ಬೆಳಗಾವಿ: ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿ ಕಾರ್ಯಕ್ರಮಕ್ಕೆ ಐಸಿಸ್ ನಂಟು ಇದೆ ಎಂದು ಶಾಸಕ ಯತ್ನಾಳ್ (Basangouda Patil Yatnal) ಆರೋಪಕ್ಕೆ ಸಚಿವ ಹೆಚ್‌ಕೆ ಪಾಟೀಲ್ (HK Patil) ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿಯ (Belagavi) ಕೊಂಡಸಕೊಪ್ಪದಲ್ಲಿ ಸಚಿವ ಹೆಚ್‌ಕೆ ಪಾಟೀಲ್ ಪ್ರತಿಕ್ರಿಯೆ ನೀಡಿ, ಸಂತ ಸೂಫಿಗಳ ಪ್ರಭಾವಕ್ಕೆ ಒಳಗಾದವರು ಉಗ್ರಗಾಮಿ ಆಗ್ತಾರಾ? ಭ್ರಾತೃತ್ವ ಭಾವನೆ ಬೆಳೆಸಲು ಪ್ರಯತ್ನ ಮಾಡುವವರು, ಸಂತರನ್ನು ಸಮ ಭಾವನೆಯಿಂದ ನೋಡುವವರು, ಟೆರರಿಸ್ಟ್ ಮತ್ತು ಉಗ್ರಗಾಮಿ ಅಂತ ಹೇಳುವುದು ಸರಿಯಲ್ಲ. ತಪ್ಪು ಗ್ರಹಿಕೆ ಮತ್ತು ಮಾಹಿತಿ ಕೊರತೆ ಮೂಲಕ ಹಾಗೆ ಹೇಳುವುದು ಸರಿಯಲ್ಲ ಎಂದರು.
ಇದೇ ವೇಳೆ ಕೊಂಡಸಕೊಪ್ಪದ ಪ್ರತಿಭಟನೆ ಸ್ಥಳದಲ್ಲಿ ಅಕ್ರಮ ಸಾರಾಯಿ ನಿಷೇಧಕ್ಕೆ ಮಹಿಳೆಯ ಒತ್ತಾಯದ ಬಗ್ಗೆ ಮಾತನಾಡಿ, ಅಕ್ರಮ ಮಾರಾಟದ ಬಗ್ಗೆ ತಕರಾರು ಮಾಡಿದ್ರು. ಆಗ ನಾನು ನೀನು ಹೆಣ್ಣು ಮಗಳಮ್ಮ, ನೀನು ಮದ್ಯ ನಿಷೇಧಕ್ಕೆ ಒತ್ತಾಯ ಮಾಡು. ಕೇವಲ ಅಕ್ರಮ ಮಾರಾಟಕ್ಕೆ ಒತ್ತು ಕೊಡಬೇಡ ಅಂತ ಹೇಳಿದೆ ಎಂದರು. ಇದನ್ನೂ ಓದಿ: ಸಿಎಂ ಐಸಿಸ್ ಉಗ್ರನ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ: ಯತ್ನಾಳ್
ಗದಗ: ಜಿಲ್ಲೆಯಲ್ಲಿ ಹೆಚ್ಚು ಉದ್ಯಮಗಳು ಸ್ಥಾಪನೆಯಾಗುವುದರ ಜೊತೆಗೆ ಬೆಳವಣಿಗೆಯಾಗಬೇಕಾಗಿದೆ. ಸಣ್ಣ ಕೈಗಾರಿಕೆ ಸಚಿವರ ಮಾಹಿತಿ ಪ್ರಕಾರ ದೊಡ್ಡ ಪ್ರಮಾಣದ ಇಂಡಸ್ಟ್ರಿಯಲ್ ಎಸ್ಟೇಟ್ (Industrial Estate) ನಿರ್ಮಾಣ ಮಾಡಲು ಸಿದ್ಧತೆ ನಡೆಸಲಾಗಿದ್ದು, 216 ಎಕರೆ ಭೂಮಿಯನ್ನು ಗುರುತಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌ಕೆ ಪಾಟೀಲ್ (HK Patil) ಹೇಳಿದರು.
ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ, ಜಿಲ್ಲಾ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಕೈಗಾರಿಕಾ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಗದಗ ಉತ್ಸವ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಉತ್ಪಾದನಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದ ಗದಗ ಜಿಲ್ಲೆಯು ಇಂದು ಉತ್ಪಾದನಾ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಅದರ ಪರಿಣಾಮ ಉದ್ಯೋಗ ಸೃಷ್ಟಿಯಲ್ಲೂ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲೆ ಈ ಮೊದಲು ಜಿನ್ನಿಂಗ್, ಸ್ಪಿನ್ನಿಂಗ್, ಕಾಟನ್ ಮಿಲ್, ರವಾ ಮಿಲ್, ಆಯಿಲ್ ಮಿಲ್‌ನಂತಹ ಉತ್ಪಾದನಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿತ್ತು. ಆದರೆ ಇಂದು ಸ್ಥಳೀಯರು ಕೈಗಾರಿಕಾ, ಉದ್ಯಮ, ಉತ್ಪಾದನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಉತ್ಪಾದನಾ ವ್ಯವಸ್ಥೆಗೆ ಕೈ ಹಾಕುತ್ತಿಲ್ಲ. ಹೀಗಾಗಿ ಉತ್ಪಾದನೆ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದೇವೆ ಎಂದರು. ಇದನ್ನೂ ಓದಿ: ಇಂದು ಮಧ್ಯರಾತ್ರಿಯಿಂದ್ಲೇ ಬಂದ್ ಬಿಸಿ- ಸೋಮವಾರ ಆಟೋ, ಟ್ಯಾಕ್ಸಿ ಸಿಗೋದು ಅನುಮಾನ
ಉತ್ಪಾದನಾ ಕೈಗಾರಿಕಾ ಸ್ಥಾಪನೆ ಮಾಡಲು ಸ್ಥಳೀಯರು ಹೆಚ್ಚು ಹೆಚ್ಚು ಮುಂದೆ ಬರಬೇಕು. ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಕೊಂಡಾಗ ಮಾತ್ರ ಉದ್ಯೋಗ ಸೃಷ್ಟಿಯಾಗಲು ಸಾಧ್ಯವಾಗುತ್ತದೆ. ಈಗಾಗಲೇ ಸರ್ಕಾರ ಸಣ್ಣ ಕೈಗಾರಿಕೋದ್ಯಮಿಗಳಿಗೂ 4% ಬಡ್ಡಿ ದರದಲ್ಲಿ 5 ಕೋಟಿ ರೂ. ಹಣವನ್ನು ನೀಡುತ್ತಿದೆ. ಇಂತಹ ಸೌಲಭ್ಯಗಳನ್ನು ಪಡೆದುಕೊಂಡು ಉದ್ಯಮಿಗಳು ಹೊಸ ಉದ್ಯಮಗಳನ್ನು ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಜಿಎಸ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಎಸ್‌ವಿ ಸಂಕನೂರ್ ಮಾತನಾಡಿದರು. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆಎಸ್ ಪಾಟೀಲ್, ವೀರೇಶ್ ಕೂಗು, ಶರಣಬಸಪ್ಪ ಗುಡಿಮನಿ, ವಿಜಯಕುಮಾರ್ ಹಿರೇಮಠ, ಸದಾಶಿವಯ್ಯ ಮದರಿಮಠ, ವಿಕೆ ಗುರುಮಠ, ದಾನಯ್ಯ ಗಣಾಚಾರಿ ಸೇರಿ ಅನೇಕರು ಇದ್ದರು. ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಧುಸೂದನ್ ಪುಣೇಕರ್ ಸ್ವಾಗತಿಸಿದರು. ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದನ್ನೂ ಓದಿ: ಭಾರತ ಎಂಬ ಮರುನಾಮಕರಣವನ್ನು ವಿರೋಧಿಸುವವರು ದೇಶ ತೊರೆಯಬಹುದು: ಬಿಜೆಪಿ ಎಂಪಿ
ಗದಗ: ಡಿಸೆಂಬರ್‌ನಲ್ಲಿ ಬಿಜೆಪಿ (BJP) ಲೋಕಸಭೆ ಚುನಾವಣೆಯನ್ನು (Lok Sabha Election) ನಡೆಸಬಹುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆಗೆ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಹೆಚ್‌ಕೆ ಪಾಟೀಲ್ (HS Patil) ರಿಯಾಕ್ಟ್ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನವೆಂಬರ್, ಡಿಸೆಂಬರ್, ಜನವರಿ, ಮೇ ಯಾವಾಗಾದ್ರೂ ಚುನಾವಣೆ ಮಾಡಲಿ. ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಕರ್ನಾಟಕದ ಮತದಾರರ ಮನಸ್ಸು ತಿಳಿದ ಮೇಲೆ ಗೊತ್ತಾಗಿದೆ. ಚುನಾವಣೆ ಯಾವಾಗಾದ್ರೂ ಮಾಡಲಿ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ. ಇದಕ್ಕಾಗಿಯೇ ನಮ್ಮ ಪಕ್ಷಕ್ಕೆ ನಾಯಕರು, ಕಾರ್ಯಕರ್ತರು ಹೇಗೆಲ್ಲಾ ಧಾವಿಸಿ ಬರ್ತಿದ್ದಾರೆ. ಇದು ಉತ್ತಮವಾದ, ಆರೋಗ್ಯಕರವಾದ ರಾಜಕೀಯ ಬೆಳವಣಿಗೆ ಎಂದರು.
