮಾಡಬೇಕು?
    – ಕೆಮ್ಮುವಾಗ ಅಥವಾ ಸೀನುವಾಗ, ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ನಿಂದ ಮುಚ್ಚಿಕೊಳ್ಳಿ.
    – ಕೈಗಳನ್ನು ಸಾಬೂನು ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‌ನಿಂದ ಹೆಚ್ಚಾಗಿ ತೊಳೆಯಿರಿ.
    – ಜನಸಂದಣಿ ಇರುವ ಸ್ಥಳಗಳನ್ನು ತಪ್ಪಿಸಿ.
    – ಜ್ವರ, ಕೆಮ್ಮು ಮತ್ತು ಸೀನುವಿಕೆ ಇದ್ದಲ್ಲಿ ಸಾರ್ವಜನಿಕ ಸ್ಥಳಗಳಿಂದ ದೂರವಿರಿ.
    – ಮನೆಯಲ್ಲಿಯೇ ಇರಿ ಮತ್ತು ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಇತರರೊಂದಿಗೆ ಸಂಪರ್ಕವನ್ನು ಮಿತಿಗೊಳಿಸಿ.
    – ಸಾಕಷ್ಟು ನೀರು ಕುಡಿಯಿರಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ.


    ಏನು ಮಾಡಬಾರದು?
    – ಟಿಶ್ಯೂ ಪೇಪರ್ ಮತ್ತು ಕೈ ಕರ್ಚೀಫ್ ಮರುಬಳಕೆ.
    – ಅನಾರೋಗ್ಯದ ಜನರೊಂದಿಗೆ ನಿಕಟ ಸಂಪರ್ಕ, ಟವೆಲ್, ಲಿನಿನ್ ಇತ್ಯಾದಿಗಳನ್ನು ಹಂಚಿಕೊಳ್ಳುವುದು.
    – ಕಣ್ಣು, ಮೂಗು ಮತ್ತು ಬಾಯಿಯನ್ನು ಆಗಾಗ್ಗೆ ಸ್ಪರ್ಶಿಸುವುದು.
    – ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು.
    – ವೈದ್ಯರನ್ನು ಸಂಪರ್ಕಿಸದೆ ಔಷಧಿ ಸೇವಿಸುವುದು.

  • ಬೆಂಗಳೂರಿನ 8 ತಿಂಗಳ ಮಗುವಿನಲ್ಲಿ HMPV ವೈರಸ್‌ ಪತ್ತೆ

    ಬೆಂಗಳೂರಿನ 8 ತಿಂಗಳ ಮಗುವಿನಲ್ಲಿ HMPV ವೈರಸ್‌ ಪತ್ತೆ

    ಬೆಂಗಳೂರು: ಸದ್ಯ ಚೀನಾದಲ್ಲಿ (China) ಹೆಚ್ಚು ಸದ್ದು ಮಾಡುತ್ತಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್(HMPV) ಬೆಂಗಳೂರಿನ (Bengaluru) 8 ತಿಂಗಳ ಮಗುವಿನಲ್ಲಿ (8 Month Baby) ಪತ್ತೆಯಾಗಿದೆ.

    ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿನಲ್ಲಿ ಪತ್ತೆಯಾಗಿದೆ. ಮಗುವಿಗೆ ಜ್ವರ (Fever) ಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಈ ವೇಳೆ ರಕ್ತ ಪರೀಕ್ಷೆ ಮಾಡಿಸಿದಾಗ ಹೆಚ್‌ಎಂವಿಪಿ ವೈರಸ್ ಇರುವುದು ದೃಢಪಟ್ಟಿದೆ.