ಶಿವರಾಮ ಹೆಬ್ಬಾರ್, ಶಂಕರ್ ಪಾಟೀಲ್ ಮುನೇನಕೊಪ್ಪ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ಮನಸ್ಸು ಅರಿತವರು, ಸಮಾಜವಾದಿ ತತ್ವದಲ್ಲಿ ವಿಶ್ವಾಸ ಇರುವವರು, ಜಾತ್ಯತೀತ ಮನೋಭಾವದವರು, ಬಡವರ ಬಗ್ಗೆ ಕಳಕಳಿ ಉಳ್ಳವರು ನಮ್ಮ ಪಕ್ಷಕ್ಕೆ ಬರಲು ಸ್ವಾಗತವಿದೆ. ಯಾರು ಸಂಪರ್ಕ ಮಾಡಿದ್ದಾರೆ, ಯಾರು ಮಾಡಿಲ್ಲ ಎಂಬುದನ್ನು ಸದ್ಯ ಮಾಧ್ಯಮದ ಬಳಿ ಹೇಳಿಕೊಳ್ಳುವ ವಿಷಯ ಇದಲ್ಲ. ಒಟ್ಟಿನಲ್ಲಿ ಬಹಳಷ್ಟು ನಾಯಕರು ನಮ್ಮ ಜೊತೆಗಿದ್ದಾರೆ ಎಂದರು. ಇದನ್ನೂ ಓದಿ: ಎರಡೂ ಕಡೆ ಬಾಗಿಲು ಇರುವ ಬಸ್ ಇದ್ದಂತೆ ನಮ್ಮ ಪಕ್ಷ: ಸಂತೋಷ್ ಲಾಡ್
ಗೃಹಲಕ್ಷ್ಮೀ ಯೋಜನೆ ನಾಳೆಯಿಂದ ಜಾರಿಯಾಗುತ್ತಿರುವುದು ಹೆಮ್ಮೆಯ ವಿಷಯ. ಯುವ ನಾಯಕ ರಾಹುಲ್ ಗಾಂಧಿ ಅವರು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಗೆ ಆಗಮಿಸಲಿದ್ದಾರೆ. ದೇಶದಲ್ಲಿ ಅತ್ಯಂತ ದಕ್ಷವಾದ, ವಿಸ್ತೃತವಾದ ಅತ್ಯಂತ ಪ್ರಯೋಜನಕಾರಿ ಯೋಜನೆ ಇದಾಗಿದೆ. ಒಂದೇ ಗಂಟೆ, ಒಂದೇ ದಿನ ಫಲಾನುಭವಿಗಳಿಗೆ ಹಣ ಮುಟ್ಟುವ ವ್ಯವಸ್ಥೆ ನಮ್ಮ ರಾಜ್ಯದಲ್ಲಿ ಸಂಪೂರ್ಣವಾಗಿ ಮಾಡಿದ್ದೇವೆ. ಈ ಕೆಲಸದಲ್ಲಿ ರಾಜ್ಯದಲ್ಲಿಯೇ ಗದಗ ಜಿಲ್ಲೆ ಮುಂಚೂಣಿಯಲ್ಲಿರುವಂತ ಕೆಲಸಮಾಡಿದ್ದೇವೆ ಎಂದರು.
ನಮ್ಮ ಶಕ್ತಿ ಬಲಗೊಳಿಸುವ ಮೂಲಕ ರಾಷ್ಟ್ರ ಇವತ್ತು ಬಡತನ ನಿರ್ಮೂಲನೆ ಶಬ್ಧ ಸಹ ಜಾರಿಗೊಳಿಸಿದ್ದೇವೆ ಎಂಬ ಹೆಮ್ಮೆ ನಮ್ಮ ಪಕ್ಷ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿದೆ. ಈ ವೇಳೆ ಕಾಂಗ್ರೆಸ್ ಮುಖಂಡರಾದ ಬಿಬಿ ಅಸೂಟಿ, ವಾಸಣ್ಣ ಕುರುಡಗಿ, ಅನಿಲ ಗರಗ, ಫಾರುಕ್ ಹುಬ್ಬಳ್ಳಿ, ಅಶೋಕ ಮಂದಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಮೋದಿ ಹೆಸರು ಹೇಳಿಕೊಂಡು ಗೆಲ್ಲೋದಲ್ಲ – ಸ್ವಪಕ್ಷದ ವಿರುದ್ಧ ಮತ್ತೆ ಗುಡುಗಿದ ರೇಣುಕಾಚಾರ್ಯ
ಗದಗ: ಶೋಭಾ ಕರಂದ್ಲಾಜೆ (Shobha Karandlaje) ಸತ್ಯ ಹೇಳುವುದು ತೀರಾ ಕಡಿಮೆ. ಈ ಪ್ರಕರಣದಲ್ಲಿ ಯಾರಿದ್ದಾರೆ ಅವರ ಹೇಳಿಕೆ ತೆಗೆದುಕೊಳ್ಳಲಾಗಿದೆ ಎಂದು ಕಾನೂನು, ನ್ಯಾಯ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್‌ಕೆ ಪಾಟೀಲ್ (H.K.Patil) ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ತಿರಗೇಟು ನೀಡಿದ್ದಾರೆ.
ಉಡುಪಿ (Udupi) ವಿಡಿಯೋ (Video) ಚಿತ್ರೀಕರಣದ ಕುರಿತು ನಗರದ ಬಿಂಕದಕಟ್ಟೆ ಮೃಗಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವೆ ಶೋಭಾ ಪ್ರಕಾರ ವರ್ಷದಿಂದ ತಂತ್ರಗಾರಿಕೆ ನಡೆಯುತ್ತಿದ್ದರೆ ಆಗ ನೀವು ಏನು ಮಾಡ್ತಿದ್ರಿ? ಒಂದು ವರ್ಷ ನಿಮ್ಮದೇ ಸರ್ಕಾರ ಇದ್ದರೂ ಯಾಕೆ ಸುಮ್ಮನಿದ್ರಿ? ಇಂಟಲಿಜೆನ್ಸ್, ಪೊಲೀಸ್ ಇಲಾಖೆ ನಿಮ್ಮ ಕೈಯಲ್ಲಿ ಇತ್ತಲ್ವಾ? ಯಾಕೆ ಸುಮ್ಮನಿದ್ರಿ? ನಾವು ಬಂದು ಎರಡು ತಿಂಗಳಲ್ಲಿ ಎಲ್ಲಾ ಪತ್ತೆ ಮಾಡಿದೆವು. ಸಣ್ಣ ವಯಸ್ಸಿನವರ ಇಂತಹ ನಗೆಪಾಟಲಿಗೆ ಸಮಾಜ ಒಪ್ಪಲ್ಲ, ಯಾರೂ ಒಪ್ಪಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಪ್ರದೀಪ್ ಈಶ್ವರ್ Vs ಸುಧಾಕರ್ ಟಾಕ್‍ಫೈಟ್ – ಹಾಲಿ, ಮಾಜಿ ಶಾಸಕರ ಬೆಂಬಲಿಗರ ವಿರುದ್ದ ಎಫ್‌ಐಆರ್ ದಾಖಲು
ಗ್ಯಾರಂಟಿ ಯೋಜನೆಗಳ (Guarantee Scheme) ಮೂಲಕ ಮತದಾರರಿಗೆ ಆಮಿಷ ಆರೋಪಕ್ಕೆ ಸಿಎಂಗೆ ಹೈಕೋರ್ಟ್ (High Court) ನೋಟಿಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಬಗ್ಗೆ ನಮಗೂ ಅರ್ಜಿ ಬಂದಿದೆ. ಗ್ಯಾರಂಟಿ, ವಚನ ಕೊಡುವುದು, ಮಾತು ಕೊಡುವುದು ಚುನಾವಣೆಯಲ್ಲಿ ವಿಶೇಷವಾದದ್ದು. ಚುನಾವಣೆ ಆಯೋಗದವರು ಕ್ರಮ ತೆಗೆದುಕೊಳ್ಳುವುದಾದರೇ ಮೊದಲು ಧರ್ಮ, ಜಾತಿ ಹೆಸರಿನ ಮೇಲೆ ಹಣ ಪೋಲು ಮಾಡುತ್ತಿರುವ ಬಗ್ಗೆ ಕ್ರಮ ತೆಗೆದುಕೊಳ್ಳಲಿದೆ. ಚುನಾವಣೆಗಳ ಬಗ್ಗೆ ಗಂಭೀರವಾದ ಆಲೋಚನೆ, ಏನು ಕ್ರಮ ತೆಗೆದುಕೊಳ್ಳಬೇಕು ಅದರ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಜೈವಿಕ ತಂತ್ರಜ್ಞಾನ ನೀತಿ ಅಳವಡಿಕೆಯಿಂದ ಜೈವಿಕ ತಂತ್ರಜ್ಞಾನ ಕ್ಞೇತ್ರ ಅಭಿವೃದ್ಧಿ: ಪ್ರಿಯಾಂಕ್ ಖರ್ಗೆ
– ದಲ್ಲಾಳಿಗಳಿಂದ ರಾಜಕಾರಣಿಗಳ ಪಾಸ್ ದುರ್ಬಳಕೆ- ಹೆಚ್.ಕೆ ಪಾಟೀಲ್ ಆರೋಪ
– ಮಾಫಿಯಾ ದಂಧೆ ಮಾಡೋಕೆ ದಲ್ಲಾಳಿಗಳು ಬರ್ತಿದ್ದಾರಾ – ಮುನಿರಾಜು ಗೌಡ ಪ್ರಶ್ನೆ
ಬೆಂಗಳೂರು: ವಿಧಾನ ಪರಿಷತ್ (Vidhan Parishad) ಸದಸ್ಯರಿಗೆ ವಿಧಾನಸೌಧದಲ್ಲಿ ವಾಹನಗಳ ಪಾರ್ಕಿಂಗ್‌ಗೆ (Vidhana Soudha Parking) ಸಮಸ್ಯೆ ಆಗುತ್ತಿರುವ ಬಗ್ಗೆ ಕಲಾಪದಲ್ಲಿ ಚರ್ಚಿಸಲಾಯಿತು. ಪ್ರಶ್ನೋತ್ತರ, ಶೂನ್ಯವೇಳೆ ಅವಧಿ ಮುಗಿದ ಕೂಡಲೇ ಬಿಜೆಪಿಯ ಡಿ.ಎಸ್ ಅರುಣ್ ವಿಷಯ ಪ್ರಸ್ತಾಪ ಮಾಡಿದರು.
ನಮಗೆ ವಿಧಾನಸೌಧ (Vidhana Soudha) ಮತ್ತು ಶಾಸಕರ ಭವನದಲ್ಲಿ ಪಾರ್ಕಿಂಗ್‌ಗೆ ಸಮಸ್ಯೆ ಇದೆ. ಕಾರ್ ಪಾರ್ಕಿಂಗ್ ಮಾಡಲು ಆಗ್ತಿಲ್ಲ. ವಿಧಾನಸೌಧದಲ್ಲಿ ಯಾರ್ಯಾರೋ ಎಲ್ಲೆಲ್ಲೋ ಕಾರು ನಿಲ್ಲಿಸುತ್ತಾರೆ. ಇದರಿಂದ ನಮಗೆ ಸಮಸ್ಯೆ ಆಗ್ತಿದೆ. ಪಾಸ್ ಇಲ್ಲದೇ ಇರೋರ ಕಾರ್ ಕೂಡಾ ಪಾರ್ಕಿಂಗ್ ಆಗ್ತಿದೆ. ಇದರಿಂದ ಶಾಸಕರಾದ ನಮಗೆ ಸಮಸ್ಯೆ ಆಗ್ತಿದೆ ಅಂತಾ ಸಭಾಪತಿಗಳ ಗಮನಕ್ಕೆ ತಂದರು.
ಬಳಿಕ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್ (HK Patil), ಪಾರ್ಕಿಂಗ್ ಸಮಸ್ಯೆ ಇರೋದು ನಿಜ. ಇಲ್ಲಿರೋ ಹೊಟೇಲ್ ನಲ್ಲಿ ಹೋಗಿ ಬರೋದಕ್ಕೂ ಸಮಸ್ಯೆ ಆಗಿದೆ. ಹೀಗಾಗಿ ಸಭಾಪತಿಗಳ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಮಾಡಿ ಈ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಈ ವೇಳೆ ಜೆಡಿಎಸ್‌ನ ಶರವಣ, ಕಾರ್ ಪಾರ್ಕಿಂಗ್ ಗೆ QR ಕೋಡ್ ಜಾರಿ ಮಾಡಿ ಅಂತಾ ಒತ್ತಾಯಿಸಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಹೆಚ್.ಕೆ ಪಾಟೀಲ್, ವಿಧಾನಸೌಧದಲ್ಲಿ ರಾಜಕಾರಣಿಗಳ ಪಾಸ್ ಅನ್ನ ಬಳಕೆ ಮಾಡೋ ದಲ್ಲಾಳಿಗಳು ಇದ್ದಾರೆ. ಇದಕ್ಕೆ ಕಡಿವಾಣ ಹಾಕೋ ಕೆಲಸ ಮಾಡಬೇಕು. ಇದಕ್ಕೆ ಕ್ರಮ ತೆಗೆದುಕೊಳ್ಳೋಣ ಎಂದರು.
ನಂತರ ಬಿಜೆಪಿ ಸದಸ್ಯ ತುಳಿಸಿ ಮುನಿರಾಜು ಗೌಡ, ದಲ್ಲಾಳಿಗಳು ಅಂದ್ರೆ ಯಾಕೆ ಬರ್ತಿದ್ದಾರೆ. ವರ್ಗಾವಣೆ ದಂಧೆ ಮಾಡೋಕೋ, ಭೂ ಮಾಫಿಯಾ ದಂಧೆ ಮಾಡೋಕೆ ಬರ್ತಿದ್ದಾರೆ ಅಂತಾ ಹೇಳಿ. ಯಾರು ದಲ್ಲಾಳಿಗಳು ಹೇಳಬೇಕು ಎಂದು ಒತ್ತಾಯಿಸಿದ್ರು. ಇದನ್ನೂ ಓದಿ: ಎಲ್ಲಾ ಜೈನ ಮುನಿಗಳಿಗೂ ರಕ್ಷಣೆ ಕೊಡಬೇಕು: ಸುನಿಲ್ ಕುಮಾರ್ ಒತ್ತಾಯ
ಇದಕ್ಕೆ ಆಕ್ರೋಶಗೊಂಡ ಹೆಚ್.ಕೆ ಪಾಟೀಲ್, ಪಟ್ಟಿ ಕೊಡಿ ಅಂದ್ರೆ ಕೊಡ್ತೀನಿ. ಹೆಸರು ಹೇಳು ಅಂದರು ಹೇಳುತ್ತೇನೆ. ಎಲ್ಲಾ ಕೆಲಸದಲ್ಲೂ ದಳ್ಳಾಳಿಗಳು ಇರ್ತಾರೆ. ಇದನ್ನ ಸರಿ ಮಾಡೋದಕ್ಕೆ ನಾವು ಕ್ರಮ ತೆಗೆದುಕೊಳ್ಳೋಣ. ಕೊನೆದಾಗಿ ಸಭೆ ಮಾಡಿ ಸಮಸ್ಯೆ ಪರಿಹಾರ ಮಾಡೋಣ ಅಂತ ಸಭಾಪತಿಗಳು ತಿಳಿಸಿ ಚರ್ಚೆಗೆ ಅಂತ್ಯ ಹಾಡಿದ್ರು.
ಗದಗ: ಅಕ್ಕಿ ಕೊಡಲು ಬಹಳ ಪ್ರಯತ್ನ ಮಾಡಿದ್ವಿ. ಆದರೆ ಆಗಲಿಲ್ಲ. ಅದಕ್ಕೆ ಬಿಜೆಪಿಗರು ಕಲ್ಲು ಹಾಕಿದ್ರು. ಅಕ್ಕಿ ಬದಲಾಗಿ ಫಲಾನುಭವಿಗಳ ಖಾತೆಗೆ ಹಣ ಹಾಕೋ ನಿರ್ಧಾರ ಮಾಡಿದ್ದೇವೆ. ಆದರೆ ಈಗ ಮಾರ್ಕೆಟ್ ದರ 60 ರೂ. ಕೊಡಿ ಎಂದು ಜನರ ಮನಸ್ಸು ಕೆಡಿಸುವ ಕೆಲಸ ಮಾಡಬೇಡಿ ಎಂದು ಕಾನೂನು, ನ್ಯಾಯ, ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಹೆಚ್‌ಕೆ ಪಾಟೀಲ್ (HK Patil) ಹೇಳಿದರು.
ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್ ಪ್ರಾರ್ಥನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಿಗದಿ ಪಡಿಸಿದ ದರ ನೀಡುತ್ತೇವೆ ಎಂದರೂ ಕೇಂದ್ರಕ್ಕೆ ಕರ್ನಾಟಕದ ಬಡವರ ಬಗ್ಗೆ ಅನುಕಂಪ ಮೂಡಲಿಲ್ಲ. ಅನ್ನಭಾಗ್ಯ (Anna Bagya Yojana) ಹೇಗಾದ್ರೂ ಮಾಡಿ ನಿಲ್ಲಿಸಬೇಕು ಎಂಬುದರ ಬಗ್ಗೆ ಲಕ್ಷ್ಯ ವಹಿಸುತ್ತಿದ್ದಾರೆಯೇ ವಿನಃ ಅದಕ್ಕೆ ಸಹಕಾರ, ಬಡವರಿಗೆ ಅನುಕೂಲದ ಮಾತು ಬಿಜೆಪಿಗರ ಬಾಯಿಂದ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ಕಿ ಕೆಜಿಗೆ 60 ರೂ. ಕೊಡುವ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮಾರುಕಟ್ಟೆಯಲ್ಲಿ 60 ರೂ. ಇದೆಯಾ? ಜವಾಬ್ದಾರಿ ಸ್ಥಾನದಲ್ಲಿರುವ ಬೊಮ್ಮಾಯಿ ಸ್ಪಷ್ಟಪಡಿಸಬೇಕು. ಬೊಮ್ಮಾಯಿ ಅವರು ಮಾರುಕಟ್ಟೆಗೆ ಹೋಗಿ ನೋಡಿ. ಆಗ ಅಕ್ಕಿಯಲ್ಲಿ ಕಲ್ಲು ಹಾಕಿದ್ರಿ, ಈಗ ಹಣ ಕೊಡುವುದರಲ್ಲೂ ಜನರ ಮನಸ್ಸು ಕೆಡಿಸುವ ಕೆಲಸ ಮಾಡ್ತಿದ್ದಿರಾ? ಎಫ್‌ಸಿಐ ನವರು ಖಾಸಗಿಯವರಿಗೆ ಕೊಡುವುದು ಮಾರ್ಕೆಟ್ ದರ ಅಲ್ವಾ? 60 ರೂ. ಇದ್ರೂ ಖಾಸಗಿಯವರಿಗೆ 32 ರೂ. ಯಾಕೆ ಕೊಡ್ತಿರಿ? ಅದರ ಬಗ್ಗೆ ಸ್ಪಷ್ಟನೆ ನೀಡಿ. ಸುಳ್ಳಿಗೂ ಒಂದು ಮಿತಿ ಇದೆ. ಒಂದು ತಿಂಗಳ ಹಿಂದೆಯೇ ಜನರು ನಿಮಗೆ ಉತ್ತರ ಕೊಟ್ಟಿದಾರೆ. ಇನ್ನು ಮುಂದಾದರೂ ಪಾಠ ಕಲಿಯಿರಿ ಎಂದು ಟಾಂಗ್ ನೀಡಿದರು.
ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡ್ತಿಲ್ಲ. ಅದು ಆಹಾರ ಹಕ್ಕು ಕಾನೂನನ್ನು ಮನಮೋಹನ್ ಸಿಂಗ್ ಮಾಡಿದ್ರು. ಆ ಕಾನೂನು ಹಕ್ಕಿನನ್ವಯ ನಮ್ಮ ಹಕ್ಕಾಗಿ ಬರುವ ಅಕ್ಕಿ ಕೊಡುತ್ತೇವೆ ಎಂದು ತಿರುಚಿದರು. ಇನ್ನು ಧಾನ್ಯಗಳ ಬೆಲೆ ಏರಿಕೆಗೆ ಕೇಂದ್ರ ಕಾರಣ ಎಂದರು. ನಾಚಿಕೆ ಆಗಬೇಕು, ಬಡವರಿಗೆ ಇಷ್ಟೊಂದು ದ್ರೋಹನಾ? ನಿಮ್ಮ ನೀತಿ ಏನು? ನಿಮ್ಮ ವರ್ತನೆ, ನಿಲುವುಗಳನ್ನು ಜನ ಗಂಭೀರವಾಗಿ ಗಮನಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯಗೆ ನೋಟಿಸ್
ಬೆಂಗಳೂರು: ಕಾಂಗ್ರೆಸ್ ಸರ್ಕಾರದ (Congress Government) 5 ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ (Annabhagya Scheme) ಯ 5 ಕೆ.ಜಿ ಅಕ್ಕಿ ಕೊಟ್ಟು ಉಳಿದ 5 ಕೆ.ಜಿ ಅಕ್ಕಿಯ ಬದಲು ಅದರ ಹಣವನ್ನು ನೀಡುವುದಾಗಿ ಸರ್ಕಾರ ನಿರ್ಧಾರ ಮಾಡಿದೆ.
ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಬಳಿಕ ಮಾತನಾಡಿದ ಸಚಿವ ಕೆ.ಹೆಚ್ ಮುನಿಯಪ್ಪ ಹಾಗೂ ಹೆಚ್.ಕೆ ಪಾಟೀಲ್, ಅನ್ನಭಾಗ್ಯ ಯೋಜನೆ ಅಕ್ಕಿ ಹೊಂದಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾಪ ತಿರಸ್ಕಾರ ಹಾಗೂ ಇತರೆ ರಾಜ್ಯಗಳಿಂದ ಅಕ್ಕಿ ಕೊಳ್ಳುವ ಮುಂದಿನ ನಡೆ ಬಗ್ಗೆ ಸಹ ಚರ್ಚೆ ನಡೆಸಲಾಯಿತು ಎಂದರು.
ಬಳಿಕ 10 ಕೆ.ಜಿ ಅಕ್ಕಿ ಬದಲಿಗೆ 8 ಕೆ.ಜಿ ಅಕ್ಕಿ, 2 ಕೆ.ಜಿ ರಾಗಿ/ಗೋಧಿ ಅಥವಾ ಜೋಳ ಕೊಡುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ. ಈ ವೇಳೆ 5 ಕೆ.ಜಿ ಅಕ್ಕಿ ಕೊಟ್ಟು ಇನ್ನೂ 5 ಕೆ.ಜಿ ಅಕ್ಕಿಗೆ ಹಣ ಕೊಡುವುದರ ಬಗ್ಗೆ ನಿರ್ಧಾರ ಮಾಡಲಾಯಿತು ಎಂದು ಹೇಳಿದರು. ಇದನ್ನೂ ಓದಿ: Gruha Lakshmi Scheme: ಪ್ರತ್ಯೇಕ ಆಪ್‍ಗೆ ಕ್ಯಾಬಿನೆಟ್‌ನಲ್ಲಿ ಗ್ರೀನ್ ಸಿಗ್ನಲ್
ಕೇಂದ್ರ ಸಚಿವರಿಗೆ ಮನವಿ ಮಾಡಿ ಒತ್ತಾಯ ಮಾಡಿದ್ದೆವು. 15 ಲಕ್ಷ ಟನ್ ಅನ್ನು ಓಪನ್ ಟೆಂಡರ್ ಕರೆದು ಕೇಂದ್ರದವರು ಕೊಟ್ಟಿದ್ದಾರೆ. ಆದ್ರೆ ನಮಗೆ ಅಕ್ಕಿ ಕೊಡಲು ನಿರಾಕರಣೆ, ರಾಜಕೀಯ ಮಾಡಿದ್ರು. ಎಫ್ ಸಿಐ 34 ರೂ. ದರ ಫಿಕ್ಸ್ ಮಾಡಿದ್ದಾರೆ. ಎಫ್ ಸಿಐ ರೇಟ್ ಗೆ ಬೇರೆ ಸಂಸ್ಥೆಗಳು ಅಕ್ಕಿ ಕೊಡಲು ಮುಂದೆ ಬರಲಿಲ್ಲ. ಅಕ್ಕಿ ದಾಸ್ತಾನು ತಯಾರಾಗುವ ತನಕ ಕೆಜಿಗೆ 34 ರೂ. ಹಣವನ್ನ ಕೊಡುತ್ತೇವೆ ಎಂದು ಕೆ.ಹೆಚ್ ಮುನಿಯಪ್ಪ ಹೇಳಿದರು.
ಪ್ರತಿ ಕಾರ್ಡ್ ಗೆ ಕರ್ನಾಟಕ ಸರ್ಕಾರ ಕೊಡುವ ಅಕ್ಕಿ ಆಧಾರದ ಮೇಲೆ ಕೆ.ಜಿ 34 ರೂ.ಗೆ ಅಕ್ಕಿ ಕೊಡುತ್ತೇವೆ. ಅಕ್ಕಿ ದಾಸ್ತಾನು ಆಗುವ ತನಕ ಹಣ ಕೊಡುತ್ತೇವೆ. ಎಷ್ಟು ಬೇಗ ಅಷ್ಟು ಬೇಗ ಅಕ್ಕಿ ಕೊಡುತ್ತೇವೆ. ಸದ್ಯಕ್ಕೆ ಹಣವನ್ನ ಕೊಡುತ್ತೇವೆ. ಇದಕ್ಕೆ ಈಗ 750 ಕೋಟಿ ಅಥವಾ 800 ಕೋಟಿ ರೂ. ಅಂದಾಜು ಆಗಲಿದೆ. ಹೆಡ್ ಆಫ್ ದಿ ಫ್ಯಾಮಿಲಿ ಸದಸ್ಯರ ಅಕೌಂಟ್ ಗೆ ಹಣ ಹಾಕುತ್ತೇವೆ. 90% ಕಾರ್ಡ್ ಹೊಂದಿರುವವರ ಅಕೌಂಟ್ ಇದೆ, ಆಧಾರ್ ಲಿಂಕ್ ಮಾಡಿದ್ದಾರೆ. ಹಾಗಾಗಿ ಅವರಿಗೆ ಹಣ ಹಾಕುತ್ತೇವೆ ಎಂದರು.
ಗದಗ: ಜೂನ್ 1 ರಂದು ಕ್ಯಾಬಿನೆಟ್ ಸಭೆ ನಡೆಯಲಿದೆ. ಆ ಸಭೆ ಮೂಲಕ ಗ್ಯಾರಂಟಿ ಕಾರ್ಡ್ (Guarantee Card) ಬಗ್ಗೆ ಮಾತನಾಡೋರ ಬಾಯಿ ಮುಚ್ಚುವಂತೆ ಮಾಡುತ್ತೇವೆ ಎಂದು ಸಚಿವ ಹೆಚ್‌ಕೆ ಪಾಟೀಲ್ (HK Patil) ಟಾಂಗ್ ನೀಡಿದ್ದಾರೆ.
ನೂತನವಾಗಿ ಸಚಿವರಾದ ನಂತರ ಮೊದಲ ಬಾರಿಗೆ ಸ್ವಕ್ಷೇತ್ರ ಗದಗ (Gadag) ನಗರಕ್ಕೆ ಆಗಮಿಸಿದ ಹೆಚ್‌ಕೆ ಪಾಟೀಲ್ ನಗರ ಮುಳಗುಂದ ನಾಕಾದಿಂದ ಕಾಂಗ್ರೆಸ್ (Congress) ಕಚೇರಿ ವರೆಗೆ ಬೃಹತ್ ರ‍್ಯಾಲಿ ನಡೆಸಿದರು. ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಹೂ ಎರಚಿ ಜೈಘೋಷ ಕೂಗಿ ಸಂಭ್ರಮಿಸಿದರು. ನಂತರ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಅವರ ತಂದೆ ಕೆಹೆಚ್ ಪಾಟೀಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೂನ್ 1 ರಂದು ಕ್ಯಾಬಿನೆಟ್ ಸಭೆ ನಡೆಯಲಿದೆ. ಆ ಸಭೆ ಮೂಲಕ ಗ್ಯಾರಂಟಿ ಕಾರ್ಡ್ ಬಗ್ಗೆ ಮಾತನಾಡೋರ ಬಾಯಿ ಮುಚ್ಚುವಂತೆ ಮಾಡುತ್ತೇವೆ. ಗ್ಯಾರಂಟಿ ಕಾರ್ಡ್ಗಳ ಗೊಂದಲವಿದೆ ಎಂದು ಕೆಲವರು ಭಾವಿಸಿಕೊಳ್ಳುವವರಿದ್ದಾರೆ. ಅಂಥವರಿಗೆ ನಾನು ಏನನ್ನೂ ಹೇಳಲು ಬಯಸೋದಿಲ್ಲ. ಕ್ಯಾಬಿನೆಟ್ ಸಭೆಯಲ್ಲಿ ವಿವರವಾದ ಕ್ರಾಂತಿಕಾರಕ, ಬಹು ದೊಡ್ಡ ನಿರ್ಣಯವನ್ನು ಕೈಗೊಳ್ಳಲಿದ್ದೇವೆ ಎಂದರು.
ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸ್ಥಾನ ನನಗೆ ನೀಡಿದ್ದಕ್ಕೆ ತೃಪ್ತಿ ತಂದಿದೆ. ಖಾತೆಗಳ ಬಗ್ಗೆ ಗೊತ್ತಿಲ್ಲದವರು ಏನಾದ್ರೂ ವ್ಯಾಖ್ಯಾನ ಮಾಡಬಹುದು. ಅದಕ್ಕೆ ನಮ್ಮ ಅಭ್ಯಂತರ ಏನಿಲ್ಲ. ಆದರೆ ಈಗಾಗಲೇ ಈ ಖಾತೆಯನ್ನು ಒಮ್ಮೆ ನಿರ್ವಹಿಸಿದ್ದೇನೆ. ಅದರ ಅನುಭವವಿದೆ ಎಂದು ತಿಳಿಸಿದರು.
ಆ ಸಮಯದಲ್ಲಿ ಉತ್ತರ ಕರ್ನಾಟಕಕ್ಕೆ ಕಾನೂನು ವಿಶ್ವವಿದ್ಯಾಲಯ, 2 ಹೈಕೋರ್ಟ್ ಸಂಚಾರಿ ಪೀಠ ತರುವ ದೊಡ್ಡ ಪ್ರಯತ್ನ ಮಾಡಿದ್ದೆ. ಅದರ ಜೊತೆಗೆ ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಖಾತೆ ಸಿಕ್ಕಿದೆ. ಈ ಖಾತೆಗಳನ್ನು ನಿರ್ವಹಿಸಲು ನನಗೆ ಸಂತೋಷ, ಅಭಿಮಾನ ಅನ್ನಿಸುತ್ತದೆ. ಈ ಖಾತೆಗಳ ಮೂಲಕ ಬಾಕಿ ಉಳಿದ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ ಎಂದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಯಾರ ಪ್ಲೆಕ್ಸ್ ಕೂಡ ಇರಬಾರದು; ನನ್ನ ಫೋಟೋ ಇರುವ ಫ್ಲೆಕ್ಸನ್ನೂ ಕಿತ್ತು ಹಾಕಿ: ಪ್ರದೀಪ್ ಈಶ್ವರ್
ಇನ್ನು ಸ್ಥಳೀಯ ಅನೇಕ ಅಭಿವೃದ್ಧಿ ಬಗ್ಗೆ ಸಹ ಮಾತನಾಡಿದ ಅವರು, ಗದಗ ಐತಿಹಾಸಿಕ ಸ್ಥಳವಾಗಿದ್ದು, ಔಷಧೀಯ ಸಸ್ಯಕಾಶಿ ಕಪ್ಪತ್ತಗುಡ್ಡ, ಗದುಗಿನ ವೀರನಾರಾಯಣ, ತ್ರಿಕೂಟೇಶ್ವರ, ಲಕ್ಕುಂಡಿ, ಮುಳಗುಂದ ಕಣಿವೆ, ಲಕ್ಷ್ಮೇಶ್ವರ ಸೇರಿದಂತೆ ಅನೇಕ ಐತಿಹಾಸಿಕ ದೇವಸ್ಥಾನಗಳಿವೆ. ಜೊತೆ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತೇನೆ. ಐತಿಹಾಸಿಕ ಭೀಷ್ಮ ಕೆರೆಯ ಆವರಣದಲ್ಲಿ 117 ಅಡಿ ಎತ್ತರದ ಬಸವಣ್ಣ ಮೂರ್ತಿ ಇರುವುದರಿಂದ, ಕೆರೆಯಲ್ಲಿ ಮತ್ತೆ ಬೋಟಿಂಗ್, ಕಾರಂಜಿ ಸೇರಿದಂತೆ ಅನೇಕ ರೀತಿಯಲ್ಲಿ ಅಭಿವೃದ್ಧಿ ಪಡಿಸಿ, ಪ್ರೇಕ್ಷಣಿಯ ತಾಣವನ್ನಾಗಿ ಮಾಡುವುದಾಗಿ ಹೇಳಿದರು.
ಗದಗ: ವಿಧಾನಸಭೆ ಚುನಾವಣೆಯ ಮತದಾನಕ್ಕೆ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗದಗ ಮತ ಕ್ಷೇತ್ರವು ರಣ-ಕಣವಾಗಿ ಸಿದ್ಧಗೊಂಡಿದೆ. ಗದಗ ವಿಧಾನಸಭೆ ಕ್ಷೇತ್ರದ ಇತಿಹಾಸವನ್ನು ಮೆಲುಕು ಹಾಕಿದಾಗ, ಹಲವಾರು ಕುತೂಹಲದ ಅಂಶಗಳು ಕಾಣಸಿಗುತ್ತವೆ.
ಮುಖ್ಯವಾಗಿ ಕೆ.ಹೆಚ್. ಪಾಟೀಲ್ ಅವರು 1967ರ ತಮ್ಮ ಮೊದಲ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದು, ನಂತರ 1972ರಲ್ಲಿ ಕಾಂಗ್ರೆಸ್‍ನಿಂದ ಶಾಸಕರಾಗಿದ್ದರು. ನಂತರ 1978ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮುನಿಸಿಕೊಂಡು ರೆಡ್ಡಿ ಕಾಂಗ್ರೆಸ್ ಪಕ್ಷ ಸ್ಥಾಪಿಸಿದರು. ಕೆ. ಹೆಚ್. ಪಾಟೀಲ್‍ರನ್ನು ಸಿ.ಎಸ್. ಮುತ್ತಿನಪೆಂಡಿಮಠ ಸೋಲಿಸಿದರು. ಅವರ ಮಗನಾದ ಹೆಚ್.ಕೆ ಪಾಟೀಲ್‍ರನ್ನು ಕ್ಷೇತ್ರದವರೇ ಅಲ್ಲದ ಶ್ರೀಶೈಲಪ್ಪ ಬಿದರೂರ ಸೋಲಿಸಿದ ಘಟನೆಗಳು ಕ್ಷೇತ್ರದಲ್ಲಿ ಮರೆಯದ ವಿಷಯಗಳಾಗಿವೆ.
ಗದಗ (Gadag) ಕ್ಷೇತ್ರ ಕಾಂಗ್ರೆಸ್‍ನ ಭದ್ರ ಕೋಟೆಯಾಗಿದೆ. 1957 ರಿಂದ 2018ರವರೆಗೆ ಜರುಗಿದ 15 ವಿಧಾನಸಭೆ ಚುನಾವಣೆಗಳ (Election) ಪೈಕಿ, ಕೇವಲ 3 ಚುನಾವಣೆಯಲ್ಲಿ ಕಾಂಗ್ರೆಸ್ಸೇತರರು ಜಯಭೇರಿ ಬಾರಿಸಿದ್ದಾರೆ. ಉಳಿದ 12 ಚುನಾವಣೆಯಲ್ಲಿ ಕಾಂಗ್ರೆಸ್ ಪಾರಮ್ಯ ಮೆರೆದಿದೆ. ಮೊದಲೆರಡು ಚುನಾವಣೆಯಲ್ಲಿ ಕಾಂಗ್ರೆಸ್‍ನ ಕೆ.ಪಿ. ಎಂಬುವರು ಗದಗ ಶಾಸಕರಾಗಿದ್ದರು. ನಂತರ ಹುಲಕೋಟಿಯ ಕೆ.ಹೆಚ್. ಪಾಟೀಲ್ ಪೂರ್ಣ ನಾಲ್ಕು ಅವಧಿ (20 ವರ್ಷ) ಶಾಸಕರಾಗಿದ್ದರು. 1992ರಲ್ಲಿ ಕೆ.ಹೆಚ್. ಪಾಟೀಲ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕಾಗಿ ನಡೆದ ಉಪಚುನಾವಣೆಯಲ್ಲಿ ಡಿ.ಆರ್. ಪಾಟೀಲ್ ಸ್ಪರ್ಧಿಸಿ ಜಯಗಳಿಸಿದರು. ಆದರೆ 2 ವರ್ಷಕ್ಕೆ ಶಾಸಕ ಸ್ಥಾನದ ಅವಧಿ ಪೂರ್ಣಗೊಂಡಿತು. ನಂತರ 1994, 1999, 2004ರಲ್ಲಿ ಡಿ.ಆರ್. ಪಾಟೀಲ್ ಗೆಲುವು ಸಾಧಿಸಿದರಲ್ಲದೇ, ಒಟ್ಟು 17 ವರ್ಷ ಗದಗ ಕ್ಷೇತ್ರದ ಶಾಸಕರಾಗಿದ್ದರು.
ಸತತ 20 ವರ್ಷಗಳ ಕಾಲ ವಿಧಾನಪರಿಷತ್ ಸದಸ್ಯರಾಗಿದ್ದ ಹೆಚ್.ಕೆ. ಪಾಟೀಲ್ ಅವರು ನೀರಾವರಿ, ಕಾನೂನು ಸಂಸದೀಯ ಇಲಾಖೆ, ಅರಣ್ಯ ಸಚಿವರಾಗಿ, ಪ್ರತಿಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರು ಪ್ರಥಮ ಬಾರಿಗೆ 2008ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದರು. 2013ರ ಚುನಾವಣೆಯಲ್ಲಿ ಭರ್ಜರಿ ಮತಗಳ ಅಂತರದಿಂದ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದರು.
ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರ 2018ರ ಚುನಾವಣೆಯಲ್ಲೂ ಗೆಲುವು ಸಾಧಿಸುವ ಮೂಲಕ ಸತತ 2ನೇ ಬಾರಿ ಗೆಲುವು ಸಾಧಿಸಿದರು. 2023ರ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಹ್ಯಾಟ್ರಿಕ್ ಜಯದ ತವಕದಲ್ಲಿದ್ದಾರೆ. ಗದಗ ಮತಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂಬುದನ್ನು ಸಾಬೀತು ಮಾಡುತ್ತಲೇ ಬಂದಿದೆ.
ಕೆ.ಹೆಚ್. ಪಾಟೀಲರು ಶಾಸಕರು, ಸಚಿವರಾಗಿದ್ದ ಅವಧಿಯಲ್ಲಂತೂ ಕಾಂಗ್ರೆಸ್ ಜನಪ್ರಿಯತೆ ಉತ್ತುಂಗದಲ್ಲಿತ್ತು. ಅವರ ನೇರ ನಡೆ, ನುಡಿ, ದಾಢಸಿತನ ಮತ್ತು ಕ್ಷೇತ್ರಕ್ಕೆ ನೀಡಿದ ಕೊಡುಗೆಯಿಂದ ಅವರು `ಹುಲಕೋಟಿ ಹುಲಿ’ ಎನಿಸಿಕೊಂಡರು. ಕೆ.ಹೆಚ್. ಪಾಟೀಲರ ನಂತರ ಡಿ.ಆರ್. ಪಾಟೀಲ್, ಆನಂತರ ಹೆಚ್.ಕೆ. ಪಾಟೀಲ್ ಅವರು ತಮ್ಮ ಚುನಾವಣೆ ರಣನೀತಿಗಳು, ತಂತ್ರಗಾರಿಕೆಯಿಂದ ರಾಜಕೀಯ ಅಸ್ತಿತ್ವ ಕಾಯ್ದುಕೊಂಡಿದ್ದಾರೆ. ಹೀಗಾಗಿ ಹುಲಕೋಟಿಯ ಪಾಟೀಲ್ ಮನೆತನ ಇಲ್ಲಿಯವರೆಗೆ 47 ವರ್ಷಗಳ ಕಾಲ ಇಲ್ಲಿ ಆಡಳಿತ ನಡೆಸಿದೆ.
ಅಚ್ಚರಿಯ ಗೆಲುವು: ದೇಶದಲ್ಲಿ ತುರ್ತು ಪರಿಸ್ಥಿತಿ ಬಳಿಕ (1978) ಜರುಗಿದ ಚುನಾವಣೆಯಲ್ಲಿ ಜೆಎನ್‍ಪಿ ಪಾರ್ಟಿಯಿಂದ ಕಣಕ್ಕಿಳಿದಿದ್ದ ಸಿ.ಎಸ್. ಮುತ್ತಿನಪೆಂಡಿಮಠ ಅವರು ಕೆ.ಹೆಚ್. ಪಾಟೀಲರ (KH Patil) ವಿರುದ್ಧ ಗೆಲುವು ಸಾಧಿಸಿದ್ದು ಅಚ್ಚರಿ ಮೂಡಿಸಿತು. ನಂತರ 1983ರಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಸಿ.ಎಸ್. ಮುತ್ತಿನಪೆಂಡಿಮಠ ಅವರು ಮತ್ತೆ ಶಾಸಕರಾಗಿ ಪುನರಾಯ್ಕೆಗೊಂಡರು.
ನಂತರ 2008ರ ಚುನಾವಣೆಯಲ್ಲಿ ಬಿಜೆಪಿಯಿಂದ (BJP) ಶ್ರೀಶೈಲಪ್ಪ ಬಿದರೂರ ಅವರು ಕಾಂಗ್ರೆಸ್ (Congress) ಅಭ್ಯರ್ಥಿ ಹೆಎಚ್.ಕೆ. ಪಾಟೀಲರ (HK Patil) ವಿರುದ್ಧ ಗೆಲುವು ಸಾಧಿಸಿದರು. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿಕಾಯಿ ವಿರುದ್ಧ ಕಾಂಗ್ರೆಸ್‍ನ ಹೆಚ್.ಕೆ ಪಾಟೀಲರು ಕೇವಲ 1,867 ಮತಗಳಿಂದ ಮಾತ್ರ ಗೆದ್ದಿರುವುದು ಅಚ್ಚರಿಯ ವಿಷಯ. ಇದನ್ನೂ ಓದಿ: ರಾಮನವಮಿಯ ಧ್ವಜದಲ್ಲಿ ಮಾಂಸದ ತುಂಡು – ಜಮ್ಶೆಡ್‌ಪುರದಲ್ಲಿ ಹಿಂಸಾಚಾರ
ಗದಗ ಮತಕ್ಷೇತ್ರದ ಮತದಾರರ ಸಂಖ್ಯೆ ಕಳೆದ 60 ವರ್ಷಗಳಲ್ಲಿ ಹತ್ತು ಪಟ್ಟು ಹೆಚ್ಚಿದೆ. 1952ರಲ್ಲಿ ಜರುಗಿದ ಪ್ರಥಮ ವಿಧಾನಸಭೆ ಚುನಾವಣೆಯಲ್ಲಿ 21,877 ಮತದಾರ ಸಂಖ್ಯೆ ಇತ್ತು. 2023ರ ಚುನಾವಣೆಯಲ್ಲಿ ಒಟ್ಟು 2,18,862 ಮತದಾರರಿದ್ದಾರೆ.
ಕಾಂಗ್ರೆಸ್‍ನ ಹಾಲಿ ಶಾಸಕ ಹೆಚ್.ಕೆ ಪಾಟೀಲ್ 2023ರ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕ್ಷೇತ್ರ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ. ಇತ್ತ ಬಿಜೆಪಿ ಭರ್ಜರಿ ಕ್ಯಾಪೇನ್ ನಡೆಸಿ ಕಾಂಗ್ರೆಸ್ ಭದ್ರಕೋಟೆ ಛಿದ್ರ ಮಾಡಲು ಸಜ್ಜಾಗಿದೆ. ಒಟ್ಟಿನಲ್ಲಿ ಗದಗ ಮತಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಈ ಬಾರಿ ಛಿದ್ರವಾಗುತ್ತಾ? ಅಥವಾ ಭದ್ರಕೋಟೆ ಸುಭದ್ರವಾಗಿ ಉಳಿಯುತ್ತಾ? ಕಾದು ನೋಡಬೇಕಿದೆ. ಇದನ್ನೂ ಓದಿ: ಯುರೋಪ್ ರಾಷ್ಟ್ರಗಳು ಅಮೆರಿಕ ಅವಲಂಬನೆ ಬಿಡಬೇಕು : ಫ್ರಾನ್ಸ್ ಅಧ್ಯಕ್ಷ
ಹುಬ್ಬಳ್ಳಿ: ಮಹಾದಾಯಿ (Mahadayi) ವಿಚಾರದಲ್ಲಿ ಬಿಜೆಪಿ (BJP) ಸುಳ್ಳು ಹೇಳುತ್ತಲೇ ಬಂದಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದಿನಾಂಕವಿಲ್ಲದ, ಸಂಖ್ಯೆ ಇಲ್ಲದ ಕಡತ ಟ್ವೀಟ್ ಮಾಡಿದ್ದರು. ನೀವು ಜನರನ್ನು ಒಮ್ಮೆ ಮೂರ್ಖರನ್ನಾಗಿ ಮಾಡಬಹುದು ಯಾವಾಗಲೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ (H K Patil) ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಬಿಜೆಪಿ ಅಧ್ಯಕ್ಷ, ಕೇಂದ್ರ ಸಚಿವರು ಸುಳ್ಳು ಹೇಳಿದ್ದಾರೆ. ಬಿಜೆಪಿಯ ಸುಳ್ಳುಗಳನ್ನು ಕಾಂಗ್ರೆಸ್ (Congress) ಬಹಿರಂಗಪಡಿಸುತ್ತಲೇ ಬಂದಿದೆ. ಅರ್ಜಿ ಕೊಟ್ಟ ಕೂಡಲೇ ಅನುಮತಿ ಸಿಗುತ್ತದೆ ಎಂದು ಪ್ರಹ್ಲಾದ್ ಜೋಶಿ (Pralhad Joshi), ಸಿಎಂ ಬೊಮ್ಮಾಯಿ (Basavaraj Bommai) ಹೇಳಿದ್ದರು. ಹದಿನೈದು ದಿನದೊಳಗೆ ಕಾಮಗಾರಿ ಆರಂಭಿಸುವುದಾಗಿ ಪ್ರಚಾರ ಮಾಡಿದ್ದರು. ಪ್ರಹ್ಲಾದ್ ಜೋಶಿಯವರು ನನಗೆ ಮತ್ತು ಸಿದ್ದರಾಮಯ್ಯ (Siddaramaiah) ನವರಿಗೆ ಕಣ್ಣು ಕಾಣಿಸುವುದಿಲ್ಲ ಎಂದು ಹೇಳಿದ್ದರು. ನಮ್ಮ ರಾಜಕೀಯ ಸಂಸ್ಕೃತಿಗೆ ಅಪಹಾಸ್ಯ ಮಾಡಿ ಅವಮಾನ ಮಾಡಿದರು ಎಂದರು.
ಕಳಸಾ- ಬಂಡೂರಿ ಯೋಜನೆ (Kalasa-Banduri Nala project) ಜಾರಿಗೆ ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಬೇಕಾಗಿದೆ. ಕ್ಲಿಯರೆನ್ಸ್ ಇಲ್ಲದೆ ಕಾಮಗಾರಿ ಪ್ರಾರಂಭಿಸದಂತೆ ಕೋರ್ಟ್ ಆದೇಶ ನೀಡಿದೆ. ಕ್ರಮ ಕೈಗೊಳ್ಳಬೇಕಾದ ರಾಜ್ಯ ಸರ್ಕಾರ ಇದುವರೆಗೆ ಮಲಗಿದೆ. ಎಲ್ಲಿದೆ ನಿಮ್ಮ ಪೌರುಷ. ನಿಮ್ಮ ಹಸಿಸುಳ್ಳು ಬಹಿರಂಗಗೊಂಡಿದೆ ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ (AmitShah), ಮಹಾದಾಯಿ ನಮ್ಮ ಬಿಜೆಪಿಯ ಕೊಡುಗೆ ಎಂದು ಹೇಳುತ್ತಾರೆ. ಈಗ ಅಮಿತ್ ಶಾ ಎಲ್ಲಿದ್ದಾರೆ? ನಿಮಗೆ ಮಹಾದಾಯಿ ಹೆಸರಲ್ಲಿ ಮತ ಕೇಳುವ ನೈತಿಕತೆಯಿಲ್ಲ. ಸುಪ್ರೀಂ (Supreme Court) ತೀರ್ಪು ಬಂದು ನೂರು ತಾಸುಗಳಾಯಿತು. ಆದರೆ ರಾಜ್ಯಸರ್ಕಾರ ಮಾತ್ರ ನಿದ್ರೆ ಮಾಡುತ್ತಿದೆ. ಎಲ್ಲಾ ಅನುಮತಿ ಪಡೆದಿರುವುದಾಗಿ ಹೇಳಿದ್ದರು. ಆದರೆ ಈಗ ಗೋವಾ ವೈಲ್ಡ್ ಲೈಫ್ ಅನುಮತಿ ಬೇಕು ಎಂದು ಕೋರ್ಟ್ ಹೇಳಿದೆ. ಬಿಜೆಪಿಯ ಹಸಿಸುಳ್ಳು ಬಹಿರಂಗಗೊಂಡಿದೆ ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]