    ಸದ್ಯಕ್ಕೆ ಒಂದು ಕೇಸ್ ಪತ್ತೆಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಕಡೆ ಎಲ್ಲೆಲ್ಲಿ ಈ ರೀತಿಯ ಸೋಂಕು ಪತ್ತೆಯಾಗಿದೆ ಎಂಬುದರ ಮಾಹಿತಿ ಕಲೆ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ. ಇದನ್ನೂ ಓದಿ: ಮುಂದಿನ 3 ದಿನ ಕರ್ನಾಟಕದಲ್ಲಿ ಶೀತಗಾಳಿ ಎಚ್ಚರಿಕೆ – ತಾಪಮಾನ ಇನ್ನಷ್ಟು ಕುಸಿತ

    ಆತಂಕ ಬೇಡ:
    ಚೀನಾದಲ್ಲಿ(China Virus) ಕಂಡು ಬಂದಿರುವ HMPV ಹರಡುವ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ (DGHS) ಅಧಿಕಾರಿ ಡಾ ಅತುಲ್ ಗೋಯೆಲ್ ಕಳೆದ ವಾರ ತಿಳಿಸಿದ್ದರು.

    ಚಳಿಗಾಲದಲ್ಲಿ ಉಸಿರಾಟದ ವೈರಸ್ ಸೋಂಕುಗಳು ಉಲ್ಬಣವಾಗುವುದು ಸಾಮಾನ್ಯ. ಯಾರಿಗಾದರೂ ಕೆಮ್ಮು ಮತ್ತು ಶೀತ ಇದ್ದರೆ ಅವರು ಇತರ ಜನರೊಂದಿಗೆ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಬೇಕು. . ಎಲ್ಲಾ ಉಸಿರಾಟದ ಸೋಂಕುಗಳ ವಿರುದ್ಧ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಸಾಕು. ಕೆಮ್ಮು, ಶೀತ ಬಂದಾಗ ಪ್ರತ್ಯೇಕ ಕರವಸ್ತ್ರ ಅಥವಾ ಟವೆಲ್ ಬಳಸಿ ಎಂದು ಸಲಹೆ ನೀಡಿದ್ದರು. ಇದನ್ನೂ ಓದಿ: ಮಾರುತಿಯ 40 ವರ್ಷದ ಓಟಕ್ಕೆ ಟಾಟಾ ಬ್ರೇಕ್‌ – ಪಂಚ್‌ ದೇಶದ ನಂ.1 ಕಾರು!

    ನಾವು ದೇಶದಲ್ಲಿ ಉಸಿರಾಟಕ್ಕೆ ಸಂಬಂಧಿಸಿದಂತೆ ದಾಖಲಾದ ರೋಗಿಗಳ ಡೇಟಾವನ್ನು ವಿಶ್ಲೇಷಿಸಿದ್ದೇವೆ. ಡಿಸೆಂಬರ್ 2024ರ ಡೇಟಾದಲ್ಲಿ ಯಾವುದೇ ಗಣನೀಯ ಹೆಚ್ಚಳ ಕಂಡುಬಂದಿಲ್ಲ. ನಮ್ಮ ಯಾವುದೇ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೇಸ್‌ ದಾಖಲಾದ ಬಗ್ಗೆ ವರದಿಯಾಗಿಲ್ಲ ಎಂದು ಹೇಳಿದ್ದರು.

    HMPVಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ, ಆದ್ದರಿಂದ ಅದರ ಹರಡುವಿಕೆಯನ್ನು ನಿಯಂತ್ರಿಸಲು ತಡೆಗಟ್ಟುವಿಕೆ ಮುಖ್ಯವಾಗಿದೆ. ಚೀನಾದಲ್ಲಿ HMPV ಏಕಾಏಕಿ ಹರಡಿರುವ ಬಗ್ಗೆ ಸುದ್ದಿಗಳಿವೆ. ಇದು ಯಾವುದೇ ಇತರ ಉಸಿರಾಟದ ವೈರಸ್‌ನಂತೆ ಸಾಮಾನ್ಯ ಶೀತವನ್ನು ಉಂಟುಮಾಡುತ್ತದೆ ಮತ್ತು ವಯಸ್ಸಾದವರಲ್ಲಿ ಮತ್ತು ಚಿಕ್ಕವರಲ್ಲಿ ಇದು ಜ್ವರಕ್ಕೆ ಕಾರಣವಾಗಬಹುದು ಎಂದು ವಿವರಿಸಿದ್ದರು.

    ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಉಸಿರಾಟದ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಅಂತರರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದೆ.